<?xml version="1.0" encoding="utf-8"?>
<!DOCTYPE rss [<!ENTITY % HTMLlat1 PUBLIC "-//W3C//ENTITIES Latin 1 for XHTML//EN" "http://www.w3.org/TR/xhtml1/DTD/xhtml-lat1.ent">]>
<rss version="2.0" xml:base="http://vishvakannada.com">
<channel>
 <title>Vishva Kannada - Tech related</title>
 <link>http://vishvakannada.com/?q=taxonomy/term/16/0</link>
 <description></description>
 <language>en</language>
<item>
 <title>ದ್ವಿಭಾಷಾ ಫಾಂಟ್ ಬಗ್ಗೆ ಕರ್ನಾಟಕ ಸರಕಾರಕ್ಕೆ ನನ್ನ ಪತ</title>
 <link>http://vishvakannada.com/?q=node/483</link>
 <description>&lt;p&gt;ಕರ್ನಾಟಕ ಸರಕಾರವು ದ್ವಿಭಾಷಾ ಫಾಂಟ್ (bilingual font) ಗೆ ಸಂಕೇತಗಳನ್ನು ನಿಗದಿಪಡಿಸಲು ಹೊರಟಿದ್ದು ನಿಮಗೆ ತಿಳಿದಿರಬಹುದು. ಸರಕಾರಕ್ಕೆ ನಾನು ಬರೆದ ಪತ್ರ ಇಲ್ಲಿದೆ -&lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Sat, 14 Jun 2008 04:55:12 -0700</pubDate>
</item>
<item>
 <title>ಎಲ್ಲರೂ ಮುಂದೆ, ನಾನೊಬ್ಬ ಹಿಂದೆ</title>
 <link>http://vishvakannada.com/?q=node/482</link>
 <description>&lt;p&gt;ಕರ್ನಾಟಕ ಸರಕಾರದ ನೀತಿಯೇನೆಂದರೆ ಜಗತ್ತೆಲ್ಲ ಮುಂದೆ ಮುಂದೆ ಸಾಗುತ್ತಿರಲಿ, ನಾನೊಬ್ಬ ಮಾತ್ರ ಹಿಂದೆ ಹಿಂದೆ&lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Sun, 08 Jun 2008 07:22:35 -0700</pubDate>
</item>
<item>
 <title>ಬೆಂಗಳೂರಿನಲ್ಲಿ ಮೈಕೇಲ್ ಕಪ್ಲಾನ್</title>
 <link>http://vishvakannada.com/?q=node/473</link>
 <description>&lt;p&gt;&lt;a href=&quot;http://blogs.msdn.com/michkap/archive/2008/01/16/7101598.aspx&quot; title=&quot;reference on ಮೈಕೇಲ್ ಕಪ್ಲಾನ್&quot; target=&quot;_blank&quot;&gt;ಮೈಕೇಲ್ ಕಪ್ಲಾನ್&lt;/a&gt; ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ತಂತ್ರಾಂಶಗಳ ಜಾಗತೀಕರಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ತಂತ್ರಜ್ಞರು. ತಂತ್ರಾಂಶ ಜಾಗತೀಕರಣ ವಿಷಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಇವರ ಹೆಸರು ಪರಿಚಯವಿದೆ. ಇವರು ಭಾರತಕ್ಕೆ ಬರುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿರುವ &lt;a href=&quot;http://research.microsoft.com/india&quot; title=&quot;reference on ಮೈಕ್ರೋಸಾಫ್ಟ್ ಸಂಶೋದನಾ ಕೇಂದ್ರ&quot; target=&quot;_blank&quot;&gt;ಮೈಕ್ರೋಸಾಫ್ಟ್ ಸಂಶೋದನಾ ಕೇಂದ್ರ&lt;/a&gt;ದ ಮೂಲಕ ತಿಳಿದು ಬಂತು. ಕೂಡಲೇ ನಾನು ಕಪ್ಲಾನರನ್ನು ಸಂಪರ್ಕಿಸಿ ನಮ್ಮ &lt;a href=&quot;http://bdotnet.in&quot; title=&quot;reference on ಬೆಂಗಳೂರಿನ ಡಾಟ್‌ನೆಟ್ ಬಳಕೆದಾರರ ಸಂಘದಲ್ಲಿ&quot; target=&quot;_blank&quot;&gt;ಬೆಂಗಳೂರಿನ ಡಾಟ್‌ನೆಟ್ ಬಳಕೆದಾರರ ಸಂಘದಲ್ಲಿ&lt;/a&gt; ಒಂದು ಭಾಷಣ ನೀಡಲು ಸಾಧ್ಯವೇ ಎಂದು ಕೇಳಿಕೊಂಡೆ. ಕೂಡಲೇ ಅವರಿಂದ ಉತ್ತರ ಬಂತು &quot;ಇದು ನನಗೆ ನೀಡುತ್ತಿರುವ ಗೌರವ ಎಂದು ಭಾವಿಸಿಕೊಂಡು ಒಪ್ಪಿಗೆ ನೀಡುತ್ತಿದ್ದೇನೆ&quot;. &lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Thu, 24 Jan 2008 21:15:01 -0800</pubDate>
</item>
<item>
 <title>ಜಂಗಮವಾಣಿಯಲ್ಲಿ ಕನ್ನಡ</title>
 <link>http://vishvakannada.com/?q=node/470</link>
 <description>&lt;p&gt;ಮೊಬೈಲ್ ಫೋನುಗಳಲ್ಲಿ ಎಸ್‌ಎಂಎಸ್ ಮಾಡುವಾಗ ಎಲ್ಲರೂ ಕಂಗ್ಲಿಶ್ ಬಳಸುವುದು ಸಹಜವಾಗಿಬಿಟ್ಟಿದೆ. ಇದರಿಂದಾಗಿ ಎಫ್‌ಎಂ ರೇಡಿಯೋ ಚಾನೆಲುಗಳಿಗೆ ಕಳುಹಿಸಿದ ಸಂದೇಶಗಳನ್ನು ಓದುವಾಗ ಅಲ್ಲಲ್ಲಿ ತಡವರಿಸುತ್ತಾರೆ. ಕೆಲವೊಮ್ಮೆ ಸಂದೇಶ ಮತ್ತು ಹೆಸರುಗಳನ್ನು ಓದುವಾಗ ತಪ್ಪುಗಳೂ ಸಂಭವಿಸುತ್ತವೆ. ಉದಾಹರಣೆಗೆ ಸಂದೇಶ ಕಳುಹಿಸಿದವರು ತಮ್ಮ ಹೆಸರನ್ನು rama ಎಂದು ಬೆರಳಚ್ಚು ಮಾಡಿದ್ದಾರೆಂದಿಟ್ಟುಕೊಳ್ಳಿ. ಇದು ರಾಮ ಅಥವಾ ರಮಾ ಇರಬಹುದು. ಕನ್ನಡದಲ್ಲೇ ಸಂದೇಶ ಕಳುಹಿಸಿದರೆ ಈ ಗಲಿಬಿಲಿ ಇರುವುದಿಲ್ಲ. ಆದರೆ ಸದ್ಯಕ್ಕೆ ಯಾವ ಮೊಬೈಲ್ ಫೋನುಗಳಲ್ಲೂ ಈ ಸೌಲಭ್ಯವಿಲ್ಲ. ಮೊಬೈಲ್ ತಂತ್ರಾಂಶಗಳಿಗೂ ಈ ಮಾತು ಅನ್ವಯಿಸುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ಇದೆ. ಬೆಂಗಳೂರಿನ ಹಸ್ತ ಸೊಲುಶನ್ಸ್ ಕಂಪೆನಿ ಮೊಬೈಲ್ ಫೋನುಗಳಿಗೆ ಭಾರತೀಯ ಭಾಷೆಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡವೂ ಈ ಪಟ್ಟಿಯಲ್ಲಿದೆ. ಕನ್ನಡ ಭಾಷೆಯನ್ನು ಅಳವಡಿಸುವುದೆಂದರೆ ಕೇವಲ ಕನ್ನಡದಲ್ಲಿ ಬೆರಳಚ್ಚು ಮಾಡುವುದಲ್ಲ. ಕನ್ನಡದ ತಂತ್ರಾಂಶಗಳು ತಯಾರಾಗಿವೆ. ಭೂಮಿ ತಂತ್ರಾಂಶಕ್ಕೆ ಬೆಳೆಗಳ ವಿವರ ಸೇರಿಸುವುದು, ಅಂಗನವಾಡಿ ಕಾರ್ಯಕರ್ತರು ತಾವು ಸಂಗ್ರಹಿಸಿದ ಮಾಹಿತಿಗಳನ್ನು ಊಡಿಸುವುದು, ಮತ್ತು ಇನ್ನೂ ಒಂದೆರಡು ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು ಈ ಕಂಪೆನಿ ಅಭಿವೃದ್ಧಿಪಡಿಸಿದೆ. ಜಗತ್ತಿನ ತಂತ್ರಾಂಶ ದೈತ್ಯ ಮೈಕ್ರೋಸಾಫ್ಟ್ ಕಂಪೆನಿ ಭಾರತೀಯ ಭಾಷೆಗಳನ್ನು ಮೊಬೈಲ್ ಫೋನುಗಳಲ್ಲಿ ಅಳವಡಿಸುವತ್ತ ಏನೂ ಕೆಲಸ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮವರದೇ ಕಂಪೆನಿ ಹಸ್ತ ಸೊಲುಶನ್ಸ್ ಕನ್ನಡವನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿದೆ. ಸರಕಾರವು ಇವರಿಗೆ ಪ್ರೋತ್ಸಾಹ ನೀಡಬೇಕಾಗಿದೆ. &lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <enclosure url="http://vishvakannada.com/files/KannadaOnMobile-for-web.jpg" length="34357" type="image/pjpeg" />
 <pubDate>Sat, 12 Jan 2008 23:46:01 -0800</pubDate>
</item>
<item>
 <title>ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಾಗಾರ</title>
 <link>http://vishvakannada.com/?q=node/466</link>
 <description>&lt;p&gt;ದಯವಿಟ್ಟು ಈ ಪುಟ ಓದಿ -&lt;a href=&quot;http://vishvakannada.com/node/338&quot; title=&quot;reference on http://vishvakannada.com/node/338&quot; target=&quot;_blank&quot;&gt;http://vishvakannada.com/node/338&lt;/a&gt;. ಅದರ ಕೊನೆಯಲ್ಲಿ ಬರುವ ಒಂದು ಸಂಭಾಷಣೆಯ ಕಡೆಗೆ ಸ್ವಲ್ಪ ಜಾಸ್ತಿ ಗಮನ ಕೊಡಿ.&lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Fri, 14 Dec 2007 01:09:55 -0800</pubDate>
</item>
<item>
 <title>ಮಾಹಿತಿ ತಂತ್ರಜ್ಞಾನ ಕನ್ನಡ ಶಿಕ್ಷಣ ಬಗ್ಗೆ ಕಾರ್ಯಾಗಾರ</title>
 <link>http://vishvakannada.com/?q=node/442</link>
 <description>&lt;p&gt;ಶೈಕ್ಷಣಿಕ ಕ್ಷೇತ್ರದಲ್ಲಿ ಗಣಕಗಳ, ಅದರಲ್ಲೂ ಕನ್ನಡ ಭಾಷೆಯ ಮೂಲಕ ಬಳಸುವುದರಲ್ಲಿ ಮೂರು ವಿಭಾಗಗಳಿವೆ. ಗಣಕ ಎಂದರೇನು ಎಂಬುದನ್ನು ಕನ್ನಡ ಭಾಷೆಯಲ್ಲಿ ತಿಳಿಸುವುದು ಮೊದಲನೆಯದು. ಕನ್ನಡ ಭಾಷೆಯಲ್ಲಿ ಗಣಕಾಧಾರಿತ ಶಿಕ್ಷಣವನ್ನು ಬಳಸಿ ಬಹುಮಾಧ್ಯಮದ (multimedia) ಕಲಿಕಾರಂಜನೆಯ (edutainment) ಮೂಲಕ ಕನ್ನಡ, ವಿಜ್ಞಾನ, ಗಣಿತ, ಇತ್ಯಾದಿಗಳನ್ನು ಹೇಳಿಕೊಡುವುದು ಎರಡನೆಯದು. ಗಣಕ ಕ್ರಮವಿಧಿ (programming language) ತಯಾರಿಯ ಮೂಲ ಸಿದ್ಧಾಂತ (ತರ್ಕ, programming logic) ವನ್ನು ಕನ್ನಡ ಭಾಷೆಯಲ್ಲೇ ಕಲಿಸುವುದು ಮೂರನೆಯದು.&lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Sun, 10 Jun 2007 00:55:39 -0700</pubDate>
</item>
<item>
 <title>ಇಲ್ಲದ ಭಾಷೆಗೆ ಎಲ್ಲವೂ ಇವೆ</title>
 <link>http://vishvakannada.com/?q=node/350</link>
 <description>&lt;p&gt;ಕ್ಲಿಂಗನ್ ಎಂಬ ಭಾಷೆ ಕೇಳಿದ್ದೀರಾ? ಅದು ಯಾವ ದೇಶದ್ದಿರಬಹುದು? ಈ ಭೂಮಿಯ ಮೇಲಿರುವ ಯಾವ ದೇಶದ್ದೂ ಅಲ್ಲ, ಬ್ರಹ್ಮಾಂಡದಲ್ಲಿ ಬಹುದೂರದಲ್ಲಿರುವ ಯಾವುದೋ ಕಾಲ್ಪನಿಕ ನಕ್ಷತ್ರದ ಗ್ರಹದ ಜೀವಿಗಳದ್ದು  ಎಂದರೆ ನಂಬುತ್ತೀರಾ? ಯಾವುದೋ ಕಾಲ್ಪನಿಕ ಜೀವಿಗಳ ಭಾಷೆ ಹೀಗೆಯೇ ಇರುತ್ತದೆ ಎಂದು ಯಾರಿಗಾದರೂ ಹೇಗೆ ಗೊತ್ತಿರಲು ಸಾಧ್ಯ ಅನ್ನುತ್ತೀರಾ? ಎಲ್ಲವೂ ಸಾಧ್ಯ ಸ್ವಾಮಿ. ಸ್ಟಾರ್ ಟ್ರೆಕ್ ಎಂಬ ಟಿ.ವಿ. ಧಾರಾವಾಹಿ ನೋಡಿದ ನೆನಪಿದೆಯೇ? ಅದರಲ್ಲಿ ಬರುವ ಪಾತ್ರಗಳು ಮಾತನಾಡುವ ಭಾಷೆ ಕ್ಲಿಂಗನ್. ಇದು ಶುದ್ಧ ಕಾಲ್ಪನಿಕ ಭಾಷೆ. ಅದೃಷ್ಟವಶಾತ್ ಟಿ.ವಿ. ಧಾರಾವಾಹಿಯಲ್ಲಿ ಪಾತ್ರಗಳು ಮಾತನಾಡುತ್ತಿದ್ದದ್ದು ಇಂಗ್ಲಿಷ್ ಭಾಷೆ. ಆದರೆ ಈ ಕ್ಲಿಂಗನ್ ಎಂಬ ಕಾಲ್ಪನಿಕ ಭಾಷೆಗೂ ಒಂದು ವರ್ಣಮಾಲೆ, ವ್ಯಾಕರಣ, ಲಿಪಿ ಎಲ್ಲ ಇವೆ ಎಂದರೆ ನಂಬುತ್ತೀರಾ? ಹೆಚ್ಚಿನ ಮಾಹಿತಿಗೆ &lt;a href=&quot;http://en.wikipedia.org/wiki/Klingon_language&quot; title=&quot;reference on ವಿಕಿಪೀಡಿಯಾ ಓದಬಹುದು&quot; target=&quot;_blank&quot;&gt;ವಿಕಿಪೀಡಿಯಾ ಓದಬಹುದು&lt;/a&gt;. &lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Mon, 29 Jan 2007 06:29:39 -0800</pubDate>
</item>
<item>
 <title>ಭಾಷಾಇಂಡಿಯ ಕನ್ನಡದಲ್ಲಿ</title>
 <link>http://vishvakannada.com/?q=node/347</link>
 <description>&lt;p&gt;ಭಾಷಾಇಂಡಿಯ ಅಂತರಜಾಲ ತಾಣ ಈಗ ಕನ್ನಡದಲ್ಲೂ ಲಭ್ಯ. ಕನ್ನಡ ಆವೃತ್ತಿಯ ವಿಳಾಸ - &lt;a href=&quot;http://www.bhashaindia.com/Patrons/PatronsHome.htm?lang=Kn&quot; title=&quot;reference on http://www.bhashaindia.com/Patrons/PatronsHome.htm?lang=Kn&quot; target=&quot;_blank&quot;&gt;http://www.bhashaindia.com/Patrons/PatronsHome.htm?lang=Kn&lt;/a&gt;. ಚರ್ಚಾ ವೇದಿಕೆಯಲ್ಲಿ ಕನ್ನಡಕ್ಕಾಗಿ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಚರ್ಚೆಗಳಲ್ಲಿ ಭಾಗವಹಿಸಲು ಭೇಟಿ ನೀಡಿ - &lt;a href=&quot;http://bhashaindia.com/ForumV2/displaygroup.aspx?GroupID=5&quot; title=&quot;reference on http://bhashaindia.com/ForumV2/displaygroup.aspx?GroupID=5&quot; target=&quot;_blank&quot;&gt;http://bhashaindia.com/ForumV2/displaygroup.aspx?GroupID=5&lt;/a&gt;&lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Thu, 18 Jan 2007 07:13:33 -0800</pubDate>
</item>
<item>
 <title>ವಿಸ್ಟದಲ್ಲಿ ಕನ್ನಡ</title>
 <link>http://vishvakannada.com/?q=node/331</link>
 <description>&lt;p&gt;ಮೊನ್ನೆಯಷ್ಟೆ ಮೈಕ್ರೋಸಾಫ್ಟ್‌ನವರ ಹೊಸ ಕಾರ್ಯಾಚರಣೆಯ ವ್ಯವಸ್ಥೆ ವಿಂಡೋಸ್ ವಿಸ್ಟದ ಅಂತಿಮ ಆವೃತ್ತಿಯನ್ನು ಅನುಸ್ಥಾಪಿಸಿದ್ದರು. ಅಂದರೆ ಅಂಗಡಿಗೆ ಹೋಗಿ ವಿಸ್ಟ ಕೊಂಡುಕೊಳ್ಳಬಹುದು ಎಂದುಕೊಳ್ಳಬೇಡಿ. ಅದು ಅಂತಿಮ ಬಳಕೆದಾರರಿಗೆ ಇನ್ನೂ ಬಿಡುಗಡೆಯಾಗಿಲ್ಲ. ಮೈಕ್ರೋಸಾಫ್ಟ್‌ನವರು ಸದ್ದುಗದ್ದಲವಿಲ್ಲದೆ ಏನನ್ನೂ ಬಿಡುಗಡೆ ಮಾಡುವಿದಿಲ್ಲ ತಾನೆ? ನೀವು ಏನೂ ಸದ್ದುಗದ್ದಲ್ಲ ಕೇಳಿಲ್ಲವಾದ ಕಾರಣ ಇನ್ನೂ ಅದು ಅಧಿಕೃತವಾಗಿ ಬಿಡುಗಡೆಯಾಗಿಲ್ಲ ಎಂದು ತೀರ್ಮಾನಕ್ಕೆ ಬರಬಹುದು. ವಿಸ್ಟದಲ್ಲಿ ಕನ್ನಡದ ಅಳವಡಿಕೆಯನ್ನು ನಾನು ಪರೀಕ್ಷಿಸಿದ್ದೇನೆ.&lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <enclosure url="http://vishvakannada.com/files/vista-notepad-kannada.jpg" length="17283" type="image/pjpeg" />
 <pubDate>Tue, 28 Nov 2006 06:22:34 -0800</pubDate>
</item>
<item>
 <title>ಭಾಷೆ ಯಾರಿಗೆ ಸೇರಿದ್ದು?</title>
 <link>http://vishvakannada.com/?q=node/330</link>
 <description>&lt;p&gt;ನಮ್ಮ ಭಾಷೆ ಯಾರಿಗೆ ಸೇರಿದ್ದು ಎಂದು ಯಾವೊತ್ತಾದರೂ ಸಂದೇಹಿಸಿದ್ದೀರಾ? ಇಲ್ಲ ತಾನೆ? ಅದು ನಮಗೇ ಸೇರಿದ್ದು. ಸರಿ. ಈ ನಾವು ಎಂದರೆ ಯಾರು? ಯಾಕೆ ಈ ಪ್ರಶ್ನೆಗಳು ಅನ್ನುತ್ತೀರಾ? ಇಲ್ಲೊಂದು ಸ್ವಾರಸ್ಯಕರ ಪ್ರಸಂಗದ ಉದಾಹರಣೆ ಇದೆ.&lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Sun, 26 Nov 2006 07:25:20 -0800</pubDate>
</item>
<item>
 <title>ೠ ಟೈಪಿಸುವುದು ಹೇಗೆ?</title>
 <link>http://vishvakannada.com/?q=node/319</link>
 <description>&lt;p&gt;ಅಸತ್ಯಾನ್ವೇಶಿಯವರು ತಮ್ಮ &lt;a href=&quot;http://bogaleragale.blogspot.com/2006/11/blog-post.html&quot; title=&quot;reference on ಬ್ಲಾಗಿನ ಕಮೆಂಟಿನಲ್ಲಿ&quot; target=&quot;_blank&quot;&gt;ಬ್ಲಾಗಿನ ಕಮೆಂಟಿನಲ್ಲಿ&lt;/a&gt; ಒಂದು ಪ್ರಶ್ನೆ ಎಸೆದರು. &quot;ೠ&quot; ಅಕ್ಷರವನ್ನು ಕೀಬೋರ್ಡಿನಲ್ಲಿ ಕುಟ್ಟಿದ್ದು ಹೇಗೆ ಎಂದು. ಮೊದಲನೆಯದಾಗಿ ತಿಳಿಸುವುದೇನೆಂದರೆ ಈ &quot;ೠ&quot; ಅಕ್ಷರ ಕನ್ನಡ ವರ್ಣಮಾಲೆಯಲ್ಲಿ ಇಲ್ಲ. ಅದು ಸಂಸ್ಕೃತದಿಂದ ಬಂದುದು ಮಾತ್ರವಲ್ಲ ಕನ್ನಡ ಭಾಷೆಯಲ್ಲಿ ಅದರ ಬಳಕೆಯೂ ಇಲ್ಲ. &quot;ೠ&quot; ಅಕ್ಷರವನ್ನು ಬಳಸಿದ ಒಂದೇ ಒಂದು ಪದ ಕನ್ನಡದಲ್ಲಿ ಇಲ್ಲ. ಆದರೂ ಯುನಿಕೋಡ್‌ನವರು ಈ ಅಕ್ಷರವನ್ನು ಕನ್ನಡ ವರ್ಣಮಾಲೆಯಲ್ಲಿ &lt;a href=&quot;http://www.unicode.org/charts/PDF/U0C80.pdf&quot; title=&quot;reference on ಸೇರಿಸಿದ್ದಾರೆ&quot; target=&quot;_blank&quot;&gt;ಸೇರಿಸಿದ್ದಾರೆ&lt;/a&gt;. ಅದಕ್ಕೊಂದು ಸಂಕೇತವನ್ನೂ ನೀಡಿದ್ದಾರೆ (0CE0). &lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Sun, 05 Nov 2006 22:06:08 -0800</pubDate>
</item>
<item>
 <title>ಕನ್ನಡದಲ್ಲಿ ಚಾಟ್ ಮಾಡಲು GTalk ಬಳಸಿರಿ</title>
 <link>http://vishvakannada.com/?q=node/316</link>
 <description>&lt;p&gt;ಅಂತರಜಾಲದ ಮೂಲಕ ಒಬ್ಬರಿಗೊಬ್ಬರು &quot;ಮಾತನಾಡಲು&quot; ಅಥವಾ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ chat ಮಾಡಲು ಹಲವು ತಂತ್ರಾಂಶ ಸೌಲಭ್ಯಗಳಿವೆ. ಇವುಗಳಲ್ಲಿ ತುಂಬ ಜನಪ್ರಿಯವಾದವುಗಳು - MSN (Hotmail), Yahoo Meesenger ಮತ್ತು GTalk (Google). ಇವೆಲ್ಲವುಗಳಲ್ಲೂ ಕನ್ನಡ ಯುನಿಕೋಡ್ ಬಳಸಿ ಚಾಟ್ ಮಾಡಲು ಆಗುತ್ತಿರಲಿಲ್ಲ. ಇವತ್ತು ಸತ್ಯನಾರಾಯಣ ಜೊತೆ GTalk ಬಳಸಿ ಮಾತನಾಡುತ್ತಿದ್ದಾಗ, ಅವರು ಒಂದು ಪ್ರಶ್ನೆ ಕೇಳಿದರು -&quot;ನಾನು ಇಲ್ಲಿ ಕನ್ನಡದಲ್ಲಿ (ಯುನಿಕೋಡ್‌ನಲ್ಲಿ) ಚಾಟ್ ಮಾಡಬಹುದೇ?&quot; ಎಂದು. ನಾನು ನನ್ನ ಹಳೆಯ ಅನುಭವದಿಂದ ಸಾದ್ಯವಿಲ್ಲ ಎಂದೆ. ಆದರೂ ನೋಡೋಣ ಎಂದು ನಾವಿಬ್ಬರು ಪ್ರಯತ್ನಿಸಿದೆವು. ಆಶ್ಚರ್ಯ! ಈಗ ಕನ್ನದಲ್ಲಿ ಚಾಟ್ ಮಾಬಹುದು. ನಾನು ಕನ್ನಡ ಮಾತ್ರವಲ್ಲ, ಹಲವು ಭಾರತೀಯ ಭಾಷೆಗಳಲ್ಲಿ ನನ್ನ ಹೆಸರನ್ನು ಬೆರಳಚ್ಚು ಮಾಡಿದೆ. ಎಲ್ಲವೂ ಸರಿಯಾಗಿಯೇ ಮೂಡಿಬಂದವು. ನಮ್ಮ ಚಾಟ್‌ನ ದಾಖಲಾತಿ ಕಿಟಿಕಿಯ ಚಿತ್ರ ಇಲ್ಲಿದೆ- &lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <enclosure url="http://vishvakannada.com/files/SS-Gtalk-Oct-27-2006.jpg" length="22908" type="image/pjpeg" />
 <pubDate>Fri, 27 Oct 2006 02:31:16 -0700</pubDate>
</item>
<item>
 <title>ಬರಲಿವೆ - ಕನ್ನಡಕ್ಕೆ ನೂರಾರು ಓಪನ್‌ಟೈಪ್ ಫಾಂಟ್‌ಗಳು</title>
 <link>http://vishvakannada.com/?q=node/310</link>
 <description>&lt;p&gt;ಕನ್ನಡ ಯುನಿಕೋಡ್ ಬಳಸುವಲ್ಲಿ ಬಹುಮುಖ್ಯವಾದ ಸಮಸ್ಯೆ ಎಂದರೆ ಓಪನ್‌ಟೈಪ್ ಫಾಂಟ್‌ಗಳ ಅಭಾವದ್ದು. ಈ ಬಗ್ಗೆ ನಾನು ಈ ಹಿಂದೆಯೇ ಬರೆದಿದ್ದೆ (&lt;a href=&quot;http://vishvakannada.com/node/271&quot; title=&quot;reference on ೧&quot; target=&quot;_blank&quot;&gt;೧&lt;/a&gt;, &lt;a href=&quot;http://vishvakannada.com/node/274&quot; title=&quot;reference on ೨&quot; target=&quot;_blank&quot;&gt;೨&lt;/a&gt;). ಬೇರೆಯವರೂ ಬರೆದಿದ್ದಾರೆ. ಕನ್ನಡ ಭಾಷೆಯನ್ನು ಗಣಕಗಳಲ್ಲಿ ಬಳಸುತ್ತಿರುವುದಕ್ಕೆ ಸುಮಾರು ಮೂರು ದಶಕಗಳ ಇತಿಹಾಸವಿದೆ. ಟ್ರೂಟೈಪ್ ಫಾಂಟ್‌ಗಳ ವಿಷಯಕ್ಕೆ ಬಮದರಂತೂ ಕನ್ನಡಕ್ಕೆ ನೂರಾರು ಟ್ರೂಟೈಪ್ ಫಾಂಟ್‌ಗಳು ಲಭ್ಯವಿವೆ. ಯುನಿಕೋಡ್ ಮತ್ತು ಓಪನ್‌ಟೈಪ್ ಫಾಂಟ್‌ಗಳು ಬಳಕೆಗೆ ಬಂದು ಐದು ವರ್ಷಗಳೇ ಸಂದವು. ಆದರೆ ಕನ್ನಡಕ್ಕೆ ಲಭ್ಯವಿರುವ ಓಪನ್‌ಟೈಪ್‌ ಫಾಂಟ್‌ಗಳ ಸಂಖ್ಯೆ ಐದಾರು ಇರಬಹುದೇನೋ. ಅವುಗಳೂ ಪರಿಪೂರ್ಣವೇನಲ್ಲ. ಮೈಕ್ರೊಸಾಫ್ಟ್‌ನವರು ನೀಡಿರುವ ತುಂಗ ಫಾಂಟೇ ಇರುವವುಗಳಲ್ಲಿ ಹೆಚ್ಚು ಪರಿಪೂರ್ಣವಾಗಿರುವುದು. &lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Mon, 16 Oct 2006 01:55:17 -0700</pubDate>
</item>
<item>
 <title>ಸುಧಾರಿತ ತುಂಗ ಫಾಂಟ್</title>
 <link>http://vishvakannada.com/?q=node/305</link>
 <description>&lt;p&gt;Corrected opentype font Tunga for Kannada is now available at Microsoft web-site for download.  &lt;/p&gt;
&lt;p&gt;ಮೈಕ್ರೋಸಾಫ್ಟ್‌ನವರು ನೀಡಿದ ತುಂಗ ಫಾಂಟ್‌ನಲ್ಲಿ ಇದ್ದ ಸಮಸ್ಯೆ ಬಗ್ಗೆ ಗೊತ್ತಿದೆ. ಅದರ ಬಗ್ಗೆ &lt;a href=&quot;http://vishvakannada.com/node/271&quot; title=&quot;reference on ಇಲ್ಲಿ&quot; target=&quot;_blank&quot;&gt;ಇಲ್ಲಿ&lt;/a&gt; ಮತ್ತು &lt;a href=&quot;http://vishvakannada.com/node/274&quot; title=&quot;reference on ಇಲ್ಲಿ&quot; target=&quot;_blank&quot;&gt;ಇಲ್ಲಿ&lt;/a&gt; ಓದಬಹುದು. ಸುಧಾರಿತ ತುಂಗ ಫಾಂಟ್ ಈಗ ಅಂತರಜಾಲದಲ್ಲಿ ಅಧಿಕೃತವಾಗಿ ಡೌನ್‌ಲೋಡ್‌ಗೆ ಲಭ್ಯವಿದೆ. ಅದನ್ನು ಪಡೆಯಬೇಕಾದರೆ ಈ &lt;a href=&quot;http://www.microsoft.com/downloads/details.aspx?familyid=3fa7cdd1-506b-4ca0-bd47-b338e337a527&amp;amp;displaylang=en&amp;amp;displaylang=en#Overview&quot; title=&quot;reference on ಅಪ್‌ಡೇಟನ್ನು&quot; target=&quot;_blank&quot;&gt;ಅಪ್‌ಡೇಟನ್ನು&lt;/a&gt; ಡೌನ್‌ಲೋಡ್ ಮಾಡಿಕೊಳ್ಳಿ. ಇಲ್ಲಿ ನೀಡಿರುವ ಅಪ್‌ಡೇಟ್ ನಿಜವಾಗಿ ಇರುವುದು ನೇಪಾಳಿ, ಪಾಶ್ತೋ, ಪಿಲಿಪಿನೋ ಮತ್ತು ಇತರೆ ಕೆಲವು ಭಾಷೆಗಳನ್ನು ವಿಂಡೋಸ್ ಎಕ್ಸ್‌ಪಿಗೆ ಅಳವಡಿಸಲು. ಕನ್ನಡ ಭಾಷೆಯ ಸುಧಾರಿತ ತುಂಗ ಫಾಂಟ್ ಇವುಗಳ ಜೊತೆ ಸೇರಿಕೊಂಡಿದೆ ಎಂದು ತಿಳಿಯಬೇಕಾದರೆ ಈ ಡೌನ್‌ಲೋಡ್ ಬಗ್ಗೆ ಕೊಟ್ಟ &lt;a href=&quot;http://support.microsoft.com/?kbid=897338&quot; title=&quot;reference on ವಿವರವನ್ನು ಓದಬೇಕು&quot; target=&quot;_blank&quot;&gt;ವಿವರವನ್ನು ಓದಬೇಕು&lt;/a&gt;. ಈ ವಿವರದಲ್ಲಿ ಕೊಟ್ಟಿರುವ ಫೈಲುಗಳ ಪಟ್ಟಿಯಲ್ಲಿ ತುಂಗ ಫಾಂಟ್ ಕೂಡ ಇದೆ. &lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Wed, 27 Sep 2006 21:41:21 -0700</pubDate>
</item>
<item>
 <title>ಯುಎಸ್‌ಬಿ ಬ್ಯಾಟರಿ</title>
 <link>http://vishvakannada.com/?q=node/303</link>
 <description>&lt;p&gt;ಯಾಕೋ, ಈ ಯುಎಸ್‌ಬಿ ಸಾಧನಗಳ ಬಗ್ಗೆ ಎಷ್ಟು ಬರೆದರೂ ಸಾಲುವುದಿಲ್ಲ. ಯುಎಸ್‌ಬಿ ಸಾಧನಗಳ ಬಗ್ಗೆ &lt;a href=&quot;http://vishvakannada.com/node/189&quot; title=&quot;reference on ದೀರ್ಘವಾದ ಲೇಖನ&quot; target=&quot;_blank&quot;&gt;ದೀರ್ಘವಾದ ಲೇಖನ&lt;/a&gt; ಬರೆದಿದ್ದೆ.&lt;/p&gt;
</description>
 <category domain="http://vishvakannada.com/?q=taxonomy/term/16">Tech related</category>
 <pubDate>Thu, 21 Sep 2006 04:38:55 -0700</pubDate>
</item>
</channel>
</rss>
