ವಿಕಿಪೀಡಿಯ | Vishva Kannada

ಅರಿವಿನ ಕೌಶಲ್ಯ ಮತ್ತು ವಿಕಿಪೀಡಿಯ ಸಂಪಾದನೆ
“ನನ್ನ ಮಗನಿಗೆ 85% ಅಂಕಗಳಿದ್ದವು. ಅವನ ಸಹಪಾಠಿಗೆ ಕೇವಲ 65% ಅಂಕಗಳಿದ್ದವು. ಆದರೆ ಸಾಫ್ಟ್‌ವೇರ್ ಕಂಪೆನಿಯಲ್ಲಿ ಅವನಿಗೆ ಕೆಲಸ ಸಿಕ್ಕಿತು. ನನ್ನ ಮಗನಿಗೆ ಸಿಗಲಿಲ್ಲ” -ಈ ರೀತಿಯ ಮಾತುಗಳನ್ನು ಆಗಾಗ ಕೇಳುತ್ತೇವೆ. ಇಲ್ಲಿ ಏನಾಗಿರುತ್ತದೆ ಎಂದರೆ 85% ಅಂಕ ತೆಗೆದವನು ಪರೀಕ್ಷೆಗೋಸ್ಕರ ಓದಿರುತ್ತಾನೆ. ನಮ್ಮ ಪರೀಕ್ಷೆ ಪದ್ಧತಿಗಳೂ ಅಷ್ಟೆ. ಆಲೋಚನಾಶಕ್ತಿಯನ್ನು ಪರೀಕ್ಷಿಸುವುದಿಲ್ಲ. ಪಾಠಗಳನ್ನು ಎಷ್ಟು ಬಾಯಿಪಾಠ ಮಾಡಿದ್ದಾನೆ ಎಂದಷ್ಟೆ ಪರೀಕ್ಷಿಸುತ್ತವೆ. ಆದರೆ ಕಂಪೆನಿಗಳಿಗೆ ನಡೆದಾಡುವ ವಿಶ್ವಕೋಶಗಳು ಬೇಡ. ಅವರಿಗೆ ತರ್ಕಬದ್ಧವಾಗಿ ಆಲೋಚಿಸಿ ಸಮಸ್ಯೆಗಳನ್ನು ಪರಿಹರಿಸುವವರು ಬೇಕು. ಇದಕ್ಕೆ ಅರಿವಿನ ಕೌಶಲ್ಯ ಎನ್ನುತ್ತಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೂ ಉತ್ತಮ ಅರಿವಿನ ಕೌಶಲ್ಯವಿದ್ದ ಎರಡನೆಯವನು ಕಂಪೆನಿಗೆ ಆಯ್ಕೆಯಾಗಿರುತ್ತಾನೆ. ನಮ್ಮ ಶಿಕ್ಷಣ ಪದ್ಧತಿಯು ಅರಿವಿನ ಕೌಶಲ್ಯವನ್ನು ಹೆಚ್ಚಿಸುವುದಿಲ್ಲ. ಬದಲಿಗೆ ನಡೆದಾಡುವ ವಿಶ್ವಕೋಶಗಳನ್ನು ತಯಾರಿಸುತ್ತಿದೆ.

ಅರಿವಿನ ಕೌಶಲ್ಯ ಎಂದರೆ ಜ್ಞಾನವನ್ನು ಸಂಪಾದಿಸಲು, ಮಾಹಿತಿ ಹಾಗೂ ತರ್ಕಶಕ್ತಿಯ ಬಳಕೆಯ ಕುಶಲತೆ. ಜನರು ಹೇಗೆ ಕಲಿಯುತ್ತಾರೆ, ನೆನಪಿಟ್ಟುಕೊಳ್ಳುತ್ತಾರೆ ಹಾಗೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ ಎಂಬುದು ಇದನ್ನು ಅವಲಂಬಿಸಿದೆ. ಅರಿವಿನ ಕೌಶಲ್ಯವು ಗ್ರಹಿಕೆ, ಗಮನ, ಸ್ಮರಣೆ, ಕಲಿಕೆ, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಭಾಷಾ ಸಾಮರ್ಥ್ಯಗಳನ್ನು ಒಳಗೊಳ್ಳುತ್ತದೆ. ಅರಿವಿನ ಕೌಶಲ್ಯ ಕಡಿಮೆ ಇರುವ ಹಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದರೂ ಕೆಲಸದ ಸಂದರ್ಶನದಲ್ಲಿ ಸೋಲುತ್ತಾರೆ. ಅರಿವಿನ ಕೌಶಲ್ಯದ ವೃದ್ಧಿ ವಿದ್ಯಾರ್ಥಿಗಳಿಗೆ ಸಹಾಯಕಾರಿ. ಅರಿವಿನ ಕೌಶಲ್ಯವನ್ನು ಕೆಲವು ಪರೀಕ್ಷೆಗಳ ಮೂಲಕ ಅಳೆಯಲಾಗುತ್ತದೆ. ಇವುಗಳೆಂದರೆ ತಾರ್ಕಿಕತೆ, ಗ್ರಹಿಕೆ, ಸ್ಮರಣೆ, ಮೌಖಿಕ ಹಾಗೂ ಗಣಿತದ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹಾರಗಳ ಪರೀಕ್ಷೆ. ಹೆಚ್ಚಿನ ಕಂಪನಿಗಳು ಉದ್ಯೋಗಿಗಳನ್ನು ನೇಮಕಾತಿ ಮಾಡುವ ಮೊದಲು ಅರಿವಿನ ಕೌಶಲ್ಯದ ಪರೀಕ್ಷೆಗಳನ್ನು ನಡೆಸುತ್ತವೆ.

ಅರಿವಿನ ಕೌಶಲ್ಯ ವೃದ್ಧಿಸಲು ಹಲವು ಉಪಾಯಗಳಿವೆ. ಅವುಗಳೆಂದರೆ -ನಾವು ಚಿಕ್ಕವರಾಗಿದ್ದಾಗ ಕೇಳುತ್ತಿದ್ದ ಹುಲಿ, ದನ, ಹುಲ್ಲು, ದೋಣಿ ದಾಟಿಸುವ ಸಮಸ್ಯೆಯಂತಹ ಸಮಸ್ಯೆಗಳ ಪರಿಹಾರ; ಮಹಾಭಾರತದ ಓದು; ಚದುರಂಗದ ಆಟ ಆಡುವುದು, ಇತ್ಯಾದಿ. ಇವುಗಳಲ್ಲದೆ ಇನ್ನೂ ಒಂದು ವಿಧಾನವಿದೆ. ಅದು ವಿಕಿಪೀಡಿಯಕ್ಕೆ ಲೇಖನ ಸೇರಿಸುವುದು. ವಿಕಿಪೀಡಿಯಕ್ಕೆ ಲೇಖನ ಸೇರಿಸುವುದರಿಂದ ಅರಿವಿನ ಕೌಶಲ್ಯ ಹೆಚ್ಚಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸಲಾಗಿದೆ. ಈ ಲೇಖನದಲ್ಲಿ ಅದರ ಬಗ್ಗೆ ವಿವರಣೆ ನೀಡಲಾಗುತ್ತಿದೆ.

ಕನ್ನಡ ವಿಕಿಪೀಡಿಯ (kn.wikipedia.org) – ಅಂತರಜಾಲದಲ್ಲಿರುವ ಒಂದು ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶವಾಗಿದ್ದು, ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ ಸಹಕಾರ ಮನೋಭಾವದಿಂದ ಸಂಪಾದಿಸಿದ್ದಾಗಿದೆ. ಅಂತರಜಾಲ ಸಂಪರ್ಕವಿರುವ ಯಾರು ಬೇಕಾದರೂ ವಿಶ್ವದ ಯಾವುದೇ ಮೂಲೆಯಿಂದ ಯಾವುದೇ ವಿಷಯದ ಲೇಖನಗಳ ಸಂಪಾದನೆಗೆ ತೊಡಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ವಿಕಿಪೀಡಿಯ ಎಲ್ಲರಿಗೂ ಚಿರಪರಿಚಿತ ಹಾಗೂ ಅತಿ ಹೆಚ್ಚು ಓದುಗರನ್ನು ಪಡೆದಿರುವ ವಿಶ್ವದ 5ನೇ ಪ್ರಮುಖ ಜಾಲತಾಣ.  ಕನ್ನಡ ಭಾಷೆ ಉಳಿದು ಬೆಳೆಯಬೇಕಾದರೆ ಕನ್ನಡದಲ್ಲಿ ಜನರಿಗೆ ಅಗತ್ಯವಾದ ಮಾಹಿತಿ ಲಭ್ಯವಿರಬೇಕು. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ಸುಲಭವಾಗಿ ತರಲು ಸಹಾಯ ಮಾಡುವುದು ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯ. ಕನ್ನಡ ವಿಕಿಪೀಡಿಯ ಸಂಪಾದನೆ ಮಾಡುವುದರಿಂದ ವಿಸ್ಯಾರ್ಥಿಗಳಿಗೆ ಈ ಎಲ್ಲ ಲಾಭಗಳಿವೆ- ಭಾಷೆಯ ಸುಧಾರಣೆ, ಸಂವಹನ ಕಲೆಯ ಸುಧಾರಣೆ, ಸಂಶೋಧನಾ ಕೌಶಲ್ಯ, ಸಹಯೋಗದಲ್ಲಿ ಕೆಲಸ ಮಾಡುವುದು, ಬರೆದ ಲೇಖನವನ್ನು ವಿಶ್ವದ ಜೊತೆ ಹಂಚಿಕೊಳ್ಳುವುದು, ಸಮಾಜಕ್ಕೆ ಕೊಡುಗೆ, ವೈಯಕ್ತಿಕ ಮಾಹಿತಿಯಲ್ಲಿ (resume)  ಬರೆದುಕೊಳ್ಳುವುದು. ಇನ್ನೊಂದು ಪ್ರಮುಖ ಲಾಭವೆಂದರೆ ಅರಿವಿನ ಕೌಶಲ್ಯದ ವೃದ್ಧಿ.

ಉಡುಪಿಯಲ್ಲಿ ಮಹಿಳೆಯರಿಗಾಗಿರುವ ಡಾ. ಜಿ. ಶಂಕರ್ ಸರಕಾರಿ ಕಾಲೇಜಿನಲ್ಲಿ ಒಂದು ಸಂಶೋಧನಾತ್ಮಕ ಅಧ್ಯಯನ ಮಾಡಲಾಗಿತ್ತು. 24 ಆಯ್ದ ವಿದ್ಯಾರ್ಥಿನಿಯರಿಗೆ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಒಂದನ್ನು ವಿನ್ಯಾಸ ಮಾಡಲಾಗಿತ್ತು. ಅದರಲ್ಲಿ ವಿದ್ಯಾರ್ಥಿನಿಯರು ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸಿದ್ದರು. ಕೋರ್ಸಿನ ಪ್ರಾರಂಭದಲ್ಲಿ ಅವರ ಅರಿವಿನ ಕೌಶಲ್ಯದ ಪರೀಕ್ಷೆ  ನಡೆಸಲಾಯಿತು. ಒಂದು ವರ್ಷದ ನಂತರ ಅದೇ ಪರೀಕ್ಷೆಯನ್ನು (ಬೇರೆ ಪ್ರಶ್ನೆಗಳ ಮೂಲಕ) ಇನ್ನೊಮ್ಮೆ ನೀಡಲಾಯಿತು. ಒಂದು ವರ್ಷದಲ್ಲಿ ವಿಕಿಪೀಡಿಯ ಸಂಪಾದನೆ ಮಾಡುವುದರಿಂದ ವಿದ್ಯಾರ್ಥಿನಿಯರಲ್ಲಿ ಅರಿವಿನ ಕೌಶಲ್ಯದಲ್ಲಿ ವೃದ್ಧಿಯಾಗಿತ್ತು. ಇದು ನಮ್ಮ ದೇಶದಲ್ಲಿ ಈ ಮಾದರಿಯಲ್ಲಿ ಮಾಡಿದ ಮೊದಲ ಮತ್ತು ಇದು ತನಕದ ಏಕೈಕ ಸಂಶೋಧನಾತ್ಮಕ ಅಧ್ಯಯನವಾಗಿದೆ. ಈ ಅಧ್ಯಯನವನ್ನು ಡಾ. ಯು. ಬಿ. ಪವನಜ ಅವರ ನೇತೃತ್ವದಲ್ಲಿ ನಡೆಸಲಾಗಿತ್ತು. ಈ ಕೋರ್ಸಿನಲ್ಲಿ ವಿದ್ಯಾರ್ಥಿನಿಯರು ಕನ್ನಡ ವಿಕಿಪೀಡಿಯ ಮಾತ್ರವಲ್ಲದೆ ಕನ್ನಡ ವಿಕ್ಷನರಿ, ವಿಕಿಸೋರ್ಸ್ ಮತ್ತು ವಿಕಿಕೋಟ್‌ಗಳ ಸಂಪಾದನೆ ಮಾಡಿದ್ದರು.  ಜೊತೆಗೆ ಹಲವು ಫೋಟೋಗಳನ್ನು ಸೇರಿಸಿದ್ದರು ಕೂಡ. ಈ ಕೋರ್ಸಿನ ಮೂಲಕ ವಿದ್ಯಾರ್ಥಿನಿಯರ ಕೊಡುಗೆಯ ಅಂಕಿಅಂಶಗಳು ಕೋಷ್ಟಕದಲ್ಲಿವೆ.

ಭಾಗವಹಿಸಿದ ವಿದ್ಯಾರ್ಥಿನಿಯರ ಸಂಖ್ಯೆ

24

ಸೃಷ್ಟಿ ಮಾಡಿದ ಲೇಖನಗಳ ಸಂಖ್ಯೆ

1003

ಸಂಪಾದನೆ ಮಾಡಿದ ಲೇಖನಗಳು

1490

ಒಟ್ಟು ಸೇರಿಸಿದ ಮಾಹಿತಿ

2.8 ಕೋಟಿ ಬೈಟ್

ಲೇಖನಗಳ ಪುಟ ವೀಕ್ಷಣೆ

91 ಲಕ್ಷ

ಸೇರಿಸಿದ ಫೋಟೋಗಳು

298

ಎಲ್ಲ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ವಿಕಿಪೀಡಿಯದ ಸಂಪಾದನೆಯನ್ನು ಮಾಡಿಸುವ ಮೂಲಕ ಅರಿವಿನ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಬಹುದು. ಇದು ಮುಂದಕ್ಕೆ ಅವರ ಭವಿಷ್ಯಕ್ಕೆ ಸಹಾಯಕಾರಿಯಾಗುತ್ತದೆ. ಅವರಿಗೆ ಉದ್ಯೋಗದ ಬೇಟೆಯ ಸಂದರ್ಶನದಲ್ಲಿ ತೇರ್ಗಡೆಯಾಗಲು ಸಹಾಯಕಾರಿಯಾಗುತ್ತದೆ.

The post ಅರಿವಿನ ಕೌಶಲ್ಯ ಮತ್ತು ವಿಕಿಪೀಡಿಯ ಸಂಪಾದನೆ first appeared on Vishva Kannada.

ವಿಕಿಪೀಡಿಯ ಲೇಖನ ಬರಹ
-ಡಾ. ವಿಶ್ವನಾಥ ಬದಿಕಾನ

ವಿಕಿಪೀಡಿಯ ಎಂದರೇನು?

ಆಧುನಿಕ ಬದುಕಿನ ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿನ ಅದ್ಭುತ ಆವಿಷ್ಕಾರಗಳಲ್ಲೊಂದಾದ ಮಾಹಿತಿ ತಂತ್ರಜ್ಞಾನದ ಒಂದು ವಿನೂತನ ಪರಿಕಲ್ಪನೆ ‘ವಿಕಿಪೀಡಿಯ’.  ವಿಕಿಪೀಡಿಯ (Wikipedia)ವು ವೆಬ್ ಆಧಾರಿತ ಅಂತರಜಾಲದ (Internet) ಮೂಲಕ ಬರೆಯುವ ಉಚಿತ, ಸಹಕಾರಿ, ಬಹುಭಾಷಾ ಸ್ವತಂತ್ರ ವಿಶ್ವಕೋಶ.  ಇದೊಂದು ವಿಶ್ವಕೋಶ ಜಾಲತಾಣ (Encyclopaedia Website) ವಾಗಿದ್ದು www.wikipedia.org ಅಂತರಜಾಲದ ಮೂಲಕ ಮಾಹಿತಿ ಸೇರಿಸಬಹುದು ಅಥವಾ ಹುಡುಕಬಹುದು.  ವಿಕಿಪೀಡಿಯವು ಅಂತರಜಾಲದ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು, ಪ್ರಪಂಚದ ಲಕ್ಷಾಂತರ ಮಂದಿ ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ ಸಹಯೋಗಿ ಮನೋಭಾವದಿಂದ ಸಂಪಾದಿಸಿದ್ದಾಗಿದೆ.  ವಿಕಿಪೀಡಿಯವು ಮಾಹಿತಿಗಳ ಜ್ಞಾನಕೋಶ.  ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶಗಳನ್ನು ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಇರುವಂತೆ ನೋಡಿಕೊಳ್ಳುವ ಯೋಜನೆಗಳಲ್ಲಿ ವಿಕಿಪೀಡಿಯ ಕೂಡ ಒಂದು.  ವಾಸ್ತವ ಜಗತ್ತಿನಲ್ಲೂ ಸಮುದಾಯವೊಂದನ್ನು ಕಟ್ಟಿ, ಅದರಲ್ಲೂ ಸ್ವತಂತ್ರತೆಯ ಅಂಶವನ್ನು ಎತ್ತಿ ಹಿಡಿದಿರುವ ವಿಕಿಪೀಡಿಯ ವಿಶ್ವದ ಭಾಷೆಗಳನ್ನು ತನ್ನ ಒಡಲಲ್ಲಿರಿಸಿಕೊಂಡಿದೆ.  ಜಗತ್ತಿನ ಎಲ್ಲಾ ವಿಚಾರಗಳನ್ನು ಆಯಾ ಭಾಷೆಗಳಲ್ಲಿ ಬರೆದು ಪ್ರಪಂಚಜ್ಞಾನವಾಗಿ ರೂಪಿಸಲು ವಿಕಿಪೀಡಿಯದಲ್ಲಿ ಸಾಧ್ಯವಿದೆ.  ನಮ್ಮ ಸ್ಥಳೀಯ ವಿಚಾರಗಳಾದ ಸಂಸ್ಕೃತಿ, ಚರಿತ್ರೆ, ವಿಜ್ಞಾನ, ಪ್ರಕೃತಿ, ಪರಿಸರ, ಸಮಾಜ, ಜಾನಪದ, ಸ್ಥಳನಾಮ, ಧರ್ಮ, ವ್ಯಕ್ತಿಪರಿಚಯ, ಕಲೆ, ನೃತ್ಯ ಇತ್ಯಾದಿ ಮಾಹಿತಿಗಳನ್ನು ವಿಕಿಪೀಡಿಯದಲ್ಲಿ ಬರೆಯುವುದರಿಂದ ಅವುಗಳು ನಾಳೆಯ ಜ್ಞಾನಗಳಾಗಿ ಮಾರ್ಪಡುವಂತೆ ಇಂದಿನವರು ಪ್ರಯತ್ನಿಸಬಹುದಾದ ಆನ್‌ಲೈನ್ ಮಾಹಿತಿ ಕೋಶ.

ವಿಕಿಪೀಡಿಯ ಪದದ ನಿಷ್ಪತ್ತಿ

ವಿಕಿಪೀಡಿಯವು ವಿಕಿ ಮತ್ತು ಪೀಡಿಯ ಎಂಬ ಎರಡು ಪದಗಳ ಸಂಮಿಶ್ರವಾಗಿದೆ.  ವಿಕಿ ಪದವು ಹವಾಯಿ ಭಾಷೆಯಿಂದ ಬಂದಿದೆ.  ಹವಾಯಿ ಭಾಷೆಯ ‘ವಿಕಿ’ ಪದಕ್ಕೆ ಶೀಘ್ರ , ವೇಗ, ತ್ವರಿತಗತಿ ಎಂಬರ್ಥವಿದೆ.  ಇಂಗ್ಲಿಷಿನಲ್ಲಿ Encyclopaedia  ಪದಕ್ಕೆ ವಿಶ್ವಕೋಶ ಎಂದರ್ಥ.  ಹವಾಯಿ ಭಾಷೆಯ ವಿಕಿ ಮತ್ತು ಎನ್‌ಸೈಕ್ಲೋಪೀಡಿಯದ ಪೀಡಿಯ ಈ ಎರಡೂ ಪದಗಳನ್ನು ಸಂಯೋಜಿಸಿ ವಿಕಿಪೀಡಿಯ (Wikipedia) ಎಂಬ ಗಣಕೀಕೃತ ವಿಶ್ವಕೋಶದ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ.  ಕನ್ನಡದಲ್ಲಿ ವಿಕಿಪೀಡಿಯವನ್ನು ‘ತ್ವರಿತ ವಿಶ್ವಕೋಶ’ವೆಂದೂ ಹೆಸರಿಸಿದ್ದಾರೆ.

ವಿಕಿಪೀಡಿಯದ ಹುಟ್ಟು

ವಿಕಿಪೀಡಿಯವನ್ನು ಅಮೆರಿಕದಲ್ಲಿರುವ ವಿಕಿಮೀಡಿಯ ಫೌಂಡೇಶನ್ ನಡೆಸುತ್ತಿದೆ. ಇದು ಅಮೇರಿಕ ದೇಶದ ಸ್ಯಾನ್‌ಫ್ರಾನ್ಸಿಸ್ಕೋ ನಗರದಲ್ಲಿ ಆಡಳಿತ ಕಚೇರಿಯನ್ನು ಹೊಂದಿದ್ದು ಒಂದು ಲಾಭರಹಿತ ಹಾಗು ದಾನಶೀಲ ಸಾಮಾಜಿಕ ಸಂಘಟನೆಯಾಗಿದೆ.  ವಿಕಿಪೀಡಿಯದ ಸೇವೆಯು ಉಚಿತವಾಗಿದ್ದು ಅಂತರಜಾಲ ಹೊಂದಿರುವ ಯಾವುದೇ ವ್ಯಕ್ತಿಯೂ ಈ ಸಾಮಾಜಿಕ ಜಾಲತಾಣದಲ್ಲಿ ಕೊಡುಗೆಯನ್ನು ನೀಡಬಹುದು.  ಪ್ರಪಂಚದ ಅತಿ ಪ್ರಸಿದ್ಧ ಜಾಲತಾಣಗಳ ಸಾಲಿನಲ್ಲಿ ವಿಕಿಪೀಡಿಯವು ಐದನೇ ಸ್ಥಾನವನ್ನು ಪಡೆದಿದೆ.

ನ್ಯುಪೀಡಿಯ (http://www.new-pedia.com/) ಎಂಬ ಇನ್ನೊಂದು ವಿಶ್ವಕೋಶ ಯೋಜನೆಯಿಂದ ವಿಕಿಪೀಡಿಯ ವಿಶ್ವಕೋಶವು ಮೂಡಿ ಬಂದಿದೆ.  ಜನವರಿ ೧೫, ೨೦೦೧ರಲ್ಲಿ ಜಿಮ್ಮಿ ವೇಲ್ಸ್ (Jimmy Wales)  ಮತ್ತು ಲ್ಯಾರಿ ಸ್ಯಾಂಗರ್ (Larry Sanger)  ಎಂಬರು ವಿಕಿಪೀಡಿಯವನ್ನು ಪ್ರಾರಂಭಿಸಿದರು.  ಜಿಮ್ಮಿ ವೇಲ್ಸ್ ಅವರು ವಿಕಿಪೀಡಿಯದ ಸಂಸ್ಥಾಪಕರಾಗಿದ್ದು, ಹಂಟಿಸ್‌ವಿಲ್ಲೆ ಅಲಬಾಮಾ (Huntsville, Alabama) ಎಂಬ ನಗರದವರು. ಲ್ಯಾರಿ ಸ್ಯಾಂಗರ್ ಅವರು ಅಮೇರಿಕದಲ್ಲಿ ಅಂತರಜಾಲ ಯೋಜನೆಯನ್ನು ಅಭಿವೃದ್ಧಿ ಪಡಿಸುವ ವಿಕಿಪೀಡಿಯದ ಸಹ ಸಂಸ್ಥಾಪಕ.

ವಿಕಿಪೀಡಿಯದ ಬೆಳವಣಿಗೆ

ಕ್ರಿ.ಶ. ೨೦೦೧ರಲ್ಲಿ ಹುಟ್ಟಿಕೊಂಡ ಈ ವಿಶ್ವಕೋಶವು ಅತ್ಯಂತ ಶೀಘ್ರವಾಗಿ ಬೆಳವಣಿಗೆ ಹೊಂದಿ ಇಂದು ಅತ್ಯಂತ ಬೃಹತ್ತಾದ ಮತ್ತು ಅಸಂಖ್ಯಾತ ಆಕರಗಳನ್ನು ಹೊಂದಿರುವ ಅಂತರಜಾಲ ತಾಣವಾಗಿ ಅಭಿವೃದ್ಧಿ ಹೊಂದಿದೆ.    ವಿಕಿಪೀಡಿಯದಲ್ಲಿ ಪ್ರಪಂಚದ ೨೯೬ ಭಾಷೆಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ.  ಇನ್ನೂ ೨೮೫ ಭಾಷೆಗಳಲ್ಲಿ ವಿಕಿಪೀಡಿಯವು ಲೈವ್ ಆಗಲು ಕಾಯುತ್ತಿವೆ.    ಜಗತ್ತಿನ ಎಲ್ಲಾ ಭಾಷೆಯ ವಿಕಿಪೀಡಿಯಗಳು ಇಂಗ್ಲಿಷ್ ಭಾಷೆಯನ್ನು ಅವಲಂಬಿಸಿ ಬೆಳೆಯುತ್ತಿವೆ.  ಈ ತಾಣವನ್ನು ಪ್ರತಿ ತಿಂಗಳು ಸುಮಾರು ೪೦೦ ದಶಲಕ್ಷ ಮಂದಿ ಸಂದರ್ಶಿಸುತ್ತಾರೆಂದು ಹೇಳಲಾಗಿದೆ.  ಪ್ರಪಂಚದ ಎಲ್ಲಾ ಭಾಷಾಕ್ಷೇತ್ರಗಳಲ್ಲಿ ಸುಮಾರು ೮೨ ಸಾವಿರ ಮಂದಿ ೧೭ ದಶಲಕ್ಷ ಲೇಖನಗಳನ್ನು ಈ ಸಾಮಾಜಿಕ ಜಾಲತಾಣಕ್ಕೆ ಕಳುಹಿಸುತ್ತಾರೆ. ಈಗ ಭಾರತದಲ್ಲಿ ೨೩ ಭಾಷೆಗಳಲ್ಲಿ ವಿಕಿಪೀಡಿಯ ಕೆಲಸ ನಡೆಯುತ್ತಿದೆ.  ಇತ್ತೀಚೆಗೆ ಆಗಸ್ಟ್ ೫, ೨೦೧೬ರಂದು ತುಳು ವಿಕಿಪೀಡಿಯ (tcy.wikipedia.org) ಜೀವಂತಗೊಂಡಿದೆ.

ವಿಕಿಪೀಡಿಯವನ್ನು ಉಪಯೋಗಿಸುವವರು ಯಾರು?

ವಿಕಿಪೀಡಿಯವನ್ನು ಉಪಯೋಗಿಸುವವರನ್ನು ಎರಡು ವರ್ಗವಾಗಿ ವಿಂಗಡಿಸಿಕೊಳ್ಳಬಹುದು.

ವಿಕಿಪೀಡಿಯವನ್ನು ನೋಡುವವರು ಮತ್ತು ಓದುವವರು

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ವಿಕಿಪೀಡಿಯವನ್ನು ನೋಡುತ್ತಾರೆ.  ಓದುತ್ತಾರೆ.  ಈಗಿನ ಶಿಕ್ಷಣಕ್ರಮದಲ್ಲಿ ಪ್ರಬಂಧ ರಚಿಸುವುದು ಅಂಕ ಪಡೆಯುವ ಚಟುವಟಿಯಾಗಿದ್ದು, ವಿದ್ಯಾರ್ಥಿಗಳು ತರಗತಿ ಪ್ರಬಂಧ (ಅಸೈನ್‌ಮೆಂಟ್) ತಯಾರಿಗಾಗಿ ವಿಕಿಪೀಡಿಯವನ್ನು ಅವಲಂಭಿಸುತ್ತಾರೆ.  ಬರೆದಂತಹ ಪ್ರಬಂಧಗಳಿಗೆ ವಿಕಿಪೀಡಿಯವನ್ನೇ ಉಲ್ಲೇಖವಾಗಿ ನೀಡುತ್ತಾರೆ.

ಯಾವುದೇ ತಾಣದಲ್ಲೂ ವಿಕಿಪೀಡಿಯ ಜಾಲವು ಮೊದಲಿಗೆ ಕಾಣಿಸಿಕೊಳ್ಳುತ್ತದೆ.  ಬೇರೆ ಜಾಲತಾಣಗಳ ಜೊತೆಗೆ ವಿಕಿಪೀಡಿಯವನ್ನು ನೋಡುವವರು ಬಹಳಷ್ಟು ಮಂದಿ ಇದ್ದಾರೆ.  ಇವರು ಮಾಹಿತಿಗಾಗಿ ಅಂತರಜಾಲವನ್ನು ನೋಡುತ್ತಾರೆ.

ಐಎಎಸ್, ಕೆಎಎಸ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ವಿಕಿಪೀಡಿಯವನ್ನು ವೀಕ್ಷಿಸುತ್ತಾರೆ.

ಆ.       ವಿಕಿಪೀಡಿಯವನ್ನು ಸಂಪಾದಿಸುವವರು.

ಅಕ್ಷರಜ್ಞಾನವಿರುವ ಯಾರೂ ವಿಕಿಪೀಡಿಯವನ್ನು ಸಂಪಾದಿಸಬಹುದು.  ಶಾಲಾ-ಕಾಲೇಜುಗಳಲ್ಲಿ ಓದುವವರು, ಅಧ್ಯಾಪಕರು, ಉದ್ಯೋಗದಲ್ಲಿರುವವರು, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಚರಿತ್ರೆ ಇತ್ಯಾದಿ ವಿಷಯಗಳಲ್ಲಿ ಪರಿಣತರು ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿರುವವರು ವಿಕಿಪೀಡಿಯವನ್ನು ಸಂಪಾದಿಸುವರು.

ವಿಕಿಪೀಡಿಯದ ವೈಶಿಷ್ಟ್ಯವೇನು?

ವಿಕಿಪೀಡಿಯವು ಮುಕ್ತ ವಿಶ್ವಕೋಶವಾಗಿದ್ದು, ಇಂಟರ್‌ನೆಟ್ ಸಂಪರ್ಕ ಹೊಂದಿರುವ ಯಾರು ಬೇಕಾದರೂ ವಿಶ್ವದ ಯಾವುದೇ ಮೂಲೆಯಿಂದ ಯಾವುದೇ ಭಾಷೆಯ ವಿಕಿಪೀಡಿಯದಲ್ಲಿ ಯಾವುದೇ ವಿಷಯದ ಲೇಖನಗಳ ಸಂಪಾದನೆಗೆ ತೊಡಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ.  ಸಂಪಾದಕರು ಲೇಖನಗಳನ್ನು ಸಂಪಾದಿಸಬಹುದು, ಪರಿಷ್ಕರಿಸಬಹುದು ಹಾಗೂ ಹೊಸ ಮಾಹಿತಿ ಲೇಖನಗಳನ್ನು ಸೇರಿಸಬಹುದು. ಹೀಗೆ ಸಂಪಾದಿಸುವುದರಿಂದ ಇಂದು ಜಗತ್ತಿನ ಹಲವು ವಿಷಯಗಳ ಮಾಹಿತಿಯ ಲೇಖನಗಳು ಅಂತರಜಾಲದಲ್ಲಿ ಲಭ್ಯವಾಗುತ್ತಿವೆ.  ವಿಕಿಪೀಡಿಯದಲ್ಲಿ ಲೇಖನ ಬರೆಯುವವರು ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಬೇಕು.

ಲಾಗಿನ್ ಆಗುವುದು : ಲಾಗಿನ್ ಆಗಿ ಮಾಹಿತಿ ಭರಿತ ವಿಶ್ವಕೋಶ ಮಾದರಿಯ ಲೇಖನಗಳನ್ನು ವಿಕಿಪೀಡಿಯದಲ್ಲಿ ಬರೆಯುವುದು ಉಪಯುಕ್ತ.  ಆದರೆ ನೆನಪಿಡಿ ವಿಕಿಪೀಡಿಯ ಒಂದು ವಿಶ್ವಕೋಶವಾದುದರಿಂದ ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಗಿರಬೇಕು.

ಚಿತ್ರ ಸೇರಿಸುವುದು : ಪ್ರತಿಯೊಂದು ಲೇಖನಕ್ಕೂ ಕನಿಷ್ಟಪಕ್ಷ ಒಂದು ಚಿತ್ರವನ್ನು ನೀಡಬೇಕು.  ಈ ಸ್ವಂತ ತೆಗೆದ ಚಿತ್ರವನ್ನು ವಿಕಿಮಿಡಿಯ ಕಾಮನ್ಸ್ (https://commons.wikimedia.org) ಮೂಲಕ ಸೇರಿಸಬೇಕು.  ಗೂಗಲ್‌ನಿಂದ ಅಥವಾ ಇತರ ಜಾಲತಾಣಗಳಿಂದ ಚಿತ್ರಗಳನ್ನು ಪಡೆದು ಅವನ್ನು ಸೇರಿಸುವಂತಿಲ್ಲ.

3)      ಆಂತರಿಕ ಕೊಂಡಿ ನೀಡುವುದು : ವಿಕಿಪೀಡಿಯದಲ್ಲಿನ ಲೇಖನಗಳು ಒಂದಕ್ಕೊಂದು ಕೊಂಡಿ (Hyperlink) ಯಾಗಿದ್ದು, ಅವು ಪರಸ್ಪರ ಉಲ್ಲೇಖಗಳೊಂದಿಗೆ ಪ್ರತಿಯೊಂದು ಲೇಖನವು ಕಡಿಮೆ ಪಕ್ಷ ೫ ಕೊಂಡಿಯನ್ನು ಹೊಂದಿರುತ್ತವೆ.  ಈ ಕೊಂಡಿ ಪದವನ್ನು ಒತ್ತಿದಾಗ ಪ್ರತ್ಯೇಕ ಪುಟವನ್ನು ತೆರೆದುಕೊಳ್ಳುತ್ತದೆ.

4)      ಬಾಹ್ಯ ಕೊಂಡಿ ನೀಡುವುದು : ಪ್ರತಿಯೊಂದು ಲೇಖನದ ಅಂತ್ಯದಲ್ಲೂ ಹಲವಾರು ಬಾಹ್ಯ ಕೊಂಡಿಗಳಿರುತ್ತವೆ.  ಅವುಗಳು ಇತರ ಕುತೂಹಲಕಾರಿ ಲೇಖನಗಳು ಅಥವಾ ಸೂಕ್ತ ಬಾಹ್ಯ ಜಾಲತಾಣಗಳು, ಪುಟಗಳೂ, ಆಕರ ವಿಷಯಗಳು ಅಥವಾ ನಿರ್ದಿಷ್ಟ ಜ್ಞಾನಕ್ಷೇತ್ರದ ವ್ಯವಸ್ಥಿತ ವಿಭಾಗಗಳ ಬಗ್ಗೆ ಮಾಹಿತಿಯನ್ನು ನೀಡಬಲ್ಲವು.  ಯಾವುದಾದರೂ ಕೆಲವು ನಿರ್ದಿಷ್ಟ ಬೆಸುಗೆಗಳು ಅಲಭ್ಯವಾಗಿದ್ದಲ್ಲಿ ಅವುಗಳನ್ನು ಸೇರಿಸಲು ಸಹ ಬಾಹ್ಯ ಬೆಸುಗೆಯಲ್ಲಿ ಅವಕಾಶವಿದೆ.

5)      ಉಲ್ಲೇಖ ನೀಡುವುದು : ಪ್ರತಿಯೊಂದು ಲೇಖನಕ್ಕೂ ಉಲ್ಲೇಖವನ್ನು (Reference) ಸೂಚಿಸುವ ಇಂಟರ್‌ನೆಟ್‌ನ ಅತಿ ದೊಡ್ಡ ಮತ್ತು ಪ್ರಸಿದ್ದ ಜಾಲತಾಣ ವಿಕಿಪೀಡಿಯ.  ಒಂದು ಲೇಖನದಲ್ಲಿ ಬರೆದಿರುವ ಮಾಹಿತಿಗೆ ಉಲ್ಲೇಖಗಳನ್ನು ಕೊಡುವುದು ಕಡ್ಡಾಯವಾಗಿತ್ತದೆ.

6)      ಇತಿಹಾಸ ಪುಟ : ವಿಕಿಪೀಡಿಯದಲ್ಲಿ ಬರೆದ ಯಾವುದೇ ಲೇಖನದ ಲೇಖಕರ ಹೆಸರು ಇತಿಹಾಸ ಪುಟದಲ್ಲಿ ದಾಖಲಾಗಿರುತ್ತದೆ.  ಇದರಿಂದ ಯಾವುದೇ ಲೇಖನದ ಹಿಂದಿನ ಮತ್ತು ನಂತರದ ಆವೃತ್ತಿಯ ಬದಲಾವಣೆಗಳನ್ನು ನೋಡಬಹುದು.  ಹಾಗೂ ಅವಶ್ಯವಿಲ್ಲದ ಬದಲಾವಣೆಗಳನ್ನು ತೆಗೆದುಹಾಕಬಹುದು.

7)      ಚರ್ಚಾಪುಟ : ವಿಕಿಪೀಡಿಯದಲ್ಲಿ ಹಲವು ಸಂಪಾದಕರ ಕೆಲಸಗಳನ್ನು ಸರಿಯಾಗಿ ರಚಿಸಲು ಸಹಕಾರಿಯಾಗಿ ‘ಚರ್ಚೆ’ ಪುಟಗಳಿವೆ.  ಇದೊಂದು ವಿಕಿಪೀಡಿಯ ಸಂವಾದ ವ್ಯವಸ್ಥೆಯಾಗಿದ್ದು, ಲೇಖನದ ಬಗೆಗೆ ಭಿನ್ನಾಭಿಪ್ರಾಯಗಳಿದ್ದರೆ ಚರ್ಚಾ ಪುಟದಲ್ಲಿ ಸಂಪಾದಕರು ಅಭಿಪ್ರಾಯ ತಿಳಿಸಬಹುದು.

8)      ಸದಸ್ಯರ ಪುಟ : ವಿಕಿಪೀಡಿಯಕ್ಕೆ ಲಾಗಿನ್ ಆದ ಕೂಡಲೇ ಪುಟದ ಮೇಲ್ಭಾಗದಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳುತ್ತದೆ.  ಆ ಹೆಸರನ್ನು ಒತ್ತಿದ್ದಾಗ ಒಂದು ಹೊಸ ಪುಟ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮನ್ನು ನೀವೇ ಪರಿಚಯಿಸಿಕೊಳ್ಳಿ.  ಸಾಧ್ಯವಾದರೆ ನಿಮ್ಮ ವೈಯಕ್ತಿಕ ಮಾಹಿತಿ (ರೆಸ್ಯೂಮ್) ತಯಾರಿಸಬಹುದು.  ಫೋಟೋ ಹಾಕಬಹುದು.

9)      ಲೇಖನಗಳ ವರ್ಗೀಕರಣ : ವಿಕಿಪೀಡಿಯ ಲೇಖನ ಬರೆದಾದ ನಂತರ ವರ್ಗೀಕರಿಸಿಕೊಳ್ಳಬೇಕು.  ಒಂದೇ ಮಾಹಿತಿಯ ಹಲವು ಲೇಖನಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗದಿದ್ದರೂ ವರ್ಗೀಕರಣದಲ್ಲಿ ಅವುಗಳ ಪತ್ತೆಯಾಗುತ್ತದೆ.  ಉದಾ: ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಇತ್ಯಾದಿ ಲೇಖನಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರು ಎಂಬುದಾಗಿ ವರ್ಗೀಕರಣ ಮಾಡುವುದು.

10)     ಸ್ವ–ಪರಿಚಯ : ವ್ಯಕ್ತಿಪರಿಚಯಿಸುವಾಗ ಸಾಧಕರನ್ನು ಮಾಹಿತಿ ಲೇಖನವಾಗಿ ಬರೆಯಬೇಕು.  ಉದಾ: ಕವಿಪರಿಚಯ ಮಾಡುವಾಗ ಅನುಸರಿಸುವ ಕ್ರಮವನ್ನು ಇಲ್ಲೂ ಮಾಡಬಹುದು.  ಕವಿ-ಕವಿಕಾಲ,ದೇಶ-ಆಸಕ್ತಿಯ ಕ್ಷೇತ್ರ-ಸಾಧನೆಗಳು-ಪ್ರಶಸ್ತಿಗಳು-ಉಲ್ಲೇಖಗಳು ಇತ್ಯಾದಿ ಅಂಶಗಳು ಇರಬೇಕು.  ಹಾಗಾಗಿ ಲೇಖಕರು ತಮ್ಮನ್ನು ತಾವೇ ಲೇಖನವಾಗಿ ಬರೆಯುವಂತಿಲ್ಲ.  ತಮ್ಮ ಪರಿಚಯವನ್ನು ತಾವೇ ಸದಸ್ಯರ ಪುಟದಲ್ಲಿ ಮಾತ್ರ ನೀಡಬಹುದು.

11)     ಗಮನಾರ್ಹತೆ ಅಂಶ : ವಿಕಿಪೀಡಿಯ ಲೇಖನಗಳು ಗಮನಾರ್ಹ ವಿಷಯಗಳ ಬಗ್ಗೆ ಇರಬೇಕು.  ಅಂದರೆ ವಿಷಯಗಳು ವಿಶ್ವದ ಗಮನ ಸೆಳೆಯುವಂತಿರಬೇಕು.  ಗಮನಾರ್ಹ ಪ್ರಸಾರವ್ಯಾಪ್ತಿ ಇರಬೇಕು.

12)     ನಿಷ್ಪಕ್ಷಪಾತ ದೃಷ್ಟಿಕೋ : ಲೇಖನಗಳು ಯಾವುದೇ ಪಕ್ಷ, ಸಿದ್ಧಾಂತವನ್ನು ಬೆಂಬಲಿಸಬಾರದು.  ಆದರೆ ಎರಡು ಪಕ್ಷಗಳ ವಾದವನ್ನೂ ವಿವರಿಸಬೇಕು.  ವೈಯಕ್ತಿಕ ಅಭಿಪ್ರಾಯಗಳಿರಬಾರದು.  ತಟಸ್ಥ ಭಾಷೆ ಬಳಸಬೇಕು.

13)     ಕೃತಿಚೌರ್ಯ : ಬೇರೆಯವರ ಕೆಲಸವನ್ನು ತನ್ನದೆಂದು ಹಕ್ಕು ಸಾಧಿಸಲು ವಿಕಿಪೀಡಿಯನ್ನರು ಬಯಸುವುದಿಲ್ಲ.  ಎಲ್ಲಿ ಸಾಧ್ಯವೋ ಅಲ್ಲಿ ಮೂಲಕ್ಕೆ ಮನ್ನಣೆ ಕೊಡಬೇಕು.  ಮೂಲಕ್ಕೆ ಸಂಬಂಧಿಸಿದ ಉಲ್ಲೇಖವನ್ನು ನೀಡಬೇಕು.  ಉದಾ: ಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳು, ಅಂತರಜಾಲ ಪುಟಗಳು, ಶೈಕ್ಷಣಿಕ ಪ್ರಕಟಣೆಗಳು ಇತ್ಯಾದಿ. ಕೃತಿಚೌರ್ಯದಿಂದ ಮೂಲ ಬರಹಗಾರನಿಗೆ ಮೋಸಮಾಡಿದಂತಾಗುತ್ತದೆ.  ಕಾನೂನು ರೀತ್ಯಾ ಅಪರಾಧವೂ ಆಗುತ್ತದೆ.

14)     ವಿಕಿಪೀಡಿಯದಲ್ಲಿ ಏನು ಬೇಕು? ಏನು ಬೇಡ?  :

ಬೇಕು – ವಿಶ್ವಕೋಶದ ಶೈಲಿಯ ಲೇಖನಗಳು ಬೇಕು. ಲೇಖನದ ವಿಷಯ ಪ್ರಪಂಚಕ್ಕೆಲ್ಲ ಉಪಯುಕ್ತವಾಗುವಂತಿರಬೇಕು. ವಿಜ್ಞಾನ, ತಂತ್ರಜ್ಞಾನ, ಮಾಹಿತಿ ಸಾಹಿತ್ಯ ಇತ್ಯಾದಿ ಅಗತ್ಯವಾಗಿ ಇರಬೇಕು.

ಬೇಡ – ಯಾವುದೇ ಬ್ಲಾಗ್ ಮಾದರಿಯ ಪ್ರಬಂಧಗಳು, ಲೇಖನಗಳು, ವಿಮರ್ಶಾ ಬರಹಗಳು, ವೈಯಕ್ತಿಕ ಅಭಿಪ್ರಾಯಗಳು, ಜಾಹೀರಾತು ಮಾದರಿ ಲೇಖನಗಳು, ಕಥೆ, ಕವನ, ಕಾದಂಬರಿ, ಮಹಾಕಾವ್ಯ, ಜನಪದ ಕತೆ, ಗಾದೆ, ಒಗಟು, ಲಾವಣಿ, ಪಾಡ್ದನ, ಹೊಗಳಿಕೆ-ತೆಗಳಿಕೆ ಭಾಷೆ, ನಿಮ್ಮ ಬಗ್ಗೆ ಬರೆಯುವುದು, ಲೇಖನದಲ್ಲಿ ನಿಮ್ಮ ಹೆಸರು ಬರೆಯುವುದು ಮುಂತಾದವನ್ನು ವಿಕಿಪೀಡಿಯದಲ್ಲಿ ಸೇರಿಸುವಂತಿಲ್ಲ.

15)     ಉಪಯುಕ್ತತೆ : ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗೆಗೆ ಮಾತ್ರ ಇರಲಿ.  ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಭಾಷೆ, ಸಾಹಿತ್ಯ, ಚರಿತ್ರೆ ವಿಷಯಗಳ ಲೇಖನಗಳನ್ನು ಅತೀಅಗತ್ಯವಾಗಿ ಸೇರಿಸುವ ಕೆಲಸ ಆಗಬೇಕಿದೆ.  ಹೀಗೆ ಸೇರಿಸುವಾಗ ಇದೇ ವಿಷಯದಲ್ಲಿ ಬೇರೆ ಶೀರ್ಷಿಕೆಯಲ್ಲಿ ಲೇಖನಗಳಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

ವಿಕಿಪೀಡಿಯ ಮಾಹಿತಿಗಳು ವಿಶ್ವಾಸಾರ್ಹವೇ?

ವಿಕಿಪೀಡಿಯದಲ್ಲಿನ ದಾಖಲೆಗಳು ಮತ್ತು ಮಾಹಿತಿಗಳು ಅವು ಸ್ವಯಂ ಪರಿಪೂರ್ಣವೆಂದು ಭಾವಿಸಬಾರದು.  ಅವುಗಳನ್ನು ನಿರಂತರವಾಗಿ ಪರಿಷ್ಕರಣೆ ಹಾಗೂ ಸುಧಾರಣೆಗೆ ಒಳಪಡಿಸಲಾಗುತ್ತಿರುತ್ತದೆ.  ಇದರಿಂದ ಕ್ರಮೇಣ ಅವುಗಳ ದರ್ಜೆ ಮತ್ತೆ ಗುಣಮಟ್ಟಗಳ ಮೌಲ್ಯವರ್ಧನೆಗೆ ಸಹಾಯವಾಗುತ್ತದೆ.  ವಿಕಿಪೀಡಿಯದ ಎಲ್ಲ ಮಾಹಿತಿಗಳೂ ಲೇಖನ ತಯಾರಿಯ ಪ್ರಾರಂಭದಲ್ಲಿಯೇ ಗುಣಮಟ್ಟದ ಮಾಹಿತಿಯೆಂದು ಬಳಕೆದಾರರು ಭಾವಿಸಬಾರದು.  ಕೆಲವು ಲೇಕನಗಳಲ್ಲಿ ಬರೆದ ವಾಕ್ಯಗಳು ಚರ್ಚಾಸ್ಪದ ವಿಷಯಗಳಾಗಿರುವ ಸಾಧ್ಯತೆಗಳಿವೆ.  ಕೆಲವು ವಾಕ್ಯಗಳು ಒಂದು ದೃಷ್ಟಿಕೋನವನ್ನು ಮಾತ್ರ ಪ್ರತಿನಿಧಿಸಬಹುದು.   ವಾದ ವಿವಾದಗಳು ಮತ್ತು ಚರ್ಚೆಗಳಿಂದ ಕೂಡಿದ ಸುದೀರ್ಘ ವೈಚಾರಿಕ ಪ್ರಕ್ರಿಯೆಯ ನಂತರವೇ ಒಂದು ಒಮ್ಮತದ ಮತ್ತು ಅಲಿಪ್ತ ದೃಷ್ಟಿಕೋನವನ್ನು ನಿರ್ಧರಿಸಲಾಗುವುದು.  ಅಲ್ಲದೆ ತಜ್ಞ ಪರಿಷ್ಕರಣಕಾರರು ಯಾವುದೇ ಒಂದು ಲೇಖನದ ವಿಷಯ ಅಥವಾ ವಿಧಾನಗಳ ಬಗೆಗೆ ಅಭಿಪ್ರಾಯ ಭೇದವನ್ನು ತೋರಿದರೆ ಅಂತಹ ಸಂದರ್ಭಗಳಲ್ಲಿ ಅವರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರಿಗೆ ನೆರವಾಗಲು ವಿಕಿಪೀಡಿಯ ಹಲವಾರು ಆಂತರಿಕ ವಿವಾದ ನಿವಾರಣಾ ಪ್ರಕ್ರಿಯೆಗಳನ್ನು ವ್ಯವಸ್ಥೆಗೊಳಿಸಿದೆ. ವಿಕಿಪೀಡಿಯಕ್ಕೆ ತಕ್ಕುದಲ್ಲದ ಲೇಖನಗಳನ್ನು ನಿರ್ವಾಹಕರು ಅಳಿಸುವ ಹಾಕುವ ಪ್ರಕ್ರಿಯೆಯೂ ವಿಕಿಪೀಡಿಯದಲ್ಲಿದೆ.

ವಿಕಿಪೀಡಿಯ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬಹುದೇ?

ವಿಕಿಪೀಡಿಯದಲ್ಲಿನ ಲೇಖನಗಳೂ ಕೆಲವು ಆದರ್ಶ ಲಕ್ಷಣಗಳನ್ನು ಹೊಂದಿರುತ್ತವೆ.  ಅವು ಉತ್ತಮ ಶಬ್ದ ಸಂಪತ್ತಿನಿಂದ ಕೂಡಿದ್ದು ಸಮತೋಲಿತ, ತಟಸ್ಥ ಹಾಗೂ ಮಾಹಿತಿಕೋಶ ದರ್ಜೆಯ ಮಾಹಿತಿಯನ್ನು ಹೊಂದರುತ್ತವೆ.  ಅಲ್ಲದೆ ಅವು ವ್ಯಾಪಕ ಪುರಾವೆಗಳನ್ನು ಒದಗಿಸಲು ಸಮರ್ಥವಾದ ದಾಖಲೆಗಳಾಗಿರುತ್ತವೆ.

ವಿಕಿಪೀಡಿಯದಲ್ಲಿ ಕಂಡು ಬರುವ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬೇಕಾದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದುದು ಅವಶ್ಯಕ.  ಏಕೆಂದರೆ ಇಲ್ಲಿನ ಹಲವಾರು ಲೇಖನಗಳ ಮಾಹಿತಿಗಳು ಸ್ವಾಭಾವಿಕವಾಗಿ ತಮ್ಮ ಪ್ರಬುದ್ಧತೆ ಮತ್ತು ಬೌದ್ಧಿಕ ದರ್ಜೆಗಳಲ್ಲಿ ಗಣನೀಯ ಪ್ರಮಾಣದ ಏರುಪೇರುಗಳನ್ನು ತೋರಿಸಬಹುದು.  ಸಂಶೋಧಕರು ಈ ಬಗ್ಗೆ ಜಾಗೃತರಾಗುವಂತೆ ನೆರವಾಗಲು ಹಲವಾರು ಮಾರ್ಗಸೂಚಿಗಳು ಮತ್ತು ಸೂಚನಾ ಪುಟಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ವಿಕಿಪೀಡಿಯದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಪರಿಷ್ಕರಿಸಲು ಸಾಧ್ಯವಿರುವುದರಿಂದ ಕೆಲವು ತಪ್ಪು ಮಾಹಿತಿಗಳು ಸೇರ್ಪಡೆ ಆಗುವ ಹಾಗೂ ಆಗಿರುವ ಸಾಧ್ಯತೆಗಳೂ ಉಂಟು.  ಹಾಗಾಗಿ ಅಂತಹ ಮಾಹಿತಿಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.

ಆಗಾಗ ತಲೆದೋರಬಹುದಾದ ದುರ್ಬಳಕೆ ಅಥವಾ ವಿವಾದಗಳನ್ನು ಪರಿಹರಿಸಲು ವಿಕಿಪೀಡಿಯ ಸಮೃದ್ಧವಾದ ವಿಧಾನಗಳನ್ನು ಹೊಂದಿದೆ.  ಆ ವಿಧಾನಗಳನ್ನು ತೀವ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಅವುಗಳ ವಿಶ್ವಾಸಾರ್ಹತೆ ಅತಿ ಉನ್ನತಮಟ್ಟದ್ದಾಗಿದೆ.

ವಿಕಿಪೀಡಿಯಕ್ಕೆ ಸಮಗ್ರ ಮಾಹಿತಿ ಬಂದರೆ ಭಾಷೆ, ಜನಪದ ಸಂಸ್ಕೃತಿ, ಚರಿತ್ರೆ ಇತ್ಯಾದಿ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುವವರಿಗೆ ಹೆಚ್ಚು ಪ್ರಯೋಜನವಾಗಬಹುದು.

ಕನ್ನಡ ವಿಕಿಪೀಡಿಯ ಅಗತ್ಯವೇ?

ಕನ್ನಡ ವಿಕಿಪೀಡಿಯವು ಜೂನ್ ೨೦೦೩ರಂದು ಪ್ರಾರಂಭವಾಯಿತು.  ಭಾರತದ ೨೩ ಭಾಷೆಗಳಲ್ಲಿ ವಿಕಿಪೀಡಿಯವು ಕಾರ್ಯನಿರ್ವಹಿಸುತ್ತಿದ್ದು ಅವುಗಳಲ್ಲಿ ಕನ್ನಡವೂ ಪ್ರಮುಖ ಭಾಷೆಯಾಗಿ ಗುರುತಿಸಿಕೊಂಡಿದೆ.  ಕನ್ನಡ ಭಾಷೆ ಉಳಿದು ಬೆಳೆಯಬೇಕಾದರೆ ಕನ್ನಡದಲ್ಲಿ ಜನರಿಗೆ ಅಗತ್ಯವಾದ ಪ್ರಪಂಚಜ್ಞಾನದ ಮಾಹಿತಿ ಲಭ್ಯವಿರಬೇಕು.  ಕನ್ನಡ ಭಾಷೆಯಲ್ಲಿ ಪ್ರಪಂಚಜ್ಞಾನವನ್ನು ಸುಲಭವಾಗಿ ತರಲು ಸಹಾಯ ಮಾಡುವುದು ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯ.  ಕನ್ನಡ ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರಾಗಿರಬೇಕೆಂಬ ಕಟ್ಟಳೆಯಿಲ್ಲ.  ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ.  ಬೇರೆ ಬೇರೆ ದೇಶ-ಭಾಷೆಗಳ ಹಿನ್ನೆಲೆ ತಿಳಿದ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ.  ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ.  ನಿಮಗೆ ತಿಳಿದಷ್ಟನ್ನು ನೀವು ಸೇರಿಸಿ.  ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರೂ ಸೇರಿಸುತ್ತಾರೆ.

ಕನ್ನಡ ವಿಕಿಪೀಡಿಯ

೨೦೧೭ ಮೇ ತಿಂಗಳಲ್ಲಿ ಕನ್ನಡದ ವಿಕಿಪೀಡಿಯದಲ್ಲಿ ೨೧,೯೫೭ ಲೇಖನಗಳು ಇವೆ. ೯೬ ಮಂದಿ ಸಂಪಾದಕರು ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯವಾಗಿ ಸಂಪಾದಿಸುತ್ತಿದ್ದಾರೆ.  ಕನ್ನಡ ವಿಕಿಪೀಡಿಯಕ್ಕೆ ಈ ವರೆಗೆ ಲಾಗಿನ್ ಆದವರು ೩೭,೫೯೬.  ತಿಂಗಳಿಗೆ ಸುಮಾರು ೪,೬೧೨ರಷ್ಟು ಸಂಪಾದನೆಗಳು ಆಗುತ್ತಿವೆ.  ಸುಮಾರು ೧೧ ಲಕ್ಷ ಮಂದಿ ಪ್ರತಿ ತಿಂಗಳಿಗೆ ಕನ್ನಡ ವಿಕಿಪೀಡಿಯವನ್ನು ವೀಕ್ಷಿಸುತ್ತಿದ್ದಾರೆ.

ವಿಕಿಪೀಡಿಯಕ್ಕೆ ಲೇಖನವನ್ನು ಬರೆಯುವುದರಿಂದ, ಸಂಪಾದಿಸುವುದರಿಂದ ಏನು ಲಾಭ?

ಭಾಷಾಭಿಮಾನಿಗಳು ಯಾವುದೇ ಲಾಭದ ಆಕಾಂಕ್ಷಿಗಳಾಗಿರಬಾರದು.  ಕನ್ನಡ ವಿಕಿಪೀಡಿಯದಲ್ಲಿ ಬರೆಯುವ ಲೇಖಕರಿಗೆ ಆರ್ಥಿಕ ಲಾಭವೇನೂ ಇಲ್ಲ.  ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ.  ವಿಕಿಪೀಡಿಯದಲ್ಲಿ ಬರೆಯುವವರು ನಿಜವಾದ ಸ್ವಾರ್ಥರಹಿತ ಸಮಾಜಸೇವಕರಾಗುತ್ತಾರೆ.  ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ವಿಕಿಪೀಡಿಯದಲ್ಲಿ ಲೇಖನ ಬರೆಯುವುದು ಅತೀ ಅಗತ್ಯ.

ವಿಕಿಪೀಡಿಯದಲ್ಲಿ ಲೇಖನ ಬರೆಯುವುದರಿಂದ ವಿದ್ಯಾರ್ಥಿಗಳ ಭಾಷಾ ಕೌಶಲ್ಯ, ಬರವಣಿಗೆ ಕ್ರಮ, ಸ್ಥಳೀಯ ಸಂಸ್ಕೃತಿಗಳ ತಿಳುವಳಿಕೆ, ಸಂಶೋಧನ ಪ್ರವೃತ್ತಿ, ಚಿಂತನಕ್ರಮಗಳ ಗುಣಮಟ್ಟವನ್ನು ಹೆಚ್ಚಿಸಬಹುದು.

ನಿಮ್ಮ ಬರವಣಿಗೆಯ ಶೈಲಿಯನ್ನು ಉತ್ತಮ ಪಡಿಸಿಕೊಳ್ಳಬಹುದು, ನಿಮ್ಮ ವಿಮರ್ಶಾತ್ಮಕ ಆಲೋಚನೆಯನ್ನು ತೀಕ್ಷ್ಣಗೊಳಿಸಬಹುದು, ನಿಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಲು, ಸಹಕಾರದೊಂದಿಗೆ ಕೆಲಸ ಮಾಡುವುದನ್ನು ಕಲಿಯಲು, ನಿಮ್ಮ ಬರವಣಿಗೆಯನ್ನು ವಿಶ್ವವ್ಯಾಪಿ ಹಂಚಿ ಓದುಗರನ್ನು ಪಡೆಯಲು, ನಿಮ್ಮ ಸಂಶೋಧನಾ ಕೌಶಲವನ್ನು ಉತ್ತಮಗೊಳಿಸಲು ಮತ್ತು ನಿಮ್ಮ ವೈಯಕ್ತಿಕ ಮಾಹಿತಿ (resume)  ಯನ್ನು ಬರೆದುಕೊಳ್ಳಲು ವಿಕಿಪೀಡಿಯ ಸಹಕಾರಿ.

ವಿದ್ಯಾರ್ಥಿಗಳಲ್ಲಿ ಕನ್ನಡ ಟೈಪಿಂಗ್ ಮತ್ತು ಕಂಪ್ಯೂಟರ್ ತಿಳುವಳಿಕೆಯನ್ನು ಹೆಚ್ಚಿಸಬಹುದು.  ಕನ್ನಡ ನುಡಿ, ಬರಹ, ಲಿಪ್ಯಂತರ ಇತ್ಯಾದಿ ತಂತ್ರಾಂಶಗಳನ್ನು ಬಳಸಿ ಸುಲಭವಾಗಿ ಟೈಪ್ ಮಾಡಲು ಅಭ್ಯಾಸವಾಗುವುದು.

ವಿದ್ಯಾರ್ಥಿಗಳಿಗೆ ಅನ್ಯಭಾಷೆಯಿಂದ ಕನ್ನಡಕ್ಕೆ ಅನುವಾದಿಸುವ ಕಾರ್ಯ ಸುಲಭವಾಗಿ ತಿಳಿಯುವುದು.

ಕನ್ನಡವನ್ನು ಜಾಗತಿಕ ಭಾಷೆಯಾಗಿ ಕೊಂಡೊಯ್ಯುವ ಪ್ರಯತ್ನ ಮಾಡಬಹದು.

ಕನ್ನಡ ಭಾಷೆಯಲ್ಲಿ ಜ್ಞಾನಸಾಹಿತ್ಯ ಸೃಷ್ಟಿಮಾಡುವ ಮೂಲಕ ಕನ್ನಡ ಭಾಷೆ ಬೆಳೆಯಲು ಸಹಾಯವಾಗುವುದು.

ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಆಚರಿಸಲು ಮತ್ತು ರಕ್ಷಿಸಲು, ಬರೆಯಲು, ವಿಷಯಾಸಕ್ತಿಗಾಗಿ, ಸಹಕಾರ ಮನೋಭಾವಕ್ಕಾಗಿ (collaborate) ಸಂಪಾದಿಸುತ್ತಾರೆ.

ವಿಕಿಪೀಡಿಯದ ಖಾತೆ ತೆರೆದು ಲೇಖನ ಬರೆಯುವುದು ಹೇಗೆ?

ಕನ್ನಡ ವಿಕಿಪೀಡಿಯ ಸಂಪಾದಕರಾಗುವುದು ತುಂಬ ಸುಲಭ. kn.wikipedia.org ಜಾಲತಾಣವನ್ನು ತೆರೆದು ಹೊಸ  ಖಾತೆ ತೆರೆಯಿರಿ.

ಸಹಾಯ ಪುಟಕ್ಕೆ ಭೇಟಿ ನೀಡಿ.  ಅಲಲ್ಲಿ ಕೊಂಡಿ ನೀಡಿರುವ ಟ್ಯುಟೊರಿಯಲ್ ಕಡತ ಮತ್ತು ವೀಡಿಯೋಗಳನ್ನ ವೀಕ್ಷಿಸಿ.  ಪ್ರಯೋಗಪುಟದಲ್ಲಿ ಲೇಖನ ಬರೆಯುವುದನ್ನು ಅಭ್ಯಾಸ ಮಾಡಿ, ಸಹಾಯ ಪುಟವನ್ನು ನೋಡಿ, ಅಲ್ಲಿ ನೀಡಿರುವ ಟ್ಯುಟೋರಿಯಲ್ ವೀಡಿಯೋ ನೋಡಿ, ಈಗಾಗಲೇ ರಚನೆಯಾಗಿರುವ ಲೇಖನಗಳ ವ್ಯಾಕರಣ ತಿದ್ದುಪಡಿ,  ಸಂಪಾದಿಸಿ, ವಿಷಯ ಸೇರ್ಪಡೆ ಮತ್ತು ಶೈಲಿ ಬದಲಾವಣೆ ಮಾಡಲು ಪ್ರಯತ್ನಿಸಿ.  ಬರೆಯಬೇಕೆಂದಿರುವ ಲೇಖನವನ್ನು ಬೇರೆ ಬೇರೆ ವಿಧಾನದಲ್ಲಿ ಹುಡುಕಿ.  ಉದಾ: ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಕೆ.ವಿ.ಪುಟ್ಟಪ್ಪ ಹೀಗೆ ಒಂದೇ ವಿಷಯಕ್ಕೆ ಸಂಬಂಧಿಸಿದ ಹಲವು ಲೇಖನಗಳು ತಯಾರಾಗದಂತೆ ಜಾಗ್ರತೆವಹಿಸಿ.  ಹೊಸ ಲೇಖನಗಳನ್ನು ಸೃಷ್ಟಿ ಮಾಡಿ.  ಸಾಧ್ಯವಾದರೆ ಫೇಸ್‌ಬುಕ್‌ನಲ್ಲಿ ಕನ್ನಡ ವಿಕಿಪೀಡಿಯ ಗುಂಪಿಗೆ ಸೇರಿಕೊಂಡು ಜಗತ್ತಿನಾದ್ಯಂತ ವಿಕಿಪೀಡಿಯ ಸಮುದಾಯದ ಸದಸ್ಯರೊಂದಿಗೆ ಸಂಪರ್ಕವನ್ನು ಬೆಳೆಸಿಕೊಳ್ಳಿ.  ನೀವು ಬರೆಯುತ್ತಿರುವುದನ್ನು ನಿಮ್ಮ ಬ್ಲಾಗಿನಲ್ಲಿ ಬರೆದು ಸುದ್ದಿ ಮಾಡಿ.

ಕಾಲೇಜುಗಳಲ್ಲಿ ‘ವಿಕಿಪೀಡಿಯ ಶೈಕ್ಷಣಿಕ ಯೋಜನೆ’ ಆರಂಭಿಸುವುದು ಹೇಗೆ?

ಪದವಿ ವಿದ್ಯಾರ್ಥಿಗಳು WEP ಎಂಬ ಯೋಜನೆಯನ್ನು ಕಾಲೇಜುಗಳಲ್ಲಿ ಅಳವಡಿಸಿಕೊಳ್ಳಬಹುದು. WEP ಎಂದರೆ ವಿಕಿಪೀಡಿಯ ಶಿಕ್ಷಣ ಯೋಜನೆ (Wikipedia Education Program).  ಪದವಿ ಕಾಲೇಜುಗಳು ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗುವುದರಿಂದ ಈ ಯೋಜನೆಯನ್ನು ರೂಪಿಸಿಕೊಳ್ಳಬಹುದು.

ಈ ಯೋಜನೆ ಪರಿಣಾಮಕಾರಿ ಆಗಬೇಕಾದರೆ ಈ ಕೆಳಗಿನ ಕೆಲವು ಅಂಶಗಳನ್ನು ಬಳಕೆಗೆ ತರಬಹುದು.

ಕಾಲೇಜಿನಲ್ಲಿ ವಿಕಿಪೀಡಿಯ ಸಂಘವೊಂದನ್ನು ರಚಿಸುವುದು.

ಸಂಘವು ಪ್ರತೀ ಸೆಮಿಸ್ಟರ್‌ಗೆ ೫೦ ಅಂಕಗಳ ವ್ಯವಸ್ಥೆ ಹೊಂದಿರುವುದರಿಂದ ಕಾಲೇಜಿನ ಒಬ್ಬ ಪ್ರಾಧ್ಯಾಪಕರು ಮತ್ತು ಕಂಪ್ಯೂಟರ್ ಲಾಬ್‌ನ್ನು ಕಾಲೇಜು ಒದಗಿಸಕೊಡಬೇಕಾಗುತ್ತದೆ.

ಸಂಘಕ್ಕೆ ಸೇರಿದ ಪ್ರತಿಯೊಬ್ಬರೂ ವಿಕಿಪೀಡಿಯಕ್ಕೆ ಲಾಗಿನ್ ಆಗುವುದು.

ಒಟ್ಟು ನಾಲ್ಕು ಸೆಮಿಸ್ಟರ್‌ಗಳಲ್ಲ್ಲಿ ಸಂಘದ ಕಾರ್ಯಚಟುವಟಿಕ ಇರುವುದರಿಂದ ವಿದ್ಯಾರ್ಥಿಗಳಿಗೆ ವಿಕಿಪೀಡಿಯದಲ್ಲಿ ಲೇಖನ ಬರೆಯುವ ಬೇರೆ ಬೇರೆ ಕಾರ್ಯಾಗಾರಗಳನ್ನು ನಡೆಸಿ ಮಾಹಿತಿ ನೀಡಬಹುದು.

ವಿದ್ಯಾರ್ಥಿಗಳು ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್, ಹಿಂದಿ ಇತ್ಯಾದಿ ಭಾಷೆಗಳಲ್ಲಿ ಲೇಖನಗಳನ್ನು ಬರೆಯಬಹುದು.

ಲಾಗಿನ್ ಆದ ಸಂಘದ ವಿದ್ಯಾರ್ಥಿಗಳಿಗೆ ಎರಡು ವಿಕಿಪೀಡಿಯ ಸರ್ಟಿಫಿಕೇಟ್ ಕೋರ್ಸ್ ತಯಾರಿಸಬಹುದು.

ವಿಕಿಪೀಡಿಯ ಚಟುವಟಿಕೆಯನ್ನು ಆರಂಭಿಸಲು ಕರಾವಳಿ ವಿಕಿಮೀಡಿಯನ್ಸ್ ಮಂಗಳೂರು ಮತ್ತು ದಿ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿ, ಬೆಂಗಳೂರು ಈ ಎರಡು ಸಂಘಟನೆಗಳ ಸಹಾಯವನ್ನು ಪಡೆಯಬಹುದು.

(ಮೇ ೨೦೧೭ರ ವರೆಗಿನ ವಿಕಿಪೀಡಿಯ ಮಾಹಿತಿ ಆಧರಿಸಿ)

(ಮಂಗಳೂರು ವಿಶ್ವ ವಿದ್ಯಾಲಯದ ಡಿಗ್ರಿ ಕನ್ನಡ ಪಠ್ಯ ಪುಸ್ತಕ “ನುಡಿನಡೆ“ಯ ಒಂದು ಅಧ್ಯಾಯ)

ರಚನೆ:

-ಡಾ. ವಿಶ್ವನಾಥ ಬದಿಕಾನ,

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ,

ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು-೦೩

The post ವಿಕಿಪೀಡಿಯ ಲೇಖನ ಬರಹ first appeared on Vishva Kannada.

ತುಳು ವಿಕಿಪೀಡಿಯ ಈಗ ಸಿದ್ಧ
– ಡಾ. ಯು. ಬಿ. ಪವನಜ

ತುಳು ಭಾಷೆಗೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಬಹುಮಟ್ಟಿಗೆ ಬಾಯಿಮಾತಿನ ಭಾಷೆಯಾಗಿಯೇ ಉಳಿದು ಬೆಳೆದು ಬಂದಿದೆ. ತುಳು ಭಾಷೆಯಲ್ಲಿ ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿ ಅಡಕವಾಗಿದೆ. ತುಳು ಭಾಷೆಯಲ್ಲಿ ಹಳೆಯ ಪಾಡ್ದನ ಮತ್ತು ಇತರೆ ಸಾಹಿತ್ಯಗಳಲ್ಲದೆ ಆಧುನಿಕ ಕಥೆ, ಕವನ, ಕಾದಂಬರಿ, ನಾಟಕ ಇತ್ಯಾದಿ ಕಥನ ಸಾಹಿತ್ಯವೂ ಬೇಕಾದಷ್ಟು ಸೃಷ್ಠಿಯಾಗಿದೆ. ತುಳು ಭಾಷೆಯಲ್ಲಿ ನಾಟಕ ಪ್ರದರ್ಶನ ಮತ್ತು ಚಲನಚಿತ್ರಗಳೂ ಆಗುತ್ತಿವೆ. ತುಳುನಾಡು ಮತ್ತು ತುಳು ಭಾಷೆಯ ಬಗ್ಗೆ ಹಲವಾರು ಸಂಶೋಧನೆಗಳು ಆಗಿವೆ ಮಾತ್ರವಲ್ಲ ಅವುಗಳು ಪುಸ್ತಕರೂಪದಲ್ಲೂ ಲಭ್ಯವಿವೆ. ಆದರೆ ಒಂದು ದೊಡ್ಡ ಕೊರತೆ ಎಂದರೆ ತುಳು ಭಾಷೆಯಲ್ಲಿ ಯಾವುದೇ ವಿಶ್ವಕೋಶ ತಯಾರಾಗಿಲ್ಲ. ಅಷ್ಟು ಮಾತ್ರವಲ್ಲ ವಿಶ್ವಕೋಶ ಶೈಲಿಯ ಮಾಹಿತಿ ಸಾಹಿತ್ಯ ವರ್ಗದ ಪುಸ್ತಕಗಳ ಸಂಖ್ಯೆ ತುಳು ಭಾಷೆಯಲ್ಲಿ ಅತಿ ಕಡಿಮೆ.

ಒಂದು ಭಾಷೆ ಉಳಿದು ಬೆಳೆಯಬೇಕಾದರೆ ಅದನ್ನು ಜನರು ಬಳಸುವುದು ಅತೀ ಮುಖ್ಯ. ಜನರು ಭಾಷೆಯನ್ನು ಬಳಸಬೇಕಾದರೆ ಅವರಿಗೆ ಆ ಭಾಷೆಯಲ್ಲಿ ದಿನನಿತ್ಯದ ವ್ಯವಹಾರಕ್ಕೆ ಅತೀ ಅಗತ್ಯವಾದ ಮಾಹಿತಿ ದೊರೆಯುವುದೂ ಅಷ್ಟೇ ಮುಖ್ಯವಾಗುತ್ತದೆ. ಈ ಮಾಹಿತಿ ವಿಜ್ಞಾನ, ತಂತ್ರಜ್ಞಾನ, ಕಾನೂನು, ವೈದ್ಯಕೀಯ, ಕೃಷಿ, ಸಂಗೀತ, ಧಾರ್ಮಿಕ, ಇತ್ಯಾದಿ ಯಾವುದೇ ಆಗಿರಬಹುದು. ಸರಳವಾಗಿ ಹೇಳಬೇಕಾದರೆ ಮಾಹಿತಿ ಸಾಹಿತ್ಯದ ಅಗತ್ಯ ಇದೆ. ತುಳು ಭಾಷೆಯಲ್ಲಿ ಇಂತಹ ಸಾಹಿತ್ಯ ಇಲ್ಲವೇ ಇಲ್ಲ.

ಇನ್ನೂ ಒಂದು ವಿಷಯದ ಕಡೆ ಗಮನ ಹರಿಸೋಣ. ತುಳುನಾಡಿನ ಶಾಲೆಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಸೇರಿಸಿದ್ದಾರೆ. ಈ ಭಾಷೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಓದಲು ಪಠ್ಯಪುಸ್ತಕದ ಹೊರತಾಗಿ ಏನಿದೆ? ಕೆಲವು ಕಥೆ, ಕಾದಂಬರಿ, ಕವನ ಸಂಕಲನಗಳಿವೆ ಎಂದು ಕೆಲವರು ಹೇಳಬಹುದು. ಆದರೆ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಸಾಹಿತ್ಯ ಎಷ್ಟಿದೆ? ಎಲ್ಲಕ್ಕಿಂತ ಮುಖ್ಯವಾಗಿ ಅವರ ಪಠ್ಯದಲ್ಲಿ ಇರುವ ವಿಷಯಗಳಿಗೆ ಪೂರಕವಾಗಿ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅವರು ಏನನ್ನು ಓದಬೇಕು? ಅಂತಹ ವಿಷಯಗಳು ತುಳು ಭಾಷೆಯಲ್ಲಿ ಓದಲು ಲಭ್ಯವಿದೆಯೇ? ಉತ್ತರ ನಿರಾಶಾದಾಯಕವಾಗಿದೆ.

ಇಷ್ಟು ಪೀಠಿಕೆಯಿಂದ ಒಂದು ಅಂಶವನ್ನು ನಾವು ಸಾಬೀತುಪಡಿಸಿದಂತಾಯಿತು. ಅದೆಂದರೆ ತುಳು ಭಾಷೆಯಲ್ಲಿ ವಿಶ್ವಕೋಶ ಅಥವಾ ವಿಶ್ವಕೋಶ ಶೈಲಿಯ ಪುಸ್ತಕ ಅತೀ ಅಗತ್ಯವಿದೆ ಎಂದು. ಪುಸ್ತಕ ತಯಾರಿಸಿ ಮುದ್ರಿಸಿ ಹಂಚಿದರೂ ಅವು ಎಲ್ಲರಿಗೂ ಎಲ್ಲ ಕಾಲಕ್ಕೂ ಲಭ್ಯವಾಗುವುದಿಲ್ಲ. ಮಾತ್ರವಲ್ಲ ಈಗಿನ ಮಾಹಿತಿಯುಗದಲ್ಲಿ ಎಲ್ಲವೂ ಅತೀ ವೇಗದಲ್ಲಿ ಬೆಳೆಯುತ್ತಿರುವಾಗ ಈ ಪುಸ್ತಗಳು ಅಷ್ಟೇ ವೇಗದಲ್ಲಿ ಹೊಸಹೊಸ ವಿಷಯಗಳನ್ನು ತುಂಬಿಕೊಂಡು ನಿಜಸಮಯದಲ್ಲಿ ನವೀಕರಣಗೊಳ್ಳುವುದು ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ  ಈ ವಿಶ್ವಕೋಶ ಅಥವಾ ವಿಶ್ವಕೋಶ ಶೈಲಿಯ ಮಾಹಿತಿಕೋಶ ಅಂತರಜಾಲದಲ್ಲಿರಬೇಕು ಎಂಬುದು. ಈಗ ಹಳ್ಳಿಹಳ್ಳಿಗಳಲ್ಲೂ ಅಂತರಜಾಲ ಎಲ್ಲರಿಗೂ ಲಭ್ಯವಿದೆ. ಕಡಿಮೆ ಬೆಲೆಗೆ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳ ಮೂಲಕವೂ ಅಂತರಜಾಲ ವೀಕ್ಷಣೆ ಮಾಡಬಹುದು ಮತ್ತು ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದು. ಹಾಗಿರುವಾಗ ಅಂತರಜಾಲದಲ್ಲಿ ತುಳು ವಿಶ್ವಕೋಶವೊಂದನ್ನು ತಯಾರಿಸುವುದು ಅತೀ ಅಗತ್ಯವಾಗಿದೆ.

ಅಂತರಜಾಲದಲ್ಲಿ ಎಲ್ಲ ಕಾಲಕ್ಕೂ ಎಲ್ಲರಿಗೂ ಲಭ್ಯವಿರುವ ಮಾತ್ರವಲ್ಲ ಎಲ್ಲರೂ ಯಾವುದೇ ನಿರ್ಬಂಧವಿಲ್ಲದೆ ಸಂಪಾದಿಸಬಹುದಾದ ಸ್ವತಂತ್ರ ವಿಶ್ವಕೋಶ ವಿಕಿಪೀಡಿಯ. ಜಗತ್ತಿನ ೨೯೪ ಭಾಷೆಗಳಲ್ಲಿರುವ ವಿಕಿಪೀಡಿಯ ೨೦೦೧ರಲ್ಲಿ ಪ್ರಾರಂಭವಾಯಿತು.

ವಿಕಿಪೀಡಿಯವು ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಸಂಪಾದಕರಾಗಿ ಲೇಖನ ಸೇರಿಸಬಹುದು, ಇರುವ ಲೇಖನ ತಿದ್ದಬಹುದು. ಇನ್ನೊಬ್ಬರು ಬರೆದ ಲೇಖನದಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ಅಥವಾ ಮಾಹಿತಿಯ ಕೊರತೆ ಇದ್ದಲ್ಲಿ ಆ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ಅದನ್ನು ನೀವೇ ತಿದ್ದಬಹುದು ಮತ್ತು ಹೆಚ್ಚಿನ ಮಾಹಿತಿ ಸೇರಿಸಬಹುದು. ನಿಮಗೆ ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಆ ವಿಷಯದ ಬಗ್ಗೆ ವಿಕಿಪೀಡಿಯದಲ್ಲಿ ಲೇಖನ ಇಲ್ಲ ಎಂದಾದಲ್ಲಿ ಆ ಬಗ್ಗೆ ಒಂದು ಹೊಸ ಲೇಖನವನ್ನು ನೀವೇ ಸೇರಿಸಬಹುದು. ನಿಮ್ಮ ಲೇಖನ ಯಾರೋ ಒಬ್ಬರು ಒಪ್ಪಿದ ನಂತರ ಅದು ಪ್ರಕಟವಾಗುವ ಪರಿಪಾಠ ಇಲ್ಲಿಲ್ಲ.

ವಿಕಿಪೀಡಿಯ ಲಾಭೋದ್ದೇಶರಹಿತ ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‌ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸರಕಾರಿ ಸಂಸ್ಥೆಯಲ್ಲ, ಸರಕಾರದಿಂದ ಯಾವುದೇ ರೀತಿಯ ಅನುದಾನವನ್ನು ಪಡೆಯುತ್ತಿಲ್ಲ. ಈ ಯೋಜನೆಗೆ ಆವಶ್ಯಕವಾದ ಬಂಡವಾಳವನ್ನು ವಿಕಿಪೀಡಿಯದ ಸಾಮಾನ್ಯ ಬಳಕೆದಾರರಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗಿದೆ. ವಿಕಿಪೀಡಿಯ ನಡೆಸಲು ನೀವೂ ಧನಸಹಾಯ ನೀಡಬಹುದು. ಇಂದು ವಿಕಿಪೀಡಿಯ ಇಷ್ಟು ಜನಪ್ರಿಯವಾಗಿರುವ ಕಾರಣ ಕೆಲವು ಸರಕಾರಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಕೂಡ ಧನ ಸಹಾಯ ನೀಡಲು ಮುಂದಾಗಿವೆ.

ವಿಕಿಪೀಡಿಯದಲ್ಲಿ ಮಾಹಿತಿಯನ್ನು ಸೇರಿಸುವುದಕ್ಕೆ ನಾವು ತಜ್ಞರು ಆಗಿರಬೇಕು ಎನ್ನುವ ಒಂದು ತಪ್ಪು ಕಲ್ಪನೆ ತುಂಬ ಜನರಲ್ಲಿದೆ. ಇದು ಸರಿಯಲ್ಲ. ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರು ಆಗಿರಬೇಕು ಎಂಬ ಕಟ್ಟಳೆಯಿಲ್ಲ. ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ. ಬೇರೆ ಬೇರೆ ದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ನಿಮಗೆ ತಿಳಿದಷ್ಟು ನೀವು ಸೇರಿಸಿ. ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರು ಸೇರಿಸುತ್ತಾರೆ.

ವಿಕಿಪೀಡಿಯದಲ್ಲಿ ಬರೆಯುವುದರಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ. ವಿಕಿಪೀಡಿಯದಲ್ಲಿ ಬರೆಯುವುದೆಂದರೆ ನಿಜವಾದ ಸ್ವಾರ್ಥರಹಿತ ಸಮಾಜಸೇವೆ. ನಮ್ಮ ಭಾಷೆಯ ಉಳಿವಿಗೆ ಇದು ಅತೀ ಅಗತ್ಯ.

ತುಳು ವಿಕಿಪೀಡಿಯ ಆಗಸ್ಟ್ ೫, ೨೦೧೬ರ ತನಕ ಶೈಶವಾವಸ್ಥೆಯಲ್ಲಿತ್ತು (incubator). ೨೦೦೭ರಲ್ಲಿ ಕೆಲವು ಆಸಕ್ತರ ಉತ್ಸಾಹದಿಂದ ತುಳು ವಿಕಿಪೀಡಿಯ ಪ್ರಾರಂಭವಾಯಿತು. ೨೦೦೭-೦೮ರ ಅವಧಿಯಲ್ಲಿ ತುಳು ವಿಕಿಪೀಡಿಯ ಸ್ವಲ್ಪ ಚಟುವಟಿಕೆಯಿಂದ ಕೂಡಿತ್ತು. ನಂತರ ಜನರ ಉತ್ಸಾಹ ಕಡಿಮೆಯಾಗಿ ಚಟುವಟಿಕೆ ಬಹುಮಟ್ಟಿಗೆ ನಿಂತೇ ಹೋಯಿತು. ೨೦೧೩ರ ಆಳ್ವಾಸ್ ವಿಶ್ವನುಡಿಸಿರಿಯ ಅಧ್ಯಕ್ಷೀಯ ಭಾಷಣದಲ್ಲಿ ಡಾ. ವಿವೇಕ ರೈಯವರು  ತುಳು ವಿಕಿಪೀಡಿಯವನ್ನು ಜೀವಂತವಾಗಿಸುವ ಅಗತ್ಯವನ್ನು ಒತ್ತಿ ಹೇಳಿದರು. ಜನವರಿ ೨೦೧೪ರಲ್ಲಿ ಮಂಗಳೂರಿನಲ್ಲಿ ಡಾ. ವಿವೇಕ ರೈ, ಡಾ. ಎ.ವಿ. ನಾವಡ ಮತ್ತು ಇತರೆ ಉತ್ಸಾಹಿಗಳು ಸಭೆ ಸೇರಿ ತುಳು ವಿಕಿಪೀಡಿಯವನ್ನು ಜೀವಂತಗೊಳಿಸುವ ಬಗ್ಗೆ ಎಲ್ಲರೂ ಕ್ರಿಯಾಶೀಲರಾಗಬೇಕು ಎಂದು ತೀರ್ಮಾನಿಸಲಾಯಿತು. ಜನವರಿ ೨೦೧೪ರಲ್ಲಿ ತುಳು ವಿಕಿಪೀಡಿಯದಲ್ಲಿ ೧೩೫ ಲೇಖನಗಳಿದ್ದವು. ನಂತರ ಮಂಗಳೂರು ಮತ್ತು ಉಡುಪಿಗಳಲ್ಲಿ ತುಳು ವಿಕಿಪೀಡಿಯಕ್ಕೆ ಲೇಖನ ಸೇರಿಸುವ ಸಂಪಾದನೋತ್ಸವಗಳು ಜರುಗಿದವು.

ಡಿಸೆಂಬರ್ ೨೦೧೪ರಲ್ಲಿ ಮಂಗಳೂರಿನಲ್ಲಿ ಜರುಗಿದ ವಿಶ್ವ ತುಳುವೆರೆ ಪರ್ಬೊದಲ್ಲಿ ತುಳು ವಿಕಿಪೀಡಿಯದ ಪ್ರಾತ್ಯಕ್ಷಿಕೆ ಮತ್ತು ಆಸಕ್ತರನ್ನು ಅಲ್ಲಿಯೇ ಸಂಪಾದಕರನ್ನಾಗಿಸುವ ಕೆಲಸಗಳು ನಡೆದವು. ಅದೇ ಸಮ್ಮೇಳನದಲ್ಲಿ ಡಾ. ಯು.ಬಿ. ಪವನಜ ಅವರು ತುಳು ಯುನಿಕೋಡ್ ಮತ್ತು ತುಳು ವಿಕಿಪೀಡಿಯ ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಭಾಷಣ ನೀಡಿದರು. ಮಂಗಳೂರು ಮತ್ತು ಉಡುಪಿಯಲ್ಲಿ ಹಲವು ಕಾರ್ಯಾಗಾರ ಮತ್ತು ಸಂಪಾದನೋತ್ಸವಗಳು ಜರುಗಿದವು. ಈ ಕೆಲಸದಲ್ಲಿ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ರಾಮಕೃಷ್ಣ ಪಿ.ಯು. ಕಾಲೇಜು, ಕರ್ನಾಟಕ ಥಿಯೋಲೋಜಿಕಲ್ ಕಾಲೇಜು ಉಡುಪಿಯ ಎಂ.ಜಿ.ಎಂ. ಕಾಲೇಜು, ಇತ್ಯಾದಿ ಸಂಘ ಸಂಸ್ಥೆಗಳು ಸಹಯೋಗ ನೀಡಿದವು. ಇವೆಲ್ಲವುಗಳ ಫಲಿತಾಂಶವಾಗಿ ತುಳು ವಿಕಿಪೀಡಿಯ ಸಮುದಾಯ ಸೃಷ್ಟಿಯಾಯಿತು. ಈ ಸಮುದಾಯದವರ ನಿರಂತರ ಕೆಲಸದಿಂದಾಗಿ ತುಳು ವಿಕಿಪೀಡಿಯದಲ್ಲಿ ಸುಮಾರು ೧೧೦೦ ಲೇಖನಗಳು ಸೇರಿದವು. ಕೆಲವು ಹೆಸರುಗಳನ್ನು ಉಲ್ಲೇಖಿಸುವುದಾದರೆ ತುಳು ವಿಕಿಪೀಡಿಯಕ್ಕೆ ಅತ್ಯಂತ ಹೆಚ್ಚು ಲೇಖನ ಸೇರಿಸಿದವರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಡಾ. ವಿಶ್ವನಾಥ ಬದಿಕಾನ ಮತ್ತು ಎರಡನೆ ಅತಿ ಹೆಚ್ಚಿನ ಸಂಪಾದನೆ ಮಾಡಿದ ಭರತೇಶ ಅಳಸಂಡೆಮಜಲು. ಇವರ ಜೊತೆ ಇನ್ನೂ ಕೆಲವು ಪ್ರಮುಖ ಸಂಪಾದಕರು –ಡಾ. ಬೆನೆಟ್ ಅಮಣ್ಣ, ಡಾ. ಕಿಶೋರ್ ಕುಮಾರ್ ರೈ, ವಸಂತ ಎಸ್. ಎನ್., ಲೋಕೇಶ್ ಕುಂಚಡ್ಕ.

ಈ ಎಲ್ಲ ಪ್ರಯತ್ನಗಳ ಫಲವಾಗಿ ಆಗಸ್ಟ್ ೬, ೨೦೧೬ ರಂದು ತುಳು ವಿಕಿಪೀಡಿಯ incubatorನಿಂದ ಹೊರಬಂದು ಜೀವಂತವಾಯಿತು. ತುಳು ವಿಕಿಪೀಡಿಯವನ್ನು http://tcy.wikipedia.org ಜಾಲತಾಣದ ಮೂಲಕ ನೋಡಬಹುದು.

ಚಂಡಿಘಡದಲ್ಲಿ ನಡೆದ (ಆಗಸ್ಟ್ 5-8, 2016) ವಿಕಿಕಾನ್ಫೆರೆನ್ಸ್ ಇಂಡಿಯಾದಲ್ಲಿ ವಿಕಿಮೀಡಿಯ ಫೌಂಡೇಶನ್‌ನ ಎಕ್ಸೆಕ್ಯೂಟಿವ್ ಡೈರೆಕ್ಟರ್ ಕ್ಯಾಥೆರಿನ್ ಮಹೆರ್ ಅವರು ತಮ್ಮ ಆಶಯ ಭಾಷಣದಲ್ಲಿ ತುಳು ವಿಕಿಪೀಡಿಯ ಜೀವಂತವಾಗಿರುವುದನ್ನು ಘೋಷಿಸಿದರು. ಜೊತೆಗೆ ಅದೇ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ, ತುಳು ವಿಕಿಪೀಡಿಯಕ್ಕೆ ಅತ್ಯಂತ ಹೆಚ್ಚು ಕಾಣಿಕೆ ನೀಡಿದ ಡಾ. ವಿಶ್ವನಾಥ ಬದಿಕಾನ ಮತ್ತು ಭರತೇಶ ಅವರನ್ನು ಅಭಿನಂದಿಸಿದರು.

ತುಳು ವಿಕಿಪೀಡಿಯವನ್ನು ಜೀವಂತ ಮಾಡುವ ಮೂಲಕ ನಾವು ಇನ್ನೂ ಒಂದೆರಡು ಕೆಲಸ ಮಾಡಬಹುದಾಗಿದೆ. ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿಸೇರಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬಹುದು. ತುಳು ವಿಕಿಪೀಡಿಯ ಕೂಡ ಇದೆ, ಹಾಗಿರುವಾಗ ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಯಾಕಿಲ್ಲ ಎಂದು ಒತ್ತಾಯಪೂರ್ವಕ ಕೇಳಬಹುದು.  ಗಣಕಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಬಳಸುವ ಜಾಗತಿಕ ಸಂಕೇತೀಕರಣ ವ್ಯವಸ್ಥೆ ಯುನಿಕೋಡ್. ಯುನಿಕೋಡ್‌ನಲ್ಲಿ ತುಳು ಭಾಷೆಯನ್ನು ಇನ್ನೂ ಸೇರಿಸಿಲ್ಲ. ಯುನಿಕೋಡ್‌ನಲ್ಲಿ ತುಳು ಭಾಷೆಯನ್ನು ಸೇರಿಸುವುದರಿಂದ ಗಣಕಗಳಿಗೆ ಅದು ಅರ್ಥವಾಗುತ್ತದೆ. ಇದರಿಂದ ಮಾಹಿತಿಯ ಹುಡುಕುವಿಕೆ ಸಾಧ್ಯವಾಗುತ್ತದೆ. ಅಂತರಜಾಲದಲ್ಲಿ ತುಳುವಿನಲ್ಲೇ ಮಾಹಿತಿ ಹುಡುಕಬಹುದು. ದೃಷ್ಟಿಶಕ್ತಿವಂಚಿತರು ಪಠ್ಯದಿಂದ ಧ್ವನಿಗೆ (text-to-speech) ಬದಲಿಸುವ ತಂತ್ರಾಂಶವನ್ನು ಬಳಸಿ ತುಳು ಪಠ್ಯವನ್ನು ಓದಬಹುದು. ತುಳು ವಿಕಿಪೀಡಿಯವನ್ನು ಜೀವಂತ ಮಾಡುವ ಮೂಲಕ ಯುನಿಕೋಡ್‌ನಲ್ಲಿ ತುಳು ಭಾಷೆಯನ್ನು ಸೇರಿಸಲು ಕೋರಿಕೆ ಸಲ್ಲಿಸಬಹುದು.

ತುಳು ವಿಕಿಪೀಡಿಯವನ್ನು ಬೆಳೆಸಿ. ಅದರಿಂದಾಗಿ ತುಳು ಭಾಷೆ ಉಳಿಸಿ ಬೆಳೆಸಿ.

(ಅಗಸ್ಟ್ ೬, ೨೦೧೬)

The post ತುಳು ವಿಕಿಪೀಡಿಯ ಈಗ ಸಿದ್ಧ first appeared on Vishva Kannada.

ಕನ್ನಡದ ಮುಕ್ತ ಜ್ಞಾನಕೋಶಕ್ಕೆ ಹತ್ತು ತುಂಬಿತು
ಡಾ| ಯು.ಬಿ. ಪವನಜ

ಯುಗಯುಗಾದಿ ಕಳೆದರೂ ನವಂಬರ್ ಮರಳಿ ಬರುತಿದೆ (ಬೇಂದ್ರೆಯವರು ಕ್ಷಮಿಸುತ್ತಾರೆ). ಕನ್ನಡದ ಸ್ಥಿತಿಗತಿಗಳ ಬಗ್ಗೆ ಮತ್ತೊಮ್ಮೆ ಲೇಖನಗಳ ಮಹಾಪೂರದ ಸಮಯ. ಪ್ರತಿ ನವಂಬರ್ ತಿಂಗಳಿಗೆ ಇದನ್ನು ಮತ್ತೆ ಮತ್ತೆ ಓದುವುದು ಎಲ್ಲರಿಗೂ ರೂಢಿಯಾಗಿದೆ. ಅಂತೆಯೇ ಮತ್ತೆ ಮತ್ತೆ ಬರೆಯುವುದು ನಮಗೆ ರೂಢಿಯಾಗಿಬಿಟ್ಟಿದೆ. ಇರಲಿ. ಈಗ ಈ ವಿಷಯದ ಕಡೆಗೆ ಸ್ವಲ್ಪ ಕಣ್ಣು ಹಾಯಿಸೋಣ.

“ಪೆಟ್ರೋಲ್ ಉಳಿಸಬೇಕಾದರೆ ಪೆಟ್ರೋಲ್ ಬಳಸಬಾರದು, ಕನ್ನಡ ಉಳಿಸಬೇಕಾದರೆ?” ಎಂಬ ಮಾತು ಪ್ರತಿ ನವಂಬರ್ ಒಂದರಂದು ಅತ್ತಿಂದಿತ್ತ ಹರಿದಾಡುವ ಒಂದು ಜೋಕ್. ಕನ್ನಡ ಉಳಿಯಬೇಕಾದರೆ ಕನ್ನಡ ಬಳಸಬೇಕು. ಇದು ಎಲ್ಲರೂ ಒಪ್ಪುವ ಮಾತು. ಕನ್ನಡ ಬಳಸುವುದೆಂದರೆ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡ ಬಳಸುವುದು. ಕನ್ನಡ ಭಾಷೆಯ ಶ್ರೀಮಂತಿಗೆ ಬಗ್ಗೆ ಭಾಷಣ ಬಿಗಿದು ಮೇಜು ಕುಟ್ಟುವುದರಿಂದ ಕನ್ನಡ ಉಳಿಯುವುದಿಲ್ಲ. ಅದು ಉಳಿಯಬೇಕಾದರೆ ಜನಸಾಮಾನ್ಯರು ಅದನ್ನು ಬಳಸಬೇಕು. ಜನಸಾಮಾನ್ಯರಿಗೆ ಪ್ರಮುಖವಾಗಿ ಬೇಕಾದುದು ಸಾಹಿತಿಗಳು ಬೆನ್ನುತಟ್ಟಿಕೊಳ್ಳುವ ಸೃಜನಶಿಲ (ಕಥನ) ಸಾಹಿತ್ಯವಲ್ಲ. ಅದು ಬೇಡ ಎಂದಲ್ಲ. ಆದರೆ ಜನಸಾಮಾನ್ಯರಿಗೆ ಅತೀ ಅಗತ್ಯವಾಗಿ ಬೇಕಾದುದು ಮಾಹಿತಿ ಸಾಹಿತ್ಯ. ಒಬ್ಬಾತನಿಗೆ ಹೊಚ್ಚಹೊಸ ನಮೂನೆಯ ಪ್ಲಾಸ್ಮಾ, ಎಲ್‌ಸಿಡಿ ಅಥವಾ ಎಲ್‌ಇಡಿ ಟಿವಿ ಖರೀದಿಸಬೇಕಾಗಿದೆ ಎಂದಿಟ್ಟುಕೊಳ್ಳಿ. ಆತನಿಗೆ ಇವುಗಳ ವ್ಯತ್ಯಾಸ ಗೊತ್ತಿರಬೇಕು, ತನ್ನ ಅಗತ್ಯ ಮತ್ತು ಮಿತಿಯೊಳಗೆ ಯಾವುದು ಉತ್ತಮ ಎಂದು ತಿಳಿಯಬೇಕು. ಆತ ಇದನ್ನು ಕನ್ನಡದಲ್ಲಿ ತಿಳಿಯುವ ಬಗೆ ಹೇಗೆ? ಇದಕ್ಕೆ ಬೇಕು ಒಂದು ವಿಶ್ವಕೋಶ.

ಈಗ ಇನ್ನೊಂದು ವಿಷಯದ ಕಡೆ ಗಮನ ಹರಿಸೋಣ. ಈಗ ಇಂಗ್ಲಿಶ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ನಮ್ಮ ಮಕ್ಕಳಿಗೆ ಪ್ರಪಂಚ ಜ್ಞಾನ ದೊರೆಯುವುದಿಲ್ಲ ಆದುದರಿಂದ ನಮ್ಮ ಮಕ್ಕಳನ್ನು ಇಂಗ್ಲಿಶ್ ಮಾಧ್ಯಮದಲ್ಲಿ ಕಲಿಸುತ್ತೇವೆ ಎಂದು ಹೆಚ್ಚಿನ ತಂದೆತಾಯಂದಿರು ಹೇಳುತ್ತಾರೆ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನದ ಲಭ್ಯತೆ ತುಂಬ ಕಡಿಮೆ ಎಂಬುದನ್ನು ನಾವು ಒಪ್ಪಲೇ ಬೇಕು. ಆದರೆ ಈ ಸಮಸ್ಯೆಗೆ ಪರಿಹಾರ ಇಂಗ್ಲಿಶ್ ಭಾಷೆಯ ಮೊರೆಹೋಗುವುದಲ್ಲ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ತರುವುದು. ಈ ರೀತಿ ಮಾಡಲು ಸಹಾಯ ಮಾಡುವುದು ಅತಿ ಜನಪ್ರಿಯವಾಗಿರುವ ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ ಕನ್ನಡ ವಿಕಿಪೀಡಿಯ.

ವಿಕಿಪೀಡಿಯ ಒಂದು ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ. ಇದು ೨೦೦೧ರಲ್ಲಿ ಪ್ರಾರಂಭವಾಯಿತು. ಇದು ಜಗತ್ತಿನ ೨೮೬ ಭಾಷೆಗಳಲ್ಲಿದೆ. ಇನ್ನೂ ಸುಮಾರು ೩೦೦ ಭಾಷೆಯ ವಿಕಿಪೀಡಿಯಗಳು ತಯಾರಿಯ ಹಂತದಲ್ಲಿವೆ. ಸುಮಾರು ೨೦ ಚಿಲ್ಲರೆ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯ. ಅದರಲ್ಲಿ ಕನ್ನಡವೂ ಸೇರಿದೆ. ಭಾರತೀಯ ಭಾಷೆಯ ವಿಕಿಪೀಡಿಯಗಳಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಳಿ ವಿಕಿಪೀಡಿಯಗಳು ಕನ್ನಡಕ್ಕಿಂತ ಅಂಕಿಅಂಶಗಳಲ್ಲಿ ಮುಂದಿವೆ. ಕನ್ನಡ ವಿಕಿಪೀಡಿಯ ೨೦೦೩ರಲ್ಲಿ ಪ್ರಾರಂಭವಾಯಿತು. ಅಂದರೆ ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ.

ಎಲ್ಲ ವಿಕಿಪೀಡಿಯಗಳಂತೆ ಕನ್ನಡ ವಿಕಿಪೀಡಿಯವೂ ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಸಂಪಾದಕರಾಗಿ ಲೇಖನ ಸೇರಿಸಬಹುದು, ಇರುವ ಲೇಖನ ತಿದ್ದಬಹುದು. ಇನ್ನೊಬ್ಬರು ಬರೆದ ಲೇಖನದಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ಅಥವಾ ಮಾಹಿತಿಯ ಕೊರತೆ ಇದ್ದಲ್ಲಿ ಆ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ಅದನ್ನು ನೀವೇ ತಿದ್ದಬಹುದು ಮತ್ತು ಹೆಚ್ಚಿನ ಮಾಹಿತಿ ಸೇರಿಸಬಹುದು. ನಿಮಗೆ ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಆ ವಿಷಯದ ಬಗ್ಗೆ ವಿಕಿಪೀಡಿಯದಲ್ಲಿ ಲೇಖನ ಇಲ್ಲ ಎಂದಾದಲ್ಲಿ ಆ ಬಗ್ಗೆ ಒಂದು ಹೊಸ ಲೇಖನವನ್ನು ನೀವೇ ಸೇರಿಸಬಹುದು. ನಿಮ್ಮ ಲೇಖನ ಯಾರೋ ಒಬ್ಬರು ಒಪ್ಪಿದ ನಂತರ ಅದು ಪ್ರಕಟವಾಗುವ ಪರಿಪಾಠ ಇಲ್ಲಿಲ್ಲ. ನೀವು ಲೇಖನ ಬರೆದು “ಪುಟವನ್ನು ಉಳಿಸಿ” ಎಂಬುದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಲೇಖನ ಕನ್ನಡ ವಿಕಿಪೀಡಿಯಕ್ಕೆ ಸೇರ್ಪಡೆಯಾಗುತ್ತದೆ. ಪ್ರಪಂಚಾದ್ಯಂತ ಹಬ್ಬಿರುವ ಕನ್ನಡಿಗರಿಗೆ ಅದು ಕ್ಷಣಮಾತ್ರದಲ್ಲಿ ದೊರೆಯುವಂತಾಗುತ್ತದೆ.

ವಿಕಿಪೀಡಿಯ ನಾನ್ ಪ್ರಾಫಿಟ್ ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‌ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸರಕಾರಿ ಸಂಸ್ಥೆಯಲ್ಲ, ಸರಕಾರದಿಂದ ಯಾವುದೇ ರೀತಿಯ ಅನುದಾನವನ್ನು ಪಡೆಯುತ್ತಿಲ್ಲ. ಈ ಯೋಜನೆಗೆ ಆವಶ್ಯಕವಾದ ಬಂಡವಾಳವನ್ನು ವಿಕಿಪೀಡಿಯದ ಸಾಮಾನ್ಯ ಬಳಕೆದಾರರಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗಿದೆ. ವಿಕಿಪೀಡಿಯ ನಡೆಸಲು ನೀವೂ ಧನಸಹಾಯ ನೀಡಬಹುದು. ಇಂದು ವಿಕಿಪೀಡಿಯ ಇಷ್ಟು ಜನಪ್ರಿಯವಾಗಿರುವ ಕಾರಣ ಕೆಲವು ಸರಕಾರಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಕೂಡ ಧನ ಸಹಾಯ ನೀಡಲು ಮುಂದಾಗಿವೆ.

ವಿಕಿಪೀಡಿಯದಲ್ಲಿ ಮಾಹಿತಿಯನ್ನು ಸೇರಿಸುವುದಕ್ಕೆ ನಾವು ತಜ್ಞರು ಆಗಿರಬೇಕು ಎನ್ನುವ ಒಂದು ತಪ್ಪು ಕಲ್ಪನೆ ತುಂಬ ಜನರಲ್ಲಿದೆ. ಇದು ಸರಿಯಲ್ಲ. ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರು ಆಗಿರಬೇಕು ಎಂಬ ಕಟ್ಟಳೆಯಿಲ್ಲ. ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ. ಬೇರೆ ಬೇರೆ ದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ನಿಮಗೆ ತಿಳಿದಷ್ಟು ನೀವು ಸೇರಿಸಿ. ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರು ಸೇರಿಸುತ್ತಾರೆ.

ಕನ್ನಡ ವಿಕಿಪೀಡಿಯದಲ್ಲಿ ಬರೆಯುವುದರಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ. ವಿಕಿಪೀಡಿಯದಲ್ಲಿ ಬರೆಯುವುದೆಂದರೆ ನಿಜವಾದ ಸ್ವಾರ್ಥರಹಿತ ಸಮಾಜಸೇವೆ. ನಮ್ಮ ಭಾಷೆಯ ಉಳಿವಿಗೆ ಇದು ಅತೀ ಅಗತ್ಯ. ಆದುದರಿಂದ ಇಂದೇ ಕೀಲಿಮಣೆ ಮೇಲೆ ಕುಟ್ಟಿ – kn.wikipedia.org.

(ಕನ್ನಡಪ್ರಭ, ನವಂಬರ್ ೧, ೨೦೧೩)

The post ಕನ್ನಡದ ಮುಕ್ತ ಜ್ಞಾನಕೋಶಕ್ಕೆ ಹತ್ತು ತುಂಬಿತು first appeared on Vishva Kannada.

ಕನ್ನಡ ವಿಕಿಪೀಡಿಯ ದಶಮಾನೋತ್ಸವ ಕಾರ್ಯಕ್ರಮ
ಕನ್ನಡ ವಿಕಿಪೀಡಿಯ ಸಮುದಾಯವು ಕನ್ನಡ ವಿಕಿಪೀಡಿಯಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಾರ್ಯಕ್ರಮ ವಿವರ

೯:೩೦-೧೦:೦೦ ನೋಂದಣಿ

೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ

ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ

ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ

ಪ್ರಸ್ತಾವನೆ – ಡಾ. ಯು. ಬಿ. ಪವನಜ

ಮುಖ್ಯ ಅತಿಥಿಗಳ ಮಾತು

ಡಾ. ಯು. ಆರ್. ಅನಂತಮೂರ್ತಿ

ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ

ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ

ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು ನಿರ್ವಾಹಕರುಗಳಿಗೆ ಸ್ಮರಣಿಕೆ ನೀಡಿಕೆ

ಧನ್ಯವಾದ ಸಮರ್ಪಣೆ

೧೧:೦೦ – ೧೧:೧೫ – ಚಹಾ

೧೧:೧೫-೧೨:೦೦

ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ – ಓಂಶಿವಪ್ರಕಾಶ

ಕ್ರಿಯೇಟಿವ್ ಕಾಮನ್ಸ್ – ಕಿರಣ್ ರವಿಕುಮಾರ

ವಿಕಿಪೀಡಿಯನ್ನರುಗಳ ಮಾತು

೧೨:೦೦-೧೩:೦೦ – ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)

ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು.

ಎಲ್ಲರಿಗೂ ಮುಕ್ತ ಆಹ್ವಾನ ಇದೆ.

ನೋಂದಣಿಗೆ ಇಲ್ಲಿ ಕ್ಲಿಕ್ಕಿಸಿ.

The post ಕನ್ನಡ ವಿಕಿಪೀಡಿಯ ದಶಮಾನೋತ್ಸವ ಕಾರ್ಯಕ್ರಮ first appeared on Vishva Kannada.