ಪರಿಚಯ

ಪ್ರವೇಶವಿಲ್ಲದ ಗರ್ಭಗುಡಿಯಲ್ಲಿ ಪೂಜಾರಿಯಾದವರು

- ಪ್ರಕಾಶ ಹೆಬ್ಬಾರ

ನಾಗೇಶ ಹೆಗಡೆ ಎಂದೊಡನೆ ಯಾವುದರಿಂದ ಅವರನ್ನು ಗುರುತಿಸಬೇಕು? ಅವರನ್ನು ನಿಕಟವಾಗಿ ಬಲ್ಲ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ತಬ್ಬಿಬ್ಬು ಆಗುತ್ತದೆ. ಮನುಷ್ಯನ ಎಲ್ಲ ಅಂಗಾಂಗಗಳೂ ಪ್ರಮಾಣಬದ್ಧವಾಗಿದ್ದು ಒಂದಕ್ಕೊಂದು ಪೂರಕವಾಗಿ ಕ್ರಿಯಾಶೀಲವಾಗಿರುವಂತೆ ಹೆಗಡೆಯವರ ಸಾಧನೆಯ ನೆಲೆ ಕೂಡ. ಅವರನ್ನು ಅವರವರ ಅಳವಿಗೆ ತಕ್ಕಂತೆ ಭೂವಿಜ್ಞಾನಿ, ಪತ್ರಕರ್ತ, ನುಡಿಚಿತ್ರಕಾರ, ಪರಿಸರವಾದಿ, ಪತ್ರಕರ್ತರ ವೃತ್ತಿಬದುಕನ್ನು ರೂಪಿಸುವಾತ, ಸಂಪಾದಕ, ವಿಜ್ಞಾನ ಸಂವಹನಕಾರ- ಏನೆಲ್ಲಾ ಅನ್ನಬಹುದು. ರೈತರನ್ನು ಪ್ರಗತಿಪರರನ್ನಾಗಿ ಮಾಡಲು ಹೊರಟ, ಸದ್ದಿಲ್ಲದ ಕೃಷಿಕ ಎಂದರೂ ಒಪ್ಪೀತು. ವಾಮನ ತ್ರಿವಿಕ್ರಮನಾಗಿ ಬೆಳೆದು, ಎಷ್ಟು ತಿಣುಕಿದರೂ ಸಮಕಾಲೀನರ ವಿಮರ್ಶೆಗೆ ಸಿಕ್ಕದ ಗಟ್ಟಿ ವ್ಯಕ್ತಿತ್ವ. ನೀವು ಅವರನ್ನು ವೃತ್ತಿಪರ ಛಾಯಾಗ್ರಾಹಕ ಎಂದು ಕರೆದರೆ ಅದಕ್ಕೂ ನ್ಯಾಯ ಒದಗೀತು. ಅವರು ತೆಗೆದ ಕಪ್ಪುಬಿಳುಪಿನ ಚಿತ್ರಗಳನ್ನು ದಿನವಿಡೀ ನೋಡುತ್ತಾ ಹೋದರೂ ಅದೊಂದು ಹೊಸ ಅನುಭವವೇ.

ಅಭಿವೃದ್ಧಿಯ ರಥದ ಚಕ್ರದಡಿ ಸಿಕ್ಕಿಬಿದ್ದವರು

-ಪ್ರೊ. ದೇವೀಂದ್ರ ಶರ್ಮಾ

ಲಿಪಿಕಾರ: ನಾಗೇಶ ಹೆಗಡೆ

ದೇಶದ ಹೆಸರಾಂತ ಕೃಷಿ ಚಿಂತಕ ಪ್ರೊ. ದೇವೀಂದ್ರ ಶರ್ಮಾ ಈಚೆಗೆ ಬೆಂಗಳೂರಿನ ಕೃಷಿ ಎಂಜಿನಿಯರ್ಗಳ ಸಂಸ್ಥೆಯಲ್ಲಿ ಹೇಳಿದ ಮಾತುಗಳನ್ನು ಇಲ್ಲಿ ಕೊಡಲಾಗುತ್ತಿದೆ. ಇದು ಶಬ್ದಶಃ ತರ್ಜುಮೆಯಲ್ಲ. ಅವರ ಭಾಷಣದ ಸಂದರ್ಭದಲ್ಲಿ ಬರೆದಿಟ್ಟುಕೊಂಡ ಟಿಪ್ಪಣಿಯನ್ನು ಆಧರಿಸಿ ಅಂಕಿ ಅಂಶ ಕುರಿತು ಸಂಶಯ ಎದ್ದಾಗ ಶರ್ಮಾರ ಪ್ರಕಟಿತ ಲೇಖನಗಳನ್ನು ರೆಫರ್ ಮಾಡಿ (ಉದಾ: www.countercurrents.org/glo-crop.htm) ಸಿದ್ಧಪಡಿಸಿದ ಕನ್ನಡ ಲೇಖನ ಇದು. ಪಾಶ್ಚಾತ್ಯ ತಜ್ಞರು ಹೇಳಿದ್ದೇ ವೇದವಾಕ್ಯ ಎಂಬಂತೆ ನಮ್ಮ ತಜ್ಞರು ನಮಗೆ ಅದನ್ನೇ ಬೋಧಿಸುತ್ತ ನಮ್ಮ ರೈತರ ಹಿತವನ್ನು ಹೇಗೆ ಬಲಿಗೊಡುತ್ತಿದ್ದಾರೆ ಎಂಬ ವಿಚಾರ ಈ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದ ಚಿಂತನೆಗೆ ಸೂಕ್ತವಾದೀತು.

ಡಾ. ಶಿವಮೂರ್ತಿ ಸ್ವಾಮೀಜಿ

- ಲೇಖನ: ಎ. ಸತ್ಯನಾರಾಯಣ. ಸಂದರ್ಶನ: ಸತ್ಯನಾರಾಯಣ ಮತ್ತು ಪವನಜ

ಒಂದು ಧಾರ್ಮಿಕ ಪೀಠದ ಸಮಸ್ತ ಕಾರ್ಯಚಟುವಟಿಕೆಗಳ ಸುಸೂತ್ರ ನಿರ್ವಹಣೆಗೆ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಳವಸಿಕೊಂಡು, ಇಂದಿಗೂ ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಕೀರ್ತಿಗೆ ಪಾತ್ರರಾಗಿರುವವರು ಕರ್ನಾಟಕ ರಾಜ್ಯದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು.

ಕಲಾಲೋಕದ ಅಪೂರ್ವ ರತ್ನ - ಕುಮಾರಿ ನಿವೇದಿತ

- ಲಕ್ಷ್ಮೀ ಶಿವಕುಮಾರ್

ಕುಮಾರಿ ನಿವೇದಿತ ಜನಿಸಿದ್ದು ೧೧-೨-೧೯೮೯-ಬೆಂಗಳೂರು. ಹುಟ್ಟುತ್ತಲೇ ಶಸ್ತ್ರಚಿಕಿತ್ಸೆಗೆ ಗುರಿಯಾಗಿ ಮಾನಸಿಕ ಹಾಗು ದೈಹಿಕವಾಗಿ ಅಸ್ವಸ್ಥಗೊಂಡು ಜೀವನ ನಡೆಸುತ್ತಿರುವ ಮುಗ್ಧೆ. ಈಕೆಗೆ ಶ್ರವಣ, ವಾಚಿಕ ಹಾಗೂ ಮಾನಸಿಕ ತೊಂದರೆಯ ಕಾರಣ “ವಿಶೇಷ ಅಗತ್ಯವುಳ್ಳ ಮಕ್ಕಳ” ಸಾಲಿಗೆ ಸೇರಬೇಕಾದ ಅನಿವಾರ್ಯತೆ ಉಂಟಾಯಿತು. ನಿವೇದಿತ ಪ್ರಖ್ಯಾತ ಗಾಯಕಿ ಶ್ರೀಮತಿ ರಮಾಜಗನ್ನಾಥ್(ರಮಾ ಅವರು ಪ್ರಖ್ಯಾತ ನೃತ್ಯಕಲಾವಿದರಾದ ಮಂಜೂ ಭಾರ್ಗವಿ, ರಾಜರೆಡ್ಡಿ-ರಾಧಾ ರೆಡ್ಡಿ, ನಟರಾಜ ರಾಮಕೃಷ್ಣ, ಕಲಾ ಕೃಷ್ಣ ಮತ್ತು ವೈಜಯಂತಿ ಕಾಶಿ ಇವರನೃತ್ಯಕ್ಕೆ ಹಾಡಿದರೆ) ಹಾಗೂ ಇ.ಎಸ್.ಐ ಕೇಂದ್ರ ಕಛೇರಿಯಲ್ಲಿ ಗೌರವಾನ್ವಿತ ಹುದ್ದೆಯಲ್ಲಿರುವ ಶ್ರೀ ಜಗನ್ನಾಥ ಅವರ ಹಿರಿಯ ಹಾಗು ಹೆಮ್ಮೆಯ ಪುತ್ರಿ. ಈ ಷೋಡಶಿ ಜೆ.ಎಸ್.ಎಸ್ “ಸಹನಾ” ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾಳೆ.

XML feed