ಸಾಧನ | Vishva Kannada

ಡಿಜಿಟಲ್ ವಾಸನೆ
ತಂತ್ರಜ್ಞಾನದ ಮೂಲಕ ವಾಸನೆಯನ್ನು ಪತ್ತೆ ಹಚ್ಚುವುದರ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡೆವು. ಇದನ್ನೆ ತಿರುವುಮುರುವು ಮಾಡಿದರೆ ಹೇಗಿರುತ್ತದೆ? ಅಂದರೆ ತಂತ್ರಜ್ಞಾನದ ಮೂಲಕ ವಾಸನೆಯನ್ನು ಸೃಷ್ಟಿ ಮಾಡುವಂತಿದ್ದರೆ? ತಂತ್ರಜ್ಞಾನದ ಮೂಲಕ ದೃಶ್ಯ, ಧ್ವನಿಗಳನ್ನು ಸೃಷ್ಟಿ ಮಾಡಬಹುದು. ಹಾಗೆಯೇ ಮುಂದುವರೆದು ತಂತ್ರಜ್ಞಾನದ ಮೂಲಕ ವಾಸನೆಯನ್ನೂ ಸೃಷ್ಟಿಸುವಂತಿದ್ದರೆ? ಹೌದು ಅದೂ ಸಾಧ್ಯವಿದೆ. ಈ ಸಂಚಿಕೆಯಲ್ಲಿ ಅದರ ಬಗ್ಗೆ ತಿಳಿದುಕೊಳ್ಳೋಣ.

ಅಮೆರಿಕದ ಡಿಜಿಸೆಂಟ್ ಟೆಕ್ನಾಲೋಜಿ ಎಂಬ ಕಂಪೆನಿ ಈ ತಂತ್ರಜ್ಞಾನವನ್ನು ಬಳಸಿ ಐಸ್ಮೆಲ್ ಎಂಬ ಸಾಧನವನ್ನು ತಯಾರಿಸಿದೆ. ಇದು ಬಹುಮಟ್ಟಿಗೆ ಗಣಕದ ಪರದೆಯ ರೀತಿಯಲ್ಲೇ ಇದೆ. ಇದನ್ನು ಗಣಕದ ಪರದೆಯ ಮೇಲೆ ಅಳವಡಿಸಬೇಕು. ಇದರ ನಾಲ್ಕು ಮೂಲೆಗಳಲ್ಲಿ ವಾಸನೆಯನ್ನು ಸೃಷ್ಟಿಸುವ ಅಂಗಗಳಿವೆ. ಇವು ಗಣಕ ನೀಡಿದ ಆದೇಶವನ್ನು ಅವಲಂಬಿಸಿ ಸೂಕ್ತವಾದ ವಾಸನೆಯನ್ನು ಹೊರಹೊಮ್ಮಿಸುತ್ತವೆ. ತಂತ್ರಜ್ಞಾನದ ಮೂಲಕ ದೃಶ್ಯ ಅಥವಾ ಧ್ವನಿಯನ್ನು ಸೃಷ್ಟಿಸುವುದಕ್ಕೂ ವಾಸನೆಯನ್ನು ಸೃಷ್ಟಿಸುವುದಕ್ಕೂ ತುಂಬ ವ್ಯತ್ಯಾಸವಿದೆ. ದೃಶ್ಯವನ್ನು ವಿದ್ಯುತ್ಕಾಂತೀಯ ತರಂಗಗಳ ಮೂಲಕ ಹಾಗೂ ಧ್ವನಿಯನ್ನು ಧ್ವನಿ ತರಂಗಗಳ ಮೂಲಕ ಸೃಷ್ಟಿಸಲಾಗುತ್ತದೆ. ಆದರೆ ವಾಸನೆಯನ್ನು ಸೃಷ್ಟಿಸಲು ಆ ವಾಸನೆಯನ್ನು ಸೂಸುವ ಪದಾರ್ಥದ ಅಗತ್ಯವಿದೆ. ನಮ್ಮ ಮೂಗಿನೊಳಗೆ ಆ ಪದಾರ್ಥ ಅತಿ ಕಡಿಮೆ ಪ್ರಮಾಣದಲ್ಲಿ ಹೋದರೂ ನಮಗೆ ವಾಸನೆಯ ಗ್ರಹಿಕೆ ಆಗುತ್ತದೆ. ಪ್ರಮಾಣ ಅತಿ ಕಡಿಮೆ ಇರಬಹುದು. ಆದರೆ ಪದಾರ್ಥವನ್ನು ಮೂಗಿಗೆ ಕಳುಹಿಸುವುದು ಅಗತ್ಯ. ಬೆಳಕಿನಲ್ಲಿ ಮೂಲಭೂತವಾಗಿ ಇರುವುದು ಮೂರೇ ಬಣ್ಣಗಳು. ಅವುಗಳು – ಕೆಂಪು, ಹಸಿರು ಮತ್ತು ನೀಲಿ. ಈ ಬಣ್ಣಗಳನ್ನು ಬೇರೆ ಬೇರೆ ಪ್ರಮಾಣದಲ್ಲಿ ಮಿಶ್ರ ಮಾಡಿ ಲಕ್ಷಗಟ್ಟಲೆ ಬಣ್ಣಗಳನ್ನು ಗಣಕದ ಪರದೆಯ ಮೂಲೆ ಮೂಡಿಸಲಾಗುತ್ತದೆ. ವಾಸನೆಯಲ್ಲೂ ಕೆಲವು ಮೂಲಭೂತ ವಾಸನೆಗಳು ಮತ್ತು ಮಿಶ್ರಣದಿಂದ ಸೃಷ್ಟಿಸಲ್ಪಟ್ಟ ವಾಸನೆಗಳು ಇವೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ಈ ಸಿದ್ಧಾಂತವನ್ನು ಡಿಜಿಸೆಂಟ್‌ನವರು  ತಮ್ಮ ಐಸ್ಮೆಲ್‌ನಲ್ಲಿ ಬಳಸಿದ್ದರು. ಮೂಲಭೂತವಾದ ವಾಸನೆಗಳನ್ನು ಹೊರಹೊಮ್ಮಿಸುವ ಸುಮಾರು 128 ವಸ್ತುಗಳನ್ನು ಅವರು ಈ ಸಾಧನದಲ್ಲಿ ಅಳವಡಿಸಿದ್ದರು. ಗಣಕದಿಂದ ಬಂದ ಆದೇಶಕ್ಕೆ ಅನುಗುಣವಾಗಿ ಈ ಸಾಧನವು ಆ ವಸ್ತುಗಳನ್ನು ಬೇಕಾದ ಪ್ರಮಾಣದಲ್ಲಿ ಹೊರಸೂಸುತ್ತದೆ. ಇದರಿಂದ ನಮಗೆ ವಾಸನೆಯ ಗ್ರಹಿಕೆ ಆಗುತ್ತದೆ.

ಕಾಲ್ಪನಿಕ ಚಿತ್ರ

ಮೊತ್ತಮೊದಲಿಗೆ ಈ ನಮೂನೆಯ ತಂತ್ರಜ್ಞಾನ ಬಂದುದು ಸಿನಿಮಾಗಳಿಗೆ. ಒಂದು ಸಿನಿಮಾದಲ್ಲಿ ಬೇರೆ ಬೇರೆ ದೃಶ್ಯಗಳು ಬಂದಾಗ ಆಯಾ ದೃಶ್ಯಕ್ಕೆ ಸಂಬಂಧಿಸಿದ ವಾಸನೆಯನ್ನು ಥಿಯೋಟರಿನೊಳಗೆ ಹರಿಬಿಡಲಾಯಿತು. ಸಿನಿಮಾದಲ್ಲಿ ಒಬ್ಬಾತ ಮೀನು ಸುಟ್ಟು ತಿನ್ನುತ್ತಿರುವ ದೃಶ್ಯ ಬಂದಾಗ ಸುಟ್ಟ ಮೀನಿನ ವಾಸನೆ ಥಿಯೇಟರನ್ನು ತುಂಬಿತ್ತು. ಇದು ಜನಪ್ರಿಯವಾಗಲಿಲ್ಲ. ಥಿಯೇಟರಿನ ಹಿಂದಿನ ಸಾಲುಗಳಲ್ಲಿ ಕುಳಿತವರಿಗೆ ವಾಸನೆ ತಲುಪುವಾಗ ತಡವಾಗುತ್ತಿತ್ತು. ಪರದೆಯಲ್ಲಿ ದೃಶ್ಯ ಬಂದು ಹೋಗಿ ಸ್ವಲ್ಪ ಹೊತ್ತಾದ ನಂತರ ಆ ವಾಸನೆ ಅವರನ್ನು ತಲುಪುತ್ತಿತ್ತು. ಅಂತೂ ವಾಸನಾಭರಿತ ಸಿನಿಮಾ ಜಯಶಾಲಿಯಾಗಲಿಲ್ಲ.

ವಿದ್ಯುನ್ಮಾನ ವ್ಯಾಪಾರ ಅಂದರೆ ಇ-ಕಾಮರ್ಸ್‌ನಲ್ಲಿ ಈ ಡಿಜಿಟಲ್ ವಾಸನೆಯ ತಂತ್ರಜ್ಞಾನ ಸರಿಯಾಗಿ ಬಂದರೆ ಅದು ಒಂದು ಕ್ರಾಂತಿಯನ್ನೇ ಮಾಡಬಲ್ಲುದು. ನಾವು ಕೊಳ್ಳುವ ವಸ್ತುಗಳ ವಾಸನೆಯನ್ನು ನಾವು ಪರದೆಯಲ್ಲೇ ಗ್ರಹಿಸಿ ಅದನ್ನು ಕೊಳ್ಳಬೇಕೇ ಬೇಡವೇ ಎಂದು ತೀರ್ಮಾನಿಸಬಹುದು. ಇದು ಆಹಾರ, ಸೌಂದರ್ಯವರ್ಧಕಗಳು, ಸುಗಂಧ ದ್ರವ್ಯಗಳು, ಮಸಾಲೆ ಪುಡಿ, ಔಷಧ, ಪಾನೀಯಗಳು, ಹೀಗೆ ಹಲವು ವಸ್ತುಗಳ ಮಾರಾಟದಲ್ಲಿ ಪ್ರಯೋಜನಕಾರಿ. ಒಂದು ರೆಸ್ಟಾರೆಂಟ್ ತನ್ನ ಆಹಾರಗಳ ಮೆನು ಜೊತೆ ಅವುಗಳ ವಾಸನೆಯನ್ನೂ ವೀಕ್ಷಕನಿಗೆ ಪರದೆಯ ಮೂಲಕ ತಲುಪಿಸಿದರೆ ಆತನ ವ್ಯಪಾರ ತುಂಬ ಜಾಸ್ತಿಯಾಗಬಲ್ಲುದು.  ಗಣಕದಲ್ಲಿ ಆಟಗಳನ್ನು ಆಡುವಾಗಲೂ ಈ ತಂತ್ರಜ್ಞಾನವು ಹೆಚ್ಚಿನ ಒಂದು ಅನುಭವವನ್ನು ನೀಡಬಲ್ಲುದು. ಆಟದಲ್ಲಿ ಆಡುವಾತ ಕೊಚ್ಚೆ, ಗಲೀಜು ನೀರಿನ ಚರಂಡಿಯನ್ನು ದಾಟಬೇಕಾಗಿದೆ ಎಂದಿಟ್ಟುಕೊಳ್ಳಿ. ಆ ದೃಶ್ಯ ಬಂದಾಗ ಪರದೆಯಿಂದ ಚರಂಡಿಯ ವಾಸನೆ ಬಂದರೆ ಆಟ ಆಡುವ ಅನುಭವ ಪರಿಪೂರ್ಣವಾಗುತ್ತದೆ. ಈಗ ಬಳಕೆಯಲ್ಲಿರುವ ಮಿಥ್ಯಾವಾಸ್ತವ ತಂತ್ರಜ್ಞಾನಕ್ಕೆ (virtual reality) ಇದು ಪೂರಕವಾಗಬಲ್ಲುದು.

ಐಸ್ಮೆಲ್‌ನಲ್ಲಿ ಪರದೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ವಾಸನೆಯನ್ನು ಸೂಸುವ ಸಾಧನಗಳನ್ನು ಅಳವಡಿಸಲಾಗಿತ್ತು. ಈ ಸಾಧನವು ಗಣಕದ ಆದೇಶದಂತೆ ಬೇರೆ ಬೇರೆ ವಾಸನೆಗಳನ್ನು ಸೂಸುತ್ತಿತ್ತು. ಈ ವಾಸನೆಗಳನ್ನು ಹೊರ ಸೂಸಲು ಅನಿಲಗಳನ್ನು ಬಳಸಲಾಗುತ್ತಿತ್ತು. ಈ ಸಾಧನವು ಒಂದು ಸ್ಪೀಕರಿನಷ್ಟು ದೊಡ್ಡದಿದ್ದು ಗಣಕಕ್ಕೆ ಯುಎಸ್‌ಬಿ ಕಿಂಡಿ ಮೂಲಕ ಜೋಡಣೆಯಗುತ್ತಿತ್ತು. ಇಂಕ್ ಜೆಟ್ ಪ್ರಿಂಟರಿನಲ್ಲಿ ಚಿಕ್ಕ ನೋಝಲ್ ಮೂಲಕ ಶಾಯಿ ಹೊರ ಸೂಸಿ ಕಾಗದದ ಮೇಲೆ ಚಿಮ್ಮಿ ಅಕ್ಷರ, ಚಿತ್ರಗಳನ್ನು ಮೂಡಿಸುತ್ತದೆ. ಈ ಐಸ್ಮೆಲ್ ಸಾಧನದಲ್ಲೂ ಚಿಕ್ಕ ಚಿಕ್ಕ ನೋಝಲ್ ಮೂಲಕ ವಾಸನೆಯನ್ನು ಸೃಷ್ಟಿಸುವ ರಾಸಾಯನಿಕ ಅನಿಲಗಳು ಹೊರಸೂಸುತ್ತಿದ್ದವು. ಮೂಲಭೂತ ವಾಸನೆಗಳನ್ನು ಸೃಷ್ಟಿಸುವ 128 ಬೇರೆ ಬೇರೆ ರಾಸಾಯನಿಕಗಳು ಐಸ್ಮೆಲ್ ಒಳಗೆ ಸಂಗ್ರಹವಾಗಿದ್ದವು. ಇವುಗಳ ಬೇರೆ ಬೇರೆ ಪ್ರಮಾಣದ ಮಿಶ್ರಣವು ಬೇರೆ ಬೇರೆ ವಾಸೆಗಳನ್ನು ಸೃಷ್ಟಿ ಮಾಡುತ್ತಿದ್ದವು. ನಾವು ಸಹಸ್ರಾರು ನಮೂನೆಯ ವಾಸನೆಗಳನ್ನು ಗ್ರಹಿಸಬಲ್ಲೆವು ಹಾಗೂ ಅವುಗಳನ್ನು ಯಾವು ಯಾವುದು ಎಂದು ಗುರುತಿಸಬಲ್ಲೆವು. ಆದರೆ ಐಸ್ಮೆಲ್ ಸಾಧನದಲ್ಲಿ ಮೂಲಭೂತವಾಗಿ 128 ರಾಸಾಯನಿಕಗಳಿದ್ದವು. ಅವುಗಳ ಮಿಶ್ರಣದಿಂದ ಸುಮಾರು 2000 ದಷ್ಟು ಬೇರೆ ಬೇರೆ ವಾಸನೆಗಳನ್ನು ಸೃಷ್ಟಿಸಬಹುದಾಗಿತ್ತು. ಆದರೂ ಅದು ಮಾನವನು ಗ್ರಹಿಸಬಲ್ಲ ವಾಸನೆಗಳಿಗೆ ಹೋಲಿಸಿದರೆ ಅತಿ ಚಿಕ್ಕ ಸಂಖ್ಯೆಯಾಗಿತ್ತು. ಹಾಗಿದ್ದರೂ ಅದೇನೂ ಚಿಕ್ಕ ಸಾಧನೆಯಾಗಿರಲಿಲ್ಲ.

ಹಲವು ಕಾರಣಗಳಿಂದ ಡಿಜಿಸೆಂಟ್ ಟೆಕ್ನಾಲೋಜಿ ಕಂಪೆನಿ ಜಯ ಸಾಧಿಸಲಿಲ್ಲ ಹಾಗೂ ಐಸ್ಮೆಲ್ ಸಾಧನವು ಮಾರುಕಟ್ಟೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಬರಲಿಲ್ಲ. ಆದರೆ ಈ ಸಿದ್ಧಾಂತವನ್ನು ಬಳಸಿ ಬೇರೆ ಯಾರಾದರೂ ಇನ್ನೊಮ್ಮೆ ಪ್ರಯತ್ನಿಸಿ ಜಯಶಾಲಿಯಾಗುವ ಸಾಧ್ಯತೆಗಳಿವೆ.

–ಡಾ| ಯು.ಬಿ. ಪವನಜ

gadgetloka @ gmail . com

The post ಡಿಜಿಟಲ್ ವಾಸನೆ first appeared on Vishva Kannada.

ಚತುರ ಮನೆ
ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ಸಾಲು ಕೇಳಿರಬಹುದು. ಮನೆಯ ಯಜಮಾನ ಎಲ್ಲಿಗೋ ಹೋಗಿ ಕಸ ಗುಡಿಸದೆ ಮನೆಯೆಲ್ಲ ಗಲೀಜಾದಾಗ ಈ ಸಾಲಿನ ಬಳಕೆಯಾಗುತ್ತದೆ. ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನೆಯೊಳಗಡೆ ಮನೆಯೊಡೆಯನಿಲ್ಲದಿದ್ದರೂ ಮನೆಯನ್ನು ಸದಾ ಸ್ವಚ್ಛವಾಗಿಟ್ಟು, ರಾತ್ರಿ ದೀಪ ಹಚ್ಚಿ, ಹಗಲು ದೀಪ ಆರಿಸಿ, ಮನೆಯೊಳಗೆ ಮನೆಯೊಡೆಯನಿದ್ದಾನೆ ಎಂಬ ಭಾವನೆ ಮೂಡುವಂತೆ ಮಾಡಬಲ್ಲ ಚತುರ ಮನೆಗಳಿವೆ. ಇವುಗಳನ್ನು ಇಂಗ್ಲಿಷಿನಲ್ಲಿ smart home ಎನ್ನುತ್ತಾರೆ. ಚತುರ ಮನೆ ಅಂದರೆ ಏನು? ಬನ್ನಿ ಈ ಸಂಚಿಕೆಯಲ್ಲಿ ಅದನ್ನು ತಿಳಿದುಕೊಳ್ಳೋಣ.

ಚತುರ ಮನೆ ಅಂದರೆ ಮೊಬೈಲ್ ಫೋನ್ ಅಥವಾ ಅಂತಹುದೇ ಅಂತರಜಾಲ ಸಂಪರ್ಕದಲ್ಲಿರುವ ಸಾಧನಗಳನ್ನು ಬಳಸಿ ಅಂತರಜಾಲದ ಮೂಲಕ ಎಲ್ಲಿಂದ ಬೇಕಾದರೂ ನಿಯಂತ್ರಿಸಬಹುದಾದ ಸಾಧನಗಳನ್ನು ಒಳಗೊಂಡ ಮನೆ. ಈ ರೀತಿ ನಿಯಂತ್ರಿಸಬಹುದಾದ ವಸ್ತುಗಳನ್ನೊಳಗೊಂಡ ಜಾಲಕ್ಕೆ ವಸ್ತುಗಳ ಅಂತರಜಾಲ (Internet of Things, IoT) ಎಂಬ ಹೆಸರೂ ಇದೆ. ಮನೆಯಲ್ಲಿ ಬಳಕೆಯಾಗುವ ವಸ್ತುಗಳ ಅಂತರಜಾಲದಲ್ಲಿ ಮನೆಯಲ್ಲಿ ಬಳಸುವ ಸುರಕ್ಷಾ ಸಾಧನಗಳು, ದಿನ ನಿತ್ಯ ಬಳಕೆಯ ಗೃಹೋಪಕರಣಗಳು, ಕ್ಯಾಮೆರಾ ಇತ್ಯಾದಿಗಳೆಲ್ಲ ಸೇರಿವೆ.

ಚತುರ ಮನೆಯಲ್ಲಿ ತಾಪಮಾನವನ್ನು ಮೊಬೈಲ್ ಸಾಧನದಿಂದ ಅಂತರಜಾಲದ ಮೂಲಕ ನಿಯಂತ್ರಿಸಬಹುದು. ಕಚೇರಿಯಲ್ಲಿರುವ ವ್ಯಕ್ತಿ ಅಲ್ಲಿಂದ ಹೊರಡುವ ಅರ್ಧ ಗಂಟೆ ಮೊದಲು ಮನೆಯ ಹವಾನಿಯಂತ್ರಕವನ್ನು ಆನ್ ಮಾಡಿ ಆತ ಮನೆಗೆ ತಲುಪುವ ಹೊತ್ತಿಗೆ ತನಗೆ ಬೇಕಾದ ತಾಪಮಾನದಲ್ಲಿರುವಂತೆ ಮಾಡಬಹುದು.  ಮನೆಯಲ್ಲಿರುವ ಕಸ ಗುಡಿಸುವ ಹಾಗೂ ನೆಲ ಒರಸುವ ಯಂತ್ರವನ್ನು ಕೂಡ ಇದೇ ರೀತಿ ಅಂತರಜಾಲದ ಮೂಲಕ ನಿಯಂತ್ರಿಸಬಹುದು. ಅದನ್ನು ಪ್ರಾರಂಭಿಸುವುದು, ನಿಲ್ಲಿಸುವುದು ಇತ್ಯಾದಿಗಳನ್ನು ಮಾಡಬಹುದು. ಮನೆಯಲ್ಲಿರುವ ಶೈತ್ಯಕದಲ್ಲಿ ಹಾಲು ಮುಗಿದಿದೆ ಎಂದು ಕಚೇರಿಯಲ್ಲಿರುವ ಮನೆಯೊಡೆಯನಿಗೆ ಅದು ಸಂದೇಶ ಕಳುಹಿಸುವ ಸೌಲಭ್ಯ ಇಂತಹ ಚತುರ ಮನೆಯಲ್ಲಿ ಅಡಕವಾಗಿದೆ.

ಚತುರ ಮನೆ (ಚಿತ್ರ : TP-Link Deutschland)

ಒಂದು ನಿಜವಾದ ಉದಾಹರಣೆ ನೋಡಿ. ಬೆಂಗಳೂರಿನಲ್ಲಿ ವೃದ್ಧ ಮಾತಾಪಿತರಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಗ ಅಮೇರಿಕದಲ್ಲಿದ್ದಾನೆ. ಮನೆಯಲ್ಲಿ ಬೇರೆ ಯಾರೂ ಇಲ್ಲ. ಆತ ಮನೆಯೊಳಗೆ ಕ್ಯಾಮೆರ ಅಳವಡಿಸಿದ್ದಾನೆ. ಈ ಕ್ಯಾಮೆರಗಳು ಅಂತರಜಾಲಕ್ಕೆ ಸಂಪರ್ಕ ಹೊಂದಿವೆ. ಮಗ ಅಮೆರಿಕದಲ್ಲಿ ಕುಳಿತೇ ತಂದೆ ತಾಯಿ ಏನು ಮಾಡುತ್ತಿದ್ದಾರೆ ಎಂದು ವೀಕ್ಷಿಸುತ್ತಿರುತ್ತಾನೆ. ಒಂದು ದಿನ ಆತನ ತಂದೆ ತಲೆಸುತ್ತು ಬಂದು ಬಿದ್ದಿದ್ದಾರೆ. ಮಗ ಅಮೆರಿಕದಿಂದ ಅದನ್ನು ಕ್ಯಾಮೆರ ಮೂಲಕ ನೋಡಿದ್ದಾನೆ. ತಕ್ಷಣ ಪಕ್ಕದ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿ ಅವರು ಆತನ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಇದು ನಿಜವಾಗಿ ನಡೆದ ಕಥೆ.

ಅಂತರಜಾಲದ ಮೂಲಕ ಸಂಪರ್ಕಗೊಂಡ ಕ್ಯಾಮೆರದ ಉಪಯೋಗದ ಇನ್ನೊಂದು ಕಥೆ ಕೇಳಿ. ಇದೂ ಸ್ವಲ್ಪ ಮೇಲಿನ ಕಥೆಯ ನಮೂನೆಯೇ. ಆದರೆ ವ್ಯತ್ಯಾಸ ಎಂದರೆ ಮನೆಯಲ್ಲಿ ಯಾರೂ ಇಲ್ಲ. ಮನೆಯಲ್ಲಿ ಕ್ಯಾಮೆರ ಅಳವಡಿಸಿ ಆತ ಅಮೆರಿಕದಲ್ಲಿ ಇದ್ದಾನೆ. ಈ ಕ್ಯಾಮೆರ ಅಂತರಜಾಲಕ್ಕೆ ಸಂಪರ್ಕಗೊಂಡಿದೆ. ಅದು ಚಲನೆಯನ್ನು ಗುರುತಿಸಿ ಕಾರ್ಯಮುಖವಾಗಿ ಎಚ್ಚರಿಸುವ ಕ್ಯಾಮೆರ (motion sensitive camera). ಒಂದು ದಿನ ರಾತ್ರಿ ಮನೆಯೊಳಗೆ ಕಳ್ಳ ನುಸುಳಿದ್ದಾನೆ. ಕ್ಯಾಮೆರ ಅದನ್ನು ಪತ್ತೆ ಹಚ್ಚಿ ಅಮೆರಿಕದಲ್ಲಿರುವ ಮನೆಯೊಡೆಯನಿಗೆ ಎಚ್ಚರಿಸುತ್ತದೆ. ಆತ ಪಕ್ಕದ ಮನೆಯವರಿಗೂ ಆತನ ಮನೆಯ ವ್ಯಾಪ್ತಿಯ ಪೋಲೀಸ್ ಠಾಣೆಗೂ ತಿಳಿಸುತ್ತಾನೆ. ಪೋಲಿಸರು ಬಂದು ಕಳ್ಳನನ್ನು ಬಂಧಿಸುತ್ತಾರೆ. ಇದು ಕೂಡ ನಿಜ ಘಟನೆಯೇ.

ಚತುರಮನೆಯ ಕೇಂದ್ರ ಸ್ಥಾನದಲ್ಲಿ ಅಂತರಜಾಲಕ್ಕೆ ಸಂಪರ್ಕಗೊಂಡ ಒಂದು ಚತುರವಾಣಿ (smartphone) ಇರುತ್ತದೆ. ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಅಥವಾ ಗಣಕವೂ ಆಗಬಹುದು. ಸ್ಮಾರ್ಟ್‌ಫೋನ್ ಆದರೆ ಕೈಯಲ್ಲೆ ಇರುತ್ತದೆ. ನೀವು ರಸ್ತೆಯಲ್ಲಿದ್ದರೂ ಬಳಸಬಹುದು. ಮನೆಯಲ್ಲಿರುವ ಎಲ್ಲ ವಸ್ತುಗಳು ಅದರ ನಿಯಂತ್ರಣದಲ್ಲಿರುತ್ತವೆ. ಗೂಗ್ಲ್ ಹೋಂ, ಅಮೆಝಾನ್ ಅಲೆಕ್ಸಾ ಮಾದರಿಯ ತಂತ್ರಾಂಶಗಳ ಬಳಕೆ ಮಾಡಲಾಗುತ್ತದೆ. ನೀವು ಒಂದು ಕೋಣೆಯೊಳಗೆ ಪ್ರವೇಶ ಮಾಡಿದಾಗ ಅಲ್ಲಿಯ ದೀಪ ಉರಿಯುವುದು, ಹೊರಗೆ ಬಂದಾಗ ಅದು ಆರಿ ಹೋಗುವುದು, ಮಾಳಿಗೆಗೆ ಹೋಗುವ ಮೆಟ್ಟಿಲುಗಳಿಗೂ ಹೀಗೆಯೇ, ದೀಪಗಳನ್ನು ಆರಿಸುವುದು, ಉರಿಸುವುದು, ಸಂಗೀತ ನುಡಿಸುವುದು, ಇತ್ಯಾದಿಗಳನ್ನೆಲ್ಲ ಧ್ವನಿಯಲ್ಲೇ ಅಪ್ಪಣೆ ನೀಡಿ ಮಾಡಿಸಿಕೊಳ್ಳಬಹುದು. ಉದಾಹರಣೆಗೆ “ಅಲೆಕ್ಸಾ, ಪ್ಲೇ ಧರಣಿ ಮಂಡಲ ಮಧ್ಯದೊಳಗೆ” ಎಂದು ಹೇಳಿದರೆ ತಬ್ಬಲಿಯು ನೀನಾದೆ ಮಗನೆ ಸಿನಿಮಾಕ್ಕಾಗಿ ಪಿ.ಬಿ. ಶ್ರೀನಿವಾಸ್, ಬಿ.ಕೆ. ಸುಮಿತ್ರ ಮತ್ತು ವಿದ್ಯಾರಾಣಿ ಹಾಡಿದ ಹಾಡನ್ನು ಅದು ಪ್ಲೇ ಮಾಡುತ್ತದೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ವೆಂಕಟೇಶ ಸುಪ್ರಭಾತ ಬೇಕಿದ್ದರೆ ಹಾಗೆಂದು ಆಯ್ಕೆ ಮಾಡಿಟ್ಟುಕೊಳ್ಳಬಹುದು. ಪ್ರತಿದಿನ ಸಾಯಂಕಾಲ 5:00 ಗಂಟೆಗೆ ದೀಪ ಹಚ್ಚಬೇಕು ಎಂದು ಆಯ್ಕೆ ಮಾಡಿಟ್ಟುಕೊಳ್ಳಬಹುದು.

ಈ ಎಲ್ಲ ಆಯ್ಕೆಗಳನ್ನು ಬಳಸಲು ನೀವು ಗೂಗ್ಲ್ ಹೋಂ ಅಥವಾ ಅಮೆಜಾನ್ ಅಲೆಕ್ಸ ಬಳಸಬೇಕು. ಸಂಗೀತಕ್ಕಾಗಿ ಸ್ಪಾಟಿಫೈಗೆ ಚಂದಾದಾರರಾದರೆ ಉತ್ತಮ. ಅಂತರಜಾಲದಲ್ಲಿ ಇರುವ ಹಲವಾರು ಸೇವೆ, ಸಂಗೀತ, ಪುಸ್ತಕ ಮಳಿಗೆಗಳಿಗೆ ಚಂದಾದಾರರಾದರೆ ಉತ್ತಮ. ಆಗ ಎಲ್ಲವನ್ನು ಧ್ವನಿಯ ಮೂಲಕವೇ ಪಡೆದುಕೊಳ್ಳಬಹುದು. ಅದಕ್ಕಾಗಿ ನಿಮ್ಮ ಮನೆಯ ಟಿವಿ ಕೂಡ ಸ್ಮಾರ್ಟ್‌ಟಿವಿ ಆಗಿರಬೇಕು. ಅದೂ ಅಂತರಜಾಲಕ್ಕೆ ಸಂಪರ್ಕ ಹೊಂದಿರಬೇಕು.

ಮನೆಯ ಕಿಟಿಕಿ, ಮುಖ್ಯ ಬಾಗಿಲು, ಕಾಂಪೌಂಡ್ ಗೇಟುಗಳನ್ನೂ ವಸ್ತುಗಳ ಅಂತರಜಾಲಕ್ಕೆ ಸೇರಿಸಬಹುದು. ಕಾರಿನಲ್ಲಿ ಮನೆಗೆ ಬರುವಾಗ, ಮನೆ ಹತ್ತಿರ ಬರುತ್ತಿದ್ದಂತೆ ಸ್ಮಾರ್ಟ್‌ಫೋನ್ ಮೂಲಕ ಕಾಂಪೌಂಡ್ ಗೇಟು ತೆರೆಯಬಹುದು. ಕಾರು ಒಳ ಹೋಗುತ್ತಿದ್ದಂತೆ ಅದನ್ನು ಮುಚ್ಚಬಹುದು. ನಾಯಿಯ ಗೂಡಿನ ಗೇಟನ್ನು ಬೇಕಿದ್ದರೆ ನಿಯಮಿತ ಸಮಯಕ್ಕೆ ತೆರೆಯುವುದು ಮಾಡಬಹುದು.

ಒಟ್ಟಿನಲ್ಲಿ ಎಲ್ಲವೂ ಬುದ್ಧಿವಂತ ಸಾಧನಗಳಾದರೆ ಮನೆಯೇ ಬುದ್ಧಿವಂತ ಆಗುತ್ತದೆ!

–ಡಾ| ಯು.ಬಿ. ಪವನಜ

gadgetloka @ gmail . com

The post ಚತುರ ಮನೆ first appeared on Vishva Kannada.

ಘನಸ್ಥಿತಿಯ ಬ್ಯಾಟರಿ
ಭಾರಿ ಬ್ಯಾಟರಿ

ಬ್ಯಾಟರಿಗಳು ಎಲ್ಲ ವಿದ್ಯುತ್ ಚಾಲಿತ ಸಾಧನಗಳಿಗೂ ಬೇಕು. ಬ್ಯಾಟರಿಗಳಲ್ಲಿ ಹಲವಾರು ನಮೂನೆಗಳಿವೆ. ಬ್ಯಾಟರಿಯನ್ನು ಬ್ಯಾಟರಿ ಸೆಲ್ ಎನ್ನುವುದೇ ಸರಿಯಾದ ವೈಜ್ಞಾನಿಕ ವಿಧಾನ. ಬ್ಯಾಟರಿ ಸೆಲ್‌ಗಳ ಜೋಡಣೆಯೇ ಬ್ಯಾಟರಿ. ಆದರೆ ಬಳಕೆಯಲ್ಲಿ ಬ್ಯಾಟರಿ ಎಂದೇ ಬಂದುಬಿಟ್ಟಿದೆ. ಇರಲಿ. ಬ್ಯಾಟರಿಯ ಪ್ರಮುಖ ಅಂಗಗಳು ಮೂರು -ಋಣ ಮತ್ತು ಧನ ಇಲೆಕ್ಟ್ರೋಡ್‌ಗಳು ಮತ್ತು ಅವುಗಳ ಮಧ್ಯದಲ್ಲಿರುವ ದ್ರಾವಣ ಇಲೆಕ್ಟ್ರೋಲೈಟ್. ಲಿತಿಯಂ ಬ್ಯಾಟರಿಯಿರಲಿ, ಲೆಡ್ ಆಸಿಡ್ ಬ್ಯಾಟರಿಯಿರಲಿ, ಈ ಇಲೆಕ್ಟ್ರೋಲೈಟ್ ಸಾಮಾನ್ಯವಾಗಿ ದ್ರವವಾಗಿರುತ್ತದೆ. ನಿಮ್ಮ ಟಾರ್ಚ್‌ಗಳಲ್ಲಿ ಬಳಸುವ ಬ್ಯಾಟರಿ ಮಾತ್ರ ಡ್ರೈ ಸೆಲ್ ಆಗಿರುತ್ತದೆ. ಅಂದರೆ ಅದರ ಇಲೆಕ್ಟ್ರೋಲೈಟ್ ದ್ರವ ಅಲ್ಲ. ಬದಲಿಗೆ ಘನ ಆಗಿರುತ್ತದೆ.

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವ ಬ್ಯಾಟರಿ ಲಿತಿಯಂ ಬ್ಯಾಟರಿಯಾಗಿರುತ್ತದೆ. ಇದರ ಇಲೆಕ್ಟ್ರೋಲೈಟ್ ಕೂಡ ದ್ರವವೇ ಆಗಿದೆ. ಇತ್ತೀಚೆಗೆ ನೀವು ಗಮನಿಸಿರಬಹುದಾದ ಒಂದು ಅಂಶ ಎಂದರೆ ಅತಿ ವೇಗವಾಗಿ ಚಾರ್ಜ್ ಮಾಡುವ ಸೌಲಭ್ಯ. ಹಲವು ಫೋನ್‌ಗಳಲ್ಲಿ ಈ ಸೌಲಭ್ಯವಿದೆ. ಬ್ಯಾಟರಿಯನ್ನು ಸೊನ್ನೆಯಿಂದ ಸುಮಾರು 80% ತನಕ ಅತಿ ವೇಗವಾಗಿ ಅಂದರೆ 30 ರಿಂದ 45 ನಿಮಿಷಗಳ ಒಳಗೆ ಚಾರ್ಜ್ ಮಾಡಬಹುದಾಗಿದೆ. ಬೇರೆ ಬೇರೆ ಫೋನ್‌ಗಳಲ್ಲಿ ಈ ಸಮಯ ಸ್ವಲ್ಪ ಆಚೀಚೆ ಆಗಬಹುದು.

ಪೆಟ್ರೋಲ್ ಅಥವಾ ಡೀಸಿಲ್ ಇಂಧನದಿಂದ  ಕೆಲಸ ಮಾಡುವ ವಾಹನಗಳು ನಿಮಗೆ ಗೊತ್ತು. ಈ ವಾಹನಗಳು ಪರಿಸರಕ್ಕೆ ಮಾರಕ. ಇದಕ್ಕೆ ಪರಿಹಾರವಾಗಿ ವಿದ್ಯುತ್ ಚಾಲಿತ ವಾಹನಗಳು ಮಾರುಕಟ್ಟೆಗೆ ಬರತೊಡಗಿವೆ. ಈ ವಾಹನಗಳಲ್ಲಿ ನೀವು ಈಗಾಗಲೇ ಊಹಿಸಿರುವಂತೆ ಬ್ಯಾಟರಿಗಳಿವೆ. ಇವು ಪರಿಸರಕ್ಕೆ ಮಾರಕವಲ್ಲ. ಯಾಕೆಂದರೆ ಅವು ಹೊಗೆ ಸೂಸುವುದಿಲ್ಲ. ಈ ಬ್ಯಾಟರಿ ಚಾಲಿತ ವಾಹನಗಳ ಬಹು ದೊಡ್ಡ ಸಮಸ್ಯೆ ಎಂದರೆ ಅವುಗಳ ಬ್ಯಾಟರಿಗಳು. ಅವುಗಳನ್ನು ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಅವು ಚಲಿಸಬಲ್ಲ ದೂರದ ವ್ಯಾಪ್ತಿ ತುಂಬ ಇಲ್ಲ. ಸ್ಕೂಟರ್ ಆದರೆ ಸುಮಾರು 80 ರಿಂದ 100 ಕಿ.ಮೀ. ಕಾರು ಆದರೆ ಗರಿಷ್ಠ 300-550 ಕಿ.ಮೀ. ಸಾಗಬಹುದು. ನಂತರ ಬ್ಯಾಟರಿ ಚಾರ್ಜ್ ಮಾಡಬೇಕಾಗುತ್ತದೆ. ಬ್ಯಾಟರಿ ಪೂರ್ತಿ ಚಾರ್ಜ್ ಮಾಡಲು ಸುಮಾರು ಹತ್ತು ಗಂಟೆ ಹಿಡಿಯುತ್ತದೆ. ಫೋನ್‌ಗಳಲ್ಲಿ ಇರುವಂತೆ ಅತಿ ವೇಗವಾಗಿ ಅಂದರೆ ಸುಮಾರು 30-45 ನಿಮಿಷಗಳಲ್ಲಿ ಸುಮಾರು 80% ಚಾರ್ಜ್ ಮಾಡುವ ಸವಲತ್ತು ಈ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳಲ್ಲಿ ಇಲ್ಲ. ಇನ್ನೊಮ್ಮೆ ಚಾರ್ಜ್ ಮಾಡದೆ ತುಂಬ ದೂರ ಸಾಗಬೇಕು ಎಂದಾದಲ್ಲಿ ಬ್ಯಾಟರಿಯ ಸಂಗ್ರಹ ಶಕ್ತಿ ಜಾಸ್ತಿ ಇರಬೇಕು. ಸಂಗ್ರಹ ಶಕ್ತಿ ಜಾಸ್ತಿ ಆದಂತೆ ಬ್ಯಾಟರಿಯ ಗಾತ್ರವೂ ಜಾಸ್ತಿಯಾಗುತ್ತದೆ. ಎಂಬಲ್ಲಿಗೆ ಎರಡು ಪ್ರಮುಖ ಸಮಸ್ಯೆಗಳು ಬ್ಯಾಟರಿ ಚಾಲಿತ ವಾಹನಗಳ ಬ್ಯಾಟರಿಗಳಿವೆ. ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಜಗತ್ತಿನಾದ್ಯಂತ ವಾಹನ ಕಂಪೆನಿಗಳು, ವಿಜ್ಞಾನಿಗಳು ಹಗಲಿರುಳು ಪರಿಶ್ರಮ ಪಡುತ್ತಿದ್ದಾರೆ. ಅಂದರೆ ಕಡಿಮೆ ಗಾತ್ರದ ಬ್ಯಾಟರಿ ಆಗಿರಬೇಕು ಹಾಗೂ ಅತಿ ವೇಗವಾಗಿ ಚಾರ್ಜ್ ಆಗಬೇಕು. ಅದರ ಪರಿಣಾಮ ಘನಸ್ಥಿತಿಯ ಬ್ಯಾಟರಿಗಳ ಆವಿಷ್ಕಾರ. ಹಾಗೆಂದರೇನು ಎಂದು ಈಗ ತಿಳಿಯೋಣ.

ಘನ ಬ್ಯಾಟರಿಯ ಕಾಲ್ಪನಿಕ ಚಿತ್ರ

ಮೊದಲನೆಯದಾಗಿ ರಿಚಾರ್ಜೇಬಲ್ ಬ್ಯಾಟರಿ ಬಗ್ಗೆ ತಿಳಿಯೋಣ. ಇವುಗಳನ್ನು ಲಿತಿಯಂ ಐಯಾನ್ ಬ್ಯಾಟರಿ ಎಂದೂ ಕರೆಯುತ್ತಾರೆ. ಇವುಗಳನ್ನು ಚಾರ್ಜ್ ಮಾಡಬಹುದು. ಅದರ ಚಾರ್ಜ್ ಮುಗಿದಾಗ ಮತ್ತೆ ಚಾರ್ಜ್ ಮಾಡಬಹುದು. ಎಲ್ಲ ಬ್ಯಾಟರಿಗಳಂತೆ ಇದರಲ್ಲೂ ಋಣ ಮತ್ತು ಧನ ಧ್ರುವಗಳಿವೆ. ಇವುಗಳಿಗೆ ಇಲೆಕ್ಟ್ರೋಡ್‌ಗಳು ಎನ್ನುತ್ತಾರೆ. ಇವು ಲೋಹಗಳಿಂದ ಮಾಡಲ್ಪಟ್ಟಿರುತ್ತವೆ. ಈ ಇಲೆಕ್ಟ್ರೋಡ್‌ಗಳ ಮಧ್ಯೆ ಇಲೆಕ್ಟ್ರೋಲೈಟ್ ದ್ರವ ಇರುತ್ತದೆ. ಲಿತಿಯಂ ಐಯಾನ್ ಬ್ಯಾಟರಿಯಲ್ಲಿರುವ ದ್ರವ ಇಲೆಕ್ಟ್ರೋಲೈಟ್ ಮತ್ತೆ ಮತ್ತೆ ಚಾರ್ಜ್, ಡಿಸ್ಚಾರ್ಜ್, ಆಗುವುದುರಿಂದ ಬಿಸಿಯಾಗುತ್ತದೆ. ತುಂಬ ಸಲ ಹಾಗೆ ಆದ ನಂತರ ಅದರ ಗಾತ್ರ ಹೆಚ್ಚಾಗುತ್ತದೆ. ಆಗ ಬ್ಯಾಟರಿ ಉಬ್ಬುತ್ತದೆ. ಇದನ್ನು ನೀವು ಹಲವು ಫೋನ್‌ಗಳಲ್ಲಿ ಗಮನಿಸಿರಬಹುದು. ಬ್ಯಾಟರಿ ಚಾರ್ಜ್ ಆಗುವಾಗ ಅದು ಬಿಸಿಯೂ ಆಗುತ್ತದೆ. ತುಂಬ ಬಿಸಿ ಆದರೆ ಕೆಲವೊಮ್ಮೆ ಸ್ಫೋಟ ಆದ ಉದಾಹರಣೆಗಳೂ ಇವೆ. ಲಿತಿಯಂ ಐಯಾನ್ ಬ್ಯಾಟರಿಗಳನ್ನು ಎಷ್ಟು ಸಲ ಚಾರ್ಜ್ ಮಾಡಬಹುದು ಎಂಬುದಕ್ಕೂ ಮಿತಿಯಿದೆ. ಲಿತಿಯಂ ಐಯಾನ್ ಬ್ಯಾಟರಿಯ ಸಂಗ್ರಹಶಕ್ತಿಯೂ ಕಡಿಮೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೇ ಘನಸ್ಥಿತಿಯ  ಇಲೆಕ್ಟ್ರೋಲೈಟ್ ಅನ್ನು ಬಳಸುವ ಬ್ಯಾಟರಿ. ಇಲೆಕ್ಟ್ರೋಲೈಟ್ ದ್ರವದ ಬದಲಿಗೆ ಘನ ವಸ್ತುವಾಗಿದ್ದಲ್ಲಿ ಅದನ್ನು ಘನಸ್ಥಿತಿಯ ಇಲೆಕ್ಟ್ರೋಲೈಟ್ (solid-state electrolyte) ಎನ್ನುತ್ತಾರೆ. ಇಂತಹ ಇಲೆಕ್ಟ್ರೋಲೈಟ್ ಅನ್ನು ಬಳಸುವ ಬ್ಯಾಟರಿಗಳಿಗೆ ಘನಸ್ಥಿತಿಯ ಬ್ಯಾಟರಿ (solid-state battery) ಎನ್ನುತ್ತಾರೆ.

ಈ ನಮೂನೆಯ ಬ್ಯಾಟರಿಯಲ್ಲಿ ಇಲೆಕ್ಟ್ರೋಡ್‌ಗಳು ತೆಳ್ಳನೆಯದಾಗಿರುತ್ತವೆ. ಅವುಗಳ ಮಧ್ಯೆ ತೆಳ್ಳನೆಯ ಪದರದ ರೂಪದಲ್ಲಿ ಘನಸ್ಥಿತಿಯ ಇಲೆಕ್ಟ್ರೋಲೈಟ್ ಇರುತ್ತದೆ. ಇಂತಹ ಬ್ಯಾಟರಿ ಸೆಲ್‌ಗಳನ್ನು ಅನುಕ್ರಮವಾಗಿ ಜೋಡಿಸಿದಾಗ ಅದು ಬ್ಯಾಟರಿ ಆಗುತ್ತದೆ. ಈ ನಮೂನೆಯ ಬ್ಯಾಟರಿಗಳ ಒಟ್ಟಾರೆ ಗಾತ್ರ ತುಂಬ ಕಡಿಮೆಯಾಗಿರುತ್ತದೆ, ಮಾತ್ರವಲ್ಲದೆ ಅವುಗಳ ಧಾರಣೆಯ ಶಕ್ತಿಯೂ ಹೆಚ್ಚಿರುತ್ತದೆ. ಘನಸ್ಥಿತಿಯ ಇಲೆಕ್ಟ್ರೋಲೈಟ್ ಅನ್ನು ಹಲವು ಬೇರೆ ಬೇರೆ ವಸ್ತುಗಳಿಂದ ವಿಜ್ಞಾನಿಗಳು ತಯಾರಿಸಿದ್ದಾರೆ ಮಾತ್ರವಲ್ಲ ಇನ್ನೂ ಹಲವು ನಮೂನೆಯ ವಸ್ತುಗಳನ್ನು ಬಳಸಿ ಪ್ರಯೋಗ ಮುಂದುವರೆದಿದೆ. ಘನಸ್ಥಿತಿಯ ಬ್ಯಾಟರಿಗಳ ಸಂಗ್ರಹ ಶಕ್ತಿ ಜಾಸ್ತಿ. ಅವುಗಳನ್ನು ಅತಿ ವೇಗವಾಗಿ ಚಾರ್ಜ್ ಮಾಡಬಹುದು. ಅವುಗಳನ್ನು ಲಿತಿಯಂ ಐಯಾನ್ ಬ್ಯಾಟರಿಗಳಿಗಿಂತ ಜಾಸ್ತಿ ಸಲ ಚಾರ್ಜ್ ಮಾಡಬಹುದು. ಈ ಎಲ್ಲ ಸಾಧಕಗಳನ್ನು ಗಮನಿಸಿದಾಗ ಈ ಘನಸ್ಥಿತಿಯ ಬ್ಯಾಟರಿಗಳನ್ನು ಭವಿಷ್ಯದ ಬ್ಯಾಟರಿ ಎನ್ನಬಹುದು.

–ಡಾ| ಯು.ಬಿ. ಪವನಜ

gadgetloka @ gmail . com

The post ಘನಸ್ಥಿತಿಯ ಬ್ಯಾಟರಿ first appeared on Vishva Kannada.

ವೇಪರ್‌ವೇರ್
ಆವಿಯಾದ ಯಂತ್ರಾಂಶ – ತಂತ್ರಾಂಶ

ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚು ಗುಣವೈಶಿಷ್ಟ್ಯಗಳನ್ನು ಒಳಗೊಂಡ ಒಂದು ಹೊಸ ಸಾಧನವನ್ನು ಅಥವಾ ಗ್ಯಾಜೆಟ್ ಅನ್ನು ಯಾವುದೋ ಒಂದು ಕಂಪೆನಿ ಘೋಷಿಸುತ್ತದೆ. ಎಲ್ಲರೂ ಅದಕ್ಕೆ ಕಾಯುತ್ತಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮುಂಗಡ ಬುಕಿಂಗ್ ಕೂಡ ಆಗಿರುತ್ತದೆ. ಅಂತಿಮವಾಗಿ ಆ ಉತ್ಪನ್ನ ಮಾರುಕಟ್ಟೆಗೆ ಬರುವುದೇ ಇಲ್ಲ. ಇಂತಹ ಹಲವು ಘಟನೆಗಳನ್ನು ಕಂಡಿರಬಹುದು, ಕೇಳಿರಬಹುದು ಅಥವಾ ಸ್ವತಃ ಅನುಭವಿಸಿರಬಹುದು. ಮಾಹಿತಿ ತಂತ್ರಜ್ಞಾನ ಕೇತ್ರದಲ್ಲಿ ಇಂತಹವುಗಳಿಗೆ vapourware ಎಂಬ ಹೆಸರಿದೆ. vapour ಅಂದರೆ ಆವಿ. ನೀಡಲು ಅಸಾಧ್ಯವಾದುದುನ್ನು ನೀಡುತ್ತೇನೆಂದು ಅತಿಯಾಗಿ ಆಸೆ ಹುಟ್ಟಿಸಿ ಕೊನೆಗೆ ಅದು ನಿಜವಾಗದೆ ಆವಿಯಾಗಿ ಹೋಗುವುದನ್ನು ವಿವರಿಸಲು ಈ ಪದವನ್ನು ಹುಟ್ಟುಹಾಕಲಾಗಿದೆ.

1982ರಲ್ಲಿ ಈ ಪದವನ್ನು ಮೊದಲ ಬಾರಿಗೆ ಬಳಸಲಾಯಿತು. ಮೈಕ್ರೋಸಾಫ್ಟ್ ಕಂಪೆನಿ ಕ್ಸೆನಿಕ್ಸ್ ಹೆಸರಿನ ಕಾರ್ಯಾಚರಣ ವ್ಯವಸ್ಥೆಯನ್ನು (operating system) ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿ ತಿಂಗಳು ವರ್ಷಗಳೇ ಕಳೆದರೂ ಅದು ಕಾಣಿಸದಿದ್ದಾಗ ಪತ್ರಕರ್ತರೊಬ್ಬರು ಈ ಪದವನ್ನು ಹುಟ್ಟುಹಾಕಿದ್ದರು. ಅನಂತರ ಮಾಹಿತಿ ತಂತ್ರಜ್ಞಾನದ ಬಗ್ಗೆ ಬರೆಯುವ ಹಲವು ಪತ್ರಿಕೆಗಳು ಈ ಪದವನ್ನು ಬಳಸತೊಡಗಿದವು. ವಯರ್‌ಡ್ ಹೆಸರಿನ ಜಾಲತಾಣವೊಂದು ಪ್ರತಿ ವರ್ಷ ವೇಪರ್‌ವೇರ್ ಅವಾರ್ಡ್ಸ್ ಹೆಸರಿನಲ್ಲಿ ಆಯಾ ವರ್ಷಗಳಲ್ಲಿ ತುಂಬ ಆಸೆ ಹುಟ್ಟಿಸಿ ಕೊನೆಗೆ ಮಾರುಕಟ್ಟೆಗೆ ಬಾರದ ತಂತ್ರಾಂಶ ಮತ್ತು ಯಂತ್ರಾಂಶಗಳ ಪಟ್ಟಿ ನೀಡುತ್ತ ಬಂದಿದೆ.

ಹೀಗೆ ಆಗುವುದು ಯಾಕೆ? ಅದಕ್ಕೆ ಹಲವು ಕಾರಣಗಳಿವೆ. ಮಾಹಿತಿ ತಂತ್ರಜ್ಞಾನದ ಒಂದು ಉತ್ಪನ್ನ, ಅದು ಯಂತ್ರಾಂಶ ಅಥವಾ ತಂತ್ರಾಂಶವಿರಬಹುದು, ಸಂಪೂರ್ಣವಾಗಿ ತಯಾರಾಗಿ, ಪರೀಕ್ಷೆಗಳನ್ನು ನಡೆಸಿ, ಅಂತಿಮವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಇಂತಿಷ್ಟು ಸಮಯ ಬೇಕು ಎಂದು ಅಂದಾಜಿಸಿ ಅದರ ಘೋಷಣೆ ಮಾಡಲಾಗುತ್ತದೆ. ಈ ಲೆಕ್ಕಾಚಾರ ತಪ್ಪಾದಾಗ ಅದು ಮಾರುಕಟ್ಟೆಗೆ ಹೇಳಿದ ಸಮಯಕ್ಕೆ ತಲುಪುವುದಿಲ್ಲ, ಅಥವಾ ಮೊದಲು ಹೇಳಿದ ಗುಣವೈಶಿಷ್ಟ್ಯಗಳಿರುವುದಿಲ್ಲ, ಅಥವಾ ಮೊದಲು ಹೇಳಿದ ಬೆಲೆಗೆ ದೊರೆಯುವುದಿಲ್ಲ. ಇನ್ನೊಂದು ಕಾರಣವೆಂದರೆ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಸುಧಾರಣೆಗಳು ಅತಿ ವೇಗವಾಗಿ ಆಗುತ್ತಿರುತ್ತವೆ. ಒಂದು ಉತ್ಪನ್ನದ ವಿನ್ಯಾಸ ಮತ್ತು ತಯಾರಿ ಅತಿ ದೀರ್ಘವಾಗಿದ್ದರೆ ಅದು ತಯಾರಾಗಿ ಮಾರುಕಟ್ಟೆಗೆ ಬಿಡುಗಡೆಗೆ ತಯಾರಾದಾಗ ಅದು ಆವಾಗಲೇ ಅಪ್ರಸ್ತುತವಾಗಿರುತ್ತದೆ. ಉತ್ಪನ್ನದ ಯೋಜನೆ ಮಾಡುವಾಗ ಈ ಎಲ್ಲ ಅಂಶಗಳನ್ನು ಪರಿಗಣಿಸದಿದ್ದಲ್ಲಿ ಇಂತಹ ತಪ್ಪುಗಳು ಆಗುತ್ತವೆ. ಇನ್ನೂ ಒಂದು ಕಾರಣವಿದೆ. ಅದು ಪ್ರಮುಖವಾದುದು. ಅದೇನೆಂದರೆ ಎಷ್ಟು ಬೆಲೆಗೆ ನೀಡಲು ಸಾಧ್ಯವೋ ಅದಕ್ಕಿಂತ ಅತಿ ಕಡಿಮೆ ಬೆಲೆಗೆ ನೀಡುತ್ತೇನೆ ಎಂದು ವಾಗ್ದಾನ ಮಾಡುವುದು. ಬಹುತೇಕ ವೇಪರ್‌ವೇರ್‌ಗಳು ಈ ವಿಭಾಗದಲ್ಲಿ ಬರುತ್ತವೆ.

ಈ ಸಂದರ್ಭದಲ್ಲಿ ಎರಡು ಭಾರತೀಯ ಉತ್ಪನ್ನಗಳ ಬಗ್ಗೆ ಬರೆಯುವುದು ಉಚಿತ ಎಂದು ಅನ್ನಿಸುತ್ತಿದೆ. ಅವುಗಳೇ ಸಿಂಪ್ಯೂಟರ್ ಮತ್ತು ಆಕಾಶ್ ಟ್ಯಾಬ್ಲೆಟ್. ಯಾರಿಗಾದರೂ ಈ ಎರಡು ಹೆಸರುಗಳನ್ನು ಕೇಳಿದ ನೆನಪಿದೆಯಾ?

ಮೊದಲಿಗೆ ಸಿಂಪ್ಯೂಟರ್ ಬಗ್ಗೆ ನೋಡೋಣ. ಇದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕೆಲವು ವಿಜ್ಞಾನಿಗಳು ಸೇರಿಕೊಂಡು ತಯಾರಿಸಿದ ಕಡಿಮೆ ಬೆಲೆಯ ಕಂಪ್ಯೂಟರ್. ಇದು 2002ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಂತು. ಆ ಕಾಲದಲ್ಲೇ ಅದರಲ್ಲಿ ಸ್ಪರ್ಶಪರದೆ (touch screen), ಕೈಬರಹದಲ್ಲಿ ಬರೆದುದನ್ನು ಪಠ್ಯಕ್ಕೆ ಪರಿವರ್ತಿಸಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ, ಯುಎಸ್‌ಬಿ ಕಿಂಡಿ, ಅವಕೆಂಪು (infrared) ಸಂವೇದಕ ಎಲ್ಲ ಇದ್ದವು. ಅದರಲ್ಲಿ ಅಕ್ಸೆಲೆರೋಮೀಟರ್ ಕೂಡ ಇತ್ತು. ಹಾಗಂದರೆ ಏನು?  ಸಿಂಪ್ಯೂಟರನ್ನು ತಿರುಗಿಸಿದಾಗ ಭೂಮಿಯ ಗುರುತ್ವಾಕರ್ಷಣೆಯನ್ನು ಬಳಸಿಕೊಂಡು ಯಾವಾಗಲೂ ಅದರ ಪರದೆಯಲ್ಲಿಯ ಪಠ್ಯ, ಚಿತ್ರಗಳು ಮೇಲ್ಮುಖವಾಗಿರುವಂತೆ ಮಾಡುತ್ತಿತ್ತು. ಇದೇನು ವಿಶೇಷ, ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇವೆಲ್ಲ ಇವೆ ಅನ್ನುತ್ತೀರಾ? ಈ ಸವಲತ್ತುಗಳನ್ನು ಸಿಂಪ್ಯೂಟರ್ ನೀಡಿದ್ದು 2002ನೆಯ ಇಸವಿಯಲ್ಲಿ. 6 ವರ್ಷಗಳ ನಂತರ ಐಫೋನ್ ಅಕ್ಸೆಲೆರೋಮೀಟರ್ ಅನ್ನು ಅಳವಡಿಸಿತ್ತು. ಸಿಂಪ್ಯೂಟರ್ ಭಾರತೀಯ ಪರಿಸ್ಥಿತಿಗೆ ಸರಿಹೊಂದುವಂತೆ ವಿನ್ಯಾಸ ಮಾಡಿದ್ದಾಗಿತ್ತು. ಹಳ್ಳಿಗಳಲ್ಲಿ ಕೈಯಲ್ಲಿ ಹಿಡಿದು ಮಾಹಿತಿ ಸಂಗ್ರಹಣೆ, ಹಣಕಾಸಿನ ವ್ಯವಹಾರ, ಇತ್ಯಾದಿಗಳನ್ನು ಸಿಂಪ್ಯೂಟರ್ ಬಳಸಿ ಮಾಡುವುದನ್ನು ಕಲ್ಪಿಸಲಾಗಿತ್ತು. ಈಗೆಲ್ಲ ಇವನ್ನು ಈಗಿನ ಕಾಲದ ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಮಾಡಬಹುದು.  ಆದರೆ 20 ವರ್ಷಗಳ ಹಿಂದೆ ಇವೆಲ್ಲ ಕ್ರಾಂತಿಕಾರಿ ಆವಿಷ್ಕಾರಗಳಾಗಿದ್ದವು. ಹಾಗಿದ್ದರೆ ಸಿಂಪ್ಯೂಟರ್ ಎಲ್ಲಿ ಹೋಯಿತು? ಅದು ಸರಿಯಾಗಿ ಜನರ ಕೈಗೆ ತಲುಪಲೇ ಇಲ್ಲ. ವಿಜ್ಞಾನಿಗಳು ಆವಿಷ್ಕಾರದಲ್ಲಿ ಪಳಗಿದಷ್ಟು ವ್ಯವಹಾರದಲ್ಲಿ ಪಳಗಿರಲಿಲ್ಲ. ಭಾರತೀಯ ಉದ್ಯೋಗಪತಿಗಳೂ ಇದಕ್ಕೆ ಹಣ ಹಾಕಲಿಲ್ಲ. ಅದು ಅಲ್ಲಿಗೇ ಸತ್ತು ಹೋಯಿತು.

ಸಿಂಪ್ಯೂಟರ್

ಈಗ ಆಕಾಶ್ ಟ್ಯಾಬ್ಲೆಟ್‌ನ ಕತೆ ನೋಡೋಣ. ಇದೊಂದು ಟ್ಯಾಬ್ಲೆಟ್ ಕಂಪ್ಯೂಟರ್. ಕಡಿಮೆ ಬೆಲೆಯಲ್ಲಿ ವಿದ್ಯಾರ್ಥಿಗಳ ಬಳಕೆಗೋಸ್ಕರ ದೊರೆಯಲಿದೆ ಎಂದು ಕೇಂದ್ರ ಸರಕಾರವು ಇದನ್ನು 2011 ರಲ್ಲಿ ಘೋಷಿಸಿದ್ದು.  ಆಗಿನ ಕೇಂದ್ರ ಸರಕಾರದ ಮಂತ್ರಿ ಕಪಿಲ್ ಸೈಬಲ್ ಇದನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದ್ದರು. ಇದನ್ನು 35$ ಕಂಪ್ಯೂಟರ್ ಎಂದು ಪ್ರಚಾರ ಮಾಡಲಾಗಿತ್ತು. ಮುಂಬಯಿ ಐಐಟಿಯಲ್ಲಿ ಇದನ್ನು ವಿನ್ಯಾಸ ಮಾಡಿ ಕೆನಡಾ ಮೂಲದ ಡಾಟಾವಿಂಡ್ ಎಂಬ ಕಂಪೆನಿಯ ಮೂಲಕ ಉತ್ಪಾದಿಸಿ ವಿದ್ಯಾರ್ಥಿಗಳಿಗೂ ಜನಸಾಮಾನ್ಯರಿಗೂ ನೀಡುವ ಯೋಜನೆ ಇದಾಗಿತ್ತು. ರೂ.500 ನೀಡಿ ಇದನ್ನು ಮುಂಗಡ ಬುಕಿಂಗ್ ಕೂಡ ಮಾಡಬಹುದಿತ್ತು. ಅಂತಿಮವಾಗಿ ಇದು ಸರಿಯಾಗಿ ಮಾರುಕಟ್ಟೆಗೆ ಬರಲೇ ಇಲ್ಲ. ಮುಂಗಡ ಹಣ ನೀಡಿದ ಬಹುಪಾಲು ಜನರಿಗೆ ಹಣ ವಾಪಾಸು ಮಾಡಲಾಯಿತು. ಕೆಲವೇ ಕೆಲವು ಟ್ಯಾಬ್ಲೆಟ್‌ಗಳು ಕೆಲವು ಕಾಲೇಜುಗಳಿಗೆ ತಲುಪಿದ್ದವು. ಅಂತಹ ಒಂದು ಟ್ಯಾಬ್ಲೆಟ್ ಅನ್ನು ನಾನು ಬಳಸಿ ನೋಡಿದ್ದೆ. ಅದು ತುಂಬ ನಿಧಾನವಾಗಿ ಕೆಲಸ ಮಾಡುತ್ತಿತ್ತು. ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು 6-7 ಗಂಟೆ ಸಮಯ ಹಿಡಿಯುತ್ತಿತ್ತು. ಒಮ್ಮೆ ಪೂರ್ತಿಯಾಗಿ ಚಾರ್ಜ್ ಆದರೆ ಕೇವಲ 2-3 ಗಂಟೆ ಕೆಲಸ ಮಾಡುತ್ತಿತ್ತು. ಅದರ ಸ್ಪರ್ಶಪರದೆಯ ಸಂವೇದನೆ ಏನೇನೂ ಚೆನ್ನಾಗಿರಲಿಲ್ಲ. ಅಂತಿಮವಾಗಿ ಆಕಾಶ್ ಪಾತಾಳಕ್ಕಿಳಿಯಿತು.

ಆಕಾಶ್ ಟ್ಯಾಬ್ಲೆಟ್

ಇವೆರಡೂ ವೇಪರ್‌ವೇರ್‌ಗಳಿಗೆ ನಮ್ಮದೇ ಆದ ಉದಾಹರಣೆಗಳು. ಮಾಹಿತಿ ತಂತ್ರಜ್ಞಾನ ಕೇತ್ರದಲ್ಲಿ ಇಂತಹ ಉದಾಹರಣೆಗಳು ಸಾವಿರಾರಿವೆ.

–ಡಾ| ಯು.ಬಿ. ಪವನಜ

gadgetloka @ gmail . com

The post ವೇಪರ್‌ವೇರ್ first appeared on Vishva Kannada.

ಹಿರಿಯ ನಾಗರಿಕರಿಗೆ ತಂತ್ರಜ್ಞಾನದ ವರದಾನ
ಆನಂದ ಪಾಟೀಲ ಇಂಗ್ಲೆಂಡಿನಲ್ಲಿದ್ದಾರೆ. ಅವರ ತಾಯಿ ಬೆಂಗಳೂರಿನ ಅವರ ಮನೆಯಲ್ಲಿ ಒಬ್ಬರೇ ಇರುತ್ತಾರೆ. ಅವರಿಗೆ ವಯಸ್ಸಾಗಿದೆ. ಓಡಾಡಲು ಅಷ್ಟೇನೂ ತೊಂದರೆಯಿಲ್ಲ. ಆದರೂ ಇದ್ದಕ್ಕಿಂದ್ದಂತೆ ಬಿದ್ದರೆ? ಮನೆಯೊಳಗೆ ಯಾರಾದರೂ ನುಸುಳಿದರೆ? ಆನಂದ ಪಾಟೀಲ ಇದಕ್ಕೆಲ್ಲ ಪರಿಹಾರ ಕಂಡುಕೊಂಡಿದ್ದಾರೆ. ಅವರ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದಾರೆ. ಅವು ಮಾಮೂಲಿ ಸಿಸಿಟಿವಿ ಕ್ಯಾಮೆರಾಗಳಲ್ಲ. ಅವುಗಳು motion sensing ನಮೂನೆಯವು ಮತ್ತು ಅಂತರಜಾಲಕ್ಕೆ ಸಂಪರ್ಕಹೊಂದಿದವು. ಅಂದರೆ ಅವುಗಳ ವೀಕ್ಷಣೆಯ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ನಡೆದಾಡಿದರೆ ಅವು ಪತ್ತೆ ಹಚ್ಚಿ ಅಂತರಜಾಲದ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಸುತ್ತವೆ. ಮನೆಯೊಳಗೆ ಕಳ್ಳರು ಬಂದರೆ ಇಂಗ್ಲೆಂಡಿನಲ್ಲಿರುವ ಆನಂದ ಪಾಟೀಲರಿಗೆ ಗೊತ್ತಾಗುತ್ತದೆ. ಹಿರಿಯ ನಾಗರಿಕರ ರಕ್ಷಣೆ ಮತ್ತು ಸುರಕ್ಷತೆಗಾಗಿ ತಂತ್ರಜ್ಞಾನವನ್ನು ಆನಂದ ಪಾಟೀಲರು ಉತ್ತಮವಾಗಿ ಬಳಸುತ್ತಿದ್ದಾರೆ. ಸಿಸಿಟಿವಿ ಮಾತ್ರವಲ್ಲ, ಇನ್ನೂ ಹಲವಾರು ತಂತ್ರಜ್ಞಾನ ಮತ್ತು ಗ್ಯಾಜೆಟ್‌ಗಳನ್ನು ಹಿರಿಯ ನಾಗರಿಕರಿಗಾಗಿ ಬಳಸಬಹುದು. ಅವುಗಳು ಯಾವೆಲ್ಲ ಎಂದು ತಿಳಿಯೋಣ.

ಆರೋಗ್ಯಪಟ್ಟಿ

ಇವುಗಳಿಗೆ ಇಂಗ್ಲಿಷಿನಲ್ಲಿ health/fitness band ಎನ್ನುತ್ತಾರೆ. ಇವುಗಳನ್ನು ಕೈಗೆ ಕೈಗಡಿಯಾರದ ಮಾದರಿಯಲ್ಲಿ ಕಟ್ಟಿಕೊಳ್ಳಬೇಕು. ಇವುಗಳು ಹೃದಯ ಬಡಿತ, ಎಷ್ಟು ಹೆಜ್ಜೆ ನಡೆದಿದ್ದೀರಿ, ಎಷ್ಟು ಗಂಟೆ ನಿದ್ರೆ ಮಾಡಿದ್ದೀರಿ, ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ ಎಷ್ಟು ಎಂದೆಲ್ಲ ಅಳೆಯುತ್ತವೆ. ಇವುಗಳು ಸಾಮಾನ್ಯವಾಗಿ ಸ್ಮಾರ್ಟ್‌ಫೋನಿಗೆ ಸಂಪರ್ಕದಲ್ಲಿರುತ್ತವೆ. ಕೆಲವು ಮಾದರಿಗಳಲ್ಲಿ ರಕ್ತದೊತ್ತಡವನ್ನೂ ದಾಖಲಿಸಬಹುದು. ಹೃದಯಬಡಿತದಲ್ಲಿ ವಿಪರೀತ ಏರುಪೇರಾದರೆ ಇದು ಸ್ಮಾರ್ಟ್‌ಫೋನಿನ ಮೂಲಕ ಎಚ್ಚರಿಸುತ್ತದೆ. ಸ್ಮಾರ್ಟ್‌ಫೋನಿನಲ್ಲಿರುವ ಆಪ್‌ನಲ್ಲಿ ಸಂಬಂಧಿಸಿದವರ ಇಮೈಲ್ ಮತ್ತು/ಅಥವಾ ಫೋನ್ ಸಂಖ್ಯೆಯನ್ನು ನಮೂದಿಸುವ ಆಯ್ಕೆ ಇರುತ್ತದೆ. ತುರ್ತು ಸಂದರ್ಭಗಳಲ್ಲಿ ಇದು ಅವರಿಗೆ ಸಂದೇಶ ಕಳುಹಿಸುತ್ತದೆ. ನೇರವಾಗಿ ವೈದ್ಯರಿಗೇ ಸಂದೇಶ ಕಳುಹಿಸುವಂತೆಯೂ ಆಯ್ಕೆ ಮಾಡಿಕೊಳ್ಳಬಹುದು. ಜಗತ್ತಿನಾದ್ಯಂತ ಈ ನಮೂನೆಯ ಆರೋಗ್ಯಪಟ್ಟಿಗಳು ಸಕಾಲದಲ್ಲಿ ಎಚ್ಚರಿಸಿ ಹಲವರ ಜೀವ ಉಳಿದ ಉದಾಹರಣೆಗಳು ಸಾಕಷ್ಟಿವೆ.

ಸಿಸಿಟಿವಿ ಮತ್ತು ಸುರಕ್ಷಣೆಯ ಸಾಧನಗಳು

ಈ ಲೇಖನದ ಮೊದಲ ಪ್ಯಾರಾದಲ್ಲೇ ಸಿಸಿಟಿವಿ ಯಾವ ರೀತಿ ಹಿರಿಯ ನಾಗರಿಕರ ಸುರಕ್ಷೆಗೆ ಸಹಾಯಕಾರಿಯಾಗಬಲ್ಲುದು ಎಂದು ವಿವರಿಸಲಾಗಿದೆ. ಕೆಲವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಕತ್ತಲೆಯಲ್ಲೂ ನೋಡುವ ಸೌಲಭ್ಯವಿರುತ್ತದೆ. ಅಂದರೆ ರಾತ್ರಿ ಹೊತ್ತು ದೀಪ ಹಾಕದಿರುವಾಗಲೂ ಮನೆಯೊಳಗೆ ಕಳ್ಳರು ನುಸುಳಿದರೆ ಅದು ನೋಡಬಲ್ಲುದು. ನೋಡಿದುದನ್ನು ದಾಖಲಿಸಿ ಸಂಬಂಧಿಸಿದವರಿಗೆ ಅಂತರಜಾಲದ ಮೂಲಕ ಕಳುಹಿಸಬಲ್ಲುದು. ಈ ಕ್ಯಾಮೆರಾಗಳು ಚಲನೆಯನ್ನು ಗ್ರಹಿಸುತ್ತವೆ. ಅಂದರೆ ಯಾರಾದರೂ ಅಥವಾ ಏನಾದರೂ ಚಲಿಸದಾಗ ಇವುಗಳಿಗೆ ಎಚ್ಚರವಾಗಿ ದೃಶ್ಯವನ್ನು ದಾಖಲಿಸಿ ಅಂತರಜಾಲದ ಮೂಲಕ ರವಾನಿಸುತ್ತವೆ. ಭಾರತದಲ್ಲಿ ಹಿರಿಯರಾದ ತಂದೆ ತಾಯಿ ಮಾತ್ರವೇ ಇದ್ದು ಮಕ್ಕಳು ವಿದೇಶದಲ್ಲಿ ಇದ್ದರೆ ಇವು ತುಂಬ ಸಹಾಯಕ್ಕೆ ಬರುತ್ತವೆ. ವಿದೇಶದಲ್ಲಿ ಇದ್ದುಕೊಂಡೇ ಮಕ್ಕಳು ಭಾರತದ ಮನೆಯಲ್ಲಿ ತಮ್ಮ ತಂದೆ ತಾಯಿ ಏನು ಮಾಡುತ್ತಿದ್ದಾರೆ ಎಂದು ವೀಕ್ಷಿಸುತ್ತಿರಬಹುದು. ಅವರೇನಾದರೂ ಬಿದ್ದುಬಿಟ್ಟರೆ ಕ್ಯಾಮೆರಾ ಮೂಲಕ ನೋಡಿ ಪಕ್ಕದ ಮನೆಯವರಿಗೆ ಅವರು ಫೋನ್ ಮೂಲಕ ಸುದ್ದಿ ತಿಳಿಸಬಹುದು. ಈ ರೀತಿಯಲ್ಲಿ ಹಲವರ ಜೀವ ಉಳಿದ ಉದಾಹರಣೆಗಳಿವೆ. ಮನೆಗಳಿಗೆ ಅಳವಡಿಸಲು ಹಲವು ಸುರಕ್ಷತೆಯ ಸಾಧನಗಳು ಲಭ್ಯವಿವೆ. ಒಂದು ಉದಾಹರಣೆಯೆಂದರೆ ಕಿಟಿಕಿ, ಬಾಗಿಲುಗಳಿಗೆ ಅಳವಡಿಸುವಂತಹವು. ಇವು ಮನೆಯ ಕಿಟಿಕಿ ಅಥವಾ ಬಾಗಿಲುಗಳನ್ನು ಯಾರಾದರೂ ಒಡೆದು ಪ್ರವೇಶಿಸಲು ಪ್ರತ್ನಿಸಿದರೆ ಅಲಾರಂ ಮಾದರಿಯಲ್ಲಿ ಹೊಡೆದುಕೊಳ್ಳುತ್ತವೆ. ಕೆಲವು ಮಾದರಿಗಳಲ್ಲಿ ಇವು ಅಂತರಜಾಲದ ಸಂಪರ್ಕದಲ್ಲೂ ಇರುತ್ತವೆ. ಅಂದರೆ ಬೆಂಗಳೂರಿನ ಮನೆಗೆ ಕಳ್ಳರು ನುಗ್ಗಿದರೆ ಇಂಗ್ಲೆಂಡಿನಲ್ಲಿರುವ ಮಗನಿಗೆ ಗೊತ್ತಾಗುತ್ತದೆ.

ರಕ್ತದೊತ್ತಡ ಮತ್ತು ಸಕ್ಕರೆ ಪ್ರಮಾಣ ಮಾಪಕಗಳು

ಹಿರಿಯರಲ್ಲಿ ಅಧಿಕ ಅಥವಾ ಕಡಿಮೆ ರಕ್ತದೊತ್ತಡ ಸಾಮಾನ್ಯ. ಹಾಗೆಯೇ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುವುದು. ಇದನ್ನು ಸರಳವಾಗಿ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎನ್ನುತ್ತಾರೆ. ಇವುಗಳನ್ನು ಮನೆಯಲ್ಲೇ ಅಳೆಯಬಹುದು. ಅಂತಹ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಹಲವು ಮಾದರಿಗಳಲ್ಲಿ ಹಲವು ರೀಡಿಂಗ್‌ಗಳನ್ನು ಸಂಗ್ರಹಿಸಿಡಬಹುದು. ಅಂತರಜಾಲದ ಸಂಪರ್ಕ ಮಾಡಬಹುದಾದ ಮಾದರಿಗಳೂ ಲಭ್ಯವಿವೆ. ಇತ್ತೀಚೆಗೆ ಬಹುತೇಕ ಮನೆಗಳಲ್ಲಿ ಈ ಸಾಧನಗಳು ಸಾಮಾನ್ಯವಾಗಿವೆ.

ಜಿಪಿಎಸ್ ಟ್ಯಾಗ್‌ಗಳು

ಕೆಲವು ಹಿರಿಯರಿಗೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಇನ್ನು ಕೆಲವರಿಗೆ ಆಗಾಗ ಸ್ವಾಧೀನ ತಪ್ಪುತ್ತದೆ. ಅಂತಹವರು ತಮಗೇ ತಿಳಿಯದೆ ಮನೆಯಿಂದ ಹೊರಗೆ ಎಲ್ಲೆಲ್ಲಿಗೋ ಹೋಗುತ್ತಾರೆ. ಇಂತಹ ಒಂದು ಕತೆಯನ್ನಿಟ್ಟುಕೊಂಡು ಕನ್ನಡದಲ್ಲಿ “ಗೋಧಿ ಬಣ್ಣ ಸಾಧಾರಣ ಮೈಕಟ್ಟು” ಎಂಬ ಸಿನಿಮಾ ಬಂದಿತ್ತು. ಇಂತಹವರಿಗೆ ಜಿಪಿಎಸ್ ಟ್ಯಾಗ್ ಕಟ್ಟಬಹುದು. ಇವು ಚಿಕ್ಕ ಕೀಚೈನ್ ಮಾದರಿಯಲ್ಲಿರುತ್ತವೆ. ಮೂಲತಃ ಇವು ಕಳೆದುಹೋಗಬಲ್ಲ ಬ್ಯಾಗ್, ಕೊಡೆ, ಪರ್ಸ್, ನಾಯಿ, ಮಕ್ಕಳು, ಇತ್ಯಾದಿಯಾಗಿ ಯಾವುದಕ್ಕೂ ಅಳವಡಿಸಲೆಂದು ತಯಾರಾದವು. ಇವುಗಳಲ್ಲಿ ಹಿರಿಯರಿಗೆ ಮತ್ತು ಮಕ್ಕಳಿಗೆ ಎಂದು ವಿಶೇಷ ಆವೃತ್ತಿಗಳು ಲಭ್ಯವಿವೆ. ಇವುಗಳನ್ನು ಹಿರಿಯ ನಾಗರಿಕರ ಕೈಗೆ ಅಥವಾ ಕುತ್ತಿಗೆಗೆ ಕಟ್ಟಬಹುದು. ಅವರು ಎಲ್ಲೆಲ್ಲಿ ಹೋಗುತ್ತಿದ್ದಾರೆ ಎಂದು ಸ್ಮಾರ್ಟ್‌ಫೋನಿನ ಮೂಲಕ ನೋಡುತ್ತಿರಬಹುದು. ಹಿರಿಯರು ತಮಗೇ ಅರಿವಿಲ್ಲದೆ ಎಲ್ಲೆಲ್ಲೋ ಅಲೆದಾಡಿದಾಗ ಮನೆಯವರು ಅಲ್ಲಿಗೆ ಬಂದು ಅವರನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗಬಹುದು. “ಉರಿ” ಸಿನಿಮಾದಲ್ಲಿ ಇಂತಹ ಒಂದು ಸಂದರ್ಭ ಇದೆ. ಇವುಗಳಲ್ಲಿ ಕೆಲವು ಜಿಪಿಎಸ್ ಮಾತ್ರವಲ್ಲ ಎಕ್ಸೆಲೆರೋಮೀಟರ್ ಅನ್ನೂ ಒಳಗೊಂಡಿರಬಹುದು. ಇಂತಹವು ಅದನ್ನು ಧರಿಸಿದ ವ್ಯಕ್ತಿ ಇದ್ದಕ್ಕಿದ್ದಂತೆ ಬಿದ್ದರೆ ಆಗ ಸಂಬಂಧಿಸಿದವರಿಗೆ ಸಂದೇಶ ಕಳುಹಿಸುತ್ತದೆ.

ಶ್ರವಣ ಯಂತ್ರ

ವಯಸ್ಸಾದಂತೆ ಬಹುತೇಕ ಮಂದಿಗೆ ಕಿವಿ ಕೇಳಿಸುವುದು ಕಡಿಮೆಯಾಗುತ್ತ ಬರುತ್ತದೆ. ಅಂತಹವರಿಗೆ ಸಹಾಯಕಾರಿಯಾಗಿ ಶ್ರವಣ ಯಂತ್ರಗಳು ಹಲವಾರು ದಶಕಗಳಿಂದಲೇ ಲಭ್ಯವಿವೆ. ಎಲ್ಲ ಕ್ಷೇತ್ರದಂತೆ ಈ ಕ್ಷೇತ್ರದಲ್ಲೂ ಹಲವಾರು ಸುಧಾರಣೆಗಳು ಆಗುತ್ತಿವೆ. ಅತಿ ಚಿಕ್ಕ ಶ್ರವಣ ಯಂತ್ರಗಳು ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇವು ತುಂಬ ಚಿಕ್ಕವು. ತಕ್ಷಣಕ್ಕೆ ನೋಡಿದರೆ ಯಂತ್ರ ಇದೆ ಎಂದು ಗೊತ್ತಾಗುವುದಿಲ್ಲ.

ಹೀಗೆ ಹಲವಾರು ರೀತಿಯ ಗ್ಯಾಜೆಟ್‌ಗಳು ಹಿರಿಯ ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತಿವೆ.

–ಡಾ| ಯು.ಬಿ. ಪವನಜ

gadgetloka @ gmail . com

The post ಹಿರಿಯ ನಾಗರಿಕರಿಗೆ ತಂತ್ರಜ್ಞಾನದ ವರದಾನ first appeared on Vishva Kannada.

ಗರ್ಭಕ್ಕೂ ಗ್ಯಾಜೆಟ್
ಮಹಾಭಾರತದಲ್ಲಿ ಒಂದು ಆಖ್ಯಾನ ಇದೆ. ಕೃಷ್ಣ ತನ್ನ ತಂಗಿ ಸುಭದ್ರೆಗೆ ಚಕ್ರವ್ಯೂಹವನ್ನು ಭೇದಿಸುವ ಉಪಾಯವನ್ನು ಹೇಳುತ್ತಿರುತ್ತಾನೆ. ಆಗ ಆಕೆ ಗರ್ಭಿಣಯಾಗಿರುತ್ತಾಳೆ. ಆಕೆಯ ಗರ್ಭದಲ್ಲಿ ಅಭಿಮನ್ಯು ಇರುತ್ತಾನೆ. ಆತ ಅದನ್ನು ಗರ್ಭದಲ್ಲಿದ್ದಾಗಲೇ ಕೇಳಿಸಿಕೊಳ್ಳುತ್ತಾನೆ. ಸುಭದ್ರೆ ನಿದ್ರೆಗೆ ಜಾರಿದಳು ಎಂದು ಕೃಷ್ಣ ಹೇಳುವುದನ್ನು ನಿಲ್ಲಿಸುತ್ತಾನೆ. ಆದುದರಿಂದ ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಭೇದಿಸಿ ಒಳಕ್ಕೆ ಹೋಗುವುದು ಮಾತ್ರ ಗೊತ್ತಿರುತ್ತದೆ. ವಾಪಾಸು ಹಿಂದಕ್ಕೆ ಬರುವುದು ತಿಳಿದಿರುವುದಿಲ್ಲ. ಮುಂದಕ್ಕೆ ಕುರುಕ್ಷೇತ್ರ ಯುದ್ಧದಲ್ಲಿ ಆತ ಚಕ್ರವ್ಯೂಹದೊಳಕ್ಕೆ ನುಗ್ಗಿ ಸಾಯುತ್ತಾನೆ. ಇದು ಬಹುತೇಕ ಭಾರತೀಯರಿಗೆ ತಿಳಿದಿರುವ ಕಥೆ.

ಈ ಕಥೆಯನ್ನು ನೆನಪಿಸಿಕೊಳ್ಳಲು ಕಾರಣವಿದೆ. ವಿಜ್ಞಾನಿಗಳು ಗರ್ಭದಲ್ಲಿರುವ ಮಗುವಿನ ಆಲಿಸುವ ಶಕ್ತಿ ಮತ್ತು ಅದರಿಂದಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ತಾಯಿಯ ಹೊಟ್ಟೆಯಲ್ಲಿದ್ದಾಗ 18 ವಾರಗಳ ನಂತರ ಮಗುವಿಗೆ ಧ್ವನಿಗಳನ್ನು ಆಲಿಸುವ ಶಕ್ತಿ ಹುಟ್ಟುತ್ತದೆ. ಮಗು ಎಷ್ಟೆಲ್ಲ ಧ್ವನಿಗಳನ್ನು ಕೇಳಿಸಿಕೊಳ್ಳಬಹುದು, ಹಲವು ವಿಧದ ಧ್ವನಿಗಳಿಗೆ ಮಗುವಿನ ಸ್ಪಂದನೆ ಹೇಗಿರುತ್ತದೆ, ಇದರಿಂದ ಮಗುವಿನ ಮೇಲೆ ಏನೆಲ್ಲ ಪರಿಣಾಮಗಳಾಗುತ್ತವೆ ಎಂದೆಲ್ಲ ಅವರು ಸಂಶೋಧನೆ ಮಾಡಿದ್ದಾರೆ.  ಗರ್ಭಧಾರಣೆಯ ಕೊನೆಯ ಮೂರು ತಿಂಗಳುಗಳಲ್ಲಿ ಅವರು ಕೆಲವು ಮಹಿಳೆಯರ ಗರ್ಭದಲ್ಲಿರುವ ಮಕ್ಕಳ ಮೇಲೆ ಸಂಶೋಧನೆ ಮಾಡಿದರು. ಆ ಮಕ್ಕಳಿಗೆ ಹಲವು ನಮೂನೆಯ ಧ್ವನಿಗಳನ್ನು ಕೇಳಿಸಿದರು. ಅಂದರೆ ಹೊರಗಡೆಯಿಂದ ಸ್ಪೀಕರ್ ಮೂಲಕ ಕೇಳಿಸಿದ್ದು. ಯಾವುದೇ ವಿಶೇಷ ಸಾಧನ ಮೂಲಕ ನೇರವಾಗಿ ಕೇಳಿಸಿದ್ದಲ್ಲ. ಗರ್ಭದಲ್ಲಿರುವ ಮಗು ಹಲವು ಬಗೆಯ ಧ್ವನಿಗಳನ್ನು ಆಲಿಸುತ್ತಿರುತ್ತದೆ. ಅವುಗಳಲ್ಲಿ ಮುಖ್ಯವಾದುದು ತಾಯಿಯ ಚಲನೆ, ಅದರಿಂದಾಗಿ ಆಗುವ ಧ್ವನಿಗಳು, ತಾಯಿಯ ಹೊಟ್ಟೆಯ ಒಳಗಿನ ಕೆಲವು ಧ್ವನಿಗಳು, ತಾಯಿ ಮಾತನಾಡುವ, ಹಾಡುವ ಧ್ವನಿ ಮತ್ತು ಹೊರಗಿನ ಧ್ವನಿ. ಮಗು ತಾಯಿಯ ಧ್ವನಿಗೆ ಮೊದಲು ಹೊಂದಿಕೊಳ್ಳುತ್ತದೆ. ನಂತರ ಹೊರಗಿನ ಧ್ವನಿಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ವಿಜ್ಞಾನಿಗಳು 12 ಗರ್ಭಿಣಿ ಮಹಿಳೆಯರನ್ನು ಪ್ರಯೋಗಕ್ಕೆ ಆರಿಸಿಕೊಂಡರು. ಅವರ ಗರ್ಭದಲ್ಲಿರುವ ಮಗುವಿಗೆ ಹೊರಗಿನಿಂದ ಸ್ಪೀಕರ್ ಮೂಲಕ ತಾಯಿಯ ಧ್ವನಿ, ಹಲವು ಬಗೆಯ ಧ್ವನಿ ಮತ್ತು ಹಲವು ಬಗೆಯ ಸಂಗೀತಗಳನ್ನು ಮಗು ಜನಿಸುವ ತನಕ ಕೇಳಿಸಿದರು. ಮಗುವಿನ ಜನನದ ನಂತರ ಸುಮಾರು 4 ತಿಂಗಳುಗಳ ವರೆಗೆ ಅದೇ ಧ್ವನಿಗಳನ್ನು ಮತ್ತೆ ಕೇಳಿಸಿ ಮಗುವಿನ ಸ್ಪಂದನೆಯನ್ನು ಪರಿಶೀಲಿಸಿದರು. ಸಂಶೋಧನೆ ಹೆಚ್ಚು ವೈಜ್ಞಾನಿಕವಾಗಿರಲು ಗರ್ಭದಲ್ಲಿದ್ದಾಗ ಯಾವುದೇ ಧ್ವನಿಯನ್ನು ಕೇಳಿಸದಿದ್ದ 12 ಮಕ್ಕಳನ್ನೂ ತೆಗೆದುಕೊಂಡು ಅದೇ ಧ್ವನಿಗಳಿಗೆ ಆ ಮಕ್ಕಳ ಸ್ಪಂದನೆಯನ್ನು ಪರಿಶೀಲಿಸಿದರು. ಅವರಿಗೆ ಕಂಡುಬಂದುದೇನೆಂದರೆ ಗರ್ಭದಲ್ಲಿದ್ದಾಗ ಆ ಧ್ವನಿಯನ್ನು ಕೇಳಿದ್ದ ಮಕ್ಕಳು ಜನನದ ನಂತರ ಅದೇ ಧ್ವನಿಗೆ ಬೇಗನೆ ಸ್ಪಂದಿಸಿದರು. ಅಂದರೆ ಅವರು ಆ ಧ್ವನಿಗಳನ್ನು ಗುರುತು ಹಿಡಿದರು. ಗರ್ಭದಲ್ಲಿದ್ದಾಗ ಮಗುವಿಗೆ ಉತ್ತಮ ಸಂಗೀತ ಕೇಳಿಸುವುದು, ಉತ್ತಮ ನೀತಿ ಇರುವ ಕಥೆ, ಹಾಡುಗಳನ್ನು ಹೇಳುವುದು, ಶ್ಲೋಕಗಳನ್ನು ಹೇಳುವುದು ಇವೆಲ್ಲವನ್ನು ಮಾಡುವುದು ಉತ್ತಮ ಎಂದು ಶತಮಾನಗಳಿಂದ ನಮ್ಮ ಹಿರಿಯರು ಹೇಳುತ್ತಿದ್ದುದು ನೆನಪಿದೆ ತಾನೆ? ಈಗ ವಿಜ್ಞಾನಿಗಳೂ ಅದನ್ನೇ ಪ್ರಯೋಗದ ಮೂಲಕ ತೋರಿಸಿ ಹೇಳುತ್ತಿದ್ದಾರೆ.

ಎಲ್ಲ ನಮೂನೆಯ ಸಂಶೋಧನೆಗಳೂ ಅಂತಿಮವಾಗಿ ಮಾನವನ ಉಪಯೋಗಕ್ಕೆ ಬರಬೇಕು ಎಂಬುದು ವಿಜ್ಞಾನದ ಆಶಯ. ಈ ಸಂಶೋಧನೆಯೂ ಹಾಗೆಯೇ. ಈಗಾಗಲೆ ಕೆಲವು ಕಂಪೆನಿಗಳು ಗರ್ಭದಲ್ಲಿರುವ ಮಗುವಿಗೆ ಉತ್ತಮ ಧ್ವನಿ ಮತ್ತು ಸಂಗೀತಗಳನ್ನು ಕೇಳಿಸಲು ವಿಶೇಷ ಸಾಧನಗಳನ್ನು ತಯಾರಿಸಿದ್ದಾರೆ. ಅವು ಮಾರುಕಟ್ಟೆಯಲ್ಲಿ ಲಭ್ಯ. ಅವುಗಳಲ್ಲಿ ಪ್ರಮುಖವಾಗಿ ಎರಡು ನಮೂನೆಗಳಿವೆ. ಅವುಗಳ ಬಗ್ಗೆ ಸ್ಥೂಲವಾಗಿ ತಿಳಿಯೋಣ.

ಮೊದಲನೆಯ ನಮೂನೆಯವುಗಳನ್ನು ಬೆಲ್ಲಿಬಡ್ ಎನ್ನುತ್ತಾರೆ. ಇವು ಗರ್ಭಿಣಿ ಮಹಿಳೆಯ ಹೊಟ್ಟೆಗೆ ಅಂಟಿಸುವ ಸ್ಪೀಕರ್ ಮಾದರಿಯಲ್ಲಿರುತ್ತವೆ. ಇವು ಒಂದು ಪ್ಲೇಯರ್‌ಗೆ ಸಂಪರ್ಕ ಹೊಂದಿರುತ್ತವೆ. ಆ ಪ್ಲೇಯರ್‌ನಲ್ಲಿ ಸಂಗೀತ ಅಥವಾ ಯಾವುದೇ ಧ್ವನಿ ಸಂಗ್ರಹಿಸಿ ಅದನ್ನು ಪ್ಲೇ ಮಾಡಬಹುದು. ಈ ಬೆಲ್ಲಿಬಡ್‌ನಲ್ಲಿ ಸ್ಪೀಕರ್‌ಗಳಲ್ಲಿ ಇರುವಂತೆಯೇ ಕಂಪಿಸುವ ಪರದೆ ಇರುತ್ತದೆ. ಆದರೆ ಅದು ಇಲ್ಲಿ ಗರ್ಭಿಣಿ ಮಹಿಳೆಯ ಹೊಟ್ಟೆಗೆ ಅಂಟಿಕೊಂಡಿರುತ್ತದೆ. ಆ ಬಡ್‌ನಿಂದ ಹೊರಡುವ ಧ್ವನಿ ನಮಗೆ ಕೇಳಿಸುವುದಿಲ್ಲ. ಆದರೆ ಅದು ಅಮ್ಮನ ದೇಹದ ಮೂಲಕ ಗರ್ಭದಲ್ಲಿರುವ ಮಗುವಿಗೆ ಕೇಳಿಸುತ್ತದೆ. ಮಗುವಿನ ಜೊತೆ ಮುಂದಕ್ಕೆ ಸಂವಹನಕ್ಕೆ ಸಹಾಯಕಾರಿಯಾಗಲು ಬಹುತೇಕ ಮಹಿಳೆಯರು ಈ ಸಾಧನದಲ್ಲಿ ತಮ್ಮದೇ ಧ್ವನಿಯನ್ನು ರೆಕಾರ್ಡ್ ಮಾಡಿ ಪ್ಲೇ ಮಾಡುತ್ತಾರೆ. ಅಥವಾ ನೇರವಾಗಿ ಮಾತನಾಡುತ್ತಾರೆ. ಇದೊಂದು ರೀತಿಯಲ್ಲಿ ಮುಗುವಿನ ಜೊತೆ ಟೆಲಿಪೋನ್ ಮೂಲಕ ಮಾತನಾಡಿದಂತೆ. ಆದರೆ ಇಲ್ಲಿ ಮಗು ಮಾತನಾಡುವುದಿಲ್ಲ. ಬೆಲ್ಲಿಬಡ್ ಅನ್ನು ಸುಲಭವಾಗಿ ಹೊಟ್ಟೆಯಿಂದ ಕೀಳಬಹುದು. ಮತ್ತೆ ಮತ್ತೆ ಬಳಸಬಹುದು. ಇದು ಹಾಗೂ ಇದೇ ನಮೂನೆಯ ಹಲವು ಸಾಧನಗಳು ಅಮೆಝಾನ್‌ನಲ್ಲಿ ಲಭ್ಯವಿವೆ.

ಎರಡನೆಯ ನಮೂನೆಯ ಸಾಧನದಲ್ಲಿ ಚಿಕ್ಕ ಇಯರ್‌ಬಡ್ ಮಾದರಿಯ ಸ್ಪೀಕರ್ ಅನ್ನು ನೇರವಾಗಿ ಗರ್ಭಿಣಿ ಮಹಿಳೆಯ ಯೋನಿಯೊಳಗೆ ತಳ್ಳಲಾಗುತ್ತದೆ. ಉಳಿದಂತೆ ಬೆಲ್ಲಿಬಡ್‌ಗೂ ಇದಕ್ಕೂ ವ್ಯತ್ಯಾಸ ಇಲ್ಲ. ಇದರಲ್ಲಿ ಇನ್ನೊಂದು ಮಾಮೂಲಿ ಹೆಡ್‌ಫೋನ್ ಕಿಂಡಿಯೂ ಇದೆ. ಅದಕ್ಕೆ ಹೆಡ್‌ಫೋನ್ ಹಾಕಿಕೊಂಡು ಮಹಿಳೆ ಮಗುವಿನ ಜೊತೆ ತಾನೂ ಆಲಿಸಬಹುದು. ಮಗು ಏನನ್ನು ಆಲಿಸುತ್ತಿದೆ ಎಂದು ತಿಳಿಯಲು ಈ ಸೌಲಭ್ಯ ಸಹಾಯಕಾರಿ. ಯೋನಿಯ ಒಳಗೆ ತಳ್ಳುವ ಸಾಧನವಾದುದರಿಂದ ಇದನ್ನು ವಿಶೇಷ ವಸ್ತುವಿಂದ ತಯಾರಿಸಲಾಗಿದೆ. ಅದು ದೇಹಕ್ಕೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ.  ಹಾಗೆಯೇ ದೇಹದ ಒಳಗಿನ ದ್ರವಗಳು ಈ ಬಡ್‌ಗೆ ಯಾವುದೇ ಹಾನಿ ಮಾಡುವುದಿಲ್ಲ. ಈ ಬಡ್‌ಗಳನ್ನು ಹೊರಗೆ ತೆಗೆದ ನಂತರ ನೀರಿನಲ್ಲಿ ತೊಳೆಯಬೇಕು. ಹಾಗೆ ತೊಳೆದು ಸಂಗ್ರಹಿಸಿಡಬಹುದು ಅಥವಾ ಬೇರೆಯವರಿಗೆ ಬಳಕೆಗೆ ನೀಡಬಹುದು.

ಈ ಎರಡೂ ನಮೂನೆಯ ಸಾಧನಗಳಿಂದ ನಿಜವಾಗಿಯೂ ಪ್ರಯೋಜನವಾಗುತ್ತದೆಯೇ ಎಂದು ಯಾವುದಾದರೂ ವಿಜ್ಞಾನಿ ಪ್ರಯೋಗ ಮಾಡಿ ನೋಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಈ ಲೇಖನದ ಪ್ರಾರಂಭದಲ್ಲಿ ತಿಳಿಸಿದ ಸಂಶೋಧನೆಯ ಫಲಿತಾಂಶವನ್ನು ಮಾನದಂಡವಾಗಿ ಇಟ್ಟುಕೊಳ್ಳುವುದಾದರೆ ಈ ಸಾಧನಗಳು ಪ್ರಯೋಜನಕಾರಿಯಾಗಬಲ್ಲವು ಎಂದು ಹೇಳಬಹುದು.

–ಡಾ| ಯು.ಬಿ. ಪವನಜ

gadgetloka @ gmail . com

The post ಗರ್ಭಕ್ಕೂ ಗ್ಯಾಜೆಟ್ first appeared on Vishva Kannada.

ಅವಕೆಂಪು ತಾಪಮಾಪಕ
ಇದು ಪಿಸ್ತೂಲಲ್ಲ, ಉಷ್ಣತೆ ಅಳೆಯುವ ಸಾಧನ

ಈ ಕೋವಿಡ್-19ರಿಂದಾಗಿ ಜನಜೀವನದ ರೀತಿನೀತಿಗಳೇ ಬದಲಾಗಿವೆ. ಮುಖಗವಸು ಹಾಕದೆ ಮನೆಯಿಂದ ಹೊರಬರುವ ಹಾಗೆಯೇ ಇಲ್ಲ. ಯಾವುದೇ ಅಂಗಡಿ, ಮಾಲ್, ಕಚೇರಿ ಅಥವಾ ಇನ್ಯಾವುದೇ ಸಾರ್ವಜನಿಕ ಸ್ಥಳಕ್ಕೆ  ಹೋದರೆ ಅಲ್ಲಿ ಬಾಗಿಲಿನಲ್ಲಿಯೇ ಒಬ್ಬ ನಿಮ್ಮ ಹಣೆ ಅಥವಾ ಮುಂಗೈಗೆ ಒಂದು ಚಿಕ್ಕ ಪಿಸ್ತೂಲಿನಾಕಾರದ ಸಾಧನವನ್ನು ಹಿಡಿಯುತ್ತಾನೆ. ಅದರಲ್ಲಿ ಮೂಡಿಬರುವ ಸಂಖ್ಯೆಯನ್ನು ನೋಡಿ ನೀವು ಒಳಗೆ ಹೋಗಬಹುದೇ ಬಾರದೇ ಎಂದು ನಿರ್ಧರಿಸುತ್ತಾನೆ. ಏನಿದು ಈ ಸಾಧನ? ಇದು ಚಿಕ್ಕ ಪಿಸ್ತೂಲ್ ಅಥವಾ ಚಿಕ್ಕ ಕೋವಿಯಲ್ಲ. ಇದು ನಿಮ್ಮನ್ನು ಸ್ಪರ್ಶಿಸದೆ ನಿಮ್ಮ ದೇಹದ ತಾಪಮಾನವನ್ನು ಅಳೆಯುವ ಅವಕೆಂಪು ತಾಪಮಾಪಕ (infrared thermometer). ಈ ಸಾಧನದ ಬಗ್ಗೆ ಸ್ವಲ್ಪ ತಿಳಿಯೋಣ.

ಮೊತ್ತಮೊದಲನೆಯದಾಗಿ ವಿದ್ಯತ್ಕಾಂತೀಯ ತರಂಗಗಳ ಬಗೆಗೆ ತಿಳಿದುಕೊಳ್ಳಬೇಕು. ನಮಗೆ ತಿಳಿದಿರುವ, ಕಣ್ಣಿಗೆ ಕಾಣುವ ಬೆಳಕು, ಎಕ್ಸ್-ಕಿರಣ, ರೇಡಿಯೋ ತರಂಗ ಎಲ್ಲವೂ ಒಂದೇ ಕುಟುಂಬಕ್ಕೆ ಸೇರಿದವು. ಅದುವೇ ವಿದ್ಯುತ್ಕಾಂತೀಯ ವಿಕಿರಣ (electromagnetic radiation). ಇವುಗಳನ್ನು ಅವುಗಳ ಕಂಪನಾಂಕಕ್ಕೆ (frequency) ಅಥವಾ ಅಲೆಯುದ್ದಕ್ಕೆ (wavelength) ಅನುಗುಣವಾಗಿ ವಿಂಗಡಿಸಲಾಗಿದೆ. ಈ ಶ್ರೇಣಿಗೆ ರೋಹಿತ (spectrum) ಎಂಬ ಹೆಸರಿದೆ. ಈ ರೋಹಿತದ ಒಂದು ತುದಿಯಲ್ಲಿ ಅತಿ ಕಡಿಮೆ ಕಂಪನಾಂಕದ ರೇಡಿಯೋ ತರಂಗಗಳಿವೆ. ಇನ್ನೊಂದು ತುದಿಯಲ್ಲಿ ಅತಿ ಹೆಚ್ಚು ಕಂಪನಾಂಕದ ಗಾಮಾ ಕಿರಣಗಳಿವೆ (ಚಿತ್ರ ನೋಡಿ). ಕಂಪನಾಂಕಕ್ಕೂ ವಿಕಿರಣದ ಶಕ್ತಿಗೂ ನೇರ ಸಂಬಂಧವಿದೆ. ಗಾಮಾ ಕಿರಣ ಅತಿ ಹೆಚ್ಚು ಶಕ್ತಿಯದು. ರೇಡಿಯೋ ತರಂಗ ಅತಿ ಕಡಿಮೆ ಶಕ್ತಿಯದು. ಈ ರೋಹಿತದ ಮಧ್ಯದಲ್ಲಿ ನಮ್ಮ ಕಣ್ಣಿಗೆ ಕಾಣಿಸುವ ಬೆಳಕಿದೆ. ಈ ಬೆಳಕಿನ ರೋಹಿತದ ಒಂದು ತುದಿಯಲ್ಲಿ ಕಡಿಮೆ ಶಕ್ತಿಯ ಕೆಂಫು ಬೆಳಕಿದೆ ಹಾಗೂ ಇನ್ನೊಂದು ತುದಿಯಲ್ಲಿ ಹೆಚ್ಚು ಶಕ್ತಿಯ ನೇರಳೆ ಬಣ್ಣವಿದೆ. ಕೆಂಪು ಬೆಳಕಿಗಿಂತ ಕಡಿಮೆ ಕಂಪನಾಂಕದ ಕಿರಣಗಳನ್ನು ಅವಕೆಂಪು ಕಿರಣಗಳು ಎನ್ನಲಾಗುತ್ತದೆ. ಇವುಗಳಿಗೆ ಉಷ್ಣದ ವಿಕಿರಣ ಎಂದೂ ಕರೆಯಬಹುದು. ಯಾಕೆಂದರೆ ಯಾವುದೇ ವಸ್ತು ತನ್ನಲ್ಲಿರುವ ತಾಪಮಾನವನ್ನು ಅವಕೆಂಪು ಕಿರಣಗಳನ್ನು ಸೂಸುವ ಮೂಲಕ ತಿಳಿಸುತ್ತದೆ. ಅಂದರೆ ಒಂದು ವಸ್ತುವಿನ ಮೇಲ್ಮೈಯಿಂದ ಹೊರಸೂಸುವ ಅವಕೆಂಪು ಕಿರಣಗಳನ್ನು ಅಳೆಯುವ ಮೂಲಕ ಆ ವಸ್ತುವಿನ ತಾಪಮಾನವನ್ನು ಅಳೆಯಬಹುದು. ಅವಕೆಂಪು ತಾಪಮಾಪಕ ಈ ತತ್ತ್ವವನ್ನು ಬಳಸಿ ಕೆಲಸ ಮಾಡುತ್ತದೆ. ಈ ಅವಕೆಂಪು ಕಿರಣಗಳು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ.

ಪ್ರತಿಯೊಂದು ವಸ್ತುವಿಗೂ ತಾಪಮಾನ (ಉಷ್ಣತೆ) ಇರುತ್ತದೆ. ಅದಕ್ಕೆ ಅನುಗುಣವಾಗಿ ಅದು ಅವಕೆಂಪು ಕಿರಣಗಳನ್ನು ಹೊರಸೂಸುತ್ತಿರುತ್ತದೆ. ಈ ಕಿರಣಗಳ ಮೊತ್ತ ಮತ್ತು ಕಂಪನಾಂಕವು ಆ ವಸ್ತುವಿನ ಹೊರಸೂಸುವಿಕೆಯ ಸಾಮರ್ಥ್ಯ ಮತ್ತು ಅದರ ತಾಪಮಾನವನ್ನು ಹೊಂದಿಕೊಂಡಿರುತ್ತದೆ. ಬೇರೆ ಬೇರೆ ವಸ್ತುಗಳಿಗೆ ಬೇರೆ ಬೇರೆ ಹೊರಸೂಸುವಿಕೆಯ ಸಾಮರ್ಥ್ಯವಿರುತ್ತದೆ. ಹೋಲಿಕೆಗೆ ಮಾನವನ ಚರ್ಮದ ಹೊರಸೂಸುವಿಕೆಯ ಸಾಮರ್ಥ್ಯ 0.98 ಎಂದಿದ್ದರೆ ಬಿಳಿ ಪ್ಲಾಸ್ಟಿಕ್ಕಿನದು 0.84 ಆಗಿರುತ್ತದೆ. ಅವಕೆಂಪು ತಾಪಮಾಪಕವು ವ್ಯಕ್ತಿಯ ದೇಹದಿಂದ ಹೊರಸೂಸುವ ಅವಕೆಂಪು ಕಿರಣದ ಕಂಪನಾಂಕ ಮತ್ತು ಮೊತ್ತವನ್ನು ಅಳೆದು ದೇಹದ ಉಷ್ಣತೆ ಎಷ್ಟು ಎಂದು ಲೆಕ್ಕಹಾಕಿ ತಿಳಿಸುತ್ತದೆ.

ಅವಕೆಂಪು ತಾಪಮಾಪಕಗಳನ್ನು ಬಳಸುವಾಗ ಗಮನಿಸಬೇಕಾದ ಒಂದು ಬಹಳ ಮುಖ್ಯ ವಿಷಯ ಎಂದರೆ ತಾಪಮಾನವನ್ನು ಅಳೆಯುವ ವಸ್ತು ಮತ್ತು ತಾಪಮಾಪಕದ ಮಧ್ಯೆ ಇರುವ ಅಥವಾ ಇರಬೇಕಾದ ದೂರ. ಇದು ತುಂಬ ಜಾಸ್ತಿ ಇದ್ದರೆ ಅಳತೆ ಸರಿಯಾಗಿರುವುದಿಲ್ಲ. ಆದುದರಿಂದಲೇ ಅದನ್ನು ಬಳಸುವ ವ್ಯಕ್ತಿ ನಿಮ್ಮ ಹಣೆ ಅಥವಾ ಮುಂಗೈಗೆ ಹತ್ತಿರ ಅಂದರೆ ಸುಮಾರು 5 ರಿಂದ 10 ಸೆ.ಮೀ. ಒಳಗೆ ಹಿಡಿಯುತ್ತಾನೆ. ಈ ದೂರಕ್ಕೂ ಒಂದು ನಿಯಮ ಇದೆ. ಇದು ಮುಖ್ಯವಾಗಿ ಉಷ್ಣತೆಯನ್ನು ಅಳೆಯಬೇಕಾದ ವಸ್ತುವಿನ ಮೃಲ್ಮೈಯ ವ್ಯಾಸವನ್ನು (ಗಾತ್ರವನ್ನು) ಹೊಂದಿಕೊಂಡಿದೆ. ಈ ದೂರ ಮತ್ತು ವ್ಯಾಸದ ಅನುಪಾತ ಬೇರೆ ಬೇರೆ ಸಂಖ್ಯೆಗಳಲ್ಲಿ ದೊರೆಯುತ್ತದೆ. ಉದಾಹರಣೆಗೆ ಈ ಅನುಪಾತ 10:1 ಇದೆ ಎಂದಾದಲ್ಲಿ 1 ಸೆ.ಮೀ. ವ್ಯಾಸದ ಮೇಲ್ಮೈಯ ತಾಪಮಾನವನ್ನು ನಿಖರವಾಗಿ ಅಳೆಯಲು 10 ಸೆ.ಮೀ. ಒಳಗಡೆ ಇರತಕ್ಕದ್ದು. ಈ ವ್ಯಾಸ ಸುಮಾರು ಅರ್ಧ ಸೆ.ಮೀ.ನಷ್ಟು (5 ಮಿ.ಮೀ.) ಎಂದು ಇಟ್ಟುಕೊಳ್ಳೋಣ. ಅದರಂತೆ ಸುಮಾರು 5 ಸೆ.ಮೀ. ಒಳಗಿನ ದೂರದಲ್ಲಿ ತಾಪಮಾಪಕವನ್ನು ಹಿಡಿಯಬೇಕು. ಅದು ಯಾಕೆಂದರೆ ಇಂತಹ ತಾಪಮಾಪಕಗಳನ್ನು ಈ ಅನುಪಾತದಲ್ಲಿ ತಯಾರಿಸಿರುತ್ತಾರೆ.

ಈ ತಾಪಮಾಪಕಗಳಲ್ಲಿ  ಅದರ ಹಿಡಿಯ ಭಾಗದಲ್ಲಿ ಒಂದು ದೊಡ್ಡ ಬಟನ್ ಇರುತ್ತದೆ. ತಾಪಮಾಪಕವನ್ನು ಹಣೆಗೆ ಅಥವಾ ಮುಂಗೈಗೆ ತೋರಿಸಿ ಆ ಬಟನ್ ಒತ್ತಿದಾಗ ಕೆಂಪು ಬೆಳಕು ಹೊರಬರುತ್ತದೆ. ಇದು ತಾಪಮಾಪಕವು ಯಾವ ಸ್ಥಳದ ಉಷ್ಣತೆಯನ್ನು ಅಳತೆ ಮಾಡುತ್ತಿದೆ ಎಂದು ನಮಗೆ ತಿಳಿಸಲು ಸಹಾಯಕಾರಿ ಅಷ್ಟೆ. ಆ ಬೆಳಕಿನ ಪ್ರತಿಫಲನದಿಂದಾಗಿ ಉಷ್ಣತೆಯನ್ನು ಅದು ಅಳೆಯುತ್ತಿಲ್ಲ. ಯಾಕೆಂದರೆ ಅದು ಅಳತೆ ಮಾಡುವುದು ಕಣ್ಣಿಗೆ ಕಾಣದ ಅವಕೆಂಪು ಬೆಳಕನ್ನೇ ವಿನಾ ಕಣ್ಣಿಗೆ ಕಾಣುವ ಕೆಂಪು ಬೆಳಕನ್ನಲ್ಲ.

ಅವಕೆಂಪು ತಾಪಮಾಪಕ ಹೇಗೆ ಕೆಲಸ ಮಾಡುತ್ತದೆ ಎಂದು ಸ್ಥೂಲವಾಗಿ ವಿವರಿಸಿದ್ದೇನೆ. ತಾಪಮಾಪಕವು ತನ್ನ ಸಂವೇದಕವನ್ನು ತಲುಪುವ ಅವಕೆಂಪು ಬೆಳಕಿನ ಪ್ರಮಾಣವನ್ನು ಅಳೆಯುತ್ತದೆ. ಈ ಬೆಳಕು ಮೂರು ನಮೂನೆಗಳಲ್ಲಿರುತ್ತವೆ. ಮೇಲ್ಮೈಗೆ ಹೊರಗಿನ ಆಕರದಿಂದ ಅಂದರೆ ಸೂರ್ಯನ ಬೆಳಕು, ವಿದ್ಯುದ್ದೀಪದ ಬೆಳಕು, ಇತ್ಯಾದಿಗಳಿಂದ ಬಿದ್ದು ಪ್ರತಿಫಲಿತಗೊಂಡುದು ಮೊದಲನೆಯದು. ಪ್ರಸಾರಗೊಂಡುದು ಎರಡನೆಯದು. ಮೂರನೆಯದು ಮುಖ್ಯವಾದುದು. ಅದು ತನ್ನದೇ ದೇಹದ ಉಷ್ಣತೆಯಿಂದಾಗಿ ಹೊರಸೂಸುವ ಅವಕೆಂಪು ಬೆಳಕು. ತಾಪಮಾಪಕವು ಈ ಮೂರನ್ನೂ ಸ್ವೀಕರಿಸಿ ಅವುಗಳನ್ನು ವಿಶ್ಲೇಷಿಸಿ ದೇಹದ ಉಷ್ಣತೆ ಎಷ್ಟು ಎಂದು ತಿಳಿಸುತ್ತದೆ.

ಈ ತಾಪಮಾಕಗಳು ಎಷ್ಟು ನಿಖರ ಎಂಬ ಪ್ರಶ್ನೆ ಮೂಡಬಹುದು. ಇವುಗಳ ಮುಖ್ಯ ಕೆಲಸ ದೇಹವನ್ನು ಸ್ಪರ್ಶಿಸದೆ ಉಷ್ಣತೆಯನ್ನು ಅಳೆಯುವುದು. ಬಾಯಿಯೊಳಗೆ ಇಟ್ಟು ಉಷ್ಣತೆ ಅಳೆಯುವ ಥರ್ಮೋಮೀಟರಿನಷ್ಟು ಇವು ನಿಖರವಲ್ಲ. ನಿಮಗೆ ಜ್ವರವಿದೆಯೇ ಎಂದು ತಿಳಿಯಲು ಮನೆಯಲ್ಲಿ ಬಳಸಲು ಬಾಯಿಯೊಳಗಿಟ್ಟು ಬಳಸುವ ತಾಪಮಾಕಗಳೇ ಉತ್ತಮ.

–ಡಾ| ಯು.ಬಿ. ಪವನಜ

gadgetloka @ gmail . com

The post ಅವಕೆಂಪು ತಾಪಮಾಪಕ first appeared on Vishva Kannada.