ನಮ್ಮ ಭಾಷೆಗೆ e-ಭಾಷ್ಯ

Tuesday, July 19th, 2011

- ಡಾ. ಯು. ಬಿ. ಪವನಜ ಒಂದು ಭಾಷೆಯನ್ನು ವೈಜ್ಞಾನಿಕವಾಗಿ ಪದವಿಂಗಡಣೆ ಮಾಡಿ ಅದಕ್ಕೆ ವ್ಯಾಕರಣಸ್ವರೂಪದ ನಿಗದಿಮಾಡುವ ಕ್ರಿಯೆ ಪ್ರಪಂಚದಲ್ಲೇ ಮೊದಲ ಬಾರಿ ಪ್ರಾರಂಭವಾದುದು ಭಾರತದಲ್ಲಿ. ಇದನ್ನು ಗಣಕ ಮತ್ತ ತಂತ್ರಾಂಶ ಬಳಸಿ ಮಾಡುವ ಕೆಲಸದಲ್ಲಿ ನಾವು ಎಲ್ಲಿದ್ದೇವೆ? ನಮ್ಮ ಭಾಷೆ ಎಲ್ಲಿದೆ? ಸ್ವಲ್ಪ ಪರಿಶೀಲಿಸೋಣ. “ರಾಮನು ರಾವಣನನ್ನು ಕೊಂದನು” “ರಮೇಶನು ಒಂದು ಹೊಸ ಕಾರನ್ನು ಕೊಂಡುಕೊಂಡನು” “ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಜರುಗಲಿದೆ” ಹೀಗೆ ಹಲವಾರು ವಾಕ್ಯಗಳನ್ನು ನಾವು ಪ್ರತಿನಿತ್ಯ ಓದುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಇದು ಮಾಹಿತಿಯುಗ. [...]

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು

Friday, April 29th, 2011

ಡಾ| ಯು. ಬಿ. ಪವನಜ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು (word-processing) ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. (desktop publishing). ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ. ಕೆ.ಪಿ. ರಾವ್ [...]