ಸಮೀಪ ಕ್ಷೇತ್ರ ಸಂವಹನ | Vishva Kannada http://vishvakannada.com Sun, 09 Dec 2018 15:39:29 +0000 en-US hourly 1 https://wordpress.org/?v=7.0.6 ಅತಿ ಸಮೀಪ ಸಂವಹನ (NFC) http://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-nfc/ http://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-nfc/#respond Sun, 09 Dec 2018 15:39:29 +0000 http://gadgetloka.net/?p=73 ಅತಿ ಸಮೀಪ ಸಂವಹನ (Near Field Communication, NFC) ಅಥವಾ ಸಮೀಪ ಕ್ಷೇತ್ರ ಸಂವಹನ ಎಂದರೆ ತುಂಬ ಸಮೀಪದಲ್ಲಿರುವ ಎರಡು ಸಾಧನಗಳ ನಡುವೆ ನಿಸ್ತಂತು (wireless) ಸಂವಹನವನ್ನು ಸಾಧ್ಯವಾಗಿಸುವ ತಂತ್ರಜ್ಞಾನ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ…

The post ಅತಿ ಸಮೀಪ ಸಂವಹನ (NFC) first appeared on Vishva Kannada.

]]>
ಅತಿ ಸಮೀಪ ಸಂವಹನ (Near Field Communication, NFC) ಅಥವಾ ಸಮೀಪ ಕ್ಷೇತ್ರ ಸಂವಹನ ಎಂದರೆ ತುಂಬ ಸಮೀಪದಲ್ಲಿರುವ ಎರಡು ಸಾಧನಗಳ ನಡುವೆ ನಿಸ್ತಂತು (wireless) ಸಂವಹನವನ್ನು ಸಾಧ್ಯವಾಗಿಸುವ ತಂತ್ರಜ್ಞಾನ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೌಲಭ್ಯವಿದೆ. ಇದನ್ನು ಬಳಸಿ ಸ್ಪೀಕರ್ ಜೋಡಣೆ, ಫೋನ್‌ಗಳ ನಡುವೆ ಸಂಪರ್ಕ ಸಾಧಿಸುವುದು, ಅಂಗಡಿಗಳಲ್ಲಿ ಹಣ ವರ್ಗಾವಣೆ ಎಲ್ಲ ಸಾಧ್ಯ.

The post ಅತಿ ಸಮೀಪ ಸಂವಹನ (NFC) first appeared on Vishva Kannada.

]]>
http://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-nfc/feed/ 0
ಗ್ಯಾಜೆಟ್ ಲೋಕ – ೦೦೨ (ಜನವರಿ ೧೨, ೨೦೧೨) http://vishvakannada.com/gadgetloka/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-2/ http://vishvakannada.com/gadgetloka/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-2/#comments Fri, 13 Jan 2012 07:44:08 +0000 http://vishvakannada.com/?p=835 ನೋಕಿಯ 701 – ಕೊಟ್ಟ ಹಣಕ್ಕೆ ಮೋಸವಿಲ್ಲ -ಡಾ| ಯು. ಬಿ. ಪವನಜ ಈ ಸಲ ನಾವು ನೋಕಿಯ 701 ಫೋನ್ ಕಡೆಗೆ ಸ್ವಲ್ಪ ಗಮನ ಕೊಡೋಣ. ಇದನ್ನು ನೋಕಿಯಾದವರು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸೇರಿಸಿದ್ದಾರೆ.…

The post ಗ್ಯಾಜೆಟ್ ಲೋಕ – ೦೦೨ (ಜನವರಿ ೧೨, ೨೦೧೨) first appeared on Vishva Kannada.

]]>
ನೋಕಿಯ 701 – ಕೊಟ್ಟ ಹಣಕ್ಕೆ ಮೋಸವಿಲ್ಲ

-ಡಾ| ಯು. ಬಿ. ಪವನಜ

ಈ ಸಲ ನಾವು ನೋಕಿಯ 701 ಫೋನ್ ಕಡೆಗೆ ಸ್ವಲ್ಪ ಗಮನ ಕೊಡೋಣ. ಇದನ್ನು ನೋಕಿಯಾದವರು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸೇರಿಸಿದ್ದಾರೆ. ಹೌದು. ಇದು ಸ್ಮಾರ್ಟ್‌ಫೋನ್‌ಗಳು ಮಾಡುವ ಎಲ್ಲ ಕೆಸಲಗಳನ್ನು ಮಾಡಬಲ್ಲುದು. ಆದರೆ ಇದರ ಕಾರ್ಯಾಚರಣೆಯ ವ್ಯವಸ್ಥೆ ಸಿಂಬಿಯನ್ ಬೆಲ್ಲೆ ಆಗಿದೆ. ಹೆಚ್ಚಿನ ವಿಮರ್ಶಕರು ಸಿಂಬಿಯನ್ ಕಾರ್ಯಾಚರಣ ವ್ಯವಸ್ಥೆಯನ್ನು ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ನೋಕಿಯಾದವರು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದಯನೀಯವಾಗಿ ಸೋಲುಕಂಡಿರುವುದೂ ಇದಕ್ಕೆ ಕಾರಣವಾಗಿರಬಹುದು. ಅದೆಲ್ಲ ಒತ್ತಟ್ಟಿಗಿರಲಿ. ಈ ಫೋನ್ ಹೇಗಿದೆ ನೋಡೋಣ.

 

ಸ್ಮಾರ್ಟ್‌ಫೋನ್ ಎಂದರೇನು? ಸ್ಮಾರ್ಟ್‌ಫೋನ್ (smartphone)   ಸ್ಮಾರ್ಟ್‌ಫೋನ್  ಅರ್ಥಾತ್ ಚತುರವಾಣಿ ಎಂದರೆ ಮೊಬೈಲ್ ಫೋನಿನ ಕೆಲಸಗಳನ್ನೂ ಮಾಡಬಲ್ಲ ಕಿಸೆಗಣಕ. ಈ ಫೋನುಗಳಲ್ಲಿ ಅಂತರಜಾಲ ನೋಡುವುದು, ಇಮೈಲ್ ಮಾಡುವುದು, ಪದಸಂಸ್ಕರಣೆ, ಜಿಪಿಎಸ್ ಬಳಸಿ ತಾನು ಇರುವ ಸ್ಥಾನ ತಿಳಿಯುವುದು, ಇನ್ನೂ ಏನೇನೋ ಮಾಡಬಹುದು. ಇತ್ತೀಚೆಗೆ ಇಂತಹ ಫೋನುಗಳು ಅಗ್ಗವಾಗುತ್ತ ಜನಸಾಮಾನ್ಯರ ಕೈಗೆಟುಕುವಂತಾಗುತ್ತಿವೆ. ಇಂತಹ ಫೋನುಗಳಿಗೆ ಸಹಸ್ರಾರು ತಂತ್ರಾಂಶಗಳು ಅಂತರಜಾಲದಲ್ಲಿ ಲಭ್ಯವಿವೆ. ಇವುಗಳು ಕೆಲಸ ಮಾಡಲು ಆಂಡ್ರೋಯಿಡ್, ವಿಂಡೋಸ್ ಫೋನ್, ಐಓಎಸ್, ಇತ್ಯಾದಿ ಯಾವುದಾದರೊಂದು ಕಾರ್ಯಾಚರಣೆಯ ವ್ಯವಸ್ಥೆ ಅಗತ್ಯ. ಯಾಕೋ ಏನೋ ಸಿಂಬಿಯನ್ ಫೋನ್‌ಗಳು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಅಷ್ಟು ಯಶಸ್ಸು ಕಂಡಿಲ್ಲ.

 

ಇದರಲ್ಲಿಯ ಕೆಲವು ಪ್ರಮುಖ ಗುಣವೈಶಿಷ್ಟ್ಯಗಳು:  ೧ಗಿಗಾಹರ್ಟ್ಝ್ ಪ್ರೋಸೆಸರ್, ೫೧೨ ಎಂಬಿ ಮೆಮೊರಿ, ಸ್ಪರ್ಶಪರದೆ, ೮ ಮೆಗಾಪಿಕ್ಸೆಲ್ ಕ್ಯಾಮರ, ವೈಫೈ, ಬ್ಲೂಟೂತ್, ಜಿಪಿಎಸ್, ಜಿಪಿಆರ್‌ಎಸ್, ೩ಜಿ, ೮ ಗಿಗಾಬೈಟ್ ಸಂಗ್ರಹ ಶಕ್ತಿ, ಎನ್‌ಎಫ್‌ಸಿ, ಎಫ್‌ಎಂ ರೇಡಿಯೋ, ಇತ್ಯಾದಿ. ಇದರ ಪರದೆ ೬೪೦ x ೩೬೦ ಪಿಕ್ಸೆಲ್ ರೆಸೊಲೂಶನ್ ಒಳಗೊಂಡಿದೆ. ಇದು ಹೈಡೆಫಿನಿಶನ್ ವೀಡಿಯೋ ತೋರಿಸಬಲ್ಲುದು ಮಾತ್ರವಲ್ಲ ರೆಕಾರ್ಡಿಂಗ್ ಕೂಡ ಮಾಡಬಲ್ಲುದು. ಈ ಎಲ್ಲ ಸವಲತ್ತುಗಳು ಇರುವ ಇದರ ಬೆಲೆ ಸುಮಾರು ೨೦ ಸಾವಿರ ರೂ. ಅದರೆ ಬಹುತೇಕ ಜಾಲತಾಣಗಳಲ್ಲಿ ಇದರ ಬೆಲೆ ರೂ. ೧೭,೫೦೦.

ಬಹುಶಃ ಮಧ್ಯಮ ಬೆಲೆಯ ಫೋನ್‌ಗಳಲ್ಲಿ (ಅಂದರೆ ರೂ.20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳಲ್ಲಿ) ಎನ್‌ಎಫ್‌ಸಿ ತಂತ್ರಜ್ಞಾನ ಇರುವ ಫೋನ್‌ಗಳಲ್ಲಿ ಇದು ಗಮನಾರ್ಹವಾದುದು. ಈ ಸಮೀಪ ಕ್ಷೇತ್ರ ಸಂವಹನ ತಂತ್ರಜ್ಞಾನವು ಪೂರ್ತಿಪ್ರಮಾಣದಲ್ಲಿ ಬಳಕೆಗೆ ಬರಬೇಕಷ್ಟೆ. ಬಳಕೆಗೆ ಬಂದಾಗ ಇದು ಒಂದು ಅದ್ಭುತ ಸೌಕರ್ಯವಾಗುತ್ತದೆ. ಈ ಸವಲತ್ತು ಇರುವ ಎರಡು ಫೋನ್‌ಗಳ ಮಧ್ಯೆ ಈ ತಂತ್ರಜ್ಞಾನ ಬಳಸಿ ಚಿತ್ರ, ಸಂಗೀತ, ವಿಳಾಸ, ಇತ್ಯಾದಿಗಳನ್ನು ಹಂಚಿಕೊಳ್ಳಬಹುದು.

 

ಸಮೀಪ ಕ್ಷೇತ್ರ ಸಂವಹನ (NFC – Near Field Communication) – ಅತಿ ಸಮೀಪದಲ್ಲಿರುವ ವಿದ್ಯುನ್ಮಾನ ಉಪಕರಣಗಳ ನಡುವೆ ನಡೆಯುವ ಸಂವಹನ. ೪ ಸೆಮೀ ಅಥವಾ ಅದಕ್ಕಿಂತಲೂ ಕಡಿಮೆ ವ್ಯಾಪ್ತಿಯಲ್ಲಿ ನಡೆಯುವ ನಿಸ್ತಂತು (ವಯರ್‌ಲೆಸ್) ಸಂವಹನ. ಇದು ಬಹುಮಟ್ಟಿಗೆ ಬ್ಲೂಟೂತ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಆದರೆ ಇದರ ತರಂಗಾಂತರ, ಶಕ್ತಿ ಮತ್ತು ವ್ಯಾಪ್ತಿಗಳು ಕಡಿಮೆ. ಪ್ರಮುಖವಾಗಿ ಮೊಬೈಲ್ ದೂರವಾಣಿಗಳಲ್ಲಿ ಇವುಗಳ ಬಳಕೆ. ಇದನ್ನು ವ್ಯಾಪಾರ ವ್ಯವಹಾರಗಳಲ್ಲಿ ಬಹುಮಟ್ಟಿಗೆ ಬಳಸುತ್ತಾರೆ. ಅಂಗಡಿಯಲ್ಲಿ ಸಾಮಾನು ಕೊಂಡುಕೊಂಡು ಕೊನೆಗೆ ಹಣ ಪಾವತಿ ಮಾಡಬೇಕಾದಾಗ ನಗದುಕಟ್ಟೆಯಲ್ಲಿರುವ ಸಂವೇದಕದ ಮುಂದೆ ಎನ್‌ಎಫ್‌ಸಿ ತಂತ್ರಜ್ಞಾನ ಅಳವಡಿಸಿರುವ ಮೊಬೈಲ್ ಫೋನನ್ನು ಹಿಡಿದರೆ ಸಾಕು. ನಿಮ್ಮ ಖಾತೆಯಿಂದ ಅಂಗಡಿಯಾತನ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಈ ತಂತ್ರಜ್ಞಾನ ಇನ್ನೂ ಬಳಕೆಗೆ ಬರಬೇಕಷ್ಟೆ.

 

 

ಈ ಫೋನ್ ಇದೇ ಬೆಲೆಯ ಇತರೆ ಫೋನ್‌ಗಳಿಗಿಂತ ಹೆಚ್ಚು ಪ್ರಖರವಾದ ಪರದೆಯನ್ನು ಒಳಗೊಂಡಿದೆ. ಇದು ಸಿಂಬಿಯನ್ ಕಾರ್ಯಾಚರಣ ವ್ಯವಸ್ಥೆಯನ್ನು ಹೊದಿದೆ. ಆದುದರಿಂದ ಇದಕ್ಕೆ ಆಂಡ್ರೋಯಿಡ್‌ಗೆ ದೊರಕುವಷ್ಟು ತಂತ್ರಾಂಶಗಳು (ಆಪ್‌ಗಳು) ದೊರೆಯುವುದಿಲ್ಲ. ಇದು ಜಿಪಿಎಸ್ ತಂತ್ರಜ್ಞಾನವನ್ನು ಒಳಗೊಂಡಿದೆ. ಅಂದರೆ ಉಪಗ್ರಹಗಳ ಜೊತೆ ಸಂಪರ್ಕ ಹೊಂದಿ ತಾನು ಇರುವ ಸ್ಥಳದ ನಿಖರವಾದ ಅಕ್ಷಾಂಶ ರೇಖಾಂಶಗಳನ್ನು ತೋರಿಸುತ್ತದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡಲು ಇದು ಸಹಾಯ ಮಾಡುತ್ತದೆ. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ದಾರಿ ವಿಚಾರಿಸಬೇಕಾಗಿಲ್ಲ. ಗಮ್ಯ ಸ್ಥಾನದ ವಿಳಾಸ ಅಥವಾ ಅಕ್ಷಾಂಶ ರೇಖಾಂಶ ನೀಡಿದರೆ ಸಾಕು. ತಾನು ಈಗಿರುವ ಸ್ಥಾನದಿಂದ ಅಲ್ಲಿಗೆ ಹೋಗುವ ರಸ್ತೆಯನ್ನು ಅದು ತೋರಿಸುತ್ತದೆ. ಇದು ಕೇವಲ ಈ ಫೋನಿನ ವೈಶಿಷ್ಟ್ಯವೇನಲ್ಲ. ಇದು ಜಿಪಿಎಸ್ ಇರುವ ಎಲ್ಲ ಫೋನ್‌ಗಳಲ್ಲಿರುವ ಸವಲತ್ತಾಗಿದೆ.

 

ಈ ಫೋನಿನಲ್ಲಿ ಇನ್ನೊಂದು ವಿಶೇಷ ಸವಲತ್ತಿದೆ. ಅದು ಎಪ್‌ಎಂ ಪ್ರೇಷಕ (ಟ್ರಾನ್ಸ್ಮಿಟ್ಟರ್). ಅಂದರೆ ಸಂಗೀತವನ್ನು ಇದು ಇತರೆ ಎಫ್‌ಎಂ ಗ್ರಾಹಕಗಳಿಗೆ (ಅಂದರೆ ಎಫ್‌ಎಂ ರೇಡಿಯೋಗಳಿಗೆ) ಪ್ರಸಾರ ಮಾಡಬಲ್ಲುದು. ಫೋನಿನಲ್ಲಿ ನಿಮಗಿಷ್ಟವಾದ ಸಂಗೀತವನ್ನು ಹಾಕಿಕೊಂಡು ಅದನ್ನು ಪ್ರಸಾರ ಮಾಡಿ ಮನೆಯ ಅಥವಾ ಕಾರಿನ ಎಫ್‌ಎಂ ರೇಡಿಯೋದಲ್ಲಿ ಅದನ್ನು ಟ್ಯೂನ್ ಮಾಡಿಕೊಂಡು ಆಲಿಸಬಹುದು. ಅಷ್ಟೇ ಅಲ್ಲ, ಇನ್ನೂ ಹಲವು ಮಂದಿ ಸಂಗೀತವನ್ನು ತಮ್ಮ ಎಫ್‌ಎಂ ರೇಡಿಯೋ ಮೂಲಕ ಆಲಿಸಬಹುದು. ಆದರೆ ಅವರು ಫೋನಿನಿಂದ ೫೦ ಅಡಿ ಅಳತೆಯ ಒಳಗೆ ಇರತಕ್ಕದ್ದು.

 

ಇದರಲ್ಲಿ ಅಕ್ಸೆಲೆರೋಮೀಟರ್ ಅಳವಡಿಸಲಾಗಿದೆ. ಇದು ಫೋನ್ ಯಾವ ಕೋನದಲ್ಲಿದೆ, ಯಾವ ದಿಕ್ಕಿಗೆ ಚಲಿಸುತ್ತದೆ ಎಂದೆಲ್ಲ ಗಮನಿಸುತ್ತಿರುತ್ತದೆ. ಫೋನ್ ತಿರುಗಿಸಿದಾಗ ಪರದೆಯೂ ಅದರಂತೆ ತಿರುಗುತ್ತದೆ. ಈ ತಂತ್ರಜ್ಞಾನವನ್ನು ಬಳಸಿ ಆಡುವ ಕಾರು ಓಟದ ಸ್ಪರ್ಧೆಯ ಆಟ ಯುವಜನತೆಯಲ್ಲಿ ತುಂಬ ಜನಪ್ರಿಯ. ಡೊಳ್ಳುಹೊಟ್ಟೆಯವರು ಬೊಜ್ಜು ಕರಗಿಸಲು ಎಷ್ಟು ಹೆಜ್ಜೆ ನಡೆದಿದ್ದೇವೆ ಎಂದು ಲೆಕ್ಕ ಹಾಕುವ ತಂತ್ರಾಂಶನ್ನು ಬಳಸಬಹುದು. ಅದೂ ಅಕ್ಸೆಲೆರೋಮಿಟರ್ ಅನ್ನು ಬಳಸುತ್ತದೆ.

 

ಇದರಲ್ಲಿ ಟಿವಿ ಔಟ್ ಕಿಂಡಿ ಇದೆ. ಅದಕ್ಕೆ ಸೂಕ್ತ ಕೇಬಲ್ ಲಗತ್ತಿಸಿ ಫೋನಿನಲ್ಲಿ ಮೂಡುವ ಚಲನಚಿತ್ರವನ್ನು ಮನೆಯ ಟಿವಿ ಪರದೆಯಲ್ಲಿ ವೀಕ್ಷಿಸಬಹುದು. ಹೈಡೆಫಿನಿಶನ್ ವೀಡಿಯೋ ಸವಲತ್ತಿರುವುದರಿಂದ ಉತ್ತಮ ಗುಣಮಟ್ಟದ ಸಿನಿಮಾ ವೀಕ್ಷಣೆ ಮನೆಯ ಟಿವಿ ಪರದೆಯಲ್ಲೇ ನಡೆಸಬಹುದು. ಟಿವಿ ಕೂಡ ಹೈಡೆಫಿನಿಶನ್ ಮಾದರಿಯದಾದರೆ ಇನ್ನೂ ಒಳ್ಳೆಯದು.

 

ಒಟ್ಟಿನಿಲ್ಲಿ ಹೇಳುವುದಾದರೆ ನೀವು ಕೊಡುವ ಹಣಕ್ಕೆ ನಿಮಗೆ ವಾಪಾಸು ದೊರೆಯುವ ಸವಲತ್ತುಗಳು ಅಧಿಕ. ಇಷ್ಟೆಲ್ಲ ಸವಲತ್ತಿರುವ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಕನಿಷ್ಠ ರೂ. 30 ಸಾವಿರ ಬೆಲೆಯಿದೆ. ಆದುದರಿಂದ ಜಾಲತಾಣಗಳು ಈ ಫೋನನನ್ನು best value for money ಎಂದು ದಾಖಲಿಸಿವೆ.

 

ಅಂದಹಾಗೆ ನೀವು ಈ ಫೋನ್ ಬಳಸಿ ಕರೆ ಕೂಡ ಮಾಡಬಹುದು!

 

The post ಗ್ಯಾಜೆಟ್ ಲೋಕ – ೦೦೨ (ಜನವರಿ ೧೨, ೨೦೧೨) first appeared on Vishva Kannada.

]]>
http://vishvakannada.com/gadgetloka/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-2/feed/ 6