ಶ್ರೀ ವ್ಯಾಸರಾಯರು
ಕೃಷ್ಣ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೆ ತೋರೋ
ಕಾಲಲಂದುಗೆ ಗೆಜ್ಜೆ ನೀಲದ ಬಾವುಲಿ
ನೀಲವರ್ಣನೆ ನಾಟ್ಯವಾಡುತ ಬಾರೋ
ಉಡಿಯಲ್ಲಿ ಉರಿಗೆಜ್ಜೆ ಬೆರಳಲ್ಲಿ ಉಂಗುರ
ಕೊರಳೊಳು ಧರಿಸಿದ ವೈಜಯಂತಿ ಮಾಲೆ
ಕಾಶಿಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ
ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ
Be First to Comment