General
ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.
ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.
ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ಭಾರತೀಯ ಗೋತಳಿಗಳ ಸಂರಕ್ಷಣೆಗೆ ಕಂಕಣಬದ್ಧರಾಗಿ ದುಡಿಯುತ್ತಿರುವುದು ಎಲ್ಲರಿಗೂ ತಿಳಿದಿರಬಹುದು. ವಿದೇಶಿ ತಳಿಯ ಹಸುಗಳು ನಮ್ಮ ಹವಾಮಾನಕ್ಕೆ ಒಗ್ಗುವುದಿಲ್ಲ, ಅವುಗಳಿಗೆ ತುಂಬ ಔಷಧೋಪಚಾರ, ನಿಯಂತ್ರಿತ ಹವೆ ಎಲ್ಲ ಅಗತ್ಯ ಎಂಬುದಾಗಿ ನಾವೆಲ್ಲ ಕೇಳಿದ್ದೇವೆ. ಭಾರತೀಯ ಗೋತಳಿಗಳು ಇಲ್ಲಿಯ ಹವಾಮಾನಕ್ಕೆ ಒಗ್ಗಿದವು. ಅವುಗಳಿಗೆ ಈ ಉಪಚಾರಗಳ ಅಗತ್ಯವಿಲ್ಲ. ನಾವು ಚಿಕ್ಕವರಿದ್ದಾಗ ಭಾರತೀಯ ಹಸುಗಳ ಹಾಲನ್ನೇ ಕುಡಿದವರು. ಆಗ ಯಾವ ಹಸುವಿಗೂ ದೊಡ್ಡ ಖಾಯಿಲೆ ಬಾಧಿಸಿದ್ದು ನನಗೆ ನೆನಪಿಲ್ಲ. ಚಿಕ್ಕಪುಟ್ಟ ಖಾಯಿಲೆಗಳು ಬಾಧಿಸಿದರೂ ಹಳ್ಳಿ ಔಷಧಿಂದಲೇ ಅವು ಗುಣವಾಗುತ್ತಿದ್ದವು. ಈಗ ಎಲ್ಲರೂ ಸಾಕುತ್ತಿರುವ ವಿದೇಶೀ ಮೂಲದ ತಳಿಸಂಕರದಿಂದ ಹುಟ್ಟಿದ ಹಸುಗಳಿಗೆ ದೊಡ್ಡ ದೊಡ್ಡ ಖಾಯಿಲೆಗಳೇ ಬಾಧಿಸುತ್ತವೆ. ಅವಕ್ಕೆ ನೀಡಬೇಕಾದ ಔಷಧಿಗೂ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಇದೆಲ್ಲ ಯಾಕೆ ಹೇಳಿದ್ದೆಂದರೆ ಒಂದು ಉದಾಹರಣೆ ನನ್ನಲ್ಲೇ ಇದೆ.
ಚೀನಾದಲ್ಲಿ ಒಬ್ಬ ಲಾಯರ್ ಮೆಕ್‌ಡೊನಾಲ್ಡ್ ಕಂಪೆನಿಯ ಮೇಲೆ ಕೇಸು ಹಾಕಿರುವುದು ವರದಿಯಾಗಿದೆ. ಮೆಕ್‌ಡೊನಾಲ್ಡ್‌ನವರು ಬಿಸಿಯಾದ ಕಾಫಿ ನೀಡುವುದರ ವಿರುದ್ಧ, ಪ್ರಾಣಿ ಮಾಂಸದಿಂದ ತಯಾರಿಸಿದ ಎಣ್ಣೆಯನ್ನು ಬಳಸುವುದರ ವಿರುದ್ಧ ಎಲ್ಲ ಈ ಹಿಂದೆ ಕೇಸುಗಳು ದಾಖಲಾಗಿದ್ದವು. ಆದರೆ ಈ ಕೇಸು ಸ್ವಲ್ಪ ವಿಶೇಷವಾಗಿದೆ. ಚೀನಾದ ಭಾಷೆಯನ್ನು ಬಳಸದಿರುವುದರ ವಿರುದ್ಧ ಈ ಕೇಸು ಹಾಕಲಾಗಿದೆ.
