ಗ್ಯಾಜೆಟ್ ಲೋಕ – ೦೧೧ (ಮಾರ್ಚ್ ೧೫, ೨೦೧೨)
Thursday, March 15th, 2012ಮೊಬೈಲ್ ಯಂತ್ರಾಂಶ ಮೊಬೈಲ್ ಫೋನ್ ಎಲ್ಲರಿಗೂ ಬೇಕಾದ ಸಾಧನವಾಗಿದೆ. ಮಾರುಕಟ್ಟೆಯಲ್ಲಿ ಸಾವಿರಾರು ಮಾದರಿಯ ಮೊಬೈಲ್ ಫೋನ್‌ಗಳಿವೆ. ಯಾವುದನ್ನು ಕೊಳ್ಳುವುದು? ಈ ಬಗ್ಗೆ ಕಂತುಗಳಲ್ಲಿ ವಿವರಿಸಲಾಗುವುದು. ಇದು ಮೊದಲನೆಯದು. ಮೊಬೈಲ್ ಫೋನ್‌ಗಳನ್ನು ಕೊಳ್ಳಲು ಹೊರಟಾಗ ಎದುರಾಗುವ ಪ್ರಶ್ನೆ ಯಾವುದನ್ನು ಕೊಳ್ಳುವುದು, ಹೇಗೆ ತೀರ್ಮಾನ ಮಾಡುವುದು, ಎಂದು. ಮೊದಲನೆಯದಾಗಿ ಎಲ್ಲ ವಸ್ತುಗಳನ್ನು ಕೊಳ್ಳುವಾಗ ಮಾಡುವಂತೆ ಇಲ್ಲಿಯೂ ನನಗೆ ಏನೇನು ಸವಲತ್ತುಗಳು ಬೇಕು, ಏನೇನು ಮಾಡಬೇಕು, ಎಂಬುದು ಮುಖ್ಯವಾಗಿರುತ್ತದೆ. ಮೊಬೈಲ್ ಫೋನ್ ಒಂದು ಪುಟಾಣಿ ಗಣಕದಂತೆಯೇ. ಅದರಲ್ಲೂ ಯಂತ್ರಾಂಶ […]