ಅಂತರಜಾಲ | Vishva Kannada
5ಜಿ – ಅತಿ ವೇಗದ ಮೊಬೈಲ್ ಅಂತರಜಾಲ
ಅತ್ಯಂತ ಕ್ಲಿಷ್ಟವಾದ ಶಸ್ತ್ರಚಿಕಿತ್ಸೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಎಲ್ಲ ಅತ್ಯಾಧುನಿಕ ಸೌಲಭ್ಯಗಳು, ಪರಿಣತ ವೈದ್ಯರು ಎಲ್ಲ ಇದ್ದಾರೆ. ಶಸ್ತ್ರಚಿಕಿತ್ಸೆಯನ್ನು ಅಮೆರಿಕದಿಂದ ನುರಿತ ವೈದ್ಯರು ವಿಡಿಯೋ ಕಾನ್ಫೆರೆನ್ಸ್ ಮೂಲಕ ವೀಕ್ಷಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಲ್ಲಿಯ ವೈದ್ಯರ ಸಲಹೆಯಂತೆ ಒಂದು ಸೂಕ್ಷ್ಮ ಅಂಗವನ್ನು ಕತ್ತರಿಸಿ ಮುಂದಿನ ಹೆಜ್ಜೆಯ ಬಗ್ಗೆ ಅಮೆರಿಕದಿಂದ ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದಾರೆ. ಆಗ ಅಂತರಜಾಲ ಸಂಪರ್ಕ ನಿಧಾನವಾಗಿ ತಡೆತಡೆದು ಬರತೊಡಗುತ್ತದೆ. ಇಂತಹ ಸಂದರ್ಭಗಳು ಮುಂದೆ 5ಜಿ ಬಂದಾಗ ಆಗಲಾರದು.
ಅಕ್ಟೋಬರ್ 1 ರಂದು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ 5ಜಿ ಮೊಬೈಲ್ ಅಂತರಜಾಲ ಸಂಪರ್ಕ ತಂತ್ರಜ್ಞಾನವನ್ನು ಉದ್ಘಾಟಿಸಿದರು. ಈ ತಂತ್ರಜ್ಞಾನವು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲಿದೆ ಎಂದು ನರೇಂದ್ರ ಮೋದಿಯವರು ಹೇಳಿದರು. ಏನಿದು 5ಜಿ ಅಂದರೆ? ಈ ಸಂಚಿಕೆಯಲ್ಲಿ ಅದರ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳೋಣ.
5ಜಿ (G=generation) ಅಂದರೆ ಐದನೇ ತಲೆಮಾರಿನ ತಂತ್ರಜ್ಞಾನ ಎಂದು ಅರ್ಥ. ಐದನೇ ತಲೆಮಾರು ಬರುವ ಮೊದಲು 1ನೆ, 2ನೆ, 3ನೇ ಮತ್ತು 4ನೇ ತಲೆಮಾರುಗಳು ಇದ್ದಿರಬೇಕಲ್ಲವೇ? ಹೌದು. ಅವುಗಳು ಕ್ರಮವಾಗಿ, 1G, 2G, 3G ಮತ್ತು 4G ತಂತ್ರಜ್ಞಾನಗಳು. ಇವು ಮೊಬೈಲ್ ಫೋನ್ ಕ್ಷೇತ್ರದಲ್ಲಿ ತಂತ್ರಜ್ಞಾನವು ಹಾದು ಬಂದ ಮಜಲುಗಳು ಎನ್ನಬಹುದು. ಅದನ್ನು ಕೋಷ್ಟಕ ರೂಪದಲ್ಲಿ ನೀಡಲಾಗಿದೆ-
ತಂತ್ರಜ್ಞಾನದ ಮಜಲು
ವರ್ಷ
ತಂತ್ರಜ್ಞಾನದ ವೈಶಿಷ್ಟ್ಯ
1G
1980
ಅನಲಾಗ್ ಧ್ವನಿ
2G
1990
ಡಿಜಿಟಲ್ ಧ್ವನಿ
3G
2000
ಮೊಬೈಲ್ ಡಾಟಾ
4G
2010
ಮೊಬೈಲ್ ಬ್ರಾಡ್‌ಬ್ಯಾಂಡ್
5G
2016
ಅತಿ ವೇಗದ ಅಂತರಜಾಲ ಸಂಪರ್ಕ
ಇವು ತಂತ್ರಜ್ಞಾನವು ಜಾಗತಿಕವಾಗಿ ಬಂದ ವರ್ಷ. ಭಾರತಕ್ಕೆ ಬಂದ ವರ್ಷಗಳಲ್ಲ.
5ಜಿ ಯಲ್ಲಿ 11 ಬ್ಯಾಂಡ್‌ಗಳಿವೆ. ಭಾರತದಲ್ಲಿ ಎಲ್ಲ ಮೊಬೈಲ್ ಸೇವೆ ನೀಡುವವರು ಎಲ್ಲ ಬ್ಯಾಂಡ್‌ಗಳಲ್ಲಿ 5ಜಿ ನೀಡುತ್ತಾರೆಂದಿಲ್ಲ. ಈಗಿನ ಮಾಹಿತಿಯಂತೆ ಜಿಯೋ 8, ಏರ್‌ಟೆಲ್ 5 ಮತ್ತು ವೊಡಾಫೋನ್ 5 ಬ್ಯಾಂಡ್‌ಗಳಲ್ಲಿ 5ಜಿ ಸೇವೆಗಳನ್ನು ನೀಡುತ್ತಾರೆ-
ಜಿಯೋ – 700 MHz, 800 MHz, 900 MHz, 1800 MHz, 2100 MHz, 2500 MHz, 3300 MHz ಮತ್ತು 26 GHz
ಏರ್‌ಟೆಲ್ – 900 MHz, 1800 MHz, 2100 MHz, 3300 MHz ಮತ್ತು 26 GHz
ವಿಐ – 1800 MHz, 2100 MHz, 2500 MHz, 3300 MHz and 26 GHz
ಸದ್ಯಕ್ಕೆ ಭಾರತದ ಕೆಲವೇ ಪ್ರಮುಖ ನಗರಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಆಯಾ ನಗರದಲ್ಲೂ ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ಈ ಸೇವೆ ಲಭ್ಯವಿದೆ.
5ಜಿ ಸಂಪರ್ಕವು ಅತಿ ವೇಗದ ಅಂತರಜಾಲ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ. 4ಜಿ ಸಂಪರ್ಕಕ್ಕೆ ಹೋಲಿಸಿದರೆ ಅದು 10 ರಿಂದ 100 ಪಟ್ಟು ಹೆಚ್ಚಿನ ವೇಗವನ್ನು ಸಾಧಿಸಬಲ್ಲುದು. 4ಜಿ ಸಂಪರ್ಕದಲ್ಲಿ ಒಂದು ದೊಡ್ಡ ಗಾತ್ರದ ಫೈಲು ಡೌನ್‌ಲೋಡ್ ಆಗಲು ಸುಮಾರು 10 ಸೆಕೆಂಡು ಬೇಕಿದ್ದಲ್ಲಿ ಅದೇ ಫೈಲು 5 ಜಿ ಸಂಪರ್ಕದಲ್ಲಿ ಕೇವಲ 1 ಸೆಕೆಂಡಿನಲ್ಲಿ ಡೌನ್‌ಲೋಡ್ ಆಗಬಲ್ಲುದು. ಇದರಿಂದಾಗಿ ಹಲವು ಪ್ರಯೋಜನಗಳಾಗಲಿವೆ. ಮೊದಲನೆಯದಾಗಿ ಅಂತರಜಾಲದ ಮೂಲಕ ವಿಡಿಯೋ ನೋಡುವವರಿಗೆ ಉತ್ತಮ ಗುಣಮಟ್ಟದ ವಿಡಿಯೋ ವೀಕ್ಷಣೆಯನ್ನು ಸರಾಗವಾಗಿ ಮಾಡಬಹುದು. ಒಂದು ಸಿನಿಮಾವನ್ನು ಅಂತರಜಾಲದಲ್ಲಿ ಆಪ್‌ಗಳ ಮೂಲಕ ನೋಡುವವರಿಗೆ ಈ ಅನುಭವವಾಗಿರಬಹುದು.  ಹೈಡೆಫಿನಿಶನ್ ಎಂದು ಆಯ್ಕೆ ಮಾಡಿಕೊಂಡರೆ ಹಲವು ಸಲ ಸಿನಿಮಾವನ್ನು ಸರಾಗವಾಗಿ ನೋಡಲು ಆಗುವುದೇ ಇಲ್ಲ. ಅಗಾಗ ಅದು ನಿಲ್ಲುತ್ತದೆ. ಇದಕ್ಕೆ ಬಫರಿಂಗ್ ಎನ್ನುತ್ತಾರೆ. ಸಾಮಾನ್ಯವಾಗಿ ನಾವು ಅಂತಹ ಸಂದರ್ಭಗಳಲ್ಲಿ ಕಡಿಮೆ ಗುಣಮಟ್ಟಕ್ಕೆ ಆಯ್ಕೆಯನ್ನು ಬದಲಾಯಿಸಿಕೊಳ್ಳುತ್ತೇವೆ. 5ಜಿ ಬಂದಾಗ ಈ ಸಮಸ್ಯೆ ಇರುವುದಿಲ್ಲ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೋಗಳನ್ನು ಕೂಡ ಯಾವುದೇ ತಡೆಯಿಲ್ಲದೆ (ಬಫರಿಂಗ್ ಇಲ್ಲದೆ) ಅಂತರಜಾಲದಿಂದ ವೀಕ್ಷಿಸಬಹುದು.
ಅಂತರಜಾಲ ಸಂಪರ್ಕದಲ್ಲಿ ವೇಗ ಮಾತ್ರವಲ್ಲ. ಲಾಟೆನ್ಸ್ ಎಂಬ ಇನ್ನೊಂದು ಗುಣವೈಶಿಷ್ಟ್ಯವಿದೆ. ಒಂದು ಜಾಲತಾಣ ವೀಕ್ಷಣೆ, ಫೈಲು ಡೌನ್‌ಲೋಡ್, ಸ್ಟ್ರೀಮಿಂಗ್ ವಿಡಿಯೋದ ಪ್ರಾರಂಭವು ಕೂಡಲೇ ಆಗದೆ, ಒಂದು ಚಿಕ್ಕ ಸಮಯ ಕಳೆದ ನಂತರ ಪ್ರಾರಂಭವಾಗುವುದನ್ನು ಗಮನಿಸಿರಬಹುದು. ಇದನ್ನೇ ಲಾಟೆನ್ಸ್ ಎನ್ನುತ್ತಾರೆ. 4ಜಿ ಸಂಪರ್ಕದಲ್ಲಿ ಇದು ಸಾಮಾನ್ಯವಾಗಿ 20 ಮಿಲ್ಲಿ ಸೆಕೆಂಡಿನಿಂದ 100 ಮಿ.ಸೆ. ಕೂಡ ಇರಬಹುದು. ವಿಡಿಯೋ ಕಾಫೆರೆನ್ಸ್‌ಗಳಲ್ಲಿ ಈ ಲಾಟೆನ್ಸ್ ಕಡಿಮೆ ಇದ್ದಷ್ಟೂ ಉತ್ತಮ. ಇಲ್ಲವಾದಲ್ಲಿ ಮಾತನಾಡುತ್ತಿದ್ದಾಗ ವಿಡಿಯೋ ಅಲ್ಲಲ್ಲಿ ಸ್ವಲ್ಪ ಕಾಲ ನಿಲ್ಲುತ್ತದೆ. ಈ ನಿಲ್ಲುವ ಸಮಯ ಒಂದು ಸೆಕೆಂಡಿಗಿಂತಲೂ ಕಡಿಮೆ ಇರಬಹುದು. ಆದರೂ ಕೆಲವು ಸಂದರ್ಭಗಳಲ್ಲಿ ಸೆಕೆಂಡು ಮಾತ್ರವಲ್ಲ ಮಿಲ್ಲಿ ಸೆಕೆಂಡು ಕೂಡ ಮುಖ್ಯವಾಗುತ್ತದೆ. 3ಜಿಯಲ್ಲಿ ಇನ್ನೂ ಜಾಸ್ತಿ ಇರುತ್ತದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ರೋಗಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ. ಅಮೆರಿಕದಿಂದ ಕೆಲವು ಪರಿಣತ ವೈದ್ಯರು ವಿಡಿಯೋ ಮೂಲಕ ಶಸ್ತ್ರಚಿಕಿತ್ಸೆಯನ್ನು ವೀಕ್ಷಿಸುತ್ತಾ ಅಲ್ಲಿಂದ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋ ಮಿಲ್ಲಿಸೆಕೆಂಡಿನಷ್ಟು ಕಾಲವೂ ನಿಲ್ಲಬಾರದು. ಇದು ಒಂದು ಉದಾಹರಣೆ ಮಾತ್ರ. ಇಂತಹ ಹಲವು ಉದಾಹರಣೆಗಳಿವೆ.
5ಜಿ ತಂತ್ರಜ್ಞಾನವು ಭಾರತಕ್ಕೆ ಹಲವು ರೀತಿಯಲ್ಲಿ ವರದಾನವಾಗಲಿದೆ. ಕೆಲವು ಪ್ರಮುಖ ಸಂದರ್ಭಗಳನ್ನು ನೋಡೋಣ. ವಸ್ತುಗಳ ಅಂತರಜಾಲ (IoT = Internet of Things) ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ಆಗಲಿದೆ. ಕೃಷಿ ಕ್ಷೇತ್ರದಲ್ಲಿ ಅತಿ ವೇಗದ ಅಂತರಜಾಲ ಮತ್ತು ಕಡಿಮೆ ಲಾಟೆನ್ಸ್‌ನಿಂದಾಗಿ ಲಾಭವಾಗಲಿದೆ. ಆರೋಗ್ಯ ಕ್ಷೇತ್ರದ ಒಂದು ಉದಾಹರಣೆಯನ್ನು ಈಗಾಗಲೇ ನೀಡಲಾಗಿದೆ. ಶಿಕ್ಷಣದ ವಿಷಯಕ್ಕೆ ಬಂದರೆ ಉತ್ತಮ ಗುಣಮಟ್ಟದ ವಿಡಿಯೋ ವೀಕ್ಷಣೆಯ ಸೌಲಭ್ಯದಿಂದಾಗಿ ಆನ್‌ಲೈನ್ ತರಗತಿಗಳಿಗೆ ತುಂಬ ಪ್ರಯೋಜನವಾಗಲಿದೆ. ಸಾರಿಗೆ ನಿಯಂತ್ರಣವನ್ನು ನಿಜಸಮಯದಲ್ಲಿ ಉತ್ತಮವಾಗಿ ಮಾಡಬಹುದು.  Accutane Uk
ಎಲ್ಲರಿಗೂ ಈ 5ಜಿ ಸೌಲಭ್ಯ ದೊರಕಲಿದೆಯೇ ಎಂದು ಕೇಳಿದರೆ ಸದ್ಯಕ್ಕೆ ಇಲ್ಲ ಎಂಬುದೇ ಉತ್ತರ. ಎಲ್ಲರಿಗೂ ಲಭ್ಯವಾಗಲು ಬಹುಶಃ ಒಂದರಿಂದ ಎರಡು ವರ್ಷಗಳೇ ಬೇಕಾಗಬಹುದು. ಈಗಾಗಲೇ ಸ್ಮಾರ್ಟ್‌ಫೋನ್ ಇರುವವರು 5ಜಿ ಪಡೆಯಲು ಏನು ಮಾಡಬೇಕು? ನಿಮ್ಮ ಫೋನಿನಲ್ಲಿ 5ಜಿ ಸೌಲಭ್ಯ ಇದೆಯಾದಲ್ಲಿ ಅದನ್ನು ಚಾಲನೆ ಮಾಡಿಕೊಂಡರೆ ಸಾಕು. ನಿಮ್ಮ ಸ್ಥಳದಲ್ಲಿ 5ಜಿ ಸೇವೆ ಬಂದಾಗ ತಾನಾಗಿಯೇ ನಿಮಗೆ ಲಭ್ಯವಾಗುವುದು. ನಿಮ್ಮದು ಹಳೆಯ 5ಜಿ ಸೌಲಭ್ಯವಿಲ್ಲದ ಫೋನಾದರೆ ಹೊಸ ಫೋನ್ ಕೊಳ್ಳುವುದೇ ಪರಿಹಾರ. ಅಂತಹ ಫೋನ್‌ಗಳಿಗೆ ಸಾಫ್ಟ್‌ವೇರ್ ನವೀಕರಣ ಮೂಲಕ 5ಜಿ ಪಡೆಯಲು ಸಾಧ್ಯವಿಲ್ಲ.
–ಡಾ| ಯು.ಬಿ. ಪವನಜ
gadgetloka @ gmail . com
ದಿ : 01-10-2022
The post 5ಜಿ – ಅತಿ ವೇಗದ ಮೊಬೈಲ್ ಅಂತರಜಾಲ first appeared on Vishva Kannada.
ಪರೀಕ್ಷೆಯಲ್ಲಿ ವಂಚನೆಗೂ ತಂತ್ರಜ್ಞಾನದ ಬಳಕೆ
ಕರ್ನಾಟಕದಲ್ಲಿ ಕೆ.ಪಿ.ಎಸ್.ಸಿ. ಪ್ರವೇಶ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ವಂಚನೆ ಮಾಡಿದ ಸುದ್ದಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದು ಬಹುಮಟ್ಟಿಗೆ ಮುನ್ನಾಬಾಯಿ ಎಂಬಿಬಿಎಸ್ ಸಿನಿಮಾದ ಸನ್ನಿವೇಶವನ್ನು ನೆನಪಿಗೆ ತರುತ್ತದೆ. ಆ ಸಿನಿಮಾದಲ್ಲಿ ನಾಯಕ ಹೊರಗಿನಿಂದ ಯಾರೋ ಉತ್ತರವನ್ನು ಹೇಳಿದುದನ್ನು ಮೊಬೈಲ್ ಫೋನ್ ಮತ್ತು ಇಯರ್‌ಫೋನ್ ಬಳಸಿ ಬರೆದು ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ. ಆ ಸಿನಿಮಾ ಬಂದ ಕಾಲದಲ್ಲಿ ಬ್ಲೂಟೂತ್ ತಂತ್ರಜ್ಞಾನ ಇಷ್ಟು ಬಳಕೆಗೆ ಬಂದಿರಲಿಲ್ಲ. ಬಂದಿದ್ದರೆ ಅಲ್ಲಿ ಬಳಸಿದ ಮಾಮೂಲಿ ಇಯರ್‌ಫೋನ್ ಬದಲು ಅತ್ಯಾಧುನಿಕ, ಸುಲಭದಲ್ಲಿ ಕಾಣಿಸದ, ಬ್ಲೂಟೂತ್ ಇಯರ್‌ಫೋನ್ ಇರುತ್ತಿತ್ತು. ಯಾವುದೇ ಹೊಸ ಸೌಲಭ್ಯ, ತಂತ್ರಜ್ಞಾನ ಬಂದಾಗ ಎರಡು ರೀತಿಯ ಸಂಗತಿಗಳು ಆಗುತ್ತವೆ. ಅವು ಉಪಯೋಗ ಮತ್ತು ದುರುಪಯೋಗ. ಈ ಲೇಖನದಲ್ಲಿ ತಂತ್ರಜ್ಞಾನವನ್ನು ಹೇಗೆ ದುರುಪಯೋಗ ಮಾಡಬಹುದು, ಅದರಲ್ಲೂ ಪರೀಕ್ಷೆಯಲ್ಲಿ ವಂಚನೆಗೆ ಹೇಗೆಲ್ಲ ಬಳಸಬಹುದು ಎಂಬುದನ್ನು ನೋಡೋಣ.
ಎಲ್ಲ ವಂಚನೆಗಳ ಮೂಲ ವಿಧಾನ ಬಹುತೇಕ ಒಂದೇ. ಬ್ಲೂಟೂತ್ ಇಯರ್‌ಫೋನ್ ಅನ್ನು ಬಳಸಿ ಆಲಿಸುವುದು. ಹೊರಗಿನಿಂದ ಒಬ್ಬ ಪ್ರಶ್ನೆಗಳಿಗೆ ಸರಿಯದ ಉತ್ತರವನ್ನು ಓದಿ ಹೇಳುತ್ತಾನೆ. ಅದನ್ನು ಕೇಳಿಸಿಕೊಂಡ ಈತ ಉತ್ತರ ಬರೆಯುತ್ತಾನೆ. ಹೀಗೆ ಮಾಡುವಾಗ ಇಯರ್‌ಫೋನ್ ಕಾಣಿಸುವುದಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಇಲ್ಲಿ ಬರುವುದು ಆಧುನಿಕ ತಂತ್ರಜ್ಞಾನ. ಇಂತಹ ಸಂದರ್ಭಗಳಿಗೆಂದೇ ಅತ್ಯಂತ ಚಿಕ್ಕ ಬ್ಲೂಟೂತ್ ಇಯರ್‌ಫೋನ್‌ಗಳು ಲಭ್ಯವಿವೆ. ಅವು ಎಷ್ಟು ಚಿಕ್ಕವಿವೆ ಎಂದರೆ ಕಿವಿಯ ಕಾಲುವೆಯೊಳಗೆ ಅವು ಹೋಗಿ ಕುಳಿತುಕೊಳ್ಳುತ್ತವೆ. ಯಾರಿಗೂ ಗೊತ್ತೇ ಆಗಲಾರದು. ಅದು ಬರಿಯ ಇಯರ್‌ಫೋನ್ ಆಯಿತು. ಅದು ತನ್ನಷ್ಟಕ್ಕೆ ಅತಿ ದೂರದಲ್ಲಿರುವ ವ್ಯಕ್ತಿಗೆ ಸಂಪರ್ಕ ಹೊಂದಲಾರದು. ಬ್ಲೂಟೂತ್ ಹೆಚ್ಚೆಂದರೆ 10 ಮೀ. ವ್ಯಾಪ್ತಿಯದ್ದು. ಈ ಬ್ಲೂಟೂತ್ ಇಯರ್‌ಫೋನ್ ಒಂದು ಚಿಕ್ಕ ಗ್ಯಾಜೆಟ್‌ಗೆ ಸಂಪರ್ಕ ಹೊಂದಿರುತ್ತದೆ. ಅದು ಒಂದು ಚಿಕ್ಕ ಮೊಬೈಲ್ ಫೋನ್ ಎನ್ನಬಹುದು. ಯಾಕೆಂದರೆ ಅದರಲ್ಲಿ ಸಿಮ್ ಕಾರ್ಡ್ ಇರುತ್ತದೆ. ಈ ಸಾಧನ ಒಂದು ಪೆನ್ಸಿಲ್ ರಬ್ಬರ್‌ನಷ್ಟು ಚಿಕ್ಕದೂ ಇರಬಹುದು. ನೋಡಲೂ ರಬ್ಬರ್‌ನಂತೆಯೇ ಕಾಣಿಸುತ್ತದೆ. ಆದರೆ ಅದರಲ್ಲಿ ಸಿಮ್‌ ಕಾರ್ಡ್, ಅದನ್ನು ನಡೆಸಲು ಬೇಕಾದ ಪುಟಾಣಿ ಬ್ಯಾಟರಿ ಎಲ್ಲ ಇರುತ್ತದೆ. ಇದು ಇನ್ನೂ ಹಲವು ರೂಪಗಳಲ್ಲಿ ಲಭ್ಯವಿದೆ. ಬ್ಯಾಂಕಿನ ಎಟಿಎಂ ಕಾರ್ಡ್ ರೂಪದಲ್ಲಿಯೂ ದೊರೆಯುತ್ತದೆ. ನೋಡಿದವರಿಗೆ ಸುಲಭದಲ್ಲಿ ಗೊತ್ತಾಗಲಾರದು.
ಕಾಲ್ಪನಿಕ ಚಿತ್ರ
ಉತ್ತರ ಪ್ರದೇಶದಲ್ಲಿ ಪೋಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಬಂದವರನ್ನು ಕೋಣೆಯೊಳಗಡೆ ಕಳುಹಿಸುವ ಮೊದಲು ಪ್ರತಿಯೊಬ್ಬರನ್ನೂ ಲೋಹ ಪತ್ತೆ ಹಚ್ಚುವ ಸಾಧನ ಮೂಲಕ ಪರೀಕ್ಷೆ ಮಾಡಿ ಒಳಗೆ ಕಳುಹಿಸಲಾಗುತ್ತಿತ್ತು. ಒಬ್ಬಾತನ ತಲೆಯ ಮೇಲೆ ಅದನ್ನು ಹಿಡಿದಾಗ ಅದು ಸದ್ದು ಮಾಡಿತು. ಅವನ ತಲೆಯ ಕೂದಲನ್ನು ಪರೀಕ್ಷಿಸಿದಾಗ ಅಲ್ಲಿ ಯಾವ ಲೋಹದ ಸಾಧನವೂ ಕಂಡುಬರಲಿಲ್ಲ. ಪುನಃ ಪರೀಕ್ಷೆ ಮಾಡಿದರು. ಆಗಲೂ ಬೀಪ್ ಬೀಪ್ ಬರತೊಡಗಿತು. ಒಬ್ಬರಿಗೆ ಸ್ವಲ್ಪ ಅನುಮಾನ ಬಂದು ಆತನ ತಲೆಗೂದಲನ್ನು ಸ್ವಲ್ಪ ಎಳೆದು ನೊಡಿದರು. ಆಗ ಗೊತ್ತಾಯಿತು ನೋಡಿ ನಿಜ ಬಣ್ಣ. ಆತನ ತಲೆಗೂದಲು ಕೃತಕವಾಗಿತ್ತು. ಅಂದರೆ ಆತ ವಿಗ್ ಧರಿಸಿದ್ದ. ವಿಗ್‌ನ ಅಡಿಯಲ್ಲಿ ಬ್ಲೂಟೂತ್ ಸಾಧನವಿತ್ತು. ಕಿವಿಯೊಳಗೆ ಅತಿ ಚಿಕ್ಕ ಬ್ಲೂಟೂತ್ ಇಯರ್‌ಫೋನ್ ಇತ್ತು. ಕೆಲವರು ಅಂಗಿಯ ಹೊಲಿಗೆಯ ಒಳಗೆ ಬ್ಲೂಟೂತ್ ಸಾಧನವನ್ನು ಹೊಲಿಸಿಕೊಂಡದ್ದೂ ಪತ್ತೆಯಾಗಿದೆ. ಇನ್ನೊಬ್ಬರು ಬ್ಲೂಟೂತ್ ಚಪ್ಪಲಿ ಧರಿಸಿ ಪರೀಕ್ಷೆಗೆ ಬಂದಿದ್ದರು.
ಸ್ಮಾರ್ಟ್‌ವಾಚ್ ಎಲ್ಲರಿಗೂ ಗೊತ್ತಿದೆ. ಪರೀಕ್ಷೆಯಲ್ಲಿ ವಂಚಿಸುವವರಿಗೆಂದೇ ವಿಶೇಷ ಸ್ಮಾರ್ಟ್‌ವಾಚ್ ಲಭ್ಯವಿದೆ. ಇದು ವೃತ್ತಾಕಾರದ ಡಯಲ್ ಹೊಂದಿದ್ದು ಸಾಮಾನ್ಯ ವಾಚಿನಂತೆಯೇ ಕಾಣುತ್ತದೆ. ಅದನ್ನು ಕಟ್ಟಿಕೊಂಡ ಕೈಯನ್ನು ಒಮ್ಮೆ ಕುಲುಕಿಸಿದರೆ ಅದರ ಪರದೆಯ ಮೇಲೆ ಸಂದೇಶದ ಮಾದರಿಯಲ್ಲಿ ಪಠ್ಯವು ಮೂಡಿಬರುತ್ತದೆ. ಅದು ಕೆಳಗಿನಿಂದ ಮೇಲಕ್ಕೆ ಸರಿಯುತ್ತದೆ. ಯಾರಾದರೂ ಪಕ್ಕ ಬಂದರೆ ಕೈಯನ್ನು ಇನ್ನೊಮ್ಮೆ ಕುಲುಕಿದರೆ ಆಯಿತು. ಆಗ ವಾಚ್ ಮಾಮೂಲಿ ವಾಚಿನಂತಾಗಿ ಅದರಲ್ಲಿ ಮುಳ್ಳುಗಳು ಕಾಣಿಸುತ್ತವೆ.
ಈ ರೀತಿ ಮಾಡುವಾಗ ಒಂದು  ವಿಷಯ ಗಮನಿಸಿರಬಹುದು. ಅದೇನೆಂದರೆ ಹೊರಗಿನಿಂದ ಉತ್ತರ ಓದಿ ಹೇಳುವವರಿಗೆ ಕೋಣೆಯ ಒಳಗೆ ಕುಳಿತು ಬರೆಯುತ್ತಿರುವವನ ಜೊತೆ ಮಾತನಾಡಲು ಆಗುವುದಿಲ್ಲ. ಆತನಿಗೆ ಉತ್ತರ ಸರಿಯಾಗಿ ಕೇಳಿತೇ ಇಲ್ಲವೇ ಎಂದು ಗೊತ್ತಾಗುವುದು ಹೇಗೆ? ಇದಕ್ಕೂ ಖದೀಮರು ಉಪಾಯ ಮಾಡಿಕೊಂಡಿದ್ದಾರೆ. ಉತ್ತರ ಬರೆಯುವಾತ ಕೆಮ್ಮಿನ ಮೂಲಕ ಹೊರಗಿನವನಿಗೆ ಸಂಕೇತ ಕಳುಹಿಸುತ್ತಾನೆ. ಒಮ್ಮೆ ಕೆಮ್ಮಿದರೆ ಉತ್ತರ ಕೇಳಿಸಿಕೊಂಡಿದ್ದೇನೆ, ಮುಂದಿನ ಪ್ರಶ್ನೆಗೆ ಹೋಗಬಹುದು ಎಂದು ಅರ್ಥ. ಎರಡು ಸಲ ಕೆಮ್ಮಿದರೆ ಉತ್ತರ ಇನ್ನೊಮ್ಮೆ ಓದಿ ಹೇಳು ಎಂದು.
ಈ ಎಲ್ಲ ವಿಧಾನಗಳಲ್ಲಿ ಹೊರಗಿನಿಂದ ಉತ್ತರ ಓದಿ ಹೇಳುವವನ ಕೈಯಲ್ಲಿ ಪ್ರಶ್ನೆ ಪತ್ರಿಕೆ ಇರಬೇಕು. ಅದು ಲಭ್ಯವಿಲ್ಲದಿದ್ದಾಗ ಏನು ಉಪಾಯ? ಅದಕ್ಕೂ ಆದುನಿಕ ತಂತ್ರಜ್ಞಾನಾಧಾರಿತ ವಂಚಕರು ಪರಿಹಾರ ಕಂಡುಕೊಂಡಿದ್ದಾರೆ. ಕ್ಯಾಮೆರ ಅಳವಡಿಸಿರುವ ಕನ್ನಡಕಗಳು ಲಭ್ಯವಿವೆ. ಇವುಗಳಲ್ಲಿ ಸಿಮ್ ಕಾರ್ಡ್ ಹಾಕಬಹುದು. ಕಿವಿಗೆ ಇಯರ್‌ಫೋನ್ ಕೂಡ ಇವುಗಳಲ್ಲಿ ಅಡಕವಾಗಿರುತ್ತವೆ. ನೋಡಲು ಮಾಮೂಲಿ ಗಾಗಲ್ ತರಹ ಕಾಣಿಸುತ್ತದೆ. ಅದನ್ನು ಹಾಕಿಕೊಂಡು ಪ್ರಶ್ನೆಪತ್ರಿಕೆಯನ್ನು ನೋಡಿದರೆ ಅದು ಕ್ಯಾಮೆರಾ ಮೂಲಕ ಹೊರಗೆ ಸಂಪರ್ಕದಲ್ಲಿರುವವನಿಗೆ ತಲುಪುತ್ತದೆ. ಆತ ಅಲ್ಲಿಂದ ಪ್ರಶ್ನೆಗೆ ಉತ್ತರವನ್ನು ಓದಿ ಹೇಳಿದರೆ ಅದು ಈತನಿಗೆ ಇಯರ್‌ಫೋನ್ ಮೂಲಕ ತಲುಪುತ್ತದೆ.
ಇನ್ನೂ ಹಲವು ನಮೂನೆಯ ಸಾಧನಗಳು ಲಭ್ಯವಿವೆ. ಕೆಲವು ಉದಾಹರಣೆಗಳು: ಬ್ಲೂಟೂತ್ ಅಳವಡಿಸಿರುವ ಮುಖಗವಸು (ಮಾಸ್ಕ್), ಕೈಗೆ ಬ್ರೇಸ್‌ಲೆಟ್ ಮಾದರಿಯ ಸಾಧನ, ಕುತ್ತಿಗೆಗೆ ಸರದ ಮಾದರಿಯ ಸಾಧನ, ಫೇಸ್ ಮಾಸ್ಕ್, ಬ್ರಾ, ಚಡ್ಡಿ, ಇತ್ಯಾದಿ. ಇಂತಹ ಸಾಧನಗಳನ್ನು ಮಾರಲೆಂದೇ ಜಾಲತಾಣಗಳಿವೆ. ಅವುಗಳ ವಿಳಾಸವನ್ನು ಇಲ್ಲಿ ನೀಡುತ್ತಿಲ್ಲ.
ಯಾವ ಯಾವ ರೀತಿಯಲ್ಲಿ ವಂಚಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಇಲ್ಲಿ ಕೇವಲ ಮಾಹಿತಿಗೋಸ್ಕರ ನೀಡಿದ್ದೇನೆ. ನಾನೂ ಆ ರೀತಿಯಲ್ಲಿ ವಂಚಿಸಿ ಪರೀಕ್ಷೆಯಲ್ಲಿ ಪಾಸಾಗುತ್ತೇನೆ ಎಂದು ಹೊರಡಬೇಡಿ ಮತ್ತೆ! ಎಲ್ಲಾ ನಮೂನೆಯ ವಂಚನೆಗಳನ್ನೂ ಪತ್ತೆಹಚ್ಚಬಹುದು. ಅದು ಹೇಗೆ ಎಂದು ಮಾತ್ರ ನಾನು ಹೇಳುತ್ತಿಲ್ಲ!
–ಡಾ| ಯು.ಬಿ. ಪವನಜ
gadgetloka @ gmail . com
The post ಪರೀಕ್ಷೆಯಲ್ಲಿ ವಂಚನೆಗೂ ತಂತ್ರಜ್ಞಾನದ ಬಳಕೆ first appeared on Vishva Kannada.
ರಷ್ಯಾ ಯುಕ್ರೇನ್ ಜಾಲಸಮರ
ಅಂತರಜಾಲದಲ್ಲಿ ಸೈಬರ್ ಯುದ್ಧ
ದೇಶ ದೇಶಗಳ ನಡುವೆ ಯುದ್ಧ ನಡೆಯುವಾಗ ಅವುಗಳ ನಡುವಿನ ಯುದ್ಧ ಕೇವಲ ಮಿಲಿಟರಿಗೆ ಮಾತ್ರ ಸೀಮಿತವಾಗಿರಬೇಕಾಗಿಲ್ಲ. ಈಗಿನ ಕಾಲದಲ್ಲಿ ಯುದ್ಧ ಹಲವು ಮಜಲುಗಳಲ್ಲಿ ನಡೆಯುತ್ತದೆ. ಅವುಗಳಲ್ಲಿ ಆರ್ಥಿಕ, ನೀರು, ಜೈವಿಕ ಇತ್ಯಾದಿಗಳ ಜೊತೆ ಅಂತರಜಾಲವೂ ಸೇರಿದೆ. ರಷ್ಯಾದ ಸೈನ್ಯವು ಹೇಗೆ ಯು(ಉ)ಕ್ರೇನ್‌ನ ಪೂರ್ವಭಾಗದಲ್ಲಿ ಅಂತರಜಾಲ ಸಂಪರ್ಕವನ್ನು ಹೇಗೆ ಹಾಳುಗೆಡವಿತು ಎಂಬುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೆವು. ಈಗ ನಾವು ಜೀವಿಸುತ್ತಿರುವುದು ಡಿಜಿಟಲ್ ಅರ್ಥಾತ್ ತಂತ್ರಜ್ಞಾನ ಯುಗದಲ್ಲಿ. ಅಂದ ಮೇಲೆ ಯುದ್ಧವು ಈ ಕ್ಷೇತ್ರದಲ್ಲೂ ನಡೆಯಬೇಕಲ್ಲವೇ? ಹೌದು. ಅದು ನಡೆಯುತ್ತಿದೆ. ಈ ಸಂಚಿಕೆಯಲ್ಲಿ ಅದರ ಬಗ್ಗೆ ಸ್ವಲ್ಪ ತಿಳಿಯೋಣ.
ಡಿಜಿಟಲ್ ಪ್ರಪಂಚದಲ್ಲಿ ನಡೆಯುವ ಯುದ್ಧಕ್ಕೆ ಸೈಬರ್‌ವಾರ್ ಎಂಬ ಹೆಸರಿದೆ. ಇದರಲ್ಲಿ ಮುಖ್ಯವಾಗಿ ಜಾಲಗಳಿಗೆ ಜೋಡಿಸಲ್ಪಟ್ಟ ಗಣಕಗಳಿಗೆ ದಾಳಿ ಮಾಡಿ ಅವುಗಳನ್ನು ಕೆಡಿಸಲಾಗುತ್ತದೆ. ಗಣಕಗಳಿಗೆ ಮತ್ತು ಗಣಕಜಾಲಗಳಿಗೆ ದಾಳಿ ಮಾಡಿ ಅವುಗಳನ್ನು ಕೆಡಿಸುವದಕ್ಕೆ ಹಲವು ಹೆಸರುಗಳಿವೆ. ಸರಳವಾಗಿ ಇದಕ್ಕೆ ಹ್ಯಾಕಿಂಗ್ ಎಂದೂ ಹೇಳುತ್ತಾರೆ. ಹಾಗಿದ್ದರೆ ಹ್ಯಾಕಿಂಗ್‌ಗೂ ಸೈಬರ್ ಯುದ್ಧಕ್ಕೂ ಏನು ವ್ಯತ್ಯಾಸ? ಈ ಬಗ್ಗೆ ತಜ್ಞರಲ್ಲಿ ಒಮ್ಮತವಿಲ್ಲ. ಆದರೂ ಬಹುತೇಕ ಜನರು ಒಪ್ಪಿಕೊಂಡುದು ಏನೆಂದರೆ ಯಾವುದಾದರೂ ಓರ್ವ ವ್ಯಕ್ತಿ ಅಥವಾ ಕಿಡಿಗೇಡಿಗಳ ತಂಡ ಗಣಕದೊಳಗೆ ನುಗ್ಗಿದರೆ ಅದು ಹ್ಯಾಕಿಂಗ್. ಇದರಲ್ಲಿ ಎಲ್ಲ ಸಲ ದಾಳಿಯಾದ ಗಣಕಕ್ಕೆ ಹಾನಿಯಾಗಲೇ ಬೇಕಿಲ್ಲ. ಕೆಲವೊಮ್ಮೆ ಮಾಹಿತಿಯ ಕಳ್ಳತನ ಮಾತ್ರ ಆಗುತ್ತದೆ. ಆದರೆ ಒಂದು ದೇಶವೇ ತನ್ನ ತಜ್ಞರನ್ನು ಬಳಸಿ ಇನ್ನೊಂದು ದೇಶದ ಗಣಕಜಾಲಕ್ಕೆ ದಾಳಿ ಇಟ್ಟು ಅದನ್ನು ಕೆಡಿಸಿದರೆ ಅದನ್ನು ಸೈಬರ್‌ಯುದ್ಧ ಎನ್ನಬಹುದು. ಕೆಲವು ಸಲ ದೇಶವು ಅಧಿಕೃತವಾಗಿ ಈ ಯುದ್ಧ ಮಾಡುವುದಿಲ್ಲ. ಬದಲಿಗೆ ತನ್ನ ದೇಶದ ಕೆಲವು ಸಂಘಟಣೆಗಳ ಮೂಲಕ ಮಾಡಿಸಬಹುದು. ಅಮೆರಿಕ, ರಷ್ಯ, ಕೊರಿಯ, ಚೈನಾ ಸೇರಿ ಬಹುತೇಕ ದೇಶಗಳು ಈ ರೀತಿಯ ದಾಳಿ ನಡೆಸಲು ಹಾಗೂ ಇಂತಹ ದಾಳಿಗಳನ್ನು ಎದುರಿಸಲು ಬೇಕಾದ ಪರಿಣತಿಯನ್ನು ಬೆಳೆಸಿಕೊಂಡಿವೆ. ಆದರೂ ಈ ರೀತಿಯ ಯುದ್ಧಗಳು ಹಾಗೂ ಅದರ ದುಷ್ಪರಿಣಾಮಗಳು ನಡೆಯುತ್ತಲೇ ಇವೆ.
ಫೆಬ್ರವರಿ 24, 2022 ರಂದು ರಷ್ಯಾ ದೇಶವು ಯುಕ್ರೇನ್ ದೇಶದ ಮೇಲೆ ದಾಳಿ ಪ್ರಾರಂಭಿಸಿತು. ಫೆಬ್ರವರಿ ಕೊನೆಯ ವಾರದಲ್ಲಿ ರಷ್ಯಾ ದೇಶದ ಹಲವು ಜಾಲತಾಣಗಳನ್ನು ಹ್ಯಾಕರ್‌ಗಳು ಧಾಳಿ ಮಾಡಿ ಕೆಡಿಸಿದರು. ಈ ಧಾಳಿಯು ರಷ್ಯಾ ದೇಶದ ಸರಕಾರಿ ಜಾಲತಾಣಗಳ ಮೇಲೆ ನಡೆದಿತ್ತು. ರಷ್ಯಾದ ಸರಕಾರಿ ಟೆಲಿವಿಶನ್ ಜಾಲ, ಸರಕಾರದ ಅಧಿಕೃತ ಜಾಲತಾಣ, ಸರಕಾರದ ಒಡೆತನದಲ್ಲಿರುವ ಎಣ್ಣೆ ಕಂಪೆನಿಯ ಜಾಲತಾಣಗಳೆಲ್ಲ ಈ ಧಾಳಿಯಿಂದ ಹಾನಿಗೊಳಗಾದವು.
ಇದಕ್ಕೂ ಮೊದಲು ಇದೇ ನಮೂನೆಯ ಧಾಳಿಗಳು ಯುಕ್ರೇನ್ ದೇಶದ ಜಾಲತಾಣಗಳ ಮೇಲೆ ನಡೆದಿದ್ದವು. ಸರಕಾರದ ಜಾಲತಾಣಗಳು, ಸರಕಾರದ ಒಡೆತನದಲ್ಲಿರುವ ಕಂಪೆನಿಗಳ ಜಾಲತಾಣಗಳು ಈ ಧಾಳಿಗಳ ಗುರಿಯಾಗಿದ್ದವು. ರಷ್ಯಾದ ಜಾಲತಾಣಗಳ ಮೇಲೆ ನಡೆದ ಧಾಳಿಯನ್ನು ತಾನು ನಡೆಸಿದ್ದು ಎಂದು ಯುಕ್ರೇನ್ ಹೇಳಿಕೊಂಡಿಲ್ಲ. ಅಂತೆಯೇ ಯುಕ್ರೇನ್‌ನ ಜಾಲತಾಣಗಳ ಮೇಲೆ ನಡೆದ ಧಾಳಿಯನ್ನು ನಾನು ನಡೆಸಿದ್ದು ಎಂದು ರಷ್ಯಾ ಹೇಳಿಕೊಂಡಿಲ್ಲ.
ರಷ್ಯಾ ದೇಶವು ಯುಕ್ರೇನ್ ಮೇಲೆ ಧಾಳಿ ನಡೆಸಿದ್ದಕ್ಕೆ ಪ್ರತಿಭಟನೆಯಾಗಿ ಹಲವು ಬಹುರಾಷ್ಟ್ರೀಯ ಕಂಪೆನಿಗಳು ರಷ್ಯಾದ ದೇಶದಿಂದ ಹೊರಗೆ ಬರುತ್ತಿವೆ. ಇದರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳೂ ಇವೆ. ಈ ಕ್ಷೇತ್ರದ ಕೆಲವು ದಿಗ್ಗಜಗಳಾದ ಆಪಲ್, ಅಡೋಬಿ, ಇಂಟೆಲ್, ಇತ್ಯಾದಿಗಳೆಲ್ಲ ಈ ಪಟ್ಟಿಯಲ್ಲಿವೆ. ಇದು ಇನ್ನೊಂದು ನಮೂನೆಯ ಡಿಜಿಟಲ್ ಯುದ್ಧವೆನ್ನಬಹುದು.
ಅಮೆರಿಕ ದೇಶವು ವಿಯೆಟ್ನಾಂ, ಕುವೈತ್, ಇರಾಕ್, ಅಫಘಾನಿಸ್ತಾನಗಳಲ್ಲಿ ಯುದ್ಧ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ಅವುಗಳನ್ನು ಅನ್ಯಾಯದ ಆಕ್ರಮಣ ಎಂದು ಬಹುತೇಕ ಪಾಶ್ಚಿಮಾತ್ಯ ಮಾಧ್ಯಮಗಳು ಬಿಂಬಿಸಲಿಲ್ಲ. ಆದರೆ ಯುಕ್ರೇನ್ ಮೇಲೆ ರಷ್ಯಾ ಮಾಡಿದ ಧಾಳಿಯಲ್ಲಿ ರಷ್ಯಾವನ್ನು ಕೆಟ್ಟದಾಗಿ ವಿಲನ್ ಆಗಿ ಇದೇ ಮಾಧ್ಯಮಗಳು ರೂಪಿಸಿವೆ. ಇವುಗಳು ರಷ್ಯಾವನ್ನು ತುಂಬ ಕೆಟ್ಟದಾಗಿ ತಮ್ಮ ಮಾಧ್ಯಮಗಳಲ್ಲಿ ಬಿಂಬಿಸಿವೆ. ಇವುಗಳು ತಯಾರಿಸಿದ ಈ ರೂಪಕಗಳನ್ನು ಅವು ತಮ್ಮ ತಮ್ಮ ಮಾಧ್ಯಮಗಳಲ್ಲಿ ಪ್ರಕಾಶಪಡಿಸಿವೆ. ಈ ಹೇಳಿಕೆಗಳು ವಿಕಿಪೀಡಿಯಕ್ಕೂ ಕಾಲಿಟ್ಟಿವೆ. ವಿಕಿಪೀಡಿಯ ಎಂದರೆ ಜನರಿಂದ ಜನರಿಗಾಗಿ ಜನರೇ ನಡೆಸುವ ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶ. ಇದಕ್ಕೆ ಯಾರೂ ಲೇಖನ ಸೇರಿಸಬಹುದು ಹಾಗೂ ಇರುವ ಲೇಖನಗಳನ್ನು ತಿದ್ದಬಹುದು. ಆದರೆ ಇದನ್ನು ನಿಯಂತ್ರಿಸಲು ಕೆಲವು ನಿರ್ವಾಹಕರು ಇದ್ದಾರೆ. ಇವರೂ ಸ್ವಯಂಸೇವಕರೇ. ಇವರು ಇಂತಹ ಸಂದರ್ಭಗಳಲ್ಲಿ ರಷ್ಯಾ ಪರ-ವಿರೋಧದ ಲೇಖನಗಳನ್ನು ನಿಯಂತ್ರಿಸುತ್ತಾರೆ. ವಿಕಿಪೀಡಿಯದಲ್ಲಿ ಈ ರಷ್ಯಾ-ಯುಕ್ರೇನ್ ತಿಕ್ಕಾಟದ ವಿಷಯದಲ್ಲಿ ತಟಸ್ಥವಾಗಿರಬೇಕಾಗಿದ್ದ ವಿಕಿಪೀಡಿಯದ ಲೇಖನಗಳು ಕೆಲಮಟ್ಟಿಗೆ ರಷ್ಯಾ ವಿರೋಧಿಯಾಗಿವೆ ಎನ್ನಬಹುದು. ಈ ಲೇಖನಗಳನ್ನು ಎಲ್ಲರೂ ಸಂಪಾದಿಸಿ ಬದಲಿಸದಂತೆ ಸಂರಕ್ಷಿಸಲಾಗಿದೆ. ಕೆಲವೇ ನಿರ್ವಾಹಕರು ಮಾತ್ರ ಈ ಲೇಖನಗಳನ್ನು ಸಂಪಾದಿಸಬಹದಾಗಿದೆ.
ವಿಕಿಪೀಡಿಯವು ಪ್ರಪಂಚದ 300ಕ್ಕೂ ಹೆಚ್ಚಿನ ಭಾಷೆಗಳಲ್ಲಿವೆ. ರಷ್ಯಾ ಭಾಷೆಯಲ್ಲೂ ಇದೆ. ಇಂಗ್ಲಿಷ್ ವಿಕಿಪೀಡಿಯದಲ್ಲಿ ರಷ್ಯಾ-ಯುಕ್ರೇನ್ ಬಿಕ್ಕಟ್ಟಿನ ಬಗೆಗಿನ ಲೇಖನವನ್ನು ಜಗತ್ತಿನ ಹಲವು ಭಾಷೆಗಳ ವಿಕಿಪೀಡಿಯಗಳಲ್ಲಿ ಅನುವಾದಿಸಿ ಹಾಕಲಾಗಿದೆ. ಹಾಗೆಯೇ ರಷ್ಯನ್ ಭಾಷೆಯ ವಿಕಿಪೀಡಿಯದಲ್ಲೂ ಸೇರಿಸಲಾಗಿದೆ. ತನ್ನ ವಿರೋಧಿಯಾದ ಈ ಲೇಖನವನ್ನು ತೆಗೆಯಬೇಕು ಎಂದು ಸ್ವಾಭಾವಿಕವಾಗಿಯೇ ರಷ್ಯಾ ದೇಶವು ವಿಕಿಪೀಡಿಯವನ್ನು ಕೇಳಿಕೊಂಡಿತು. ಆದರೆ ತಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕ ಎಂದು ಹೇಳಿಕೊಂಡ ವಿಕಿಪೀಡಿಯವು ಅದನ್ನು ತೆಗೆಯಲು ಒಪ್ಪಲಿಲ್ಲ. ರಷ್ಯಾವು ಸದ್ಯ ತನ್ನ ದೇಶದಲ್ಲಿ ವಿಕಿಪೀಡಿಯವನ್ನು ನಿರ್ಬಂಧಿಸಿದೆ. ಹಿಂದೊಮ್ಮೆ ಇದೇ ಮಾದರಿಯಲ್ಲಿ ಟರ್ಕಿ ದೇಶವು ವಿಕಿಪೀಡಿಯವನ್ನು ಸರಿಸುಮಾರು ಒಂದು ವರ್ಷಗಳ ಕಾಲ ನಿರ್ಬಂಧಿಸಿತ್ತು.
ಪ್ರಪಂಚದ ಎಲ್ಲ ಜಾಲತಾಣಗಳ ಉಸ್ತುವಾರಿಯನ್ನು ನೋಡಿಕೊಳ್ಳುವುದು ಐಕಾನ್ (ICANN) ಎಂಬ ಸಂಸ್ಥೆ. ಈ ಬಗ್ಗೆ ಇದೇ ಅಂಕಣದಲ್ಲಿ ಹಿಂದೊಮ್ಮೆ ಬರೆಯಲಾಗಿತ್ತು. ಐಕಾನ್‌ಗೆ ಒಂದು ವಿಚಿತ್ರ ಬೇಡಿಕೆ ಬಂದಿತ್ತು. ಬೇರೆ ಬೇರೆ ದೇಶಗಳ ಜಾಲತಾಣಗಳಿಗೆಂದೇ ಬೇರೆ ಬೇರೆ ಡೊಮೈನ್ ಹೆಸರುಗಳು ಚಾಲ್ತಿಯಲ್ಲಿವೆ. ಉದಾಹರಣೆಗೆ – .in – ಭಾರತ, .uk – ಇಂಗ್ಲೆಂಡ್, .fr – ಫ್ರಾನ್ಸ್, .ru – ರಷ್ಯಾ, ಇತ್ಯಾದಿ. karnataka.gov.in ಎನ್ನುವುದು ಕರ್ನಾಟಕ ಸರಕಾರದ ಅಧಿಕೃತ ಜಾಲತಾಣದ ವಿಳಾಸ. ಹಾಗೆಯೇ .ru ಎಂಬುದು ರಷ್ಯಾದ್ದು. ರಷ್ಯಾ ದೇಶದ ಸರಕಾರದ ಎಲ್ಲ ಅಧಿಕೃತ ಜಾಲತಾಣಗಳ ವಿಳಾಸದ ಕೊನೆಯಲ್ಲಿ .ru ಎಂದಿರುತ್ತದೆ. ಐಕಾನ್‌ಗೆ ಬಂದ ವಿಚಿತ್ರ ಬೇಡಿಕೆಯಲ್ಲಿ .ru ಡೊಮೈನ್ ಅನ್ನು ನಿರ್ಬಂಧಿಸಬೇಕು ಎಂದಿತ್ತು. ಆದರೆ ಐಕಾನ್‌ ಈ ಬೇಡಿಕೆಗೆ ಬೆಲೆ ಕೊಡಲಿಲ್ಲ.
–ಡಾ| ಯು.ಬಿ. ಪವನಜ
gadgetloka @ gmail . com
The post ರಷ್ಯಾ ಯುಕ್ರೇನ್ ಜಾಲಸಮರ first appeared on Vishva Kannada.
ರಷ್ಯಾ – ಉಕ್ರೇನ್ ಯುದ್ಧ
ಅಂತರಜಾಲದ ಬಲಿ
ರಷ್ಯಾ ದೇಶವು ಉಕ್ರೇನ್ (ಯುಕ್ರೇನ್) ದೇಶದ ಮೇಲೆ ಯುದ್ಧ ಘೋಷಣೆ ಮಾಡಿ ಧಾಳಿ ಪ್ರಾರಂಭ ಮಾಡಿರುವುದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಉಕ್ರೇನ್‌ನ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಇವುಗಳನ್ನು ರಷ್ಯಾವು ಹಲವು ಕಡೆ ಕತ್ತರಿಸಿದೆ. ಇವುಗಳ ಜೊತೆಗೆ ಅಲ್ಲಿಯ ಅಂತರಜಾಲ ಸಂಪರ್ಕಕ್ಕೂ ಅದು ಕತ್ತರಿ ಪ್ರಯೋಗ ಮಾಡಿದೆ. ವಿದ್ಯುತ್ ಸಂಪರ್ಕ ಮತ್ತು ರಸ್ತೆಗಳನ್ನು ಬಾಂಬ್ ದಾಳಿಯ ಮೂಲಕ ಕೆಡಿಸಬಹುದು. ಆದರೆ ಅಂತರಜಾಲ ಸಂಪರ್ಕವನ್ನು ಹೇಗೆ ಕೆಡಿಸುವುದು? ಕೇಬಲ್ ಜಾಲ ಮತ್ತು ಕಟ್ಟಡವನ್ನು ಹಾಳು ಮಾಡಿದರೆ ಉಪಗ್ರಹದ ಮೂಲಕ ಸಂಪರ್ಕ ಪಡೆಯಬಹುದಲ್ಲ ಎಂದು ನಿಮಗೆ ಪ್ರಶ್ನೆ ಮೂಡಿರಬಹುದಲ್ಲ? ಇದನ್ನು ತಿಳಿಯಬೇಕಾದರೆ ಮೊದಲಿಗೆ ದೇಶದಿಂದ ದೇಶಕ್ಕೆ ಮತ್ತು ದೇಶದ ಒಳಗೆ ಅಂತರಜಾಲ ಸಂಪರ್ಕ ಹೇಗೆ ದೊರೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಅಂತರಜಾಲ ಎಂದರೆ ಗಣಕಗಳ ಜಾಲ ಎಂದು ಸರಳವಾಗಿ ಹೇಳಬಹುದು. ಆದರೆ ಅದು ಅಷ್ಟು ಸರಳವಲ್ಲ. ಇದರಲ್ಲಿ ಗಣಕಗಳು, ಮೊಬೈಲ್, ಇತ್ಯಾದಿ ಸಾಧನಗಳು ಮೋಡೆಮ್ ಮೂಲಕ ಹತ್ತಿರದ ಅಂತರಜಾಲ ಹೆಬ್ಬಾಗಿಲಿಗೆ, ಅಲ್ಲಿಂದ ಕೇಬಲ್ ಅಥವಾ ಉಪಗ್ರಹ ಮೂಲಕ ಜಗತ್ತಿಗೆ ಸಂಪರ್ಕ ಹೊಂದುತ್ತವೆ. ನಿಮ್ಮ ಮನೆಯಲ್ಲಿರುವ ಬ್ರಾಡ್‌ಬ್ಯಾಂಡ್ ಸಂಪರ್ಕ ಮೋಡೆಮ್ ಮೂಲಕ ಕೇಬಲ್‌ಗೆ, ನಂತರ ಕೇಬಲ್ ಮೂಲಕ ಸಮೀಪದ ಅಂತರಜಾಲ ಸಂಪರ್ಕ ಸೇವೆ ನೀಡುವವರ ಸರ್ವರ್‌ಗೆ ಜೋಡಣೆ ಆಗುತ್ತದೆ. ನಿಮ್ಮ ಮೊಬೈಲ್ ಫೋನಿನಲ್ಲೂ ಒಂದು ರೀತಿಯ ಮೋಡೆಮ್ ಇರುತ್ತದೆ. ಅದರ ಮೂಲಕ ನಿಮ್ಮ ಫೋನ್ ಅಂತರಜಾಲ ಸಂಪರ್ಕ ಸೇವೆ ನೀಡುವವರ ಸರ್ವರ್‌ಗೆ ಸಂಪರ್ಕ ಹೊಂದುತ್ತದೆ. ಸರ್ವರ್‌ನಿಂದ ಇನ್ನೊಂದು ಸರ್ವರ್‌ಗೆ ಟವರ್ ಮತ್ತು ಕೇಬಲ್ ಮೂಲಕ ಸಂಪರ್ಕ ಹೊಂದುತ್ತದೆ. ಹೀಗೆ ಒಂದು ದೊಡ್ಡ ಜಾಲ ಆಗುತ್ತದೆ. ಈ ಜಾಲದಲ್ಲಿ ಅಂತರಜಾಲ ಸಂಪರ್ಕ ಸೇವೆ ನೀಡುವ ಎಲ್ಲ ಕಂಪೆನಿಗಳೂ ಸೇರಿಕೊಳ್ಳುತ್ತವೆ.   ಭಾರತದಲ್ಲಿ ಜಿಯೊ, ಏರ್‌ಟೆಲ್, ಬಿಎಸ್‌ಎನ್‌ಎಲ್, ಆಕ್ಟ್, ಇತ್ಯಾದಿಯಾಗಿ ಈ ಅಂತರಜಾಲ ಸಂಪರ್ಕ ಸೇವೆ ನೀಡುವವರು ಇದ್ದಾರೆ. ನಿಮ್ಮಮನೆಯ ಪಕ್ಕದ ಟವರ್ ಕೆಟ್ಟಾಗ ನಿಮ್ಮ ಮೊಬೈಲ್ ಮೂಲಕ ಅಂತರಜಾಲ ಸಂಪರ್ಕ ಸಾಧ್ಯವಾಗುವುದಿಲ್ಲ. ಬ್ರಾಡ್‌ಬ್ಯಾಂಡ್ ಮೂಲಕ ಸಂಪರ್ಕ ಪಡೆಯುವವರಾದರೆ ನಿಮ್ಮ ಮನೆಯ ಮೋಡೆಮ್ ಸಂಪರ್ಕ ಹೊಂದುವ ಸರ್ವರ್ ಕೆಟ್ಟಾಗ ನಿಮಗೆ ಅಂತರಜಾಲ ಸಂಪರ್ಕ ಸಾಧ್ಯವಾಗುವುದಿಲ್ಲ.
ಇದೇನೋ ದೇಶದೊಳಗಿನ ಸಂಗತಿಯಾಯಿತು. ದೇಶದಿಂದ ದೇಶಕ್ಕೆ ಹೇಗೆ? ಉಪಗ್ರಹದ ಮೂಲಕವೂ ಸಂಪರ್ಕ ಸಾಧಿಸಬಹುದು. ಆದರೆ ಅದರ ವೇಗ ಲಕ್ಷಗಟ್ಟಲೆ ಜನರ ಬಳಕೆಗೆ ಸಾಕಾಗುವಷ್ಟು ಇರುವುದಿಲ್ಲ. ಇದಕ್ಕಾಗಿ ದೇಶ ದೇಶಗಳನ್ನು ಬೆಸೆಯುವ ಖಂಡಾಂತರ ಕೇಬಲ್ ಜಾಲವಿದೆ. ಇದು ದೇಶ ದೇಶಗಳ ನಡುವೆ, ಖಂಡ ಖಂಡಗಳ ನಡುವೆ, ಸಮುದ್ರದ ಅಡಿಯಲ್ಲಿ ಸಾಗುತ್ತದೆ.  ಇದು ಇಡಿಯ ಜಗತ್ತಿನ ಅಂತರಜಾಲದ ಬೆನ್ನೆಲುಬು ಎನ್ನಬಹುದು. ಈ ಕೇಬಲ್ ಸಮುದ್ರದ ಮೂಲಕ ಸಾಗಿ ಭೂಮಿಗೆ ತಲುಪಿ ಅಲ್ಲಿಯ ಅಂತರಜಾಲ ಹೆಬ್ಬಾಗಿಲಿಗೆ ಜೋಡಣೆಯಾಗುತ್ತದೆ. ಇದನ್ನು ತಾಂತ್ರಿಕ ಪರಿಭಾಷೆಯಲ್ಲಿ ಗೇಟ್‌ವೇ ಎನ್ನುತ್ತಾರೆ. ಅಲ್ಲಿಂದ ಅದು ದೇಶದೊಳಗಣ ಇತರೆ ಅಂತರಜಾಲ ಸಂಪರ್ಕಗಳಿಗೆ ಜೋಡಣೆಯಾಗುತ್ತದೆ. ನಮ್ಮ ದೇಶದಲ್ಲಿ ಮುಂಬಯಿ ಮತ್ತು ಚೆನ್ನೈಗಳಲ್ಲಿ ಈ ಪ್ರಮುಖ ಗೇಟ್‌ವೇಗಳಿವೆ.
ಈ ಕೇಬಲ್ ಜಾಲವನ್ನು ಹಾಕುವುದು, ಅದನ್ನು ನಡೆಸುವುದು ತುಂಬ ದುಬಾರಿಯ ಕೆಲಸ. ಒಬ್ಬಿಬ್ಬರು ಅಥವಾ ಒಂದೆರಡು ದೇಶಗಳು ಸೇರಿ ಮಾಡುವ ಕೆಲಸವಲ್ಲ. ಇದನ್ನು ಹಲವು ದೊಡ್ಡ ಕಂಪೆನಿಗಳು ಒಟ್ಟು ಸೇರಿ ಮಾಡಿದ ಕೆಲವು ಕಂಪೆನಿಗಳು ಮಾಡುತ್ತವೆ. ಈ ಕಂಪೆನಿಗಳಲ್ಲಿ ಗೂಗ್ಲ್, ಮೈಕ್ರೋಸಾಫ್ಟ್, ಅಮೆಝಾನ್, ಫೇಸ್‌ಬುಕ್, ಇತ್ಯಾದಿ ದೈತ್ಯರುಗಳು ಹಣ ಹೂಡಿವೆ. ಇಂತಹ ಕೇಬಲ್‌ಹಾಕುವುದು ತಾಂತ್ರಿಕವಾಗಿ ತುಂಬ ಕ್ಲಿಷ್ಟದ ಕೆಲಸ. ಈ ಕೇಬಲ್ ಮತ್ತು ಅದಕ್ಕೆ ಸಂಬಂಧಿಸಿದ ಪೂರ್ತಿ ವಿವರಗಳಿಗೆ ಒಂದು ಪ್ರತ್ಯೇಕ ಲೇಖನವೇ ಬೇಕು.
ಸಮುದ್ರದ ಬದಿಯಲ್ಲಿರುವ ದೇಶಗಳಿಗೆ ಅಥವಾ ಸಮುದ್ರ ಕಿನಾರೆ ಇರುವ ದೇಶಗಳಿಗೆ ಈ ಕೇಬಲ್ ಮೂಲಕ ಅಂತರಜಾಲ ಸಂಪರ್ಕ ನೀಡಬಹುದು. ಆದರೆ ಸಂಪೂರ್ಣವಾಗಿ ಎಲ್ಲ ಕಡೆಗಳಿಂದಲೂ ಭೂಮಿಯಿಂದ ಆವೃತ್ತವಾಗಿರುವ ಅಂದರೆ ಸಮುದ್ರ ಕಿನಾರೆ ಇಲ್ಲದಿರುವ ದೇಶಗಳಿಗೆ ಏನು ಗತಿ ಎಂಬ ಪ್ರಶ್ನೆ ಮೂಡಿರಬಹುದು. ಅವರಿಗೂ ಇದೇ ಕೇಬಲ್ ಮೂಲಕ ಸಂಪರ್ಕ ನೀಡಲಾಗುತ್ತದೆ. ಆದರೆ ಆಗ ಕೇಬಲ್ ಭೂಮಿಯ ಮೂಲಕ ದೇಶದಿಂದ ದೇಶಕ್ಕೆ ಹಾಯ್ದು ಹೋಗುತ್ತದೆ.
ಈಗ ಉಕ್ರೇನ್‌ನ ವಿಷಯಕ್ಕೆ ಬರೋಣ. ಉಕ್ರೇನ್‌ನ ಪೂರ್ವದಲ್ಲಿ ರಷ್ಯಾ ದೇಶವಿದೆ. ರಷ್ಯಾವು ಪೂರ್ವದಿಂದ ದಾಳಿ ಪ್ರಾರಂಭಿಸಿದೆ. ಮೊದಲಿಗೆ ಅದು ಅಲ್ಲಿಯ ರಸ್ತೆ, ವಿದ್ಯುತ್ ಸಂಪರ್ಕಗಳನ್ನು ಕತ್ತರಿಸಿತು. ನಂತರ ಅಂತರಜಾಲ ಸಂಪರ್ಕ ನೀಡುವ ಕಂಪೆನಿಗಳ ಪ್ರಮುಖ ಹೆಬ್ಬಾಗಿಲುಗಳ ಮೇಲೆ ದಾಳಿ ಮಾಡಿತು. ಉಕ್ರೇನ್‌ನ ದಕ್ಷಿಣಕ್ಕೆ ಕಪ್ಪು ಸಮುದ್ರವಿದೆ. ಪಶ್ಚಿಮಕ್ಕೆ ಫೊಲೆಂಡ್, ರೊಮಾನಿಯ, ಹಂಗೇರಿಗಳೂ ಉತ್ತರಕ್ಕೆ ಬೆಲಾರುಸ್ ದೇಶವೂ ಇದೆ. ಉಕ್ರೇನ್‌ಗೆ ಅಂತರಜಾಲ ಸಂಪರ್ಕ ನೀಡುವ ಕೇಬಲ್‌ಗಳು ಕಪ್ಪು ಸಮುದ್ರದ ಮೂಲಕ ಮತ್ತು ಪಶ್ಚಿಮದ ಹಾಗೂ ಉತ್ತರದ ದೇಶಗಳ ಮೂಲಕ ಬರುತ್ತದೆ. ಒಂದು ಕೇಬಲ್ ಪೂರ್ವದ ರಷ್ಯಾದ ಮೂಲಕವೂ ಬರುತ್ತದೆ. ರಷ್ಯಾವು ಯಾವುದೇ ಖಂಡಾಂತರ ಕೇಬಲನ್ನು ತುಂಡರಿಸಿಲ್ಲ. ಯಾಕೆಂದರೆ ಅದು ಹಲವು ಅಂತಾರಾಷ್ಟ್ರೀಯ ಕಂಪೆನಿಗಳ ಮತ್ತು ದೇಶಗಳ ಒಡೆತನಕ್ಕೆ ಸೇರಿದೆ. ಆದರೆ ಅದು ಉಕ್ರೇನ್‌ನ ಪೂರ್ವ ಭಾಗದಲ್ಲಿರುವ ಹಲವು ಗೇಟ್‌ವೇ ಮತ್ತು ಸರ್ವರ್‌ಗಳ ಮೇಲೆ ದಾಳಿ ಮಾಡಿ ಆ ಸ್ಥಳಗಳಲ್ಲಿ ಅಂತರಜಾಲ ಸಂಪರ್ಕ ಹಾಳಾಗುವಂತೆ ಮಾಡಿದೆ.
ಈ ರೀತಿ ಅಂತರಜಾಲ ಸಂಪರ್ಕ ಇಲ್ಲವಾದರೆ ಜನರು ನೇರವಾಗಿ ಉಪಗ್ರಹದ ಮೂಲಕವೇ ಅಂತರಜಾಲ ಸಂಪರ್ಕ ಪಡೆಯಬಹುದಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆಯೇ? ಹೌದು. ಇದು ಸಾಧ್ಯ. ಆದರೆ ಅದಕ್ಕೆ ಪ್ರತಿಯೊಬ್ಬರಲ್ಲೂ ದುಬಾರಿ ತಾಂತ್ರಿಕ ಸೌಲಭ್ಯವಿರಬೇಕು. ಸರಕಾರಗಳು, ಮಿಲಿಟರಿಗಳು, ಇಂತಹ ಸೌಲಭ್ಯ ಹೊಂದಿವೆ. ಜನಸಾಮಾನ್ಯರಿಗೂ ಇಂತಹ ಸೌಲಭ್ಯ ನೀಡಬೇಕು ಎಂದು ಎಲೋನ್ ಮಸ್ಕ್ ಅವರು ಸ್ಟಾರ್‌ಲಿಂಕ್ ಎಂಬ ಕಂಪೆನಿ ಸ್ಥಾಪಿಸಿ ಅದರ ಮೂಲಕ ಸೇವೆ ನೀಡುತ್ತಿದ್ದಾರೆ. ಸಾವಿರಾರು ಉಪಗ್ರಹಗಳನ್ನು ಅದಕ್ಕಾಗಿ ಹಾರಿಸಿದ್ದಾರೆ. ಇದರಿಂದ ಸಂಪರ್ಕ ಪಡೆಯಬೇಕಾದರೆ ಪ್ರತಿಯೊಬ್ಬರೂ ತಮ್ಮಲ್ಲಿ ಒಂದು ಚಿಕ್ಕ ಡಿಶ್ ಆಂಟೆನಾ ಇಟ್ಟುಕೊಂಡು ಸೂಕ್ತ ಉಪಕರಣಗಳ ಮೂಲಕ ಅಂತರಜಾಲ ಸಂಪರ್ಕ ಪಡೆಯಬಹುದು. ಉಕ್ರೇನ್‌ಗೆ ಸ್ಟಾರ್‌ಲಿಂಕ್ ಮೂಲಕ ಸಂಪರ್ಕ ನೀಡುತ್ತೇನೆ ಎಂದು ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಆದರೆ ಯುದ್ಧ ಕಾಲದಲ್ಲಿ ಆ ಉಪಕರಣಗಳನ್ನು ಪ್ರತಿಯೊಬ್ಬರೂ ಪಡೆಯುವುದು, ತಮ್ಮ ಮನೆಗಳ ಮೇಲೆ ಇನ್‌ಸ್ಟಾಲ್ ಮಾಡುವುದು ಹೇಗೆ ಎಂಬ ಸಮಸ್ಯೆ ಇದೆ.
–ಡಾ| ಯು.ಬಿ. ಪವನಜ
gadgetloka @ gmail . com
The post ರಷ್ಯಾ – ಉಕ್ರೇನ್ ಯುದ್ಧ first appeared on Vishva Kannada.
ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ
ನೀವು ಯಾವುದೇ ಜಾಲತಾಣ ಅಂದರೆ ವೆಬ್‌ಸೈಟ್ ತೆರೆಯಬೇಕಾದರೆ ಏನು ಮಾಡುತ್ತೀರಿ? ಯಾವುದಾದರೊಂದು ಬ್ರೌಸರ್ (ಉದಾ -ಫಯರ್‌ಫಾಕ್ಸ್, ಕ್ರೋಮ್, ಎಡ್ಜ್) ತೆರೆದು ಅದರಲ್ಲಿ ಜಾಲತಾಣದ ವಿಳಾಸವನ್ನು ಟೈಪ್ ಮಾಡುತ್ತೀರಿ ತಾನೆ? ಒಂದೆರಡು ಜಾಲತಾಣಗಳ ವಿಳಾಸ ತಿಳಿಸಿ ನೋಡೋಣ. ನೀವು ಹೇಳಬಹುದಾದ ಉದಾಹರಣೆಗಳು –www.google.com, www.facebook.com, www.twitter.com… ಕನ್ನಡದ ಜಾಲತಾಣಗಳ ಉದಾಹರಣೆ ನೀಡಿ ಎಂದರೆ – www.vishvakannada.com, www.ejnana.com, hosadigantha.com ಇತ್ಯಾದಿ ನೀಡಬಹುದು. ಇಲ್ಲೊಂದು ವಿಷಯ ಗಮನಿಸಿದಿರಾ? ಕನ್ನಡ ಜಾಲತಾಣಗಳಿಗೂ ಅವುಗಳ ವಿಳಾಸ ಇಂಗ್ಲಿಶಿನಲ್ಲೇ ಇವೆ ಎಂದು. ಇದು ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡಿದ್ದೀರಾ? ಅಥವಾ ಅದು ಇರುವುದೇ ಹಾಗೆ, ಬೇರೆ ರೀತಿ ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೀರಾ? ಅದು ಈಗ ಇರುವುದು ಹಾಗೆ ಎಂದರೆ ಸರಿ. ಆದರೆ ಬೇರೆ ರೀತಿ ಸಾಧ್ಯವೇ ಇಲ್ಲ ಎಂದರೆ ಅದು ತಪ್ಪು. ಅಂದರೆ ಕನ್ನಡದ ಜಾಲತಾಣಗಳಿಗೆ ಕನ್ನಡದಲ್ಲೇ ವಿಳಾಸ ನಮೂದಿಸಬಹುದೇ ಎಂಬುದು ನಿಮ್ಮ ಪ್ರಶ್ನೆಯಾದರೆ ಅದರ ಉತ್ತರ ಈಗ ಅದು ಸಾಧ್ಯ ಎಂದು.
ಅಂತರಜಾಲದ ಒಂದು ಪ್ರಮುಖ ಅಂಗ ವಿಶ್ವವ್ಯಾಪಿ ಜಾಲ ಅರ್ಥಾತ್ ವರ್ಲ್ಡ್ ವೈಡ್ ವೆಬ್. ಇದು ಕೋಟ್ಯಾನುಕೋಟಿ ಜಾಲತಾಣಗಳ (ವೆಬ್‌ಸೈಟ್) ಮತ್ತು ಜಾಲಪುಟಗಳ (ವೆಬ್‌ಪೇಜ್) ಸಂಗ್ರಹ. ಪ್ರತಿ ಜಾಲತಾಣಕ್ಕೂ ಒಂದು ವಿಳಾಸ ಇರುತ್ತದೆ. www.vishvakannada.com ಎಂಬ ಈ ಜಾಲತಾಣ ವಿಳಾಸಕ್ಕೆ ಡೊಮೈನ್ ನೇಮ್ (domain name) ಎನ್ನುತ್ತಾರೆ. ದಶಕಗಳ ಕಾಲ ಈ ಡೊಮೈನ್ ನೇಮ್ ಇಂಗ್ಲಿಶಿನಲ್ಲೇ ಇತ್ತು. ಅಷ್ಟು ಮಾತ್ರವಲ್ಲ, ಅದು ಅಮೆರಿಕ ಸರಕಾರದ ಅಧೀನ ಸಂಸ್ಥೆಯ ಉಸ್ತುವಾರಿಯಲ್ಲಿತ್ತು. ನಿಧಾನವಾಗಿ ಅದನ್ನು ಜಾಗತಿಕ ಸಂಸ್ಥೆಯೊಂದಕ್ಕೆ ಅದು ವರ್ಗಾಯಿಸಿತು. ಇದುವೇ ಐಕಾನ್. ಇದರ ಪೂರ್ತಿ ಹೆಸರು  ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (Internet Corporation for Assigned Names and Numbers, ICANN) ಎಂದು. ಇದೊಂದು ಸರಕಾರೇತರ, ಲಾಭ ನಷ್ಟಗಳಿಲ್ಲದ ಸಂಸ್ಥೆ. ಇದನ್ನು ಸಮುದಾಯದ ಜನರೇ ನಡೆಸುವುದು. ಇದಕ್ಕೆ ಯಾರು ಬೇಕಾದರೂ ಕೊಡುಗೆ ನೀಡಬಹುದು.
ಪ್ರಪಂಚದಲ್ಲಿರುವ ಸುಮಾರು 6000ಕ್ಕೂ ಅಧಿಕ ಭಾಷೆಗಳಲ್ಲಿ ಇಂಗ್ಲಿಶ್ ಕೂಡ ಒಂದು. ಅಂದ ಮೇಲೆ ಅಂತರಜಾಲ ಮತ್ತು ಅದರಲ್ಲಿ ಅಡಕವಾಗಿರುವ ವಿಶ್ವವ್ಯಾಪಿ ಜಾಲದ ಎಲ್ಲ ವ್ಯವಹಾರಗಳು ಇಂಗ್ಲಿಶಿನಲ್ಲೇ ಯಾಕಿರಬೇಕು? ಇರಬೇಕಾಗಿಲ್ಲ ಎಂಬುದೇ ಉತ್ತರ. ಜಾಲತಾಣಗಳು ಇಂಗ್ಲಿಶ್ ಹೊರತಾಗಿ ಹಲವು ಭಾಷೆಗಳಲ್ಲಿ ಲಭ್ಯವಾಗತೊಡಗಿ ಹಲವು ದಶಕಗಳೇ ಕಳೆದಿವೆ. ಆದರೂ ಅವುಗಳ ವಿಳಾಸ ಮಾತ್ರ ಇನ್ನೂ ಬಹುತೇಕ ಇಂಗ್ಲಿಶಿನಲ್ಲೇ ಇವೆ. ಅವುಗಳೂ ಇಂಗ್ಲಿಶಿನ ಹೊರತಾಗಿ ಇತರೆ ಭಾಷೆಗಳಲ್ಲೂ ಲಭ್ಯವಾಗಬೇಕು ತಾನೆ? ಹೌದು. ಐಕಾನ್ ಈ ಬಗ್ಗೆ ಕೆಲಸ ಮಾಡುತ್ತಿದೆ. ಅದು ಹಲವು ಜಾಗತಿಕ ಭಾಷೆಗಳಲ್ಲಿ ಜಾಲತಾಣ ವಿಳಾಸ (ಡೊಮೈನ್ ನೇಮ್) ತಯಾರಿಸಲು ಮತ್ತು ಅಳವಡಿಸಲು ಬೇಕಾದ ಶಿಷ್ಟತೆಯನ್ನು ರೂಪಿಸಿದೆ. ಈಗಾಲೆ ಹಲವು ಜಾಗತಿಕ ಭಾಷೆಗಳಲ್ಲಿ ಜಾಲತಾಣ ವಿಳಾಸಗಳನ್ನು ಬಳಸಬಹುದು. ಇನ್ನೂ ಹಲವಾರು ಭಾಷೆಗಳಲ್ಲಿ ಜಾಲತಾಣ ವಿಳಾಸ ಬಳಸಲು ಬೇಕಾದ ಶಿಷ್ಟತೆಯನ್ನು ರೂಪಿಸಲಾಗುತ್ತಿದೆ. ಈ ರೀತಿಯ ಜಾಲತಾಣ ವಿಳಾಸಗಳಿಗೆ ಅಂತಾರಾಷ್ಟ್ರೀಯ ಜಾಲತಾಣ ವಿಳಾಸ (Internationalized Domain Name, IDN) ಎನ್ನುತ್ತಾರೆ. ಹಾಗಿದ್ದರೆ ಅದರಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳೂ ಇರಬೇಕು ತಾನೆ? ಉತ್ತರ ಹೌದು ಎಂದು.
ಈ ಜಾಲತಾಣ ವಿಳಾಸಗಳಲ್ಲಿ ಮೂರು ಭಾಗವಿರುವುದನ್ನು ಗಮನಿಸರಬಹುದು. www.vishvakannada.com ಎಂಬಲ್ಲಿ .com ಎಂಬುದು ಕಮರ್ಶಿಯಲ್ ಎಂಬುದರ ಹ್ರಸ್ವ ರೂಪ. ಈಗ  www.techfocus.in  ಎಂಬುದನ್ನು ಗಮನಿಸಿ. ಇಲ್ಲಿ .in ಎಂಬುದು India ಅರ್ಥಾತ್ ಭಾರತ ಎಂಬುದು ಹ್ರಸ್ವ ರೂಪ. ಡೊಮೈನ್ ನೇಮ್‌ಗಳ ಈ ಭಾಗಕ್ಕೆ ಟಾಪ್ ಲೆವೆಲ್ ಡೊಮೈನ್ (Top Level Domain, TLD) ಎನ್ನುತ್ತಾರೆ. ಈ ಭಾಗದ .in ಗೆ ಪರ್ಯಾಯವಾದ .ಭಾರತ ಎಂಬುದು ಭಾರತೀಯ ಲಿಪಿಗಳಲ್ಲಿ ಲಭ್ಯ. ಅಂದರೆ ಕನ್ನಡವೂ ಈ ಪಟ್ಟಿಯಲ್ಲಿ ಇದೆ. ಉದಾಹರಣೆಗೆ ವಿಶ್ವಕನ್ನಡ.ಭಾರತ.
ಇಷ್ಟೇ ಆದರೆ ಕನ್ನಡದಲ್ಲಿ ಜಾಲತಾಣ ವಿಳಾಸ ಆದಂತೆಯೇ? ಇಲ್ಲ. vishvakannada.com ಇರುವಂತೆ ವಿಶ್ವಕನ್ನಡ.ಸಂಸ್ಥೆ, ಉದಯವಾಣಿ.ಪತ್ರಿಕೆ, ವಿಶ್ವವಾಣಿ.ಸುದ್ದಿ, ಇತ್ಯಾದಿ ಪಡೆದಾಗ ಮಾತ್ರ ಅದು ಸಂಪೂರ್ಣ ಕನ್ನಡದಲ್ಲೇ ಜಾಲತಾಣ ವಿಳಾಸ ಎನ್ನಬಹುದು. ಅದು ಸಾಧ್ಯವಿಲ್ಲವೇ ಎಂದು ಕೇಳಿದರೆ ಸಾಧ್ಯವಿದೆ ಎಂಬುದೇ ಉತ್ತರ. ಯಾವಾಗ ಎಂದು ಕೇಳಿದರೆ ಬಹುಶಃ ಇನ್ನೂ ಎರಡು ವರ್ಷ ಕಾಯಬೇಕಾಗಬಹುದು. ಅದು ಯಾಕೆ ನಿಧಾನ? ಯಾಕೆಂದರೆ ಈ ರೀತಿ ಜಾಲತಾಣ ವಿಳಾಸ ತಯಾರಿಸಬೇಕಾದಾಗ ಯಾವ ಅಕ್ಷರಗಳನ್ನು ಬಳಸಬಹುದು, ಯಾವ ಅಕ್ಷರಗಳನ್ನು ಬಳಸಬಾರದು, ಯಾವ ಅಕ್ಷರದ ನಂತರ ಯಾವ ಅಕ್ಷರ ಬಳಸಬಹುದು ಮತ್ತು ಬಳಸಬಾರದು, ಇತ್ಯಾದಿ ನಿಯಮಗಳನ್ನು ಮೊದಲು ರೂಪಿಸುವ ಕೆಲಸ ಆಗಬೇಕು. ಸಂತಸದ ಸಂಗತಿಯೆಂದರೆ ಈ ನಿಯಮ ತಯಾರಾಗಿದೆ. ಐಕಾನ್‌ನಲ್ಲಿ ನಿಯೊಬ್ರಾಹ್ಮಿ ಜನರೇಶನ್ ಪ್ಯಾನೆಲ್ ಎಂಬ ತಂಡ ಬ್ರಾಹ್ಮಿ ಲಿಪಿಯಿಂದ ಉಗಮಿಸಿದ ಎಲ್ಲ ಲಿಪಿಗಳಲ್ಲಿ ಡೊಮೈನ್ ನೇಮ್‌ತಯಾರಿಸಲು ಬೇಕಾದ ನಿಯಮಗಳನ್ನು ರೂಪಿಸುತ್ತಿದೆ. ಅದರಲ್ಲಿ ಕನ್ನಡವೂ ಸೇರಿದೆ. ಪ್ರಥಮ ಹಂತದ ಭಾಷೆ/ಲಿಪಿಗಳಲ್ಲಿ ಕನ್ನಡವೂ ಸೇರಿದೆ. ಈ ನಿಯಮ ಜಾರಿಗೆ ಬಂದಾಗ ಟಾಪ್ ಲೆವೆಲ್ ಡೊಮೈನ್ (ಟಿಎಲ್‌ಡಿ) ಕನ್ನಡ ಲಿಪಿಯಲ್ಲೇ ಪಡೆದುಕೊಳ್ಳಬಹುದು. ಆಗ .ಪತ್ರಿಕೆ, .ಸುದ್ದಿ, .ಸಂಸ್ಥೆ, .ದೂರದರ್ಶನ, .ಕನ್ನಡ, ಇತ್ಯಾದಿ ಟಿಎಲ್‌ಡಿಗಳನ್ನು  ಪಡೆದುಕೊಳ್ಳಬಹುದು.
ಆದರೆ ಈ ಟಾಪ್ ಲೆವೆಲ್ ಡೊಮೈನ್‌ನ ಬೆಲೆ ನಮ್ಮ ನಿಮ್ಮಂತಹವರ ಕೈಗೆಟುಕುವ ಸಾಧ್ಯತೆ ತುಂಬ ಕಡಿಮೆ. ಸದ್ಯಕ್ಕೆ ಅದು ಸುಮಾರು 1,85,000 ಅಮೆರಿಕನ್ ಡಾಲರ್ ಇದೆ. ಅಂದರೆ ಸುಮಾರು 1 ಕೋಟಿ 39 ಲಕ್ಷ ರೂ! ಯಾವ ಭಾರತೀಯ ಇಷ್ಟು ಹಣ ನೀಡಿ ಸ್ವಂತದ ಡೊಮೈನ್ ನೇಮ್ ತೆಗೆದುಕೊಳ್ಳುತ್ತಾನೆ? ಶ್ರೀಮಂತ ಸಂಸ್ಥೆಗಳೂ ಇಷ್ಟು ಹಣ ಖರ್ಚು ಮಾಡಲು ಹಿಂದೆ ಮುಂದೆ ಯೋಚನೆ ಮಾಡಬಹುದು. ಆದರೆ ಪರಿಸ್ಥಿತಿ ಅಷ್ಟು ಶೋಚನೀಯವಾಗಿಲ್ಲ. ಐಕಾನ್ ಒಂದು ಜನರೇ ನಡೆಸುವ ಸರಕಾರೇತರ ಸಂಸ್ಥೆ. ಇದರಲ್ಲಿ ಭಾರತೀಯರೂ ಸದಸ್ಯರಾಗಿದ್ದಾರೆ. ಅವರೆಲ್ಲ ಒತ್ತಡ ಹಾಕಿ ಈ ಹಣವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ. ಸಾಧ್ಯತೆಯೇನು ಬಂತು? ಹಾಗೆ ಮಾಡದಿದ್ದಲ್ಲಿ ಐಕಾನ್‌ನವರ ಶ್ರಮವೆಲ್ಲ ವ್ಯರ್ಥ. ಯಾರೂ ಭಾರತೀಯ ಭಾಷೆಗಳಲ್ಲಿ ಟಿಎಲ್‌ಡಿ ಕೊಂಡುಕೊಳ್ಳದಿದ್ದರೆ ಶ್ರಮಕ್ಕೇನು ಫಲ? ಹಾಗೆ ಆಗಲಾರದು ಎಂದುಕೊಂಡಿದ್ದೇನೆ.
(ಲೇಖಕರು ಐಕಾನ್‌ನ ನಿಯೋಬ್ರಾಹ್ಮಿ ಪ್ಯಾನೆಲ್‌ನಲ್ಲಿ ಕನ್ನಡದ ಪರವಾಗಿ ಕೆಲಸ ಮಾಡುತ್ತಿದ್ದಾರೆ)
–ಡಾ| ಯು.ಬಿ. ಪವನಜ
gadgetloka @ gmail . com
The post ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ first appeared on Vishva Kannada.
ಇದು ಮಾಹಿತಿ ಯುಗ
ಮಾಹಿತಿ ಕಳ್ಳರಿದ್ದಾರೆ, ಎಚ್ಚರಿಕೆ
ನೀವು ಯಾವುದಾದರೂ ಸೂಪರ್ ಮಾರ್ಕೆಟ್ಟಿಗೆ ಹೋದಾಗ ಅಲ್ಲಿ ಒಂದು ಪೆಟ್ಟಿಗೆ ಇಟ್ಟು ಇದರಲ್ಲಿ ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ನೀಡಿ, ಅದರಲ್ಲಿ ಕೆಲವನ್ನು ಹೆಕ್ಕಿ ಗೆದ್ದವರಿಗೆ ವಿಶೇಷ ಬಹುಮಾನ ನೀಡುತ್ತೇವೆ ಎಂದು ಜಾಹೀರಾತು ನೀಡಿದ್ದನ್ನು ನಂಬಿ  ನಿಮ್ಮ ಮಾಹಿತಿ ನೀಡಿದ್ದೀರಾ? ನಿಮಗೆ ಬಹುಮಾನ ಅಂತೂ ಬಂದಿರುವುದಿಲ್ಲ. ಆದರೆ ಅನಾವಶ್ಯಕ ಕಿರಿಕಿರಿ ಫೋನ್ ಕರೆಗಳು ಬರಲು ಪ್ರಾರಂಭವಾಗಿರುತ್ತದೆ. ಇವೆಲ್ಲ ಜನರ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಹಳೆಯ ವಿಧಾನಗಳಾದವು. ಈಗ ಎಲ್ಲವೂ ಆನ್‌ಲೈನ್. ನಿಮ್ಮ ಮೊಬೈಲ್‌ನಲ್ಲಿ ಗೂಗ್ಲ್‌ನಲ್ಲಿ ಏನಾದರೂ ಒಂದು ಮಾಹಿತಿ ಹುಡುಕಿ. ನಂತರ ಫೇಸ್‌ಬುಕ್ ತೆರೆಯಿರಿ. ನೀವು ಏನನ್ನು ಹುಡುಕಿದ್ದೀರಾ ಅದಕ್ಕೆ ಸಂಬಂಧಿಸಿದ ಜಾಹೀರಾತುಗಳು ನಿಮಗೆ ಫೇಸ್‌ಬುಕ್‌ನಲ್ಲಿ ಬರುತ್ತವೆ. ಇನ್‌ಸ್ಟಾಗ್ರಾಂ ತೆರೆದರೆ ಅಲ್ಲೂ ಅವೇ ಜಾಹೀರಾತುಗಳು ಬರುತ್ತವೆ. ಅಲ್ಲಿಗೆ ಮುಗಿಯುವುದಿಲ್ಲ. ಯಾರು ಯಾರೋ ಕರೆ ಮಾಡುತ್ತಾರೆ. ಅರ್ಥಾತ್ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಅಲ್ಲಲ್ಲ, ಕಳವಾಗಿದೆ.
21ನೆಯ ಶತಮಾನವನ್ನು ಮಾಹಿತಿ ಯುಗ ಎಂದು ಕರೆಯುತ್ತಾರೆ. Information is the new oil ಎಂಬ ಒಂದು ಹೇಳಿಕೆಯಿದೆ. ಅಂದರೆ ಈಗಿನ ಕಾಲದಲ್ಲಿ ಮಾಹಿತಿಯು ಚಿನ್ನ, ಎಣ್ಣೆಗಳಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ ಎಂದು ಅರ್ಥ. ಯಾವ ಮಾಹಿತಿಯ ಬಗ್ಗೆ ಇವರು ಹೇಳುತ್ತಿದ್ದಾರೆ? ಪ್ರಮುಖವಾಗಿ ನಿಮ್ಮ ವೈಯಕ್ತಿಕ ಮಾಹಿತಿ. ಇದರಲ್ಲಿ ನಿಮ್ಮ, ಹೆಸರು, ವಿಳಾಸ, ಇಮೈಲ್, ಫೋನ್ ಸಂಖ್ಯೆ ಇವೆಲ್ಲ ಸಾಮಾನ್ಯ ಮಾಹಿತಿಗಳಾದವು. ಮುಂದುವರೆದು, ನಿಮ್ಮ ಸಂಬಳ, ನಿಮ್ಮಲ್ಲಿ ಎಷ್ಟು ಹಣವಿದೆ, ನೀವು ಏನನ್ನು ಇಷ್ಟ ಪಡುತ್ತೀರಿ, ನಿಮ್ಮ ವೈಯಕ್ತಿಕ ಇಷ್ಟಗಳೇನು, ಇತ್ಯಾದಿಗಳೆಲ್ಲ ಈಗಿನ ಕಾಲದಲ್ಲಿ ತುಂಬ ಬೆಲೆಬಾಳುವ ಮಾಹಿತಿಗಳು. ಇವುಗಳನ್ನು ತೆಗೆದುಕೊಂಡು ಅವರೇನು ಮಾಡುತ್ತಾರೆ? ನಿಮಗೆ ಯಾವುದು ಇಷ್ಟ ಎಂದು ತಿಳಿದು ಅದರ ಬಗ್ಗೆಯೇ ನಿಮಗೆ ಜಾಹೀರಾತು ಕಳುಹಿಸಿದರೆ ನೀವು ಅದನ್ನು ಕೊಳ್ಳುವ ಸಾಧ್ಯತೆ ಹೆಚ್ಚು. ನೀವು ಅದನ್ನು ಕೊಂಡುಕೊಂಡರೆ ಅವರಿಗೆ ವ್ಯಾಪಾರ ಆಗುತ್ತದೆ. ಅದಕ್ಕೇ ಅವರು ನಿಮ್ಮ ಮಾಹಿತಿಯನ್ನು ಕದಿಯುವುದು ಮಾತ್ರವಲ್ಲ, ಇತರೆ ಕಂಪೆನಿಗಳ ಜೊತೆ ಹಂಚಿಕೊಂಡಿರುತ್ತಾರೆ. ಇನ್ನೂ ನಿಖರವಾಗಿ ಹೇಳಬೇಕಾದರೆ ನಿಮ್ಮ ಮಾಹಿತಿಯನ್ನು ಕದ್ದು ಮಾರಾಟ ಮಾಡಿರುತ್ತಾರೆ.
ಈ ರೀತಿ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡುವವರಲ್ಲಿ ಸಾಮಾಜಿಕ ಮಾಧ್ಯಮಗಳು ಎತ್ತಿದ ಕೈ. ಅದರಲ್ಲೂ ಬಹುತೇಕ ಎಲ್ಲರೂ ಬಳಸುವ ಫೇಸ್‌ಬುಕ್ ಇದಕ್ಕೆ ಕುಪ್ರಸಿದ್ಧ. ಅವರನ್ನು ಹೀಗೇಕೆ ಮಾಡುತ್ತಿದ್ದೀರಾ ಎಂದು ಕೇಳಿದರೆ ನೀವೇ ಒಪ್ಪಿಗೆ ಕೊಟ್ಟಿದ್ದೀರಾ ನೋಡಿ ಎಂದು ಯಾವುದೋ ಪುಟವನ್ನು ತೋರಿಸುತ್ತಾರೆ. ನಿಜವಾಗಿ ನಡೆದಿರುವುದು ಏನೆಂದರೆ ನೀವು ಫೇಸ್‌ಬುಕ್ ಅಥವಾ ಯಾವುದೇ ಸಾಮಾಜಿಕ ಮಾಧ್ಯಮದ ಜಾಲತಾಣದಲ್ಲಿ ಅಥವಾ ಆಪ್‌ನಲ್ಲಿ ಖಾತೆ ತೆರೆಯುವಾಗ  ಹಲವು ಕಡೆ I agree ಎಂದು ಟಿಕ್ ಮಾಡಿರುತ್ತೀರಿ. ಬಹುತೇಕ ಮಂದಿ ಅಷ್ಟು ಉದ್ದದ ಒಪ್ಪಂದದ ಪುಟದಲ್ಲಿ ಏನಿದೆ ಎಂದು ಪೂರ್ತಿ ವಿವರವಾಗಿ ಓದಲು ಹೋಗಿರುವುದಿಲ್ಲ. ಅದರಲ್ಲಿ ನಿಮ್ಮ ವಿವರಗಳನ್ನು, ನಿಮ್ಮ ವಿಳಾಸ ಪುಸ್ತಕದಲ್ಲಿರುವ ನಿಮ್ಮ ಸ್ನೇಹಿತರ ಹೆಸರು ವಿಳಾಸಗಳನ್ನು ಇತರೆ ಮೂರನೆ ವ್ಯಕ್ತಿ ಅಥವಾ ಜಾಲತಾಣಗಳ ಜೊತೆ ಹಂಚಿಕೊಳ್ಳುತ್ತೇವೆ ಎಂದಿರುತ್ತದೆ. ಇದು ನಿಮ್ಮ ಅಪ್ಪಣೆ ಪಡೆದು ಮಾಡುವ ದುರ್ವ್ಯವಹಾರ. ಇನ್ನೂ ಕೆಲವು ನಿಮ್ಮ ನೇರ ಅಪ್ಪಣೆ ಇಲ್ಲದೆ ಮಾಡುವ ದುರ್ಬುದ್ಧಿಗಳಿವೆ.
ನಿಮ್ಮ ಮೊಬೈಲ್‌ನಲ್ಲಿ ನೀವು ಫೇಸ್‌ಬುಕ್ ಆಪ್ ಬಳಸಿ ನಂತರ ಅದರಿಂದ ಹೊರ ಬಂದು ಬೇರೆ ಏನೇನೋ ಮಾಡಿರುತ್ತೀರಿ. ಮನೆ ಹುಡುಕಾಟದ ಅಥವಾ ಬಸ್ ಟಿಕೆಟ್ ಬುಕಿಂಗ್‌ನ ಆಪ್ ಬಳಸಿದ್ದೀರಿ ಎಂದಿಟ್ಟುಕೊಳ್ಳಿ. ಮುಂದಿನ ಸಲ ಫೇಸ್‌ಬುಕ್ ತೆರೆದಾಗ ನಿಮಗೆ ಫೇಸ್‌ಬುಕ್ ತುಂಬೆಲ್ಲ ಮನೆಗಳ ಮತ್ತು ಬಸ್ ಬುಕಿಂಗ್‌ಗಳ ಜಾಹೀರಾತುಗಳೇ ಕಾಣಿಸುತ್ತವೆ. ಇಲ್ಲಿ ಏನಾಗಿದೆಯೆಂದರೆ ನೀವು ಫೇಸ್‌ಬುಕ್‌ನಿಂದ ಹೊರ ಬಂದರೂ ಫೇಸ್‌ಬುಕ್ ನೀವು ನಿಮ್ಮ ಮೊಬೈಲ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂದು ಗಮನಿಸುತ್ತಿರುತ್ತದೆ. ಇದೂ ತಪ್ಪಲ್ಲವೇ ಎಂದು ನೀವು ಕೇಳಬಹುದು. ಹೌದು. ಇದು ಖಂಡಿತಾ ತಪ್ಪು. ಆದರೆ ಇದಕ್ಕೆ ನೀವೇ ಒಪ್ಪಿಗೆ ಕೊಟ್ಟಿರುತ್ತೀರಿ. ಫೇಸ್‌ಬುಕ್‌ನ ಗೌಪ್ಯ ಮತ್ತು ಸುರಕ್ಷತೆಯ ನೀತಿ ನಿಯಮಗಳು ಎಂಬ ಪುಟಕ್ಕೆ ಹೋಗಿ ಅಲ್ಲಿರುವ ಹಲವಾರು ಕೊಂಡಿಗಳಲ್ಲಿ ಎಲ್ಲೋ ಒಂದು ಕಡೆ ಫೇಸ್‌ಬುಕ್ ಮುಚ್ಚಿದ ನಂತರವೂ ನಿಮ್ಮ ಚಟುವಟಿಕೆಗಳನ್ನು ನಾವು ಗಮನಿಸುತ್ತಿರುತ್ತೇವೆ ಎಂಬುದಕ್ಕೆ ನೀವು ಒಪ್ಪಿಗೆ ಕೊಟ್ಟಿರುತ್ತೀರಿ. ನಾನು ಅಂತಹ ಯಾವುದೇ ಒಪ್ಪಂದಕ್ಕೆ ಒಪ್ಪಿಗೆ ಕೊಟ್ಟಿದ್ದು ನನಗೆ ನೆನಪಿಲ್ಲ ಎನ್ನುತ್ತೀರಾ? ಫೇಸ್‌ಬುಕ್‌ ಏನು ಮಾಡುತ್ತಿದೆಯೆಂದರೆ ಅದರಲ್ಲಿ ಹಲವಾರು ಆಯ್ಕೆಗಳು ನೀವು “ನಾನು ಒಪ್ಪುವುದಿಲ್ಲ” ಎಂದು ಹೇಳುವ ತನಕ ಅದುವೇ ಆಯ್ಕೆ ಆಗಿರುತ್ತದೆ. ಇದಕ್ಕೆ ಇಂಗ್ಲಿಷಿನಲ್ಲಿ default settings ಎನ್ನುತ್ತಾರೆ. ನೀವು ಪ್ರತಿ ಆಯ್ಕೆಯಲ್ಲೂ ಹುಡುಕಿ ಇವುಗಳನ್ನೆಲ್ಲ ಬದಲಿಸಬೇಕಾಗುತ್ತದೆ. ನಾನು ಇನ್ನೂ ಒಂದು ದುರ್ಬುದ್ಧಿಯನ್ನು ಗಮನಿಸಿದ್ದೇನೆ. ಅದೆಂದರೆ ಎಲ್ಲ ಕಡೆ ಹುಡುಕಿ ಈ ಆಯ್ಕೆಗಳನ್ನು ಬದಲಿಸಿಟ್ಟಿರುತ್ತೇನೆ. ಆಗಾಗ ಫೇಸ್‌ಬುಕ್ ಹೊಸ ಆವೃತ್ತಿ ಬಂದಿದೆ, ನವೀಕರಿಸಿಕೊಳ್ಳಿ ಎಂದು ಎಚ್ಚರಿಸುತ್ತಿರುತ್ತದೆ. ಹಾಗೆ ಎಚ್ಚರಿಸಿದಾಗ ನಾವು ಸಹಜವಾಗಿ ನಮ್ಮ ಆಪ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುತ್ತೇವೆ. ತಕೊಳ್ಳಿ. ಇಲ್ಲೊಂದು ಪೀಕಲಾಟ ಆಗಿರುತ್ತದೆ. ಅದೆಂದರೆ ನಿಮ್ಮ ಆಪ್ ಅಪ್‌ಡೇಟ್ ಆದಾಗ ಮತ್ತೆ ಫೇಸ್‌ಬುಕ್ ತನ್ನ ಕಂಪೆನಿ ಸಿದ್ಧಪಡಿಸಿದ default settingsಗೆ ಬದಲಾಯಿಸಿರುತ್ತದೆ. ಮತ್ತೊಮ್ಮೆ ಎಲ್ಲ ಆಯ್ಕೆಗಳನ್ನು ಹುಡುಕಿ ಬದಲಾಯಿಸಬೇಕು. ಕೆಲವೊಮ್ಮೆ ಇದು ನಿಜಕ್ಕೂ ಸಿಕ್ಕಾಪಟ್ಟೆ ಸಿಟ್ಟು ತರಿಸುತ್ತದೆ.
ಈ ರೀತಿ ನಿಮ್ಮ ವೈಯಕ್ತಿಕ ವ್ಯವಹಾರಗಳಲ್ಲಿ ಮೂಗು ತೂರಿಸುವುದರಲ್ಲಿ ಗೂಗ್ಲ್ ಇನ್ನೂ ಹಲವು ಹೆಜ್ಜೆ ಮುಂದೆ ಇದೆ. ಅದು ನಿಮ್ಮ ಇಮೈಲ್, ಎಸ್‌ಎಂಎಸ್, ಎಲ್ಲ ಓದಿ ನಿಮಗೆ ನೀವು ಕೇಳದೆಯೇ ಸಲಹೆ ನೀಡಲು ಪ್ರಾರಂಭಿಸುತ್ತದೆ. ನೀವು ಬೈಕಿನಲ್ಲಿ ಹೋಗುವಾಗ ಯಾರದೋ ಫೋನ್ ಬಂತು ಎಂದು ರಸ್ತೆ ಬದಿ ಗಾಡಿ ನಿಲ್ಲಿಸಿ ಸುಮಾರು ಹೊತ್ತು ಮಾತನಾಡಿ ನಂತರ ಗಾಡಿ ಹೊರಡಿಸಿರುತ್ತೀರಿ. ನೀವು ಗಾಡಿ ನಿಲ್ಲಿಸಿದ್ದು ಯಾವುದೋ ಬಾರ್ ಆಂಡ್ ರೆಸ್ಟೋರೆಂಟ್ ಮುಂದೆ ಆಗಿರುತ್ತದೆ. ತಗೊಳ್ಳಿ. ಗೂಗ್ಲ್ ನಿಮಗೆ ಆ ಬಾರ್ ಆಂಡ್ ರೆಸ್ಟೋರೆಂಟ್ ಹೇಗಿತ್ತು? ಅಲ್ಲಿ ಗಾಲಿ ಕುರ್ಚಿಯಲ್ಲಿ ಹೋಗಬಹುದೇ, ಅಲ್ಲಿಯ ಆಹಾರ ಚೆನ್ನಾಗಿತ್ತೇ, ಇತ್ಯಾದಿ ಪ್ರಶ್ನೆ ಕೇಳುತ್ತದೆ.
ಈ ಎಲ್ಲ ಪೀಕಲಾಟಗಳಿಂದ ಮುಕ್ತಿ ಹೇಗೆ? ಪೂರ್ತಿಯಾಗಿ ಇಂತಹವುಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಆದರೂ ಕೆಲವು ಎಚ್ಚರಿಕೆಗಳನ್ನು ವಹಿಸಿಕೊಳ್ಳಬಹುದು.
–ಡಾ| ಯು.ಬಿ. ಪವನಜ
gadgetloka @ gmail . com
The post ಇದು ಮಾಹಿತಿ ಯುಗ first appeared on Vishva Kannada.
ಸ್ಟೆಗನೋಗ್ರಫಿ
ಚಿತ್ರದೊಳಗೆ ಗುಪ್ತ ಪತ್ರ
ಗುಪ್ತ ಸಂದೇಶಗಳನ್ನು ಒಬ್ಬರಿಂದೊಬ್ಬರಿಗೆ ಕಳುಹಿಸುವುದು ಬಹು ಪುರಾತನ ವಿದ್ಯೆ. ಪುರಾಣಗಳಲ್ಲೇ ಇದರ ಉಲ್ಲೇಖಗಳಿವೆ. ಯುದ್ಧಕಾಲದಲ್ಲಿ ಸೈನಿಕರು ತಮ್ಮೊಳಗೆ, ಬೇಹುಗಾರಿಕೆ ಮಾಡುವವರು ತಮ್ಮೊಳಗೆ, ದೇಶದಿಂದ ದೇಶಕ್ಕೆ, ಹೀಗೆ ಹಲವು ರೀತಿಯಲ್ಲಿ ಗುಪ್ತ ಸಂದೇಶಗಳನ್ನು ಕಳುಹಿಸಲಾಗುತ್ತಿತ್ತು. ಈಗಲೂ ಕಳುಹಿಲಾಗುತ್ತಿದೆ. ಇಂತಹ ಗುಪ್ತ ಸಂದೇಶಗಳಲ್ಲಿ ಹಲವು ನಮೂನೆ. ಪದದಲ್ಲಿಯ ಅಕ್ಷರಗಳನ್ನು ಅದಲುಬದಲು ಮಾಡಿ ಮಾತನಾಡುವುದು ತುಂಬ ಸರಳವಾದ ಒಂದು ವಿಧಾನ. ಇದನ್ನು ಬಹುತೇಕ ಮಂದಿ ಚಿಕ್ಕವರಾಗಿದ್ದಾಗ ಮಾಡಿರುತ್ತೀರಿ. ಅಕ್ಷರಗಳ ಬದಲಿಗೆ ಅಂಕಿಗಳನ್ನು ಬಳಸುವುದು ಕೂಡ ಒಂದು ವಿಧಾನ.
ನಿಮಗೆಲ್ಲ ತಿಳಿದಿರಬಹುದು – ಮಾಹಿತಿ ತಂತ್ರಜ್ಞಾನದಲ್ಲಿ ಬಳಕೆಯಾಗುವುದು ಸೊನ್ನೆ ಮತ್ತು ಒಂದು ಎಂಬ ಎರಡೇ ಅಂಕಿಗಳು. ಎಲ್ಲ ಅಕ್ಷರಗಳೂ ಕೊನೆಗೆ ಸೊನ್ನೆ ಮತ್ತು ಒಂದರ ಸರಣಿಯಲ್ಲಿ ಪರಿವರ್ತನೆಯಾಗುತ್ತವೆ. ಈ ಸರಣಿಯು ಅಕ್ಷರ, ಅಂಕಿ, ಚಿಹ್ನೆಗಳನ್ನೆಲ್ಲ ಸೂಚಿಸುತ್ತದೆ. ಈ ಅಂಕಿಗಳನ್ನು ಬದಲಾಯಿಸಿ ಗುಪ್ತ ಸಂದೇಶ ಕಳುಹಿಸಬಹುದು. ಇದಕ್ಕೆ ಗೂಢಲಿಪೀಕರಣ ಎನ್ನುತ್ತಾರೆ. ಯಾವ ರೀತಿ ಬದಲಾಯಿಸಿದ್ದೇವೆ ಎಂದು ಸಂದೇಶ ಸ್ವೀಕರಿಸುವವನಿಗೆ ಇನ್ನೊಂದು ಸಂಕೇತ ಕಳುಹಿಸಿದರೆ ಆತ ಈ ಗೂಢಲಿಪೀಕೃತ ಸಂದೇಶವನ್ನು ಸರಿಯಾದ ಸಂದೇಶಕ್ಕೆ ಬದಲಾಯಿಸಿಕೊಳ್ಳಬಲ್ಲ. ಇವು ಕೂಡ ಬಹುತೇಕರಿಗೆ ತಿಳಿದಿರುವ ಅಥವಾ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಿನನಿತ್ಯ ಬಳಕೆಯಾಗುತ್ತಿರುವ ಒಂದು ವಿಧಾನ. ಇಂತಹ ಸಂದೇಶಗಳಿಗೆ ಒಂದು ಉದಾಹರಣೆ ಎಂದರೆ ವಾಟ್ಸ್‌ಆಪ್ ಸಂದೇಶಗಳು.
ಇಂತಹ ಗೂಢಲಿಪೀಕೃತ ಸಂದೇಶಗಳನ್ನು ಕಳುಹಿಸುವುದರಲ್ಲಿ ಒಂದು ತೊಂದರೆಯಿದೆ. ಅದೇನೆಂದರೆ ಆ ಸಂದೇಶವನ್ನು ನೋಡಿದರೆ ಇದು ಗೂಢಲಿಪೀಕೃತ ಸಂದೇಶ ಎಂದು ಗೊತ್ತಾಗುತ್ತದೆ. ಅದನ್ನು ಓದಲು ಸಾಧ್ಯವಿಲ್ಲವಾದರೂ ಒಂದು ಗುಪ್ತ ಸಂದೇಶ ಹೋಗುತ್ತಿದೆ ಎಂದು ಗೊತ್ತಾಗುತ್ತದೆ. ಕೆಲವೊಮ್ಮೆ ಈ ಗೂಢಲಿಪೀಕರಣವನ್ನು ಭೇದಿಸಲೂ ಸಾಧ್ಯವಿದೆ. ಅದು ಅಷ್ಟು ಸುಲಭವಲ್ಲವಾದರೂ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಒಂದು ಸಾಮಾನ್ಯ ನಿರಪಾಯಕಾರಿ ಚಿತ್ರ ಇದೆ ಎಂದಿಟ್ಟುಕೊಳ್ಳಿ. ಉದಾಹರಣೆಗೆ ಮೈಸೂರು ಅರಮನೆಯ ಫೋಟೋ. ಅದನ್ನು ಯಾರಿಗೋ ಕಳುಹಿಸುತ್ತೀರಿ. ಅದನ್ನು ನೋಡಿದವರಿಗೆ ಅದರಲ್ಲೇನೋ ವಿಶೇಷವಿದೆ ಎಂದು ಅನ್ನಿಸುವುದಿಲ್ಲ. ಆದರೆ ಅದರೊಳಗೆ ಇನ್ನೊಂದು ಚಿತ್ರ ಅಥವಾ ಸಂದೇಶ ಅಡಕವಾಗಿದ್ದಲ್ಲಿ? ಇದನ್ನೇ ಸ್ಟೆಗನೋಗ್ರಫಿ ಎನ್ನುತ್ತಾರೆ. ಸರಳವಾಗಿ ಹೇಳುವುದಾದರೆ ಒಂದು ಕಡತದ ಒಳಗೆ ಇನ್ನೊಂದು ಕಡತವನ್ನು ಗುಪ್ತವಾಗಿ ಅಡಕವಾಗಿಸಿ ಕಳುಹಿಸುವುದನ್ನು ಸ್ಟೆಗನೋಗ್ರಫಿ ಎನ್ನುತ್ತಾರೆ. ಇದು ತುಂಬ ಹಳೆಯ ವಿಧಾನವಾದರೂ ಈಗಿನ ಡಿಜಿಟಲ್ ಯುಗದಲ್ಲಿ ಇದರ ಹೊಸ ಅವತಾರಗಳು ಚಾಲ್ತಿಯಲ್ಲಿವೆ. ಅದರಲ್ಲಿ ಪ್ರಮುಖವಾದುದು ಚಿತ್ರಗಳಲ್ಲಿ ಇನ್ನೊಂದು ಚಿತ್ರ ಅಥವಾ ಪಠ್ಯ ಸಂದೇಶವನ್ನು ಅಡಗಿಸಿ ಕಳುಹಿಸುವುದು.
ಮಾಹಿತಿ ತಂತ್ರಜ್ಞಾನದಲ್ಲಿ ಕಡತಗಳು ಅಂದರೆ ಫೈಲ್‌ಗಳು ಡಿಜಿಟಲ್ ರೂಪದಲ್ಲಿರುತ್ತವೆ. ಈಗಾಗಲೇ ತಿಳಿಸಿರುವಂತೆ ಅಂತಿಮವಾಗಿ ಎಲ್ಲಾ ಮಾಹಿತಿಗಳು ಒಂದು ಮತ್ತು ಸೊನ್ನೆಗಳ ಸರಣಿ ಅಂದರೆ  ದ್ವಿಮಾನದಲ್ಲಿರುತ್ತವೆ. ಪ್ರತಿ ಅಕ್ಷರವನ್ನೂ ದ್ವಿಮಾನಕ್ಕೆ ಪರಿವರ್ತಿಸುವುದು ಮಾತ್ರವಲ್ಲ, ಅದರ ಕೊನೆಗೆ, ಪ್ರಾರಂಭದಲ್ಲಿ, ಕೆಲವು ಹೆಚ್ಚಿಗೆ ಅಂಕಿಗಳನ್ನೂ ಸೇರಿಸಲಾಗುತ್ತದೆ. ಸುಗಮವಾದ ಮಾಹಿತಿ ವಿನಿಮಯಕ್ಕೆ ಇವುಗಳು ಅವಶ್ಯ. ಈ ರೀತಿ ಸೇರಿಸಿದ ಅಂಕಿಗಳನ್ನೇ ಮಾರ್ಪಾಟು ಮಾಡಿ ಅವುಗಳಲ್ಲಿ ಗುಪ್ತ ಸಂದೇಶವನ್ನು ಅಡಗಿಸಿಡುವುದು ಸ್ಟೆಗನೋಗ್ರಫಿಯ ಒಂದು ಪ್ರಮುಖ ವಿಧಾನ. ಒಂದು ಸಾಮಾನ್ಯ ಫೋಟೋವನ್ನು ಈ ರೀತಿ ಮಾರ್ಪಡಿಸಿ ಕಳುಹಿಸಿದರೆ ಅದನ್ನು ನೋಡಿದವರಿಗೆ ಅದರಲ್ಲಿ ಗುಪ್ತ ಸಂದೇಶ ಅಡಗಿದೆ ಎಂದು ಗೊತ್ತಾಗುವುದಿಲ್ಲ. ಸೂಕ್ತ ತಂತ್ರಾಂಶ ಮತ್ತು ವಿಧಾನ ಬಳಸಿ ಆ ಸಂದೇಶವನ್ನು ಆ ಫೋಟೋದಿಂದ ತೆಗೆಯಬಹುದು. ಹಾಗೆ ಮಾಡಲು, ಸಂದೇಶ ಸ್ವೀಕರಿಸಿದವರಿಗೆ ಯಾವ ವಿಧಾನದಲ್ಲಿ ಫೋಟೋದ ಒಳಗೆ ಇನ್ನೊಂದು ಫೋಟೋ ಅಥವಾ ಸಂದೇಶವನ್ನು ಅಡಗಿಸಿದ್ದಾರೆ ಎಂದು ತಿಳಿದಿರಬೇಕು.
ಮೇಲೆ ತಿಳಿಸಿದ ಒಂದು ವಿಧಾನ ಮಾತ್ರವಲ್ಲ. ಸ್ಟೆಗನೋಗ್ರಫಿಯಲ್ಲಿ ಇನ್ನೂ ಹಲವಾರು ವಿಧಾನಗಳಿವೆ. ಚಿತ್ರದೊಳಗೆ ಚಿತ್ರ ಮಾತ್ರವಲ್ಲ, ಚಿತ್ರದೊಳಗೆ ಸಂದೇಶ ಮಾತ್ರವಲ್ಲ, ಚಿತ್ರದೊಳಗೆ ಇನ್ನೊಂದು ತಂತ್ರಾಂಶವೂ ಅಡಕವಾಗಿರಬಹುದು. ಹಾಗೆಯೇ ಗುಪ್ತ ಸಂದೇಶ ಅಥವಾ ಕಡತವನ್ನು ಹೊತ್ತು ತರುವ ಕಡತವು ಚಿತ್ರದ (ಫೋಟೋ, ಗ್ರಾಫಿಕ್ಸ್) ಕಡತವೇ ಆಗಿರಬೇಕಾಗಿಲ್ಲ; ಅದು ಧ್ವನಿ ಅಂದರೆ ಆಡಿಯೋ ಫೈಲ್ ಕೂಡ ಆಗಿರಬಹುದು.
ಎಲ್ಲ ತಂತ್ರಜ್ಞಾನಗಳನ್ನೂ, ಸೌಲಭ್ಯಗಳನ್ನೂ ದುರ್ಬಳಕೆ ಮಾಡಬಹುದು. ಸ್ಟೆಗನೋಗ್ರಫಿಯೂ ಇದಕ್ಕೆ ಹೊರತಾಗಿಲ್ಲ. ಒಂದು ಕಡತದ ಒಳಗೆ ಇನ್ನೊಂದು ಕಡತವನ್ನು ಅಡಕವಾಗಿಸಿ ಕಳುಹಿಸಬಹುದು ಎಂದೆನಲ್ಲ? ಆ ಇನ್ನೊಂದು ಕಡತ ನಿರಪಾಯಕಾರಿ ಫೋಟೋ ಅಥವಾ ಸಂದೇಶದ ಬದಲಿಗೆ ಯಾವುದಾದರೂ ಪೋಕರಿ ತಂತ್ರಾಂಶವೂ ಆಗಿರಬಹುದು. ಇಂತಹವಕ್ಕೆ ಇಂಗ್ಲಿಷಿನಲ್ಲಿ malware ಎನ್ನುತ್ತಾರೆ. ಹೀಗೆ ಬಂದ ಕುತಂತ್ರಾಂಶವು ನಿಮ್ಮ ಸಾಧನವನ್ನು (ಗಣಕ, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಇತ್ಯಾದಿ) ಹಾಳುಗೆಡಹಬಹುದು. ಇನ್ನೂ ಅಪಾಯಕಾರಿ ಎಂದರೆ ಅದು ನೀವು ನಿಮ್ಮ ಸಾಧನದಲ್ಲಿ ಮಾಡುವ ಬ್ಯಾಂಕ್ ಅಥವಾ ಇನ್ಯಾವುದಾದರೂ ಹಣಕಾಸು ವ್ಯವಹಾರದಲ್ಲಿ ಬಳಸುವ ಪಾಸ್‌ವರ್ಡ್‌ಗಳನ್ನು ಕದಿಯುವುದು. ಹೀಗೆ ಕದ್ದು ಆ ಕುತಂತ್ರಾಂಶವನ್ನು ತಯಾರಿಸಿದವನಿಗೆ ಅದನ್ನು ರವಾನಿಸಿ ಆತ ಅದರ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಿದ್ದರೆ ಇಂತಹ ಧಾಳಿಯಿಂದ ರಕ್ಷಿಸಿಕೊಳ್ಳುವುದು ಹೇಗೆ? ನಿಮ್ಮ ಸಾಧನದಲ್ಲಿ ಸೂಕ್ತ ರಕ್ಷಣಾ ತಂತ್ರಾಂಶವನ್ನು ಬಳಸುವುದು ಮೊದಲನೆಯ ಉಪಾಯ. ಇನ್ನು ಮುಖ್ಯವಾಗಿ ಮಾಡಬೇಕಾಗಿರುವುದೆಂದರೆ ಪರಿಚಯವಿಲ್ಲದವರಿಂದ ಬಂದ ಕಡತಗಳನ್ನು ತೆರೆಯದಿರುವುದು. ಸಾಮಾನ್ಯವಾಗಿ ಇಂತಹವು ನಿಮಗೆ ಇಮೈಲ್ ಅಥವಾ ವಾಟ್ಸ್‌ಆಪ್‌ನಂತಹ ಸಂದೇಶಗಳ ಮೂಲಕ ಬರುತ್ತವೆ. ಸಂದೇಶಕ್ಕೆ ಲಗತ್ತಿಸಿದ ಕಡತವನ್ನು ಇಂಗ್ಲಿಷಿನಲ್ಲಿ attachment ಎನ್ನುತ್ತಾರೆ. ಬುದ್ಧ ಹೇಳಿದಂತೆ attachment is the root cause of all miseries. ಕಂಡಿತ ನಿರಪಾಯಕಾರಿ ಆಕರದಿಂದ ನಿಮಗೆ ಬಂದಿದೆ ಎಂದು ಖಾತ್ರಿಯಾಗದೆ ಯಾವ ಲಗತ್ತನ್ನೂ ತೆರೆಯದಿರುವುದೇ ಉತ್ತಮ.
–ಡಾ| ಯು.ಬಿ. ಪವನಜ
gadgetloka @ gmail . com
The post ಸ್ಟೆಗನೋಗ್ರಫಿ first appeared on Vishva Kannada.
ಚತುರ ಮನೆ
ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ಸಾಲು ಕೇಳಿರಬಹುದು. ಮನೆಯ ಯಜಮಾನ ಎಲ್ಲಿಗೋ ಹೋಗಿ ಕಸ ಗುಡಿಸದೆ ಮನೆಯೆಲ್ಲ ಗಲೀಜಾದಾಗ ಈ ಸಾಲಿನ ಬಳಕೆಯಾಗುತ್ತದೆ. ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನೆಯೊಳಗಡೆ ಮನೆಯೊಡೆಯನಿಲ್ಲದಿದ್ದರೂ ಮನೆಯನ್ನು ಸದಾ ಸ್ವಚ್ಛವಾಗಿಟ್ಟು, ರಾತ್ರಿ ದೀಪ ಹಚ್ಚಿ, ಹಗಲು ದೀಪ ಆರಿಸಿ, ಮನೆಯೊಳಗೆ ಮನೆಯೊಡೆಯನಿದ್ದಾನೆ ಎಂಬ ಭಾವನೆ ಮೂಡುವಂತೆ ಮಾಡಬಲ್ಲ ಚತುರ ಮನೆಗಳಿವೆ. ಇವುಗಳನ್ನು ಇಂಗ್ಲಿಷಿನಲ್ಲಿ smart home ಎನ್ನುತ್ತಾರೆ. ಚತುರ ಮನೆ ಅಂದರೆ ಏನು? ಬನ್ನಿ ಈ ಸಂಚಿಕೆಯಲ್ಲಿ ಅದನ್ನು ತಿಳಿದುಕೊಳ್ಳೋಣ.
ಚತುರ ಮನೆ ಅಂದರೆ ಮೊಬೈಲ್ ಫೋನ್ ಅಥವಾ ಅಂತಹುದೇ ಅಂತರಜಾಲ ಸಂಪರ್ಕದಲ್ಲಿರುವ ಸಾಧನಗಳನ್ನು ಬಳಸಿ ಅಂತರಜಾಲದ ಮೂಲಕ ಎಲ್ಲಿಂದ ಬೇಕಾದರೂ ನಿಯಂತ್ರಿಸಬಹುದಾದ ಸಾಧನಗಳನ್ನು ಒಳಗೊಂಡ ಮನೆ. ಈ ರೀತಿ ನಿಯಂತ್ರಿಸಬಹುದಾದ ವಸ್ತುಗಳನ್ನೊಳಗೊಂಡ ಜಾಲಕ್ಕೆ ವಸ್ತುಗಳ ಅಂತರಜಾಲ (Internet of Things, IoT) ಎಂಬ ಹೆಸರೂ ಇದೆ. ಮನೆಯಲ್ಲಿ ಬಳಕೆಯಾಗುವ ವಸ್ತುಗಳ ಅಂತರಜಾಲದಲ್ಲಿ ಮನೆಯಲ್ಲಿ ಬಳಸುವ ಸುರಕ್ಷಾ ಸಾಧನಗಳು, ದಿನ ನಿತ್ಯ ಬಳಕೆಯ ಗೃಹೋಪಕರಣಗಳು, ಕ್ಯಾಮೆರಾ ಇತ್ಯಾದಿಗಳೆಲ್ಲ ಸೇರಿವೆ.
ಚತುರ ಮನೆಯಲ್ಲಿ ತಾಪಮಾನವನ್ನು ಮೊಬೈಲ್ ಸಾಧನದಿಂದ ಅಂತರಜಾಲದ ಮೂಲಕ ನಿಯಂತ್ರಿಸಬಹುದು. ಕಚೇರಿಯಲ್ಲಿರುವ ವ್ಯಕ್ತಿ ಅಲ್ಲಿಂದ ಹೊರಡುವ ಅರ್ಧ ಗಂಟೆ ಮೊದಲು ಮನೆಯ ಹವಾನಿಯಂತ್ರಕವನ್ನು ಆನ್ ಮಾಡಿ ಆತ ಮನೆಗೆ ತಲುಪುವ ಹೊತ್ತಿಗೆ ತನಗೆ ಬೇಕಾದ ತಾಪಮಾನದಲ್ಲಿರುವಂತೆ ಮಾಡಬಹುದು.  ಮನೆಯಲ್ಲಿರುವ ಕಸ ಗುಡಿಸುವ ಹಾಗೂ ನೆಲ ಒರಸುವ ಯಂತ್ರವನ್ನು ಕೂಡ ಇದೇ ರೀತಿ ಅಂತರಜಾಲದ ಮೂಲಕ ನಿಯಂತ್ರಿಸಬಹುದು. ಅದನ್ನು ಪ್ರಾರಂಭಿಸುವುದು, ನಿಲ್ಲಿಸುವುದು ಇತ್ಯಾದಿಗಳನ್ನು ಮಾಡಬಹುದು. ಮನೆಯಲ್ಲಿರುವ ಶೈತ್ಯಕದಲ್ಲಿ ಹಾಲು ಮುಗಿದಿದೆ ಎಂದು ಕಚೇರಿಯಲ್ಲಿರುವ ಮನೆಯೊಡೆಯನಿಗೆ ಅದು ಸಂದೇಶ ಕಳುಹಿಸುವ ಸೌಲಭ್ಯ ಇಂತಹ ಚತುರ ಮನೆಯಲ್ಲಿ ಅಡಕವಾಗಿದೆ.
ಚತುರ ಮನೆ (ಚಿತ್ರ : TP-Link Deutschland)
ಒಂದು ನಿಜವಾದ ಉದಾಹರಣೆ ನೋಡಿ. ಬೆಂಗಳೂರಿನಲ್ಲಿ ವೃದ್ಧ ಮಾತಾಪಿತರಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಗ ಅಮೇರಿಕದಲ್ಲಿದ್ದಾನೆ. ಮನೆಯಲ್ಲಿ ಬೇರೆ ಯಾರೂ ಇಲ್ಲ. ಆತ ಮನೆಯೊಳಗೆ ಕ್ಯಾಮೆರ ಅಳವಡಿಸಿದ್ದಾನೆ. ಈ ಕ್ಯಾಮೆರಗಳು ಅಂತರಜಾಲಕ್ಕೆ ಸಂಪರ್ಕ ಹೊಂದಿವೆ. ಮಗ ಅಮೆರಿಕದಲ್ಲಿ ಕುಳಿತೇ ತಂದೆ ತಾಯಿ ಏನು ಮಾಡುತ್ತಿದ್ದಾರೆ ಎಂದು ವೀಕ್ಷಿಸುತ್ತಿರುತ್ತಾನೆ. ಒಂದು ದಿನ ಆತನ ತಂದೆ ತಲೆಸುತ್ತು ಬಂದು ಬಿದ್ದಿದ್ದಾರೆ. ಮಗ ಅಮೆರಿಕದಿಂದ ಅದನ್ನು ಕ್ಯಾಮೆರ ಮೂಲಕ ನೋಡಿದ್ದಾನೆ. ತಕ್ಷಣ ಪಕ್ಕದ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿ ಅವರು ಆತನ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಇದು ನಿಜವಾಗಿ ನಡೆದ ಕಥೆ.
ಅಂತರಜಾಲದ ಮೂಲಕ ಸಂಪರ್ಕಗೊಂಡ ಕ್ಯಾಮೆರದ ಉಪಯೋಗದ ಇನ್ನೊಂದು ಕಥೆ ಕೇಳಿ. ಇದೂ ಸ್ವಲ್ಪ ಮೇಲಿನ ಕಥೆಯ ನಮೂನೆಯೇ. ಆದರೆ ವ್ಯತ್ಯಾಸ ಎಂದರೆ ಮನೆಯಲ್ಲಿ ಯಾರೂ ಇಲ್ಲ. ಮನೆಯಲ್ಲಿ ಕ್ಯಾಮೆರ ಅಳವಡಿಸಿ ಆತ ಅಮೆರಿಕದಲ್ಲಿ ಇದ್ದಾನೆ. ಈ ಕ್ಯಾಮೆರ ಅಂತರಜಾಲಕ್ಕೆ ಸಂಪರ್ಕಗೊಂಡಿದೆ. ಅದು ಚಲನೆಯನ್ನು ಗುರುತಿಸಿ ಕಾರ್ಯಮುಖವಾಗಿ ಎಚ್ಚರಿಸುವ ಕ್ಯಾಮೆರ (motion sensitive camera). ಒಂದು ದಿನ ರಾತ್ರಿ ಮನೆಯೊಳಗೆ ಕಳ್ಳ ನುಸುಳಿದ್ದಾನೆ. ಕ್ಯಾಮೆರ ಅದನ್ನು ಪತ್ತೆ ಹಚ್ಚಿ ಅಮೆರಿಕದಲ್ಲಿರುವ ಮನೆಯೊಡೆಯನಿಗೆ ಎಚ್ಚರಿಸುತ್ತದೆ. ಆತ ಪಕ್ಕದ ಮನೆಯವರಿಗೂ ಆತನ ಮನೆಯ ವ್ಯಾಪ್ತಿಯ ಪೋಲೀಸ್ ಠಾಣೆಗೂ ತಿಳಿಸುತ್ತಾನೆ. ಪೋಲಿಸರು ಬಂದು ಕಳ್ಳನನ್ನು ಬಂಧಿಸುತ್ತಾರೆ. ಇದು ಕೂಡ ನಿಜ ಘಟನೆಯೇ.
ಚತುರಮನೆಯ ಕೇಂದ್ರ ಸ್ಥಾನದಲ್ಲಿ ಅಂತರಜಾಲಕ್ಕೆ ಸಂಪರ್ಕಗೊಂಡ ಒಂದು ಚತುರವಾಣಿ (smartphone) ಇರುತ್ತದೆ. ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಅಥವಾ ಗಣಕವೂ ಆಗಬಹುದು. ಸ್ಮಾರ್ಟ್‌ಫೋನ್ ಆದರೆ ಕೈಯಲ್ಲೆ ಇರುತ್ತದೆ. ನೀವು ರಸ್ತೆಯಲ್ಲಿದ್ದರೂ ಬಳಸಬಹುದು. ಮನೆಯಲ್ಲಿರುವ ಎಲ್ಲ ವಸ್ತುಗಳು ಅದರ ನಿಯಂತ್ರಣದಲ್ಲಿರುತ್ತವೆ. ಗೂಗ್ಲ್ ಹೋಂ, ಅಮೆಝಾನ್ ಅಲೆಕ್ಸಾ ಮಾದರಿಯ ತಂತ್ರಾಂಶಗಳ ಬಳಕೆ ಮಾಡಲಾಗುತ್ತದೆ. ನೀವು ಒಂದು ಕೋಣೆಯೊಳಗೆ ಪ್ರವೇಶ ಮಾಡಿದಾಗ ಅಲ್ಲಿಯ ದೀಪ ಉರಿಯುವುದು, ಹೊರಗೆ ಬಂದಾಗ ಅದು ಆರಿ ಹೋಗುವುದು, ಮಾಳಿಗೆಗೆ ಹೋಗುವ ಮೆಟ್ಟಿಲುಗಳಿಗೂ ಹೀಗೆಯೇ, ದೀಪಗಳನ್ನು ಆರಿಸುವುದು, ಉರಿಸುವುದು, ಸಂಗೀತ ನುಡಿಸುವುದು, ಇತ್ಯಾದಿಗಳನ್ನೆಲ್ಲ ಧ್ವನಿಯಲ್ಲೇ ಅಪ್ಪಣೆ ನೀಡಿ ಮಾಡಿಸಿಕೊಳ್ಳಬಹುದು. ಉದಾಹರಣೆಗೆ “ಅಲೆಕ್ಸಾ, ಪ್ಲೇ ಧರಣಿ ಮಂಡಲ ಮಧ್ಯದೊಳಗೆ” ಎಂದು ಹೇಳಿದರೆ ತಬ್ಬಲಿಯು ನೀನಾದೆ ಮಗನೆ ಸಿನಿಮಾಕ್ಕಾಗಿ ಪಿ.ಬಿ. ಶ್ರೀನಿವಾಸ್, ಬಿ.ಕೆ. ಸುಮಿತ್ರ ಮತ್ತು ವಿದ್ಯಾರಾಣಿ ಹಾಡಿದ ಹಾಡನ್ನು ಅದು ಪ್ಲೇ ಮಾಡುತ್ತದೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ವೆಂಕಟೇಶ ಸುಪ್ರಭಾತ ಬೇಕಿದ್ದರೆ ಹಾಗೆಂದು ಆಯ್ಕೆ ಮಾಡಿಟ್ಟುಕೊಳ್ಳಬಹುದು. ಪ್ರತಿದಿನ ಸಾಯಂಕಾಲ 5:00 ಗಂಟೆಗೆ ದೀಪ ಹಚ್ಚಬೇಕು ಎಂದು ಆಯ್ಕೆ ಮಾಡಿಟ್ಟುಕೊಳ್ಳಬಹುದು.
ಈ ಎಲ್ಲ ಆಯ್ಕೆಗಳನ್ನು ಬಳಸಲು ನೀವು ಗೂಗ್ಲ್ ಹೋಂ ಅಥವಾ ಅಮೆಜಾನ್ ಅಲೆಕ್ಸ ಬಳಸಬೇಕು. ಸಂಗೀತಕ್ಕಾಗಿ ಸ್ಪಾಟಿಫೈಗೆ ಚಂದಾದಾರರಾದರೆ ಉತ್ತಮ. ಅಂತರಜಾಲದಲ್ಲಿ ಇರುವ ಹಲವಾರು ಸೇವೆ, ಸಂಗೀತ, ಪುಸ್ತಕ ಮಳಿಗೆಗಳಿಗೆ ಚಂದಾದಾರರಾದರೆ ಉತ್ತಮ. ಆಗ ಎಲ್ಲವನ್ನು ಧ್ವನಿಯ ಮೂಲಕವೇ ಪಡೆದುಕೊಳ್ಳಬಹುದು. ಅದಕ್ಕಾಗಿ ನಿಮ್ಮ ಮನೆಯ ಟಿವಿ ಕೂಡ ಸ್ಮಾರ್ಟ್‌ಟಿವಿ ಆಗಿರಬೇಕು. ಅದೂ ಅಂತರಜಾಲಕ್ಕೆ ಸಂಪರ್ಕ ಹೊಂದಿರಬೇಕು.
ಮನೆಯ ಕಿಟಿಕಿ, ಮುಖ್ಯ ಬಾಗಿಲು, ಕಾಂಪೌಂಡ್ ಗೇಟುಗಳನ್ನೂ ವಸ್ತುಗಳ ಅಂತರಜಾಲಕ್ಕೆ ಸೇರಿಸಬಹುದು. ಕಾರಿನಲ್ಲಿ ಮನೆಗೆ ಬರುವಾಗ, ಮನೆ ಹತ್ತಿರ ಬರುತ್ತಿದ್ದಂತೆ ಸ್ಮಾರ್ಟ್‌ಫೋನ್ ಮೂಲಕ ಕಾಂಪೌಂಡ್ ಗೇಟು ತೆರೆಯಬಹುದು. ಕಾರು ಒಳ ಹೋಗುತ್ತಿದ್ದಂತೆ ಅದನ್ನು ಮುಚ್ಚಬಹುದು. ನಾಯಿಯ ಗೂಡಿನ ಗೇಟನ್ನು ಬೇಕಿದ್ದರೆ ನಿಯಮಿತ ಸಮಯಕ್ಕೆ ತೆರೆಯುವುದು ಮಾಡಬಹುದು.
ಒಟ್ಟಿನಲ್ಲಿ ಎಲ್ಲವೂ ಬುದ್ಧಿವಂತ ಸಾಧನಗಳಾದರೆ ಮನೆಯೇ ಬುದ್ಧಿವಂತ ಆಗುತ್ತದೆ!
–ಡಾ| ಯು.ಬಿ. ಪವನಜ
gadgetloka @ gmail . com
The post ಚತುರ ಮನೆ first appeared on Vishva Kannada.
ಅಂತರಜಾಲದಲ್ಲೊಂದು ಕತ್ತಲ ಲೋಕ
ನೀವು ಬಳಸುವ ಅಂತರಜಾಲದಲ್ಲಿ ನಿಮ್ಮ ಕಣ್ಣಿಗೆ ಬೀಳದ ಒಂದು ಭೂಗತ ಜಗತ್ತಿದೆ. ಅದರಲ್ಲಿ ಬಹುತೇಕ ಕ್ರಿಮಿನಲ್ ಚಟುವಟಿಕೆಗಳೇ ನಡೆಯುತ್ತಿವೆ. ಅದು ನಿಮ್ಮ ಮಾಮೂಲಿ ಶೋಧಕ ತಂತ್ರಾಂಶಗಳ ಕಣ್ಣಿಗೆ ಬೀಳುವುದಿಲ್ಲ. ಬನ್ನಿ. ಅಂತರಜಾಲದಲ್ಲಿರುವ ಕತ್ತಲ ಲೋಕವನ್ನು ತಿಳಿಯೋಣ.
ಅಂತರಜಾಲದಲ್ಲಿ ನೀವು ಏನು ಮಾಡಿದರೂ ಗೂಗ್ಲ್‌ಗೆ ಗೊತ್ತಾಗುತ್ತದೆ. ಅಂದರೆ ಬಹುತೇಕ ಎಲ್ಲ ಕೆಲಸಗಳೂ ಅದಕ್ಕೆ ಗೊತ್ತಾಗುತ್ತದೆ. ಅದಕ್ಕೆ ಮಾತ್ರವಲ್ಲ. ಫೇಸ್‌ಬುಕ್ ಕೂಡ ನಿಮ್ಮನ್ನು ಅಂತರಜಾಲದಲ್ಲಿ ಹಿಂಬಾಲಿಸುತ್ತದೆ. ನೀವು ಸಿಗ್ನಲ್‌ಗೆ ಕಾಯುತ್ತಿರುವಾಗ ನಿಮ್ಮ ವಾಹನವನ್ನು ಯಾವುದೋ ಬಾರ್ ಮುಂದೆ ಎರಡು ನಿಮಿಷ ನಿಲ್ಲಿಸಿರುತ್ತೀರಾ. ನಾಳೆ ನಿಮಗೆ ಗೂಗ್ಲ್ ಕೇಳುತ್ತದೆ –“ಆ ಬಾರ್ ಆಂಡ್ ರೆಸ್ಟಾರೆಂಟ್ ಹೇಗಿತ್ತು?” ಎಂದು. ಇದೆಲ್ಲಕ್ಕೂ ಕಾರಣ ಅಂತರಜಾಲದಲ್ಲಿ ನಮ್ಮ ಹೆಜ್ಜೆ ಗುರುತುಗಳು. ಈಗ ಇನ್ನೊಂದು ವಿಚಾರ. ಯಾರಿಗೋ ಯಾರೋ ಬ್ಲಾಕ್‌ಮೈಲ್ ಮಾಡಿರುತ್ತಾರೆ. ಅವರು ಅಂತರಜಾಲದ ಮೂಲಕವೇ ವ್ಯವಹರಿಸಿರುತ್ತಾರೆ. ಅಂತರಜಾಲದ ಮೂಲಕವೇ, ಬಹುತೇಕ ಸಂದರ್ಭಗಳಲ್ಲಿ ಬಿಟ್‌ಕಾಯಿನ್ ಮೂಲಕ, ಹಣ ಕೇಳಿರುತ್ತಾರೆ. ಈಗ ನಿಮಗೆ ಅನುಮಾನ ಬರುವುದಿಲ್ಲವೇ? ಯಾಕೆ ಈ ಕಿಲಾಡಿಗಳ ಹೆಜ್ಜೆಗುರುತುಗಳು ಅಂತರಜಾಲದಲ್ಲಿ ಲಭ್ಯವಿಲ್ಲ? ಅವರೇಕೆ ಪೋಲೀಸರಿಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ? ಯಾಕೆಂದರೆ ಅವರುಗಳು ಬಳಸಿದ್ದು ನಾವು ನೀವು ಬಳಸುವ ಮಾಮೂಲಿ ಅಂತರಜಾಲವಲ್ಲ. ಬದಲಿಗೆ ಅಂತರಜಾಲದಲ್ಲಿರುವ ಒಂದು ಕತ್ತಲ ಲೋಕ. ಏನದು? ಬನ್ನಿ ತಿಳಿಯೋಣ.
ಅಂತರಜಾಲದ ಒಂದು ಪ್ರಮುಖ ಅಂಗ ವಿಶ್ವವ್ಯಾಪಿಜಾಲ (world-wide web, www). ಇದನ್ನೇ ಬಹುತೇಕ ಜನರು ಅಂತರಜಾಲ ಎಂದುಕೊಂಡಿದ್ದಾರೆ. ಇದನ್ನು ಹುಡುಕಲು ಬಳಸುವ ತಂತ್ರಾಂಶ ಶೋಧಕ ತಂತ್ರಾಂಶ. ಇದಕ್ಕೆ ಉತ್ತಮ ಉದಾಹರಣೆ ಗೂಗ್ಲ್. ಅದು ಅಂತರಜಾಲದಲ್ಲಿ ತನ್ನ ಹುಡುಕಾಟಕ್ಕೆ ಕಂಡುಬರುವ ಎಲ್ಲವನ್ನೂ ಹುಡುಕಿ ಮಾಹಿತಿ ನೀಡುತ್ತದೆ. ಇದನ್ನು ನೀವೆಲ್ಲ ಗಮನಿಸಿರುತ್ತೀರಿ. ಆದರೆ ಈ ಶೋಧಕಗಳಿಗೆ ಹುಡುಕಾಟಕ್ಕೆ ಕಂಡುಬರದ ಅಂತರಜಾಲವೊಂದಿದೆ ಅಥವಾ ಅಂತರಜಾಲದ ಭಾಗವೊಂದಿದೆ. ಅದನ್ನು ಬಳಸಲು ಅದಕ್ಕೆಂದೇ ರೂಪಿತವಾದ ತಂತ್ರಾಂಶಗಳು ಬೇಕು. ಈ ಜಾಲವನ್ನು ಇಂಗ್ಲಿಷಿನಲ್ಲಿ dark web ಎನ್ನುತ್ತಾರೆ. ಇದನ್ನೇ ನಾನು ಅಂತರಜಾಲದ ಕತ್ತಲಲೋಕ ಎಂದು ಹೆಸರಿಸಿದ್ದು.
ಡಾರ್ಕ್ ವೆಬ್‌ನಲ್ಲಿ ಹಲವು ಚಿಕ್ಕ ಚಿಕ್ಕ ಖಾಸಾ ಜಾಲಗಳೂ ದೊಡ್ಡ ದೊಡ್ಡ ಜಾಲಗಳೂ ಇರುತ್ತವೆ. ಇದರಲ್ಲಿ ಅಡಕವಾಗಿರುವ ವ್ಯಕ್ತಿಯಿಂದ ವ್ಯಕ್ತಿಗೆ ಸಂಪರ್ಕಗೊಳ್ಳುವ ಜಾಲಕ್ಕೆ ಇಂಗ್ಲಿಷಿನಲ್ಲಿ peer-to-peer network ಎನ್ನುತ್ತಾರೆ. ಇವು ಚಿಕ್ಕ ಜಾಲಗಳು. ದೊಡ್ಡ ಜಾಲಗಳಲ್ಲಿ ಪ್ರಮುಖವಾದ ಒಂದು ಉದಾಹರಣೆ ಟೋರ್. TOR ಎನ್ನುವುದು The Onion Router ಎನ್ನುವುದರ ಹ್ರಸ್ವ ರೂಪ. ಇದು ಮುಕ್ತ ತಂತ್ರಾಂಶಗಳ ಮೂಲಕ ಬಳಕೆದಾರ ಯಾರು ಎನ್ನುವುದನ್ನು ಮರೆಮಾಚಿ ಅನಾಮಿಕವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಜಗತ್ತಿನಾದ್ಯಂತ ಇರುವ, ಬಹುತೇಕ ಶೋಧಕಗಳಿಗೆ ಕಾಣಿಸದ, ಒಂದು ಪ್ರತ್ಯೇಕ ಜಾಲದ ಮೂಲಕ ಇದು ಕೆಲಸ ಮಾಡುತ್ತದೆ. ವ್ಯಕ್ತಿಯ ಗೌಪ್ಯತೆಯನ್ನು ಕಾಪಾಡಲು ಈ ಜಾಲ ಅಸ್ತಿತ್ವಕ್ಕೆ ಬಂತು. ಈ ಜಾಲದ ಮೂಲಕ ಒಂದು ಇಮೈಲ್ ಕಳುಹಿಸಿದರೆ ಆ ಇಮೈಲ್ ಯಾವ ಸ್ಥಳದಿಂದ ಬಂದಿದೆ ಎಂದು ತಿಳಿಯಲು ಸಾಧ್ಯವಿಲ್ಲ. ಇತರೆ ಮಾಮೂಲಿ ಇಮೈಲಾದರೆ ಅದರ ಐ.ಪಿ. ವಿಳಾಸದ ಮೂಲಕ ಅದು ಯಾವ ಸ್ಥಳದಿಂದ ಬಂದಿದೆ ಎಂದು ತಿಳಿಯಬಹುದು. ಡಾರ್ಕ್ ವೆಬ್ ಟೋರ್ ಜಾಲದ ಮೂಲಕ ಮಾತ್ರವಲ್ಲ, ಅದೇ ಮಾದರಿಯ ಇನ್ನೂ ಹಲವು ಜಾಲಗಳನ್ನು ಬಳಸಿಕೊಳ್ಳುತ್ತದೆ.
ಡಾರ್ಕ್ ವೆಬ್ ಪ್ರಾರಂಭವಾದ ಉದ್ದೇಶ ಒಳ್ಳೆಯದಾಗಿದ್ದರೂ ಅದು ಬಹುತೇಕ ಅಪರಾಧ ಚಟುವಟಿಕೆಗಳಿಗೇ ಬಳಕೆಯಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಕಾನೂನು ಪ್ರಕಾರ ಅಪರಾಧವಾಗಿರುವುದು ನಿಜವಾಗಿಯೂ ಅನ್ಯಾಯವಾಗಿರಬೇಕಾಗಿಲ್ಲ. ಹಲವು ದೇಶಗಳಲ್ಲಿ ಬಹಳ ಕಟ್ಟುನಿಟ್ಟಾದ ಸೆನ್ಸಾರ್ ನಿಯಮಗಳಿವೆ. ಅಲ್ಲಿ ಆನ್‌ಲೈನ್ ಸ್ವಾತಂತ್ರ್ಯ ಇಲ್ಲ. ಅಂತಹ ದೇಶಗಳಲ್ಲಿ ಮಾನವ ಹಕ್ಕುಗಳ ಹೋರಾಟಗಾರರು ಈ ಡಾರ್ಕ್ ವೆಬ್ ಅನ್ನು ಬಳಸುತ್ತಾರೆ. ಸಂಶೋಧಕರು 2015ರಲ್ಲಿ ಒಂದು ಸಮೀಕ್ಷೆ ಮಾಡಿದ್ದರು. ಅದರಲ್ಲಿ ಅವರಿಗೆ ಕಂಡು ಬಂದುದೇನೆಂದರೆ ಡಾರ್ಕ್ ವೆಬ್‌ನಲ್ಲಿರುವ ಸುಮಾರು 60% ರಷ್ಟು ಜಾಲತಾಣಗಳು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂದು. 2019ರಲ್ಲಿ ನಡೆಸಿದ ಇನ್ನೊಂದು ಸಂಶೋಧನಾ ಸಮೀಕ್ಷೆಯಲ್ಲಿ ಕಂಡುಬಂದುದೇನೆಂದರೆ ಈ ನಮೂನೆಯ ಚಟುವಟಿಕೆಗಳು 20% ರಷ್ಟು ಹೆಚ್ಚಾಗಿದೆ ಎಂದು. 2023ರಲ್ಲಿ ಅದು ಇನ್ನೂ ಹೆಚ್ಚಾಗಿರುತ್ತದೆ.
ಡಾರ್ಕ್ ವೆಬ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳೇ ಅಧಿಕ. ಕೆಲವು ಉದಾಹರಣೆಗಳು – ಕದ್ದ ಕ್ರೆಡಿಟ್ ಕಾರ್ಡ್ ಮಾಹಿತಿ, ತಂತ್ರಾಂಶಗಳ ಸೀರಿಯಲ್ ನಂಬರ್, ನೆಟ್‌ಫ್ಲಿಕ್ಸ್‌ನಂತಹ ಸೇವೆಗಳ ಲಾಗಿನ್ ಮತ್ತು ಪಾಸ್‌ವರ್ಡ್, ಬ್ಯಾಂಕ್‌ಖಾತೆಗಳ ಲಾಗಿನ್ ಮತ್ತು ಪಾಸ್‌ವರ್ಡ್, ಇತ್ಯಾದಿ. ಬೇರೆಯವರ ಗಣಕ ಮತ್ತು ಗಣಕ ಜಾಲಗಳಿಗೆ ಕನ್ನ ಹಾಕುವ ಪರಿಣತರನ್ನು ಹ್ಯಾಕರುಗಳು ಎನ್ನುತ್ತಾರೆ. ಅಂತಹ ಹ್ಯಾಕರುಗಳ ನೇಮಕಾತಿ ನಡೆಯುವುದು ಡಾರ್ಕ್ ವೆಬ್ ಮೂಲಕ.
ಡಾರ್ಕ್ ವೆಬ್‌ನಲ್ಲಿ ಎಲ್ಲವೂ ಕಾನೂನುಬಾಹಿರವಾಗಿಯೇ ಇರಬೇಕಾಗಿಲ್ಲ. ಆನ್‌ಲೈನ್ ಮೂಲಕ ಚದುರಂಗ ಆಡುವ ಒಂದು ಜಾಲವು ಡಾರ್ಕ್ ವೆಬ್‌ನಲ್ಲೂ ಇದೆ. ಅದು ಕೆಟ್ಟ ಕೆಲಸವೇನಲ್ಲ. ಸಂಪೂರ್ಣ ಅನಾಮಧೇಯ ವ್ಯಕ್ತಿಯ ಜೊತೆ ಅನ್‌ಲೈನ್  ಮೂಲಕ ಚದುರಂಗದ ಆಟವನ್ನು ಈ ಜಾಲದ ಮೂಲಕ ಆಡಬಹುದು.
ಜನಸಾಮಾನ್ಯರು ಡಾರ್ಕ್ ವೆಬ್ ಬಳಸುವ ಸಾಧ್ಯತೆ ತುಂಬ ಕಡಿಮೆ. ಅಗತ್ಯವೂ ಇಲ್ಲ. ಡಾರ್ಕ್ ವೆಬ್‌ನಲ್ಲಿ ಕ್ರಿಮಿನಲ್  ಚಟುವಟಿಕೆಗಳೇ ಅಧಿಕ ಎಂದೆನಲ್ಲ. ಆದುದರಿಂದ ಅದನ್ನು ಬಳಸುವವರಲ್ಲಿ ಕ್ರಿಮಿನಲ್‌ಗಳೇ ಅಧಿಕ. ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲುಗೊಳ್ಳುವವರು ತಮ್ಮೊಳಗೆ ಮಾಹಿತಿ ವಿನಿಮಯಕ್ಕೆ ಡಾರ್ಕ್ ವೆಬ್ ಬಳಸುತ್ತಾರೆ. ಶಸ್ತ್ರಾಸ್ತ್ರ ಖರೀದಿಗೂ ಇದೇ ಡಾರ್ಕ್ ವೆಬ್‌ನ ಬಳಕೆ ಆಗುತ್ತದೆ. ಬಹುತೇಕ ದೇಶಗಳ ರಕ್ಷಣಾಧಿಕಾರಿಗಳಿಗೆ, ಮಿಲಿಟರಿಯವರಿಗೆ, ತನಿಖಾ ಸಂಸ್ಥೆಗಳಿಗೆ ಇಲ್ಲಿಯ ವ್ಯವಹಾರ ಕಂಡುಬರುವುದಿಲ್ಲ. ಆದುದರಿಂದ ಅಂತಹ ಭೂಗತ ಚಟುವಟಿಕೆಗಳು ಈ ಡಾರ್ಕ್ ವೆಬ್ ಮೂಲಕ ನಡೆಯುತ್ತವೆ.
ಡಾರ್ಕ್ ವೆಬ್ ಬ್ಲಾಕ್‌ಮೈಲ್‌ಗೂ ಬಳಕೆಯಾಗುತ್ತದೆ. ಅದರ ಮೂಲಕ ಭಯೋತ್ಪಾದಕರು ಹಣ ಕೇಳುತ್ತಾರೆ. ಅವರುಗಳು ಸಾಮಾನ್ಯವಾಗಿ ಬಿಟ್‌ಕಾಯಿನ್ ಅಥವಾ ಅದೇ ಮಾದರಿಯ ಗೂಢನಾಣ್ಯಗಳ ಮೂಲಕ ಹಣ ಕೇಳುತ್ತಾರೆ. ಡಾರ್ಕ್ ವೆಬ್‌ನ ಮತ್ತೊಂದು ಪ್ರಮುಖ ಬಳಕೆ ಅಂದರೆ ಅಶ್ಲೀಲ ಸಿನಿಮಾ ಅರ್ಥಾತ್ ಪೋರ್ನ್.
–ಡಾ| ಯು.ಬಿ. ಪವನಜ
gadgetloka @ gmail . com
The post ಅಂತರಜಾಲದಲ್ಲೊಂದು ಕತ್ತಲ ಲೋಕ first appeared on Vishva Kannada.
ಅಂತರಿಕ್ಷದಿಂದ ಅಂತರಜಾಲ
ಉಪಗ್ರಹ ಮೂಲಕ ಅಂತರಜಾಲ ಸಂಪರ್ಕ
ಕೊರೊನಾದಿಂದಾಗಿ ಜೀವನದಲ್ಲಿ, ಜೀವನಶೈಲಿಯಲ್ಲಿ, ಹಲವು ಏರುಪೇರುಗಳಾಗಿವೆ. ಅವುಗಳಲ್ಲಿ ಒಂದು ಶಿಕ್ಷಣ. ಶಾಲಾಪಾಠಗಳೆಲ್ಲ ಆನ್‌ಲೈನ್ ಆಗಿವೆ. ಇದರಿಂದಾಗಿ ಹಳ್ಳಿಗಾಡಿನಲ್ಲಿರುವವರಿಗೆ ಬಹು ದೊಡ್ಡ ತೊಂದರೆ ಆಗಿದೆ. ನಿಮಗೆಲ್ಲ ತಿಳಿದೇ ಇರುವಂತೆ ಭಾರತದ ಹಳ್ಳಿಗಳಲ್ಲಿ ಅಂತರಜಾಲ ಸಂಪರ್ಕ ಸಮರ್ಪಕವಾಗಿಲ್ಲ. ಬ್ರಾಡ್‌ಬ್ಯಾಂಡ್ ಎಲ್ಲ ಮನೆಗಳಿಗೆ ಲಭ್ಯವಿಲ್ಲ. ಮೊಬೈಲ್ ಸಿಗ್ನಲ್ ಕೂಡ ಎಲ್ಲ ಕಡೆ ಸರಿಯಾಗಿ ದೊರೆಯುವುದಿಲ್ಲ. ಕೆಲವು ಮಕ್ಕಳು ಮೊಬೈಲ್ ಸಿಗ್ನಲ್‌ಗಾಗಿ ಗುಡ್ಡದ ತುದಿಗೆ ಹೋಗುವುದು, ಅಲ್ಲಿ ಸಣ್ಣ ಜೋಪಡಿ ಹಾಕಿಕೊಂಡು, ಅದರಲ್ಲಿ ಕುಳಿತು ಆನ್‌ಲೈನ್ ತರಗತಿ ವೀಕ್ಷಿಸುವ ಫೋಟೋಗಳನ್ನು ನೋಡಿರಬಹುದು. ಸುಳ್ಯದ ಪಕ್ಕದ ಒಂದು ಹಳ್ಳಿಯಲ್ಲಿ, ಮಗಳು ಗುಡ್ಡದಲ್ಲಿ, ಮೊಬೈಲ್‌ನಲ್ಲಿ ಪಾಠ ವೀಕ್ಷಣೆ ಮಾಡುವಾಗ ಅವಳ ಅಪ್ಪ ಪಕ್ಕದಲ್ಲಿ ಕೊಡೆ ಹಿಡಿದುಕೊಂಡು ಅವಳನ್ನು ಮಳೆಯಿಂದ ರಕ್ಷಣೆ ಮಾಡುತ್ತಿರುವ ಫೋಟೋ ಕೂಡ ನೋಡಿರಬಹುದು. ಬರಿಯ ಶಾಲಾಪಾಠಗಳಿಗೆ ಮಾತ್ರವಲ್ಲ. ಮಾಹಿತಿ ತಂತ್ರಾಂಶ ಕ್ಷೇತ್ರದಲ್ಲಿ ಕೆಲಸ ಮಾಡುವ ಹಲವು ಮಂದಿ ಕೊರೋನಾದಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಹಳ್ಳಿಯ ಮನೆಗಳಲ್ಲಿ ಅಂತರಜಾಲ ಸಂಪರ್ಕ ಬಹುದೊಡ್ಡ ಸಮಸ್ಯೆಯಾಗಿದೆ. ಕೆಲವರು ಕಾರಿನಲ್ಲಿ ಗುಡ್ಡದ ತುದಿಗೆ ಹೋಗಿ ಇಡಿ ದಿನ ಅಲ್ಲೇ ಕಾರಿನಲ್ಲಿ ಕುಳಿತು ಕೆಲಸ ಮಾಡಿದ್ದು ತಿಳಿದುಬಂದಿದೆ. ಅಂತೂ ಈ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅಂತರಜಾಲ ಸಂಪರ್ಕ ಎಂಬುದು ನೀರು, ಗಾಳಿ, ಪೆಟ್ರೋಲ್, ಗ್ಯಾಸ್, ಆಹಾರಗಳಷ್ಟೇ ಅಗತ್ಯದ ಸಂಗತಿಯಾಗಿದೆ.
ಅಂತರಜಾಲ ಸಂಪರ್ಕವನ್ನು ಹಲವು ರೀತಿಯಲ್ಲಿ ಪಡೆಯಬಹುದು. ಮನೆಗಳಿಗೆ ಕೇಬಲ್ ಮೂಲಕ ಪಡೆಯುವುದು ಒಂದು ವಿಧಾನ. ಇದನ್ನೇ ಬ್ರಾಡ್‌ಬ್ಯಾಂಡ್ ಎನ್ನುವುದು. ಈ ಸಂಪರ್ಕ ಹಳ್ಳಿಗಳಲ್ಲಿ ಎಲ್ಲ ಕಡೆ ಲಭ್ಯವಿಲ್ಲ. ಒಂದು ಮನೆಗೋಸ್ಕರ ಕಿ.ಮೀ.ಗಟ್ಟಳೆ ಕೇಬಲ್ ಎಳೆಯಲು ಅಂತರಜಾಲ ಸಂಪರ್ಕ ನೀಡುವವರು ಹಿಂದೇಟು ಹೊಡೆಯುತ್ತಾರೆ. ಈಗ ಮೊಬೈಲ್ ಫೋನ್ ಇಲ್ಲದವರೇ ಇಲ್ಲವೆನ್ನಬಹುದು.  ಮೊಬೈಲ್‌ಫೋನ್‌ಗಳ ಮೂಲಕ ಅಂತರಜಾಲ ಸಂಪರ್ಕ ಪಡೆಯುವುದು ಇನ್ನೊಂದು ವಿಧಾನ. ಈ ವಿಧಾನವನ್ನೇ ಬಹುತೇಕ ಜನರು ಬಳಸುತ್ತಿರುವುದು. ಇದರ ತೊಂದರೆಯೇನೆಂದರೆ ಎಲ್ಲ ಕಡೆ ಮೊಬೈಲ್ ಟವರ್ ಇಲ್ಲದಿರುವುದು. ಅಂತೂ ಇಂತೂ ಕುಂತಿಮಕ್ಕಳಿಗೆ ವನವಾಸ ಎಂದಂತೆ ಹಲವರಿಗೆ ಅಂತರಜಾಲ ಸಂಪರ್ಕ ಬಹುದೊಡ್ಡ ಸಮಸ್ಯೆಯಾಗಿದೆ.
ಮನೆಗಳಿಗೆ ತಾರಸಿಯಲ್ಲಿ ಅಳವಡಿಸಿರುವ ಡಿಶ್ ಮೂಲಕ ಟಿ.ವಿ. ಸಿಗ್ನಲ್ ಪಡೆಯುವುದು ಗೊತ್ತಿದೆ. ಇದನ್ನೇ ಡಿ.ಟಿ.ಎಚ್. ಎನ್ನುತ್ತಾರೆ. ಈ ಡಿಶ್ ಮೂಲಕ ಅಂತರಜಾಲ ಸಂಪರ್ಕ ಪಡೆಯಬಹುದಲ್ಲವೇ ಎಂದು ಅನ್ನಿಸಿಲ್ಲವೇ? ಅಂತರಜಾಲ ಸಂಪರ್ಕಕ್ಕೂ ಡಿಶ್ ಮೂಲಕ ಟಿ.ವಿ. ಸಿಗ್ನಲ್ ಪಡೆಯುವುದಕ್ಕೂ ವ್ಯತ್ಯಾಸವಿದೆ. ಟಿ.ವಿ. ಸಂಪರ್ಕ ಏಕಮುಖ. ಅಂದರೆ ಅದು ಪ್ರೇಷಕದಿಂದ ಗ್ರಾಹಕಕ್ಕೆ ಬರುತ್ತದೆ. ಅದರಲ್ಲಿ ಹಿಮ್ಮುಖವಾಗಿ ಸಂವಹನ ಇಲ್ಲ. ಆದರೆ ಅಂತರಜಾಲ ಸಂಪರ್ಕ ಹಾಗಲ್ಲ. ಇದು ದ್ವಿಮುಖ ಸಂವಹನ. ಅಂದರೆ ನಿಮ್ಮ ಮನೆಯ ತಾರಸಿಯಲ್ಲಿರುವ ಡಿಶ್ ಉಪಗ್ರಹಕ್ಕೆ ವಾಪಾಸು ಸಂದೇಶ ಕಳುಹಿಸಲು ಶಕ್ತವಾಗಿರಬೇಕು. ಇಂತಹ ಸೌಲಭ್ಯವಿರುವ ವ್ಯವಸ್ಥೆ ಬಂದರೆ ಒಳಿತಲ್ಲವೇ? ಹೌದು. ಅಂತಹ ವ್ಯವಸ್ಥೆ ಬರುತ್ತಿದೆ. ಈ ಲೇಖನದಲ್ಲಿ ಅದರ ಬಗ್ಗೆ ತಿಳಿಯೋಣ.
ಅಂತರಿಕ್ಷದಲ್ಲಿ ಹಲವು ಉಪಗ್ರಹಗಳಿವೆ. ಇವುಗಳ ಮೂಲಕ ಸಂವಹನ ಆಗುತ್ತಿದೆ. ನಿಮಗೆ ಬರುತ್ತಿರುವ ಡಿಟಿಎಚ್ ಸಿಗ್ನಲ್ ಇದಕ್ಕೆ ಉದಾಹರಣೆ. ಮೊಬೈಲ್ ಫೋನ್‌ಗಳಿಗೆ ಬರುವ ಸಿಗ್ನಲ್ ಹತ್ತಿರದ ಗೋಪುರದಿಂದ ಬರುತ್ತದೆ. ಗೋಪುರಕ್ಕೆ ಸಿಗ್ನಲ್ ಉಪಗ್ರಹದಿಂದ ಬರುತ್ತದೆ. ಇಂತಹ ಉಪಗ್ರಹಗಳು ತುಂಬ ಎತ್ತರದಲ್ಲಿ ಭೂಮಿಗೆ ಸುತ್ತುತ್ತಿರುತ್ತವೆ. ಇವುಗಳು ಭೂಮಿಯಿಂದ ದೂರವಿರುವ ಕಾರಣ ಅಲ್ಲಿಂದ ಭೂಮಿಗೆ ಸಂದೇಶ ತಲುಪಲು ಸ್ವಲ್ಪ ಸಮಯ ಹಿಡಿಯುತ್ತದೆ. ಇಂತಹ ಉಪಗ್ರಹಗಳನ್ನು ಬಳಸಿ ನೇರವಾಗಿ ಅಂತರಜಾಲ ಸಂಪರ್ಕ ಮಾಡುವುದು ಸ್ವಲ್ಪ ಕಷ್ಟ. ಭೂಮಿಗೆ ಅತಿ ಹತ್ತಿರದಲ್ಲಿರುವ ಉಪಗ್ರಹವಾದರೆ ಅಂತರಜಾಲ ಸಂಪರ್ಕಕ್ಕೆ ಉತ್ತಮ ಆದರೆ ಇಲ್ಲೂ ಒಂದು ಸಮಸ್ಯೆಯಿದೆ. ಅದೇನೆಂದರೆ ಇಂತಹ ಉಪಗ್ರಹದ ವ್ಯಾಪ್ತಿ ಕಡಿಮೆ. ಅಂದರೆ ಇಂತಹ ಉಪಗ್ರಹಗಳನ್ನು ಬಳಸಿ ಅಂತರಜಾಲ ಸಂಪರ್ಕ ಮಾಡಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಉಪಗ್ರಹಗಳನ್ನು ಬಳಸಬೇಕು. ಅಂತಹ ಒಂದು ವ್ಯವಸ್ಥೆ ಸ್ಟಾರ್‌ಲಿಂಕ್.
ಎಲೋನ್ ಮಸ್ಕ್ ಹೆಸರನ್ನು ಕೆಲವರಾದರೂ ಕೇಳಿರಬಹುದು. ಅಂತರಿಕ್ಷಕ್ಕೆ ಜನರನ್ನು ಕಳುಹಿಸುವ ಸ್ಪೇಸ್‌ಎಕ್ಸ್ ಇವರ ಕಂಪೆನಿ. ವಿದ್ಯುತ್‌ನಿಂದ ಚಲಿಸುವ ಟೆಸ್ಲಾ ಕಾರು ಕೂಡ ಇವರದೇ. ಇವರಿಗೆ ತಿಕ್ಕಲು ಬುದ್ಧಿವಂತ ಎಂಬ ಹೆಸರಿದೆ. ಇವರದೇ ಇನ್ನೊಂದು ಯೋಜನೆ ಸ್ಟಾರ್‌ಲಿಂಕ್. ಇದು ಭೂಮಿಗೆ ಅತಿ ಹತ್ತಿರದಲ್ಲಿ ಸುತ್ತುತ್ತಿರುವ ಸಾವಿರಾರು ಉಪಗ್ರಹಗಳನ್ನು ಬಳಸಿ ಅಂತರಜಾಲ ಸಂಪರ್ಕ ನೀಡುವ ಯೋಜನೆ. ಇದು ಕೆಲವು ದೇಶಗಳಲ್ಲಿ ಪ್ರಾಯೋಗಿಕವಾಗಿ ಚಾಲನೆಯಲ್ಲಿದೆ. ಭಾರತಕ್ಕೆ ಇದು ಬಹುಶಃ 2022ರ ಡಿಸೆಂಬರ್ ಹೊತ್ತಿಗೆ ಲಭ್ಯವಾಗಬಹುದು ಎಂದು ಅಂದಾಜು. ಸ್ಟಾರ್‌ಲಿಂಕ್‌ಗೆ ಈಗಲೇ ಹಣ ನೀಡಿ ಮುಂಗಡ ಬುಕ್ಕಿಂಗ್ ಮಾಡಬಹುದು.
ಸ್ಟಾರ್‌ಲಿಂಕ್‌ನಲ್ಲಿ ಒಂದು ಡಿಶ್, ಮೋಡೆಮ್ ಮತ್ತು ಡಿಶ್ ಅನ್ನು ತಾರಸಿಯಲ್ಲಿ ಜೋಡಿಸಲು ಅಗತ್ಯ ಸಲಕರಣೆಗಳು ಇರುತ್ತವೆ. ಡಿಶ್‌ನಿಂದ ಮೋಡೆಮ್‌ಗೆ ಸಂಪರ್ಕ ಮಾಡಬೇಕು. ಡಿಶ್ ಇಡಲು ಯಾವುದೇ ಅಡ್ಡಿಗಳಿಲ್ಲದೆ ಆಕಾಶ ಕಾಣಿಸುವ ಜಾಗವಾಗಬೇಕು. ನಿಮ್ಮ ಮನೆಯ ಯಾವ ಸ್ಥಳದಲ್ಲಿ ಇದನ್ನು ಇಟ್ಟರೆ ಉತ್ತಮ ಎಂದು ತಿಳಿಯಲು ಅವರು ಒಂದು ಆಪ್ ಅನ್ನೂ ಮಾಡಿದ್ದಾರೆ. ಅದನ್ನು ಬಳಸಿ ನೋಡಬಹುದು. ಸದ್ಯಕ್ಕೆ ಸುಮಾರು 50 ರಿಂದ 150 ಎಂಬಿಪಿಎಸ್ ವೇಗ ಹಲವರಿಗೆ ದೊರೆಯುತ್ತಿದೆ. ಏನೂ ಸಂಪರ್ಕವೇ ಇಲ್ಲದ ಹಳ್ಳಿಗಳಿಗೆ ಇದು ಉತ್ತಮ. ಸ್ಟಾರ್‌ಲಿಂಕ್ ಏನೂ ಕಡಿಮೆ ಬೆಲೆಗೆ ದೊರೆಯುವುದಿಲ್ಲ. ಪ್ರಾರಂಭದಲ್ಲಿ ಬುಕ್ ಮಾಡಲು 500 ಡಾಲರ್ (ಸುಮಾರು ರೂ.37,500) ನೀಡಬೇಕು. ನಂತರ ಪ್ರತಿ ತಿಂಗಳು 100 ಡಾಲರ್ (ಸುಮಾರು ರೂ.7,500) ನೀಡಬೇಕು. ಭಾರದತಲ್ಲಿ ಇಷ್ಟು ಬೆಲೆ ತೆತ್ತು ಎಷ್ಟು ಜನ ಇದನ್ನು ಕೊಳ್ಳುತ್ತಾರೆ ಎಂದು ಕಾದು ನೋಡಬೇಕು.
ಅಂತರಿಕ್ಷದಿಂದ ಅಂತರಜಾಲ ಸಂಪರ್ಕ ನೀಡುವ ಕಂಪೆನಿ ಸ್ಟಾರ್‌ಲಿಂಕ್ ಒಂದೇ ಅಲ್ಲ. ಇನ್ನೂ ಹಲವು ಕಂಪೆನಿಗಳು ಈ ಕ್ಷೇತ್ರಕ್ಕೆ ಬಂದಿವೆ. ಆದರೆ ಅವು ಯಾವುವೂ ಭಾರತಕ್ಕೆ ಇನ್ನೂ ಬಂದಿಲ್ಲ.
–ಡಾ| ಯು.ಬಿ. ಪವನಜ
gadgetloka @ gmail . com
The post ಅಂತರಿಕ್ಷದಿಂದ ಅಂತರಜಾಲ first appeared on Vishva Kannada.