ಕಾಸರಗೋಡಿನ ಸಾಂಸ್ಕೃತಿಕ ಇತಿಹಾಸ – ಒಂದು ನೋಟ
Saturday, January 22nd, 2022ಕಾಸರಗೋಡು ಕನ್ನಡ ನಾಡು – ಡಾ. ವಸಂತಕುಮಾರ ಪೆರ್ಲ ಕಾಸರಗೋಡು ಅಚ್ಚಕನ್ನಡ ನಾಡು. ೧೯೫೬ ರಲ್ಲಿ ಭಾಷಾವಾರು ಪ್ರಾಂತ ರಚನೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳಕ್ಕೆ ಸೇರಿ ಪಡಬಾರದ ಪಾಡು ಪಡುತ್ತಿದೆ. ಇಂದು ಮಲಯಾಳಿಗರ ಆಕ್ರಮಣ ನೀತಿಯಿಂದಾಗಿ ಕಾಸರಗೋಡಿನ ಕನ್ನಡಿಗರು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ತುಳಿತಕ್ಕೆ ಒಳಗಾಗಿದ್ದಾರೆ. ಕಾಸರಗೋಡಿನ ಸಮಸ್ಯೆಗಳನ್ನು ದೊಡ್ಡದಾಗಿ ಹೇಳಿಕೊಳ್ಳುವ ಅವಕಾಶಗಳು ಇತ್ತಿತ್ತಲಾಗಿ ಕಡಿಮೆಯಾಗುತ್ತಿದೆ. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳು ತಮ್ಮದೇ ವ್ಯವಹಾರ ಮತ್ತು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಕಾಸರಗೋಡಿನ ಕಡೆಗೆ ಮುಖ […]