scam | Vishva Kannada

ಜಾಲಾಪರಾಧ
ಮಾಹಿತಿ ಹೆದ್ದಾರಿಯ ಕಿಡಿಗೇಡಿಗಳು

ಕಳೆದು ಎರಡು ಸಂಚಿಕೆಗಳಲ್ಲಿ ಅಂತರಜಾಲದ ಮೂಲಕ ಮಾಡುವ ಎರಡು ಅಪರಾಧಗಳ ಬಗ್ಗೆ ತಿಳಿದುಕೊಂಡೆವು. ಅಂತರಜಾಲ, ಗಣಕ ಮತ್ತು ಇತರೆ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ ಮಾಡುವ ಅಪರಾಧಗಳ ಪಟ್ಟಿ ಬಲು ದೊಡ್ಡದಿದೆ. ಇಂತಹ ಅಪರಾಧಗಳಿಗೆ ಇಂಗ್ಲಿಷಿನಲ್ಲಿ cyber crime ಎಂಬ ಹೆಸರಿದೆ. ನಾವು ಇದಕ್ಕೆ ಕನ್ನಡದಲ್ಲಿ ಸೈಬರ್ ಅಪರಾಧ, ಜಾಲ ಅಪರಾಧ ಅಥವಾ ಜಾಲಾಪರಾಧ ಎನ್ನಬಹುದು. ಇದು ತುಂಬ ದೊಡ್ಡ ವಿಷಯ. ಇದರಲ್ಲಿ ಹಲವು ವಿಭಾಗಗಳಿವೆ. ಕೆಲವು ಜಾಲಾಪರಾಧಗಳ ಬಗ್ಗೆ ಚುಟುಕಾಗಿ ತಿಳಿದುಕೊಳ್ಳೋಣ.

ಜಾಲಾಪರಾಧಗಳಲ್ಲಿ ಪ್ರಮುಖವಾದುದು ಹಣಕಾಸಿಗೆ ಸಂಬಂಧಿಸಿದ್ದು. ಫಿಶಿಂಗ್ ಮೂಲಕ ಹೇಗೆ ಮೋಸ ಮಾಡಿ ಹಣ ದೋಚುತ್ತಾರೆ ಎಂಬುದನ್ನು ಹಿಂದಿನ ಸಂಚಿಕೆಯಲ್ಲಿ ವಿವರಿಸಲಾಗಿತ್ತು. ನೈಜೀರಿಯನ್ ಸ್ಕ್ಯಾಮ್ ಎಂಬುದು ಸ್ವಲ್ಪ ವರ್ಷಗಳ ಹಿಂದೆ ಕುಖ್ಯಾತವಾಗಿತ್ತು. ಇದನ್ನು ಇಮೈಲ್ ಮೂಲಕ ಮಾಡುತ್ತಾರೆ. “ನಾನು ನೈಜೀರಿಯದ ಪದಚ್ಯುತ ಸರ್ವಾಧಿಕಾರಿಯ ಮೊಮ್ಮಗಳು. ನನಗೆ ಹದಿನಾರು ವರ್ಷ ಪ್ರಾಯ. ನನ್ನ ಹೆಸರಿನಲ್ಲಿ ಮಿಲಿಯಗಟ್ಟಳೆ ಹಣ ಇದೆ. ಅದನ್ನು ದೇಶದ ಹೊರಗೆ ಸ್ಥಳಾಂತರಿಸಬೇಕಾಗಿದೆ. ಅಂತರಜಾಲದಲ್ಲಿ ಹುಡುಕಾಡಿದಾಗ ನೀವು ತುಂಬ ಪ್ರಾಮಾಣಿಕ  ವ್ಯಕ್ತಿ ಎಂದು ತಿಳಿದುಬಂತು. ಆದುದರಿಂದ ನಿಮ್ಮ ಸಹಾಯ ಕೇಳುತ್ತಿದ್ದೇನೆ. ಹಣವನ್ನು ವರ್ಗಾಯಯಿಸಲು ನಿಮ್ಮ ಬ್ಯಾಂಕ್ ಖಾತೆ ವಿವರ ನೀಡಿ. ಮೊದಲಿಗೆ ವರ್ಗಾವಣೆಯ ಪ್ರಕ್ರಿಯೆಗೆ ಸ್ವಲ್ಪ ಫೀಸ್ ನೀಡಬೇಕು. ನಂತರ ಆ ಹಣ ವಾಪಾಸು ಬರುತ್ತದೆ.” ಎಂಬ ಒಕ್ಕಣೆಯ ಇಮೈಲ್ ಬರುತ್ತದೆ. ಇದನ್ನು ನಂಬಿ ಕೆಲವರು ಹಣ ಕಳೆದುಕೊಂಡಿದ್ದಾರೆ.

ಕೆಲವರಿಗೆ “ನಾನು ನಿಮ್ಮ ಬ್ಯಾಂಕಿನಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಆನ್‌ಲೈನ್ ಬ್ಯಾಂಕಿಂಗ್ ಖಾತೆಯನ್ನು ರಿಸೆಟ್ ಮಾಡುತ್ತಿದ್ದೇವೆ. ನಿಮ್ಮ ಫೋನಿಗೆ ಒಂದು ಓಟಿಪಿ ಬರುತ್ತದೆ. ಅದನ್ನು ನನಗೆ ಹೇಳಿ” ಎಂದು ಫೋನ್ ಬರುತ್ತದೆ. ಅವರ ಮಾತನ್ನು ನಂಬಿ ನಿಮ್ಮ ಫೋನಿಗೆ ಬಂದ ಓಟಿಪಿಯನ್ನು ಅವರಿಗೆ ಹೇಳಿದರೆ ನಿಮ್ಮ ಖಾತೆಯಿಂದ ಹಣ ಹೋಗಿರುತ್ತದೆ. ಇದೇ ರೀತಿ, “ನಾನು ಇನ್‌ಕಂಟ್ಯಾಕ್ಸ್ ವಿಭಾಗದಿಂದ ಫೊನ್ ಮಾಡುತ್ತಿದ್ದೇನೆ. ನಿಮ್ಮ ಫೋನಿಗೆ ಬಂದ ಓಟಿಪಿ ಹೇಳಿ” ಎಂದೂ ಕರೆಗಳು ಬರುತ್ತವೆ. ನೀವು ತೆಗೆದುಕೊಳ್ಳಬೇಕಾದ ಎಚ್ಚರಿಕೆಯೇನೆಂದರೆ ಯಾರೇ ಯಾವ ರೀತಿ ಕೇಳಿದರೂ ಫೋನಿಗೆ ಬಂದ ಓಟಿಪಿ ಸಂಖ್ಯೆಯನ್ನು ಯಾರಿಗೂ ಯಾವುದೇ ಕಾರಣಕ್ಕೂ ಹೇಳಬಾರದು. ಜೊತೆಗೆ ನಿಮ್ಮ ಖಾತೆಗೆ ಕಳ್ಳರು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಕೊಂಡು ಕೂಡಲೇ ನಿಮ್ಮ ಪಾಸ್‌ವರ್ಡ್ ಅನ್ನು ಬದಲಿಸಬೇಕು.

ಅಂತರಜಾಲದ ಮೂಲಕ ಸುಲಿಗೆ ಮಾಡುವುದನ್ನು cyber extortion ಎನ್ನುತ್ತಾರೆ. ಇದನ್ನು ಸೈಬರ್ ಸುಲಿಗೆ ಅಥವಾ ಜಾಲಸುಲಿಗೆ ಎನ್ನಬಹುದು. ಇದರಲ್ಲೂ ಹಲವು ವಿಧಾನಗಳಿವೆ. ನೀವು ಒಂದು ಕಂಪೆನಿ ನಡೆಸುವವರಾಗಿದ್ದು ನಿಮ್ಮ ಕಂಪೆನಿಯ ಸರ್ವರ್‌ನಲ್ಲಿ ಅತಿ ಮುಖ್ಯ ಮಾಹಿತಿಗಳಿದ್ದಲ್ಲಿ ಅಂತರಜಾಲದ ಮೂಲಕ ಸರ್ವರ್‌ಗೆ ದಾಳಿ ಇಡುತ್ತಾರೆ. ಸರ್ವರ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು  ನಂತರ ಇಂತಿಷ್ಟು ಹಣ ನೀಡಿದರೆ ಮಾತ್ರ ಸರ್ವರ್‌ನಿಯಂತ್ರಣವನ್ನು ಅನ್ನು ವಾಪಾಸು ನೀಡುತ್ತೇವೆ ಎಂದು ಬ್ಲಾಕ್‌ಮೈಲ್ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಸುಲಿಗೆ ಮಾಡುವವರು ಬಿಟ್‌ಕಾಯಿನ್ ಮೂಲಕ ಹಣ ಕೇಳುತ್ತಾರೆ.

ಸರ್ವರ್‌ ಮತ್ತು ಗಣಕಜಾಲಗಳಿಗೆ ದಾಳಿ ಇಡುವುದು ಜಾಲಾಪರಾಧಗಳಲ್ಲೊಂದು ನಮೂನೆ. ಜಾಲತಾಣಗಳು ಇರುವುದು ಅಂತರಜಾಲಕ್ಕೆ ಜೋಡಿಸಲ್ಪಟ್ಟ ಯಾವುದೋ ಒಂದು ಸರ್ವರ್‌ನಲ್ಲಿ. ಈ ಸರ್ವರ್‌ಗೆ ಕಿಡಿಗೇಡಿಗಳು ದಾಳಿ ಇಡುತ್ತಾರೆ. ಇದರಲ್ಲೂ ಹಲವು ನಮೂನೆಗಳಿವೆ. ಸರ್ವರ್‌ಅನ್ನು ಸುಪರ್ದಿಗೆ ತೆಗೆದುಕೊಂಡು ಜಾಲತಾಣವನ್ನು ಕೆಡಿಸಿ ಅದರಲ್ಲಿ ತಮ್ಮದೇ ಪ್ರಚಾರವನ್ನು ಹಾಕುವುದು ಒಂದು ವಿಧ. ಇದನ್ನು ಸಾಮಾನ್ಯವಾಗಿ ಸರಕಾರಗಳ ಜಾಲತಾಣಗಳಿಗೆ ಮಾಡುತ್ತಾರೆ. ಉದಾಹರಣೆಗೆ ಭಾರತ ಸರಕಾರದ ಯಾವುದೋ ಒಂದು ಇಲಾಖೆಯ ಜಾಲತಾಣಕ್ಕೆ ಪಾಕಿಸ್ತಾನಿಗಳು ನುಗ್ಗಿ ಕೆಡಿಸುವುದು. ಇಂತಹವರಿಗೆ ಹ್ಯಾಕರ್‌ಗಳು ಎನ್ನುತ್ತಾರೆ. ಒಂದು ಸರ್ವರ್‌ಗೆ ಏಕಕಾಲದಲ್ಲಿ ಲಕ್ಷಗಟ್ಟಲೆಯಲ್ಲಿ ಭೇಟಿ ನೀಡಿದರೆ ಕೆಲವು ಸರ್ವರ್‌ಗಳು ಸುಸ್ತಾಗಿ ಪ್ರತಿಕ್ರಿಯೆ ನೀಡದೆ ಸ್ಥಬ್ಧವಾಗುತ್ತವೆ. ಇಂತಹ ದಾಳಿಯನ್ನು ಒಂದೇ ಗಣಕದಿಂದ ಮಾಡಲು ಆಗುವುದಿಲ್ಲ. ಅಥವಾ ಹಾಗೆ ಮಾಡಿದರೆ ಸರ್ವರ್‌ಗೆ ಗೊತ್ತಾಗಿ ಅದನ್ನು ಸ್ವೀಕರಿಸುವುದೂ ಇಲ್ಲ. ಅದಕ್ಕಾಗಿ ಪ್ರಪಂಚದ ಹಲವು ಗಣಕಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಎಲ್ಲ ಗಣಕಗಳಿಂದ ಸರ್ವರ್‌ಗೆ ಏಕಕಾಲದಲ್ಲಿ ದಾಳಿ ಇಡುತ್ತಾರೆ. ಈ ರೀತಿ ದಾಳಿ ಇಡುವುದಕ್ಕೆ distributed denial of service ಎನ್ನುತ್ತಾರೆ. ನಿಮ್ಮ ಗಣಕವನ್ನೂ ನಿಮಗೆ ಗೊತ್ತಿಲ್ಲದೆ ಹ್ಯಾಕರ್‌ಗಳು ಇಂತಹ ದಾಳಿಗೆ ಬಳಸಿಕೊಂಡಿರಬಹುದು!

ಕೆಲವರಿಗೆ ವಾಟ್ಸ್‌ಆಪ್‌ನಲ್ಲಿ ಪರಿಚಯವೇ ಇಲ್ಲದವರಿಂದ ವಿಡಿಯೋ ಕರೆ ಬರುತ್ತದೆ. ಮುಗ್ಧರಾದ ಕೆಲವರು ಇಂತಹ ಕರೆಯನ್ನು ಸ್ವೀಕರಿಸುತ್ತಾರೆ. ವಿಡಿಯೋ ಕರೆಯಲ್ಲಿ ಮಾತನಾಡುವಾಗ ಸಾಮಾನ್ಯವಾಗಿ ಪರದೆ ಎರಡು ಭಾಗವಾಗಿ ಮೇಲಿನ ಭಾಗದಲ್ಲಿ ಕರೆ ಮಾಡಿದ ವ್ಯಕ್ತಿ ಮತ್ತು ಕೆಳಗಿನ ಭಾಗದಲ್ಲಿ ನಿಮ್ಮ ಮುಖ ಕಾಣಿಸುತ್ತದೆ. ಕರೆ ಮಾಡಿದ ವ್ಯಕ್ತಿ ಏನೇನೋ ಮಾತನಾಡಿ ನಂತರ ಕ್ಷಮಿಸಿ ನಾನು ಮಾತನಾಡಬೇಕಾದ ವ್ಯಕ್ತಿ ನೀವಲ್ಲ ಎಂದು ಕರೆ ಕತ್ತರಿಸಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಗಂಡಸರಿಗೆ ಯಾವುದೋ ಹೆಣ್ಣು ಕರೆ ಮಾಡಿ ರಮ್ಯವಾಗಿ ಮಾತನಾಡಿ ಗಾಳ ಹಾಕುವುದೂ ಇದೆ. ಇವರೂ ರಮ್ಯವಾಗಿ ಮಾತನಾಡಿದರೆ ಮುಗಿಯಿತು. ಅವರು ಕರೆಯ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿರುತ್ತಾರೆ. ನಂತರ ಆ ವಿಡಿಯೋವನ್ನು ಎಡಿಟ್ ಮಾಡಿ ನಿಮ್ಮ ಮುಖಕ್ಕೆ ಬೇರೆ ಯಾವುದೂ ನಗ್ನ ದೇಹವನ್ನು ಜೋಡಿಸಿ ವಿಡಿಯೋ ತಯಾರಿಸಿ ಅದನ್ನು ನಿಮಗೆ ಕಳುಹಿಸಿ ಬ್ಲಾಕ್‌ಮೈಲ್ ಮಾಡಿ ಹಣ ಕೇಳುತ್ತಾರೆ. ಮರ್ಯಾದೆಗೆ ಅಂಜಿ ಹಣ ನೀಡಿ ಮೋಸಹೋದವರು ತುಂಬ ಮಂದಿ ಇದ್ದಾರೆ. ಇಂತಹವುಗಳಿಂದ ಮೋಸಹೋಗದಿರಲು ಸುಲಭ ಮಾರ್ಗವೆಂದರೆ ಪರಿಚಯವಿಲ್ಲದವರಿಂದ ವಿಡಿಯೋ ಕರೆ ಬಂದರೆ ಸ್ವೀಕರಿಸಬಾರದು.

ಜಾಲಾಪರಾಧಗಳಲ್ಲಿ ಇನ್ನೂ ಹಲವು ನಮೂನೆಗಳಿವೆ.

–ಡಾ| ಯು.ಬಿ. ಪವನಜ

gadgetloka @ gmail . com

The post ಜಾಲಾಪರಾಧ first appeared on Vishva Kannada.

ಅಂತರಜಾಲದಲ್ಲಿ ಗಾಳಹಾಕುವಿಕೆ
ಮಾಹಿತಿ ಕಳ್ಳರ ಮೀನುಗಾರಿಕೆ

ನಿಮಗೊಂದು ಇಮೈಲ್ ಬಂದಿದೆ ಎಂದಿಟ್ಟುಕೊಳ್ಳೋಣ. ನಿಮ್ಮ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿದ್ದಲ್ಲಿ ಅದು ನಿಮ್ಮ ಬ್ಯಾಂಕಿನಿಂದಲೇ ಬಂದಂತೆ ಕಾಣಿಸುತ್ತದೆ. ಕೆನರಾ ಬ್ಯಾಂಕಿನ ಲಾಂಛನ ಎಲ್ಲ ಇರುತ್ತದೆ. ಸಾಮಾನ್ಯವಾಗಿ ಬ್ಯಾಂಕಿನಿಂದ ಬರುವ ಇತರೆ ಇಮೈಲ್‌ಗಳ ಬಣ್ಣ, ಪಠ್ಯ, ವಿನ್ಯಾಸಗಳಲ್ಲೇ ಇರುತ್ತದೆ. ನಿಮ್ಮ ಪಾಸ್‌ವರ್ಡ್‌ನಲ್ಲಿ ದೋಷವಿದೆ. ಆದುದರಿಂದ ಕೂಡಲೆ ಅದನ್ನು ಬದಲಿಸಿ ಎಂದು ಆ ಇಮೈಲ್‌ನಲ್ಲಿ ಬರೆದಿರುತ್ತದೆ. ಪಾಸ್‌ವರ್ಡ್ ಬದಲಿಸಲು ಇಲ್ಲಿ ಕ್ಲಿಕ್ ಮಾಡಿ ಎಂದಿರುತ್ತದೆ. ಇವೆಲ್ಲ ಸಾಮಾನ್ಯವಾಗಿ ಬ್ಯಾಂಕಿನಿಂದ ಇಮೈಲ್‌ನಲ್ಲಿರುವಂತೆಯೇ ಇವೆ ಎನ್ನಬಹುದು. ಆದರೆ ಇಲ್ಲಿ ಕ್ಲಿಕ್ ಮಾಡಿ ಎಂಬಲ್ಲಿ ನೀಡಿರುವ ಕೊಂಡಿ ಮಾತ್ರ ದುರುದ್ದೇಶದ್ದಾಗಿರುತ್ತದೆ. ಅದು ಕೆನರಾ ಬ್ಯಾಂಕಿನ ಬದಲು ಇನ್ಯಾವುದೋ ಕಳ್ಳತನದ ಜಾಲತಾಣವಾಗಿರುತ್ತದೆ. ಅದರ ಪುಟವಿನ್ಯಾಸಗಳೆಲ್ಲ ಕೆನರಾ ಬ್ಯಾಂಕಿನ ಜಾಲತಾಣದಂತೆಯೇ ಇರುತ್ತದೆ. ಆದರೆ ಅದರ ವಿಳಾಸ canarabank.com/login ಎಂಬ ರೀತಿಯಲ್ಲಿರುವ ಬದಲು user.canarabanksite.com/login ಎಂದ ರೀತಿಯಲ್ಲಿರುತ್ತದೆ. ಇಲ್ಲಿ ನೀಡಿರುವ ವಿಳಾಸ ಈ ಲೇಖನಕ್ಕಾಗಿ ನಾನು ಸೃಷ್ಟಿಸಿರುವುದು. ನಿಜ ಜೀವನದಲ್ಲಿ ಅದು ಇನ್ನೇನೋ ಆಗಿರಬಹುದು. ಮುಖ್ಯವಾಗಿ ಹೇಳಹೊರಟಿರುವುದೇನೆಂದರೆ ಅದು ಕೆನರಾ ಬ್ಯಾಂಕಿನ ಅಧಿಕೃತ ಜಾಲತಾಣದ ಬದಲು ಇನ್ಯಾವುದೋ ಮಾಹಿತಿ ಕದಿಯುವ ಜಾಲತಾಣವಾಗಿರುತ್ತದೆ. ಆ ಪುಟದಲ್ಲಿ ನೀವು ನಿಮ್ಮ ಹಳೆಯ ಮತ್ತು ಹೊಸ ಪಾಸ್‌ವರ್ಡ್‌ಗಳನ್ನು ನೀಡಲು ಅದು ಸೂಚಿಸುತ್ತದೆ. ಅಲ್ಲಿ ನೀವು ನಿಮ್ಮ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್‌ಗಳನ್ನು ನೀಡಿದರೆ ಕೆನರಾಬ್ಯಾಂಕಿನ ನಿಮ್ಮ ಖಾತೆಯಿಂದ ಹಣ ಹೋಗುತ್ತದೆ. ಹೀಗೆ ಹಣ ಕಳೆದುಕೊಂಡವರ ಸಂಖ್ಯೆ ತುಂಬ ದೊಡ್ಡದಿದೆ.

ಫಿಶಿಂಗ್‌ನ ಉದಾಹರಣೆ (ಚಿತ್ರ : Johnathan.g.freeman)

ಈ ರೀತಿಯಲ್ಲಿ ನಿಮ್ಮನ್ನು ಸೆಳೆದು ಮಾಹಿತಿ ಕದಿಯುವುದಕ್ಕೆ ಫಿಶಿಂಗ್ (phishing) ಎನ್ನುತ್ತಾರೆ. ಮೀನು ಹಿಡಿಯಲು ಗಾಳ ಹಾಕುವುದು ಗೊತ್ತಿರಬಹುದು. ಗಾಳದಲ್ಲಿ ಸಿಕ್ಕಿಸಿರುವ ಚಿಕ್ಕ ಹುಳುವಿನ ಮೂಲಕ ಮೀನನ್ನು ಆಕರ್ಷಿಸಲಾಗುತ್ತದೆ. ಆ ಆಕರ್ಷಣೆಗೆ ಸಿಕ್ಕಿದ ಮೀನು ಗಾಳಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಇದೇ ಉಪಮೆಯನ್ನು ಇಟ್ಟುಕೊಂಡು ಈ ಪದವನ್ನು ಸೃಷ್ಟಿಸಲಾಗಿದೆ.

ಇಮೈಲ್ ಮೂಲಕ ಫಿಶಿಂಗ್ ಮಾಡುವುದರಲ್ಲಿ ಇನ್ನೂ ಬೇರೆ ವಿಧಾನಗಳಿವೆ. ನಿಮಗೆ ಯಾವುದೋ ಬಹುಮಾನ ಬಂದಿದೆ ಎಂದು ಸುಳ್ಳು ಇಮೈಲ್ ಕಳುಹಿಸುವುದು. ಬಹುಮಾನದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಅದನ್ನು ಪಡೆಯಬೇಕಾದರೆ ನಿಮ್ಮ ಬ್ಯಾಂಕಿನ ಖಾತೆಯ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್‌ಗಳನ್ನು ಇಲ್ಲಿ ನಮೂದಿಸಿ ಎಂದು ಇಮೈಲ್ ಬಂದಿರುತ್ತದೆ. ಇನ್ನೂ ಒಂದು ವಿಧಾನದಲ್ಲಿ ನೀವು ಕಟ್ಟಿದ ವರಮಾನ ತೆರಿಗೆಯ ಮರುಮಾವತಿ ಆಗುತ್ತಿದೆ. ಇಲ್ಲಿ ಕ್ಲಿಕ್ ಮಾಡಿ ಅದನ್ನು ಪಡೆಯಿರಿ ಎಂದಿರುತ್ತದೆ.

ನಿಮಗೆ ಬಂದಿದ್ದು ಫಿಶಿಂಗ್ ಇಮೈಲ್ ಎಂದು ತಿಳಿಯುವುದು ಹೇಗೆ? ಅದಕ್ಕಾಗಿ ಅದರಲ್ಲಿ ನೀಡಿದ ಕೊಂಡಿಯಲ್ಲಿ (ಲಿಂಕ್) ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಜಾಲತಾಣದ ವಿಳಾಸವನ್ನು ಗಮನವಿಟ್ಟು ನೋಡಿ. ಒಂದು ಉದಾಹರಣೆಯನ್ನು ಈ ಲೇಖನದ ಪ್ರಾರಂಭದಲ್ಲೇ ನೀಡಿದ್ದೇನೆ. ಅದು ಅಧಿಕೃತ ಜಾಲತಾಣದ ವಿಳಾಸವಾಗಿರುವುದಿಲ್ಲ. ಜಾಲತಾಣದ ವಿಳಾಸದಲ್ಲಿ ಅಲ್ಪಸ್ವಲ್ಪ ಬದಲಾವಣೆಯಾಗಿರುತ್ತದೆ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಅದು ಸುರಕ್ಷತ ಜಾಲತಾಣವೇ ಎಂದು. ಬ್ಯಾಂಕ್‌ನಂತಹ ವಹಿವಾಟಿನ ಜಾಲತಾಣಗಳ ವಿಳಾಸಗಳು ಸುರಕ್ಷಿತ ವಿಧಾನವನ್ನು ಬಳಸುತ್ತವೆ. ಉದಾಹರಣೆಗೆ https://canarabank.com. ಇಲ್ಲಿ ಜಾಲತಾಣದ ವಿಳಾಸದ ಪ್ರಾರಂಭದಲ್ಲಿರುವ https:// ಎಂಬುದನ್ನು ಗಮನಿಸಿ. ಮೋಸದ ಜಾಲತಾಣದ ವಿಳಾಸದ ಪ್ರಾರಂಭದಲ್ಲಿ http:// ಎಂದಷ್ಟೇ ಇರುತ್ತದೆ. ಈ ಹೆಚ್ಚಿಗೆಯ s ಎಂಬದು secure ಅಂದರೆ ಸುರಕ್ಷಿತ ಎಂಬುದನ್ನು ಸೂಚಿಸುತ್ತದೆ. ಹೀಗೆ ಜಾಲತಾಣದ ಪ್ರಾರಂಭದಲ್ಲಿ https:// ಇಲ್ಲವಾದಲ್ಲಿ ಅಂತಹ ಜಾಲತಾಣದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನಾಗಲಿ, ನಿಮ್ಮ ಬ್ಯಾಂಕ್ ವ್ಯವಹಾರದ ಪಾಸ್‌ವರ್ಡ್‌ಅನ್ನಾಗಲಿ ನೀಡಬೇಡಿ.

ಇನ್ನೂ ಒಂದು ವಿಧಾನದಲ್ಲಿ ಮೋಸ ಮಾಡುವವರಿರುತ್ತಾರೆ. ಇಲ್ಲಿ ಕ್ಲಿಕ್ ಮಾಡಿ ಎಂಬಲ್ಲಿ ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ  ಜಾಲತಾಣದ ವಿಳಾಸದ ಪ್ರಾರಂಭದಲ್ಲಿ ಇಂಗ್ಲಿಷ್‌ನ ಅಕ್ಷರಗಳ ಬದಲಿಗೆ ಕೆಲವು ಅಂಕೆಗಳಿರುತ್ತವೆ. ಅಂಕೆಗಳ ನಂತರ ಯಾವುದೋ ಅಕ್ಷರಗಳಿರುತ್ತವೆ. ಈ ಅಕ್ಷರಗಳು ಬ್ಯಾಂಕಿನ ಅಧಿಕೃತ ಜಾಲತಾಣದ ಹೆಸರೇ ಆಗಿರಬಹುದು. ಕೆನರಾ ಬ್ಯಾಂಕಿನ ಉದಾಹರಣೆಯನ್ನೇ ಮುಂದುವರೆಸುವುದಾದರೆ ಅದು http://12.76.43.81/canarabank/login ಎಂದಿರಬಹುದು. ಇದು ಒಂದು ಕಾಲ್ಪನಿಕ ಉದಾಹರಣೆಯಾದರೂ ನಿಜ ಘಟನೆಯಲ್ಲಿ ಇದೇ ಮಾದರಿಯಲ್ಲಿರಬಹುದು.

ಫಿಶಿಂಗ್ ಇಮೈಲ್ ಮೂಲಕವೇ ನಡೆಯಬೇಕಾಗಿಲ್ಲ. ಅದು ಎಸ್‌ಎಂಎಸ್, ವಾಟ್ಸ್‌ಆಪ್, ಫೇಸ್‌ಬುಕ್ ಮೆಸ್ಸೆಂಜರ್ ಅಥವಾ ಇನ್ಯಾವುದೇ ಸಂದೇಶದ ಮೂಲಕ ಬರಬಹುದು. ವಿಧಾನ ಮಾತ್ರ ಅದುವೇ. ಆ ಸಂದೇಶದಲ್ಲಿ ಒಂದು ಕೊಂಡಿ (ಲಿಂಕ್) ಇರುತ್ತದೆ. ಇಲ್ಲಿ ಕ್ಲಿಕ್ ಮಾಡಿ ಎಂದಿರುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ತೆರೆದುಕೊಳ್ಳುವುದು ಫಿಶಿಂಗ್ ಜಾಲತಾಣವಾಗಿರುತ್ತದೆ.

ಫಿಶಿಂಗ್ ಧಾಳಿಯಿಂದ ತಪ್ಪಿಸಿಕೊಳ್ಳುವ ಒಂದು ವಿಧಾನವೆಂದರೆ ನಿಮ್ಮ ಬ್ಯಾಂಕ್ ಮತ್ತು ಇತರೆ ಆನ್‌ಲೈನ್ ಲಾಗಿನ್‌ಗಳಿಗೆ ಎರಡು ಹಂತದ ಸುರಕ್ಷೆಯನ್ನು ಮಾಡಿಟ್ಟುಕೊಳ್ಳುವುದು. ಇದಕ್ಕೆ ಇಂಗ್ಲಿಷ್‌ನಲ್ಲಿ two factor authentication ಎನ್ನುತ್ತಾರೆ. ಇದಕ್ಕಾಗಿ ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ಖಾತೆಗೆ ಜೋಡಿಸಬೇಕು. ಆಗ ಲಾಗಿನ್ ಆಗಲು ಮೊಬೈಲ್‌ಫೋನ್‌ಗೆ ಬರುವ ಒಂದು ಸಂಖ್ಯೆಯನ್ನು (OTP = one time password) ನೀಡಬೇಕು. ನಿಮ್ಮ ಫೋನ್ ನಿಮ್ಮ ಕೈಯಲ್ಲೇ ಇರುವುದರಿಂದ ಕಳ್ಳರಿಗೆ ನಿಮ್ಮ ಖಾತೆಗೆ ಕನ್ನ ಹಾಕಲು ಆಗುವುದಿಲ್ಲ. ಕೆಲವೊಮ್ಮೆ ನೀವು ನಿಮ್ಮ ಖಾತೆಗೆ ಲಾಗಿನ್ ಆಗಲು ಹೊರಡದಿದ್ದಾಗಲೂ ನಿಮ್ಮ ಫೋನ್‌ಗೆ ಓಟಿಪಿ ಬಂದರೆ ನಿಮ್ಮ ಖಾತೆಗೆ ಯಾರೋ ನುಗ್ಗಲು ಪ್ರಯತ್ನಿಸುತ್ತಿದ್ದಾರೆ ಎಂದು ನೀವು ತಿಳಿಯಬಹುದು. ಇಂತಹ ಸಂದರ್ಭದಲ್ಲಿ ಆದಷ್ಟು ಬೇಗನೆ ನಿಮ್ಮ ಪಾಸ್‌ವರ್ಡ್ ಅನ್ನು ಬದಲಿಸುವುದು ಉತ್ತಮ. ಕೆಲವರು ವರ್ಷಗಟ್ಟಲೆ ತಮ್ಮ ಪಾಸ್‌ವರ್ಡ್ ಬದಲಿಸುವುದೇ ಇಲ್ಲ. ಇದೂ ಸರಿಯಲ್ಲ. ಕನಿಷ್ಠ 3 ತಿಂಗಳುಗಳಿಗೆ ಒಮ್ಮೆ ಪಾಸ್‌ವರ್ಡ್ ಬದಲಿಸಬೇಕು. ಒಮ್ಮೆ ಬಳಸಿದ ಪಾಸ್‌ವರ್ಡ್ ಅನ್ನು ಇನ್ನೊಮ್ಮೆ ಬಳಸಬಾರದು. ಎಲ್ಲ ಖಾತೆಗಳಗೂ ಒಂದೇ ಪಾಸ್‌ವರ್ಡ್ ಬಳಸುವುದೂ ತಪ್ಪು.

–ಡಾ| ಯು.ಬಿ. ಪವನಜ

gadgetloka @ gmail . com

The post ಅಂತರಜಾಲದಲ್ಲಿ ಗಾಳಹಾಕುವಿಕೆ first appeared on Vishva Kannada.