ತಂತ್ರಜ್ಞಾನದ ಕಿಟಕಿ ತೆರೆಯಲಿ ಕನ್ನಡಕೆ
Tuesday, February 21st, 2012ಕನ್ನಡ ಭಾಷೆಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಜೊತೆ ಮುಂದೆ ಕೊಂಡುಹೋಗಬೇಕಾಗಿದೆ. ಕನ್ನಡ ಭಾಷೆಯೆಂದರೆ ಕೇವಲ ಪಂಪ, ರನ್ನ, ಜನ್ನ, ಕುಮಾರವ್ಯಾಸರಲ್ಲ. ಹೊಸ ತಂತ್ರಜ್ಞಾನದ ಜೊತೆ ಕನ್ನಡ ಭಾಷೆಯೂ ಸೇರಿಕೊಳ್ಳಬೇಕಾಗಿದೆ. ಈಗಿನ ಕಾಲದಲ್ಲಿ ಎಲ್ಲವೂ ಮಾಹಿತಿ ತಂತ್ರಜ್ಞಾನವನ್ನೇ ಅವಲಂಬಿಸಿರುವುದುರಿಂದ ಅಲ್ಲಿಂದಲೇ ಕನ್ನಡ ಭಾಷೆಯ ಹೊಸಯುಗದ ಪ್ರಾರಂಭ ಆಗಬೇಕಾಗಿದೆ. ಫೆಬ್ರವರಿ ೨೧ ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ದೈನಂದಿನ ಜೀವನದಲ್ಲಿ ಕನ್ನಡ ಬಳಕೆಯ ಜೊತೆ ತಂತ್ರಜ್ಞಾನದಲ್ಲೂ ಕನ್ನಡ ಹಾಸುಹೊಕ್ಕಾಗಿ ಬೆರೆಯತಕ್ಕದ್ದು. ಈ ತಂತ್ರಜ್ಞಾನದಲ್ಲಿ ಕನ್ನಡವೆಲ್ಲಿದೆ ಸ್ವಲ್ಪ ಗಮನಿಸೋಣ. […]