ಗ್ಯಾಜೆಟ್ | Vishva Kannada

ಕೆಡಲೆಂದೇ ವಿನ್ಯಾಸ ಮಾಡುವುದು
ಯೋಜಿತ ಹಾಳಾಗುವಿಕೆ

ಸುಮಾರು ದಶಕಗಳ ಕಾಲ ಹಿಂದೆ ಹೋಗೋಣ. ಒಂದಾನೊಂದು ಕಾಲದಲ್ಲಿ ಬಜಾಜ್ ಚೇತಕ್ ಎಂಬ ಸ್ಕೂಟರ್ ಇತ್ತು. ಅದಕ್ಕೆ ಅತ್ಯಂತ ಹೆಚ್ಚು ಬೇಡಿಕೆ ಇತ್ತು. ಅದನ್ನು ಕೊಳ್ಳಲು ವರ್ಷಗಳ ಕಾಲ ಕಾಯಬೇಕಿತ್ತು. ಅದನ್ನು ಕೊಂಡವರು ಹತ್ತು ಹದಿನೈದು ವರ್ಷ ಬಳಸಿ ನಂತರ ಬಹುತೇಕ ಕೊಂಡ ಬೆಲೆಗೇ ಮಾರುತ್ತಿದ್ದರು. ಆ ಸ್ಕೂಟರ್ ನಂತರವೂ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿತ್ತು. ಆಗಾಗ ಸರ್ವಿಸ್ ಮಾಡಿಸಿಕೊಂಡಿದ್ದರೆ ಸಾಕಿತ್ತು. ನನ್ನಲ್ಲಿದ್ದ ಬಜಾಜ್ ಸ್ಕೂಟರನ್ನು ನಾನೇ ತಕ್ಕ ಮಟ್ಟಿಗೆ ರಿಪೇರಿ ಮಾಡುತ್ತಿದ್ದೆ. ನಮ್ಮ ಮನೆಯಲ್ಲಿದ್ದ ಹಳೆಯ ಫಿಲಿಪ್ಸ್ ರೇಡಿಯೋ ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿತ್ತು. ಆಗಾಗ ಬ್ಯಾಟರಿ ಬದಲಿಸಿಕೊಂಡಿದ್ದರೆ ಸಾಕಿತ್ತು.

ಈಗಿನ ಕಾಲಕ್ಕೆ ಬರೋಣ. ನಮ್ಮ ಮನೆಯಲ್ಲಿದ್ದ ಮೈಕ್ರೋವೇವ್ ಅವನ್ ಹಾಳಾಯಿತು. ಕಂಪೆನಿಯ ಗ್ರಾಹಕ ಸೇವೆಗೆ ಫೋನಾಯಿಸಿದೆ. ಅವರ ಕಂಪೆನಿಯ ಪ್ರತಿನಿಧಿ ಬಂದು ಪರಿಶೀಲಿಸಿದ. ಮ್ಯಾಗ್ನೆಟ್ರಾನ್ ಸರಿಯಿದೆ. ಆದರೆ ಅದರ ಪ್ಯಾನಲ್ ಹೋಗಿದೆ ಎಂದ. ಅದನ್ನು ತೆಗೆದುಕೊಂಡು ಹೋಗಿ ನಂತರ ಹೊಸದನ್ನು ತಂದು ಹಾಕುತ್ತೇನೆ ಎಂದ. 2-3 ದಿವಸಗಳ ನಂತರ ಕಂಪೆನಿಯಿಂದ ಫೋನ್ ಬಂತು. ನಮ್ಮ ಉಪಕರಣ ಹಳೆಯದಾಗಿದೆ. ಆದುದರಿಂದ ಈಗ ಅದರ ಪ್ಯಾನೆಲ್ ಲಭ್ಯವಿಲ್ಲ. ಹೊಸ ಮೈಕ್ರೋವೇವ್ ಅವನ್ ಕೊಳ್ಳುವುದಿದ್ದಲ್ಲಿ 10% ರಿಯಾಯಿತಿ ಕೊಡಿಸುತ್ತೇವೆ ಎಂದರು. ನಮ್ಮ ಸಾಧನವನ್ನು ಕೊಂಡುಕೊಂಡು 6 ವರ್ಷ ಆಗಿತ್ತಷ್ಟೆ. ಅಷ್ಟು ಬೇಗ ಅದು ಹಳತಾಗಿ ಅದಕ್ಕೆ ಬೇಕಾದ ಬಿಡಿಭಾಗಗಳು ಲಭ್ಯವಿಲ್ಲ ಎಂದಾಗಿತ್ತು. ಅದೇ ರೀತಿ ನಮ್ಮ ಮನೆಯ ವಾಟರ್ ಫಿಲ್ಟರ್‌ಗೂ ಆಗಿತ್ತು. ಮೂರೇ ವರ್ಷದಲ್ಲಿ ಅದಕ್ಕೆ ಬೇಕಾದ ಕೆಲವು ಬಿಡಿಭಾಗಗಳು ದೊರೆಯದೆ ಹೊಸ ಫಿಲ್ಟರ್ ಖರೀದಿಸಬೇಕಾಗಿ ಬಂದಿತ್ತು.

ನನ್ನಲ್ಲಿ ಒಂದು ಬೋಸ್ ನೋಯಿಸ್ ಕ್ಯಾನ್ಸಲಿಂಗ್ ಹೆಡ್‌ಫೋನ್ ಇದೆ. ಸುಮಾರು ವರ್ಷಗಳ ನಂತರ ಅದರ ಬ್ಯಾಟರಿಯ ಆಯುಸ್ಸು ಮುಗಿಯಿತು. ನೀವು ಗಮನಿಸಿರಬಹುದು. ಇತ್ತೀಚೆಗೆ ದೊರೆಯುವ ಬಹುತೇಕ ಇಂತಹ ಸಾಧನಗಳಲ್ಲಿ ಬ್ಯಾಟರಿ ಸೀಲ್ ಆಗಿರುತ್ತದೆ. ಅದನ್ನು ನಾವು ಬದಲಿಸುವಂತಿಲ್ಲ. ಕಂಪೆನಿಗೆ ಫೋನ್ ಮಾಡಿದರೆ ಆ ಮಾದರಿ ಹಳೆಯದಾಯಿತು. ಅದರ ಬ್ಯಾಟರಿ ಈಗ ಲಭ್ಯವಿಲ್ಲ. ಹೊಸ ಹೆಡ್‌ಫೋನ್ ಕೊಳ್ಳಲು 25% ರಿಯಾಯಿತಿ ಕೊಡುತ್ತೇವೆ ಎಂಬ ಉತ್ತರ ಬಂತು.

ಇದೇಕೆ ಹೀಗೆ?

ಇಂತಹ ಉದಾಹರಣೆಗಳು ನಿಮ್ಮಲ್ಲೂ ಇರಬಹುದು. ಈಗ ಹಿಂದಿನ ಕಾಲದಂತಲ್ಲ. ಕೊಂಡುಕೊಂಡ ವಿದ್ಯುತ್ ಅಥವಾ ಇಲೆಕ್ಟ್ರಾನಿಕ್ ಸಾಧನವು 5 ಅಥವಾ 6 ವರ್ಷ ಮಾತ್ರ ಬಾಳಿಕೆ ಬರುತ್ತದೆ. ನಂತರ ಅದಕ್ಕೆ ಬೇಕಾದ ಬಿಡಿಭಾಗಗಳು ಅಥವಾ ಬ್ಯಾಟರಿ ದೊರೆಯುವುದಿಲ್ಲ. ಒಂದು ನಿರ್ದಿಷ್ಟ ಸಮಯದ ನಂತರ ಉಪಕರಣಗಳು ಕೆಲಸ ಮಾಡದಂತೆ ಆ ಸಾಧನವನ್ನು ಕಂಪೆನಿಯವರೇ ವಿನ್ಯಾಸ ಮಾಡಿರುತ್ತಾರೆ. ಇದಕ್ಕೆ ಕೆಡಲೆಂದೇ ವಿನ್ಯಾಸ ಮಾಡುವುದು ಅಥವಾ ಯೋಜಿತ ಹಾಳಾಗುವಿಕೆ ಎನ್ನಬಹುದು. ಇದನ್ನು ಇಂಗ್ಲಿಷಿನಲ್ಲಿ designed to fail ಅಥವಾ planned obsolescence ಎನ್ನುತ್ತಾರೆ. ಹಲವಾರು ಕಂಪೆನಿಗಳು ಇದನ್ನು ಪಾಲಿಸಿಕೊಂಡು ಬರುತ್ತಿವೆ.

ಯಾಕೆ ಕಂಪೆನಿಗಳು ಈ ರೀತಿ ಮಾಡುತ್ತಿವೆ? ಸ್ವಲ್ಪ ಆಲೋಚಿಸಿ. ನೀವು ಒಂದು ಉಪಕರಣ ತೆಗೆದುಕೊಂಡು ಹದಿನೈದು ಇಪ್ಪತ್ತು ವರ್ಷಗಳ ಕಾಲ ಬಳಸಿದರೆ ಅವರಿಗೆ ಪ್ರತಿ ವರ್ಷ ತಯಾರಿಸುವ ಉಪಕರಣಗಳ ವ್ಯಾಪಾರ ಆಗುವುದು ಹೇಗೆ? ಕೊಂಡುಕೊಂಡ ಸಾಧನವನ್ನೂ ನೀವು ಮತ್ತೆ ಮತ್ತೆ ರಿಪೇರಿ ಮಾಡಿ ಬಳಸಿದರೆ ಹೊಸ ವಸ್ತುಗಳನ್ನು ಕೊಳ್ಳುವವರು ಯಾರು? ಅದಕ್ಕೋಸ್ಕರ ಈ ರೀತಿ ಮಾಡುತ್ತಾರೆ ಎಂದುಕೊಳ್ಳಬಹುದು. ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಇನ್ನೂ ಒಂದು ವಿಷಯವಿದೆ. ಪ್ರತಿ ವರ್ಷ ಹೊಸ ತಂತ್ರಜ್ಞಾನ, ವಿಧಾನಗಳು ಬರುತ್ತಿವೆ. ಹಲವು ಸುಧಾರಣೆಗಳು ಆಗುತ್ತಿವೆ. ನೀವು ನೀಡುವ ಹಣಕ್ಕೂ ನಿಮಗೆ ದೊರೆಯುವ ಸವಲತ್ತುಗಳಿಗೂ ತಾಳೆ ಹಾಕಿದಾಗ ಪ್ರತಿ ವರ್ಷ ಮಾರುಕಟ್ಟೆಯಲ್ಲಿ ದೊರೆಯುವ ಉಪಕರಣದಲ್ಲಿ ಹೆಚ್ಚು ಸವಲತ್ತುಗಳು ದೊರೆಯುತ್ತವೆ ಎನ್ನಬಹುದು. ಇದರಿಂದಾಗಿ ಹಲವು ಜನರು ತಾವಾಗಿಯೇ ಹೊಸದನ್ನು ಕೊಳ್ಳುತ್ತಾರೆ. ಕೆಲವೊಮ್ಮೆ ಹಳೆಯದನ್ನು ಬದಲಾಯಿಸಿ ಹೊಸದನ್ನು ಕೊಳ್ಳುತ್ತಾರೆ. ಕಂಪೆನಿಗಳು ಇದಕ್ಕಾಗಿಯೇ ಏನೇನೋ ಸ್ಕೀಮುಗಳನ್ನು ಘೋಷಿಸಿರುತ್ತಾರೆ. ಒಟ್ಟಾರೆಯಾಗಿ ನೀವು ಹೊಸ ಹೊಸ ಉತ್ಪನ್ನಗಳನ್ನು ಕೊಳ್ಳುತ್ತಿರಬೇಕು. ಹಾಗಿದ್ದರೆ ಮಾತ್ರ ಕಂಪೆನಿಗಳಿಗೆ ಹೆಚ್ಚಿನ ಲಾಭ.

ಈಗೀಗ ದೊರೆಯುತ್ತಿರುವ ಉಪಕರಣಗಳಲ್ಲಿ ರಿಪೇರಿ ಮಾಡುವಂತಹ ಅಂಗಗಳು ಬಹಳ ಕಡಿಮೆ ಇರುತ್ತವೆ. ವಾಶಿಂಗ್ ಮೆಶಿನ್‌ನಲ್ಲಿರುವ ಪ್ಯಾನೆಲ್‌ನಲ್ಲಿ ಒಂದು ಚಿಕ್ಕ ಭಾಗ ಹಾಳಾಗಿದ್ದರೂ ಇಡಿಯ ಪ್ಯಾನೆಲ್ ಬದಲಿಸಬೇಕು. ಇದೇ ನಿಯಮ ಫ್ರಿಜ್, ಮೈಕ್ರೋವೇವ್ ಅವನ್, ವಾಟರ್ ಫಿಲ್ಟರ್ ಇತ್ಯಾದಿಗಳಿಗೆ ಅನ್ವಯಿಸುತ್ತದೆ. ಇಲೆಕ್ಟ್ರಾನಿಕ್ ಸರ್ಕ್ಯುಟ್ ಬೋರ್ಡ್‌ಗಳನ್ನು ಇಡಿಯದಾಗಿ ಬದಲಿಸುತ್ತಾರೆ. ಹಿಂದಿನ ಕಾಲದಲ್ಲಿಯಂತೆ ಅದರಲ್ಲಿರುವ ಚಿಪ್, ಕೆಪಾಸಿಟರ್, ರೆಸಿಸ್ಟರ್, ಇತ್ಯಾದಿ ಬಿಡಿಭಾಗಗಳನ್ನು ಒಂದೊಂದಾಗಿ ಪರೀಕ್ಷಿಸಿ ಹಾಳಾದುದನ್ನು ಬದಲಿಸುವ ಪದ್ಧತಿ ಈಗಿಲ್ಲ. ಆ ಪ್ಯಾನೆಲ್ ದೊರೆಯದಿದ್ದರೆ ಇಡಿಯ ಉಪಕರಣವನ್ನೇ ಬದಲಿಸಬೇಕು.

ಉಪಕರಣಗಳನ್ನು ತಯಾರಿಸುವಾಗ ಇದಕ್ಕೆ ಇಷ್ಟೇ ವರ್ಷ ಆಯುಸ್ಸು. ಇಷ್ಟು ವರ್ಷಗಳಲ್ಲಿ ಇದು ಹಾಳಾಗತಕ್ಕದ್ದು ಎಂಬ ನಿಯಮ ಪ್ರಕಾರವೇ ವಿನ್ಯಾಸ ಮಾಡಿರುತ್ತಾರೆ. ಉದಾಹರಣೆಗೆ ಯಂತ್ರಗಳಲ್ಲಿ ಹೆಚ್ಚು ಕಾಲ ಬಾಳಿಕೆ ಬರುವ ಉಕ್ಕಿನ ಭಾಗಗಳ ಬದಲಿಗೆ ಪಾಲಿಮರ್ ಬಳಸುತ್ತಾರೆ. ತೆಗೆದು ಬದಲಿಸಬಹುದಾದ ಬ್ಯಾಟರಿ ಬದಲಿಗೆ ಸೀಲ್ ಆದ ಬ್ಯಾಟರಿ ಇರುತ್ತದೆ. ಇದನ್ನು ಈಗ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಗಮನಿಸಿರಬಹುದು.

ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ಗಳಿಗೆ ಆಗಾಗ ತಂತ್ರಾಂಶದ ಸುಧಾರಿತ ಹೊಸ ಆವೃತ್ತಿ ಬಿಡುಗಡೆ ಮಾಡುತ್ತಿರುತ್ತಾರೆ. ಇದು ಹೊಸ ಸವಲತ್ತುಗಳನ್ನು ನೀಡಲು, ಸುರಕ್ಷೆಯನ್ನು ಸುಧಾರಿಸಲು, ಹೊಸ ವೈರಸ್ ಬಂದರೆ ಅದನ್ನು ತಡೆಯಲು ಇತ್ಯಾದಿ ಕೆಲಸಗಳಿಗಾಗಿ ಆಗಿರುತ್ತದೆ. ಆದರೆ ಕೆಲವು ವರ್ಷಗಳ ನಂತರ ಹಳೆಯ ಫೋನ್‌ಅಥವಾ ಲ್ಯಾಪ್‌ಟಾಪ್‌ಗಳಿಗೆ ಈ ರೀತಿ ತಂತ್ರಾಂಶ ನವೀಕರಣ ನೀಡುವುದನ್ನು ನಿಲ್ಲಿಸುತ್ತಾರೆ. ಕಂಪೆನಿಗೆ ಇದಕ್ಕೆ ವಿವರಣೆ ಕೇಳಿದರೆ ಆ ಉಪಕರಣದ ಆಯುಸ್ಸು ಅಷ್ಟೇ ಎಂಬ ಉತ್ತರ ಬರುತ್ತದೆ.

ಆಪಲ್ ಕಂಪೆನಿಯರು ತಮ್ಮ ಹಳೆಯ ಐಫೋನ್‌ಗಳಿಗೆ ತಂತ್ರಾಂಶದ ನವೀಕರಣದ ಹೆಸರಿನಲ್ಲಿ ಬಳಕೆದಾರರಿಗೆ ಮೋಸ ಮಾಡಿದ ವಿಷಯ ಹೊರಬಂದಿದೆ. ಅವರು ಏನು ಮಾಡುತ್ತಿದ್ದರೆಂದರೆ ಹಳೆಯ ಫೋನ್‌ಗಳಿಗೆ ತಂತ್ರಾಂಶ ನವೀಕರಿಸಿದ ನಂತರ ಅವುಗಳು ನಿಧಾನವಾಗಿ ಕೆಲಸ ಮಾಡುವಂತೆ ಮಾಡಿದ್ದರು. ಇದರಿಂದಾಗಿ ಜನರು ಹೊಸ ಐಫೋನ್ ಕೊಳ್ಳುವಂತೆ ಒತ್ತಡ ಹಾಕುವುದು ಅವರ ಉದ್ದೇಶವಾಗಿತ್ತು.

ಕಂಪೆನಿಗಳ ಇಂತಹ ಕೆಟ್ಟ ವ್ಯಾಪಾರಿ ಬುದ್ಧಿಯ ವಿರುದ್ಧ ವ್ಯವಸ್ಥಿತ ಹೋರಾಟದ ಅಗತ್ಯವಿದೆ. ಸರಕಾರವು ಕೆಲವು ನಿಯಮಗಳನ್ನು ಮಾಡುವ ಅಗತ್ಯವೂ ಇದೆ.

–ಡಾ| ಯು.ಬಿ. ಪವನಜ

gadgetloka @ gmail . com

The post ಕೆಡಲೆಂದೇ ವಿನ್ಯಾಸ ಮಾಡುವುದು first appeared on Vishva Kannada.

ವೇಪರ್‌ವೇರ್
ಆವಿಯಾದ ಯಂತ್ರಾಂಶ – ತಂತ್ರಾಂಶ

ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚು ಗುಣವೈಶಿಷ್ಟ್ಯಗಳನ್ನು ಒಳಗೊಂಡ ಒಂದು ಹೊಸ ಸಾಧನವನ್ನು ಅಥವಾ ಗ್ಯಾಜೆಟ್ ಅನ್ನು ಯಾವುದೋ ಒಂದು ಕಂಪೆನಿ ಘೋಷಿಸುತ್ತದೆ. ಎಲ್ಲರೂ ಅದಕ್ಕೆ ಕಾಯುತ್ತಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮುಂಗಡ ಬುಕಿಂಗ್ ಕೂಡ ಆಗಿರುತ್ತದೆ. ಅಂತಿಮವಾಗಿ ಆ ಉತ್ಪನ್ನ ಮಾರುಕಟ್ಟೆಗೆ ಬರುವುದೇ ಇಲ್ಲ. ಇಂತಹ ಹಲವು ಘಟನೆಗಳನ್ನು ಕಂಡಿರಬಹುದು, ಕೇಳಿರಬಹುದು ಅಥವಾ ಸ್ವತಃ ಅನುಭವಿಸಿರಬಹುದು. ಮಾಹಿತಿ ತಂತ್ರಜ್ಞಾನ ಕೇತ್ರದಲ್ಲಿ ಇಂತಹವುಗಳಿಗೆ vapourware ಎಂಬ ಹೆಸರಿದೆ. vapour ಅಂದರೆ ಆವಿ. ನೀಡಲು ಅಸಾಧ್ಯವಾದುದುನ್ನು ನೀಡುತ್ತೇನೆಂದು ಅತಿಯಾಗಿ ಆಸೆ ಹುಟ್ಟಿಸಿ ಕೊನೆಗೆ ಅದು ನಿಜವಾಗದೆ ಆವಿಯಾಗಿ ಹೋಗುವುದನ್ನು ವಿವರಿಸಲು ಈ ಪದವನ್ನು ಹುಟ್ಟುಹಾಕಲಾಗಿದೆ.

1982ರಲ್ಲಿ ಈ ಪದವನ್ನು ಮೊದಲ ಬಾರಿಗೆ ಬಳಸಲಾಯಿತು. ಮೈಕ್ರೋಸಾಫ್ಟ್ ಕಂಪೆನಿ ಕ್ಸೆನಿಕ್ಸ್ ಹೆಸರಿನ ಕಾರ್ಯಾಚರಣ ವ್ಯವಸ್ಥೆಯನ್ನು (operating system) ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿ ತಿಂಗಳು ವರ್ಷಗಳೇ ಕಳೆದರೂ ಅದು ಕಾಣಿಸದಿದ್ದಾಗ ಪತ್ರಕರ್ತರೊಬ್ಬರು ಈ ಪದವನ್ನು ಹುಟ್ಟುಹಾಕಿದ್ದರು. ಅನಂತರ ಮಾಹಿತಿ ತಂತ್ರಜ್ಞಾನದ ಬಗ್ಗೆ ಬರೆಯುವ ಹಲವು ಪತ್ರಿಕೆಗಳು ಈ ಪದವನ್ನು ಬಳಸತೊಡಗಿದವು. ವಯರ್‌ಡ್ ಹೆಸರಿನ ಜಾಲತಾಣವೊಂದು ಪ್ರತಿ ವರ್ಷ ವೇಪರ್‌ವೇರ್ ಅವಾರ್ಡ್ಸ್ ಹೆಸರಿನಲ್ಲಿ ಆಯಾ ವರ್ಷಗಳಲ್ಲಿ ತುಂಬ ಆಸೆ ಹುಟ್ಟಿಸಿ ಕೊನೆಗೆ ಮಾರುಕಟ್ಟೆಗೆ ಬಾರದ ತಂತ್ರಾಂಶ ಮತ್ತು ಯಂತ್ರಾಂಶಗಳ ಪಟ್ಟಿ ನೀಡುತ್ತ ಬಂದಿದೆ.

ಹೀಗೆ ಆಗುವುದು ಯಾಕೆ? ಅದಕ್ಕೆ ಹಲವು ಕಾರಣಗಳಿವೆ. ಮಾಹಿತಿ ತಂತ್ರಜ್ಞಾನದ ಒಂದು ಉತ್ಪನ್ನ, ಅದು ಯಂತ್ರಾಂಶ ಅಥವಾ ತಂತ್ರಾಂಶವಿರಬಹುದು, ಸಂಪೂರ್ಣವಾಗಿ ತಯಾರಾಗಿ, ಪರೀಕ್ಷೆಗಳನ್ನು ನಡೆಸಿ, ಅಂತಿಮವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಇಂತಿಷ್ಟು ಸಮಯ ಬೇಕು ಎಂದು ಅಂದಾಜಿಸಿ ಅದರ ಘೋಷಣೆ ಮಾಡಲಾಗುತ್ತದೆ. ಈ ಲೆಕ್ಕಾಚಾರ ತಪ್ಪಾದಾಗ ಅದು ಮಾರುಕಟ್ಟೆಗೆ ಹೇಳಿದ ಸಮಯಕ್ಕೆ ತಲುಪುವುದಿಲ್ಲ, ಅಥವಾ ಮೊದಲು ಹೇಳಿದ ಗುಣವೈಶಿಷ್ಟ್ಯಗಳಿರುವುದಿಲ್ಲ, ಅಥವಾ ಮೊದಲು ಹೇಳಿದ ಬೆಲೆಗೆ ದೊರೆಯುವುದಿಲ್ಲ. ಇನ್ನೊಂದು ಕಾರಣವೆಂದರೆ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಸುಧಾರಣೆಗಳು ಅತಿ ವೇಗವಾಗಿ ಆಗುತ್ತಿರುತ್ತವೆ. ಒಂದು ಉತ್ಪನ್ನದ ವಿನ್ಯಾಸ ಮತ್ತು ತಯಾರಿ ಅತಿ ದೀರ್ಘವಾಗಿದ್ದರೆ ಅದು ತಯಾರಾಗಿ ಮಾರುಕಟ್ಟೆಗೆ ಬಿಡುಗಡೆಗೆ ತಯಾರಾದಾಗ ಅದು ಆವಾಗಲೇ ಅಪ್ರಸ್ತುತವಾಗಿರುತ್ತದೆ. ಉತ್ಪನ್ನದ ಯೋಜನೆ ಮಾಡುವಾಗ ಈ ಎಲ್ಲ ಅಂಶಗಳನ್ನು ಪರಿಗಣಿಸದಿದ್ದಲ್ಲಿ ಇಂತಹ ತಪ್ಪುಗಳು ಆಗುತ್ತವೆ. ಇನ್ನೂ ಒಂದು ಕಾರಣವಿದೆ. ಅದು ಪ್ರಮುಖವಾದುದು. ಅದೇನೆಂದರೆ ಎಷ್ಟು ಬೆಲೆಗೆ ನೀಡಲು ಸಾಧ್ಯವೋ ಅದಕ್ಕಿಂತ ಅತಿ ಕಡಿಮೆ ಬೆಲೆಗೆ ನೀಡುತ್ತೇನೆ ಎಂದು ವಾಗ್ದಾನ ಮಾಡುವುದು. ಬಹುತೇಕ ವೇಪರ್‌ವೇರ್‌ಗಳು ಈ ವಿಭಾಗದಲ್ಲಿ ಬರುತ್ತವೆ.

ಈ ಸಂದರ್ಭದಲ್ಲಿ ಎರಡು ಭಾರತೀಯ ಉತ್ಪನ್ನಗಳ ಬಗ್ಗೆ ಬರೆಯುವುದು ಉಚಿತ ಎಂದು ಅನ್ನಿಸುತ್ತಿದೆ. ಅವುಗಳೇ ಸಿಂಪ್ಯೂಟರ್ ಮತ್ತು ಆಕಾಶ್ ಟ್ಯಾಬ್ಲೆಟ್. ಯಾರಿಗಾದರೂ ಈ ಎರಡು ಹೆಸರುಗಳನ್ನು ಕೇಳಿದ ನೆನಪಿದೆಯಾ?

ಮೊದಲಿಗೆ ಸಿಂಪ್ಯೂಟರ್ ಬಗ್ಗೆ ನೋಡೋಣ. ಇದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕೆಲವು ವಿಜ್ಞಾನಿಗಳು ಸೇರಿಕೊಂಡು ತಯಾರಿಸಿದ ಕಡಿಮೆ ಬೆಲೆಯ ಕಂಪ್ಯೂಟರ್. ಇದು 2002ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಂತು. ಆ ಕಾಲದಲ್ಲೇ ಅದರಲ್ಲಿ ಸ್ಪರ್ಶಪರದೆ (touch screen), ಕೈಬರಹದಲ್ಲಿ ಬರೆದುದನ್ನು ಪಠ್ಯಕ್ಕೆ ಪರಿವರ್ತಿಸಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ, ಯುಎಸ್‌ಬಿ ಕಿಂಡಿ, ಅವಕೆಂಪು (infrared) ಸಂವೇದಕ ಎಲ್ಲ ಇದ್ದವು. ಅದರಲ್ಲಿ ಅಕ್ಸೆಲೆರೋಮೀಟರ್ ಕೂಡ ಇತ್ತು. ಹಾಗಂದರೆ ಏನು?  ಸಿಂಪ್ಯೂಟರನ್ನು ತಿರುಗಿಸಿದಾಗ ಭೂಮಿಯ ಗುರುತ್ವಾಕರ್ಷಣೆಯನ್ನು ಬಳಸಿಕೊಂಡು ಯಾವಾಗಲೂ ಅದರ ಪರದೆಯಲ್ಲಿಯ ಪಠ್ಯ, ಚಿತ್ರಗಳು ಮೇಲ್ಮುಖವಾಗಿರುವಂತೆ ಮಾಡುತ್ತಿತ್ತು. ಇದೇನು ವಿಶೇಷ, ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇವೆಲ್ಲ ಇವೆ ಅನ್ನುತ್ತೀರಾ? ಈ ಸವಲತ್ತುಗಳನ್ನು ಸಿಂಪ್ಯೂಟರ್ ನೀಡಿದ್ದು 2002ನೆಯ ಇಸವಿಯಲ್ಲಿ. 6 ವರ್ಷಗಳ ನಂತರ ಐಫೋನ್ ಅಕ್ಸೆಲೆರೋಮೀಟರ್ ಅನ್ನು ಅಳವಡಿಸಿತ್ತು. ಸಿಂಪ್ಯೂಟರ್ ಭಾರತೀಯ ಪರಿಸ್ಥಿತಿಗೆ ಸರಿಹೊಂದುವಂತೆ ವಿನ್ಯಾಸ ಮಾಡಿದ್ದಾಗಿತ್ತು. ಹಳ್ಳಿಗಳಲ್ಲಿ ಕೈಯಲ್ಲಿ ಹಿಡಿದು ಮಾಹಿತಿ ಸಂಗ್ರಹಣೆ, ಹಣಕಾಸಿನ ವ್ಯವಹಾರ, ಇತ್ಯಾದಿಗಳನ್ನು ಸಿಂಪ್ಯೂಟರ್ ಬಳಸಿ ಮಾಡುವುದನ್ನು ಕಲ್ಪಿಸಲಾಗಿತ್ತು. ಈಗೆಲ್ಲ ಇವನ್ನು ಈಗಿನ ಕಾಲದ ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಮಾಡಬಹುದು.  ಆದರೆ 20 ವರ್ಷಗಳ ಹಿಂದೆ ಇವೆಲ್ಲ ಕ್ರಾಂತಿಕಾರಿ ಆವಿಷ್ಕಾರಗಳಾಗಿದ್ದವು. ಹಾಗಿದ್ದರೆ ಸಿಂಪ್ಯೂಟರ್ ಎಲ್ಲಿ ಹೋಯಿತು? ಅದು ಸರಿಯಾಗಿ ಜನರ ಕೈಗೆ ತಲುಪಲೇ ಇಲ್ಲ. ವಿಜ್ಞಾನಿಗಳು ಆವಿಷ್ಕಾರದಲ್ಲಿ ಪಳಗಿದಷ್ಟು ವ್ಯವಹಾರದಲ್ಲಿ ಪಳಗಿರಲಿಲ್ಲ. ಭಾರತೀಯ ಉದ್ಯೋಗಪತಿಗಳೂ ಇದಕ್ಕೆ ಹಣ ಹಾಕಲಿಲ್ಲ. ಅದು ಅಲ್ಲಿಗೇ ಸತ್ತು ಹೋಯಿತು.

ಸಿಂಪ್ಯೂಟರ್

ಈಗ ಆಕಾಶ್ ಟ್ಯಾಬ್ಲೆಟ್‌ನ ಕತೆ ನೋಡೋಣ. ಇದೊಂದು ಟ್ಯಾಬ್ಲೆಟ್ ಕಂಪ್ಯೂಟರ್. ಕಡಿಮೆ ಬೆಲೆಯಲ್ಲಿ ವಿದ್ಯಾರ್ಥಿಗಳ ಬಳಕೆಗೋಸ್ಕರ ದೊರೆಯಲಿದೆ ಎಂದು ಕೇಂದ್ರ ಸರಕಾರವು ಇದನ್ನು 2011 ರಲ್ಲಿ ಘೋಷಿಸಿದ್ದು.  ಆಗಿನ ಕೇಂದ್ರ ಸರಕಾರದ ಮಂತ್ರಿ ಕಪಿಲ್ ಸೈಬಲ್ ಇದನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದ್ದರು. ಇದನ್ನು 35$ ಕಂಪ್ಯೂಟರ್ ಎಂದು ಪ್ರಚಾರ ಮಾಡಲಾಗಿತ್ತು. ಮುಂಬಯಿ ಐಐಟಿಯಲ್ಲಿ ಇದನ್ನು ವಿನ್ಯಾಸ ಮಾಡಿ ಕೆನಡಾ ಮೂಲದ ಡಾಟಾವಿಂಡ್ ಎಂಬ ಕಂಪೆನಿಯ ಮೂಲಕ ಉತ್ಪಾದಿಸಿ ವಿದ್ಯಾರ್ಥಿಗಳಿಗೂ ಜನಸಾಮಾನ್ಯರಿಗೂ ನೀಡುವ ಯೋಜನೆ ಇದಾಗಿತ್ತು. ರೂ.500 ನೀಡಿ ಇದನ್ನು ಮುಂಗಡ ಬುಕಿಂಗ್ ಕೂಡ ಮಾಡಬಹುದಿತ್ತು. ಅಂತಿಮವಾಗಿ ಇದು ಸರಿಯಾಗಿ ಮಾರುಕಟ್ಟೆಗೆ ಬರಲೇ ಇಲ್ಲ. ಮುಂಗಡ ಹಣ ನೀಡಿದ ಬಹುಪಾಲು ಜನರಿಗೆ ಹಣ ವಾಪಾಸು ಮಾಡಲಾಯಿತು. ಕೆಲವೇ ಕೆಲವು ಟ್ಯಾಬ್ಲೆಟ್‌ಗಳು ಕೆಲವು ಕಾಲೇಜುಗಳಿಗೆ ತಲುಪಿದ್ದವು. ಅಂತಹ ಒಂದು ಟ್ಯಾಬ್ಲೆಟ್ ಅನ್ನು ನಾನು ಬಳಸಿ ನೋಡಿದ್ದೆ. ಅದು ತುಂಬ ನಿಧಾನವಾಗಿ ಕೆಲಸ ಮಾಡುತ್ತಿತ್ತು. ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು 6-7 ಗಂಟೆ ಸಮಯ ಹಿಡಿಯುತ್ತಿತ್ತು. ಒಮ್ಮೆ ಪೂರ್ತಿಯಾಗಿ ಚಾರ್ಜ್ ಆದರೆ ಕೇವಲ 2-3 ಗಂಟೆ ಕೆಲಸ ಮಾಡುತ್ತಿತ್ತು. ಅದರ ಸ್ಪರ್ಶಪರದೆಯ ಸಂವೇದನೆ ಏನೇನೂ ಚೆನ್ನಾಗಿರಲಿಲ್ಲ. ಅಂತಿಮವಾಗಿ ಆಕಾಶ್ ಪಾತಾಳಕ್ಕಿಳಿಯಿತು.

ಆಕಾಶ್ ಟ್ಯಾಬ್ಲೆಟ್

ಇವೆರಡೂ ವೇಪರ್‌ವೇರ್‌ಗಳಿಗೆ ನಮ್ಮದೇ ಆದ ಉದಾಹರಣೆಗಳು. ಮಾಹಿತಿ ತಂತ್ರಜ್ಞಾನ ಕೇತ್ರದಲ್ಲಿ ಇಂತಹ ಉದಾಹರಣೆಗಳು ಸಾವಿರಾರಿವೆ.

–ಡಾ| ಯು.ಬಿ. ಪವನಜ

gadgetloka @ gmail . com

The post ವೇಪರ್‌ವೇರ್ first appeared on Vishva Kannada.

ಗರ್ಭಕ್ಕೂ ಗ್ಯಾಜೆಟ್
ಮಹಾಭಾರತದಲ್ಲಿ ಒಂದು ಆಖ್ಯಾನ ಇದೆ. ಕೃಷ್ಣ ತನ್ನ ತಂಗಿ ಸುಭದ್ರೆಗೆ ಚಕ್ರವ್ಯೂಹವನ್ನು ಭೇದಿಸುವ ಉಪಾಯವನ್ನು ಹೇಳುತ್ತಿರುತ್ತಾನೆ. ಆಗ ಆಕೆ ಗರ್ಭಿಣಯಾಗಿರುತ್ತಾಳೆ. ಆಕೆಯ ಗರ್ಭದಲ್ಲಿ ಅಭಿಮನ್ಯು ಇರುತ್ತಾನೆ. ಆತ ಅದನ್ನು ಗರ್ಭದಲ್ಲಿದ್ದಾಗಲೇ ಕೇಳಿಸಿಕೊಳ್ಳುತ್ತಾನೆ. ಸುಭದ್ರೆ ನಿದ್ರೆಗೆ ಜಾರಿದಳು ಎಂದು ಕೃಷ್ಣ ಹೇಳುವುದನ್ನು ನಿಲ್ಲಿಸುತ್ತಾನೆ. ಆದುದರಿಂದ ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಭೇದಿಸಿ ಒಳಕ್ಕೆ ಹೋಗುವುದು ಮಾತ್ರ ಗೊತ್ತಿರುತ್ತದೆ. ವಾಪಾಸು ಹಿಂದಕ್ಕೆ ಬರುವುದು ತಿಳಿದಿರುವುದಿಲ್ಲ. ಮುಂದಕ್ಕೆ ಕುರುಕ್ಷೇತ್ರ ಯುದ್ಧದಲ್ಲಿ ಆತ ಚಕ್ರವ್ಯೂಹದೊಳಕ್ಕೆ ನುಗ್ಗಿ ಸಾಯುತ್ತಾನೆ. ಇದು ಬಹುತೇಕ ಭಾರತೀಯರಿಗೆ ತಿಳಿದಿರುವ ಕಥೆ.

ಈ ಕಥೆಯನ್ನು ನೆನಪಿಸಿಕೊಳ್ಳಲು ಕಾರಣವಿದೆ. ವಿಜ್ಞಾನಿಗಳು ಗರ್ಭದಲ್ಲಿರುವ ಮಗುವಿನ ಆಲಿಸುವ ಶಕ್ತಿ ಮತ್ತು ಅದರಿಂದಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ತಾಯಿಯ ಹೊಟ್ಟೆಯಲ್ಲಿದ್ದಾಗ 18 ವಾರಗಳ ನಂತರ ಮಗುವಿಗೆ ಧ್ವನಿಗಳನ್ನು ಆಲಿಸುವ ಶಕ್ತಿ ಹುಟ್ಟುತ್ತದೆ. ಮಗು ಎಷ್ಟೆಲ್ಲ ಧ್ವನಿಗಳನ್ನು ಕೇಳಿಸಿಕೊಳ್ಳಬಹುದು, ಹಲವು ವಿಧದ ಧ್ವನಿಗಳಿಗೆ ಮಗುವಿನ ಸ್ಪಂದನೆ ಹೇಗಿರುತ್ತದೆ, ಇದರಿಂದ ಮಗುವಿನ ಮೇಲೆ ಏನೆಲ್ಲ ಪರಿಣಾಮಗಳಾಗುತ್ತವೆ ಎಂದೆಲ್ಲ ಅವರು ಸಂಶೋಧನೆ ಮಾಡಿದ್ದಾರೆ.  ಗರ್ಭಧಾರಣೆಯ ಕೊನೆಯ ಮೂರು ತಿಂಗಳುಗಳಲ್ಲಿ ಅವರು ಕೆಲವು ಮಹಿಳೆಯರ ಗರ್ಭದಲ್ಲಿರುವ ಮಕ್ಕಳ ಮೇಲೆ ಸಂಶೋಧನೆ ಮಾಡಿದರು. ಆ ಮಕ್ಕಳಿಗೆ ಹಲವು ನಮೂನೆಯ ಧ್ವನಿಗಳನ್ನು ಕೇಳಿಸಿದರು. ಅಂದರೆ ಹೊರಗಡೆಯಿಂದ ಸ್ಪೀಕರ್ ಮೂಲಕ ಕೇಳಿಸಿದ್ದು. ಯಾವುದೇ ವಿಶೇಷ ಸಾಧನ ಮೂಲಕ ನೇರವಾಗಿ ಕೇಳಿಸಿದ್ದಲ್ಲ. ಗರ್ಭದಲ್ಲಿರುವ ಮಗು ಹಲವು ಬಗೆಯ ಧ್ವನಿಗಳನ್ನು ಆಲಿಸುತ್ತಿರುತ್ತದೆ. ಅವುಗಳಲ್ಲಿ ಮುಖ್ಯವಾದುದು ತಾಯಿಯ ಚಲನೆ, ಅದರಿಂದಾಗಿ ಆಗುವ ಧ್ವನಿಗಳು, ತಾಯಿಯ ಹೊಟ್ಟೆಯ ಒಳಗಿನ ಕೆಲವು ಧ್ವನಿಗಳು, ತಾಯಿ ಮಾತನಾಡುವ, ಹಾಡುವ ಧ್ವನಿ ಮತ್ತು ಹೊರಗಿನ ಧ್ವನಿ. ಮಗು ತಾಯಿಯ ಧ್ವನಿಗೆ ಮೊದಲು ಹೊಂದಿಕೊಳ್ಳುತ್ತದೆ. ನಂತರ ಹೊರಗಿನ ಧ್ವನಿಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ವಿಜ್ಞಾನಿಗಳು 12 ಗರ್ಭಿಣಿ ಮಹಿಳೆಯರನ್ನು ಪ್ರಯೋಗಕ್ಕೆ ಆರಿಸಿಕೊಂಡರು. ಅವರ ಗರ್ಭದಲ್ಲಿರುವ ಮಗುವಿಗೆ ಹೊರಗಿನಿಂದ ಸ್ಪೀಕರ್ ಮೂಲಕ ತಾಯಿಯ ಧ್ವನಿ, ಹಲವು ಬಗೆಯ ಧ್ವನಿ ಮತ್ತು ಹಲವು ಬಗೆಯ ಸಂಗೀತಗಳನ್ನು ಮಗು ಜನಿಸುವ ತನಕ ಕೇಳಿಸಿದರು. ಮಗುವಿನ ಜನನದ ನಂತರ ಸುಮಾರು 4 ತಿಂಗಳುಗಳ ವರೆಗೆ ಅದೇ ಧ್ವನಿಗಳನ್ನು ಮತ್ತೆ ಕೇಳಿಸಿ ಮಗುವಿನ ಸ್ಪಂದನೆಯನ್ನು ಪರಿಶೀಲಿಸಿದರು. ಸಂಶೋಧನೆ ಹೆಚ್ಚು ವೈಜ್ಞಾನಿಕವಾಗಿರಲು ಗರ್ಭದಲ್ಲಿದ್ದಾಗ ಯಾವುದೇ ಧ್ವನಿಯನ್ನು ಕೇಳಿಸದಿದ್ದ 12 ಮಕ್ಕಳನ್ನೂ ತೆಗೆದುಕೊಂಡು ಅದೇ ಧ್ವನಿಗಳಿಗೆ ಆ ಮಕ್ಕಳ ಸ್ಪಂದನೆಯನ್ನು ಪರಿಶೀಲಿಸಿದರು. ಅವರಿಗೆ ಕಂಡುಬಂದುದೇನೆಂದರೆ ಗರ್ಭದಲ್ಲಿದ್ದಾಗ ಆ ಧ್ವನಿಯನ್ನು ಕೇಳಿದ್ದ ಮಕ್ಕಳು ಜನನದ ನಂತರ ಅದೇ ಧ್ವನಿಗೆ ಬೇಗನೆ ಸ್ಪಂದಿಸಿದರು. ಅಂದರೆ ಅವರು ಆ ಧ್ವನಿಗಳನ್ನು ಗುರುತು ಹಿಡಿದರು. ಗರ್ಭದಲ್ಲಿದ್ದಾಗ ಮಗುವಿಗೆ ಉತ್ತಮ ಸಂಗೀತ ಕೇಳಿಸುವುದು, ಉತ್ತಮ ನೀತಿ ಇರುವ ಕಥೆ, ಹಾಡುಗಳನ್ನು ಹೇಳುವುದು, ಶ್ಲೋಕಗಳನ್ನು ಹೇಳುವುದು ಇವೆಲ್ಲವನ್ನು ಮಾಡುವುದು ಉತ್ತಮ ಎಂದು ಶತಮಾನಗಳಿಂದ ನಮ್ಮ ಹಿರಿಯರು ಹೇಳುತ್ತಿದ್ದುದು ನೆನಪಿದೆ ತಾನೆ? ಈಗ ವಿಜ್ಞಾನಿಗಳೂ ಅದನ್ನೇ ಪ್ರಯೋಗದ ಮೂಲಕ ತೋರಿಸಿ ಹೇಳುತ್ತಿದ್ದಾರೆ.

ಎಲ್ಲ ನಮೂನೆಯ ಸಂಶೋಧನೆಗಳೂ ಅಂತಿಮವಾಗಿ ಮಾನವನ ಉಪಯೋಗಕ್ಕೆ ಬರಬೇಕು ಎಂಬುದು ವಿಜ್ಞಾನದ ಆಶಯ. ಈ ಸಂಶೋಧನೆಯೂ ಹಾಗೆಯೇ. ಈಗಾಗಲೆ ಕೆಲವು ಕಂಪೆನಿಗಳು ಗರ್ಭದಲ್ಲಿರುವ ಮಗುವಿಗೆ ಉತ್ತಮ ಧ್ವನಿ ಮತ್ತು ಸಂಗೀತಗಳನ್ನು ಕೇಳಿಸಲು ವಿಶೇಷ ಸಾಧನಗಳನ್ನು ತಯಾರಿಸಿದ್ದಾರೆ. ಅವು ಮಾರುಕಟ್ಟೆಯಲ್ಲಿ ಲಭ್ಯ. ಅವುಗಳಲ್ಲಿ ಪ್ರಮುಖವಾಗಿ ಎರಡು ನಮೂನೆಗಳಿವೆ. ಅವುಗಳ ಬಗ್ಗೆ ಸ್ಥೂಲವಾಗಿ ತಿಳಿಯೋಣ.

ಮೊದಲನೆಯ ನಮೂನೆಯವುಗಳನ್ನು ಬೆಲ್ಲಿಬಡ್ ಎನ್ನುತ್ತಾರೆ. ಇವು ಗರ್ಭಿಣಿ ಮಹಿಳೆಯ ಹೊಟ್ಟೆಗೆ ಅಂಟಿಸುವ ಸ್ಪೀಕರ್ ಮಾದರಿಯಲ್ಲಿರುತ್ತವೆ. ಇವು ಒಂದು ಪ್ಲೇಯರ್‌ಗೆ ಸಂಪರ್ಕ ಹೊಂದಿರುತ್ತವೆ. ಆ ಪ್ಲೇಯರ್‌ನಲ್ಲಿ ಸಂಗೀತ ಅಥವಾ ಯಾವುದೇ ಧ್ವನಿ ಸಂಗ್ರಹಿಸಿ ಅದನ್ನು ಪ್ಲೇ ಮಾಡಬಹುದು. ಈ ಬೆಲ್ಲಿಬಡ್‌ನಲ್ಲಿ ಸ್ಪೀಕರ್‌ಗಳಲ್ಲಿ ಇರುವಂತೆಯೇ ಕಂಪಿಸುವ ಪರದೆ ಇರುತ್ತದೆ. ಆದರೆ ಅದು ಇಲ್ಲಿ ಗರ್ಭಿಣಿ ಮಹಿಳೆಯ ಹೊಟ್ಟೆಗೆ ಅಂಟಿಕೊಂಡಿರುತ್ತದೆ. ಆ ಬಡ್‌ನಿಂದ ಹೊರಡುವ ಧ್ವನಿ ನಮಗೆ ಕೇಳಿಸುವುದಿಲ್ಲ. ಆದರೆ ಅದು ಅಮ್ಮನ ದೇಹದ ಮೂಲಕ ಗರ್ಭದಲ್ಲಿರುವ ಮಗುವಿಗೆ ಕೇಳಿಸುತ್ತದೆ. ಮಗುವಿನ ಜೊತೆ ಮುಂದಕ್ಕೆ ಸಂವಹನಕ್ಕೆ ಸಹಾಯಕಾರಿಯಾಗಲು ಬಹುತೇಕ ಮಹಿಳೆಯರು ಈ ಸಾಧನದಲ್ಲಿ ತಮ್ಮದೇ ಧ್ವನಿಯನ್ನು ರೆಕಾರ್ಡ್ ಮಾಡಿ ಪ್ಲೇ ಮಾಡುತ್ತಾರೆ. ಅಥವಾ ನೇರವಾಗಿ ಮಾತನಾಡುತ್ತಾರೆ. ಇದೊಂದು ರೀತಿಯಲ್ಲಿ ಮುಗುವಿನ ಜೊತೆ ಟೆಲಿಪೋನ್ ಮೂಲಕ ಮಾತನಾಡಿದಂತೆ. ಆದರೆ ಇಲ್ಲಿ ಮಗು ಮಾತನಾಡುವುದಿಲ್ಲ. ಬೆಲ್ಲಿಬಡ್ ಅನ್ನು ಸುಲಭವಾಗಿ ಹೊಟ್ಟೆಯಿಂದ ಕೀಳಬಹುದು. ಮತ್ತೆ ಮತ್ತೆ ಬಳಸಬಹುದು. ಇದು ಹಾಗೂ ಇದೇ ನಮೂನೆಯ ಹಲವು ಸಾಧನಗಳು ಅಮೆಝಾನ್‌ನಲ್ಲಿ ಲಭ್ಯವಿವೆ.

ಎರಡನೆಯ ನಮೂನೆಯ ಸಾಧನದಲ್ಲಿ ಚಿಕ್ಕ ಇಯರ್‌ಬಡ್ ಮಾದರಿಯ ಸ್ಪೀಕರ್ ಅನ್ನು ನೇರವಾಗಿ ಗರ್ಭಿಣಿ ಮಹಿಳೆಯ ಯೋನಿಯೊಳಗೆ ತಳ್ಳಲಾಗುತ್ತದೆ. ಉಳಿದಂತೆ ಬೆಲ್ಲಿಬಡ್‌ಗೂ ಇದಕ್ಕೂ ವ್ಯತ್ಯಾಸ ಇಲ್ಲ. ಇದರಲ್ಲಿ ಇನ್ನೊಂದು ಮಾಮೂಲಿ ಹೆಡ್‌ಫೋನ್ ಕಿಂಡಿಯೂ ಇದೆ. ಅದಕ್ಕೆ ಹೆಡ್‌ಫೋನ್ ಹಾಕಿಕೊಂಡು ಮಹಿಳೆ ಮಗುವಿನ ಜೊತೆ ತಾನೂ ಆಲಿಸಬಹುದು. ಮಗು ಏನನ್ನು ಆಲಿಸುತ್ತಿದೆ ಎಂದು ತಿಳಿಯಲು ಈ ಸೌಲಭ್ಯ ಸಹಾಯಕಾರಿ. ಯೋನಿಯ ಒಳಗೆ ತಳ್ಳುವ ಸಾಧನವಾದುದರಿಂದ ಇದನ್ನು ವಿಶೇಷ ವಸ್ತುವಿಂದ ತಯಾರಿಸಲಾಗಿದೆ. ಅದು ದೇಹಕ್ಕೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ.  ಹಾಗೆಯೇ ದೇಹದ ಒಳಗಿನ ದ್ರವಗಳು ಈ ಬಡ್‌ಗೆ ಯಾವುದೇ ಹಾನಿ ಮಾಡುವುದಿಲ್ಲ. ಈ ಬಡ್‌ಗಳನ್ನು ಹೊರಗೆ ತೆಗೆದ ನಂತರ ನೀರಿನಲ್ಲಿ ತೊಳೆಯಬೇಕು. ಹಾಗೆ ತೊಳೆದು ಸಂಗ್ರಹಿಸಿಡಬಹುದು ಅಥವಾ ಬೇರೆಯವರಿಗೆ ಬಳಕೆಗೆ ನೀಡಬಹುದು.

ಈ ಎರಡೂ ನಮೂನೆಯ ಸಾಧನಗಳಿಂದ ನಿಜವಾಗಿಯೂ ಪ್ರಯೋಜನವಾಗುತ್ತದೆಯೇ ಎಂದು ಯಾವುದಾದರೂ ವಿಜ್ಞಾನಿ ಪ್ರಯೋಗ ಮಾಡಿ ನೋಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಈ ಲೇಖನದ ಪ್ರಾರಂಭದಲ್ಲಿ ತಿಳಿಸಿದ ಸಂಶೋಧನೆಯ ಫಲಿತಾಂಶವನ್ನು ಮಾನದಂಡವಾಗಿ ಇಟ್ಟುಕೊಳ್ಳುವುದಾದರೆ ಈ ಸಾಧನಗಳು ಪ್ರಯೋಜನಕಾರಿಯಾಗಬಲ್ಲವು ಎಂದು ಹೇಳಬಹುದು.

–ಡಾ| ಯು.ಬಿ. ಪವನಜ

gadgetloka @ gmail . com

The post ಗರ್ಭಕ್ಕೂ ಗ್ಯಾಜೆಟ್ first appeared on Vishva Kannada.