ಸ್ಮಾರ್ಟ್‌ಫೋನ್ | Vishva Kannada

5ಜಿ – ಅತಿ ವೇಗದ ಮೊಬೈಲ್ ಅಂತರಜಾಲ
ಅತ್ಯಂತ ಕ್ಲಿಷ್ಟವಾದ ಶಸ್ತ್ರಚಿಕಿತ್ಸೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಎಲ್ಲ ಅತ್ಯಾಧುನಿಕ ಸೌಲಭ್ಯಗಳು, ಪರಿಣತ ವೈದ್ಯರು ಎಲ್ಲ ಇದ್ದಾರೆ. ಶಸ್ತ್ರಚಿಕಿತ್ಸೆಯನ್ನು ಅಮೆರಿಕದಿಂದ ನುರಿತ ವೈದ್ಯರು ವಿಡಿಯೋ ಕಾನ್ಫೆರೆನ್ಸ್ ಮೂಲಕ ವೀಕ್ಷಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಲ್ಲಿಯ ವೈದ್ಯರ ಸಲಹೆಯಂತೆ ಒಂದು ಸೂಕ್ಷ್ಮ ಅಂಗವನ್ನು ಕತ್ತರಿಸಿ ಮುಂದಿನ ಹೆಜ್ಜೆಯ ಬಗ್ಗೆ ಅಮೆರಿಕದಿಂದ ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದಾರೆ. ಆಗ ಅಂತರಜಾಲ ಸಂಪರ್ಕ ನಿಧಾನವಾಗಿ ತಡೆತಡೆದು ಬರತೊಡಗುತ್ತದೆ. ಇಂತಹ ಸಂದರ್ಭಗಳು ಮುಂದೆ 5ಜಿ ಬಂದಾಗ ಆಗಲಾರದು.

ಅಕ್ಟೋಬರ್ 1 ರಂದು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ 5ಜಿ ಮೊಬೈಲ್ ಅಂತರಜಾಲ ಸಂಪರ್ಕ ತಂತ್ರಜ್ಞಾನವನ್ನು ಉದ್ಘಾಟಿಸಿದರು. ಈ ತಂತ್ರಜ್ಞಾನವು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲಿದೆ ಎಂದು ನರೇಂದ್ರ ಮೋದಿಯವರು ಹೇಳಿದರು. ಏನಿದು 5ಜಿ ಅಂದರೆ? ಈ ಸಂಚಿಕೆಯಲ್ಲಿ ಅದರ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳೋಣ.

5ಜಿ (G=generation) ಅಂದರೆ ಐದನೇ ತಲೆಮಾರಿನ ತಂತ್ರಜ್ಞಾನ ಎಂದು ಅರ್ಥ. ಐದನೇ ತಲೆಮಾರು ಬರುವ ಮೊದಲು 1ನೆ, 2ನೆ, 3ನೇ ಮತ್ತು 4ನೇ ತಲೆಮಾರುಗಳು ಇದ್ದಿರಬೇಕಲ್ಲವೇ? ಹೌದು. ಅವುಗಳು ಕ್ರಮವಾಗಿ, 1G, 2G, 3G ಮತ್ತು 4G ತಂತ್ರಜ್ಞಾನಗಳು. ಇವು ಮೊಬೈಲ್ ಫೋನ್ ಕ್ಷೇತ್ರದಲ್ಲಿ ತಂತ್ರಜ್ಞಾನವು ಹಾದು ಬಂದ ಮಜಲುಗಳು ಎನ್ನಬಹುದು. ಅದನ್ನು ಕೋಷ್ಟಕ ರೂಪದಲ್ಲಿ ನೀಡಲಾಗಿದೆ-

ತಂತ್ರಜ್ಞಾನದ ಮಜಲು

ವರ್ಷ

ತಂತ್ರಜ್ಞಾನದ ವೈಶಿಷ್ಟ್ಯ

1G

1980

ಅನಲಾಗ್ ಧ್ವನಿ

2G

1990

ಡಿಜಿಟಲ್ ಧ್ವನಿ

3G

2000

ಮೊಬೈಲ್ ಡಾಟಾ

4G

2010

ಮೊಬೈಲ್ ಬ್ರಾಡ್‌ಬ್ಯಾಂಡ್

5G

2016

ಅತಿ ವೇಗದ ಅಂತರಜಾಲ ಸಂಪರ್ಕ

ಇವು ತಂತ್ರಜ್ಞಾನವು ಜಾಗತಿಕವಾಗಿ ಬಂದ ವರ್ಷ. ಭಾರತಕ್ಕೆ ಬಂದ ವರ್ಷಗಳಲ್ಲ.

5ಜಿ ಯಲ್ಲಿ 11 ಬ್ಯಾಂಡ್‌ಗಳಿವೆ. ಭಾರತದಲ್ಲಿ ಎಲ್ಲ ಮೊಬೈಲ್ ಸೇವೆ ನೀಡುವವರು ಎಲ್ಲ ಬ್ಯಾಂಡ್‌ಗಳಲ್ಲಿ 5ಜಿ ನೀಡುತ್ತಾರೆಂದಿಲ್ಲ. ಈಗಿನ ಮಾಹಿತಿಯಂತೆ ಜಿಯೋ 8, ಏರ್‌ಟೆಲ್ 5 ಮತ್ತು ವೊಡಾಫೋನ್ 5 ಬ್ಯಾಂಡ್‌ಗಳಲ್ಲಿ 5ಜಿ ಸೇವೆಗಳನ್ನು ನೀಡುತ್ತಾರೆ-

ಜಿಯೋ – 700 MHz, 800 MHz, 900 MHz, 1800 MHz, 2100 MHz, 2500 MHz, 3300 MHz ಮತ್ತು 26 GHz

ಏರ್‌ಟೆಲ್ – 900 MHz, 1800 MHz, 2100 MHz, 3300 MHz ಮತ್ತು 26 GHz

ವಿಐ – 1800 MHz, 2100 MHz, 2500 MHz, 3300 MHz and 26 GHz

ಸದ್ಯಕ್ಕೆ ಭಾರತದ ಕೆಲವೇ ಪ್ರಮುಖ ನಗರಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಆಯಾ ನಗರದಲ್ಲೂ ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ಈ ಸೇವೆ ಲಭ್ಯವಿದೆ.

5ಜಿ ಸಂಪರ್ಕವು ಅತಿ ವೇಗದ ಅಂತರಜಾಲ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ. 4ಜಿ ಸಂಪರ್ಕಕ್ಕೆ ಹೋಲಿಸಿದರೆ ಅದು 10 ರಿಂದ 100 ಪಟ್ಟು ಹೆಚ್ಚಿನ ವೇಗವನ್ನು ಸಾಧಿಸಬಲ್ಲುದು. 4ಜಿ ಸಂಪರ್ಕದಲ್ಲಿ ಒಂದು ದೊಡ್ಡ ಗಾತ್ರದ ಫೈಲು ಡೌನ್‌ಲೋಡ್ ಆಗಲು ಸುಮಾರು 10 ಸೆಕೆಂಡು ಬೇಕಿದ್ದಲ್ಲಿ ಅದೇ ಫೈಲು 5 ಜಿ ಸಂಪರ್ಕದಲ್ಲಿ ಕೇವಲ 1 ಸೆಕೆಂಡಿನಲ್ಲಿ ಡೌನ್‌ಲೋಡ್ ಆಗಬಲ್ಲುದು. ಇದರಿಂದಾಗಿ ಹಲವು ಪ್ರಯೋಜನಗಳಾಗಲಿವೆ. ಮೊದಲನೆಯದಾಗಿ ಅಂತರಜಾಲದ ಮೂಲಕ ವಿಡಿಯೋ ನೋಡುವವರಿಗೆ ಉತ್ತಮ ಗುಣಮಟ್ಟದ ವಿಡಿಯೋ ವೀಕ್ಷಣೆಯನ್ನು ಸರಾಗವಾಗಿ ಮಾಡಬಹುದು. ಒಂದು ಸಿನಿಮಾವನ್ನು ಅಂತರಜಾಲದಲ್ಲಿ ಆಪ್‌ಗಳ ಮೂಲಕ ನೋಡುವವರಿಗೆ ಈ ಅನುಭವವಾಗಿರಬಹುದು.  ಹೈಡೆಫಿನಿಶನ್ ಎಂದು ಆಯ್ಕೆ ಮಾಡಿಕೊಂಡರೆ ಹಲವು ಸಲ ಸಿನಿಮಾವನ್ನು ಸರಾಗವಾಗಿ ನೋಡಲು ಆಗುವುದೇ ಇಲ್ಲ. ಅಗಾಗ ಅದು ನಿಲ್ಲುತ್ತದೆ. ಇದಕ್ಕೆ ಬಫರಿಂಗ್ ಎನ್ನುತ್ತಾರೆ. ಸಾಮಾನ್ಯವಾಗಿ ನಾವು ಅಂತಹ ಸಂದರ್ಭಗಳಲ್ಲಿ ಕಡಿಮೆ ಗುಣಮಟ್ಟಕ್ಕೆ ಆಯ್ಕೆಯನ್ನು ಬದಲಾಯಿಸಿಕೊಳ್ಳುತ್ತೇವೆ. 5ಜಿ ಬಂದಾಗ ಈ ಸಮಸ್ಯೆ ಇರುವುದಿಲ್ಲ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೋಗಳನ್ನು ಕೂಡ ಯಾವುದೇ ತಡೆಯಿಲ್ಲದೆ (ಬಫರಿಂಗ್ ಇಲ್ಲದೆ) ಅಂತರಜಾಲದಿಂದ ವೀಕ್ಷಿಸಬಹುದು.

ಅಂತರಜಾಲ ಸಂಪರ್ಕದಲ್ಲಿ ವೇಗ ಮಾತ್ರವಲ್ಲ. ಲಾಟೆನ್ಸ್ ಎಂಬ ಇನ್ನೊಂದು ಗುಣವೈಶಿಷ್ಟ್ಯವಿದೆ. ಒಂದು ಜಾಲತಾಣ ವೀಕ್ಷಣೆ, ಫೈಲು ಡೌನ್‌ಲೋಡ್, ಸ್ಟ್ರೀಮಿಂಗ್ ವಿಡಿಯೋದ ಪ್ರಾರಂಭವು ಕೂಡಲೇ ಆಗದೆ, ಒಂದು ಚಿಕ್ಕ ಸಮಯ ಕಳೆದ ನಂತರ ಪ್ರಾರಂಭವಾಗುವುದನ್ನು ಗಮನಿಸಿರಬಹುದು. ಇದನ್ನೇ ಲಾಟೆನ್ಸ್ ಎನ್ನುತ್ತಾರೆ. 4ಜಿ ಸಂಪರ್ಕದಲ್ಲಿ ಇದು ಸಾಮಾನ್ಯವಾಗಿ 20 ಮಿಲ್ಲಿ ಸೆಕೆಂಡಿನಿಂದ 100 ಮಿ.ಸೆ. ಕೂಡ ಇರಬಹುದು. ವಿಡಿಯೋ ಕಾಫೆರೆನ್ಸ್‌ಗಳಲ್ಲಿ ಈ ಲಾಟೆನ್ಸ್ ಕಡಿಮೆ ಇದ್ದಷ್ಟೂ ಉತ್ತಮ. ಇಲ್ಲವಾದಲ್ಲಿ ಮಾತನಾಡುತ್ತಿದ್ದಾಗ ವಿಡಿಯೋ ಅಲ್ಲಲ್ಲಿ ಸ್ವಲ್ಪ ಕಾಲ ನಿಲ್ಲುತ್ತದೆ. ಈ ನಿಲ್ಲುವ ಸಮಯ ಒಂದು ಸೆಕೆಂಡಿಗಿಂತಲೂ ಕಡಿಮೆ ಇರಬಹುದು. ಆದರೂ ಕೆಲವು ಸಂದರ್ಭಗಳಲ್ಲಿ ಸೆಕೆಂಡು ಮಾತ್ರವಲ್ಲ ಮಿಲ್ಲಿ ಸೆಕೆಂಡು ಕೂಡ ಮುಖ್ಯವಾಗುತ್ತದೆ. 3ಜಿಯಲ್ಲಿ ಇನ್ನೂ ಜಾಸ್ತಿ ಇರುತ್ತದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ರೋಗಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ. ಅಮೆರಿಕದಿಂದ ಕೆಲವು ಪರಿಣತ ವೈದ್ಯರು ವಿಡಿಯೋ ಮೂಲಕ ಶಸ್ತ್ರಚಿಕಿತ್ಸೆಯನ್ನು ವೀಕ್ಷಿಸುತ್ತಾ ಅಲ್ಲಿಂದ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋ ಮಿಲ್ಲಿಸೆಕೆಂಡಿನಷ್ಟು ಕಾಲವೂ ನಿಲ್ಲಬಾರದು. ಇದು ಒಂದು ಉದಾಹರಣೆ ಮಾತ್ರ. ಇಂತಹ ಹಲವು ಉದಾಹರಣೆಗಳಿವೆ.

5ಜಿ ತಂತ್ರಜ್ಞಾನವು ಭಾರತಕ್ಕೆ ಹಲವು ರೀತಿಯಲ್ಲಿ ವರದಾನವಾಗಲಿದೆ. ಕೆಲವು ಪ್ರಮುಖ ಸಂದರ್ಭಗಳನ್ನು ನೋಡೋಣ. ವಸ್ತುಗಳ ಅಂತರಜಾಲ (IoT = Internet of Things) ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ಆಗಲಿದೆ. ಕೃಷಿ ಕ್ಷೇತ್ರದಲ್ಲಿ ಅತಿ ವೇಗದ ಅಂತರಜಾಲ ಮತ್ತು ಕಡಿಮೆ ಲಾಟೆನ್ಸ್‌ನಿಂದಾಗಿ ಲಾಭವಾಗಲಿದೆ. ಆರೋಗ್ಯ ಕ್ಷೇತ್ರದ ಒಂದು ಉದಾಹರಣೆಯನ್ನು ಈಗಾಗಲೇ ನೀಡಲಾಗಿದೆ. ಶಿಕ್ಷಣದ ವಿಷಯಕ್ಕೆ ಬಂದರೆ ಉತ್ತಮ ಗುಣಮಟ್ಟದ ವಿಡಿಯೋ ವೀಕ್ಷಣೆಯ ಸೌಲಭ್ಯದಿಂದಾಗಿ ಆನ್‌ಲೈನ್ ತರಗತಿಗಳಿಗೆ ತುಂಬ ಪ್ರಯೋಜನವಾಗಲಿದೆ. ಸಾರಿಗೆ ನಿಯಂತ್ರಣವನ್ನು ನಿಜಸಮಯದಲ್ಲಿ ಉತ್ತಮವಾಗಿ ಮಾಡಬಹುದು.  Accutane Uk

ಎಲ್ಲರಿಗೂ ಈ 5ಜಿ ಸೌಲಭ್ಯ ದೊರಕಲಿದೆಯೇ ಎಂದು ಕೇಳಿದರೆ ಸದ್ಯಕ್ಕೆ ಇಲ್ಲ ಎಂಬುದೇ ಉತ್ತರ. ಎಲ್ಲರಿಗೂ ಲಭ್ಯವಾಗಲು ಬಹುಶಃ ಒಂದರಿಂದ ಎರಡು ವರ್ಷಗಳೇ ಬೇಕಾಗಬಹುದು. ಈಗಾಗಲೇ ಸ್ಮಾರ್ಟ್‌ಫೋನ್ ಇರುವವರು 5ಜಿ ಪಡೆಯಲು ಏನು ಮಾಡಬೇಕು? ನಿಮ್ಮ ಫೋನಿನಲ್ಲಿ 5ಜಿ ಸೌಲಭ್ಯ ಇದೆಯಾದಲ್ಲಿ ಅದನ್ನು ಚಾಲನೆ ಮಾಡಿಕೊಂಡರೆ ಸಾಕು. ನಿಮ್ಮ ಸ್ಥಳದಲ್ಲಿ 5ಜಿ ಸೇವೆ ಬಂದಾಗ ತಾನಾಗಿಯೇ ನಿಮಗೆ ಲಭ್ಯವಾಗುವುದು. ನಿಮ್ಮದು ಹಳೆಯ 5ಜಿ ಸೌಲಭ್ಯವಿಲ್ಲದ ಫೋನಾದರೆ ಹೊಸ ಫೋನ್ ಕೊಳ್ಳುವುದೇ ಪರಿಹಾರ. ಅಂತಹ ಫೋನ್‌ಗಳಿಗೆ ಸಾಫ್ಟ್‌ವೇರ್ ನವೀಕರಣ ಮೂಲಕ 5ಜಿ ಪಡೆಯಲು ಸಾಧ್ಯವಿಲ್ಲ.

–ಡಾ| ಯು.ಬಿ. ಪವನಜ

gadgetloka @ gmail . com

ದಿ : 01-10-2022

The post 5ಜಿ – ಅತಿ ವೇಗದ ಮೊಬೈಲ್ ಅಂತರಜಾಲ first appeared on Vishva Kannada.

ಚತುರ ಮನೆ
ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ಸಾಲು ಕೇಳಿರಬಹುದು. ಮನೆಯ ಯಜಮಾನ ಎಲ್ಲಿಗೋ ಹೋಗಿ ಕಸ ಗುಡಿಸದೆ ಮನೆಯೆಲ್ಲ ಗಲೀಜಾದಾಗ ಈ ಸಾಲಿನ ಬಳಕೆಯಾಗುತ್ತದೆ. ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನೆಯೊಳಗಡೆ ಮನೆಯೊಡೆಯನಿಲ್ಲದಿದ್ದರೂ ಮನೆಯನ್ನು ಸದಾ ಸ್ವಚ್ಛವಾಗಿಟ್ಟು, ರಾತ್ರಿ ದೀಪ ಹಚ್ಚಿ, ಹಗಲು ದೀಪ ಆರಿಸಿ, ಮನೆಯೊಳಗೆ ಮನೆಯೊಡೆಯನಿದ್ದಾನೆ ಎಂಬ ಭಾವನೆ ಮೂಡುವಂತೆ ಮಾಡಬಲ್ಲ ಚತುರ ಮನೆಗಳಿವೆ. ಇವುಗಳನ್ನು ಇಂಗ್ಲಿಷಿನಲ್ಲಿ smart home ಎನ್ನುತ್ತಾರೆ. ಚತುರ ಮನೆ ಅಂದರೆ ಏನು? ಬನ್ನಿ ಈ ಸಂಚಿಕೆಯಲ್ಲಿ ಅದನ್ನು ತಿಳಿದುಕೊಳ್ಳೋಣ.

ಚತುರ ಮನೆ ಅಂದರೆ ಮೊಬೈಲ್ ಫೋನ್ ಅಥವಾ ಅಂತಹುದೇ ಅಂತರಜಾಲ ಸಂಪರ್ಕದಲ್ಲಿರುವ ಸಾಧನಗಳನ್ನು ಬಳಸಿ ಅಂತರಜಾಲದ ಮೂಲಕ ಎಲ್ಲಿಂದ ಬೇಕಾದರೂ ನಿಯಂತ್ರಿಸಬಹುದಾದ ಸಾಧನಗಳನ್ನು ಒಳಗೊಂಡ ಮನೆ. ಈ ರೀತಿ ನಿಯಂತ್ರಿಸಬಹುದಾದ ವಸ್ತುಗಳನ್ನೊಳಗೊಂಡ ಜಾಲಕ್ಕೆ ವಸ್ತುಗಳ ಅಂತರಜಾಲ (Internet of Things, IoT) ಎಂಬ ಹೆಸರೂ ಇದೆ. ಮನೆಯಲ್ಲಿ ಬಳಕೆಯಾಗುವ ವಸ್ತುಗಳ ಅಂತರಜಾಲದಲ್ಲಿ ಮನೆಯಲ್ಲಿ ಬಳಸುವ ಸುರಕ್ಷಾ ಸಾಧನಗಳು, ದಿನ ನಿತ್ಯ ಬಳಕೆಯ ಗೃಹೋಪಕರಣಗಳು, ಕ್ಯಾಮೆರಾ ಇತ್ಯಾದಿಗಳೆಲ್ಲ ಸೇರಿವೆ.

ಚತುರ ಮನೆಯಲ್ಲಿ ತಾಪಮಾನವನ್ನು ಮೊಬೈಲ್ ಸಾಧನದಿಂದ ಅಂತರಜಾಲದ ಮೂಲಕ ನಿಯಂತ್ರಿಸಬಹುದು. ಕಚೇರಿಯಲ್ಲಿರುವ ವ್ಯಕ್ತಿ ಅಲ್ಲಿಂದ ಹೊರಡುವ ಅರ್ಧ ಗಂಟೆ ಮೊದಲು ಮನೆಯ ಹವಾನಿಯಂತ್ರಕವನ್ನು ಆನ್ ಮಾಡಿ ಆತ ಮನೆಗೆ ತಲುಪುವ ಹೊತ್ತಿಗೆ ತನಗೆ ಬೇಕಾದ ತಾಪಮಾನದಲ್ಲಿರುವಂತೆ ಮಾಡಬಹುದು.  ಮನೆಯಲ್ಲಿರುವ ಕಸ ಗುಡಿಸುವ ಹಾಗೂ ನೆಲ ಒರಸುವ ಯಂತ್ರವನ್ನು ಕೂಡ ಇದೇ ರೀತಿ ಅಂತರಜಾಲದ ಮೂಲಕ ನಿಯಂತ್ರಿಸಬಹುದು. ಅದನ್ನು ಪ್ರಾರಂಭಿಸುವುದು, ನಿಲ್ಲಿಸುವುದು ಇತ್ಯಾದಿಗಳನ್ನು ಮಾಡಬಹುದು. ಮನೆಯಲ್ಲಿರುವ ಶೈತ್ಯಕದಲ್ಲಿ ಹಾಲು ಮುಗಿದಿದೆ ಎಂದು ಕಚೇರಿಯಲ್ಲಿರುವ ಮನೆಯೊಡೆಯನಿಗೆ ಅದು ಸಂದೇಶ ಕಳುಹಿಸುವ ಸೌಲಭ್ಯ ಇಂತಹ ಚತುರ ಮನೆಯಲ್ಲಿ ಅಡಕವಾಗಿದೆ.

ಚತುರ ಮನೆ (ಚಿತ್ರ : TP-Link Deutschland)

ಒಂದು ನಿಜವಾದ ಉದಾಹರಣೆ ನೋಡಿ. ಬೆಂಗಳೂರಿನಲ್ಲಿ ವೃದ್ಧ ಮಾತಾಪಿತರಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಗ ಅಮೇರಿಕದಲ್ಲಿದ್ದಾನೆ. ಮನೆಯಲ್ಲಿ ಬೇರೆ ಯಾರೂ ಇಲ್ಲ. ಆತ ಮನೆಯೊಳಗೆ ಕ್ಯಾಮೆರ ಅಳವಡಿಸಿದ್ದಾನೆ. ಈ ಕ್ಯಾಮೆರಗಳು ಅಂತರಜಾಲಕ್ಕೆ ಸಂಪರ್ಕ ಹೊಂದಿವೆ. ಮಗ ಅಮೆರಿಕದಲ್ಲಿ ಕುಳಿತೇ ತಂದೆ ತಾಯಿ ಏನು ಮಾಡುತ್ತಿದ್ದಾರೆ ಎಂದು ವೀಕ್ಷಿಸುತ್ತಿರುತ್ತಾನೆ. ಒಂದು ದಿನ ಆತನ ತಂದೆ ತಲೆಸುತ್ತು ಬಂದು ಬಿದ್ದಿದ್ದಾರೆ. ಮಗ ಅಮೆರಿಕದಿಂದ ಅದನ್ನು ಕ್ಯಾಮೆರ ಮೂಲಕ ನೋಡಿದ್ದಾನೆ. ತಕ್ಷಣ ಪಕ್ಕದ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿ ಅವರು ಆತನ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಇದು ನಿಜವಾಗಿ ನಡೆದ ಕಥೆ.

ಅಂತರಜಾಲದ ಮೂಲಕ ಸಂಪರ್ಕಗೊಂಡ ಕ್ಯಾಮೆರದ ಉಪಯೋಗದ ಇನ್ನೊಂದು ಕಥೆ ಕೇಳಿ. ಇದೂ ಸ್ವಲ್ಪ ಮೇಲಿನ ಕಥೆಯ ನಮೂನೆಯೇ. ಆದರೆ ವ್ಯತ್ಯಾಸ ಎಂದರೆ ಮನೆಯಲ್ಲಿ ಯಾರೂ ಇಲ್ಲ. ಮನೆಯಲ್ಲಿ ಕ್ಯಾಮೆರ ಅಳವಡಿಸಿ ಆತ ಅಮೆರಿಕದಲ್ಲಿ ಇದ್ದಾನೆ. ಈ ಕ್ಯಾಮೆರ ಅಂತರಜಾಲಕ್ಕೆ ಸಂಪರ್ಕಗೊಂಡಿದೆ. ಅದು ಚಲನೆಯನ್ನು ಗುರುತಿಸಿ ಕಾರ್ಯಮುಖವಾಗಿ ಎಚ್ಚರಿಸುವ ಕ್ಯಾಮೆರ (motion sensitive camera). ಒಂದು ದಿನ ರಾತ್ರಿ ಮನೆಯೊಳಗೆ ಕಳ್ಳ ನುಸುಳಿದ್ದಾನೆ. ಕ್ಯಾಮೆರ ಅದನ್ನು ಪತ್ತೆ ಹಚ್ಚಿ ಅಮೆರಿಕದಲ್ಲಿರುವ ಮನೆಯೊಡೆಯನಿಗೆ ಎಚ್ಚರಿಸುತ್ತದೆ. ಆತ ಪಕ್ಕದ ಮನೆಯವರಿಗೂ ಆತನ ಮನೆಯ ವ್ಯಾಪ್ತಿಯ ಪೋಲೀಸ್ ಠಾಣೆಗೂ ತಿಳಿಸುತ್ತಾನೆ. ಪೋಲಿಸರು ಬಂದು ಕಳ್ಳನನ್ನು ಬಂಧಿಸುತ್ತಾರೆ. ಇದು ಕೂಡ ನಿಜ ಘಟನೆಯೇ.

ಚತುರಮನೆಯ ಕೇಂದ್ರ ಸ್ಥಾನದಲ್ಲಿ ಅಂತರಜಾಲಕ್ಕೆ ಸಂಪರ್ಕಗೊಂಡ ಒಂದು ಚತುರವಾಣಿ (smartphone) ಇರುತ್ತದೆ. ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಅಥವಾ ಗಣಕವೂ ಆಗಬಹುದು. ಸ್ಮಾರ್ಟ್‌ಫೋನ್ ಆದರೆ ಕೈಯಲ್ಲೆ ಇರುತ್ತದೆ. ನೀವು ರಸ್ತೆಯಲ್ಲಿದ್ದರೂ ಬಳಸಬಹುದು. ಮನೆಯಲ್ಲಿರುವ ಎಲ್ಲ ವಸ್ತುಗಳು ಅದರ ನಿಯಂತ್ರಣದಲ್ಲಿರುತ್ತವೆ. ಗೂಗ್ಲ್ ಹೋಂ, ಅಮೆಝಾನ್ ಅಲೆಕ್ಸಾ ಮಾದರಿಯ ತಂತ್ರಾಂಶಗಳ ಬಳಕೆ ಮಾಡಲಾಗುತ್ತದೆ. ನೀವು ಒಂದು ಕೋಣೆಯೊಳಗೆ ಪ್ರವೇಶ ಮಾಡಿದಾಗ ಅಲ್ಲಿಯ ದೀಪ ಉರಿಯುವುದು, ಹೊರಗೆ ಬಂದಾಗ ಅದು ಆರಿ ಹೋಗುವುದು, ಮಾಳಿಗೆಗೆ ಹೋಗುವ ಮೆಟ್ಟಿಲುಗಳಿಗೂ ಹೀಗೆಯೇ, ದೀಪಗಳನ್ನು ಆರಿಸುವುದು, ಉರಿಸುವುದು, ಸಂಗೀತ ನುಡಿಸುವುದು, ಇತ್ಯಾದಿಗಳನ್ನೆಲ್ಲ ಧ್ವನಿಯಲ್ಲೇ ಅಪ್ಪಣೆ ನೀಡಿ ಮಾಡಿಸಿಕೊಳ್ಳಬಹುದು. ಉದಾಹರಣೆಗೆ “ಅಲೆಕ್ಸಾ, ಪ್ಲೇ ಧರಣಿ ಮಂಡಲ ಮಧ್ಯದೊಳಗೆ” ಎಂದು ಹೇಳಿದರೆ ತಬ್ಬಲಿಯು ನೀನಾದೆ ಮಗನೆ ಸಿನಿಮಾಕ್ಕಾಗಿ ಪಿ.ಬಿ. ಶ್ರೀನಿವಾಸ್, ಬಿ.ಕೆ. ಸುಮಿತ್ರ ಮತ್ತು ವಿದ್ಯಾರಾಣಿ ಹಾಡಿದ ಹಾಡನ್ನು ಅದು ಪ್ಲೇ ಮಾಡುತ್ತದೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ವೆಂಕಟೇಶ ಸುಪ್ರಭಾತ ಬೇಕಿದ್ದರೆ ಹಾಗೆಂದು ಆಯ್ಕೆ ಮಾಡಿಟ್ಟುಕೊಳ್ಳಬಹುದು. ಪ್ರತಿದಿನ ಸಾಯಂಕಾಲ 5:00 ಗಂಟೆಗೆ ದೀಪ ಹಚ್ಚಬೇಕು ಎಂದು ಆಯ್ಕೆ ಮಾಡಿಟ್ಟುಕೊಳ್ಳಬಹುದು.

ಈ ಎಲ್ಲ ಆಯ್ಕೆಗಳನ್ನು ಬಳಸಲು ನೀವು ಗೂಗ್ಲ್ ಹೋಂ ಅಥವಾ ಅಮೆಜಾನ್ ಅಲೆಕ್ಸ ಬಳಸಬೇಕು. ಸಂಗೀತಕ್ಕಾಗಿ ಸ್ಪಾಟಿಫೈಗೆ ಚಂದಾದಾರರಾದರೆ ಉತ್ತಮ. ಅಂತರಜಾಲದಲ್ಲಿ ಇರುವ ಹಲವಾರು ಸೇವೆ, ಸಂಗೀತ, ಪುಸ್ತಕ ಮಳಿಗೆಗಳಿಗೆ ಚಂದಾದಾರರಾದರೆ ಉತ್ತಮ. ಆಗ ಎಲ್ಲವನ್ನು ಧ್ವನಿಯ ಮೂಲಕವೇ ಪಡೆದುಕೊಳ್ಳಬಹುದು. ಅದಕ್ಕಾಗಿ ನಿಮ್ಮ ಮನೆಯ ಟಿವಿ ಕೂಡ ಸ್ಮಾರ್ಟ್‌ಟಿವಿ ಆಗಿರಬೇಕು. ಅದೂ ಅಂತರಜಾಲಕ್ಕೆ ಸಂಪರ್ಕ ಹೊಂದಿರಬೇಕು.

ಮನೆಯ ಕಿಟಿಕಿ, ಮುಖ್ಯ ಬಾಗಿಲು, ಕಾಂಪೌಂಡ್ ಗೇಟುಗಳನ್ನೂ ವಸ್ತುಗಳ ಅಂತರಜಾಲಕ್ಕೆ ಸೇರಿಸಬಹುದು. ಕಾರಿನಲ್ಲಿ ಮನೆಗೆ ಬರುವಾಗ, ಮನೆ ಹತ್ತಿರ ಬರುತ್ತಿದ್ದಂತೆ ಸ್ಮಾರ್ಟ್‌ಫೋನ್ ಮೂಲಕ ಕಾಂಪೌಂಡ್ ಗೇಟು ತೆರೆಯಬಹುದು. ಕಾರು ಒಳ ಹೋಗುತ್ತಿದ್ದಂತೆ ಅದನ್ನು ಮುಚ್ಚಬಹುದು. ನಾಯಿಯ ಗೂಡಿನ ಗೇಟನ್ನು ಬೇಕಿದ್ದರೆ ನಿಯಮಿತ ಸಮಯಕ್ಕೆ ತೆರೆಯುವುದು ಮಾಡಬಹುದು.

ಒಟ್ಟಿನಲ್ಲಿ ಎಲ್ಲವೂ ಬುದ್ಧಿವಂತ ಸಾಧನಗಳಾದರೆ ಮನೆಯೇ ಬುದ್ಧಿವಂತ ಆಗುತ್ತದೆ!

–ಡಾ| ಯು.ಬಿ. ಪವನಜ

gadgetloka @ gmail . com

The post ಚತುರ ಮನೆ first appeared on Vishva Kannada.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32
ಕಡಿಮೆ ಬೆಲೆಯ ಇನ್ನೊಂದು ಫೋನ್

ಸ್ಯಾಮ್‌ಸಂಗ್‌ ಮೊಬೈಲ್ ಫೋನ್‌ಗಳನ್ನು ಹಲವು ಶ್ರೇಣಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮೇಲ್ದರ್ಜೆಯ ಎಸ್ ಶ್ರೇಣಿ, ಸುಂದರ ವಿನ್ಯಾಸಕ್ಕೆ ಹೆಸರಾದ ಎ ಶ್ರೇಣಿ, ಅಂತರಜಾಲ ಮಳಿಗೆಗಳ ಮೂಲಕ ಮಾತ್ರವೇ ದೊರೆಯುವ ಎಂ ಶ್ರೇಣಿ, ಹೀಗೆ ಇವೆ. ಭಾರತದಲ್ಲಿ ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 (Samsung Galaxy M32) ಫೋನ್.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 2 ಗಿಗಾಹರ್ಟ್ಸ್ ಪ್ರೋಸೆಸರ್ (Mediatek Helio G80)

ಗ್ರಾಫಿಕ್ಸ್ ಪ್ರೋಸೆಸರ್

Mali-G52

ಮೆಮೊರಿ

4 + 64 ಗಿಗಾಬೈಟ್

6 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (ಪ್ರತ್ಯೇಕ)

ಪರದೆ

6.4 ಇಂಚು ಗಾತ್ರ, 1080 x 2400 ಪಿಕ್ಸೆಲ್ ರೆಸೊಲೂಶನ್, ಸೂಪರ್ ಅಮೋಲೆಡ್

ಕ್ಯಾಮೆರ

64+8+2+2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

20 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

6000 mAh

ಗಾತ್ರ

159.3 x 74.0 x 9.3 ಮಿ.ಮೀ.

ತೂಕ

196 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 11

ಬೆಲೆ

₹14,999 (4+64), ₹ 16,999 (6+128)

ರಚನೆ ಮತ್ತು ವಿನ್ಯಾಸ

ಎಂ 32 ಫೋನಿನ ರಚನೆ ಮತ್ತು ವಿನ್ಯಾಸ ಇತ್ತೀಚೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆ ತೃಪ್ತಿದಾಯಕವಾಗಿದೆ. ನೀಲಿ, ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ನಯವಾಗಿದೆ. ಆದರೆ ಗೀರುಗೀರುಗಳ ವಿನ್ಯಾಸದಿಂದ ಕೂಡಿದೆ. ಈ ವಿನಯಾಸವು ಬೆಳಕಿಗೆ ಸ್ವಲ್ಪ ಓರೆಯಾಗಿ ಹಿಡಿದಾಗ ಥಳಥಳ ಹೊಳೆದು ಒಂದು ರಿತಿಯಲ್ಲಿ ನೋಡಲು ಆಪ್ಯಾಯಮಾನವಾಗಿದೆ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು  ಒಂದು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ  ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಅವುಗಳ ಕೆಳಗಡೆ ಫ್ಲಾಶ್ ಇದೆ. ಆನ್ ಆಫ್ ಬಟನ್ ಬೆರಳಚ್ಚು ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ. ಎಂ12 ರಲ್ಲೂ ಇದೇ ರೀತಿ ಇತ್ತು. ಆದರೆ ಅದರಲ್ಲಿ ಬೆರಳನ್ನು ದಾಖಲಿಸಲು ಮಾತ್ರ ಸ್ವಲ್ಪ ಕಷ್ಟಪಡಬೇಕಿತ್ತು. ಈ ಎಂ32 ರಲ್ಲಿ ಆ ತೊಂದರೆಯನ್ನು ಪರಿಹರಿಸಿದ್ದಾರೆ. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಸರಿಯಾಗಿ ಕೆಲಸ ಮಾಡುತ್ತದೆ. 6000 mAh ಬ್ಯಾಟರಿ ಇದೆ. ಆದರೆ ಎಂ12ಕ್ಕೆ ಹೋಲಿಸಿದರೆ ತೂಕ ಕಡಿಮೆ ಇದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ ಎನ್ನಬಹುದು.

[ngg src=”galleries” ids=”31″ display=”basic_imagebrowser”]ಕೆಲಸದ ವೇಗ

ಇದರಲ್ಲಿರುವುದು ಮೀಡಿಯಾಟೆಕ್ ಪ್ರೋಸೆಸರ್. ಈ ಪ್ರೋಸೆಸರ್ ಅನ್ನು ಸಾಮಾನ್ಯವಾಗಿ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಲಸಲಾಗುತ್ತದೆ. ಸ್ಯಾಮ್‌ಸಂಗ್‌ನವರು ಸ್ನಾಪ್‌ಡ್ರಾಗನ್ ಅಥವಾ ಅವರದೇ ಆದ ಎಕ್ಸಿನೋಸ್ ಪ್ರೋಸೆಸರ್ ಬಳಸಬಹುದಿತ್ತು. ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ ಕೇವಲ 1,335 ಇದೆ. ಅಂದರೆ ಇದು ತುಂಬ ವೇಗದ ಫೋನ್ ಅಲ್ಲ ಎನ್ನಬಹುದು. ದಿನನಿತ್ಯದ ಕೆಲಸಗಳನ್ನು ಮಾಡುವಾಗ ಇದು ಕಡಿಮೆ ವೇಗದ ಫೋನ್ ಅನ್ನಿಸುವುದಿಲ್ಲ. ಹಲವು ಆಟಗಳನ್ನೂ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಆಡಬಹುದು. ಕೆಲವು ಮೂರು ಆಯಾಮದ ಆಟಗಳನ್ನೂ ಆಡಬಹುದು. ಆಸ್ಫಾಲ್ಟ್ 9 ಆಟವನ್ನು ಆಡಿ ನೋಡಿದೆ. ವೇಗ ಪರವಾಗಿಲ್ಲ ಎಂದು ಅನ್ನಿಸಿತು. ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.

ಕ್ಯಾಮೆರ

ಕ್ಯಾಮರೆದ ವಿಷಯಕ್ಕೆ ಬಂದರೆ ಇದು ಎಂ12 ಕ್ಕಿಂತ ಸ್ವಲ್ಪ ಸುಧಾರಿಸಿದೆ ಎನ್ನಬಹುದು.  ಇದರಲ್ಲೂ ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. ಆದರೆ ಅವುಗಳ ರೆಸೊಲೂಶನ್ ಸ್ವಲ್ಪ ಜಾಸ್ತಿ ಇದೆ. 64 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 8 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವ ಮತ್ತು ಅತಿ ಹತ್ತಿರದ ವಸ್ತುಗಳನ್ನು ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ಗಳ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ನೀಡುವ ಹಣಕ್ಕೆ ಹೋಲಿಸಿದರೆ ಚೆನ್ನಾಗಿದೆ ಎನ್ನಬಹುದು. ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಿದರೆ ವಿಡಿಯೋವೂ ಅಲುಗಾಡುತ್ತದೆ. ಸ್ವಂತೀ ಫಲಿತಾಂಶ ಪರವಾಗಿಲ್ಲ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಏನೋ ಇದೆ. ಆದರೆ ಅದರಲ್ಲಿ ಎಲ್ಲ ಆಯ್ಕೆಗಳಿಲ್ಲ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಉತ್ತಮ ಫೋಟೋಗ್ರಾಫರುಗಳು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ವಿಧಾನದಲ್ಲಿ ಫೋಟೋ ತೆಗೆಯಲು ಸಾಧ್ಯವಿದೆಯೇ ಎಂದು. ಫೋನ್ ತಯಾರಕರು ನೀಡಿದ ಕಿರುತಂತ್ರಾಂಶದಲ್ಲಿ ಆ ಸೌಲಭ್ಯವಿಲ್ಲದಿದ್ದರೂ Camera2API ಮುಕ್ತವಾಗಿದ್ದರೆ ಇತರೆ ಕೆಲವು ಕಿರುತಂತ್ರಾಂಶಗಳನ್ನು ಹಾಕಿಕೊಂಡು ಸಂಪೂರ್ಣ ಮ್ಯಾನ್ಯುವಲ್ ಮೋಡ್‌ನಲ್ಲಿ ಉತ್ತಮ ಫೋಟೋ ತೆಗೆಯಬಹುದು. ಈ ಫೋನಿನಲ್ಲಿ ಅದು ಮುಕ್ತವಾಗಿದೆ. ಅಂದರೆ ಬೇರೆ ಕ್ಯಾಮೆರ ಕಿರುತಂತ್ರಾಂಶಗಳನ್ನು (ಉದಾ – Open Camera)  ಹಾಕಿಕೊಂಡು ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಇನ್ನಷ್ಟು ಉತ್ತಮ ಫೋಟೋ ತೆಗೆಯಲು ಸಾಧ್ಯವಿದೆ. ಜೇಡರ ಬಲೆಯ ಫೋಟೋವನ್ನು ಮ್ಯಾನ್ಯುವಲ್ ಮೋಡ್‌ನಲ್ಲಿ ಫೋಕಸ್ ಮಾಡಿ ತೆಗೆಯಲು ಈ ಫೋನಿನಲ್ಲಿ ಸಾಧ್ಯವಿದೆ.

[ngg src=”galleries” ids=”32″ display=”basic_imagebrowser”]

ಆಡಿಯೋ ವಿಡಿಯೋ

ಎಂ12 ರ ಆಡಿಯೋಕ್ಕೆ ಹೋಲಿಸಿದರೆ ಇದರ ಆಡಿಯೋ ತಕ್ಕ ಮಟ್ಟಿಗೆ ಸುಧಾರಿಸಿದೆ. ಆಡಿಯೋ ಇಂಜಿನ್ ತಕ್ಕ ಮಟ್ಟಿಗೆ ಇದೆ ಎನ್ನಬಹುದು. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ತೃಪ್ತಿ ನೀಡಬಹುದಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಆಡಿಯೋ ವಿಭಾಗಕ್ಕೆ ಪಾಸ್ ಮಾರ್ಕು ನೀಡಬಹುದು. ಅಮೋಲೆಡ್ ಪರದೆಯ ಗುಣಮಟ್ಟ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೋ ಚೆನ್ನಾಗಿ ಪ್ಲೇ ಆಗುತ್ತದೆ. 4k ವಿಡಿಯೋ ಕೂಡ ಪ್ಲೇ ಆಗುತ್ತದೆ. ಎಫ್‌ಎಂ ರೇಡಿಯೋ ನೀಡಿದ್ದಾರೆ. ಶಕ್ತಿಶಾಲಿಯಾದ ಸ್ಟೇಶನ್‌ಗಳು ಚೆನ್ನಾಗಿ ಕೇಳುತ್ತವೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು. ಆಡಿಯೋ ವಿಡಿಯೋ ವಿಭಾಗದಲ್ಲಿ ಇದಕ್ಕೆ ಪಾಸ್ ಮಾರ್ಕು ನೀಡಬಹುದು.

ಇತರೆ

ಇದರ ಬೆರಳಚ್ಚು ಸ್ಕ್ಯಾನರ್ ಪಕ್ಕದಲ್ಲಿರುವ ಆನ್/ಆಪ್ ಸ್ವಿಚ್‌ನಲ್ಲೇ ಇದೆ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಎರಡೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತವೆ. ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.

ಶಕ್ತಿಶಾಲಿಯಾದ ಬ್ಯಾಟರಿ ಇದೆ. ಅದರ ಬಾಳಿಕೆ ಚೆನ್ನಾಗಿದೆ.

ತೀರ್ಪು

ಈ ಬೆಲೆಗೆ ಇದು ಉತ್ತಮ ಫೋನ್ ಎನ್ನಬಹುದು.

–ಡಾ| ಯು.ಬಿ. ಪವನಜ

gadgetloka @ gmail . com

The post ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32 first appeared on Vishva Kannada.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 52
ಒಂದು ಸುಂದರ ಫೋನ್

ಸ್ಯಾಮ್‌ಸಂಗ್‌ನವರು ಹಲವು ಶ್ರೇಣಿಗಳಲ್ಲಿ ಫೋನ್‌ಗಳನ್ನು ನಿರಂತರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಕೆಲವೊಮ್ಮೆ ಒಂದು ಫೋನಿಗೂ ಇನ್ನೊಂದಕ್ಕೂ ಅದರ ಗುಣವೈಶಿಷ್ಟ್ಯದಲ್ಲಿ ಸ್ವಲ್ಪವೇ ವ್ಯತ್ಯಾಸ ಇರುತ್ತದೆ. ಕೊಳ್ಳುವವರಿಗೂ ಈ ರೀತಿ ಫೋನ್‌ಗಳ ಸಾಗರದಲ್ಲಿ ಬೇಕಾದುದನ್ನು ಆಯ್ಕೆ ಮಾಡುವುದು ಕೆಲವರಿಗೆ ಕಷ್ಟವಾಗುತ್ತದೆ. ಸ್ಯಾಮ್‌ಸಂಗ್‌ನವ ಎ ಶ್ರೇಣಿಯ ಫೋನ್‌ಗಳು ಸುಂದರ ವಿನ್ಯಾಸಕ್ಕೆ ಹೆಸರಾಗಿವೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಂತಹ ಒಂದು ಪೋನ್. ಅದುವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ52 (Samsung Galaxy A52).

ಗುಣವೈಶಿಷ್ಟ್ಯಗಳು

ಪ್ರೋಸೆಸರ್

2 x 2.32 + 6 x 1.8 ಗಿಗಾಹರ್ಟ್ಸ್ ಪ್ರೋಸೆಸರ್ (Qualcomm Snapdragon 732G)

ಗ್ರಾಫಿಕ್ಸ್ ಪ್ರೋಸೆಸರ್

Adreno-618

ಮೆಮೊರಿ

6 + 128 ಗಿಗಾಬೈಟ್

8 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (1 ಸಿಮ್ + ಮೈಕ್ರೊಎಸ್‌ಡಿ)

ಪರದೆ

6.47 ಇಂಚು ಗಾತ್ರ, 1080 x 2400 ಪಿಕ್ಸೆಲ್ ರೆಸೊಲೂಶನ್, ಸೂಪರ್ ಅಮೋಲೆಡ್

ಕ್ಯಾಮೆರ

64+12+5+5 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

32 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ (ಹೈಬ್ರಿಡ್)

ಬ್ಯಾಟರಿ

4500 mAh

ಗಾತ್ರ

159.9 x 75.1 x 8.4 ಮಿ.ಮೀ.

ತೂಕ

189 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ (ಪರದೆಯಲ್ಲಿ)

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇದೆ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 11

ಬೆಲೆ

₹26,499 (6+128), ₹ 27,999 (8+128)

ರಚನೆ ಮತ್ತು ವಿನ್ಯಾಸ

ಸ್ಯಾಮ್‌ಸಂಗ್‌ನವರ ಎ ಶ್ರೇಣಿಯ ಫೋನ್‌ಗಳು ಸುಂದರ ವಿನ್ಯಾಸಕ್ಕೆ ಹೆಸರಾಗಿವೆ. ಈ ಫೋನ್ ಕೂಡ ಅಷ್ಟೆ. ನೋಡಲು ಸುಂದರವಾಗಿದೆ. ಕೈಯಲ್ಲಿ ಹಿಡಿಯುವ ಅನುಭವ ಉತ್ತಮವಾಗಿದೆ. ದೇಹ ಪ್ಲಾಸ್ಟಿಕ್ಕಿನದ್ದಾಗಿದೆ. ಆದರೂ ಗಟ್ಟಿಯಾಗಿದೆ. ನೀಲಿ, ಕಪ್ಪು, ಬಿಳಿ ಮತ್ತು ನೇರಳೆ  ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ದೊರಗಾಗಿದೆ (matt finish). ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಅಥವಾ ಒಂದು ನ್ಯಾನೋ ಸಿಮ್ ಮತ್ತು  ಒಂದು ಮೆಮೊರಿ ಕಾರ್ಡ್ ಹಾಕಬಹುದು. ಈ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇಗೆ ಒಂದು ಹೆಚ್ಚಿಗೆ ವಾಶರ್ ನೀಡಿದ್ದಾರೆ. ಇದು ಈ ಟ್ರೇಯ ಸಂಧಿಯ ಮೂಲಕ ಫೋನಿನೊಳಗಡೆ ನೀರು ಹೋಗದಂತೆ ತಡೆಯುತ್ತದೆ. ಈ ಫೋನ್ ಒಂದು ಮಟ್ಟಿಗೆ ನೀರನ್ನು ತಡೆಯುತ್ತದೆ (IP67). ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ  ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಎಡಗಡೆಯ ಮೊದಲ ಸಾಲಿನಲ್ಲಿ ಮೂರು ಕ್ಯಾಮರಗಳು ಮತ್ತು ಬಲಗಡೆಯ ಸಾಲಿನಲ್ಲಿ ಒಂದು ಕ್ಯಾಮರ ಮತ್ತು ಫ್ಲಾಶ್ ಇವೆ. ಈ ಕ್ಯಾಮರಗಳು ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಎತ್ತರದಲ್ಲಿದೆ. ಹಿಂದುಗಡೆಗೆ ಒಂದು ಕವಚ ಹಾಕಿಕೊಂಡರೆ ಉತ್ತಮ. ಸ್ಯಾಮ್‌ಸಂಗ್‌ನವರು ಯಾವುದೇ ಕವಚ ನೀಡಿಲ್ಲ. ನೀವು ಮಾರುಕಟ್ಟೆಯಿಂದ ಕೊಂಡುಕೊಳ್ಳಬೇಕು. ಬೆರಳಚ್ಚು ಸ್ಕ್ಯಾನರ್ ಪರದೆಯಲ್ಲೇ ಕೆಳಭಾಗದಲ್ಲಿದೆ. ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಎಲ್ಲ ಸಲ ಸರಿಯಾಗಿ ಕೆಲಸ ಮಾಡುವುದಿಲ್ಲ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸದ ಬಗ್ಗೆ ಹೇಳುವುದಾದರೆ ಒಂದು ಸುಂದರ ಫೋನ್ ಎನ್ನಬಹುದು.

Samsung Galaxy A52 Phone

ಕೆಲಸದ ವೇಗ

ಇದರಲ್ಲಿರುವುದು ಸ್ನ್ಯಾಪ್‌ಡ್ರಾಗನ್ ಪ್ರೋಸೆಸರ್. ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ 1,378 ಇದೆ. ಅಂದರೆ ಇದು ಅತಿ  ವೇಗದ್ದು ಎನ್ನುವಂತಿಲ್ಲ. ಕಡಿಮೆ ಮತ್ತು ಮಧ್ಯಮ ಶಕ್ತಿಯನ್ನು ಬೇಡುವ ಹಲವು ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದು. ಮೂರು ಆಯಾಮದ ಆಟಗಳನ್ನೂ ಒಂದು ಮಟ್ಟಿಗೆ ಆಡಬಹುದು. ಆದರೆ ಈ ಫೋನ್ ಅತಿ ವೇಗದ್ದಲ್ಲ. ಹಾಗೆಂದು ಹೇಳಿ ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.

ಕ್ಯಾಮೆರ

ಈ ಫೋನಿನಲ್ಲಿ ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. 64 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 5 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 12 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವ ಮತ್ತು ಅತಿ ಹತ್ತಿರದ ವಸ್ತುಗಳನ್ನು ಚಿತ್ರೀಕರಿಸಲು (ಮ್ಯಾಕ್ರೊ) 5 ಮೆಗಾಪಿಕ್ಸೆಲ್‌ಗಳ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ಚೆನ್ನಾಗಿದೆ. ಕಡಿಮೆ ಬೆಳಕಿನಲ್ಲಿ ಚಿತ್ರೀಕರಣಕ್ಕೆಂದೇ ಇರುವ ನೈಟ್ ಮೋಡ್‌ ಇದೆ. ಆದರೆ ಈ ಮೋಡ್ ಅಷ್ಟೇನೂ ತೃಪ್ತಿ ನೀಡಲಿಲ್ಲ. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇದೆ. ಅಂದರೆ ಫೋಟೋ ತೆಗೆಯುವಾಗ ಮತ್ತು ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲ್ಪಸ್ವಲ್ಪ ಅಲುಗಾಡಿದರೂ ಫಲಿತಾಂಶ ಸರಿಯಾಗಿ ಬರುತ್ತದೆ. ಸ್ವಂತೀಗೆ 32 ಮೆಗಾಪಿಕ್ಸೆಲ್ ಕ್ಯಾಮೆರ ಇರುವುದರಿಂದ ಫಲಿತಾಂಶ ಚೆನ್ನಾಗಿದೆ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಇದೆ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಕೂಡ ಇದೆ. ಉತ್ತಮ ಫೋಟೋಗ್ರಾಫರುಗಳು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ವಿಧಾನದಲ್ಲಿ ಫೋಟೋ ತೆಗೆಯಲು ಸಾಧ್ಯವಿದೆಯೇ ಎಂದು. ಇದರಲ್ಲಿ ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಇನ್ನಷ್ಟು ಉತ್ತಮ ಫೋಟೋ ತೆಗೆಯಲು ಸಾಧ್ಯವಿದೆ. ಅತಿ ನಿಧಾನವಾಗಿ ವಿಡಿಯೋ ಮಾಡುವ ಸೌಲಭ್ಯವಿದೆ. ಇದನ್ನು ಬಳಸಿ ಕೆಲವು ಸೃಜನಶೀಲ ವಿಡಿಯೋ ಮಾಡಬಹುದು. ಉದಾಹರಣೆಗೆ ಕಾರಂಜಿಯಿಂದ ಚಿಮ್ಮುವ ನೀರು.

Samsung Galaxy A52 camera samples

https://www.instagram.com/p/CNufJOigkWZ/

ಸೂಪರ್ ಸ್ಲೋ ಮೋಶನ್ ವಿಡಿಯೋ ಉದಾಹರಣೆ

ಆಡಿಯೋ ವಿಡಿಯೋ

ಇದರ ಆಡಿಯೋ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಸುಮಾರಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಸ್ಟೀರಿಯೋ ಸ್ಪೀಕರುಗಳನ್ನು ನೀಡಿದ್ದಾರೆ. ಆದರೂ ಉತ್ತಮ ಸಂಗೀತ ಆಲಿಸಬೇಕಿದ್ದರೆ ಉತ್ತಮ ಹೆಡ್‌ಫೋನ್ ಬಳಸುವುದೇ ದಾರಿ. ಆಡಿಯೋ ವಿಭಾಗ ನನಗೆ ಪೂರ್ತಿ ತೃಪ್ತಿ ನೀಡಿಲ್ಲ. ಸೂಪರ್ ಅಮೋಲೆಡ್ ಪರದೆಯ ಗುಣಮಟ್ಟ ಮೇಲ್ದರ್ಜೆಯದ್ದಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೋ ಕೂಡ ಪ್ಲೇ ಆಗುತ್ತವೆ. ವಿಡಿಯೋ ವೀಕ್ಷಣೆಯ ಅನುಭವ ನಿಜಕ್ಕೂ ಚೆನ್ನಾಗಿದೆ. ಉತ್ತಮ ಗ್ರಾಫಿಕ್ಸ್ ಇರುವ  ಆಟಗಳನ್ನು ಆಡುವಾಗ ಇದರ ಪರದೆಯ ಗುಣಮಟ್ಟ ವೇದ್ಯವಾಗುತ್ತದೆ. ಎಫ್‌ಎಂ ರೇಡಿಯೋ ನೀಡಿದ್ದಾರೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು.

ಬ್ಯಾಟರಿ

ಇದರಲ್ಲಿರುವುದು 4500mAh ಶಕ್ತಿಯ ಬ್ಯಾಟರಿ. ಒಂದು 4k ವಿಡಿಯೋವನ್ನು ನಿರಂತರ ಪ್ಲೇ ಮಾಡಿದಾಗ ಸುಮಾರು 12 ಗಂಟೆ ಕೆಲಸ ಮಾಡಿತು. ಈ ಫೋನಿನಲ್ಲಿ ವೇಗವಾಗಿ ಚಾರ್ಜ್ ಮಾಡುವ ಸವಲತ್ತು ಇದೆ. ಇದು ಸುಮಾರು 90 ನಿಮಿಷದಲ್ಲಿ 0 ಯಿಂದ 100% ಚಾರ್ಜ್ ಆಗುತ್ತದೆ. ಈ ವೇಗವಾಗಿ ಚರ್ಜ್ ಮಾಡುವ ಸವಲತ್ತು ಫೋನಿನಲ್ಲಿರುವುದರಿಂದ ಚಾರ್ಜ್ ಆಗುವಾಗ ಫೋನ್ ಸ್ವಲ್ಪ ಬಿಸಿಯಾಗುತ್ತದೆ. ಆದುದರಿಂದ ಕೆಲವರಿಗೆ ಇರುವ ಅಭ್ಯಾಸದಂತೆ ಚಾರ್ಜ್ ಮಾಡುತ್ತಿರುವಾಗ ಹೆಚ್ಚು ಶಕ್ತಿಯನ್ನು ಬೇಡುವ ಯಾವುದೇ ಕೆಲಸ (ಆಟ ಆಡುವುದು) ಮಾಡದಿದ್ದರೆ ಉತ್ತಮ. ಫೋನ್ ಜೊತೆ ಕೊಟ್ಟಿರುವುದು 15 ವಾಟ್ ಚಾರ್ಜರ್. 25 ವಾಟ್ ಚಾರ್ಜರ್ ಕೊಟ್ಟಿದ್ದರೆ ಉತ್ತಮವಿತ್ತು.

ಇತರೆ

ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.

ತೀರ್ಪು

ಈ ಬೆಲೆಗೆ ಇದು ಒಂದು ಮಟ್ಟಿಗೆ ಉತ್ತಮ ಫೋನ್ ಎನ್ನಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

The post ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 52 first appeared on Vishva Kannada.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12
ನೀಡುವ ಬೆಲೆಗೆ ಉತ್ತಮ ಫೋನ್

ಮೊಬೈಲ್ ಫೋನ್‌ಗಳ ಕ್ಷೇತ್ರದಲ್ಲಿ ಸ್ಯಾಮ್‌ಸಂಗ್‌ಗೆ ತನ್ನದೇ ಸ್ಥಾನವಿದೆ. ಭಾರತದಲ್ಲಿ ಅದು ಯಾವಾಗಲು ಮೊದಲ 5 ಸ್ಥಾನಗಳಲ್ಲಿ ಒಂದಾಗಿರುತ್ತದೆ. ಸುಮಾರು ಸಮಯ ಮೊದಲನೆಯ ಸ್ಥಾನದಲ್ಲಿತ್ತು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಸ್ಮಾಸಂಗ್‌ನವರು ಹಲವು ಬೆಲೆಗಳಲ್ಲಿ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ12 (Samsung Galaxy M12) ಫೋನ್.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 2 ಗಿಗಾಹರ್ಟ್ಸ್ ಪ್ರೋಸೆಸರ್ (Exynos 850)

ಗ್ರಾಫಿಕ್ಸ್ ಪ್ರೋಸೆಸರ್

Mali-G72

ಮೆಮೊರಿ

4 + 64 ಗಿಗಾಬೈಟ್

6 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (ಪ್ರತ್ಯೇಕ)

ಪರದೆ

6.5 ಇಂಚು ಗಾತ್ರ, 720 x 1600 ಪಿಕ್ಸೆಲ್ ರೆಸೊಲೂಶನ್

ಕ್ಯಾಮೆರ

48+5+2+2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

8 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

6000 mAh

ಗಾತ್ರ

164.0 x 75.9 x 9.7 ಮಿ.ಮೀ.

ತೂಕ

221 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 11

ಬೆಲೆ

₹10,999 (4+64), ₹ 13,499 (6+128)

ರಚನೆ ಮತ್ತು ವಿನ್ಯಾಸ

ಇದರ ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ. ನೀಲಿ, ಕಪ್ಪು ಬಿಳಿ  ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಗೀರುಗೀರುಗಳಿಂದ ಕೂಡಿದ್ದು ದೊರಗಾಗಿದೆ. ಇದು ಸ್ವಲ್ಪ ವಿಶೇಷ ಎನ್ನಬಹುದಾದ ವಿನ್ಯಾಸ. ಬಹುತೇಕ ಫೋನ್‌ಗಳಲ್ಲಿ ಹಿಂಭಾಗ ಅತಿ ನಯವಾಗಿರುತ್ತದೆ ಅಥವಾ ಸ್ವಲ್ಪ ದೊರಗಾಗಿರುತ್ತದೆ. ಆದರೆ ಇದು ಗೀರುಗಳಿಂದ ಕೂಡಿದೆ. ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು  ಒಂದು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ  ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಅವುಗಳ ಕೆಳಗಡೆ ಫ್ಲಾಶ್ ಇದೆ. ಆನ್ ಆಫ್ ಬಟನ್ ಬೆರಳಚ್ಚು ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ. ಇದರಲ್ಲಿ ಬೆರಳನ್ನು ದಾಖಲಿಸಲು ಮಾತ್ರ ಸ್ವಲ್ಪ ಕಷ್ಟಪಡಬೇಕು. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಸರಿಯಾಗಿ ಕೆಲಸ ಮಾಡುತ್ತದೆ. 6000 mAh ಬ್ಯಾಟರಿ ಇರುವುದರಿಂದ ಸ್ವಲ್ಪ ತೂಕ ಇದೆ. ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ ಎನ್ನಬಹುದು.

[ngg src=”galleries” ids=”28″ display=”basic_slideshow”]

ಕೆಲಸದ ವೇಗ

ಇದರಲ್ಲಿರುವುದು ಸ್ಯಾಮ್‌ಸಂಗ್‌ನವರದೇ ಆದ ಎಕ್ಸಿನೋಸ್ ಪ್ರೋಸೆಸರ್. ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ ಕೇವಲ 1,013 ಇದೆ. ಅಂದರೆ ಇದು ಕಡಿಮೆ ವೇಗದ್ದು ಎನ್ನಬಹುದು. ಕಡಿಮೆ ಮತ್ತು ಮಧ್ಯಮ ಶಕ್ತಿಯನ್ನು ಬೇಡುವ ಹಲವು ಆಟಗಳನ್ನು ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಆಡಬಹುದು. ಕೆಲವು ಮೂರು ಆಯಾಮದ ಆಟಗಳನ್ನೂ ಆಡಬಹುದು. ನಿಜಕ್ಕೂ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಆಡಲು ಈ ಫೋನ್ ಅಂತಹ ಉತ್ತಮವಾದುದಲ್ಲ. ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.

ಕ್ಯಾಮೆರ

ಈ ಫೋನಿನಲ್ಲಿ ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. 48 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 5 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವ ಮತ್ತು ಅತಿ ಹತ್ತಿರದ ವಸ್ತುಗಳನ್ನು ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ಗಳ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ಚೆನ್ನಾಗಿದೆ. ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಕಡಿಮೆ ಬೆಲೆಯ ಬಹುತೇಕ ಫೋನ್ ಕ್ಯಾಮೆರಗಳಂತೆ ಇದರ ಕ್ಯಾಮೆರವೂ ಕೆಲವು ಸಂದರ್ಭಗಳಲ್ಲಿ ಫೋಕಸ್ ಮಾಡಲು ಸ್ವಲ್ಪ ಕಷ್ಟಪಡುತ್ತದೆ. ಕಡಿಮೆ ಬೆಳಕಿನಲ್ಲಿ ಚಿತ್ರೀಕರಣಕ್ಕೆಂದೇ ಇರುವ ನೈಟ್ ಮೋಡ್‌ನಲ್ಲಿ ಒಂದು ಮಟ್ಟಿಗೆ ಉತ್ತಮ ಫೋಟೋಗಳು ಬಂದವು. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಬಾರದು. ಸ್ವಂತೀ ಫಲಿತಾಂಶ ಅಂತಹ ಅದ್ಭುತ ಎನ್ನುವಂತಿಲ್ಲ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಏನೋ ಇದೆ. ಆದರೆ ಅದರಲ್ಲಿ ಎಲ್ಲ ಆಯ್ಕೆಗಳಿಲ್ಲ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಉತ್ತಮ ಫೋಟೋಗ್ರಾಫರುಗಳು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ವಿಧಾನದಲ್ಲಿ ಫೋಟೋ ತೆಗೆಯಲು ಸಾಧ್ಯವಿದೆಯೇ ಎಂದು. ಫೋನ್ ತಯಾರಕರು ನೀಡಿದ ಕಿರುತಂತ್ರಾಂಶದಲ್ಲಿ ಆ ಸೌಲಭ್ಯವಿಲ್ಲದಿದ್ದರೂ Camera2API ಮುಕ್ತವಾಗಿದ್ದರೆ ಇತರೆ ಕೆಲವು ಕಿರುತಂತ್ರಾಂಶಗಳನ್ನು ಹಾಕಿಕೊಂಡು ಸಂಪೂರ್ಣ ಮ್ಯಾನ್ಯುವಲ್ ಮೋಡ್‌ನಲ್ಲಿ ಉತ್ತಮ ಫೋಟೋ ತೆಗೆಯಬಹುದು. ಈ ಫೋನಿನಲ್ಲಿ ಅದು ಮುಕ್ತವಾಗಿಲ್ಲ. ಅಂದರೆ ಬೇರೆ ಕ್ಯಾಮೆರ ಕಿರುತಂತ್ರಾಂಶಗಳನ್ನು (ಉದಾ – Open Camera)  ಹಾಕಿಕೊಂಡು ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಇನ್ನಷ್ಟು ಉತ್ತಮ ಫೋಟೋ ತೆಗೆಯಲು ಸಾಧ್ಯವಿಲ್ಲ.

[ngg src=”galleries” ids=”29″ display=”basic_slideshow”]

ಆಡಿಯೋ ವಿಡಿಯೋ

ಮಧ್ಯಮ ಅಥವಾ ಕಡಿಮೆ ಬೆಲೆಯ ಸ್ಯಾಮ್‌ಸಂಗ್ ಫೋನ್‌ಗಳಂತೆ ಇದರ ಆಡಿಯೋ ಇಂಜಿನ್ ಕೂಡ ತಕ್ಕ ಮಟ್ಟಿಗೆ ಇದೆ ಎನ್ನಬಹುದು. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಸುಮಾರಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಆಡಿಯೋ ವಿಭಾಗಕ್ಕೆ ಉತ್ತಮ ಮಾರ್ಕು ನೀಡಲು ಮನಸ್ಸು ಬರುತ್ತಿಲ್ಲ. ಪರದೆಯ ಗುಣಮಟ್ಟ ಮೇಲ್ದರ್ಜೆಯದು ಎನ್ನುವಂತಿಲ್ಲ. ಹೈಡೆಫಿನಿಶನ್ ವಿಡಿಯೋ ಪ್ಲೇ ಏನೋ ಆಗುತ್ತದೆ. ಆದರೆ ತುಂಬ ತೃಪ್ತಿ ನಿಡುವುದಿಲ್ಲ. 4k ವಿಡಿಯೋ ಪ್ಲೇ ಕೂಡ ಅಷ್ಟೆ. ಅತ್ಯುತ್ತಮ ವಿಡಿಯೋ ವೀಕ್ಷಣೆ ನಮಗೆ ಅತೀ ಮುಖ್ಯವಾಗಿದ್ದರೆ ಇದು ನಿಮಗೆ ಪೂರ್ತಿ ತೃಪ್ತಿ ನೋಡಲಾರದು. ಎಫ್‌ಎಂ ರೇಡಿಯೋ ನೀಡಿದ್ದಾರೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು.

ಇತರೆ

ಇದರ ಬೆರಳಚ್ಚು ಸ್ಕ್ಯಾನರ್ ಪಕ್ಕದಲ್ಲಿರುವ ಆನ್/ಆಪ್ ಸ್ವಿಚ್‌ನಲ್ಲೇ ಇದೆ. ಆದರೆ ಅದರ ಕೆಲಸ ತುಂಬ ತೃಪ್ತಿದಾಯಕವಾಗಿಲ್ಲ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಮುಖಚಹರೆ ಪತ್ತೆಹಚ್ಚುವಿಕೆ ತೃಪ್ತಿದಾಯಕವಾಗಿ ಕೆಲಸ ಮಾಡುತ್ತದೆ. ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.

ಶಕ್ತಿಶಾಲಿಯಾದ ಬ್ಯಾಟರಿ ಇದೆ. ಅದರ ಬಾಳಿಕೆ ಚೆನ್ನಾಗಿದೆ.

ತೀರ್ಪು

ಈ ಬೆಲೆಗೆ ಇದು ಒಂದು ಮಟ್ಟಿಗೆ ಉತ್ತಮ ಫೋನ್ ಎನ್ನಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

The post ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 first appeared on Vishva Kannada.

ವಿವೊ ವಿ 20
ಸ್ವಂತೀ ಪ್ರಿಯರಿಗೆ ಮತ್ತೊಂದು ಫೋನ್

ಚೀನಾ ದೇಶದ ವಿವೊ ಕಂಪೆನಿಯ ಫೋನ್‌ಗಳು ಉತ್ತಮ ರಚನೆ, ವಿನ್ಯಾಸ ಮತ್ತು ಉತ್ತಮ ಕ್ಯಾಮೆರಗಳಿಗೆ ಹೆಸರುವಾಸಿಯಾಗಿವೆ. ಇವರು ಮಧ್ಯಮ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವಿವೋದವರ ಫೋನ್ ಕ್ಯಾಮೆರಗಳು ಚೆನ್ನಾಗಿವೆ. ನಿಮಗೆ ಉತ್ತಮ ಕ್ಯಾಮೆರ ಮಾತ್ರವೇ ಮುಖ್ಯವಾಗಿದ್ದಲ್ಲಿ ನೀವು ವಿವೊ ಫೋನ್ ಕೊಳ್ಳಬಹುದು. ಅದರಲ್ಲೂ ನೀವು ಸ್ವಂತೀ ಪ್ರಿಯರಾದರೆ ವಿವೋ ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಈ ಸ್ವಂತೀ ಕೇಂದ್ರಿತ ವಿವೋ ಫೋನ್‌ಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ ವಿವೊ ವಿ 20. ಈ ಸಲ ಅದರ ವಿಮರ್ಶೆ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 ಹೃದಯಗಳ ಪ್ರೋಸೆಸರ್ (Qualcomm Snapdragon 720 G)

ಮೆಮೊರಿ

8 + 128 ಗಿಗಾಬೈಟ್

8 + 256 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (ಪ್ರತ್ಯೇಕ, ಹೈಬ್ರಿಡ್ ಅಲ್ಲ)

ಪರದೆ

6.44 ಇಂಚು ಗಾತ್ರ, 2400 × 1080 ಪಿಕ್ಸೆಲ್ ರೆಸೊಲೂಶನ್, ಅಮೋಲೆಡ್

ಕ್ಯಾಮೆರ

64 + 8 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

44  ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

4000 mAh

ಗಾತ್ರ

161.3 x 74.2 x 7.38 ಮಿ.ಮೀ.

ತೂಕ

172 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ (ಪರದೆಯಲ್ಲೇ)

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇದೆ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 11 + ಫನ್‌ಟಚ್ ಓಎಸ್ 11

ಬೆಲೆ

₹ 24,990 (8+128), 27,990 (8+256)

ರಚನೆ ಮತ್ತು ವಿನ್ಯಾಸ

ಇತರೆ ವೊವೋ ಫೋನ್‌ಗಳಂತೆ ಇದರ ರಚನೆ ಮತ್ತು ವಿನ್ಯಾಸವೂ ಉತ್ತಮವಾಗಿದೆ. ಮೂರು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಹೊಳೆಯುವ ಅಥವಾ ತುಂಬ ನಯವಾದ ಮಾದರಿಯಲ್ಲ. ಹಿಂಭಾಗ ಸಪಾಟಾಗಿದೆ. ಈ ವಿಷಯದಲ್ಲಿ ಇದು ವಿವೊ 17, 19 ಗಳಿಗಿಂತ ಭಿನ್ನ. ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಆನ್/ಆಫ್ ಬಟನ್ ಸ್ವಲ್ಪ ವಿಶಿಷ್ಟವಾಗಿದೆ. ಅದರ ಮೇಲ್ಮೈ ದೊರಗಾಗಿದೆ. ಇದು ಕತ್ತಲಲ್ಲಿ ಫೋನ್ ಅಥವ ಪರದೆ ಆನ್ ಮಾಡಬೇಕಾದಾಗ ಯಾವ ಬಟನ್ ಎಂದು ತಿಳಿಯಲು ಉಪಕಾರಿಯಾಗುತ್ತದೆ. ಆದರೆ ಪ್ಲಾಸ್ಟಿಕ್ ಕವಚ ಹಾಕಿದಾಗ ಇದು ಅನುಭವಕ್ಕೆ ಬರುವುದಿಲ್ಲ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಇದೆ. ಮೇಲ್ಭಾಗದಲ್ಲಿ ಮಧ್ಯದಲ್ಲಿ ಸ್ವಂತೀ (selfie) ಕ್ಯಾಮೆರ ಇದೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಕಾರ್ಡ್ ಮತ್ತು ಒಂದು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಬಳಸಬಹುದು. ಇದು ಅಂಚುರಹಿತ (bezelless) ಫೋನ್. ಹಿಂಭಾಗದಲ್ಲಿ, ಸ್ವಲ್ಪ ಎಡ ಮೇಲ್ಬಾಗದಲ್ಲಿ ಮೂರು ಕ್ಯಾಮೆರ ಮತ್ತು ಫ್ಲಾಶ್ ಇವೆ. ಈ ಕ್ಯಾಮೆರ ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಉಬ್ಬಿದೆ (camera bump). ಪ್ಲಾಸ್ಟಿಕ್ ಕವಚ ಹಾಕಿಕೊಳ್ಳದಿದ್ದರೆ ಕ್ಯಾಮೆರಕ್ಕೆ ಏಟಾಗುವ ಸಾಧ್ಯತೆ ಇದೆ. ಎಂದಿನಂತೆ ಎಲ್ಲ ವಿವೊ ಫೋನ್‌ಗಳಂತೆ ರಚನೆ ಮತ್ತು ವಿನ್ಯಾಸ ಉತ್ತಮವಾಗಿವೆ.

[ngg src=”galleries” ids=”23″ display=”basic_thumbnail” thumbnail_crop=”0″]

ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ಇದರ ಸಂವೇದನೆ ಚೆನ್ನಾಗಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿದೆ. ಅದೂ ಚೆನ್ನಾಗಿಯೇ ಕೆಲಸ ಮಾಡುತ್ತಿದೆ.

ಕೆಲಸದ ವೇಗ

ಕೆಲಸದ ವೇಗ ನೀಡುವ ಬೆಲೆಗೆ ಹೋಲಿಸಿದರೆ ತೃಪ್ತಿದಾಯಕವಾಗಿದೆ. ಇದೇನೂ ಅತಿ ವೇಗದ ಫೋನ್ ಅಲ್ಲ. ಆದರೆ ನೀಡುವ ಬೆಲೆಗೆ ಹೋಲಿಸಿದರೆ ಪರವಾಗಿಲ್ಲ ಎನ್ನಬಹುದು. ಮಧ್ಯಮ ವೇಗವನ್ನು ಬಯಸುವ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಅತಿ ವೇಗವನ್ನು ಬಯಸುವ ಆಟಗಳಿಗೆ ಇದು ಅಷ್ಟು ಸೂಕ್ತವಲ್ಲ. ನಿಮಗೆ ಅತಿ ವೇಗದ ಆಟಗಳನ್ನು ಆಡಬೇಕಾಗಿದ್ದಲ್ಲಿ ಈ ಫೋನ್ ನಿಮಗಲ್ಲ.

ಆಡಿಯೋ ವಿಡಿಯೋ

ಆಡಿಯೋ ಇಂಜಿನ್ ಚೆನ್ನಾಗಿದೆ. ಇದರಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇದೆ. ಪೆಟ್ಟಿಗೆಯಲ್ಲಿ ಒಂದು ಇಯರ್‌ಫೋನ್ ನೀಡಿದ್ದಾರೆ. ಆದರೆ ಈ ಇಯರ್‌ಫೋನ್‌ನ ಧ್ವನಿಯ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ಈ ಒಂದು ವಿಷಯದಲ್ಲಿ ವಿವೋದವರು ಸ್ವಲ್ಪ ಹಿಂದೆ ಇದ್ದಾರೆ. ಇದು ಇಯರ್‌ಫೋನ್, ಇಯರ್‌ಬಡ್ ಅಲ್ಲ. ಅಂದರೆ ಬೇರೆ ಬೇರೆ ಗಾತ್ರದ ಕುಶನ್‌ಗಳನ್ನು ಜೋಡಿಸುವ ಸವಲತ್ತು ಇಲ್ಲ.ಕಿವಿಯಲ್ಲಿ ಸರಿಯಾಗಿ ಕುಳಿತುಕೊಳ್ಳದಿದ್ದರೆ ಉತ್ತಮ ಧ್ವನಿಯ ಅನುಭವ ಆಗುವುದಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ ವಿಡಿಯೋ ವೀಕ್ಷಣೆ ಅನುಭವ ಉತ್ತಮವಾಗಿದೆ. ಸಿನಿಮಾ ಅಥವಾ ಟಿವಿ ವೀಕ್ಷಿಸಲು ಇದು ಉತ್ತಮ ಫೋನ್. ಈ ವಾಕ್ಯಗಳನ್ನು ಬೇರೆ ವಿವೊ ಫೋನ್‌ಗಳ ಬಗ್ಗೆಯೂ ಬರೆದಿದ್ದೆ. ಅವು ಇಲ್ಲೂ ಮುಂದುವರೆದಿವೆ.

ಕ್ಯಾಮೆರ

ಇತರೆ ವಿವೋ ವಿ ಶ್ರೇಣಿಯ ಫೋನ್‌ಗಳಂತೆ ಈ ಫೋನಿನ ಹೆಗ್ಗಳಿಕೆ ಕೂಡ ಇರುವುದು ಇದರ ಕ್ಯಾಮೆರದಲ್ಲಿ. ಇದರಲ್ಲಿ 3 ಪ್ರಾಥಮಿಕ ಕ್ಯಾಮೆರಗಳಿವೆ. ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಈ ಕೃತಕ ಬುದ್ಧಿಮತ್ತೆ ಹಲವು ಸಂದರ್ಭಗಳಲ್ಲಿ ಸ್ವಲ್ಪ ಅಧಿಕಪ್ರಸಂಗ ಕುಡ ಮಾಡುತ್ತದೆ. ನಾನು ಸಾಮಾನ್ಯವಾಗಿ ಅದನ್ನು ಆಫ್ ಮಾಡಿಟ್ಟುರುತ್ತೇನೆ! ಸ್ವಂತೀಗೆ  44 ಮೆಗಾಪಿಕ್ಸೆಲ್‌ಗಳ ಕ್ಯಾಮೆರ ಇದೆ. ವಿವೋದವರ ಇತರೆ ಫೋನ್‌ಗಳಲ್ಲಿರುವಂತೆ ಇದರಲ್ಲೂ ಕ್ಯಾಮೆರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳು ಇವೆ. ಅತಿ ಹತ್ತಿರದ ವಸ್ತುಗಳ ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಈ ಆಯ್ಕೆಯನ್ನು ಬಳಸಿ ಹೂವಿನ ಪರಾಗರೇಣುವಿನ ಫೋಟೋ, ಚಿಕ್ಕ ಜೇಡ, ಇರುವೆ, ಇತ್ಯಾದಿಗಳ ಫೋಟೋ ತೆಗೆಯಬಹುದು. ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ತೆಗೆಯುತ್ತದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ನಾನು ಪ್ರಯತ್ನಿಸಿದಾಗ ಒಂದು ಮಟ್ಟಿಗೆ ತೃಪ್ತಿದಾಯಕವಾದ ಫೋಟೋಗಳು ಮೂಡಿಬಂದವು. ಇದು 4k ವಿಡಿಯೋಗಳನ್ನು ಮಾಡಬಲ್ಲುದು. ಪ್ರಾಥಮಿಕ ಕ್ಯಾಮೆರದಲ್ಲಿ image stabilisation ಇದೆ. ಅಂದರೆ ವಿಡಿಯೋ ಶೂಟಿಂಗ್ ಮಾಡುವಾಗ ಫೋನ್ ಸ್ವಲ್ಪ ಅಲುಗಾಡಿದರೆ ವಿಡಿಯೋದಲ್ಲಿ ಅದು ಮೂಡಿಬರುವುದಿಲ್ಲ. ಆದರೆ ಈ ಸವಲತ್ತು 4k ವಿಡಿಯೋ ಶೂಟಿಂಗ್‌ನಲ್ಲಿ ಇಲ್ಲ. ಈ ಫೋನಿನ ಸ್ವಂತೀ ಕ್ಯಾಮೆರದಲ್ಲೂ 4k ವಿಡಿಯೋ ಮಾಡಬಹುದು. ಸ್ವಂತೀಗೆ ಈ ಸವಲತ್ತು ನೀಡಿರುವುದು ಈ ಫೋನಿನ ಪ್ರಮುಖ ಹೆಗ್ಗಳಿಕೆ. ಎಲ್ಲ ವಿವೊ ಫೋನ್ ಕ್ಯಾಮೆರಗಳಂತೆ ಇದರಲ್ಲೂ ನಿಮ್ ಮುಖವನ್ನು ಸುಂದರ, ಅತಿ ಸುಂದರ ಮಾಡುವ ಆಯ್ಕೆಗಳಿವೆ. ನಾನಂತೂ ಅದನ್ನು ಆಫ್ ಮಾಡಿಯೇ ಫೋಟೋ ತೆಗೆಯುವುದು. ಯಾಕೆಂದರೆ ಅದು ಅಷ್ಟು ಸುಂದರ ಮಾಡುತ್ತದೆ! ಒಟ್ಟಿನಲ್ಲಿ ಸ್ವಂತೀ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಕೊಳ್ಳವ ಆಲೋಚನೆ ಮಾಡಬಹುದು.

[ngg src=”galleries” ids=”24″ display=”basic_thumbnail” thumbnail_crop=”0″]

ಬ್ಯಾಟರಿ

ಇದರಲ್ಲಿರುವುದು 4000mAh ಶಕ್ತಿಯ ಬ್ಯಾಟರಿ. ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ನಾನು ಪ್ರಯತ್ನಿಸಿ ನೋಡಿದಾಗ 0% ಯಿಂದ 100% ಚಾರ್ಜ್ ಆಗಲು ಸುಮಾರು ಎರಡೂಮುಕ್ಕಾಲು ಗಂಟೆ ಹಿಡಿಯಿತು. ಒಂದು 4k ವಿಡಿಯೋವನ್ನು ನಿರಂತರ ಪುನರಾವರ್ತನೆಯಲ್ಲಿ ಪ್ಲೇ (play in loop) ಮಾಡಿದಾಗ ಸುಮಾರು 10 ಗಂಟೆಯಷ್ಟು ಕಾಲ ಬ್ಯಾಟರಿ ಬಾಳಿಕೆ ಬಂತು.

ತೀರ್ಪು

ಉತ್ತಮ ಸ್ವಂತೀ ಫೋಟೋ ಮತ್ತು ವಿಡಿಯೋ ನಿಮ್ಮ ಪ್ರಥಮ ಆದ್ಯತೆಯಾದರೆ ನೀವು ಇದನ್ನು ಕೊಳ್ಳುವ ಆಲೋಚನೆ ಮಾಡಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

The post ವಿವೊ ವಿ 20 first appeared on Vishva Kannada.

ವಿವೊ ಎಕ್ಸ್ 50
ಉತ್ತಮ ಕ್ಯಾಮೆರ ಫೋನ್

ಚೀನಾ ದೇಶದ ವಿವೊ ಕಂಪೆನಿ ಭಾರತದಲ್ಲಿ ಹಲವು ಉತ್ತಮ ಕ್ಯಾಮೆರ ಫೋನ್‌ಗಳನ್ನು ಒಂದಾದ ಮೇಲೆ ಒಂದರಂತೆ ಸತತವಾಗಿ ಬಿಡುಗಡೆ ಮಾಡುತ್ತಾ ಬಂದಿದೆ. ವಿವೊ ಕಂಪೆನಿಯ ಫೋನ್‌ಗಳು ಉತ್ತಮ ರಚನೆ, ವಿನ್ಯಾಸ ಮತ್ತು ಉತ್ತಮ ಕ್ಯಾಮೆರಗಳಿಗೆ ಹೆಸರುವಾಸಿಯಾಗಿವೆ. ಆದರೆ ಬಹುತೇಕ ಫೋನ್‌ಗಳು ಸ್ವಲ್ಪ ಮಟ್ಟಿಗೆ ಜಾಸ್ತಿ ಬೆಲೆಯವು ಎನ್ನಬಹುದು. ಅಂದರೆ ಅವರು ಉತ್ತಮ ಕ್ಯಾಮೆರವನ್ನು ನೀಡಲು ತುಂಬ ಪ್ರಯತ್ನ ಮಾಡುತ್ತಿದ್ದಾರೆ. ಆ ಸಮಯದಲ್ಲಿ ಇತರೆ ಕೇತ್ರಗಳ ಕಡೆ, ಮುಖ್ಯವಾಗಿ ಕೆಲಸದ ವೇಗದ ಕಡೆ ಲಕ್ಷ್ಯ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು. ಅಂದರೆ ನಿಮಗೆ ಉತ್ತಮ ಕ್ಯಾಮೆರ ಮಾತ್ರವೇ ಮುಖ್ಯವಾಗಿದ್ದಲ್ಲಿ ನೀವು ವಿವೊ ಫೋನ್ ಕೊಳ್ಳಬಹುದು.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 ಹೃದಯಗಳ ಪ್ರೋಸೆಸರ್ (Qualcomm Snapdragon 730)

ಮೆಮೊರಿ

8 + 128 ಗಿಗಾಬೈಟ್

8 + 256 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇಲ್ಲ

ಪರದೆ

6.56 ಇಂಚು ಗಾತ್ರ, 2376 × 1080 ಪಿಕ್ಸೆಲ್ ರೆಸೊಲೂಶನ್, ಅಮೋಲೆಡ್

ಕ್ಯಾಮರ

48 + 13 + 8 + 5 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

32  ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

4200 mAh

ಗಾತ್ರ

159.5 x 75.39 x 7.55 ಮಿ.ಮೀ.

ತೂಕ

173 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ (ಪರದೆಯಲ್ಲೇ)

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇಲ್ಲ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇದೆ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 10 + ಫನ್‌ಟಚ್ ಓಎಸ್ 10.5

ಬೆಲೆ

₹ 34,990 (8+128), 37,990 (8+256)

ರಚನೆ ಮತ್ತು ವಿನ್ಯಾಸ

ಈ ಫೋನಿನ ರಚನೆ ಮತ್ತು ವಿನ್ಯಾಸ ಇತರೆ ವಿವೊ ಫೋನ್‌ಗಳಿಗಿಂತ ಸ್ವಲ್ಪವೇ ಭಿನ್ನ ಎನ್ನಬಹುದು. ಅವುಗಳ ಬಗ್ಗೆ ಬರೆದ ಬಹುತೇಕ ಅಂಶಗಳು ಇದಕ್ಕೂ ಹೊಂದಿಕೆಯಾಗುತ್ತವೆ. ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಥಳ ಥಳ ಹೊಳೆಯುತ್ತವೆ. ಹಿಂಭಾಗ ಸಪಾಟಾಗಿದೆ. ಈ ವಿಷಯದಲ್ಲಿ ಇದು ವಿವೊ 17, 19 ಗಳಿಗಿಂತ ಭಿನ್ನ. ತುಂಬ ನಯವಾಗಿರುವ ಕಾರಣ ಕೈಯಿಂದ ಜಾರಿ ಬೀಳುವ ಭಯವಿದೆ. ಆದನ್ನು ತಪ್ಪಿಸಲು ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಇದೆ. ಮೇಲ್ಭಾಗದಲ್ಲಿ ಎಡಮೂಲೆಯಲ್ಲಿ ಸ್ವಂತೀ (selfie) ಕ್ಯಾಮೆರ ಇದೆ. ಕೆಳಭಾಗದಲ್ಲಿ, ಯುಎಸ್‌ಬಿ-ಸಿ ಕಿಂಡಿಯ ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಕಾರ್ಡ್ ಬಳಸಬಹುದು. ಇದು ಅಂಚುರಹಿತ (bezelless) ಫೋನ್. ಹಿಂಭಾಗದಲ್ಲಿ, ಸ್ವಲ್ಪ ಎಡ ಮೇಲ್ಬಾಗದಲ್ಲಿ ನಾಲ್ಕು ಕ್ಯಾಮರ ಮತ್ತು ಫ್ಲಾಶ್ ಇವೆ. ಈ ಕ್ಯಾಮೆರ ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಉಬ್ಬಿದೆ (camera bump). ಪ್ಲಾಸ್ಟಿಕ್ ಕವಚ ಹಾಕಿಕೊಳ್ಳದಿದ್ದರೆ ಕ್ಯಾಮೆರಕ್ಕೆ ಏಟಾಗುವ ಸಾಧ್ಯತೆ ಇದೆ. ಎಂದಿನಂತೆ ಎಲ್ಲ ವಿವೊ ಫೋನ್‌ಗಳಂತೆ ರಚನೆ ಮತ್ತು ವಿನ್ಯಾಸ ಉತ್ತಮವಾಗಿವೆ..

[ngg src=”galleries” ids=”17″ display=”basic_thumbnail” thumbnail_crop=”0″]ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ಇದರ ಸಂವೇದನೆ ಚೆನ್ನಾಗಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿದೆ. ಅದೂ ಚೆನ್ನಾಗಿಯೇ ಕೆಲಸ ಮಾಡುತ್ತಿದೆ.

ಕೆಲಸದ ವೇಗ

ಕೆಲಸದ ವೇಗ ನೀಡುವ ಬೆಲೆಗೆ ಹೋಲಿಸಿದರೆ ತೃಪ್ತಿದಾಯಕವಾಗಿಲ್ಲ. ಅಂದರೆ ಇದು ವೇಗದ ಫೋನ್ ಅಲ್ಲ. ಕೆಲವು ನಮೂನೆಯ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಆದರೆ ಮೂರು ಆಯಾಮಗಳ ಆಟ ಆಡುವ ಅನುಭವ ಮಾತ್ರ ತೃಪ್ತಿದಾಯಕವಾಗಿಲ್ಲ. ನಿಮಗೆ ಅತಿ ವೇಗದ ಆಟಗಳನ್ನು ಆಡಬೇಕಾಗಿದ್ದಲ್ಲಿ ಈ ಫೋನ್ ನಿಮಗಲ್ಲ. ಇದರ ಬೆಲೆಗೆ ಹೋಲಿಸಿದರೆ ಇದರೆ ಕೆಲಸದ ವೇಗ ಕಂಡಿತವಾಗಿಯೂ ತೃಪ್ತಿದಾಯಕವಾಗಿಲ್ಲ.

ಆಡಿಯೋ ವಿಡಿಯೋ

ಆಡಿಯೋ ಇಂಜಿನ್ ಚೆನ್ನಾಗಿದೆ. ಇದರಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇಲ್ಲ. ಯುಎಸ್‌ಬಿ-ಸಿ ಯಿಂದ 3.5 ಮಿ.ಮೀ. ಇಯರ್‌ಫೋನ್ ಕಿಂಡಿಗೆ ಅಡಾಪ್ಟರ್ ಇದೆ. ಅದನ್ನು ಬಳಸಿ ಮಾಮೂಲಿ 3.5 ಮಿ.ಮೀ ಪ್ಲಗ್ ಇರುವ ಇಯರ್‌ಫೋನ್ ಬಳಸಬಹುದು. ಅವರೂ ಪೆಟ್ಟಿಗೆಯಲ್ಲಿ ಅಂತಹುದೇ ಒಂದು ಇಯರ್‌ಫೋನ್ ನೀಡಿದ್ದಾರೆ. ಆದರೆ ಈ ಇಯರ್‌ಫೋನ್‌ನ ಧ್ವನಿಯ ಗುಣಮಟ್ಟ ತೃಪ್ತಿದಾಯಕವಾಗಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ ವಿಡಿಯೋ ವೀಕ್ಷಣೆ ಅನುಭವ ಉತ್ತಮವಾಗಿದೆ. ಸಿನಿಮಾ ಅಥವಾ ಟಿವಿ ವೀಕ್ಷಿಸಲು ಇದು ಉತ್ತಮ ಫೋನ್.

ಕ್ಯಾಮೆರ

ಆರಂಭದಲ್ಲೇ ಹೇಳಿದಂತೆ ಈ ಫೋನಿನ ಹೆಗ್ಗಳಿಕೆ ಇರುವುದು ಇದರ ಕ್ಯಾಮೆರದಲ್ಲಿ. ಇದರಲ್ಲಿ 4 ಪ್ರಾಥಮಿಕ ಕ್ಯಾಮೆರಗಳಿವೆ. ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ  32 ಮೆಗಾಪಿಕ್ಸೆಲ್‌ಗಳ ಕ್ಯಾಮೆರ ಇದೆ. ಈ ಫೋನಿನ ಕ್ಯಾಮೆರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳೇನೋ ಇವೆ. ಆದರೆ ಬೇರೆ ಕೆಲವು ಕಿರುತಂತ್ರಾಂಶಗಳನ್ನು (ಆಪ್) ಹಾಕಿಕೊಂಡರೆ ಇನ್ನೂ ಉತ್ತಮ ಫೋಟೋ ತೆಗೆಯಬಹುದು. 48 ಮೆಗಾಪಿಕ್ಸೆಲ್‌ನ ಕ್ಯಾಮೆರ ಬಹುತೇಕ ಫೋಟೋಗಳಿಗೆ. ತುಂಬ ಅಲದ ದೃಶ್ಯಗಳಿಗೆ, ವ್ಯಕ್ತಿ ಚಿತ್ರಗಳಿಗೆ, ಅತಿ ಹತ್ತಿರದ ವಸ್ತುಗಳಿಗೆ -ಹೀಗೆ ಬೇರೆ ಬೇರೆ ಸಂದರ್ಭಗಳಿಗ ಬೇರೆ ಬೆರೆ ಕ್ಯಾಮೆರಗಳಿವೆ. ಗುಣವೈಶಿಷ್ಟ್ಯಗಳ ಕೋಷ್ಟಕದಲ್ಲಿ ಅವುಗಳನ್ನು ಪಟ್ಟಿ ಮಾಡಲಾಗಿದೆ. ಅತಿ ಹತ್ತಿರದ ವಸ್ತುಗಳ ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಈ ಆಯ್ಕೆಯನ್ನು ಬಳಸಿ ಹೂವಿನ ಪರಾಗರೇಣುವಿನ ಫೋಟೋ, ಚಿಕ್ಕ ಜೇಡ, ಇರುವೆ, ಇತ್ಯಾದಿಗಳ ಫೋಟೋ ತೆಗೆಯಬಹುದು. ಹೀಗೆ ತೆಗೆದ ಫೋಟೋ ಫೋನಿನ ಪರದೆಯಲ್ಲೇನೋ ಚೆನ್ನಾಗಿ ಕಾಣುತ್ತದೆ. ಆದರೆ ಅದರ ರೆಸೊಲೂಶನ್ ಸಾಲದು. ಅಂದರೆ ಮುದ್ರಣಕ್ಕೆ ಅದರ ಗುಣಮಟ್ಟಸ ಲದು. ಅಲ್ಟ್ರಾ ವೈಡ್ ಆಂಗಲ್ ಎಂಬ ಆಯ್ಕೆಯೂ ಇದೆ. ಜೊತೆಗೆ ಮ್ಯಾನ್ಯುವಲ್ ಮೋಡ್ ಕೂಡ ಇದೆ. ಈ ಫೋನ್‌ನ ಕ್ಯಾಮೆರ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ತೆಗೆಯುತ್ತದೆ. ವಿವೊದವರು ಈ ಫೋನನ್ನು ಕೂಡ ಅತಿ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ತೆಗೆಯುವ ಫೋನ್ ಎಂದೇ ಮಾರಾಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕ್ಯಾಮೆರ ಮತ್ತು ಫೋಟೋಗ್ರಫಿ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಕೊಳ್ಳವ ಆಲೋಚನೆ ಮಾಡಬಹುದು.

[ngg src=”galleries” ids=”18″ display=”basic_thumbnail” thumbnail_crop=”0″]

ಬ್ಯಾಟರಿ

ಇದರಲ್ಲಿರುವುದು 4200mAh ಶಕ್ತಿಯ ಬ್ಯಾಟರಿ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100  ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.

ತೀರ್ಪು

ಉತ್ತಮ ಛಾಯಾಗ್ರಹಣ ನಿಮ್ಮ ಪ್ರಥಮ ಆದ್ಯತೆಯಾದರೆ ನೀವು ಇದನ್ನು ಕೊಳ್ಳುವ ಆಲೋಚನೆ ಮಾಡಬಹುದು. ಆದರೂ ಬೆಲೆ ಸ್ವಲ್ಪ ಜಾಸ್ತಿ ಆಯಿತು ಎಂದೇ ಹೇಳಬಹುದು.

ಈ ಫೋನನ್ನು ಅಮೆಝಾನ್‌ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

-ಡಾ. ಯು.ಬಿ. ಪವನಜ

gadgetloka @ gmail . com

The post ವಿವೊ ಎಕ್ಸ್ 50 first appeared on Vishva Kannada.

ವಿವೊ ವಿ19 ಕ್ಯಾಮೆರ
ಸ್ವಂತೀಪ್ರಿಯರಿಗೆ ಇನ್ನೊಂದು ಕ್ಯಾಮೆರ ಫೋನ್

ವಿವೊದವರ ವಿ ಶ್ರೇಣಿಯ ಫೋನ್‌ಗಳು ಫೋನ್ ಎನ್ನುವುದಕ್ಕಿಂತಲೂ ಕ್ಯಾಮೆರಗಳು ಎನ್ನುವುದೇ ಹೆಚ್ಚು ಸೂಕ್ತ. ಇವುಗಳಿಗೆ ಫೋನಿನ ಜೊತೆ ಕ್ಯಾಮೆರ ಎನ್ನುವುದಕ್ಕಿಂತ ಅಥವಾ ಕ್ಯಾಮೆರ ಜೊತೆ ಫೋನ್ ಎನ್ನಬಹುದು. ಗ್ಯಾಜೆಟ್‌ಲೋಕದಲ್ಲಿ ಹಲವು ವಿವೊ ಫೋನ್‌ಗಳ ವಿಮರ್ಶೆ ಮಾಡಲಾಗಿತ್ತು. ಈ ಸಂಚಿಕೆಯಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ವಿವೊ ವಿ19 ಫೋನಿನ ಕ್ಯಾಮೆರ ಕಡೆ ಗಮನ ಹರಿಸೋಣ.

ಗುಣವೈಶಿಷ್ಟ್ಯಗಳು

ಪ್ರಾಥಮಿಕ : 48MP+8MP+2MP+2MP (MP = ಮೆಗಾಪಿಕ್ಸೆಲ್),  f/1.79 + f/2.2 (wide-angle) + f/2.4 (bokeh) + f/2.4 (macro), ಫ್ಲಾಶ್

ಸ್ವಂತೀ (selfie) : 32MP+8MP, f/2.08 + f/2.28

ಹಲವು ಆಯ್ಕೆಗಳು: ಸಾಮಾನ್ಯ ಫೋಟೋ, ವಿಡಿಯೋ, ನಿಧಾನ ವಿಡಿಯೋ, ಸೂಪರ್ ಮ್ಯಾಕ್ರೊ, ರಾತ್ರಿ, ಅಲುಗಾಡದ ವಿಡಿಯೋ, ವ್ಯಕ್ತಿ ಚಿತ್ರ, ಇತ್ಯಾದಿ.

ಈಗಾಗಲೇ ತಿಳಿಸಿದಂತೆ ಈ ಫೋನ್ ಮುಖ್ಯವಾಗಿ ಕ್ಯಾಮೆರ ಫೋನ್. ಇದನ್ನು ಉತ್ತಮ ವೇಗದ ಅಥವಾ ಕೆಲಸದ ಫೋನ್ ಎಂದು ಕೊಳ್ಳುವ ಸಾಧ್ಯತೆಗಳು ಕಡಿಮೆ. ಉತ್ತಮ ಕ್ಯಾಮೆರ ಫೋನ್ ಬೇಕು ಎನ್ನುವವರು ಅದರಲ್ಲೂ ಉತ್ತಮ ಸ್ವಂತೀ ಕ್ಯಾಮೆರ ಫೋನ್ ಬೇಕೆನ್ನುವವರು ಇದನ್ನು ಕೊಳ್ಳುವ ಆಲೋಚನೆ ಮಾಡಬಹುದು.

ಸ್ವಂತೀಗೆ ಎರಡು ಕ್ಯಾಮೆರ ಇರುವ ಕೆಲವೇ ಫೋನ್‌ಗಳಲ್ಲಿ ಇದೂ ಒಂದು. ಆದರೆ ಸ್ವಂತೀಗೆಂದೇ ಪ್ರತ್ಯೇಕ ಫ್ಲಾಶ್ ಇಲ್ಲ. ಇದರಲ್ಲಿ ಸ್ವಂತೀಗೆ ಹಲವಾರು ಆಯ್ಕೆಗಳಿವೆ. ಕೆಲವನ್ನು ಪಟ್ಟಿ ಮಾಡುವುದಾದರೆ – ಮುಖವನ್ನು ಸುಂದರ ಮಾಡುವುದು, ಮುಖ, ಕಿವಿ, ಮೂಗನ್ನು ಉದ್ದ ಅಥವಾ ಅಗಲ ಮಾಡುವುದು, ಚರ್ಮದ ಬಣ್ಣ ಬದಲಾವಣೆ, ಒಬ್ಬ ಅಥವ ಇಬ್ಬರಿದ್ದೀರಿ ಎಂಬ ಆಯ್ಕೆ, ಮನೆ ಅಥವಾ ನಗರ ಎಂಬ ಆಯ್ಕೆ. ನೀವು ಎಚ್ಚರವಾಗಿಲ್ಲದಿದ್ದಲ್ಲಿ ನಿಮ್ಮನ್ನು ಕೇಳದೆಯೇ ನಿಮ್ಮನ್ನು ಸುಂದರ ಅಥವಾ ಅತಿ ಸುಂದರವಾಗಿ ಮಾಡಿಬಿಡುತ್ತದೆ. ಇದು ಈ ಫೋನ್ ಒಂದರ ಗುಣವಲ್ಲ. ಎಲ್ಲ ವಿವೋ ವಿ ಶ್ರೇಣಿಯ ಫೋನ್‌ಗಳಲ್ಲೂ ಇದೇ ಗುಣವಿದೆ. ಸ್ವಂತೀಪ್ರಿಯರಿಗೆ ಇದು ಉತ್ತಮ ಎಂದು ಅನ್ನಿಸಬಹುದು. ಆದರೆ ನನ್ನಂತಹ ಸ್ವಂತೀಪ್ರಿಯರಲ್ಲದವರಿಗೆ ಇದು ಕಿರಿಕಿರಿಯೆಂದೂ ಅನ್ನಿಸಬಹುದು. ಒಂದು ಉತ್ತಮ ಸುದ್ದಿಯೆಂದರೆ ಈ ಅತಿಯಾಗಿ ಸುಂದರಗೊಳಿಸುವಿಕೆಯನ್ನು ನಿಷ್ಕ್ರಿಯಗೊಳಿಸಬಹುದು. ಅದು ಎಲ್ಲಿ, ಹೇಗೆ ಮಾಡುವುದು ಎಂದು ತಿಳಿದಿರಬೇಕು, ಅಷ್ಟೆ. ನೀವು ಅದನ್ನು ನಿಷ್ಕ್ರಿಯಗೊಳಿಸದಿದ್ದರೆ ಎಲ್ಲ ಸ್ವಂತೀಗಳಲ್ಲೂ ಅದು ನಿಮ್ಮನ್ನು ಅತಿ ಸುಂದರಗೊಳಿಸುತ್ತದೆ. ಸ್ವಂತೀಗೆ ಕೂಡ ಇದರಲ್ಲಿ ಎರಡು ಕ್ಯಾಮೆರಗಳಿವೆ. ಒಂದು ಹತ್ತಿರದಲ್ಲಿರುವ ಒಬ್ಬ ವ್ಯಕ್ತಿಯ ಫೊಟೋ ತೆಗೆಯಲು, ಇನ್ನೊಂದು ತುಂಬ ಜನರನ್ನು ಒಳಗೊಳ್ಳಬೇಕಾದಾಗ (ultra-wide) ತೆಗೆಯಲು. ಇವುಗಳ ರೆಸೊಲೂಶನ್‌ನಲ್ಲಿ ವ್ಯತ್ಯಾಸವಿದೆ.

ವಿವೊದವರು ಇದರ ಕ್ಯಾಮೆರಗಳನ್ನು ಉತ್ತಮ ಪಡಿಸಲು ತುಂಬ ಶ್ರಮವಹಿಸಿದ್ದಾರೆ. ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. 48 ಮೆಗಾಪಿಕ್ಸೆಲ್‌ನ (f/1.79)  ಮುಖ್ಯ ಕ್ಯಾಮೆರ – ಬಹುತೇಕ ಫೋಟೋಗಳಿಗೆ ಇದನ್ನು ಬಳಸಲಾಗುತ್ತದೆ. ತುಂಬ ಅಗಲದ ದೃಶ್ಯವನ್ನು ಒಳಗೊಳ್ಳಬೇಕಾದರೆ ಅಂದರೆ ತುಂಬ ಅಗಲವಾದ ಪ್ರಕೃತಿದೃಶ್ಯವನ್ನು ಒಳಗೊಳ್ಳಬೇಕಾದರೆ (ಇದನ್ನು ಇಂಗ್ಲಿಷ್‌ನಲ್ಲಿ ultra-wide ಎನ್ನುತ್ತಾರೆ) ಅದಕ್ಕೆಂದೇ 8 ಮೆಗಾಪಿಕ್ಸೆಲ್‌ನ (f/2.2)  ಕ್ಯಾಮೆರವಿದೆ. ವ್ಯಕ್ತಿಚಿತ್ರಕ್ಕೆ ಅಂದರೆ bokehಗೆ 2 ಮೆಗಾಪಿಕ್ಸೆಲ್‌ನ (f/2.4) ಕ್ಯಾಮೆರವಿದೆ. ಇದು ನನ್ನ ಪ್ರಕಾರ ತುಂಬ ಕಡಿಮೆಯಾಯಿತು. ಇದನ್ನು ಬಳಸಿದಾಗ ವ್ಯಕ್ತಿಯನ್ನು ಮಾತ್ರವೇ ನಿಖರವಾಗಿ ಫೋಟೋ ತೆಗೆದು ಹಿನ್ನೆಲೆಯನ್ನು ಮಸುಕುಗೊಳಿಸುತ್ತದೆ. ಈ ಆಯ್ಕೆಯನ್ನು ಹೂವುಗಳ ಫೋಟೋ ತೆಗೆಯಲೂ ಬಳಸಬಹುದು. ಹಾಗೆ ತೆಗೆದಾಗ ಕಡಿಮೆ ರೆಸೊಲೂಶನ್‌ನ ಕ್ಯಾಮೆರ ಬಳಕೆಯಾಗುತ್ತದೆ ಎಂಬುದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಬೇಕು. ಅತಿ ಹತ್ತಿರದ ಚಿಕ್ಕ ಚಿಕ್ಕ ವಸ್ತುಗಳನ್ನು, ಉದಾಹರಣೆಗೆ ನೊಣ, ಸೊಳ್ಳೆ, ಚಿಕ್ಕ ಹೂವು, ಫೋಟೋ ತೆಗೆಯಲು ಇರಲ್ಲಿ 2 ಮೆಗಾಪಿಕ್ಸೆಲ್‌ನ (f/2.4) ಇನ್ನೊಂದು ಕ್ಯಾಮೆರವಿದೆ. ಇದರಲ್ಲಿ ಅತಿ ಚಿಕ್ಕ ವಸ್ತುಗಳ ಫೋಟೋವನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವ ಅನುಭವ ಉತ್ತಮವಾಗಿದೆ. ಈ ಎಲ್ಲ ಕ್ಯಾಮೆರಗಳ ಫಲಿತಾಂಶಗಳು ಚೆನ್ನಾಗಿವೆ. ಕಡಿಮೆ ಬೆಳಕಿನಲ್ಲಿ ಫೋಟೋ ತೆಗೆಯಲು ರಾತ್ರಿ ಎಂಬ ವಿಶೇಷ ಆಯ್ಕೆಯಿದೆ. ಈ ವಿಧಾನದಲ್ಲಿ ಫೋಟೋ ತೆಗೆಯುವಾಗ ಕೈ ಅಲುಗಾಡದಂತೆ ಎಚ್ಚರವಹಿಸಬೇಕು. ಸುಮಾರು 3-4 ಸೆಕೆಂಡುಗಳ ಕಾಲ ಇದು ಹಲವು ಫೋಟೋಗಳನ್ನು ತೆಗೆದು ಅವುಗಳನ್ನು ಒಟ್ಟುಗೂಡಿಸಿಕೊಡುತ್ತದೆ. ಈ ಎಲ್ಲ ಆಯ್ಕೆಗಳಲ್ಲೂ ಬಳಸಿ ನೋಡಿದೆ. ಎಲ್ಲವೂ ಉತ್ತಮ ಫಲಿತಾಂಶ ನೀಡಿದವು.

[ngg src=”galleries” ids=”6″ display=”basic_thumbnail” thumbnail_crop=”0″]

ಯಾವುದೇ ಫೋನ್ ಕ್ಯಾಮೆರದಲ್ಲಿ ಉತ್ತಮ ಛಾಯಾಗ್ರಾಹಕರು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ಮೋಡ್ ಇದೆಯೇ ಎಂದು. ಕೆಲವು ಫೋನ್ ಕ್ಯಾಮೆರಗಳು ಈ ಆಯ್ಕೆಯನ್ನು ಪೂರ್ತಿಯಾಗಿ ನೀಡುವುದಿಲ್ಲ. ಪೂರ್ತಿ ಮ್ಯಾನ್ಯುವಲ್ ಮೋಡ್‌ನಲ್ಲಿ ಐಎಸ್‌ಒ, ಎಕ್ಸ್ಪೋಷರ್ ಮತ್ತು ಫೋಕಸ್‌ಗಳನ್ನು ನಮಗೇ ಬದಲಾಯಿಸುವ ಆಯ್ಕೆಗಳಿರುತ್ತವೆ. ಶುಭಸುದ್ದಿಯೆಂದರೆ ವಿವೊ ವಿ19ರಲ್ಲಿ ಸಂಪೂರ್ಣ ಮ್ಯಾನ್ಯುವಲ್ ಮೋಡ್ ಇದೆ. ಒಂದು ಹೂವಿನ ಮೇಲೆ ಕುಳಿತುಕೊಳ್ಳುವ ಜೇನ್ನೊಣದ ಫೋಟೋ, ಜೇಡರ ಬಲೆಯ ಫೋಟೋ, ಆಟೋಫೋಕಸ್‌ನಲ್ಲಿ ಫೋಕಸ್ ಆಗದ ವಸ್ತುಗಳ ಫೋಟೋಗಳನ್ನು ತೆಗೆಯಲು ಮ್ಯಾನ್ಯುವಲ್ ಮೋಡ್ ಬೇಕಾಗುತ್ತದೆ. ನೀವು ಉತ್ತಮ ಛಾಯಾಗ್ರಾಹಕರಾಗಿದ್ದರೆ ನಿಮಗೆ ವಿವೊ ವಿ19ರ ಮ್ಯಾನ್ಯುವಲ್ ಮೋಡ್ ನಿಜಕ್ಕೂ ನಿಮಗೆ ಖುಷಿ ನೀಡಬಹುದು.

ವಿವೊ ವಿ19ರ ವಿಡಿಯೋದಲ್ಲೂ ಹಲವು ಆಯ್ಕೆಗಳಿವೆ. 720p, 1080p ಮತ್ತು 4k ರೆಸೊಲೂಶನ್‌ಗಳಲ್ಲಿ ವಿಡಿಯೋ ಶೂಟ್ ಮಾಡಬಹುದು. ವಿಡಿಯೋ ಮಾಡುವಾಗ ಕೈ ಅಲುಗಾಡಿದರೆ ವಿಡಿಯೋ ಅಲುಗಾಡದಂತೆ (optical image stabilisation) ಇದರಲ್ಲಿ ಆಯ್ಕೆಯಿದೆ. ಆದರೆ ಈ ಆಯ್ಕೆ 720p ರೆಸೊಲೂಶನ್‌ನಲ್ಲಿ ಮಾತ್ರ ಲಭ್ಯವಿದೆ. ಈ ವಿಧಾನದಲ್ಲಿ ಶೂಟ್ ಮಾಡಿದ ವಿಡಿಯೋ ತೃಪ್ತಿ ನೀಡಿತು. ಕನಿಷ್ಠ 1080p ರೆಸೊಲೂಶನ್‌ಗಾದರೂ ಇದನ್ನು ವಿಸ್ತರಿಸಬಹುದಿತ್ತು. 4k ರೆಸೊಲೂಶನ್‌ನಲ್ಲಿ ಶೂಟ್ ಮಾಡಿದ ವಿಡಿಯೋ ಪೂರ್ತಿ ತೃಪ್ತಿ ನೀಡಲಿಲ್ಲ. ಅತಿ ನಿಧಾನವಾಗಿ ವಿಡಿಯೋ ಮಾಡುವ slow motion ವಿಧಾನವೂ ಇದೆ. ಇದು 240fps ನಲ್ಲಿ ಶೂಟ್ ಮಾಡುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಇದರ ಕ್ಯಾಮೆರ ಉತ್ತಮವಿದೆ ಎನ್ನಬಹುದು. ಉತ್ತಮ ಕ್ಯಾಮೆರ ಇರುವ ಫೋನ್ ನಿಮ್ಮ ಪ್ರಥಮ ಆದ್ಯತೆಯಾಗಿದ್ದರೆ ನೀವು ಇದನ್ನು ಕೊಳ್ಳಲು ಆಲೋಚಿಸಬಹುದು. ವಿವೋದವರು ಸಾಮಾನ್ಯವಾಗಿ ಹೊಸ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿ ಒಂದೆರಡು ತಿಂಗಳುಗಳಲ್ಲಿ ಅದರ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತಾರೆ. ತಾಳ್ಮೆಯಿದ್ದರೆ ನೀವು ಅದಕ್ಕೆ ಕಾಯಬಹದು.

ಅಮೆಝಾನ್‌ನಲ್ಲಿ ಈ ಫೋನನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ – 8+128 GB ಮಾದರಿ, 8+256 GB ಮಾದರಿ.

–ಡಾ. ಯು.ಬಿ. ಪವನಜ

gadgetloka @ gmail . com

The post ವಿವೊ ವಿ19 ಕ್ಯಾಮೆರ first appeared on Vishva Kannada.

ವಿವೊ ವಿ 17
ಉತ್ತಮ ಕ್ಯಾಮೆರ ಫೋನ್

ವಿವೊ ಕಂಪೆನಿ 20 ರಿಂದ 30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿವೊ 17 ಪ್ರೊ ಫೋನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ನೀಡಲಾಗಿತ್ತು. ಅದರಲ್ಲಿ ಹೊರಚಿಮ್ಮುವ ಎರಡು ಕ್ಯಾಮೆರಗಳ ಸ್ವಂತೀ ಕ್ಯಾಮೆರವನ್ನು ಪ್ರಥಮ ಬಾರಿಗೆ ನೀಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ವಿವೊ ವಿ 17 (Vivo V17) ಫೋನನ್ನು. ಇದು ವಿ 17 ಪ್ರೊ ಸ್ವಲ್ಪ ದುಬಾರಿಯಾಯಿತು ಎನ್ನುವವರಿಗಾಗಿ ಅದಕ್ಕಿಂತ ಸ್ವಲ್ಪ ಕಡಿಮೆ ಬೆಲೆಯ ಫೋನ್.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 2 ಗಿಗಾಹರ್ಟ್ಸ್ ಪ್ರೋಸೆಸರ್ (Qualcomm Snapdragon 675)

ಗ್ರಾಫಿಕ್ಸ್ ಪ್ರೋಸೆಸರ್

Adreno-612

ಮೆಮೊರಿ

8 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ

ಪರದೆ

6.43 ಇಂಚು ಗಾತ್ರ, 2400
x 1080 ಪಿಕ್ಸೆಲ್ ರೆಸೊಲೂಶನ್

ಕ್ಯಾಮರ

48 + 8
+ 2 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
32  ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

4500 mAh

ಗಾತ್ರ

159 x 74.2 x
8.5 ಮಿ.ಮೀ.

ತೂಕ

176 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ (ಪರದೆಯಲ್ಲೇ)

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇಲ್ಲ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇದೆ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 9 + ಫನ್‌ಟಚ್ ಓಎಸ್ 9.2

ಬೆಲೆ

₹ 22,990 (ನಿಗದಿತ)

ರಚನೆ ಮತ್ತು ವಿನ್ಯಾಸ

ಈ ಫೋನ್ ವಿವೊ ೧೭ ಪ್ರೊಗಿಂತ ಸ್ವಲ್ಪವೇ ಭಿನ್ನ ಎನ್ನಬಹುದು. ಅದರ ಬಗ್ಗೆ ಬರೆದ ಬಹುತೇಕ ಅಂಶಗಳು ಇದಕ್ಕೂ ಹೊಂದಿಕೆಯಾಗುತ್ತವೆ. ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಥಳ ಥಳ ಹೊಳೆಯುತ್ತವೆ. ಹಿಂಭಾಗ ಸ್ವಲ್ಪ ಉಬ್ಬಿದ್ದು, ಬದಿಗಳು ವಕ್ರವಾಗಿದ್ದು, ಒಂದು ಮಟ್ಟಿಗೆ ತಲೆದಿಂಬಿನಾಕಾರದಲ್ಲಿದೆ. ತುಂಬ ನಯವಾಗಿರುವ ಕಾರಣ ಕೈಯಿಂದ ಜಾರಿ ಬೀಳುವ ಭಯವುದೆ. ಆದನ್ನು ತಪ್ಪಿಸಲು ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇವೆ. ಮೇಲ್ಭಾಗದಲ್ಲಿ ಬಲಮೂಲೆಯಲ್ಲಿ ಸ್ವಂತೀ ಕ್ಯಾಮೆರ ಇದೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಬಳಸಬಹುದು. ಇದು ಅಂಚುರಹಿತ (bezelless) ಫೋನ್. ಹಿಂಭಾಗದಲ್ಲಿ, ಸ್ವಲ್ಪ ಎಡ ಮೇಲ್ಬಾಗದಲ್ಲಿ ನಾಲ್ಕು ಕ್ಯಾಮರ ಮತ್ತು ಫ್ಲಾಶ್ ಇವೆ. ಈ ಕ್ಯಾಮೆರ ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಉಬ್ಬಿದೆ. ಪ್ಲಾಸ್ಟಿಕ್ ಕವಚ ಹಾಕಿಕೊಳ್ಳದಿದ್ದರೆ ಕ್ಯಾಮೆರಕ್ಕೆ ಏಟಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಹೇಳುವುದಾದರೆ ಕೈಯಲ್ಲಿ ಹಿಡಿದಾಗ ಒಂದು ಮೇಲ್ದರ್ಜೆಯ ಅತ್ಯುತ್ತಮ ಫೋನ್ ಹಿಡಿದುಕೊಂಡ ಭಾಸವಾಗುತ್ತದೆ.

https://www.instagram.com/p/B6DVatZn2Nd/

ಇತ್ತೀಚೆಗೆ ಬರುತ್ತಿರುವ ಮೇಲ್ದರ್ಜೆಯ ವಿವೊ ಫೋನ್‌ಗಳಲ್ಲಿರುವಂತೆ
ಇದರಲ್ಲೂ ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ಇದರ ಸಂವೇದನೆ
ಚೆನ್ನಾಗಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ.
ಮುಖವನ್ನು ಗುರುತುಹಿಡಿಯುವ ಸೌಲಭ್ಯವಿದೆ. ಅದೂ ತಕ್ಕ ಮಟ್ಟಿಗೆ ಚೆನ್ನಾಗಿಯೇ ಕೆಲಸ ಮಾಡುತ್ತಿದೆ.

ಕೆಲಸದ ವೇಗ

ಕೆಲಸದ ವೇಗ ತೃಪ್ತಿದಾಯಕವಾಗಿದೆ. ಇದರ ಅಂಟುಟು
ಬೆಂಚ್‌ಮಾರ್ಕ್ 2,26,687 ಇದೆ. ಅಂದರೆ ಇದು ವೇಗದ ಫೋನ್. ಎಲ್ಲ ನಮೂನೆಯ ಆಟಗಳನ್ನು ಮತ್ತು ಮೂರು
ಆಯಾಮಗಳ ಆಟ ಆಡುವ ಅನುಭವ ತೃಪ್ತಿದಾಯಕವಾಗಿದೆ. ಕೆಲವರು ಇದರಲ್ಲಿ ಪಬ್‌ಜಿ ಆಡುವಾಗ ಇತರೆ ಕೆಲಸಗಳನ್ನು
ಮಾಡಿದರೆ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ ಎಂದು ವರದಿ ಮಾಡಿದ್ದಾರೆ. ನಾನು ಪಬ್‌ಜಿ ಆಡಿ ನೋಡಿಲ್ಲ.

ಆಡಿಯೋ ವಿಡಿಯೋ

ವಿವೊ ವಿ 17 ಪ್ರೊ ಮತ್ತು ಇದರ ಆಡಿಯೋದಲ್ಲಿ ಯಾವುದೇ
ಬದಲಾವಣೆಯಿಲ್ಲ. ಆಡಿಯೋ ಇಂಜಿನ್ ಚೆನ್ನಾಗಿದೆ. ಫೋನ್
ಜೊತೆ ನೀಡಿರುವ ಇಯರ್‌ಫೋನ್‌ನ ಧ್ವನಿಯ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ನಿಮ್ಮಲ್ಲಿ
ಉತ್ತಮ ಗುಣಮಟ್ಟದ ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ
ಪಡೆಯಬಹುದು. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ
ವಿಡಿಯೋ ವೀಕ್ಷಣೆ ಮತ್ತು ಆಟಗಳನ್ನು ಆಡುವ ಅನುಭವ ಉತ್ತಮವಾಗಿದೆ. ಮನರಂಜನೆ ನಿಮ್ಮ ಒಂದು ಉದ್ದೇಶವಾಗಿದ್ದಲ್ಲಿ
ಈ ಫೋನ್ ನೀವು ಕೊಳ್ಳಬಹುದು.

ಕ್ಯಾಮೆರ

ವಿವೊದವರು 20 ರಿಂದ 30 ಸಾವಿರ ಬೆಲೆಯ ಫೋನ್‌ಗಳ ಮಾರುಕಟ್ಟೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಅವರ ಪ್ರಮುಖ ಗುರಿ ಉತ್ತಮ ಕ್ಯಾಮೆರ ಫೋನ್ ನೀಡುವುದು. ಅದನ್ನು ಅವರು ಸತತವಾಗಿ ಮಾಡುತ್ತಾ ಬಂದಿದ್ದಾರೆ.  ಇದರಲ್ಲಿ 4 ಪ್ರಾಥಮಿಕ ಕ್ಯಾಮೆರಗಳಿವೆ! ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ  32 ಮೆಗಾಪಿಕ್ಸೆಲ್‌ಗಳ ಕ್ಯಾಮೆರ ಇದೆ. ಕ್ಯಾಮೆರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳಿವೆ. ಅತಿ ಹತ್ತಿರದ ವಸ್ತುಗಳ ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಅಲ್ಟ್ರಾ ವೈಡ್ ಆಂಗಲ್ ಎಂಬ ಆಯ್ಕೆಯೂ ಇದೆ. ಜೊತೆಗೆ ಮ್ಯಾನ್ಯುವಲ್ ಮೋಡ್ ಕೂಡ ಇದೆ. ತುಂಬ ಬೆಳಕಿದ್ದಾಗ ಅತ್ಯುತ್ತಮ ಫೋಟೋ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲೂ ತಕ್ಕ ಮಟ್ಟಿಗೆ ಉತ್ತಮ ಫೋಟೋ ತೆಗೆಯುತ್ತದೆ. ವಿವೊದವರು ಈ ಫೋನನ್ನು ಅತಿ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ತೆಗೆಯುವ ಫೋನ್ ಎಂದೇ ಮಾರಾಟ ಮಾಡುತ್ತಿದ್ದಾರೆ. ನಾನು ಕೆಲವು ರಾತ್ರಿ ಛಾಯಾಗ್ರಹಣ ಮಾಡಿ ನೋಡಿದೆ. ಈ ಮಾತಿನಲ್ಲಿ ತಕ್ಕ ಮಟ್ಟಿಗೆ ಸತ್ಯಾಂಶವಿದೆ ಎನ್ನಬಹುದು. ಒಟ್ಟಿನಲ್ಲಿ ಕ್ಯಾಮೆರ ಮತ್ತು ಫೋಟೋಗ್ರಫಿ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಖಂಡಿತ ಕೊಳ್ಳಬಹುದು.

[ngg src=”galleries” ids=”4″ display=”basic_imagebrowser”]

ಬ್ಯಾಟರಿ

ಇದರಲ್ಲಿರುವುದು 4500mAh ಶಕ್ತಿಯ ಬ್ಯಾಟರಿ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ.
ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100  ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.

ತೀರ್ಪು

ಫೋನ್ ಚೆನ್ನಾಗಿದೆ. ಉತ್ತಮ ಛಾಯಾಗ್ರಹಣ ಅದರಲ್ಲೂ ಕಡಿಮೆ ಬೆಳಕಿನಲ್ಲಿ ಛಾಯಾಗ್ರಹಣ ನಿಮ್ಮ ಪ್ರಥಮ ಆದ್ಯತೆಯಾದರೆ ನೀವು ಇದನ್ನು ಖಂಡಿತ ಕೊಳ್ಳಬಹುದು. ಬೆಲೆ ಮಾತ್ರ ಸುಮಾರು 2-3 ಸಾವಿರ ಕಡಿಮೆ ಆಗಿದ್ದಿದ್ದರೆ ಇದಕ್ಕೆ ಖಂಡಿತ ಸರಿಹೊಂದುತ್ತಿತ್ತು.

ಅಮೆಝಾನ್‌ನಲ್ಲಿ ಈ ಫೋನನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

–ಡಾ| ಯು.ಬಿ. ಪವನಜ

gadgetloka @ gmail . com

The post ವಿವೊ ವಿ 17 first appeared on Vishva Kannada.

ವಿವೊ ವಿ 17ಪ್ರೊ
ಮಧ್ಯಮ ಬೆಲೆಯ ಉತ್ತಮ ಫೋನ್

ವಿವೊ ಕಂಪೆನಿ ಕೆಲವು ಆವಿಷ್ಕಾರಗಳಿಗೆ ಪ್ರಸಿದ್ಧವಾಗಿದೆ.
ವಿವೊ 11 ಪ್ರೊ ಫೋನಿನಲ್ಲಿ ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಅನ್ನು ಬಳಸಲಾಗಿತ್ತು. ವಿವೊ 15 ಪ್ರೊ
ಫೋನಿನಲ್ಲಿ ಮೇಲಕ್ಕೆ ಹೊರ ಬರುವ (ಪಾಪ್‌ಅಪ್) ಕ್ಯಾಮರವನ್ನು ಬಳಸಲಾಗಿತ್ತು. ವಿವೊ ಕಂಪೆನಿ 20 ರಿಂದ
30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿವೊ 11 ಪ್ರೊ ಫೋನಿನ ವಿಮರ್ಶೆಯನ್ನು
ಇದೇ ಅಂಕಣದಲ್ಲಿ ನೀಡಲಾಗಿತ್ತು.  ಈ ಸಲ ನಾವು ವಿಮರ್ಶೆ
ಮಾಡುತ್ತಿರುವುದು ವಿವೊ ವಿ 17 ಪ್ರೊ (Vivo V17 Pro) ಫೋನನ್ನು.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 2.02 ಗಿಗಾಹರ್ಟ್ಸ್ ಪ್ರೋಸೆಸರ್ (Qualcomm Snapdragon 675)

ಗ್ರಾಫಿಕ್ಸ್ ಪ್ರೋಸೆಸರ್

Adreno-612

ಮೆಮೊರಿ

8 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇಲ್ಲ

ಪರದೆ

6.44 ಇಂಚು ಗಾತ್ರ, 2400
x 1080 ಪಿಕ್ಸೆಲ್ ರೆಸೊಲೂಶನ್

ಕ್ಯಾಮರ

48 + 8
+ 12 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
32 + 8 ಮೆಗಾಪಿಕ್ಸೆಲ್ ಪಾಪ್‌ಅಪ್ ಸ್ವಂತೀ + ಫ್ಲಾಶ್

ಸಿಮ್

2 ನ್ಯಾನೊ

ಬ್ಯಾಟರಿ

4100 mAh

ಗಾತ್ರ

159.00 × 74.70
× 9.80 ಮಿ.ಮೀ.

ತೂಕ

201.8 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ (ಪರದೆಯಲ್ಲೇ)

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇಲ್ಲ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇದೆ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 9 + ಫನ್‌ಟಚ್ ಓಎಸ್ 9.1

ಬೆಲೆ

₹ 29,990 (ನಿಗದಿತ)

ರಚನೆ ಮತ್ತು ವಿನ್ಯಾಸ

ಎಲ್ಲ ವಿವೊ ಫೋನ್‌ಗಳಂತೆ
ಈ ಫೋನಿನ ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಮತ್ತು ಲೋಹದ ಫ್ರೇಂ ಥಳ ಥಳ ಹೊಳೆಯುತ್ತವೆ. ಹಿಂಭಾಗ ಸ್ವಲ್ಪ ಉಬ್ಬಿದ್ದು,
ಬದಿಗಳು ವಕ್ರವಾಗಿದ್ದು, ಒಂದು ಮಟ್ಟಿಗೆ ತಲೆದಿಂಬಿನಾಕಾರದಲ್ಲಿದೆ. ಹಿಂಭಾಗದ ಕವಚಕ್ಕೆ ಗಾಜಿನ ಲೇಪನವಿದೆ.
ಅದೇಕೋ ಗೊತ್ತಿಲ್ಲ. ಅದರ ಸೌಂದರ್ಯವನ್ನು ಕಂಪೆನಿಯವರೇ ಒಂದು ಪ್ಲಾಸ್ಟಿಕ್ ಹೊದಿಕೆ ಹಾಕಿ ಕೊಟ್ಟು
ಕೆಡಿಸಿದ್ದಾರೆ. ವಿಮರ್ಶೆಗೆ ಬಮದ ಫೋನ್ ಆದ ಕಾರಣ ಈ ಹೊದಿಕೆ ತೆಗೆಯಲು ನಾನು ಪ್ರಯತ್ನಿಸಲಿಲ್ಲ. ಇಷ್ಟೇ
ಅಲ್ಲದೆ ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್
ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿಯಿದೆ. ಮೇಲ್ಬಾಗದಲ್ಲಿ ಪಾಪ್‌ಅಪ್ ಕ್ಯಾಮರ ಮತ್ತು
3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇವೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು
ನ್ಯಾನೊಸಿಮ್ ಬಳಸಬಹುದು. ಎಡಭಾಗದಲ್ಲಿ ಒಂದು ವಿಶೇಷ ಬಟನ್ ಇದೆ. ಇದನ್ನು ಒತ್ತಿದರೆ ಗೂಗ್ಲ್ ಅಸಿಸ್ಟೆಂಟ್
ಪ್ರಾರಂಭವಾಗುತ್ತದೆ. ಕ್ಯಾಮರ ಬಳಸುತ್ತಿದ್ದಾಗ ಇದನ್ನು ಎರಡು ಸಲ ಒತ್ತಿದರೆ ಕ್ಯಾಮರ ನೋಡುತ್ತಿರುವ
ವಸ್ತುವನ್ನು ಗುರುತಿಸುವ ಸೌಲಭ್ಯ ಚಾಲನೆಯಾಗುತ್ತದೆ. ಇದು ಅಂಚುರಹಿತ (bezelless) ಫೋನ್. ಹಿಂಭಾಗದ ಮಧ್ಯದಲ್ಲಿ,
ಸ್ವಲ್ಪ ಮೇಲ್ಬಾಗದಲ್ಲಿ ನಾಲ್ಕು ಕ್ಯಾಮರ ಮತ್ತು ಫ್ಲಾಶ್ ಇವೆ. ಒಟ್ಟಿನಲ್ಲಿ ಹೇಳುವುದಾದರೆ ಕೈಯಲ್ಲಿ
ಹಿಡಿದಾಗ ಒಂದು ಮೇಲ್ದರ್ಜೆಯ ಅತ್ಯುತ್ತಮ ಫೋನ್ ಹಿಡಿದುಕೊಂಡ ಭಾಸವಾಗುತ್ತದೆ.

[ngg src=”galleries” ids=”1″ display=”basic_imagebrowser”]

ವಿವೊದವರ ಆವಿಷ್ಕಾರ ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್. ಅದು ಈ ಫೋನಿನಲ್ಲೂ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ವಿವೊ ನೆಕ್ಸ್ ಫೋನಿನಲ್ಲಿ ಇದರ ಸಂವೇದನೆ ಸ್ವಲ್ಪ ನಿಧಾನವಿತ್ತು. ಈ ಫೋನಿನಲ್ಲಿ ಅದು ತುಂಬ ಸುಧಾರಿಸಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿಲ್ಲ. ಯಾಕೆಂದರೆ ಹಾಗೆ ಮಾಡಬೇಕಾದರೆ ಪ್ರತಿ ಸಲವೂ ಫೋನ್ ಹೊರಕ್ಕೆ ಬರಬೇಕಾಗುತ್ತದೆ ಮತ್ತು ಈ ಕೆಲಸ ನಿಧಾನವಾಗುತ್ತದೆ.

https://www.instagram.com/p/B2vtceMn589/

ಕೆಲಸದ ವೇಗ

ಕೆಲಸದ ವೇಗ ತೃಪ್ತಿದಾಯಕವಾಗಿದೆ. ಇದರ ಅಂಟುಟು
ಬೆಂಚ್‌ಮಾರ್ಕ್ 1,76,937 ಇದೆ. ಅಂದರೆ ಇದು ಮಧ್ಯಮ ಶ್ರೇಣಿಯಲ್ಲಿ ಮೇಲ್ಮಟ್ಟದ ವೇಗದ ಫೋನ್. ಎಲ್ಲ
ನಮೂನೆಯ ಆಟಗಳನ್ನು ಮತ್ತು ಮೂರು ಆಯಾಮಗಳ ಆಟ ಆಡುವ ಅನುಭವ ತೃಪ್ತಿದಾಯಕವಾಗಿದೆ.

ಆಡಿಯೋ ವಿಡಿಯೋ

ಇದರ ಆಡಿಯೋ ಇಂಜಿನ್ ಕೂಡ ಚೆನ್ನಾಗಿದೆ. ಇಯರ್‌ಫೋನ್
ನೀಡಿದ್ದಾರೆ. ಆದರೆ ಇದರ ಧ್ವನಿಯ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಗಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ
ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು.
ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ
ವಿಡಿಯೋ ವೀಕ್ಷಣೆ ಮತ್ತು ಆಟಗಳನ್ನು ಆಡುವ ಅನುಭವ ಉತ್ತಮವಾಗಿದೆ.

ಕ್ಯಾಮರ

ಇದನ್ನು ಫೊನ್ ಜೊತೆ ಕ್ಯಾಮರ ಎನ್ನುವುದಕ್ಕಿಂತಲೂ ಕ್ಯಾಮರ ಜೊತೆ ಫೋನ್
ಎನ್ನುವುದೇ ಹೆಚ್ಚು ಸೂಕ್ತ. ಯಾಕೆಂದರೆ ಇದರ ಹೆಗ್ಗಳಿಕೆ ಇರುವುದೇ ಇದರ ಕ್ಯಾಮರಗಳಲ್ಲಿ. 4 ಪ್ರಾಥಮಿಕ
ಕ್ಯಾಮರಗಳಿವೆ! ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ  32 ಮತ್ತು 8 ಮೆಗಾಪಿಕ್ಸೆಲ್‌ಗಳ ಪಾಪ್‌ಅಪ್ ಕ್ಯಾಮರ ಜೊತೆಗೆ
ಫ್ಲಾಶ್ ಇದೆ ಅಂದರೆ ಎಲ್ಲ ಸಮಯದಲ್ಲೂ ಸ್ವಂತೀ ಕ್ಯಾಮರ ಕಾಣಿಸುವುದಿಲ್ಲ. ಕ್ಯಾಮರದಲ್ಲಿ ಸ್ವಂತೀ ಎಂದು
ಆಯ್ಕೆ ಮಾಡಿದೊಡನೆ ಕ್ಯಾಮರ ಮೇಲಕ್ಕೆ ಹೊರಕ್ಕೆ ಬರುತ್ತದೆ. ಸ್ವಂತೀಗೆ ಎರಡು ಪಾಪ್ಅಪ್ ಕ್ಯಾಮರಗಳಿರುವ
ಪ್ರಪಂಚದ ಮೊತ್ತಮೊದಲ ಫೊನ್ ಇದು. ಇದೇ ಅದರ ಅತಿ ದೊಡ್ಡ ಹೆಗ್ಗಳಿಕೆ. ಸ್ವಂತೀ ತೆಗೆಯುವುವಾಗ ತುಂಬ
ಜನರಿದ್ದಲ್ಲಿ ಎಲ್ಲರನ್ನೂ ಫೋಟೋದಲ್ಲಿ ಒಳಗೊಳ್ಳಬೇಕಾದರೆ ಇದರಲ್ಲಿ ಪ್ರತ್ಯೇಕ ಆಯ್ಕೆ ಇದೆ. ಇದಕ್ಕೆ
ಛಾಯಾಗ್ರಹಣದ ಪರಿಭಾಷೆಯಲ್ಲಿ ವೈಡ್ ಆಂಗಲ್ ಎನ್ನುತ್ತಾರೆ. ಸ್ವಂತೀಗೆ ಎರಡು ಕ್ಯಾಮರ ನೀಡಿರುವುದರಿಂದ
ಇದು ಸಾಧ್ಯವಾಗಿದೆ. ಕ್ಯಾಮರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳಿವೆ. ಅತಿ ಹತ್ತಿರದ ವಸ್ತುಗಳ
ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಅಲ್ಟ್ರಾ ವೈಡ್ ಆಂಗಲ್ ಎಂಬ ಆಯ್ಕೆಯೂ ಇದೆ. ಜೊತೆಗೆ ಮ್ಯಾನ್ಯುವಲ್
ಮೋಡ್ ಕೂಡ ಇದೆ. ತುಂಬ ಬೆಳಕಿದ್ದಾಗ ಅತ್ಯುತ್ತಮ ಫೋಟೋ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲಿ ಕೆಲವು
ಸಂದರ್ಭಗಳಲ್ಲಿ ಮಾತ್ರ ಉತ್ತಮ ಫೋಟೋ ಮೂಡಿಬರುತ್ತದೆ. ವಿವೋ ಫೋನ್‌ಗಳ ಕ್ಯಾಮರದ ಕಿರುತಂತ್ರಾಂಶದ ತೊಂದರೆಯೆಂದರೆ
ಮುಖವನ್ನು ಅತಿಯಾಗಿ ಸುಂದರಗೊಳಿಸುವುದು. ಹಾಗೆ ಮಾಡಬೇಡವೆಂದು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಡಿಫಾಲ್ಟ್
ಆಗಿ ಸುಂದರಗೊಳಿಸುತ್ತದೆ. ನನಗೆ ಇದು ಸುತರಾಂ ಇಷ್ಟವಿಲ್ಲ. ನಾನು ಈ ಬಗ್ಗೆ ಪ್ರತಿ ವಿವೊ ಫೋನಿನ ವಿಮರ್ಶೆಯಲ್ಲೂ
ಬರೆದಿದ್ದೇನೆ. ಬಹುಶಃ ಇನ್ನು ಮುಂದೆಯೂ ಹೀಗೆಯೇ ಬರೆಯುತ್ತಿರಬೇಕಾಗುತ್ತೇನೋ?! ಒಟ್ಟಿನಲ್ಲಿ ಕ್ಯಾಮರ
ಮತ್ತು ಫೋಟೋಗ್ರಫಿ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಖಂಡಿತ ಕೊಳ್ಳಬಹುದು.

[ngg src=”galleries” ids=”2″ display=”basic_imagebrowser”]

ಬ್ಯಾಟರಿ

ಇದರಲ್ಲಿರುವುದು 4100mAh ಶಕ್ತಿಯ ಬ್ಯಾಟರಿ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ.
ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100  ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.

ತೀರ್ಪು

ಫೋನ್ ಚೆನ್ನಾಗಿದೆ. ಉತ್ತಮ ಛಾಯಾಗ್ರಹಣ ಅದರಲ್ಲೂ ಸ್ವಂತೀ ನಿಮ್ಮ ಪ್ರಥಮ
ಆದ್ಯತೆಯಾದರೆ ನೀವು ಇದನ್ನು ಖಂಡಿತ ಕೊಳ್ಳಬಹುದು. ಬೆಲೆ ಮಾತ್ರ ಸುಮಾರು 3-4 ಸಾವಿರ ಕಡಿಮೆ ಆಗಿದ್ದಿದ್ದರೆ
ಇದಕ್ಕೆ ಖಂಡಿತ ಸರಿಹೊಂದುತ್ತಿತ್ತು.

–ಡಾ| ಯು.ಬಿ. ಪವನಜ

gadgetloka @ gmail . com

The post ವಿವೊ ವಿ 17ಪ್ರೊ first appeared on Vishva Kannada.