ಹಾಸ್ಯ

ಅಮೆರಿಕದ ‘ಅಕ್ಕ’ನ ಬೊಗಸೆಯಲ್ಲಿ ಅಗೋಚರ ಅಪಾಯಗಳು

- ನಾಗೇಶ ಹೆಗಡೆ

ಅಮೆರಿಕದ ಬಾಲ್ಟಿಮೋರ್ ನಗರದಲ್ಲಿ ಏಳು ತಿಂಗಳ ಹಿಂದೆ ‘ಅಕ್ಕ’ ಸಮ್ಮೇಳನಕ್ಕೆ ಇಲ್ಲಿಂದ ದೊಡ್ಡ ದಂಡೇ ಹೋಗಿತ್ತಲ್ಲ? ಆ ದಂಡಿನಲ್ಲಿ ಕನ್ನಡ ನಾಡಿನ ಸಣ್ಣ ಕೈಗಾರಿಕೆಗಳ ಒಕ್ಕೂಟದ ಪದಾಧಿಕಾರಿಯೊಬ್ಬರು ಕೂಡ ಹೋಗಿದ್ದರು. ಸಮ್ಮೇಳನ ಮುಗಿಯುತ್ತ ಬಂದಂತೆ ಒಬ್ಬೊಬ್ಬ ಗಣ್ಯ ಅತಿಥಿಯೂ ಕನ್ನಡ ಮಾಧ್ಯಮಗಳಿಗೆ ಒಂದೊಂದಿಷ್ಟು ಹೇಳಿಕೆಗಳನ್ನು ನೀಡಿದರು. ತಾನೇನು ಕಮ್ಮಿ ಎಂದು ಈ ನಮ್ಮ ಕೈಗಾರಿಕಾ ಮಿತ್ರರೂ ಹೇಳಿಕೆ ನೀಡಿದರು: ‘ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದಿಷ್ಟು ರಾಸಾಯನಿಕ ಉದ್ಯಮಗಳನ್ನು ಆರಂಭಿಸುವಂತೆ ಅಮೆರಿಕದ ಉದ್ಯಮಿಗಳನ್ನು ನಾನು ಕೇಳಿಕೊಂಡಿದ್ದೇನೆ’ ಎಂದು.

ತರಲೆ ಅನುವಾದ - ೧

English : Dr. Vasanth will be delivering the speech now.
ಕನ್ನಡ : ವೈದ್ಯ ವಸಂತ ಅವರು ತಮ್ಮ ಭಾಷಣವನ್ನು ಈಗ ಹೆರುವವರಿದ್ದಾರೆ.

೨೦೦೬ರ ಅತ್ಯತ್ತಮ ಸುಳ್ಳು ಪ್ರಶಸ್ತಿ

ಬೆಂಗಳೂರು, ಡಿ. ೨೯, ೨೦೦೬: ವಿಶ್ವಕನ್ನಡದ ಸಂಪಾದಕರ ಒಪ್ಪಿಗೆಯಿಲ್ಲದೆ ಉಪ ಸಹಾಯಕ ಕಿರಿಯ ಸಂಪಾದಕರು ಹಾಗೂ ಹಾಸ್ಯ ವಿಭಾಗದ ಜವಾಬ್ದಾರಿಯನ್ನು ತನ್ನ ಅತಿ ಚಿಕ್ಕ ಹೆಗಲ ಮೇಲೆ ಹೊತ್ತಂತವರು ಸುಳ್ಳು ಪ್ರಶಸ್ತಿ ಘೋಷಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ವರ್ಷದ ಕೊನೆಯಲ್ಲಿ ಹಲವು ರೀತಿಯ ವರ್ಷದ ವ್ಯಕ್ತಿ, ವರ್ಷದ ಘಟನೆ, ವರ್ಷದ ಸಾಧನೆ, ಇತ್ಯಾದಿ ಪ್ರಶಸ್ತಿಗಳನ್ನು ಘೋಷಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ವರ್ಷ ನೀಡುವ ವರ್ಷದ ಶ್ರೇಷ್ಠ ಸುಳ್ಳು ಪ್ರಶಸ್ತಿಯನ್ನು ಕೇಂದ್ರ ಗೃಹಕಾರ್ಯದರ್ಶಿ ವಿ.ಕೆ.ದುಗ್ಗಲ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಅವರು ಹೇಳಿರುವ "ರಾಷ್ಟ್ರದಲ್ಲಿ ಅಲ್‌ಖಾಯ್ದಾ ಸುಳಿವಿಲ್ಲ" ಎಂಬ ಹೇಳಿಕೆಗೆ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ. ಎಂದಿನಂತೆ ಮುಂದಿನ ವರ್ಷದ ಎಪ್ರಿಲ್ ೧ರಂದು ಈ ಪ್ರಶಸ್ತಿಯನ್ನು ನೀಡಲಾಗುವುದು. ಯಾರಿಗಾದರು ಯಾವುದೇ ಯಾವುದೇ ರೀತಿಯ ಅಭ್ಯಂತರವಿದ್ದಲ್ಲಿ ಕೂಡಲೆ ತಿಳಿಸಬೇಕಾಗಿಯೂ ಕೋರಲಾಗಿದೆ.

ತರಲೆ ಗಣಿತ

೧. ೬ ಅಡಿ ಉದ್ದ, ೩ ಅಡಿ ಅಗಲ, ೩ ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಅಡಿ ಮಣ್ಣು ಇದೆ?
(ಕ) ೫೪
(ಚ) ಸೊನ್ನೆ. ಹೊಂಡದಲ್ಲಿ ಮಣ್ಣು ಎಲ್ಲಿರುತ್ತೆ?

XML feed