ಆರೋಗ್ಯದ ಲೇಖನಗಳು

ಸಮತೋಲನ ಆಹಾರ(ಬ್ಯಾಲನ್ಸಡ್ ಡಯಟ್)

ಇಂದು ಯಾರೇ ಡಾಕ್ಟರರ ಹತ್ತಿರ ಹೋದರೂ ಒಂದು ಪದ ಉಪಯೋಗಿಸುತ್ತಾರೆ. ‘ನೀವು ಸಮತೋಲನ ಆಹಾರ ತೆಗೆದುಕೊಳ್ಳುತ್ತಿಲ’. ಯಾವುದೇ ಡಯಟೀಷಿಯನ್ ಬಳಿ ಹೋದರೂ ಇದೇ ಮಾತು. ಈ ಸಮತೋಲನ ಆಹಾರವೆಂದರೇನು? ಆಹಾರದಲ್ಲಿ ಆರೂ ಘಟಕಗಳೂ ಇರಬೇಕು. ಅದೂ ಪ್ರಮಾಣಬದ್ಧವಾಗಿರಬೇಕು. ಒಂದೇ ಒಂದು ಘಟಕವನ್ನು ಹೊಟ್ಟೆಯ ತುಂಬಾ ತಿಂದರೂ ಪ್ರಯೋಜನವಿಲ್ಲ. ಯಾವ ಯಾವ ಗುಂಪಿನ ಆಹಾರ ಎಷ್ಟೆಷ್ಟು? ಒಂದು ದಿನದ ಒಬ್ಬನ ಆಹಾರ : ೧. ಏಕದಳ ಧಾನ್ಯಗಳು ೪೬೦ ಗ್ರಾಂ ೨. ಬೇಳೆಗಳು ೪೦ ಗ್ರಾಂ ೩. ಹಸಿ ತರಕಾರಿಗಳು ೪೦ ಗ್ರಾಂ ೪. ಇತರೆ ತರಕಾರಿಗಳು ೪೦ ಗ್ರಾಂ ೫. ಗೆಡ್ಡೆ, ಗೆಣಸುಗಳು ೫೦ ಗ್ರಾಂ ೬. ಹಣ್ಣುಗಳು ೩೦ ಗ್ರಾಂ ೭. ಹಾಲು ೧೫೦ ಗ್ರಾಂ ೮. ಕೊಬ್ಬು ೪೦ ಗ್ರಾಂ ೯. ಬೆಲ್ಲ ೩೦ ಗ್ರಾಂ ಈ ಸಮತೋಲನ ಆಹಾರವೂ ಸಹ ಎಲ್ಲರಿಗೂ, ಯಾವಾಗಲೂ ಸಮತೋಲನವಾಗುವುದಿಲ್ಲ. ೧) ಮಕ್ಕಳ ಬೆಳೆಯುವ ವಯಸ್ಸಿನಲ್ಲಿ: ಬೆಳವಣಿಗೆಗಾಗಿ ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕಾಗುತ್ತದೆ. ಮೂಳೆಗಳ ಬೆಳವಣಿಗೆಗೆ ಹೆಚ್ಚು ಕ್ಯಾಲ್ಷಿಯ್ಂ ಮತ್ತು ರಂಜಕ, ವಿಟಮಿನ್ ‘ಎ’ ಕಣ್ಣುಗಳ ಆರೋಗ್ಯಕ್ಕಾಗಿ, ವಿಟಮಿನ್ ‘ಸಿ’ ಶರೀರದ ರಕ್ಷಣೆಗಾಗಿ, ಹಾಗೂ ವಿಟಮಿನ್ ‘ಡಿ’ ಬೆಳವಣಿಗೆಗಾಗಿ, ಈ ವಿಷಯಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಆಹಾರ ಕೊಡಬೇಕಾಗುತ್ತದೆ. ೨. ಶ್ರಮ ಜೀವಿಗಳಿಗೆ : ಇವರಿಗೆ ಹೆಚ್ಚು ಕಾರ್ಬೋಹೈಡ್ರ್‍ಏಟ್ ಮತ್ತು ಕೊಬ್ಬಿರುವ ಆಹಾರ ಕೊಡಬೇಕು. ೩. ಬಸುರಿಯರಿಗೆ : ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕು. ಜತೆಗೆ ಕಬ್ಬಿಣ, ಕ್ಯಾಲ್ಷಿಯಂ,ಮತ್ತು ರಂಜಕ, ಅಲ್ಲದೆ ಎಲ್ಲಾ ವಿಟಮಿನ್ ಗಳೂ ಹೆಚ್ಚು ಹೆಚ್ಚು ಬೇಕು. ಬಾಣಂತಿಗೂ ಇಂತಹ ಆಹಾರದ ಅವಶ್ಯಕತೆ ಇದೆ. ೪. ಕಾಯಿಲೆಯಿಂದ ಗುಣಮುಖರಾಗುತ್ತಿರುವ ವ್ಯಕ್ತಿಗೆ : ಹೆಚ್ಚು ಪ್ರೊಟೀನ್ ಬೇಕು. ಹೆಚ್ಚು ವಿಟಮಿನ್, ಖನಿಜಗಳು ಅವಶ್ಯಕ. ಜತೆಗೆ ಸುಲಭವಾಗಿ ಜೀರ್ಣವಾಗುವ ಆಹಾರವಿರಬೇಕು. ೫. ವೃದ್ಧಾಪ್ಯದಲ್ಲಿ : ಕಾರ್ಬೋಹೈಡ್ರ್‍ಏಟ್, ಪ್ರೋಟೀನ್ ಗಳಿಗಿಂತ ಹೆಚ್ಚು ವಿಟಮಿನ್, ಲವಣಗಳು, ಕಿಣ್ವಗಳಿರುವ ಆಹಾರ ಮುಖ್ಯ. ಜತೆಗೆ ಸುಲಭವಾಗಿ ಜೀರ್ಣವಾಗುವಂತಿರುವುದು ಅವಶ್ಯಕ. ಹೀಗೆ ಪ್ರತಿಯೊಬ್ಬರೂ ಅವರವರ ಅವಶ್ಯಕತೆಯನ್ನು ಅನುಸರಿಸಿ ಆಹಾರದ ಆರೂ ಘಟಕಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ತರಕಾರಿಗಳನ್ನು ತಾಜಾ ಆಗಿ ಉಪಯೋಗಿಸಬೇಕು. ವೇಳೆ ಕಳೆದಂತೆ ಜೀವಸತ್ವಗಳು ನಾಶವಾಗುತ್ತವೆ. ಆಗತಾನೆ ಕಿತ್ತ ೧೦೦ ಗ್ರಾಂ ಆಲೂಗೆಡ್ಡೆಯಲ್ಲಿ ೩೦ ಮಿ.ಗ್ರಾಂ ‘ಸಿ’ ಜೀವಸತ್ವವಿದೆ. ಒಂದು ತಿಂಗಳು ಹಳತಾದರೆ ೨೦ ಮಿ.ಗ್ರಾಂ ಗೆ ಇಳಿಯುತ್ತದೆ. ಆರು ತಿಂಗಳು ಕಳೆದರೆ ೧೦ ಮಿ.ಗ್ರಾಂ. ಸೊಪ್ಪು, ಹಸಿರು ತರಕಾರಿಗಳಲ್ಲಿ ಇದು ಇನ್ನು ಬೇಗ. ತರಕಾರಿಗಳನ್ನು ಹೆಚ್ಚು ಹೊತ್ತು ನೀರಿನಲ್ಲಿ ನೆನೆಸಿಡಬಾರದು. ನೀರಿನಲ್ಲಿ ಕರಗುವ ಜೀವಸತ್ವಗಳಾದ ‘ಬಿ’ ಮತ್ತು ‘ಸಿ’ ನೀರಿನಲ್ಲಿ ಕರಗಿಹೋಗುತ್ತವೆ. ತರಕಾರಿಗಳನ್ನು ಸಣ್ಣ, ಸಣ್ಣದಾಗಿ ಕತ್ತರಿಸುವುದರಿಂದ ೨೦ ರಿಂದ ೭೦ ಶತಾಂಶ ಜೀವಸತ್ವಗಳು ನಾಶವಾಗುತ್ತವೆ. ತರಕಾರಿಗಳನ್ನು ಬೇಯಿಸಿದ ನೀರನ್ನು ಹೊರಕ್ಕೆ ಚೆಲ್ಲದೇ ‘ಸೂಪ್’ನಂತೆ ಕುಡಿಯಬೇಕು. ಪದೇ,ಪದೇ ಬೇಯಿಸಿ ಉಪಯೋಗಿಸುವುದರಿಂದ ವಿಟಮಿನ್ ನಾಶ. ಅಕ್ಕಿಯನ್ನು ಹೆಚ್ಚು ಪಾಲೀಶ್ ಮಾಡಿದಷ್ಟೂ ಜೀವಸತ್ವಗಳ ನಾಶ. ಪೋಷಕಾಂಶಗಳು : ಪಾಲೀಶ್ ಆಗದ ಅಕ್ಕಿ ಪಾಲೀಶ್ ಆದ ಅಕ್ಕಿ (೧೦೦ ಗ್ರಾಂ ನಲ್ಲಿ ಮಿ.ಗ್ರಾಂ ಮಿ.ಗ್ರಾಂ ಕ್ಯಾಲ್ಸಿಯಂ ೧೦.೦೦ ೧೦.೦೦ ಕಬ್ಬಿಣ ೩.೨೦ ೩.೧೦ ಥಯಾಮಿನ್ ೦.೨೧ ೦.೦೬ ರಿಬೋಫ್ಲೇವಿನ್ ೦.೧೬ ೦.೦೬ ನಯಾಸಿನ್ ೩.೯೦ ೧.೯೦ ನಾರು ೦.೬೦ ೦.೨೦ ಥಯಾಮಿನ್, ನಯಾಸಿನ್ ಮುಂತಾದವು ಬಹಳಷ್ಟು ನಾಶವಾಗುತ್ತದೆ. ಗೋಧಿಯ ಹಿಟ್ಟಿನಲ್ಲಿ ಹೊಟ್ಟು ತೆಗೆಯುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ. ಪೋಷಕಾಂಶಗಳು ಗೋಧಿಯ ಹಿಟ್ಟು ಮೈದಾ ಹಿಟ್ಟು (೧೦೦ ಗ್ರಾಂ ನಲ್ಲಿ) ಮಿ.ಗ್ರಾಂ ಮಿ. ಗ್ರಾಂ ಕ್ಯಾಲ್ಸಿಯಂ ೪೧.೦೦ ೨೩.೦೦ ಕಬ್ಬಿಣ ೦.೪೯ ೦.೧೨ ರಂಜಕ ೩೫೫.೦೦ ೧೨೧.೦೦ ನಯಾಸಿನ್ ೪.೩೦ ೨.೪೦ ರಿಬೋಫ್ಲೇವಿನ್ ೦.೧೭ ೦.೦೭ ಥಯಾಮಿನ್ ೦.೪೯ ೦.೧೨ ನಾರಿನ ಅಂಶ ೧.೯೦ ೦.೩೦ ಕರಿಯುವುದು ಹಾಗೂ ಎಣ್ಣೆಯಲ್ಲಿ ಹುರಿಯುವುದು : ಇದರಿಂದ ೪೦% ‘ಸಿ’, ೭೦% ‘ಇ’ ಜೀವಸತ್ವಗಳು ನಾಶವಾಗುತ್ತವೆ. ಹೆಚ್ಚಿದ ಹಣ್ಣುಗಳು, ತುರಿದ ತರಕಾರಿಗಳನ್ನು ಹೆಚ್ಚು ವೇಳೆ ಗಾಳಿಯಲ್ಲಿ ಬಿಡಬಾರದು. ಜೀರ್ಣಕ್ರಿಯೆ ಗುರುಗಳು : ಬೆಳಗಿನ ತಿಂಡಿ ಏನು? ಒಂದನೇ ವಿದ್ಯಾರ್ಥಿ : ಚಪಾತಿ, ಸಾಗು ಎರಡನೇ ವಿದ್ಯಾರ್ಥಿ : ಪೂರಿ, ಪಲ್ಯ ಮೂರನೇ ವಿದ್ಯಾರ್ಥಿ : ಇಡ್ಲಿ, ಸಾಂಬಾರ್ ನಾಲ್ಕನೇ ವಿದ್ಯಾರ್ಥಿ : ಹಣ್ಣುಗಳು ಗುರುಗಳು : ಹೀಗೆ, ಬೇರೆ ಬೇರೆ ತಿಂಡಿಗಳನ್ನು ತಿಂದಿದ್ದೀರಿ. ಇವೆಲ್ಲಾ ಹೇಗೆ ರಕ್ತಗತವಾಗುತ್ತವೆ? ವಿದ್ಯಾರ್ಥಿಗಳು (ಒಟ್ಟಿಗೆ): ನ
ಮಗೆ ಗೊತ್ತಿಲ್ಲಾ ಸಾರ್, ನೀವೇ ತಿಳಿಸಿ. ಗುರುಗಳು : ಜೀರ್ಣಕ್ರಿಯೆ ನಿಸರ್ಗದ ಒಂದು ಚಮತ್ಕಾರ. ನಾವು ತಿನ್ನುವ ಆಹಾರ ಬಾಯಿಯಿಂದ ಗುದದ್ವಾರದವರೆವಿಗೂ ಪಯಣಿಸುತ್ತದೆ. ಇದರ ಒಟ್ಟು ಉದ್ದ ಮೂವತ್ತಮೂರು ಅಡಿ. ಅನೇಕ ಅಂಗಗಳು ಈ ಕ್ರಿಯಯಲ್ಲಿ ಭಾಗವಹಿಸುತ್ತವೆ. ಆ ಅಂಗಗಳೇ ಅವುಗಳ ಕತೆಯನ್ನು ಹೇಳುತ್ತವೆ, ಕೇಳೋಣ. ಬಾಯಿ : ಮೂಗು, ಆಹಾರದ ವಾಸನೆಯನ್ನು ಗ್ರಹಿಸುತ್ತದೆ. ಕಣ್ಣು ಬಣ್ಣವನ್ನು ನೋಡುತ್ತದೆ. ಆಗ ನನ್ನಲ್ಲಿ ನೀರು ದ್ರವಿಸಲು ಪ್ರಾರಂಭವಾಗುತ್ತದೆ. ಅದು ಬರಿಯ ನೀರಲ್ಲ, ಅದನ್ನು ಜೊಲ್ಲು ಎಂದು ಕರೆಯುತ್ತಾರೆ. ದಿನಕ್ಕೆ ಸುಮಾರು ಎರಡು ಲೀಟರಿನಷ್ಟು ಜೊಲ್ಲು ತಯಾರಾಗುತ್ತದೆ. ಜೀರ್ಣಕ್ರಿಯೆ ಹೊಟ್ಟೆಯಲ್ಲಿ ಪ್ರಾರಂಭವಾಗುವುದೆಂದು ಬಹಳ ಜನರ ನಂಬಿಕೆ. ಇಲ್ಲ, ಅದು ಪ್ರಾರಂಭವಾಗುವುದು ನನ್ನಿಂದ. ಜೀರ್ಣಕ್ರಿಯೆಯಲ್ಲಿ ಎರಡು ವಿಧ. ೧) ಯಾಂತ್ರಿಕ ಕ್ರಿಯೆ ೨) ರಾಸಾಯಿನಿಕ ಕ್ರಿಯೆ ಯಾಂತ್ರಿಕ ಕ್ರಿಯೆಯು ಆಹಾರವನ್ನು ನುರಿಸಿ ನುಣ್ಣಗೆ ಮಾಡುವುದು. ಇದು ಜೀರ್ಣಕ್ರಿಯೆಯ ಮೊದಲ ಹಂತ. ಇದನ್ನು ನನ್ನಲ್ಲಿರುವ ಹಲ್ಲುಗಳು ಮಾಡುವುವು. ಹಲ್ಲುಗಳು : ಮಕ್ಕಳೇ, ನಿಮಗೆ ನಮ್ಮ ಮೇಲಿರುವಷ್ಟು ಕೋಪ ಬಹುಶಃ ಯಾವ ಅಂಗದ ಮೇಲೂ ಇಲ್ಲವೆಂದು ಕಾಣುತ್ತದೆ. ನೀವು ಚಿಕ್ಕವರಾದಾಗಿನಿಂದಲೂ ಹಲ್ಲುಜ್ಜಿಕೊಳ್ಳುವುದು ಬೇಸರದ ಕೆಲಸ. ನೀವು ಉಪಾಧ್ಯಾಯರಿಂದ ಬೈಸಿಕೊಳ್ಳುವುದೂ ಸಹ ನಮ್ಮಿಂದಲೇ. "ಲೋ! ಏಕೋ ಹಲ್ಲು ಕಿಸಿಯುತ್ತಿ." ಒಟ್ಟಿನಲ್ಲಿ ನಮ್ಮ ಬಗ್ಗೆ ನಿಮಗೆ ಆಸಕ್ತಿ ಕಡಿಮೆ. ನಿಮಗೆ ನಾವು ಜ್ನಾಪಕ ಬರುವುದು ನೀವು ಸೀಬೇಕಾಯಿಯನ್ನು ನೋಡಿದಾಗ ಮಾತ್ರ. ಮುಂದೆ ಯುವಕ, ಯುವತಿಯರಾದ ಮೇಲೆ ನಮ್ಮ ಬಗ್ಗೆ ಕರುಣೆ ಬರುತ್ತದೆ. ಅಷ್ಟರಲ್ಲಿ ಅಚಾತುರ್ಯ ನಡೆದುಹೋಗಿರುತ್ತದೆ. ಹೃದಯ ಮುಂತಾದ ಅಂಗಗಳು ನಿಮ್ಮ ಸಹಾಯವನ್ನು ಹೆಚ್ಚು ಬಯಸುವುದಿಲ್ಲ. ಆದರೆ ನಾವು ಹಾಗಲ್ಲ. ನಮ್ಮ ಇರುವಿಕೆಗೆ ನಿಮ್ಮ ಸಹಾಯ ಅಗತ್ಯ. ನಿಮ್ಮ ಸಹಾಯಕ್ಕಾಗಿಯೇ ನಾವು ಇದ್ದೇವೆ. ನಾವು ಬಹಳ ಮಾನಧನರು. ನಮ್ಮನ್ನು ನಿರ್ಲಕ್ಷಿಸಿದರೆ ನಾವು ಬೇಗ ಜಾಗ ಖಾಲಿ ಮಾಡುತ್ತೇವೆ! ನೀವು ಇನ್ನೂ ಚಿಕ್ಕವರಿದ್ದಾಗ ಹಾಲುಹಲ್ಲುಗಳೆಂಬ ಇಪ್ಪತ್ತು ಹಲ್ಲುಗಳ ಒಂದು ಜೋಡಣೆಯಿತ್ತು. ಅದು ಬಿದ್ದು ಶಾಶ್ವತ ಹಲ್ಲುಗಳಾದ ನಾವು ಹುಟ್ಟಿದೆವು. ಕಡೆಯದಾಗಿ ಬರುವವು ಕಡೆಯ ಎರಡು ದವಡೆಯ ಹಲ್ಲುಗಳು. ಅವಕ್ಕೆ "ಬುದ್ಧಿವಂತ ಹಲ್ಲು’ ಗಳೆಂದು ಹೆಸರು (ವಿಸ್ಡಮ್ ಟೀತ್). ಆ ವಯಸ್ಸಿಗೆ ನಿಮಗೆ ಬುದ್ಧಿ ಬಂದಿದೆ ಎಂದು ಅರ್ಥ. ನಿಮಗೆ ಬುದ್ಧಿ ಬಂದಿಲ್ಲದಿದ್ದರೆ ಅದು ನಮ್ಮ ತಪ್ಪಲ್ಲ! ಒಟ್ಟು ನಾವು ಮೂವತ್ತೆರಡು ಹಲ್ಲುಗಳು. ಕೆಳಗಿನ ಸಾಲಿನಲ್ಲಿ ಹದಿನಾರು, ಮೇಲಿನ ಸಾಲಿನಲ್ಲಿ ಹದಿನಾರು. ಬಾಚಿ ಹಲ್ಲುಗಳು, ಕೋರೆಹಲ್ಲು, ದವಡೆಹಲ್ಲುಗಳು, ಮುಂತಾಗಿ ನಮ್ಮ ನಮ್ಮ ಕೆಲಸಗಳನ್ನು ಅನುಸರಿಸಿ ನಮಗೆ ಹೆಸರುಗಳನ್ನು ಇಟ್ಟಿದ್ದಾರೆ. ಆಹಾರವನ್ನು ಹರಿಯಲು, ಕಡಿಯಲು, ಸಿಗಿಯಲು, ಅರೆಯಲು ಬೇರೆ ಬೇರೆ ಹಲ್ಲುಗಳೇ ಅವಶ್ಯ. ಕೋರೆಯ ಹಲ್ಲಿಗೆ ‘ಕಣ್ಣು ಹಲ್ಲು’ (ಐ ಟೀತ್) ಎಂದೂ ಕರೆಯುತ್ತಾರೆ. ಅದು ಕಣ್ಣಿನವರೆಗೂ ಹೋಗಿದೆಯೆಂದು ಹಿಂದಿನವರು ನಂಬಿದ್ದರು. ಅದು ತುಂಬಾ ಆಳಕ್ಕೆ ಇಳಿದಿದೆಯೆಂಬುದು ನಿಜವೇ. ನಾವು ಕ್ಯಾಲ್ಸಿಯಂ ಫಾಸ್ಫೇಟ್ ನಿಂದ ತಯಾರಾಗಿದ್ದೇವೆ. ಆದ್ದರಿಂದಲೇ ಕ್ಯಾಲಿಯಂ ಮತ್ತು ರಂಜಕಯುಕ್ತವಾದ ಆಹಾರವನ್ನು ನೀವು ಹೆಚ್ಚಿಗೆ ಸೇವಿಸಬೇಕು. ಅವುಗಳು ಯಾವುದರಲ್ಲಿರುತ್ತವೆನ್ನುವುದನ್ನು ಆಗಲೇ ಹೇಳಿಯಾಗಿದೆ. ನಮ್ಮ ಮೇಲಿರುವ ಮೊದಲನೆಯ ಪರೆ ಎನಾಮಲ್, ಅದರ ಹಿಂದಿರುವುದೇ ಡೆಂಟೈನ್. ಇದು ಪೂರ್ತಿ ಮೂಳೆಯಿಂದಲೇ ಆಗಿದೆ. ಈ ಡೆಂಟೈನ್ ನ ಹಿಂದೆ ಮೃದುವಾದ ಭಾಗವಿದೆ. ಅಲ್ಲಿ ನರಗಳು, ರಕ್ತನಾಳಗಳು ಎಲ್ಲವೂ ಇವೆ. ನೀವು ದಿನಕ್ಕೆ ಎರಡು ಸಲ ಬೇಕಾಬಿಟ್ಟಿಯಾಗಿ ಉಜ್ಜಿ ಬಹಳ ಶುಚಿಯಾಗಿಟ್ಟುಕೊಂಡಿರುವೆವು ಎಂದು ಭಾವಿಸಿದ್ದೀರಿ. ಬಾಯಿ, ಅಣುಗಳ ಅಕ್ಷಯಸಾಗರ. ಉಳಿದ ಆಹಾರದ ಕಣಗಳ ಮೇಲೆ ಬ್ಯಾಕ್ಟೀರಿಯಾಗಳ ಧಾಳಿಯಿಂದ ಒಂದು ಪೊರೆಯುಂಟಾಗುತ್ತದೆ. ಅದನ್ನು ಫ್ಲೇಕ್ ಎನ್ನುತ್ತಾರೆ. ಇದು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತದೆ. ಇದರಲ್ಲಿ ಆಹಾರದ ಕಣಗಳು ಕೊಳೆತು ಆಮ್ಲತೆಯುಂಟಾಗುತ್ತದೆ. ಈ ಆಮ್ಲ ಎನಾಮಲ್ ಅನ್ನು ಕರಗಿಸುತ್ತದೆ. ಇದು ಸಿಹಿ ಬಾಯಿಗೂ ಕಾರಣವಾಗುತ್ತದೆ. ಅಂದರೆ ತಿಂದ ಸಿಹಿ ಪದಾರ್ಥಗಳ ಕಣಗಳು ಬಾಯಿಯಲ್ಲಿ ಉಳಿದರೆ ಅದು ಬಾಯಿಯಲ್ಲಿಯ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳಿಗೆ ಧಾಳಿ ಮಾಡಲು ಅನುಕೂಲವಾಗುತ್ತದೆ. ಕಣ್ಣಿಗೆ ಕಾಣದ ಫ್ಲೇಕ್(ಪ್ಲೇಕ್) ಜೊಲ್ಲಿನಲ್ಲಿರುವ ಲವಣಗಳನ್ನು ತೆಗೆದುಕೊಂಡು ಬಹಳ ಗಟ್ಟಿಯಾದ ‘ಟಾರ್ ಟಾರ್’ ಎಂಬ ವಸ್ತುವನ್ನು ತಯಾರಿಸಿ ಸಂದುಗಳಲ್ಲಿ ಕಟ್ಟುವಂತೆ ಮಾಡ

Leave a Reply