ವಿಜ್ಞಾನ ಹಾಸ್ಯ

Sunday, April 1st, 2012

ಪೀಸಾದ ಗೋಪುರ ವಾಲಿಕೊಂಡಿರುವುದರ ಬಗ್ಗೆ ವ್ಯಾಖ್ಯೆ “ಗೆಲಿಲಿಯೋ ಸ್ವರ್ಗಸ್ಥನಾದ ನಂತರ ನ್ಯೂಟನ್ ಹುಟ್ಟಿದುದು. ಆದ್ದರಿಂದ ಗೆಲಿಲಿಯೋಗೆ ನ್ಯೂಟನ್‌ನ ಮೂರನೆಯ ನಿಯಮ ಗೊತ್ತಿರಲಿಲ್ಲ. ಆತ ಪೀಸಾದ ಗೋಪುರ ಹತ್ತಿ ಭಾರವಾದ ಕಲ್ಲುಗಳನ್ನು ಎಸೆದ. ಇದರ ಪ್ರತಿಕ್ರಿಯೆಯಾಗಿ ಗೋಪುರ ವಾಲಿತು” —- —- ಗುರುತ್ತ್ವಾಕರ್ಷಣೆಯ ತತ್ತ್ವ ನ್ಯೂಟನ್‌ಗಿಂತ ಮೊದಲೇ ಭಾರತೀಯರಿಗೆ ಗೊತ್ತಿತ್ತು. ಅದು ಯಾವ ರೀತಿ ಎಂದರೆ “ನ್ಯೂಟನ್‌ನ ತಲೆಯ ಮೇಲೆ ಸೇಬಿನಹಣ್ಣು ಬಿದ್ದದ್ದರಿಂದ ಗುರುತ್ತ್ವಾಕರ್ಷಣ ತತ್ತ್ವದ ಜ್ಞಾನೋದಯವಾಯಿತೆಂಬುದು ಎಲ್ಲರಿಗೂ ತಿಳಿದ ವಿಷಯ. ನ್ಯೂಟನ್‌ಗೂ ಮುಂಚೆಯೇ ಭಾರತದ ಜ್ಞಾನಿಗಳಿಗೂ ಈ […]

ಸಾಹಿತಿಗಳೇ, ಕನ್ನಡವ ಸಾಯುತಿ ಮಾಡಬೇಡಿ

Saturday, June 4th, 2011

ಡಾ| ಯು. ಬಿ. ಪವನಜ [೨೦೧೧ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕನ್ನಡಪ್ರಭ ಪತ್ರಿಕೆ ಹೊರತಂದ ವಿಶೇಷ ಪುರವಣಿಯಲ್ಲಿ ಪ್ರಕಟಿತ ಲೇಖನ] ಮತ್ತೊಮ್ಮೆ ಸಾಹಿತ್ಯ ಸಮ್ಮೇಳನ ಬಂದಿದೆ. ಪತ್ರಿಕೆಗಳಲ್ಲಿ ಪುರವಣಿಗಳು ಬರುತಿವೆ. ಕನ್ನಡ ಉಳಿಯಲು ಏನು ಮಾಡಬೇಕು ಎಂದು ಮತ್ತೆ ಮತ್ತೆ ಗೀಚುವಿಕೆ ಹಾಗೂ ಕಿರುಚುವಿಕೆ ಮರುಕಳಿಸುತ್ತಿದೆ. ಈ ಸಂದರ್ಭದಲ್ಲಿ ಇಲ್ಲೊಂದು ದೃಷ್ಟಿಕೋನ ಇದೆ. ಇದನ್ನೂ ಸ್ವಲ್ಪ ಗಮನಿಸಿ. ಜನಪ್ರಿಯ ವಿಜ್ಞಾನ ಸಾಹಿತ್ಯದ ಅಗತ್ಯ ‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ’ ಎಂದು ಡಿವಿಜಿಯವರು ತಮ್ಮ […]