Vishva Kannada

ತಂತ್ರಜ್ಞಾನದ ಕಿಟಕಿ ತೆರೆಯಲಿ ಕನ್ನಡಕೆ
ಕನ್ನಡ ಭಾಷೆಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಜೊತೆ ಮುಂದೆ ಕೊಂಡುಹೋಗಬೇಕಾಗಿದೆ. ಕನ್ನಡ ಭಾಷೆಯೆಂದರೆ ಕೇವಲ ಪಂಪ, ರನ್ನ, ಜನ್ನ, ಕುಮಾರವ್ಯಾಸರಲ್ಲ. ಹೊಸ ತಂತ್ರಜ್ಞಾನದ ಜೊತೆ ಕನ್ನಡ ಭಾಷೆಯೂ ಸೇರಿಕೊಳ್ಳಬೇಕಾಗಿದೆ. ಈಗಿನ ಕಾಲದಲ್ಲಿ ಎಲ್ಲವೂ ಮಾಹಿತಿ ತಂತ್ರಜ್ಞಾನವನ್ನೇ ಅವಲಂಬಿಸಿರುವುದುರಿಂದ ಅಲ್ಲಿಂದಲೇ ಕನ್ನಡ ಭಾಷೆಯ ಹೊಸಯುಗದ ಪ್ರಾರಂಭ ಆಗಬೇಕಾಗಿದೆ.

ಫೆಬ್ರವರಿ ೨೧ ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ದೈನಂದಿನ ಜೀವನದಲ್ಲಿ ಕನ್ನಡ ಬಳಕೆಯ ಜೊತೆ ತಂತ್ರಜ್ಞಾನದಲ್ಲೂ ಕನ್ನಡ ಹಾಸುಹೊಕ್ಕಾಗಿ ಬೆರೆಯತಕ್ಕದ್ದು. ಈ ತಂತ್ರಜ್ಞಾನದಲ್ಲಿ ಕನ್ನಡವೆಲ್ಲಿದೆ ಸ್ವಲ್ಪ ಗಮನಿಸೋಣ.

ಮೊದಲನೆಯದಾಗಿ ಶೇಕಡ ೯೫ ಮಂದಿ ಬಳಸುವ ಮೈಕ್ರೋಸಾಫ್ಟ್‌ನಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ಬಗ್ಗೆ ಗಮನಿಸೋಣ. ಪ್ರಪಂಚಾದ್ಯಂತ ಬಹುಪಾಲು ಜನರು ಬಳಸುವುದು ಮೈಕ್ರೋಸಾಫ್ಟ್ ಕಂಪೆನಿಯವರ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು (ಆಪರೇಟಿಂಗ್ ಸಿಸ್ಟಮ್). ಇನ್ನು ದೈನಂದಿನ ಕಾರ್ಯಚಟುವಟಿಕೆಗಳಿಗೆ ಬಳಸುವುದು ಮೈಕ್ರೋಸಾಫ್ಟ್‌ನವರದೇ ಆದ ಆಫೀಸ್ ತಂತ್ರಾಂಶಗುಚ್ಛವನ್ನು. ಜನಸಾಮಾನ್ಯರಿಗೆ ಗಣಕಗಳಲ್ಲಿ ಮುಖ್ಯವಾಗಿ ಮಾಡಬೇಕಾದ ಎಲ್ಲ ಕೆಲಸಗಳನ್ನು ವಿಂಡೋಸ್ ಮತ್ತು ಆಫೀಸ್‌ಗಳನ್ನು ಬಳಸಿ ಮಾಡಬಹುದು. ಈ ಕೆಲಸಗಳು ಯಾವುವು? ಅವುಗಳಿಗೆ ಜನರು ಬಳಸುವ ತಂತ್ರಾಂಶಗಳು (ಸಾಫ್ಟ್‌ವೇರ್) ಯಾವುವು? ಒಂದು ಗಣಕವನ್ನು ನಡೆಸುವ ಮೇಲುಸ್ತುವಾರಿಗೆ ವಿಂಡೋಸ್. ಪತ್ರ, ಪುಸ್ತಕ, ಲೇಖನ, ಇತ್ಯಾದಿಗಳ ಬೆರಳಚ್ಚು ಮತ್ತು ಪುಟವಿನ್ಯಾಸಕ್ಕೆ ವರ್ಡ್. ಹಣಕಾಸು ಮತ್ತು ಇತರೆ ಲೆಕ್ಕ ವ್ಯವಹಾರಗಳಿಗೆ ಎಕ್ಸೆಲ್. ದತ್ತಾಂಶಗಳ (ಡಾಟಾಬೇಸ್) ಸಂಗ್ರಹಣೆ ಮತ್ತು ನಿರ್ವಹಣೆಗೆ ಆಕ್ಸೆಸ್. ವಿ-ಅಂಚೆ (ಇಮೈಲ್) ಕಳುಹಿಸಲು ಮತ್ತು ಸ್ವೀಕರಿಸಲು ಔಟ್‌ಲುಕ್. ಭಾಷಣ ಕೊಡಲು ಮತ್ತು ಜೊತೆಗೆ ಸ್ಲೈಡ್‌ಶೋ ಮಾಡಲು ಪವರ್‌ಪೋಯಿಂಟ್. ಈ ವರ್ಡ್, ಎಕ್ಸೆಲ್, ಆಕ್ಸೆಸ್, ಔಟ್‌ಲುಕ್ ಮತ್ತು ಪವರ್‌ಪೋಯಿಂಟ್ ಒಟ್ಟು ಸೇರಿ ಆಫೀಸ್ ತಂತ್ರಾಂಶಗುಚ್ಛ ಆಗಿದೆ.

ಮೈಕ್ರೋಸಾಫ್ಟ್‌ನವರು ೨೦೦೧ರಲ್ಲಿ ಬಿಡುಗಡೆ ಮಾಡಿದ ವಿಂಡೋಸ್ ಎಕ್ಸ್‌ಪಿ ಮತ್ತು ಆಫೀಸ್ ಎಕ್ಸ್‌ಪಿ ತಂತ್ರಾಂಶಗಳಲ್ಲಿ ಕನ್ನಡವನ್ನು ಹಾಸುಹೊಕ್ಕಾಗಿ ಅಳವಡಿಸಲಾಗಿತ್ತು. ನಂತರ ಬಂದ ವಿಸ್ತ ಮತ್ತು ಈಗ ಬಳಕೆಯಲ್ಲಿರುವ ವಿಂಡೋಸ್ ೭ ಕಾರ್ಯಾಚರಣೆಯ ವ್ಯವಸ್ಥೆಗಳಲ್ಲಿ ಕನ್ನಡವನ್ನು ಅಳವಡಿಸಲಾಗಿದೆ ಮಾತ್ರವಲ್ಲ ವಿಂಡೋಸ್ ಎಕ್ಸ್‌ಪಿಯಲ್ಲಿ ನುಸುಳಿದ್ದ ಕನ್ನಡದ ದೋಷಗಳನ್ನು ಸರಿಪಡಿಸಲಾಗಿದೆ. ಹಾಗೆಯೇ ಆಫೀಸ್‌ನ ನಂತರದ ಆವೃತ್ತಿಗಳಾದ ೨೦೦೩, ೨೦೦೭ ಮತ್ತು ೨೦೧೦ಗಳಲ್ಲಿ ಕನ್ನಡವನ್ನು ಯಾವುದೇ ದೋಷವಿಲ್ಲದೆ ಬಳಸಬಹುದು. ಕನ್ನಡದ ಸ್ಪೆಲ್ಲಿಂಗ್ ಚೆಕ್ ಕೂಡ ಮಾಡಬಹುದು. ಮಾತ್ರವಲ್ಲ ವಿಂಡೋಸ್ ಮತ್ತು ಆಫೀಸ್‌ಗಳಿಗೆ ಕನ್ನಡದ ಹೊದಿಕೆ ಅಂದರೆ Language Interface Pack ಕೂಡ ಲಭ್ಯವಿದೆ. ಇದನ್ನು ಹಾಕಿಕೊಂಡರೆ ಮೆನುಗಳು ಕೂಡ ಕನ್ನಡದಲ್ಲಿ ಮೂಡಿಬರುತ್ತವೆ. ಈ ತಂತ್ರಾಂಶಗಳನ್ನು ಉಪಯೋಗಿಸಿ ಇನ್ನಿತರೆ ಯಾವುದೇ ಬಾಹ್ಯ ಲಿಪಿ ತಂತ್ರಾಂಶಗಳ ನೆರವಿಲ್ಲದೆ ಕನ್ನಡವನ್ನು ಸಮಗ್ರವಾಗಿ ಬಳಸಬಹುದು. ಕನ್ನಡದ ಬಳಕೆಗೆ ಬೇಕಾದ ಸವಲತ್ತುಗಳಾದ ಕೀಲಿಮಣೆ ತಂತ್ರಾಂಶ, ಅಕ್ಷರವಿನ್ಯಾಸ (ಫಾಂಟ್), ಶಿಷ್ಟತೆಗೊಳಪಟ್ಟ ಮಾಹಿತಿ ಸಂಗ್ರಹ, ಕನ್ನಡ ಭಾಷೆಯ ಪ್ರಕಾರ ಅಕಾರಾದಿ ವಿಂಗಡಣೆ, ಪದಪರೀಕ್ಷೆ -ಇವುಗಳನ್ನೆಲ್ಲ ವಿಂಡೋಸ್ ಮತ್ತು ಆಫೀಸ್ ತಂತ್ರಾಂಶಗಳು ಒಳಗೊಂಡಿವೆ.

ಆನ್ವಯಿಕ ತಂತ್ರಾಂಶ ತಯಾರಿಗೆ ವಿಶುವಲ್ ಸ್ಟುಡಿಯೋ ಮತ್ತು ದತ್ತ ಸಂಗ್ರಹಣೆಗೆ ಎಸ್‌ಕ್ಯೂಎಲ್ ಸರ್ವರ್ ಇವೆ. ಇವುಗಳನ್ನು ಬಳಸಿ ಕನ್ನಡ ಮಾತ್ರವಲ್ಲ ಪ್ರಪಂಚದ ಇತರೆ ಯಾವ ಭಾಷೆಯನ್ನು ಕೂಡ ಜೊತೆಜೊತೆಗೇ ಬಳಸಿಕೊಂಡು ಆನ್ವಯಿಕ ತಂತ್ರಾಂಶ ತಯಾರಿಸಬಹುದು. ಉದಾಹರಣೆಗೆ ಕರ್ನಾಟಕ ಸರಕಾರದ ಪಡಿತರ ಚೀಟಿ ತಂತ್ರಾಂಶ. ಇದು ಕನ್ನಡದಲ್ಲಿದೆ.

ಮೇಲೆ ನೀಡಿದ ಎಲ್ಲ ಉದಾಹರಣೆಗಳೂ ಕನ್ನಡವನ್ನು ಯುನಿಕೋಡ್ ಶಿಷ್ಟತೆಯಲ್ಲಿ ಬಳಸುತ್ತಿವೆ. ಯುನಿಕೋಡ್ ಎಂಬುದು ಒಂದು ಶಿಷ್ಟತೆ. ಅದು ಯಾವುದೇ ಒಂದು ಕಂಪೆನಿಯ ತಂತ್ರಾಂಶವಲ್ಲ. ಇದರಲ್ಲಿ ಪ್ರಪಂಚದ ಎಲ್ಲ ಭಾಷೆಯ ಎಲ್ಲ ಅಕ್ಷರಗಳಿಗೂ ಪ್ರತ್ಯೇಕ ಜಾಗ ನೀಡಲಾಗಿದೆ. ಅಂದರೆ ಕನ್ನಡ ಭಾಷೆಯ “ಕ”, ಹಿಂದಿ ಭಾಷೆಯ “ಕ” ಹೀಗೆ ಎಲ್ಲ ಅಕ್ಷರಗಳಿಗೂ ತನ್ನದೇ ಆದ ಪ್ರತ್ಯೇಕ ಸಂಕೇತ ಇದೆ. ಯುನಿಕೋಡ್ ಬಳಸುವುದರಿಂದ ಮಾಹಿತಿಯ ಹುಡುಕುವಿಕೆ ಸಾಧ್ಯ. ರಾಜಪ್ಪನ ಮಗ ಕೃಷ್ಣಪ್ಪನ ಪಡಿತರ ಚೀಟಿಯನ್ನು ಸುಲಭವಾಗಿ ಹುಡುಕಿ ತೆಗೆಯಬಹುದು.

ಮುಕ್ತ ತಂತ್ರಾಂಶಗಳಲ್ಲೂ (ಲೈನಕ್ಸ್ ಮತ್ತು ಇತರೆ) ಕನ್ನಡವನ್ನು ಜಾಗತಿಕ ಶಿಷ್ಟತೆಯಾದ ಯುನಿಕೋಡ್ ಮೂಲಕ ಅಳವಡಿಸಲಾಗಿದೆ. ಕನ್ನಡವನ್ನು ಬೆರಳಚ್ಚು ಮಾಡುವುರಿಂದ ಹಿಡಿದು, ಮಾಹಿತಿಯ ಸಂಗ್ರಹಣೆ ಮತ್ತು ವಿಂಗಡಣೆ, ಕನ್ನಡದಲ್ಲಿ ಮೆನು, ಇತ್ಯಾದಿ ಎಲ್ಲ ಸಾಧ್ಯವಾಗಿವೆ.

ಕರ್ನಾಟಕ ಸರಕಾರದ ಕನ್ನಡ ತಂತ್ರಾಂಶ ಸಮಿತಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಏನೇನು ಆಗಬೇಕು ಎಂದು ಸಲಹೆ ನೀಡಿದೆ. ಸರಕಾರವು ಅದರ ಸಲಹೆಗಳನ್ನು ಸ್ವೀಕರಿಸಿದೆ. ಕನ್ನಡಕ್ಕೆ ಇಂದು ಬಹಳ ಅಗತ್ಯವಾಗಿ ಆಗಬೇಕಾಗಿರುವ ಕೆಲಸಗಳನ್ನು ಅದು ಪಟ್ಟಿ ಮಾಡಿದೆ. ಅದರ ಪ್ರಕಾರ ಕೆಲವು ಅತೀ ಅಗತ್ಯ ತಂತ್ರಾಂಶಗಳ ತಯಾರಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಸಮಿತಿಯ ಇನ್ನೊಂದು ಪ್ರಮುಖ ಸಲಹೆಯಾದ ಕನ್ನಡಕ್ಕೆ ಯುನಿಕೋಡೇ ಏಕೈಕ ಶಿಷ್ಟತೆ ಎಂದು ಘೋಷಣೆ ಹೊರಡಿಸಬೇಕಾಗಿದೆ. ಸರಕಾರ ಈ ವಿಷಯದಲ್ಲಿ ಇನ್ನೂ ಮೀನಮೇಷ ಎಣಿಸುತ್ತಿದೆ.

ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡ ಭಾಷೆಯ ಅಳವಡಿಕೆ ಮತ್ತು ಬಳಕೆ ಬಹು ಮುಖ್ಯ. ಮೊಬೈಲ್ ಕ್ಷೇತ್ರಕ್ಕೆ ಬಂದರೆ ಇನ್ನೂ ಕನ್ನಡ ಸರಿಯಾಗಿ ಬಳಕೆಗೆ ಬಂದಿಲ್ಲ. ಅಂತರಜಾಲಕ್ಕೆ ಬಂದರೆ ಅಂತಾರಾಷ್ಟ್ರೀಯ ಡೊಮೈನ್ ಹೆಸರುಗಳಲ್ಲಿ ಕನ್ನಡ ಇನ್ನೂ ಬಳಕೆಗೆ ಬಂದಿಲ್ಲ. ಇದು ಬಳಕೆಗೆ ಬಂದರೆ ಕನ್ನಡದಲ್ಲೇ ಜಾಲತಾಣಗಳ ಹೆಸರುಗಳನ್ನು ನಮೂದಿಸಬಹುದು. ಜಾಲತಾಣ ನಿರ್ಮಾಣಕ್ಕೆ ಬಳಸುವ ಭಾಷಯೆ ಶಿಷ್ಟತೆಯಲ್ಲೂ ಕನ್ನಡ ಬಳಕೆಯ ಶಿಷ್ಟತೆಗೆ ಅಗತ್ಯ ಸೂತ್ರಗಳನ್ನು ಇನ್ನೂ ತಯಾರಿಸಿಲ್ಲ. ಕೇಂದ್ರ ಸರಕಾರದವರು ಈ ಬಗ್ಗೆ ಚರ್ಚಿಸಲು ಆಗಾಗ ಕರೆಯುವ ಸಭೆಗಳಿಗೆ ಕನ್ನಡವನ್ನು ಪ್ರತಿನಿಧಿಸಲು ಯಾರೂ ಹೋಗುತ್ತಿಲ್ಲ.

ಈಗ ತುರ್ತಾಗಿ ಆಗಬೇಕಾದ ಕೆಲಸಗಳು: (೧)ಕನ್ನಡಕ್ಕೆ ಯುನಿಕೋಡೇ ಏಕೈಕ ಶಿಷ್ಟತೆ ಎಂಬ ಘೋಷಣೆ. (೨)ಶಿಷ್ಟತೆ ಬಗ್ಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗುವ ಸಭೆಗಳಲ್ಲಿ ಭಾಗವಹಿಸಲು ಮತ್ತು ಈ ಸಂಸ್ಥೆಗಳಿಗೆ ಕನ್ನಡದ ಬಗ್ಗೆ ಸಲಹೆ ಸೂಚನೆ ಕಳುಹಿಸಲು ಒಂದು ಶಾಶ್ವತ ಸಮಿತಿಯ ರಚನೆ.

- ಡಾ| ಯು. ಬಿ. ಪವನಜ

ಗ್ಯಾಜೆಟ್ ಲೋಕ – ೦೦೭ (ಪೆಬ್ರವರಿ ೧೬, ೨೦೧೨)
ಜನಸಾಮಾನ್ಯರ ಕ್ಯಾಮರ – ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್

ಕೈಗೆಟುಕುವ ಬೆಲೆಯಲ್ಲಿ ನೀಡುವ ಹಣಕ್ಕೆ ಮೋಸವಿಲ್ಲದ ಒಂದು ಕ್ಯಾಮರಾ ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್. ಕಾಂಪಾಕ್ಟ್ ಎಂದರೆ ಎಸ್‌ಎಲ್‌ಆರ್ ಅಲ್ಲದ ಕ್ಯಾಮರಾಗಳಲ್ಲಿ ೮೦೦೦ರೂ. ಒಳಗೆ ದೊರೆಯುವ ಕ್ಯಾಮರಾಗಳಲ್ಲಿ ಒಂದು ಉತ್ತಮ ಕ್ಯಾಮರ ಎನ್ನಬಹುದು. ವೃತ್ತಿನಿರತಲ್ಲದವರಿಗೆ ತೃಪ್ತಿನೀಡಬಲ್ಲ ಕ್ಯಾಮರ.

ಕ್ಯಾಮರಾಗಳಲ್ಲಿ ಪ್ರಮುಖವಾಗಿ ಎರಡು ವಿಧ. ಸುಮ್ಮನೆ ನೋಡಿ ಫೊಟೋ ತೆಗೆಯುವಂತಹದು (ಏಮ್ ಆಂಡ್ ಶೂಟ್) ಮತ್ತು ಎಸ್‌ಎಲ್‌ಆರ್‌ಗಳು. ಈ ಬಗ್ಗೆ ನಾವು ಈಗಾಗಲೇ ವಿವರವಾಗಿ ನೋಡಿ ಆಗಿದೆ (ಗ್ಯಾಜೆಟ್ ಲೋಕ ೧೯-೧-೨೦೧೨, http://bit.ly/gadgetloka3). ಕ್ಯಾಮರಾಗಳ ಬಗ್ಗೆ ತಿಳಿದುಕೊಳ್ಳುವ ಮಾಲಿಕೆಯಲ್ಲಿ ಈ ಸಲ ಒಂದು ಸರಳ ಹಾಗೂ ಕೈಗೆಟುಕಬಲ್ಲ ಏಮ್ ಆಂಡ್ ಶೂಟ್ ಕ್ಯಾಮರಾ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಬ್ಬನೂ ವೃತ್ತಿನಿರತ ಛಾಯಾಗ್ರಾಹಕನಲ್ಲ ಹಾಗೂ ಹಾಗೆ ಆಗಬೇಕಾಗಿಯೂ ಇಲ್ಲ. ಇಂತಹ ಜನಸಾಮಾನ್ಯರಿಗೆಂದೇ ಹಲವು ಸರಳ ಏಮ್ ಆಂಡ್ ಶೂಟ್ ಮಾದರಿಯ ಕ್ಯಾಮರಾಗಳು ಮಾರುಕಟ್ಟೆಯಲ್ಲಿವೆ. ಇವುಗಳ ಮುಖ್ಯ ಗುಣವೈಶಿಷ್ಟ್ಯವೆಂದರೆ ಇವುಗಳನ್ನು ಬಳಸಲು ಎಲ್ಲ ತಾಂತ್ರಿಕ ಆಯ್ಕೆಗಳನ್ನು ತಿಳಿದಿರುವ ಅಗತ್ಯ ಇಲ್ಲದಿರುವುದು. ಕ್ಯಾಮರ ಜಾಲತಾಣಗಳಿಗೆ ಭೇಟಿ ನೀಡಿದರೆ ಈ ಮಾದರಿಯ ಕ್ಯಾಮರಾಗಳ ದೊಡ್ಡ ಆಯ್ಕೆ ಕಣ್ಣಿಗೆ ಬೀಳುತ್ತದೆ. ಈ ಸಾಲಿನಲ್ಲಿ ನಾವೀಗ ನೋಡಹೊರಟಿರುವುದು ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್ ಕ್ಯಾಮರ.

ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್ ಕ್ಯಾಮರಾದ ಗುಣವೈಶಿಷ್ಟ್ಯಗಳು: ೧೬ ಮೆಗಾಪಿಕ್ಸೆಲ್, 5x ಒಪ್ಟಿಕಲ್ ಝೂಮ್, ೩೨ ಶೂಟಿಂಗ್ ವಿಧಾನಗಳು, ಆಟೋಫೋಕಸ್, ಸಿಸಿಡಿ ಸೆನ್ಸರ್, 4x ಡಿಜಿಟಲ್ ಝೂಮ್, ೩ ಇಂಚಿನ ಗಾತ್ರದ ಎಲ್‌ಸಿಡಿ ಪರದೆ, 1280 x 720 ವೀಡಿಯೋ, ಹೈಡೆಫಿನಿಶನ್ ವೀಡಿಯೋ ಶೂಟಿಂಗ್, ಇತ್ಯಾದಿ. ಇದರ ಲೆನ್ಸ್‌ನ ನಾಭಿದೂರ (focal length) ೨೮ ಮಿಮಿ ಯಿಂದ ೧೪೦ ಮಿಮಿ ಗೆ ಸಮಾನವಾಗಿರುತ್ತದೆ. ಇದರ ಹೆಸರಿನ ಮುಂದೆ ಜೋಡಿಕೊಂಡಿರುವ ಐಎಸ್ ಎಂದರೆ image stabilization ಎಂದು. ಅಂದರೆ ಕ್ಯಾಮರ ಅಲ್ಪಸ್ವಲ್ಪ ಅಲ್ಲಾಡಿದರೂ ಫೋಟೋ ಸ್ಪಷ್ಟವಾಗಿರುತ್ತದೆ.

ಸುಮಾರು ೭೭೦೦ರೂ. ಬೆಲೆಬಾಳುವ ಈ ಕ್ಯಾಮರ ಕೊಟ್ಟ ಹಣಕ್ಕೆ ಮೋಸವಿಲ್ಲ ಎನ್ನಬಹುದು. ಉನ್ನತ ಗುಣಮಟ್ಟದ ಕ್ಯಾಮರ ಇದಲ್ಲ. ಆದರೆ ಜನಸಾಮಾನ್ಯರಿಗೆ ಅಗತ್ಯವಿರುವ ಎಲ್ಲ ಸವಲತ್ತುಗಳು ಇದರಲ್ಲಿವೆ. ೨೮ಮಿಮಿ ಯಿಂದ ೧೪೦ ಮಿಮಿ ತನಕ ನಾಭಿದೂರ ಇದೆ. ೨೮ಮಿಮಿ ವೈಡ್ ಆಂಗಲ್ ಎನ್ನಿಸಿಕೊಳ್ಳುತ್ತದೆ ಮತ್ತು ೧೪೦ ಮಿಮಿ ಟೆಲಿ ಎನ್ನಿಸಿಕೊಳ್ಳುತ್ತದೆ. ಈ ಪಾರಿಭಾಷಿಕ ಪದಗಳ ತಲೆ ಬುಡ ಅರ್ಥವಾಗುವಿದಿಲ್ಲ ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ೨೮ಮಿಮಿ ಎಂದರೆ ವೈಡ್ ಆಂಗಲ್. ಅಂದರೆ ಈ ಆಯ್ಕೆಯಲ್ಲಿ ಹತ್ತಿರದಿಂದಲೆ ತುಂಬ ಅಗಲದ ವಸ್ತುವಿನ ಚಿತ್ರ ತೆಗೆಯಬಹುದು. ಒಂದು ಮದುವೆಯ ಆರತಕ್ಷತೆಯಲ್ಲಿ ಸುಮಾರು ೨೫ ಜನ ಸಾಲಾಗಿ ನಿಂತರೆ ತುಂಬ ಹಿಂದೆ ಹೋಗದೆ ಸುಮಾರು ೨೦ ಅಡಿ ದೂರದಿಂದಲೇ ಈ ಎಲ್ಲ ಜನರೂ ಬರುವಂತೆ ಫೋಟೋ ತೆಗೆಯಬಹದು. ಅಂತೆಯೇ ೧೪೦ ಮಿಮಿ ಆಯ್ಕೆಯಲ್ಲಿ ದೂರದಲ್ಲಿರುವ ಒಂದು ಅಳಿಲಿನ ಫೊಟೋ ತೆಗೆಯಬಹುದು.

ಹೂವು, ಚಿಟ್ಟೆ, ಇತ್ಯಾದಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೋ ತೆಗೆಯಲು ಇದರಲ್ಲಿ ಮ್ಯಾಕ್ರೋ ವಿಧಾನ ಇದೆ. ಈ ವಿದಾನದಲ್ಲಿ ೩ ಸೆಂಟಿಮೀಟರಿನಷ್ಟು ಹತ್ತಿರದಿಂದಲೂ ಫೋಟೋ ತೆಗೆಯಬಹುದು. ಬೇರೆ ಬೇರೆ ನಮೂನೆಯ ಫೋಟೋ ತೆಗೆಯಲು ಇದರಲ್ಲಿ ಹಲವು ಪೂರ್ವನಿರ್ಧಾರಿತ ವಿಧಾನಗಳಿವೆ. ಅವುಗಳು – ವ್ಯಕ್ತಿ, ಆಟ, ಮ್ಯಾಕ್ರೊ, ಸೀನರಿ, ಮಕ್ಕಳು, ಸಮುದ್ರಕಿನಾರೆ, ಪಟಾಕಿ, ಇತ್ಯಾದಿ. ನಮ್ಮ ಫೋಟೋ ನಾವೇ ತೆಗೆದುಕೊಳ್ಳಲು ಸೆಲ್ಫ್ ಟೈಮರ್ ಇದೆ. ಅತಿ ವೇಗದಲ್ಲಿ ನಡೆಯುತ್ತಿರುವ ಆಟದಿಂದ ಹಿಡಿದು ಅತಿ ಕಡಿಮೆ ಬೆಳಕಿನಲ್ಲಿ ಕೂಡ ಫೊಟೋ ತೆಗೆಯಲು ಅನುವು ಮಾಡಿಕೊಡುವಂತೆ ಐಎಸ್‌ಓ ಆಯ್ಕೆಗಳು ೮೦ರಿಂದ ೧೬೦೦ರ ತನಕ ಇವೆ. “ಯಾವ ಆಯ್ಕೆಗಳನ್ನು ಕೂಡ ಮಾಡಿಕೊಳ್ಳುವುದೇ ಬೇಡ, ನನಗೆ ಸುಮ್ಮನೆ ಕ್ಲಿಕ್ ಮಾಡಬೇಕು, ಅದರಿಂದಾಗಿ ಫೋಟೋ ಮೂಡಿ ಬರಬೇಕು” ಎನ್ನುವವರಿಗಾಗಿ ಸಂಪೂರ್ಣ ಆಟೋ ವಿಧಾನ ಇದೆ.

ಇದರ ಎಲ್‌ಸಿಡಿ ಪರದೆ ೩ ಇಂಚು ಗಾತ್ರದ್ದಾಗಿದೆ. ಆದರೆ ವ್ಯೂಫೈಂಡರ್ ಇಲ್ಲ ಎನ್ನುವುದು ಒಂದು ಪ್ರಮುಖ ಕೊರತೆ. ಎಲ್‌ಸಿಡಿ ಪರದೆ ನೋಡಿಯೇ ಫೋಟೋ ತೆಗೆಯಬೇಕು. ಇದರ ಒಂದು ಪ್ರಮುಖ ದೋಷವೆಂದರೆ -ವೈಡ್ ಆಂಗಲ್‌ನ ಕೊನೆಯಲ್ಲಿ ಮತ್ತು ಅದೇ ರೀತಿ ಟೆಲಿಯ ಕೊನೆಯಲ್ಲಿ ಫೊಟೋ ತೆಗೆದಾಗ ಫೋಟೋದ ಮೂಲೆಗಳಲ್ಲಿ ಸ್ವಲ್ಪ ಅಸ್ಪಷ್ಟವಾಗಿ ಮೂಡಿಬರುತ್ತದೆ ಎಂದು ಹಲವರು ದೂರಿದ್ದಾರೆ. ಇದರಲ್ಲಿ ೧೬ ಮೆಗಾಪಿಕ್ಸೆಲ್ ತನಕ ಫೋಟೋ ತೆಗೆಯಬಹುದು. ಇದರಿಂದಾಗಿ ಫೋಟೋದ ಫೈಲ್ ತುಂಬ ದೊಡ್ಡ ಗಾತ್ರದ್ದಾಗಿರುತ್ತದೆ. ಇಷ್ಟು ದೊಡ್ಡ ಗಾತ್ರದ ಫೈಲನ್ನು ಕ್ಯಾಮರಾದ ಮೆಮೊರಿ ಕಾರ್ಡ್‌ಗೆ ಬರೆಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಆದುದರಿಂದ ಒಂದು ಫೋಟೋ ತೆಗೆದು ಇನ್ನೊಂದು ಫೋಟೋ ತೆಗೆಯಲು ಮೂರರಿಂದ ಐದು ಸೆಕೆಂಡುಗಳಷ್ಟು ಕಾಲ ಕಾಯಬೇಕಾಗುತ್ತದೆ. ಅಂದರೆ ಯಾವುದಾದರೂ ಸಂದರ್ಭದಲ್ಲಿ ಅತಿ ವೇಗೆವಾಗಿ ಒಂದರ ನಂತರ ಇನ್ನೊಂದು ಫೋಟೋ ತೆಗೆಯಬೇಕಾಗಿ ಬಂದಾಗ ೧೬ ಮೆಗಾಪಿಕ್ಸೆಲ್‌ನ ಬದಲಿಗೆ ಕಡಿಮೆ ರೆಸೊಲೂಶನ್ ಆಯ್ಕೆ ಮಾಡಿಕೊಳ್ಳಬೇಕು.

ಒಟ್ಟಿನಲ್ಲಿ ಹೇಳುವುದಾದರೆ ದೊಡ್ಡ ಕಿಸೆಯೊಳಗೆ ಹಾಕಿಕೊಳ್ಳಬಹುದಾದ, ಕೈಯಲ್ಲಿ ಹಿಡಿದುಕೊಳ್ಳಲು ಸುಲಭವಾದ, ನೀಡುವ ಹಣಕ್ಕೆ ಮೋಸವಿಲ್ಲದ, ಕೈಗೆಟುಕಬಲ್ಲ ಒಂದು ಕ್ಯಾಮೆರ ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್.

ಇಮೇಜ್ ಸ್ಟೆಬಿಲೈಸೇಶನ್ (image stabilization) – ಫೋಟೋ ತೆಗೆಯುವಾಗ ಕ್ಯಾಮರ ಅಲ್ಲಾಡಿದರೂ ಅಥವಾ ತಾನಿರುವ ಜಾಗವನ್ನು ಸ್ವಲ್ಪ ಬದಲಾಯಿಸಿದರೂ ಮೂಡಿಬರುವ ಫೋಟೋ ಸ್ಪಷ್ಟವಾಗಿರುವಂತೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನ. ಈ ತಂತ್ರಜ್ಞಾನ ಅಳವಡಿಸಿರುವ ಲೆನ್ಸ್‌ನ ಒಳಗೆ ಕ್ಯಾಮರಾ ಚಲನೆಯನ್ನು ಅರಿತುಕೊಂಡು ಅದನ್ನು ಋಣಾತ್ಮಗೊಳಿಸಲು ಅಗತ್ಯ ಚಲನೆಯನ್ನು ಮಾಡುವ ಇನ್ನೊಂದು ಕಿರು ಲೆನ್ಸ್ ಅಳವಡಿಸಿರುತ್ತಾರೆ. ಕಾನನ್ ಇದಕ್ಕೆ ಐಎಸ್ (IS) ಎಂದು ಹೆಸರಿಸಿದೆ. ನಿಕಾನ್ ಕಂಪೆನಿಯವರು ಇದನ್ನು ವೈಬ್ರೇಶನ್ ರೆಸಿಸ್ಟೆಂಟ್ (VR – Vibration Resistant) ಎನ್ನುತ್ತಾರೆ. ಕಾನನ್ ಕ್ಯಾಮರಾಗಳಲ್ಲಿ ಕ್ಯಾಮರ ಹೆಸರಿನ ಕೊನೆಯಲ್ಲಿ IS ಇದ್ದಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಅರ್ಥ. ಇದೇ ಮಾತು ಎಸ್‌ಎಲ್‌ಆರ್ ಲೆನ್ಸ್‌ಗಳಿಗೂ ಅನ್ವಯಿಸುತ್ತದೆ.

ಮ್ಯಾಕ್ರೋ ಫೋಟೋಗ್ರಾಫಿ (Macrophotography) – ಇದನ್ನು ಕ್ಲೋಸ್‌ಅಪ್ ಫೊಟೋಗ್ರಾಫಿ ಎಂದೂ ಕರೆಯುತ್ತಾರೆ. ಅತಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವುದು. ಉದಾಹರಣೆಗೆ ನೊಣ. ಚಿಕ್ಕ ವಸ್ತುಗಳನ್ನು ಅವುಗಳ ನಿಜಗಾತ್ರಕ್ಕಿಂತಲೂ ದೊಡ್ಡದಾಗಿ ಫೋಟೋ ತೆಗೆಯುವುದೇ ಮುಖ್ಯವಾಗಿ ಮ್ಯಾಕ್ರೋ ಫೋಟೋಗ್ರಾಫಿಯ ಉದ್ದೇಶ. ಇದರಲ್ಲಿ ಚಿಕ್ಕ ವಸ್ತುಗಳ ಮೇಲ್ಮೈಯ ಚಿಕ್ಕಚಿಕ್ಕ ವಿವರಗಳನ್ನು ದೊಡ್ಡದಾಗಿ ತೋರಿಸಲಾಗುವುದು. ಅಂದರೆ ನೊಣದ ತಲೆಯಲ್ಲಿರುವ ರೋಮಗಳೆಲ್ಲ ಸ್ಪಷ್ಟವಾಗಿ ಕಾಣತಕ್ಕದ್ದು. ಮ್ಯಾಕ್ರೋ ಫೋಟೋಗ್ರಾಫಿ ಸಾಮಾನ್ಯವಾಗಿ ವೈಜ್ಞಾನಿಕ ಅಧ್ಯಯನಗಳಲ್ಲಿ ಹೆಚ್ಚಾಗಿ ಬಳೆಕಯಾಗುತ್ತದೆ. ಆದರೂ ಇತ್ತೀಚೆಗೆ ಬಹುಪಾಲು ಕ್ಯಾಮರಾಗಳಲ್ಲಿ ಈ ಸವಲತ್ತನ್ನು ನೀಡಿರುದುವರಿಂದ ಹವ್ಯಾಸಿ ಛಾಯಾಚಿತ್ರಗಾರರೂ ಮ್ಯಾಕ್ರೋ ಫೋಟೋಗ್ರಾಫಿ ಮಾಡುತ್ತಿದ್ದಾರೆ. ಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿ ಮ್ಯಾಕ್ರೋ ಫೋಟೋಗ್ರಾಫಿಗೆಂದೇ ವಿಶೇಷ ಲೆನ್ಸ್‌ಗಳಿವೆ.

ಗ್ಯಾಜೆಟ್ ಸಲಹೆ

ಸಿದ್ದೇಗೌಡರ ಪ್ರಶ್ನೆ: ಲಾವಾ ಎ೧೦ ಫೋನ್ ಜೊತೆ ಕ್ರಿಯೇಟಿವ್ ಇಪಿ೬೩೦ ಇಯರ್‌ಬಡ್ ಬಳಸಬಹುದೇ?

ಉ: ಸಾಧ್ಯ. ಅಷ್ಟೇ ಅಲ್ಲ, ಯಾವುದೇ ೩.೫ ಮಿಮಿ ಇಯರ್‌ಫೋನ್ ಕಿಂಡಿ ಇರುವ ಸಂಗೀತದ ಸಾಧನದ ಜೊತೆ ಬಳಸಬಹುದು.

-ಡಾ| ಯು. ಬಿ. ಪವನಜ

ಗ್ಯಾಜೆಟ್ ಲೋಕ – ೦೦೬ (ಪೆಬ್ರವರಿ ೦೯, ೨೦೧೨)
ಬಾಗುವ ಮೌಸ್

ಇದೊಂದು ವಿಶಿಷ್ಟ ಮಾದರಿಯ ಮೌಸ್. ಪೆಟ್ಟಿಗೆಯಿಂದ ತೆಗೆಯುವಾಗ ಇದು ನೇರ. ಕೆಲಸ ಮಾಡುವಾಗ ಇದು ವಕ್ರ. ಇದುವೇ ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್. ಆಕಾರದಲ್ಲಿ ಮಾತ್ರ ವಕ್ರ. ಕೆಲಸದಲ್ಲಲ್ಲ!

ಗಣಕ ಬಳಸಲು ಬೇಕಾಗುವ ಒಂದು ಅತಿ ಮುಖ್ಯ ಸಾಧನ ಮೌಸ್. ಗಣಪನಿಗೆ ಇಲಿ ಎಷ್ಟು ಮುಖ್ಯವೋ ಹಾಗೆಯೇ ಗಣಕಕ್ಕೆ ಈ ಮೂಷಿಕ ಅತಿ ಮುಖ್ಯ. ಇದೊಂದು ಮಾಹಿತಿಯ ಊಡಿಕೆಯ (input) ಸಾಧನ. ವಿಂಡೋಸ್ ಬಳಕೆಗೆ ಬಂದ ನಂತರ ಮೌಸ್ ಇಲ್ಲದೆ ಕೆಲಸ ಮಾಡುವುದೇ ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ನೂರಾರು ಮಾದರಿಯ ಮೌಸ್‌ಗಳ ಪಟ್ಟಿಗೆ ಇತ್ತೀಚಿನ ಸೇರ್ಪಡೆ – ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್.

ಬೇರೆಲ್ಲ ಮೌಸ್‌ಗಳಿಗಿಂತ ಇದು ವಿಭಿನ್ನವಾಗಿದೆ. ಇದು ಪೆಟ್ಟಿಗೆಯೊಳಗೆ ಇರುವಾಗ ನೇರವಾಗಿರುತ್ತದೆ. ಬಳಸಬೇಕಾದರೆ ಅದನ್ನು ಬಾಗಿಸಬೇಕಾಗುತ್ತದೆ (ಚಿತ್ರ ನೋಡಿ).  ಅಂದರೆ ಅದನ್ನು ವಕ್ರವಾಗಿಸಬೇಕು. ಇದರ ಅಡಿಯಲ್ಲೊಂದು ನೀಲಿ ದೀಪವಿದೆ. ನೇರವಾಗಿದ್ದಾಗ ಅದು ಉರಿಯುತ್ತಿರುವುದಿಲ್ಲ. ವಕ್ರವಾಗಿಸಿದೊಡನೆ ಅದು ಉರಿಯುತ್ತದೆ. ಈ ನೀಲಿ ದೀಪ ಮೌಸ್ ಕೆಲಸ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ವಕ್ರವಾಗಿಸಿದೊಡನೆ ಅದು ನಮ್ಮ ಅರ್ಧ ಮಡಚಿದ ಅಂಗೈಯ ಆಕಾರಕ್ಕೆ ಸರಿಹೊಂದುತ್ತದೆ. ಮುಂದೆ ಎರಡು ಗುಂಡಿಗಳಿವೆ (ಬಟನ್). ಅವುಗಳ ಕೆಲಸ ಎಲ್ಲ ಮೌಸ್‌ಗಳ ಗುಂಡಿಗಳಂತೆಯೇ. ಎಡ ಮತ್ತು ಬಲ ಬಟನ್‌ಗಳು.

ಬಹುಪಾಲು ಮೌಸ್‌ಗಳಲ್ಲಿ ಎರಡು ಗುಂಡಿಗಳಿರುತ್ತವೆ. ನಡುವೆ ಒಂದು ತಿರುಗುವ ಚಕ್ರವಿರುತ್ತದೆ. ಇದನ್ನು ಸ್ಕ್ರೋಲ್ ವ್ಹೀಲ್ ಎನ್ನುತ್ತಾರೆ. ಈ ತಿರುಗುವ ಚಕ್ರವನ್ನು ಮುಂದಕ್ಕೆ ಅಥವಾ ಹಿಂದಕ್ಕೆ ತಿರುಗಿಸಿ ಓದುತ್ತಿರುವ ಪುಟಗಳನ್ನು ಮೇಲಕ್ಕೆ ಅಥವಾ ಕೆಳಕ್ಕೆ ಸರಿಸಬಹುದು. Ctrl ಕೀಲಿಯನ್ನು ಒತ್ತಿ ಹಿಡಿದು ಈ ಚಕ್ರ ತಿರುಗಿಸಿದರೆ ಕೆಲವು ಬ್ರೌಸರ್‌ಗಳಲ್ಲಿ ಅಕ್ಷರಗಳು ದೊಡ್ಡ ಅಥವಾ ಸಣ್ಣಗಾಗುತ್ತವೆ. ಈ ಆರ್ಕ್ ಟಚ್ ಮೌಸ್‌ನಲ್ಲಿ ಸ್ಕ್ರೋಲ್ ವ್ಹೀಲ್ ಇಲ್ಲ. ಅದರ ಬದಲಿಗೆ ಸ್ಕ್ರೋಲ್ ಪ್ಯಾಡ್ ಇದೆ. ಬಹುತೇಕ ಲ್ಯಾಪ್‌ಟಾಪ್‌ಗಳಲ್ಲಿರುವ ಟಚ್‌ಪ್ಯಾಡ್‌ನಂತೆಯೇ ಇದು ಕೆಲಸ ಮಾಡುತ್ತದೆ. ಚಕ್ರ ತಿರುಗಿಸುವುದರ ಬದಲು ಈ ಪ್ಯಾಡ್‌ನ ಮೇಲೆ ಬೆರಳನ್ನು ಹಿಂದೆ ಅಥವಾ ಮುಂದೆ ಸರಿಸಬೇಕು. ಆಗ ಇದು ಸ್ಕ್ರೋಲ್ ವ್ಹೀಲ್‌ನ ಕೆಲಸ ಮಾಡುತ್ತದೆ. ಕುಟ್ ಕುಟ್ ಎಂದು ಧ್ವನಿ ಕೂಡ ಹೊರಡಿಸಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತದೆ! ಈ ಪ್ಯಾಡ್ ಅನ್ನು ವೇಗವಾಗಿ ಎರಡು ಸಲ ಕುಟ್ಟಿದರೆ ಅದು ಸ್ಕ್ರೋಲ್ ವ್ಹೀಲ್ ಅನ್ನು ಕ್ಲಿಕ್ ಮಾಡಿದರೆ ಮಾಡುವ ಕೆಲಸವನ್ನು ಮಾಡುತ್ತದೆ. ಕುಟ್ ಕುಟ್ ಎಂದು ಧ್ವನಿ ಕೂಡ ಹೊರಡಿಸಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತದೆ! ಪ್ಯಾಡ್‌ನ ಮುಂಭಾಗದಲ್ಲಿ ಕುಟ್ಟಿದರೆ PgUp ಮತ್ತು ಹಿಂಭಾಗದಲ್ಲಿ ಕುಟ್ಟಿದರೆ PgDn ಗುಂಡಿಗಳ ಕೆಲಸ ಮಾಡುತ್ತದೆ.

ಈ ಮೌಸ್ ನಿಸ್ತಂತು ಸಂವಹನ ಮೂಲಕ ಕೆಲಸ ಮಾಡುತ್ತದೆ. ಅಂದರೆ ಮೌಸ್ ಅನ್ನು ಗಣಕಕ್ಕೆ ಜೋಡಿಸಲು ವಯರ್ ಇಲ್ಲ. ಮೌಸ್‌ನ ಜೊತೆ ಒಂದು ಚಿಕ್ಕ ಯುಎಸ್‌ಬಿ ಸಾಧನ ದೊರೆಯುತ್ತದೆ. ಅದನ್ನು ಗಣಕದ ಯುಎಸ್‌ಬಿ ಕಿಂಡಿಗೆ ಜೋಡಿಸತಕ್ಕದ್ದು. ಅದು ಎಷ್ಟು ಚಿಕ್ಕದಾಗಿದೆಯೆಂದರೆ ಕಳೆದು ಹೋಗುವ ಸಾಧ್ಯತೆ ಅಧಿಕ. ಸಾಮಾನ್ಯವಾಗಿ ಅದನ್ನು ಒಮ್ಮೆ ಗಣಕಕ್ಕೆ ಜೋಡಿಸಿಟ್ಟರೆ ತೆಗೆಯುವ ಪ್ರಶ್ನೆಯೇ ಬರುವುದಿಲ್ಲ. ಅದು ಎಷ್ಟು ಚಿಕ್ಕದಿದೆಯೆಂದರೆ ಅದನ್ನು ಜೋಡಿಸಿದ ಲ್ಯಾಪ್‌ಟಾಪ್ ಅನ್ನು ಚೀಲಕ್ಕೆ ತುರುಕಿಸುವಾಗ ಯಾವ ಅಡಚಣೆಯೂ ಆಗುವುದಿಲ್ಲ. ಹಾಗಿದ್ದೂ ಅದನ್ನು ಗಣಕದಿಂದ ತೆಗೆಯಲೇಬೇಕೆಂದಿದ್ದರೆ ಅದನ್ನು ತೆಗೆದು ಮೌಸ್ ಅನ್ನು ನೇರವಾಗಿಸಿ ಅದರ ಅಡಿಯಲ್ಲಿ ಇಟ್ಟರೆ ಸಾಕು. ಅಯಸ್ಕಾಂತವನ್ನು ಅಳವಡಿಸಿರುವ ಮೌಸ್‌ನ ಕೆಳಭಾಗದಲ್ಲಿ ಅದು ಸುಲಭವಾಗಿ ಅಂಟಿಕೊಂಡು ಕುಳಿತುಕೊಳ್ಳುತ್ತದೆ.

ಮೌಸ್ (mouse) -ಗಣಕಕ್ಕೆ ಮಾಹಿತಿಯನ್ನು   ಊಡಿಸುವ ಸಾಧನ. ಇಲ್ಲಿ ಊಡಿಸುವ ಮಾಹಿತಿ ಅಕ್ಷರ ರೂಪದಲ್ಲಿಲ್ಲ. ಬದಲಿಗೆ ಮೌಸ್ ತಾನು ಇರುವ ಸ್ಥಳದ   ನಿರ್ದೇಶನಾಂಕ (coordinates) ವನ್ನು ಗಣಕ್ಕೆ ರವಾನಿಸುತ್ತದೆ. ಈ ಮಾಹಿತಿಯ ಮೂಲಕ ಗಣಕವು ಪರದೆಯ ಮೇಲಿರುವ ಸೂಚಕವನ್ನು   (cursor) ಅತ್ತಿತ್ತ ಚಲಿಸುತ್ತದೆ.   ಈ ಸೂಚಕವು ಯಾವುದಾದರೊಂದು ತಂತ್ರಾಂಶದ ಲಾಂಛನ ಯಾ ಚಿಹ್ನೆ (icon) ಯ ಮೇಲಿದ್ದಾಗ ಮೌಸ್‌ನ್ನು ಕ್ಲಿಕ್ ಮಾಡಿದರೆ ಆ ತಂತ್ರಾಂಶವು ಚಾಲನೆಗೊಳ್ಳುತ್ತದೆ.   ಮೌಸ್‌ನ್ನು ಇನ್ನೂ ಹಲವು ಕಾರ್ಯಗಳಿಗೆ ಬಳಸಲಾಗುತ್ತದೆ. ತಿರುಗುವ ಚಕ್ರವಿರುವ ಮೌಸ್ ಹಲವು ವರ್ಷಗಳಿಂದ   ಬಳಕೆಯಲ್ಲಿದೆ. ಇದರ ತೊಂದರೆಯೆಂದರೆ ಚಕ್ರಗಳಲ್ಲಿ ಕಸ ಧೂಳು ಸಿಕ್ಕಿಕೊಂಡು ಕೆಲಸಕ್ಕೆ ಅಡಚಣೆಯಾಗುವುದು.   ಒಪ್ಟಿಕಲ್ (ದ್ಯುತಿ) ಮೌಸ್‌ನಲ್ಲಿ ಈ ತೊಂದರೆಯಿಲ್ಲ.

ಮೌಸ್‌ಗಳು ಪ್ರಾರಂಭದ ದಿನಗಳಲ್ಲಿ ಒಂದು ಗೋಲವನ್ನು ಹೊಂದಿದ್ದವು. ನಂತರದ ದಿನಗಳಲ್ಲಿ ಈ ಗೋಲದ ಬದಲಿಗೆ ಬೆಳಕನ್ನು ಬಳಸಲು ಪ್ರಾರಂಭಿಸಿದರು. ಈ ಬೆಳಕಿನಲ್ಲೂ ಎರಡು ಬಗೆ. ಅವಕೆಂಪು (infrared) ಮತ್ತು ಕಣ್ಣಿಗೆ ಕಾಣದ ಲೇಸರ್. ಸಾಮಾನ್ಯ ದ್ಯುತಿ ಮೌಸ್‌ಗಳಲ್ಲಿ ಅವಕೆಂಪು ಬಣ್ಣದ ಬೆಳಕನ್ನು ಬಳಸುತ್ತಾರೆ. ಇದು ಮೌಸ್‌ನಿಂದ ಹೊರಟು ತಾನು ಇರುವ ಜಾಗದಿಂದ (ಉದಾ – ಮೇಜು) ಪ್ರತಿಫಲಿತಗೊಂಡು ವಾಪಾಸು ಬರುತ್ತದೆ. ಮೌಸ್ ಚಲಿಸಿದಾಗ ಬೆಳಕು ಹೋಗಿ ಬರುವ ಸಮಯದಲ್ಲಾದ ಬದಲಾವಣೆಯಿಂದ ಈ ಚಲನೆಯನ್ನು ಅರ್ಥ ಮಾಡಿಕೊಂಡು ಸ್ಥಾನ ಬದಲಾದುದನ್ನು ಗಣಕಕ್ಕೆ ತಿಳಿಸುತ್ತದೆ. ಅವಕೆಂಪು ಬಣ್ಣದ ಬೆಳಕಿನ ತೊಂದರೆಯೆಂದರೆ ಗಾಜಿನ ಮೇಲ್ಮೈಯಲ್ಲಿ (ಗಾಜನ್ನು ಹೊದಿಸಿದ ಮೇಜು) ಈ ಮೌಸ್‌ಗಳು ಕೆಲಸ ಮಾಡುವುದಿಲ್ಲ. ಲೇಸರ್ ಮೌಸ್‌ಗಳಲ್ಲಿ ಈ ತೊಂದರೆ ಇಲ್ಲ. ನಾವಿಲ್ಲಿ ಚರ್ಚಿಸುತ್ತಿರುವ ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್‌ನಲ್ಲಿ ಕಣ್ಣಿಗೆ ಕಾಣದ ಲೇಸರ್ ಬೆಳಕನ್ನು ಬಳಸುತ್ತಿರುವುದರಿಂದ ಇದು ಗಾಜಿನ ಮೇಲ್ಮೈ ಮೇಲೆ ಕೂಡ ಕೆಲಸ ಮಾಡುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್ ಲ್ಯಾಪ್‌ಟಾಪ್ ಜೊತೆ ತುಂಬ ಪ್ರಯಾಣ ಮಾಡುವವರಿಗೆ ತುಂಬ ಉಪಯುಕ್ತ ಮೌಸ್. ಇದನ್ನು ಬಳಸಲು ಪ್ರಾರಂಭಿಸಿದಾಗ ಸ್ವಲ್ಪ ವಿಚಿತ್ರ ಅನ್ನಿಸಬಹುದಾದರೂ ಇದಕ್ಕೆ ಹೊಂದಿಕೊಂಡ ನಂತರ ಬಳಕೆಯ ಅನುಭವ ಚೆನ್ನಾಗಿದೆ ಅನ್ನಿಸುವುದು. ಭಾರತೀಯರಿಗೆ ಇದರ ನಿಗದಿತ ಬೆಲೆ ರೂ.3425 ಸ್ವಲ್ಪ ಅಧಿಕವೇ (ನೋಡಿ www.microsoftstore.co.in).

ಗ್ಯಾಜೆಟ್ ಸಲಹೆ

ಪ್ರ: ದಯವಿಟ್ಟು ನನಗೆ ರೂ.5000 ಆಸುಪಾಸಿನಲ್ಲಿ ಉತ್ತಮ ಮೊಬೈಲ್ ಫೋನ್ ತಿಳಿಸಿರಿ.

ಉ: ನೋಕಿಯಾ 5130.

ಗ್ಯಾಜೆಟ್ ಲೋಕ – ೦೦೫ (ಪೆಬ್ರವರಿ ೦೨, ೨೦೧೨)
ದೊಡ್ಡ ಕಿಸೆಯುಳ್ಳವರಿಗಾಗಿ “ದೊಡ್ಡ” ಫೋನು

ಇಂಗ್ಲಿಶಿನಲ್ಲಿ peerson with deep pocket ಎಂಬ ಮಾತು ಚಾಲ್ತಿಯಲ್ಲಿದೆ. ಅದನ್ನು ಕನ್ನಡೀಕರಿಸಿದಾಗ ದೊಡ್ಡ ಕಿಸೆಯುಳ್ಳವರು ಎಂದಾಗುತ್ತದೆ. ಅಂದರೆ ತುಂಬ ಹಣವಿರುವವರು. ಇಲ್ಲಿ ನಾವು ಆ ಮಾತಿನ ಇನ್ನೂ ಒಂದು ಅರ್ಥ ಎಂದರೆ ಗಾತ್ರದಲ್ಲಿ ದೊಡ್ಡ ಕಿಸೆ ಎಂಬುದನ್ನೂ ತೆಗೆದುಕೊಳ್ಳೋಣ. ಗಾತ್ರದಲ್ಲಿ ದೊಡ್ಡ ಕಿಸೆ ಮತ್ತು ತುಂಬ ಹಣವಿರುವವರಿಗಾಗಯೇ ಬಂದಿರುವ ದೊಡ್ಡ ಫೋನು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಂಬುದು ಒಂದು ಫೋನು ಎಂದು ಅವರು ಹೇಳಿಕೊಳ್ಳುತ್ತಾರೆ. ೫.೮ ಇಂಚು ಉದ್ದ ಹಾಗೂ ೩.೩ ಇಂಚು ಅಗಲದ ಇದನ್ನು ಫೋನು ಎಂದೇ ನಾವೂ ಕರೆಯೋಣ. ಆದರೆ ಅದರ ಗಾತ್ರವು ಈ ಮಾತನ್ನು ಪೂರ್ತಿಯಾಗಿ ಪುಷ್ಟೀಕರಿಸುವುದಿಲ್ಲ. ಇದನ್ನು ದೊಡ್ಡ ಫೋನು ಅಥವಾ ಚಿಕ್ಕ ಟ್ಯಾಬ್ಲೆಟ್ ಎನ್ನಬಹುದು. ಇದನ್ನು ಕೊಂಡುಕೊಳ್ಳಲು ದೊಡ್ಡ ಕಿಸೆಯೇ ಬೇಕು. ಯಾಕೆಂದರೆ ಇದರ ಬೆಲೆ ಸುಮಾರು ೩೩ ಸಾವಿರ ರೂ. ಇಟ್ಟುಕೊಳ್ಳಲಂತೂ ದೊಡ್ಡ ಕಿಸೆ ಖಂಡಿತ ಬೇಕು. ಹಿಡಿದುಕೊಳ್ಳಲು ದೊಡ್ಡ ಕೈಯೂ ಇದ್ದರೆ ಒಳ್ಳೆಯದು.

ಅದೆಲ್ಲ ಸರಿ. ಈ ಫೋನಿನ ಗುಣವೈಶಿಷ್ಟ್ಯಗಳ ಬಗ್ಗೆ ಸ್ವಲ್ಪ ಹೇಳಿ ಮೊದಲು ಎನ್ನುತ್ತಿದ್ದೀರಾ? ಸರಿ. ಇದು ೧.೪ ಗಿಗಾಹರ್ಟ್ಝ್‌ನ ಡ್ಯುಯಲ್ ಕೋರ್ ಪ್ರೋಸೆಸರ್ ಹೊಂದಿದೆ. ಇದು ಬಹುಮಟ್ಟಿಗೆ ಶಕ್ತಿಶಾಲಿಯಾದ ಲ್ಯಾಫ್‌ಟಾಪ್‌ನಂತೆಯೇ. ೧ ಗಿಗಾಬೈಟ್ ಪ್ರಾಥಮಿಕ ಮೆಮೊರಿ. ೧೬ ಗಿಗಾಬೈಟ್ ಅಧಿಕ ಮೆಮೊರಿ ಇದೆ. ಅಂದರೆ ಸುಮಾರು ೨೦ ಪೂರ್ಣಪ್ರಮಾಣದ ಸಿನಿಮಾಗಳನ್ನು ಇದರಲ್ಲಿ ಸಂಗ್ರಹಿಸಿಡಬಹುದು. ಸ್ಪರ್ಶಸಂವೇದಿ ಪರದೆಯನ್ನು ಒಳಗೊಂಡಿದೆ. ಈ ಪರದೆಯೂ ವಿಶೇಷ ಗುಣಮಟ್ಟದ್ದು. ಅದಕ್ಕೆ ಗೀರುಗಳು ಆಗುವುದಿಲ್ಲ. ಇದರ ಪರದೆ 1280×800 ಪಿಕ್ಸೆಲ್ ರೆಸೊಲೂಶನ್ ಒಳಗೊಂಡಿದೆ. ಕೆಲವೇ ವರ್ಷಗಳ ಹಿಂದೆ ನಾವು ಬಳಸುತ್ತಿದ್ದ ಗಣಕಗಳ ಪರದೆಯ ರೆಸೊಲೂಶನ್ 800×600 ಇತ್ತು ಎಂಬುದನ್ನು ನೆನಪಿಸಿಕೊಂಡರೆ ಈ ರೆಸೊಲೂಶನ್‌ನ ಮಹತ್ವ ಅರಿವಾಗುವುದು. ಹೈಡೆಫಿನಿಶನ್ ಸಿನಿಮಾಗಳನ್ನು ಕೂಡ ಇದರಲ್ಲಿ ನೋಡಬಹುದು. ಸೂಕ್ತ ಕೇಬಲ್ ಕೊಂಡುಕೊಂಡರೆ ಈ ಫೋನನ್ನು ಟಿವಿಗೆ ಸಂಪರ್ಕಿಸಿ ಹೈಡೆಫಿನಿಶನ್ ಸಿನಿಮಾವನ್ನು ಟಿವಿ ಪರದೆಯಲ್ಲಿ ವೀಕ್ಷಿಸಬಹುದು.

೩ಜಿ ಸಂಪರ್ಕ ಇದೆ. ಹಿಂದೆ ೮ ಮೆಗಾಪಿಕ್ಸೆಲ್ ಕ್ಯಾಮರ ಮತ್ತು ಮುಂದೆ ೨ ಮೆಗಾ ಪಿಕ್ಸೆಲ್ ಕ್ಯಾಮರಾಗಳಿವೆ. ಜೊತೆಗೆ ಫ್ಲಾಶ್ ಕೂಡ ಇದೆ. ಉತ್ತಮ ಗುಣಮಟ್ಟದ ಫೋಟೋ ಮಾತ್ರವಲ್ಲ ವೀಡಿಯೋಗಳನ್ನೂ ತೆಗೆಯಬಹುದು. ವೀಡಿಯೋ ಚಾಟ್ ಮಾಡಬಹುದು. ಇದರಲ್ಲಿ ಅಡಕವಾಗಿರುವ ಎಂಪಿ೩ ಮತ್ತು ಇತರೆ ಸಂಗೀತ ಫೈಲುಗಳ ಪ್ಲೇಯರ್ ಕೂಡ ಉತ್ತಮ ಮಟ್ಟದ್ದಾಗಿದೆ. ಆದರೆ ಇದರ ಜೊತೆ ನೀಡಿರುವ ಇಯರ್‌ಫೋನ್ (ಇಯರ್‌ಬಡ್) ಮೇಲ್ಮಟ್ಟದ್ದಲ್ಲ. ೩೩ ಸಾವಿರ ರೂ ಬೆಲೆ ಬಾಳುವ ಗ್ಯಾಜೆಟ್ ಜೊತೆ ಕನಿಷ್ಠ ಸಾವಿರ ರೂ ಬೆಲೆಯ ಇಯರ್‌ಫೋನ್ ನೀಡುತ್ತಾರೆ ಎಂದು ಆಶಿಸುವುದು ತಪ್ಪಲ್ಲ. ನಾನಂತೂ ಗ್ಯಾಲಕ್ಸಿ ನೋಟ್ ಜೊತೆ ನನ್ನ ಕ್ರಿಯೇಟಿವ್ ಇಪಿ೬೩೦ ಇಯರ್‌ಬಡ್ ಬಳಸುತ್ತೇನೆ.

ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive) – ಸಾಮಾನ್ಯವಾಗಿ ಬಳಕೆಯಲ್ಲಿರುವ ಸ್ಪರ್ಶಸಂವೇದಿ ಪರದೆಗಳಲ್ಲಿ ಎರಡು   ಬಗೆ. ಕೆಪಾಸಿಟಿವ್ ಮತ್ತು ರೆಸಿಸ್ಟಿವ್. ರೆಸಿಸ್ಟಿವ್ ಪರದೆಗಳನ್ನು ಬಳಸಲು ಒಂದು ಪ್ಲಾಸ್ಟಿಕ್   ಕಡ್ಡಿಯನ್ನು ಬಳಸಬೇಕಾಗುತ್ತದೆ. ಇದನ್ನು ಸ್ಟೈಲಸ್ ಎನ್ನುತ್ತಾರೆ. ಈಗ ಈ ಪರದೆಗಳು ಹಳತಾಗುತ್ತಿವೆ.   ಕೆಪಾಸಿಟಿವ್ ಪರದೆಗಳನ್ನು ಬೆರಳಿನಲ್ಲಿ ಒತ್ತಿ ಕೆಲಸ ಮಾಡಬಹದು. ಬ್ಯಾಂಕ್ ಎಟಿಎಂಗಳಲ್ಲಿ ಈ ನಮೂನೆಯ   ಪರದೆಗಳನ್ನು ನೀವೆಲ್ಲ ಬಳಸಿಯೇ ಇರುತ್ತೀರಾ.

ಇದರ ಸ್ಪರ್ಶಸಂವೇದಿ ಪರದೆ ಕೆಪಾಸಿಟಿವ್ ಆಗಿದೆ. ಅಂದರೆ ಬೆರಳಿನಲ್ಲೆ ಬೇಕಾದ ಜಾಗದಲ್ಲಿ  ಒತ್ತಿ ಕೆಲಸ ಮಾಡಬಹುದು. ಹಾಗಿದ್ದೂ ಇದರ ಜೊತೆ ಒಂದು ವಿಶಿಷ್ಟ ಪ್ಲಾಸ್ಟಿಕ್ ಕಡ್ಡಿ (ಸ್ಟೈಲಸ್) ನೀಡಿದ್ದಾರೆ. ಅವರು ಅದನ್ನು S-pen ಎನ್ನುತ್ತಾರೆ. ಈ ಕಡ್ಡಿಯ ಒಂದು ಬದಿಯಲ್ಲಿ ಒಂದು ಚಿಕ್ಕ ಗುಂಡಿ (ಬಟನ್) ಇದೆ. ಅದನ್ನು ಒತ್ತಿ ಕೆಲವು ವಿಶಿಷ್ಟ ಕೆಲಸಗಳನ್ನು ಮಾಡಬಹುದು. ಒಂದು ಉದಾಹರಣೆಯನ್ನು ಗಮನಿಸೋಣ: ಹಂಪಿಗೆ ಹೋಗಿದ್ದೀರಿ. ಅಲ್ಲಿಯ ಮೆಟ್ಟಿಲು ಮೆಟ್ಟಿಲುಗಳುಳ್ಳ ಕೆರೆಯ ಫೋಟೋ ತೆಗೆದಿದ್ದೀರಿ. ಆ ಫೋಟೋದಲ್ಲಿ ನೀರು ಬಂದು ಬೀಳುವ ಜಾಗಕ್ಕೆ ಗುರುತು ಮಾಡಿ ಅದನ್ನು ಗೆಳೆಯರಿಗೆ ಕಳುಹಿಸಬೇಕಾಗಿದೆ. ಈ ಎಲ್ಲ ಕೆಲಸಗಳನ್ನು ಗ್ಯಾಲಕ್ಸಿ ನೋಟ್ ಬಳಸಿ ಸುಲಭವಾಗಿ ಮಾಡಬಹುದು. ಮೊದಲು ಫೋಟೋ ತೆಗೆಯಬೇಕು. ನಂತರ ಫೋಟೋವನ್ನು ವೀಕ್ಷಿಸುತ್ತ ಅದರ ಮೇಲೆ ಸ್ಟೈಲಸ್ (S-pen) ಬಳಸಿ ಬಾಣ ಗುರುತು ಮಾಡಿ ಇಮೈಲ್ ಮೂಲಕ ಕಳುಹಿಸಬಹುದು. ಜೊತೆಗೆ ನೀಡಿದ ಚಿತ್ರದಲ್ಲಿ ಇದನ್ನೇ ಮಾಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ನ ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ ೨.೩ (ಜಿಂಜರ್‌ಬ್ರೆಡ್). ಸದ್ಯದಲ್ಲೇ ಇದನ್ನು ಆವೃತ್ತಿ ೪ಕ್ಕೆ (ಐಸ್‌ಕ್ರೀಂ) ನವೀಕರಿಸುವುದಾಗಿ ಸ್ಯಾಮ್‌ಸಂಗ್ ಹೇಳಿಕೊಂಡಿದೆ. ಆಂಡ್ರೋಯಿಡ್ ಫೋನ್‌ಗಳ ಎಲ್ಲ ಗುಣವೈಶಿಷ್ಟ್ಯಗಳು ಇದರಲ್ಲಿವೆ. ಆಂಡ್ರೋಯಿಡ್ ಮಾರುಕಟ್ಟೆಯಿಂದ (market.android.com) ನಿಮಗಿಷ್ಟವಾದ ತಂತ್ರಾಂಶಗಳನ್ನು (app) ಡೌನ್‌ಲೋಡ್ ಮಾಡಿಕೊಳ್ಳಬಹುದು ಹಾಗೂ ಕೊಂಡುಕೊಳ್ಳಬಹುದು. ಸ್ಯಾಮ್‌ಸಂಗ್‌ನವರು ಒಂದು ಒಳ್ಳೆ ಕೆಲಸ ಮಾಡಿದ್ದಾರೆ. ಅದುವೇ ಭಾರತೀಯ ಭಾಷೆಗಳ ಅಳವಡಿಕೆ. ಕಾರ್ಯಾಚರಣೆಯ ವ್ಯವಸ್ಥೆಯ ಮಟ್ಟದಲ್ಲೇ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳನ್ನು ಯುನಿಕೋಡ್ ಮೂಲಕ ಅಳವಡಿಸಿದ್ದಾರೆ. ಕನ್ನಡದಲ್ಲಿ ಇಮೈಲ್, ಎಸ್‌ಎಂಎಸ್, ಚಾಟಿಂಗ್ ಎಲ್ಲ ಮಾಡಬಹುದು. ಕನ್ನಡದ ಜಾಲತಾಣಗಳನ್ನು ವೀಕ್ಷಿಸಬಹುದು. ಕನ್ನಡದ ಕಡತಗಳನ್ನು ಓದಬಹುದು ಹಾಗೂ ಸಂಪಾದಿಸಬಹದು. ಬಹುಮಟ್ಟಿಗೆ ಒಂದು ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಮಾಡಬಹುದಾದ ಜನಸಾಮಾನ್ಯರಿಗೆ ದಿನನಿತ್ಯ ಅಗತ್ಯವಿರುವ ಎಲ್ಲ ಕೆಲಸಗಳನ್ನು ಮಾಡಬಹುದು. ಕನ್ನಡದಲ್ಲಿ ಬೆರಳಚ್ಚು ಮಾಡಲು ಮಾತ್ರ ಸ್ಯಾಮ್‌ಸಂಗ್‌ನವರು ಯಾವುದೇ ಕೀಲಿಮಣೆಯ ತಂತ್ರಾಂಶ ನೀಡಿಲ್ಲ. ಆದರೆ ಆಂಡ್ರೋಯಿಡ್ ಮಾರುಕಟ್ಟೆಯಲ್ಲಿ ದೊರೆಯುವ anysoftkeyboard ಮತ್ತು kannada for anysoftkeyboard (ಇವೆರಡೂ ಉಚಿತ) ಬಳಸಿ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು. ಚಿತ್ರ ನೋಡಿ.

ಇತರೆ ಗುಣವೈಶಿಷ್ಟ್ಯಗಳು: ಸ್ಟೀರಿಯೋ ಎಫ್‌ಎಂ ರೇಡಿಯೋ; ೨ಜಿ, ೩ಜಿ, ೪ಜಿ ಸಂಪರ್ಕ; ಬಹುಸ್ಪರ್ಶ (ಮಲ್ಟಿಟಚ್) ಕೆಪಾಸಿಟಿವ್ ಪರದೆ, ಎಂಪಿ೩ ಮತ್ತು ಇತರೆ ಧ್ವನಿ ಹಾಗೂ ವೀಡಿಯೋ ಪ್ಲೇಯರ್, ೩೨ ಗಿಗಾಬೈಟ್ ತನಕ ಮೆಮೊರಿ ಹೆಚ್ಚಿಸಲು ಮೈಕ್ರೋ ಎಸ್‌ಡಿ ಕಾರ್ಡ್‌ಗೆ ಜಾಗ, ವೈಫೈ, ಬ್ರಾಡ್‌ಬ್ಯಾಂಡ್ ಅಂತರಜಾಲ ಸಂಪರ್ಕ, ಸ್ಟೀರಿಯೋ ಬ್ಲೂಟೂತ್, ಅಕ್ಸೆಲೆರೋಮೀಟರ್, ಮ್ಯಾಗ್ನೆಟೋಮೀಟರ್, ಜಿಪಿಎಸ್, ಇತ್ಯಾದಿ.

ಹೊಸ ಜಾಗಕ್ಕೆ ಹೋದಾಗ ಪ್ರಾರ್ಥನೆ ಮಾಡಲು ಪೂರ್ವ (ಅಥವಾ ಪಶ್ಚಿಮ) ದಿಕ್ಕು ಯಾವುದು ಎಂದು ತಿಳಿಯಲು ಇದರಲ್ಲಿರುವ ಮ್ಯಾಗ್ನೆಟೋಮೀಟರ್ ಬಳಸಬಹುದು. ನಕ್ಷತ್ರ ವೀಕ್ಷಣೆ ಮಾಡಲು ಗೂಗಲ್ ಸ್ಕೈಮ್ಯಾಪ್ ಬಳಸಬಹುದು. ನಾನು ಬೆಂಗಳೂರಿನಿಂದ ಹಂಪಿಗೆ ಕಾರು ಚಲಾಯಿಸಲು ರಸ್ತೆ ತಿಳಿಯಲು ಇದರ ಗೂಗಲ್ ಮ್ಯಾಪನ್ನು ಮಾತ್ರ ಬಳಸಿದ್ದೆ, ರಸ್ತೆ ಬದಿಯಲ್ಲಿ ಯಾರಲ್ಲೂ ದಾರಿ ವಿಚಾರಿಸಲಿಲ್ಲ.

ಒಟ್ಟಿನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ದುಡ್ಡಿದ್ದವರಿಗೆ ಒಂದು ಅತ್ಯುತ್ತಮ ಗ್ಯಾಜೆಟ್.

ಗ್ಯಾಜೆಟ್ ಸಲಹೆ

ನಾಗರಾಜ್ ಅವರ ಪ್ರಶ್ನೆ: ನನಗೆ ೩೦ ಸಾವಿರ ರೂಪಾಯಿಯ ಒಳಗೆ ಒಂದು ಉತ್ತಮ ಡಿಎಸ್‌ಎಲ್‌ಆರ್ ಕ್ಯಾಮರಾ ತೆಗೆದುಕೊಳ್ಳಬೇಕಾಗಿದೆ. ಯಾವುದನ್ನು ಕೊಳ್ಳಬಹುದು?

ಉ: ಕ್ಯಾನನ್ 1100D ಅಥವಾ ನಿಕೋನ್ D3100

ಗ್ಯಾಜೆಟ್ ಲೋಕ – ೦೦೪ (ಜನವರಿ ೨೬, ೨೦೧೨)
ಕ್ರಿಯೇಟಿವ್ ಇಪಿ ೬೩೦ – ಕಿವಿಯೊಳಗೆ ಅವಿತು …

ಸಂತೆಯೊಳಗೊಂದು ಮನೆಯ ಮಾಡಿ ಗದ್ದಲಗಳಿಗಂಜಿದೊಡೆಂತಯ್ಯಾ? ಗದ್ದಲದೊಳಗಡೆಯೇ ಇದ್ದು ಸಂಗೀತ ಕೇಳಬೇಕೆಂದರೆ ಎಂತಯ್ಯಾ? ಅದಕೆಂದೇ ಬಂದಿದೆ ಕ್ರಿಯೇಟಿವ್ ಇಪಿ೬೩೦ ಮಾದರಿಯ ಇಯರ್‌ಬಡ್‌ಗಳು.

ಯಾವುದೇ ಸಂಗೀತ ಉಪಕರಣದಿಂದ ಸಂಗೀತ ಆಲಿಸಲು ಇರುವ ಸಾಧನಗಳ ಸಾಲಿನಲ್ಲಿ ಕೊನೆಯ ಹಂತ ಸ್ಪೀಕರ್. ಇದನ್ನು ಎಲ್ಲರೂ ನೋಡಿಯೇ ಇರುತ್ತೀರಾ. ಸ್ಪೀಕರ್ ಮೂಲಕ ಹೊಮ್ಮುವ ಧ್ವನಿಯನ್ನು ಕೋಣೆಯಲ್ಲಿರುವ ಅಥವಾ ಹಾಲ್‌ನಲ್ಲಿರುವ ಎಲ್ಲರೂ ಆಲಿಸಿ ಆನಂದ ಪಡಬಹುದು. ಒಬ್ಬರಿಗೆ ಮಾತ್ರ ಸಂಗೀತ ಕೇಳಬೇಕಾದಾಗ? ಅಥವಾ ಮನೆಯಿಂದ ಹೊರಗೆ ಪ್ರಯಾಣ ಮಾಡುತ್ತಿರುವಾಗ ಬಸ್ಸಿನಲ್ಲಿ ರೈಲಿನಲ್ಲಿ ಕಾರಿನಲ್ಲಿ ಸಂಗೀತ ಆಲಿಸಿ ಆನಂದಿಸಬೇಕಾದಾಗ? ಅಂತಹ ಸಂದರ್ಭಗಳಿಗೆಂದೇ ಇಯರ್‌ಫೋನ್ ಹಾಗೂ ಹೆಡ್‌ಫೋನ್‌ಗಳ ಆವಿಷ್ಕಾರ ಆಗಿದೆ. ಇವುಗಳೇನು ಇತ್ತೀಚೆಗೆ ಮಾರುಕಟ್ಟೆಗೆ ಬಂದವುಗಳಲ್ಲ. ಹಲವು ದಶಕಗಳಿಂದಲೇ ಅವುಗಳು ಬಳಕೆಯಲ್ಲಿವೆ.

ಕಿವಿಗೆ ನೇರವಾಗಿ ಸಂಗೀತವನ್ನು ಉಣಿಸುವ ಈ ಕಿರು ಸ್ಪೀಕರ್‌ಗಳಲ್ಲಿ ಮುಖ್ಯವಾಗಿ ಮೂರು ಬಗೆ – ಕಿವಿಯ ಹೊರಗೆ ಕುಳಿತುಕೊಳ್ಳುವ ದೊಡ್ಡ ಗಾತ್ರದ ಹೆಡ್‌ಫೋನ್, ಕಿವಿಯ ಒಳಗೆ ಕುಳಿತುಕೊಳ್ಳುವ ಇಯರ್‌ಫೋನ್‌ಗಳು ಮತ್ತು ಕಿವಿಯ ಕಾಲುವೆಯೊಳಗೆ ಹೋಗಿ ಅವಿತುಕೊಳ್ಳುವ ಇಯರ್‌ಬಡ್ ಅನ್ನಿಸಿಕೊಳ್ಳುವ ಇಯರ್‌ಫೋನ್‌ಗಳು. ಪ್ರತಿಯೊಂದಕ್ಕೂ ತನ್ನದೇ ಆದ ಉಪಯೋಗಗಳಿವೆ. ಹೆಡ್‌ಫೋನ್‌ಗಳನ್ನು ಸಾಮಾನ್ಯವಾಗಿ ಸ್ಟುಡಿಯೋ ಅಥವಾ ಮನೆಗಳಲ್ಲಿ ಬಳಸುತ್ತಾರೆ. ಅವುಗಳನ್ನು ಬಸ್ಸು ರೈಲುಗಳಲ್ಲಿ ಪ್ರಯಾಣಿಸುವಗ ಅಥವಾ ರಸ್ತೆ ಬದಿಯಲ್ಲಿ ಗಾಳಿಸೇವನೆಗೆ ಹೋಗುವಾಗ ಕಿವಿಯ ಮೇಲೆ ಇಟ್ಟುಕೊಂಡು ಹೋಗುವಂತಿಲ್ಲ. ಇಯರ್‌ಫೋನ್‌ಗಳನ್ನು ಸಾಮಾನ್ಯವಾಗಿ ಎಲ್ಲರೂ ಬಸ್ಸು ರೈಲುಗಳಲ್ಲಿ ಪ್ರಯಾಣಿಸುವಾಗ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಬಳಸುತ್ತಾರೆ. ಇಯರ್‌ಬಡ್‌ಗಳನ್ನೂ ಇದೇ ರೀತಿಯಲ್ಲಿ ಬಳಸುತ್ತಾರೆ. ಇಯರ್‌ಬಡ್‌ಗಳು ಕಿವಿಯ ಕಾಲುವೆಯೊಳಗೆ ಹೋಗಿ ಕುಳಿತುಕೊಳ್ಳುವುದರಿಂದ ಅವುಗಳ ಉಪಯುಕ್ತತೆಗೆ ಒಂದು ಗರಿ ಹೆಚ್ಚಿಗೆ ಇದೆ. ಅದುವೇ ಗದ್ದಲ ನಿವಾರಣೆ (ಪ್ರತ್ಯೇಕತೆ)  (noise elimination). ಇವುಗಳು ಕಿವಿಯ ಕಾಲುವೆಗೆ ಸರಿಯಾಗಿ ಹೊಂದಿಕೊಳ್ಳುತ್ತವೆ. ಆದುದರಿಂದ ಹೊರಗಡೆ ನಡೆಯುತ್ತಿರುವ ಗದ್ದಲವನ್ನು ಕಿವಿಯೊಳಗೆ ಹೋಗದಂತೆ ಅದು ತಡೆಗಟ್ಟುತ್ತದೆ. ಇಯರ್‌ಬಡ್ ಹಾಕಿಕೊಂಡವನಿಗೆ ಸಂಗೀತ ಮಾತ್ರ ಕೇಳುತ್ತದೆ, ಹೊರಗಡೆಯ ಗದ್ದಲ ಕೇಳುವುದಿಲ್ಲ.

ಈ ಸಲ ಇಂತಹ ಒಂದು ಇಯರ್‌ಬಡ್ ಇಯರ್‌ಫೋನನ್ನು ಗಮನಿಸೋಣ. ಅದುವೇ ಕ್ರಿಯೇಟಿವ್ ಕಂಪೆನಿಯ ಇಪಿ೬೩೦ (Creative EP630 earbud). ಇದನ್ನು “ಕೊಟ್ಟ ಹಣಕ್ಕೆ ಮೋಸವಿಲ್ಲ”ಈ ಸಲ ಇಂತಹ ಒಂದು ಇಯರ್‌ಬಡ್ ಇಯರ್‌ಫೋನನ್ನು ಗಮನಿಸೋಣ. ಅದುವೇ ಕ್ರಿಯೇಟಿವ್ ಕಂಪೆನಿಯ ಇಪಿ೬೩೦ (Creative EP630 earbud). ಇದನ್ನು ಕೊಟ್ಟ ಹಣಕ್ಕೆ ಮೋಸವಿಲ್ಲ ಹಣೆಪಟ್ಟಿ ನೀಡಬಹುದಾದ ಗ್ಯಾಜೆಟ್‌ಗಳ ಪಟ್ಟಿಯಲ್ಲಿ ಸೇರಿಸಬಹುದು. ಕಂಪೆನಿಯವರು ಇದರ ಬೆಲೆಯನ್ನು ಸುಮಾರು ೧೨೦೦ರೂ. ಎಂದು ನಿಗದಿಪಡಿಸಿದ್ದರೂ ಇದು ಮಾರುಕಟ್ಟೆಯಲ್ಲಿ ಸುಮಾರು ೭೫೦ ರೂ.ಗಳಿಗೆ ಕೂಡ ದೊರೆಯುತ್ತಿತ್ತು. ನಾನು ಕೊಟ್ಟಿದ್ದು ೭೫೦ರೂ. ನಾನು ಕೊಂಡುಕೊಂಡು ಸುಮಾರು ಎರಡು ವರ್ಷಗಳಿಗೆ ಹತ್ತಿರ ಹತ್ತಿರವಾಯಿತು. ಇದು ತನಕ ಯಾವುದೇ ತೊಂದರೆ ಇಲ್ಲದೆ ಕೆಲಸ ಮಾಡುತ್ತಿದೆ.

ಇಪಿ೬೩೦ ಇಯರ್‌ಬಡ್‌ನಲ್ಲಿ ಇಯರ್‌ಫೋನ್‌ನಲ್ಲಿರಬೇಕಾದ ಎಲ್ಲ ಗುಣವೈಶಿಷ್ಟ್ಯಗಳಿವೆ. ಇದು ಕಿವಿಯ ಕಾಲುವೆಯೊಳಗೆ ಕುಳಿತುಕೊಳ್ಳುತ್ತದೆ. ಲೇಖನ ಬರೆಯುತ್ತಿರುವಾಗ ಇದರಲ್ಲಿ ಸಂಗೀತ ಆಲಿಸುತ್ತಿದ್ದರೆ ಇತರರು ಕರೆದರೆ, ಕಿರುಚಿದರೆ ನಿಮಗೆ ತೊಂದರೆ ಆಗುವುದಿಲ್ಲ! ಹೊರಗಿನ ಗದ್ದಲವನ್ನು ಸುಮಾರು ೮೦% ಇದು ಕಡಿತಗೊಳಿಸುತ್ತದೆ. ಪ್ರಯಾಣ ಮಾಡುವಾಗ, ಸಂತೆಯಲ್ಲಿ ನಡೆದಾಡುವಾಗ ಎಲ್ಲ ಬಳಸಲು ಉಪಯುಕ್ತ. ಚಿಕ್ಕ ಗಾತ್ರದ್ದಾದರೂ ಉತ್ತಮ ಬಾಸ್ ಧ್ವನಿಯನ್ನು ಹೊರಡಿಸುತ್ತದೆ.

ಬಾಸ್ ಮತ್ತು ಟ್ರೆಬ್ಲ್ (Bass and treble) – ಯಾವುದೇ   ಸಂಗೀತದ ಸ್ಥಾಯಿಯನ್ನು ತಿಳಿಸುವ ಮೌಲ್ಯ. ಅತಿ ಕೆಳಗಿನದನ್ನು ಬಾಸ್ ಎನ್ನುತ್ತಾರೆ. ಉದಾಹರಣೆಗೆ   ಡೋಲು, ಮೃದಂಗ, ಇತ್ಯಾದಿ.   ಅತಿ ಹೆಚ್ಚಿನದನ್ನು ಟ್ರೆಬ್ಲ್ ಎನ್ನುತ್ತಾರೆ. ಉದಾಹರಣೆಗೆ ತಂತಿವಾದ್ಯಗಳು, ಸಂತೂರ್, ಗೆಜ್ಜೆ, ಇತ್ಯಾದಿ.   ಅಧಿಕ ಕಂಪನಾಂಕದ (ಹರ್ಟ್ಝ್) ಧ್ವನಿ ಟ್ರೆಬ್ಲ್ ಎನಿಸಿಕೊಳ್ಳುತ್ತದೆ ಹಾಗೂ ಕಡಿಮೆ ಕಂಪನಾಂಕದ ಧ್ವನಿ   ಬಾಸ್ ಎನಿಸಿಕೊಳ್ಳುತ್ತದೆ. ಯಾವುದೇ ಸ್ಪೀಕರ್ ಉತ್ತಮ ಅನ್ನಿಸಿಕೊಳ್ಳಬೇಕಾದರೆ ಬಾಸ್ ಮತ್ತು ಟ್ರೆಬ್ಲ್   ಧ್ವನಿಗಳನ್ನು ಉತ್ತಮವಾಗಿ ಪುನರುತ್ಪಾದನೆ ಮಾಡತಕ್ಕದ್ದು. ಸಾಮಾನ್ಯವಾಗಿ ಚಿಕ್ಕ ಗಾತ್ರದ ಸ್ಪೀಕರ್‌ಗಳು   ಉತ್ತಮ ಬಾಸ್  ಹೊಂದಿರುವುದಿಲ್ಲ.

ಇಪಿ೬೩೦ರ ಕ್ಯಾಟಲೋಗ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ (ನೋಡಿ – http://bit.ly/ep630) ಇದು ೬ ಹರ್ಟ್ಝ್ ನಿಂದ ಹಿಡಿದು ೨೩ ಸಾವಿರ ಹರ್ಟ್ಝ್ ತನಕ ಎಲ್ಲ ಕಂಪನಾಂಕಗಳ ಧ್ವನಿಗಳನ್ನು ಉತ್ತಮವಾಗಿ ಪುನರುತ್ಪತ್ತಿ ಮಾಡಬಲ್ಲದು. ಮನುಷ್ಯರು ಸುಮಾರು ೨೦ ಹರ್ಟ್ಝ್ ನಿಂದ ಹಿಡಿದು ೨೦ ಸಾವಿರ ಹರ್ಟ್ಝ್ ತನಕ ಕಂಪನಾಂಕದ ಧ್ವನಿಗಳನ್ನು ಕೇಳಿಸಿಕೊಳ್ಳಬಲ್ಲರು. ನನ್ನಲ್ಲಿರುವ ಇಪಿ೬೩೦ಯನ್ನು ಬಳಸಿ ನೋಡಿರುವ ಪ್ರಕಾರ ಇದು ಬಾಸ್ ಮತ್ತು ಟ್ರೆಬ್ಲ್‌ಗಳೆರಡನ್ನೂ ಉತ್ತಮವಾಗಿ ಪುನರುತ್ಪತ್ತಿ ಮಾಡಬಲ್ಲದು. ಹಾಗೆಂದು ಹೇಳಿ ಇದುವೇ ಅತ್ಯುತ್ತಮ ಎಂದುಕೊಳ್ಳಬೇಕಾಗಿಲ್ಲ. ಕೊಡುವ ಹಣಕ್ಕೂ ನಮಗೆ ದೊರೆಯುವ ಗುಣಮಟ್ಟಕ್ಕೂ ಹೋಲಿಕೆ ಮಾಡಿದಾಗ ಇದರ ಗುಣಮಟ್ಟ ಉತ್ತಮವಾಗಿಯೇ ಇದೆ. ಇದಕ್ಕಿಂತ ಉತ್ತಮ ಗುಣಮಟ್ಟದ ಇಯರ್‌ಫೋನ್ ಬೇಕಿದ್ದಲ್ಲಿ ಇದಕ್ಕಿಂತ ಕನಿಷ್ಠ ಐದು ಪಟ್ಟು ಹೆಚ್ಚು ಬೆಲೆಬಾಳುವ ಬೋಸ್ ಹೆಡ್‌ಫೋನ್ ಖರೀದಿಸಬೇಕು. ದೊಡ್ಡ ಅಥವಾ ಕಿವಿ ಕಾಲುವೆ ಉಳ್ಳವರಿಗಾಗಿ ಇದರ ಜೊತೆ ಮೂರು ಪ್ಯಾಡ್ ನೀಡಿದ್ದಾರೆ. ನಿಮ್ಮ ಕಿವಿಕಾಲುವೆಯ ಗಾತ್ರಕ್ಕೆ ಅನುಸರಿಸಿ ನಿಮಗೆ ಬೇಕಾದ ಪ್ಯಾಡ್ ಬಳಸಬಹುದು. ಪ್ಯಾಡ್ ತಯಾರಿಸಲು ಬಳಸಿದ ವಸ್ತುವಿನ ಗುಣಮಟ್ಟವೂ ಚೆನ್ನಾಗಿದೆ. ಕೇಬಲ್ ಉದ್ದ ಸುಮಾರು ೪ ಅಡಿ ಇದೆ.

ಈ ಇಯರ್‌ಫೋನ್ ೩.೫ ಮಿಮೀ ಜ್ಯಾಕ್ ಹೊಂದಿದೆ. ಇದರಿಂದಾಗಿ ಬಹುತೇಕ ಸಂಗೀತ ಉಪಕರಣಗಳ ಹೆಡ್‌ಫೋನ್ ಜ್ಯಾಕ್ ಪೋರ್ಟ್‌ಗಳಿಗೆ ಇದನ್ನು ಜೋಡಿಸಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುತೇಕ ಮೊಬೈಲ್ ಫೋಣ್‌ಗಳಲ್ಲೂ ಇದೇ ಸೌಕರ್ಯ ಇರುವುದರಿಂದ ಅವುಗಳಿಗೆ ಇದನ್ನು ಜೋಡಿಸಿ ಸಂಗೀತ ಆಲಿಸಬಹುದು.

ಆದರೂ ಕೆಲವು ದೋಷಗಳು ಇದರಲ್ಲಿವೆ. ದೋಷಗಳು ಅನ್ನುವುದಕ್ಕಿಂತಲೂ ಈ ವಿಷಯಗಳನ್ನು ಸ್ವಲ್ಪ ಸುಧಾರಿಸಬಹುದಿತ್ತು ಎನ್ನಬಹುದು. ಅವುಗಳೆಂದರೆ – ಇಯರ್‌ಫೋನ್ ಜೊತೆ ಉತ್ತಮ ಚೀಲ ನೀಡಬಹುದಿತ್ತು, ಜ್ಯಾಕ್‌ನಿಂದ ಕಿವಿಗೆ ಹೋಗುವ ಕೇಬಲ್ ಕೊನೆಯಲ್ಲಿ ಎರಡಾಗುತ್ತದೆ. ನಂತರ ಎಡದ ಮತ್ತು ಬಲದ ಕಿವಿಗೆ ಹೋಗುವ ಕೇಬಲ್‌ಗಳಲ್ಲಿ ಒಂದನ್ನು ಉದ್ದ (ಬಲದ ಕಿವಿಯದನ್ನು) ಮತ್ತು ಇನ್ನೊಂದನ್ನು ಗಿಡ್ಡ ಮಾಡಬಹುದಿತ್ತು. ಹಾಗೆ ಮಾಡುವುದಿರಿಂದ ಕೇಬಲನ್ನು ಕುತ್ತಿಗೆಯ ಹಿಂದಿನಿಂದ ತರಬಹುದು.

ಗ್ಯಾಜೆಟ್ ಲೋಕ – ೦೦೩ (ಜನವರಿ ೧೯, ೨೦೧೨)
ಕ್ಯಾಮರಾಗಳು ಸಾರ್ ಕ್ಯಾಮರಾಗಳು

ಕ್ಯಾಮರಾ ಇಲ್ಲದ ಮನೆಯೇ ಇಲ್ಲವೇನೋ. ಅಷ್ಟರ ಮಟ್ಟಿಗೆ ಕ್ಯಾಮರಾಗಳು ಮನೆಮಾತಾಗಲು ಮುಖ್ಯ ಕಾರಣ ಡಿಜಿಟಲ್ ಕ್ಯಾಮರಾಗಳು. ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಹಲವು ಲೇಖನಗಳು ಬೇಕು. ಅವುಗಳನ್ನು ಈ ಅಂಕಣದಲ್ಲಿ ಒಂದೊಂದಾಗಿ ನೀಡಲಾಗುವುದು. ಇದು ಈ ಮಾಲಿಕೆಯಲ್ಲಿ ಮೊದಲ ಕಂತು.

ಒಂದಾನೊಂದು ಕಾಲದಲ್ಲಿ ಕ್ಯಾಮರಾಗಳು ಈಗಿನಷ್ಟು ಪ್ರಚಲಿತವಾಗಿರಲಿಲ್ಲ. ಕ್ಯಾಮರಾಕ್ಕೆ ಫಿಲ್ಮ್ ರೀಲು ತುಂಬಿಸಿ ಅದರಲ್ಲಿ ತೆಗೆಯಬಹುದಾದಷ್ಟು ಎಲ್ಲ ಫೋಟೋಗಳನ್ನು ಕ್ಲಿಕ್ ಮಾಡಿ, ಫಿಲ್ಮನ್ನು ತೆಗೆದು ಸ್ಟುಡಿಯೋಗೆ ಸಂಸ್ಕರಿಸಲು ಕೊಟ್ಟು ನಂತರ ಪ್ರಿಂಟ್‌ಗಳನ್ನು ಪಡೆದು ನೋಡಬೇಕಾಗಿತ್ತು. ಯಾವುದಾದರೊಂದು ಸಂದರ್ಭದಲ್ಲಿ ಬಳಸಿದ ಶಟ್ಟರ್ ವೇಗ, ಅಪೆರ್ಚರ್ ಎಲ್ಲ ಸರಿಯಾದ ಫೋಟೋ ನೀಡಿದೆಯಾ ಎಂದು ತಿಳಿಯಬೇಕಾದರೆ ಈ ಎಲ್ಲ ಕೆಲಸಗಳು ಆಗುವ ತನಕ ಕಾಯಬೇಕಿತ್ತು. ಈಗಿನ ಸಂದರ್ಭ ಹಾಗಿಲ್ಲ. ಎಲ್ಲ ಡಿಜಿಟಲ್‌ಮಯ. ಕ್ಲಿಕ್ ಮಾಡಿದೊಡನೆ ಫೋಟೋ ಹೇಗೆ ಬಂದಿದೆ ಎಂದು ಅಲ್ಲೇ ಪರದೆ ಮೇಲೆ ನೋಡಬಹುದು. ಈ ಡಿಜಿಟಲ್ ಕ್ಯಾಮರಾಗಳಲ್ಲೂ ಹಲವು ನಮೂನೆಗಳಿವೆ. ಮುಖ್ಯವಾಗಿ ಎರಡು ನಮೂನೆ -ಸುಮ್ಮನೆ ನೋಡಿ ಕ್ಲಿಕ್ ಮಾಡುವಂತವ (aim and shoot) ಮತ್ತು ಏಕಮಸೂರ ಪ್ರತಿಫಲನ (single lens reflex -SLR). ಈ ಎರಡು ವಿಭಾಗಗಳು ಯಾಕೆ ಮತ್ತು ಹೇಗೆ ಎಂದು ಸ್ವಲ್ಪ ನೋಡೋಣ.

ಮೊದಲನೆಯದಾಗಿ ಸರಳ ಕ್ಯಾಮರಾ ಅಂದರೆ ಏಮ್ ಆಂಡ್ ಶೂಟ್ ಕ್ಯಾಮರಾಗಳ ಕಡೆಗೆ ಗಮನ ಹರಿಸೋಣ. ಇದರೆ ಹೆಸರೇ ಸೂಚಿಸುವಂತೆ ಇವುಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ. ಸುಮ್ಮನೆ ಕ್ಯಾಮರಾ ಮೂಲಕ ನೋಡುವುದು ಮತ್ತು ಕ್ಲಿಕ್ ಮಾಡುವುದು, ಅಷ್ಟೆ. ಅತಿಯಾದ ಹಾಗೂ ಕ್ಲಿಷ್ಟವಾದ ಆಯ್ಕೆಗಳಿಲ್ಲ. ಹಾಗಿದ್ದೂ ಈ ರೀತಿಯ ಕ್ಯಾಮರಾಗಳಲ್ಲಿ ಕೆಲವು ಆಯ್ಕೆಗಳನ್ನು ಕಂಪೆನಿಯವರೇ ನೀಡಿರುತ್ತಾರೆ. ಉದಾಹರಣೆಗೆ ವ್ಯಕ್ತಿ, ಪರಿಸರ (ಸೀನರಿ), ರಾತ್ರಿ, ಆಟ -ಇತ್ಯಾದಿ. ಇಲ್ಲಿ ಆಟ ಎಂದು ಆಯ್ಕೆ ಮಾಡಿದರೆ ವೇಗವಾಗಿ ನಡೆಯುತ್ತಿರುವ ಕೆಲಸವನ್ನು ಚಿತ್ರಿಸಬೇಕಾದರೆ ಬಳಸಬೇಕಾದ ವೇಗದ ಶಟ್ಟರ್ ಅನ್ನು ಅದು ಆಯ್ಕೆ ಮಾಡಿಕೊಳ್ಳುತ್ತದೆ. ರಾತ್ರಿ ಎಂದು ಆಯ್ಕೆ ಮಾಡಿಕೊಂಡರೆ ದೊಡ್ಡದಾದ ಲೆನ್ಸ್ ತೆರೆಯುವಿಕೆ (ಅಪೆರ್ಚರ್) ಆಯ್ಕೆ ಮಾಡಿಕೊಳ್ಳುತ್ತದೆ. ಈ ನಮೂನೆಯ ಕ್ಯಾಮರಾಗಳಲ್ಲಿ ವ್ಯೂಫೈಂಡರ್‌ಗೆ ಪ್ರತ್ಯೇಕ ಮಸೂರ (ಲೆನ್ಸ್) ಇರುತ್ತದೆ. ಅಂದರೆ ಕ್ಯಾಮರಾ ಚಿತ್ರಣಕ್ಕೆ ಬಳಸುವ ಮಸೂರ ಮತ್ತು ನಾವು ನೋಡುವ ಮಸೂರ ಎರಡು ಬೇರೆ ಬೇರೆ ಆಗಿರುತ್ತವೆ. ಇದರಿಂದಾಗಿ ಸಮೀಪದ ಮತ್ತು ದೂರದ ವಸ್ತುಗಳನ್ನು ಚಿತ್ರಿಸುವಾಗ ಕೊನೆಗೆ ದೊರೆಯುವ ಚಿತ್ರಕ್ಕೂ ನಾವು ವ್ಯೂಫೈಂಡರ್ ಮೂಲಕ ನೊಡಿದ ಚಿತ್ರಕ್ಕೂ ಸ್ವಲ್ಪ ವ್ಯತ್ಯಾಸವಿರುತ್ತದೆ. ಈಗಿನ ಡಿಜಿಟಲ್ ಕ್ಯಾಮರಾಗಳಲ್ಲಿ ಈ ದೋಷವನ್ನು ಇನ್ನೊಂದು ರೀತಿಯಲ್ಲಿ ಸರಿಪಡಿಸಬಹುದು. ಅದು ಚಿತ್ರಿಸಬೇಕಾದುದನ್ನು ಕ್ಯಾಮರಾದ ಎಲ್‌ಸಿಡಿ ಪರದೆ ಮೂಲಕ ನೋಡುವುದು. ಈ ನಮೂನೆಯ ಕ್ಯಾಮರಾಗಳಲ್ಲಿ ಲೆನ್ಸ್ ಬದಲಿಸಲು ಆಗುವುದಿಲ್ಲ.

ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಈಗ ತುಂಬ ಸುಧಾರಿತ ಮಾದರಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಅವುಗಳಲ್ಲಿ ಪ್ರಮುಖವಾದವು ಮೆಗಾಝೂಮ್ ಕ್ಯಾಮರಾಗಳು. ಇವುಗಳಿಗೆ ಝೂಮ್ ಲೆನ್ಸ್ ಅಳವಡಿಸಲಾಗಿರುತ್ತದೆ. ದೂರದಲ್ಲಿರುವ ವಸ್ತುವನ್ನು ಚಿತ್ರೀಕರಿಸಲು ಇವು ಸಹಾಯ ಮಾಡುತ್ತವೆ. ಮುವ್ವತ್ತು ಪಟ್ಟು ದೊಡ್ಡದು ಮಾಡಿ ತೋರಿಸುವ ಕ್ಯಾಮರಾಗಳೂ ಬಂದಿವೆ (30x).

ಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿ ಹೆಸರೇ ಸೂಚಿಸುವಂತೆ ವಸ್ತುವನ್ನು ನೋಡಲು ಮತ್ತು ಚಿತ್ರೀಕರಿಸಲು ಒಂದೇ ಮಸೂರವನ್ನು ಬಳಸಲಾಗುತ್ತದೆ. ಮಸೂರ ಮತ್ತು ಚಿತ್ರೀಕರಣದ ಪರದೆ ಮಧ್ಯೆ ಒಂದು ಕನ್ನಡಿ ಬೆಳಕಿಗೆ 45 ಡಿಗ್ರಿ ಕೋನದಲ್ಲಿ ಇರುತ್ತದೆ. ಚಿತ್ರೀಕರಣದ ಸಮಯ ಬಿಟ್ಟು ಉಳಿದ ಸಮಯಗಳಲ್ಲಿ ಈ ಕನ್ನಡಿ ಮಸೂರದಿಂದ ಬರುವ ಬೆಳಕನ್ನು ಮೇಲ್ಮುಖವಾಗಿ ಪ್ರತಿಫಲಿಸುತ್ತದೆ. ಅಲ್ಲಿರುವ ಇನ್ನೊಂದು ಪೆಂಟಾಪ್ರಿಸಮ್ ಈ ಬೆಳಕನ್ನು ವ್ಯೂಫೈಂಡರ್‌ಗೆ ಕಳುಹಿಸುತ್ತದೆ. ಚಿತ್ರೀಕರಣದ ಸಮಯದಲ್ಲಿ ಈ ಕನ್ನಡಿ ಮೇಲಕ್ಕೆ ಹೋಗುತ್ತದೆ ಮತ್ತು ಅದರಿಂದಾಗಿ ಮಸೂರದಿಂದ ಬರುವ ಬೆಳಕು ನೇರವಾಗಿ ಚಿತ್ರೀಕರಣದ ಪರದೆ ಮೇಲೆ ಬೀಳುತ್ತದೆ. ಈ ನಮೂನೆಯ ಕ್ಯಾಮರಾಗಳಲ್ಲಿ ಚಿತ್ರೀಕರಣಕ್ಕೆ ಮತ್ತು ವಸ್ತುವನ್ನು ನೋಡಲು ಒಂದೇ ಮಸೂರ ಬಳಸುವುದರಿಂದಾಗಿ ನೋಡುವ ಮತ್ತು ಪಡೆಯುವ ಚಿತ್ರಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಈ ಕ್ಯಾಮರಾಗಳ ಇನ್ನೊಂದು ಸವಲತ್ತೆಂದರೆ ಹಲವು ನಮೂನೆಯ ಲೆನ್ಸ್ ಬದಲಿಸುವ ವ್ಯವಸ್ಥೆ. ವೃತ್ತಿನಿರತ ಛಾಯಾಗ್ರಾಹಕರು ಸಾಮಾನ್ಯವಾಗಿ ಇಂತಹ ಕ್ಯಾಮರಾಗಳನ್ನೇ ಬಳಸುತ್ತಾರೆ. ಈ ಕ್ಯಾಮರಾಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಅದರ ಜೊತೆ ಒಂದಕ್ಕಿಂತ ಹೆಚ್ಚು ಲೆನ್ಸ್‌ಗಳು ಜೊತೆಗಿರುವುದರಿಂದ ಇವುಗಳಿಗೆಂದೇ ದೊಡ್ಡ ಬ್ಯಾಗ್ ಬೇಕಾಗುತ್ತದೆ.

ಕವಾಟವೇಗ (ಶಟ್ಟರ್ ಸ್ಪೀಡ್ - shutter speed) – ಫೋಟೋ ತೆಗೆಯಬೇಕಾದರೆ   ಮಸೂರ ಮತ್ತು ಚಿತ್ರೀಕರಣದ ಪರದೆ ನಡುವೆ ಇರುವ ಕವಾಟವನ್ನು (ಶಟ್ಟರ್) ಸ್ವಲ್ಪ ಸಮಯದ ಕಾಲ ತೆರೆದು   ಮತ್ತೆ ಮುಚ್ಚಬೇಕಾಗುತ್ತದೆ. ಈ ಕವಾಟ ತೆರೆದು ಮುಚ್ಚುವ ಸಮಯವನ್ನು ಶಟ್ಟರ್ ಸ್ಪೀಡ್ ಎನ್ನುತ್ತಾರೆ.   ಸಾಮಾನ್ಯವಾಗಿ ಇವನ್ನು ಸೆಕೆಂಡಿನ ಎಷ್ಟನೇ ಪಾಲು ಎಂದು ನಮೂದಿಸುತ್ತಾರೆ. ಉದಾಹರಣೆಗೆ 1/125 ಎಂದರೆ ಒಂದು ಸೆಕೆಂಡಿನ 125ನೆ ಒಂದರಷ್ಟು ಕಾಲದಲ್ಲಿ ಶಟ್ಟರ್ ತೆರೆದು ಮುಚ್ಚಲಾಗುತ್ತದೆ ಎಂದು ಅರ್ಥ. ಹಾರುವ ಹಕ್ಕಿ   ಅಥವಾ ಆಟದಂತಹ ವೇಗವಾಗಿ ನಡೆಯುತ್ತಿರುವ ಕ್ರಿಯೆಯನ್ನು ಚಿತ್ರೀಕರಿಸುವಾಗ 1/250, 1/400, 1/1000  ಇತ್ಯಾದಿ ವೇಗದ   ಶಟ್ಟರ್ ಸ್ಪೀಡ್ ಬಳಸಬೇಕಾಗುತ್ತದೆ.

ಧ್ಯುತಿರಂಧ್ರ (ಅಪೆರ್ಚರ್ – aperture) – ಕ್ಯಾಮರಾದ ಲೆನ್ಸ್ ಅನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ತೆರೆಯಲಾಗುವುದಿಲ್ಲ. ಬೆಳಕಿನ   ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಯಾ ಕಡಿಮೆ ಮಾಡಲಾಗುತ್ತದೆ. ಇದನ್ನೇ ಅಪೆರ್ಚರ್ ಎನ್ನುತ್ತಾರೆ.   ಈ ತೆರೆಯುವಿಕೆ ಅರ್ಥಾತ್  ವ್ಯಾಸವನ್ನು ಮಸೂರದ ನಾಭಿದೂರಕ್ಕೆ   (focal length) ಅನುಪಾತ ಮೂಲಕ   ಬರೆಯಲಾಗುತ್ತದೆ. ಉದಾ – f/2.8, f/5.6,   f/18, ಇತ್ಯಾದಿ. ಮಸೂರದ ನಾಭಿದೂರ   50ಮಿ.ಮೀ. ಇದೆ ಮತ್ತು ಅಪೆರ್ಚರ್   ಸಂಖ್ಯೆ f/5.6 ಎಂದಾದಲ್ಲಿ ಮಸೂರದ ತೆರೆಯುವಿಕೆಯ ವ್ಯಾಸ ಸುಮಾರು 9 ವ್ಯಾಸ ಸುಮಾರು   ೯ಮಿಮೀ ಎಂದು ಲೆಕ್ಕ ಹಾಕಬಹುದು. ಜಾಸ್ತಿ ಬೆಳಕಿದ್ದಲ್ಲಿ ಕಡಿಮೆ ಅಪೆರ್ಚರ್ ಬಳಸಬೇಕಾಗುತ್ತದೆ.

ಗ್ಯಾಜೆಟ್ ಲೋಕ – ೦೦೨ (ಜನವರಿ ೧೨, ೨೦೧೨)
ನೋಕಿಯ 701 - ಕೊಟ್ಟ ಹಣಕ್ಕೆ ಮೋಸವಿಲ್ಲ

-ಡಾ| ಯು. ಬಿ. ಪವನಜ

ಈ ಸಲ ನಾವು ನೋಕಿಯ 701 ಫೋನ್ ಕಡೆಗೆ ಸ್ವಲ್ಪ ಗಮನ ಕೊಡೋಣ. ಇದನ್ನು ನೋಕಿಯಾದವರು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸೇರಿಸಿದ್ದಾರೆ. ಹೌದು. ಇದು ಸ್ಮಾರ್ಟ್‌ಫೋನ್‌ಗಳು ಮಾಡುವ ಎಲ್ಲ ಕೆಸಲಗಳನ್ನು ಮಾಡಬಲ್ಲುದು. ಆದರೆ ಇದರ ಕಾರ್ಯಾಚರಣೆಯ ವ್ಯವಸ್ಥೆ ಸಿಂಬಿಯನ್ ಬೆಲ್ಲೆ ಆಗಿದೆ. ಹೆಚ್ಚಿನ ವಿಮರ್ಶಕರು ಸಿಂಬಿಯನ್ ಕಾರ್ಯಾಚರಣ ವ್ಯವಸ್ಥೆಯನ್ನು ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ನೋಕಿಯಾದವರು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದಯನೀಯವಾಗಿ ಸೋಲುಕಂಡಿರುವುದೂ ಇದಕ್ಕೆ ಕಾರಣವಾಗಿರಬಹುದು. ಅದೆಲ್ಲ ಒತ್ತಟ್ಟಿಗಿರಲಿ. ಈ ಫೋನ್ ಹೇಗಿದೆ ನೋಡೋಣ.

ಸ್ಮಾರ್ಟ್‌ಫೋನ್ ಎಂದರೇನು?  ಸ್ಮಾರ್ಟ್‌ಫೋನ್ (smartphone)   ಸ್ಮಾರ್ಟ್‌ಫೋನ್  ಅರ್ಥಾತ್ ಚತುರವಾಣಿ ಎಂದರೆ   ಮೊಬೈಲ್ ಫೋನಿನ ಕೆಲಸಗಳನ್ನೂ ಮಾಡಬಲ್ಲ ಕಿಸೆಗಣಕ. ಈ ಫೋನುಗಳಲ್ಲಿ ಅಂತರಜಾಲ ನೋಡುವುದು, ಇಮೈಲ್ ಮಾಡುವುದು, ಪದಸಂಸ್ಕರಣೆ, ಜಿಪಿಎಸ್ ಬಳಸಿ ತಾನು ಇರುವ   ಸ್ಥಾನ ತಿಳಿಯುವುದು, ಇನ್ನೂ ಏನೇನೋ ಮಾಡಬಹುದು. ಇತ್ತೀಚೆಗೆ ಇಂತಹ ಫೋನುಗಳು ಅಗ್ಗವಾಗುತ್ತ ಜನಸಾಮಾನ್ಯರ ಕೈಗೆಟುಕುವಂತಾಗುತ್ತಿವೆ.   ಇಂತಹ ಫೋನುಗಳಿಗೆ ಸಹಸ್ರಾರು ತಂತ್ರಾಂಶಗಳು ಅಂತರಜಾಲದಲ್ಲಿ ಲಭ್ಯವಿವೆ. ಇವುಗಳು ಕೆಲಸ ಮಾಡಲು ಆಂಡ್ರೋಯಿಡ್, ವಿಂಡೋಸ್ ಫೋನ್, ಐಓಎಸ್, ಇತ್ಯಾದಿ ಯಾವುದಾದರೊಂದು   ಕಾರ್ಯಾಚರಣೆಯ ವ್ಯವಸ್ಥೆ ಅಗತ್ಯ. ಯಾಕೋ ಏನೋ ಸಿಂಬಿಯನ್ ಫೋನ್‌ಗಳು ಸ್ಮಾರ್ಟ್‌ಫೋನ್ ವಿಭಾಗದಲ್ಲಿ   ಅಷ್ಟು ಯಶಸ್ಸು ಕಂಡಿಲ್ಲ.

ಇದರಲ್ಲಿಯ ಕೆಲವು ಪ್ರಮುಖ ಗುಣವೈಶಿಷ್ಟ್ಯಗಳು:  ೧ಗಿಗಾಹರ್ಟ್ಝ್ ಪ್ರೋಸೆಸರ್, ೫೧೨ ಎಂಬಿ ಮೆಮೊರಿ, ಸ್ಪರ್ಶಪರದೆ, ೮ ಮೆಗಾಪಿಕ್ಸೆಲ್ ಕ್ಯಾಮರ, ವೈಫೈ, ಬ್ಲೂಟೂತ್, ಜಿಪಿಎಸ್, ಜಿಪಿಆರ್‌ಎಸ್, ೩ಜಿ, ೮ ಗಿಗಾಬೈಟ್ ಸಂಗ್ರಹ ಶಕ್ತಿ, ಎನ್‌ಎಫ್‌ಸಿ, ಎಫ್‌ಎಂ ರೇಡಿಯೋ, ಇತ್ಯಾದಿ. ಇದರ ಪರದೆ ೬೪೦ x ೩೬೦ ಪಿಕ್ಸೆಲ್ ರೆಸೊಲೂಶನ್ ಒಳಗೊಂಡಿದೆ. ಇದು ಹೈಡೆಫಿನಿಶನ್ ವೀಡಿಯೋ ತೋರಿಸಬಲ್ಲುದು ಮಾತ್ರವಲ್ಲ ರೆಕಾರ್ಡಿಂಗ್ ಕೂಡ ಮಾಡಬಲ್ಲುದು. ಈ ಎಲ್ಲ ಸವಲತ್ತುಗಳು ಇರುವ ಇದರ ಬೆಲೆ ಸುಮಾರು ೨೦ ಸಾವಿರ ರೂ. ಅದರೆ ಬಹುತೇಕ ಜಾಲತಾಣಗಳಲ್ಲಿ ಇದರ ಬೆಲೆ ರೂ. ೧೭,೫೦೦.

ಬಹುಶಃ ಮಧ್ಯಮ ಬೆಲೆಯ ಫೋನ್‌ಗಳಲ್ಲಿ (ಅಂದರೆ ರೂ.20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳಲ್ಲಿ) ಎನ್‌ಎಫ್‌ಸಿ ತಂತ್ರಜ್ಞಾನ ಇರುವ ಫೋನ್‌ಗಳಲ್ಲಿ ಇದು ಗಮನಾರ್ಹವಾದುದು. ಈ ಸಮೀಪ ಕ್ಷೇತ್ರ ಸಂವಹನ ತಂತ್ರಜ್ಞಾನವು ಪೂರ್ತಿಪ್ರಮಾಣದಲ್ಲಿ ಬಳಕೆಗೆ ಬರಬೇಕಷ್ಟೆ. ಬಳಕೆಗೆ ಬಂದಾಗ ಇದು ಒಂದು ಅದ್ಭುತ ಸೌಕರ್ಯವಾಗುತ್ತದೆ. ಈ ಸವಲತ್ತು ಇರುವ ಎರಡು ಫೋನ್‌ಗಳ ಮಧ್ಯೆ ಈ ತಂತ್ರಜ್ಞಾನ ಬಳಸಿ ಚಿತ್ರ, ಸಂಗೀತ, ವಿಳಾಸ, ಇತ್ಯಾದಿಗಳನ್ನು ಹಂಚಿಕೊಳ್ಳಬಹುದು.

ಸಮೀಪ ಕ್ಷೇತ್ರ ಸಂವಹನ (NFC – Near Field Communication) – ಅತಿ ಸಮೀಪದಲ್ಲಿರುವ   ವಿದ್ಯುನ್ಮಾನ ಉಪಕರಣಗಳ ನಡುವೆ ನಡೆಯುವ ಸಂವಹನ. ೪ ಸೆಮೀ ಅಥವಾ ಅದಕ್ಕಿಂತಲೂ ಕಡಿಮೆ ವ್ಯಾಪ್ತಿಯಲ್ಲಿ   ನಡೆಯುವ ನಿಸ್ತಂತು (ವಯರ್‌ಲೆಸ್) ಸಂವಹನ. ಇದು ಬಹುಮಟ್ಟಿಗೆ ಬ್ಲೂಟೂತ್ ಮಾದರಿಯಲ್ಲಿ ಕೆಲಸ ಮಾಡುತ್ತದೆ.   ಆದರೆ ಇದರ ತರಂಗಾಂತರ, ಶಕ್ತಿ ಮತ್ತು ವ್ಯಾಪ್ತಿಗಳು ಕಡಿಮೆ. ಪ್ರಮುಖವಾಗಿ ಮೊಬೈಲ್ ದೂರವಾಣಿಗಳಲ್ಲಿ ಇವುಗಳ ಬಳಕೆ.   ಇದನ್ನು ವ್ಯಾಪಾರ ವ್ಯವಹಾರಗಳಲ್ಲಿ ಬಹುಮಟ್ಟಿಗೆ ಬಳಸುತ್ತಾರೆ. ಅಂಗಡಿಯಲ್ಲಿ ಸಾಮಾನು ಕೊಂಡುಕೊಂಡು   ಕೊನೆಗೆ ಹಣ ಪಾವತಿ ಮಾಡಬೇಕಾದಾಗ ನಗದುಕಟ್ಟೆಯಲ್ಲಿರುವ ಸಂವೇದಕದ ಮುಂದೆ ಎನ್‌ಎಫ್‌ಸಿ ತಂತ್ರಜ್ಞಾನ   ಅಳವಡಿಸಿರುವ ಮೊಬೈಲ್ ಫೋನನ್ನು ಹಿಡಿದರೆ ಸಾಕು. ನಿಮ್ಮ ಖಾತೆಯಿಂದ ಅಂಗಡಿಯಾತನ ಖಾತೆಗೆ ಹಣ ವರ್ಗಾವಣೆಯಾಗುತ್ತದೆ.   ಈ ತಂತ್ರಜ್ಞಾನ ಇನ್ನೂ ಬಳಕೆಗೆ ಬರಬೇಕಷ್ಟೆ.

ಈ ಫೋನ್ ಇದೇ ಬೆಲೆಯ ಇತರೆ ಫೋನ್‌ಗಳಿಗಿಂತ ಹೆಚ್ಚು ಪ್ರಖರವಾದ ಪರದೆಯನ್ನು ಒಳಗೊಂಡಿದೆ. ಇದು ಸಿಂಬಿಯನ್ ಕಾರ್ಯಾಚರಣ ವ್ಯವಸ್ಥೆಯನ್ನು ಹೊದಿದೆ. ಆದುದರಿಂದ ಇದಕ್ಕೆ ಆಂಡ್ರೋಯಿಡ್‌ಗೆ ದೊರಕುವಷ್ಟು ತಂತ್ರಾಂಶಗಳು (ಆಪ್‌ಗಳು) ದೊರೆಯುವುದಿಲ್ಲ. ಇದು ಜಿಪಿಎಸ್ ತಂತ್ರಜ್ಞಾನವನ್ನು ಒಳಗೊಂಡಿದೆ. ಅಂದರೆ ಉಪಗ್ರಹಗಳ ಜೊತೆ ಸಂಪರ್ಕ ಹೊಂದಿ ತಾನು ಇರುವ ಸ್ಥಳದ ನಿಖರವಾದ ಅಕ್ಷಾಂಶ ರೇಖಾಂಶಗಳನ್ನು ತೋರಿಸುತ್ತದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡಲು ಇದು ಸಹಾಯ ಮಾಡುತ್ತದೆ. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ದಾರಿ ವಿಚಾರಿಸಬೇಕಾಗಿಲ್ಲ. ಗಮ್ಯ ಸ್ಥಾನದ ವಿಳಾಸ ಅಥವಾ ಅಕ್ಷಾಂಶ ರೇಖಾಂಶ ನೀಡಿದರೆ ಸಾಕು. ತಾನು ಈಗಿರುವ ಸ್ಥಾನದಿಂದ ಅಲ್ಲಿಗೆ ಹೋಗುವ ರಸ್ತೆಯನ್ನು ಅದು ತೋರಿಸುತ್ತದೆ. ಇದು ಕೇವಲ ಈ ಫೋನಿನ ವೈಶಿಷ್ಟ್ಯವೇನಲ್ಲ. ಇದು ಜಿಪಿಎಸ್ ಇರುವ ಎಲ್ಲ ಫೋನ್‌ಗಳಲ್ಲಿರುವ ಸವಲತ್ತಾಗಿದೆ.

ಈ ಫೋನಿನಲ್ಲಿ ಇನ್ನೊಂದು ವಿಶೇಷ ಸವಲತ್ತಿದೆ. ಅದು ಎಪ್‌ಎಂ ಪ್ರೇಷಕ (ಟ್ರಾನ್ಸ್ಮಿಟ್ಟರ್). ಅಂದರೆ ಸಂಗೀತವನ್ನು ಇದು ಇತರೆ ಎಫ್‌ಎಂ ಗ್ರಾಹಕಗಳಿಗೆ (ಅಂದರೆ ಎಫ್‌ಎಂ ರೇಡಿಯೋಗಳಿಗೆ) ಪ್ರಸಾರ ಮಾಡಬಲ್ಲುದು. ಫೋನಿನಲ್ಲಿ ನಿಮಗಿಷ್ಟವಾದ ಸಂಗೀತವನ್ನು ಹಾಕಿಕೊಂಡು ಅದನ್ನು ಪ್ರಸಾರ ಮಾಡಿ ಮನೆಯ ಅಥವಾ ಕಾರಿನ ಎಫ್‌ಎಂ ರೇಡಿಯೋದಲ್ಲಿ ಅದನ್ನು ಟ್ಯೂನ್ ಮಾಡಿಕೊಂಡು ಆಲಿಸಬಹುದು. ಅಷ್ಟೇ ಅಲ್ಲ, ಇನ್ನೂ ಹಲವು ಮಂದಿ ಸಂಗೀತವನ್ನು ತಮ್ಮ ಎಫ್‌ಎಂ ರೇಡಿಯೋ ಮೂಲಕ ಆಲಿಸಬಹುದು. ಆದರೆ ಅವರು ಫೋನಿನಿಂದ ೫೦ ಅಡಿ ಅಳತೆಯ ಒಳಗೆ ಇರತಕ್ಕದ್ದು.

ಇದರಲ್ಲಿ ಅಕ್ಸೆಲೆರೋಮೀಟರ್ ಅಳವಡಿಸಲಾಗಿದೆ. ಇದು ಫೋನ್ ಯಾವ ಕೋನದಲ್ಲಿದೆ, ಯಾವ ದಿಕ್ಕಿಗೆ ಚಲಿಸುತ್ತದೆ ಎಂದೆಲ್ಲ ಗಮನಿಸುತ್ತಿರುತ್ತದೆ. ಫೋನ್ ತಿರುಗಿಸಿದಾಗ ಪರದೆಯೂ ಅದರಂತೆ ತಿರುಗುತ್ತದೆ. ಈ ತಂತ್ರಜ್ಞಾನವನ್ನು ಬಳಸಿ ಆಡುವ ಕಾರು ಓಟದ ಸ್ಪರ್ಧೆಯ ಆಟ ಯುವಜನತೆಯಲ್ಲಿ ತುಂಬ ಜನಪ್ರಿಯ. ಡೊಳ್ಳುಹೊಟ್ಟೆಯವರು ಬೊಜ್ಜು ಕರಗಿಸಲು ಎಷ್ಟು ಹೆಜ್ಜೆ ನಡೆದಿದ್ದೇವೆ ಎಂದು ಲೆಕ್ಕ ಹಾಕುವ ತಂತ್ರಾಂಶನ್ನು ಬಳಸಬಹುದು. ಅದೂ ಅಕ್ಸೆಲೆರೋಮಿಟರ್ ಅನ್ನು ಬಳಸುತ್ತದೆ.

ಇದರಲ್ಲಿ ಟಿವಿ ಔಟ್ ಕಿಂಡಿ ಇದೆ. ಅದಕ್ಕೆ ಸೂಕ್ತ ಕೇಬಲ್ ಲಗತ್ತಿಸಿ ಫೋನಿನಲ್ಲಿ ಮೂಡುವ ಚಲನಚಿತ್ರವನ್ನು ಮನೆಯ ಟಿವಿ ಪರದೆಯಲ್ಲಿ ವೀಕ್ಷಿಸಬಹುದು. ಹೈಡೆಫಿನಿಶನ್ ವೀಡಿಯೋ ಸವಲತ್ತಿರುವುದರಿಂದ ಉತ್ತಮ ಗುಣಮಟ್ಟದ ಸಿನಿಮಾ ವೀಕ್ಷಣೆ ಮನೆಯ ಟಿವಿ ಪರದೆಯಲ್ಲೇ ನಡೆಸಬಹುದು. ಟಿವಿ ಕೂಡ ಹೈಡೆಫಿನಿಶನ್ ಮಾದರಿಯದಾದರೆ ಇನ್ನೂ ಒಳ್ಳೆಯದು.

ಒಟ್ಟಿನಿಲ್ಲಿ ಹೇಳುವುದಾದರೆ ನೀವು ಕೊಡುವ ಹಣಕ್ಕೆ ನಿಮಗೆ ವಾಪಾಸು ದೊರೆಯುವ ಸವಲತ್ತುಗಳು ಅಧಿಕ. ಇಷ್ಟೆಲ್ಲ ಸವಲತ್ತಿರುವ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಕನಿಷ್ಠ ರೂ. 30 ಸಾವಿರ ಬೆಲೆಯಿದೆ. ಆದುದರಿಂದ ಜಾಲತಾಣಗಳು ಈ ಫೋನನನ್ನು best value for money ಎಂದು ದಾಖಲಿಸಿವೆ.

ಅಂದಹಾಗೆ ನೀವು ಈ ಫೋನ್ ಬಳಸಿ ಕರೆ ಕೂಡ ಮಾಡಬಹುದು!

ಗ್ಯಾಜೆಟ್ ಲೋಕ – ೦೦೧ (ಜನವರಿ ೦೫, ೨೦೧೨)
Your email:

ಟ್ಯಾಬ್ಲೆಟ್ ಮಹಾಯುದ್ಧಕ್ಕೆ ಮುನ್ನುಡಿ

- ಡಾ| ಯು. ಬಿ. ಪವನಜ

ಬುದ್ಧನ ಕಾಲದ ಒಂದು ಪ್ರಖ್ಯಾತ ಕಥೆಯಿದೆ. ಕಿಸಾಗೌತಮಿ ಎಂಬಾಕೆ ತನ್ನ ಮಗು ಸತ್ತುಹೋದಾಗ ದುಃಖಿಸಿಕೊಂಡು ಬುದ್ಧನ ಬಳಿಗೆ ಬಂದು ಮಗುವನ್ನು ಬದುಕಿಸಿಕೊಡಲು ಬೇಡಿಕೊಳ್ಳುತ್ತಾಳೆ. ಒಂದೇ ಒಂದು ಸಾವು ಸಂಭವಿಸದ ಮನೆಯಿಂದ ಒಂದು ಹಿಡಿ ಸಾಸಿವೆ ತರಲು ಬುದ್ಧ ಆಕೆಗೆ ಹೇಳುತ್ತಾನೆ. ಸಾಸಿವೆ ತರಲಾರದೆ ಕೊನೆಗೆ ಸಾವಿನಿಂದ ಯಾರಿಗೂ ಬಿಡುಗಡೆಯಿಲ್ಲ ಎಂಬುದನ್ನು ಕಿಸಾಗೌತಮಿ ಅರಿಯುತ್ತಾಳೆ. ಇಂದಿನ ಕಾಲದಲ್ಲಿ ಬುದ್ಧ ಇದ್ದಿದ್ದರೆ ಕಿಸಾಗೌತಮಿಗೆ ಬಹುಶಃ ಒಂದೇ ಒಂದು ಗ್ಯಾಜೆಟ್ ಇಲ್ಲದ ಮನೆಯಿಂದ ಸಾಸಿವೆ ತರಲು ಹೇಳುತ್ತಿದ್ದನೇನೋ? ಅಷ್ಟರ ಮಟ್ಟಿಗೆ ಗ್ಯಾಜೆಟ್‌ಗಳು ಪ್ರತಿಯೊಂದು ಮನೆಯಲ್ಲಿ, ಕೈಯಲ್ಲಿ, ಮೈಯಲ್ಲಿ, ಕಾಲಲ್ಲಿ, ಎಲ್ಲ ಕಡೆ ಸರ್ವಾಂತರ್ಯಾಮಿಯಾಗಿದೆ. ಸರ್ವಸಂಗ ಪರಿತ್ಯಾಗಿ ಜಂಗಮರ ಕೈಯಲ್ಲೂ ಮೊಬೈಲ್ ಫೋನ್, ಧ್ವನಿ ಮುದ್ರಣ ಯಂತ್ರ, ಟ್ಯಾಬ್ಲೆಟ್ ಗಣಕ (ಕಂಪ್ಯೂಟರ್), ಇತ್ಯಾದಿ ಗ್ಯಾಜೆಟ್‌ಗಳು ಕಾಣಸಿಗುತ್ತವೆ.

ಗ್ಯಾಜೆಟ್‌ಗಳು ಈ ರೀತಿ ಜನಜೀವನದ ಅವಿಭಾಜ್ಯ ಅಂಗವಾಗಿರುವಾಗ ಅವುಗಳ ಬಗ್ಗೆ ಕನಿಷ್ಠಮಟ್ಟದ ತಿಳಿವಳಿಕೆ ಪಡೆದುಕೊಳ್ಳಬೇಕೆಂದು ಎಲ್ಲರೂ ಎಂದುಕೊಳ್ಳುವುದುರಲ್ಲಿ ಆಶ್ಚರ್ಯವಿಲ್ಲ. ಗ್ಯಾಜೆಟ್ ಒಂದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ಬಳಸುವುದನ್ನು ಪೂರ್ತಿಯಾಗಿ ಅರಿತೆನೆಂದುಕೊಂಡಾಗ ಅದು ಹಳತಾಗಿರುತ್ತದೆ. ಅದರ ಎರಡು ಪಟ್ಟು ಶಕ್ತಿ ಹಾಗೂ ಸೌಲಭ್ಯದ ಇನ್ನೊಂದು ಅದೇ ಜಾತಿಯ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಲಭ್ಯವಾಗಿರುತ್ತದೆ. ಅಂದರೆ ಗ್ಯಾಜೆಟ್‌ಗಳ ಬಗ್ಗೆ ಒಮ್ಮೆ ತಿಳಿದುಕೊಂಡು ನನಗೆಲ್ಲ ತಿಳಿದಾಯಿತು ಎಂದುಕೊಳ್ಳುವಂತಿಲ್ಲ. ಗ್ಯಾಜೆಟ್ ಬಗ್ಗೆ ತಿಳಿದುಕೊಳ್ಳುವುದು ಒಂದು ರೀತಿಯ ಯಾತ್ರೆ. ಅದಕ್ಕೆ ಕೊನೆ ಇರುವಂತಿಲ್ಲ. ಬನ್ನಿ ಈ ಗ್ಯಾಜೆಟ್ ಯಾತ್ರೆಯನ್ನು ಪ್ರಾರಂಭಿಸೋಣ.

ಈ ಅಂಕಣದಲ್ಲಿ ಗ್ಯಾಜೆಟ್‌ಗಳ ಬಗ್ಗೆ ಅರಿತುಕೊಳ್ಳುವುದನ್ನು ಹಲವು ರೀತಿಯಲ್ಲಿ ಮಾಡೋಣ. ಗ್ಯಾಜೆಟ್‌ಗಳಲ್ಲಿ ಹಲವು ಬಗೆ. ಉದಾಹರಣೆಗೆ ಮೊಬೈಲ್ ಫೋನ್, ಡಿಜಿಟಲ್ ಕ್ಯಾಮರಾ, ಸಂಗೀತ, ಸಿನಿಮಾ ನೋಡಲುನುವುಮಾಡಿಕೊಡುವಂತವುಗಳು, ಟ್ಯಾಬ್ಲೆಟ್, ವಿ-ಪುಸ್ತಕ ರೀಡರ್ (ebook reader), ವೈದ್ಯಕೀಯ ಗ್ಯಾಜೆಟ್‌ಗಳು – ಹೀಗೆ ಹಲವಾರು ನಮೂನೆಯ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರತಿಯೊಂದು ವಿಭಾಗದ ಗ್ಯಾಜೆಟ್ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಪಡೆದುಕೊಳ್ಳುವುದು ಒಂದು ಹಂತ. ಬೇರೆ ಬೇರೆ ಕಂಪೆನಿಗಳ ವಿಧವಿಧದ ಗ್ಯಾಜೆಟ್‌ಗಳ ಬಗ್ಗೆ ತಿಳಿದುಕೊಳ್ಳುವುದು ಇನ್ನೊಂದು ಹಂತ. ಈ ಎರಡನ್ನೂ ಸಮಾಂತರವಾಗಿ ನಡೆಸಿಕೊಂಡು ಹೋಗೋಣ. ಏನಂತೀರಾ?

ಟ್ಯಾಬ್ಲೆಟ್ ಯುದ್ಧ

ಇದು ಯಾವುದೇ ಔಷಧ ಕಂಪೆನಿಗಳ ನಡುವೆ ನಡೆದ ಅಥವಾ ನಡೆಯುತ್ತಿರುವ ಸಮರ ಅಲ್ಲ. ಗ್ಯಾಜೆಟ್ ಲೋಕದಲ್ಲಿಯ ಒಂದು ಯೋಧ ಟ್ಯಾಬ್ಲೆಟ್. ಇವುಗಳನ್ನು ಮೊತ್ತಮೊದಲು ತಯಾರಿಸಿದ್ದು ಮೈಕ್ರೋಸಾಫ್ಟ್ ಕಂಪೆನಿ, ೨೦೦೦ರ ಆಸುಪಾಸಿನಲ್ಲಿ. ಆದರೆ ಇತ್ತೀಚೆಗೆ ಯಾಕೋ ಮೈಕ್ರೋಸಾಫ್ಟ್ ಮಾಡಿದ ಕೆಲಸಗಳು ಜನರ ಕಣ್ಣಿಗೆ ಬೀಳುತ್ತಿಲ್ಲ. ಈಗ ಮಾರುಕಟ್ಟೆಗೆ ಬರುತ್ತಿರುವ ಟ್ಯಾಬ್ಲೆಟ್ ಗಣಕಗಳಲ್ಲಿ ಏನೇನು ಗುಣವೈಶಿಷ್ಟ್ಯಗಳಿವೆಯೋ ಅವೆಲ್ಲವನ್ನೂ ಮೈಕ್ರೋಸಾಫ್ಟ್ ಟ್ಯಾಬ್ಲೆಟ್ ಒಳಗೊಂಡಿತ್ತು. ಆದರೂ ಮೈಕ್ರೋಸಾಫ್ಟ್ ಕಂಪೆನಿಯ ಟ್ಯಾಬ್ಲೆಟ್ ಮೂಲೆ ಸೇರಿತು.

ಟ್ಯಾಬ್ಲೆಟ್ ಎಂದರೇನು?

ಇವು ನುಂಗಲಾರದ, ಖಾಯಿಲೆ ಗುಣಪಡಿಸಲಾರದ ಟ್ಯಾಬ್ಲೆಟ್ಟುಗಳು. ಇವುಗಳ ಹೆಸರು ಮಾತ್ರ ಟ್ಯಾಬ್ಲೆಟ್. ಇವು ಗಾತ್ರದಲ್ಲಿ ನೆಟ್‌ಬುಕ್ ಮತ್ತು ದೊಡ್ಡ   ಫೋನ್‌ಗಳ ನಡುವಿನ ಗಾತ್ರದವು. ಸರಿಯಾಗಿ ಹೇಳುವುದಾದರೆ ಟ್ಯಾಬ್ಲೆಟ್ ಗಣಕ   (ಕಂಪ್ಯೂಟರ್) ಎನ್ನಬೇಕು. ಇವುಗಳ ಗಾತ್ರ ಸುಮಾರು ೮ ಇಂಚಿನಿಂದ ೧೦ ಇಂಚು ಉದ್ದ, ೫ ರಿಂದ ೮ ಇಂಚು ಅಗಲ, ಸುಮಾರು ಅರ್ಧ ಇಂಚು ದಪ್ಪ ಇರುತ್ತವೆ. ಇವುಗಳಿಗೆ ಭೌತಿಕ ಕೀಲಿಮಣೆ ಇರುವುದಿಲ್ಲ. ಬದಲಿಗೆ ಸ್ಪರ್ಶಸಂವೇದಿ (touchsensitive screen) ಪರದೆ ಇರುತ್ತದೆ. ಅದರಲ್ಲಿ ಕೀಲಿಮಣೆ ಮೂಡಿಬರುತ್ತದೆ. ಜನಸಾಮಾನ್ಯರಿಗೆ ಬಹುಮಟ್ಟಿಗೆ ಅಗತ್ಯವಿರುವ ಕೆಲಸಗಳನ್ನೆಲ್ಲ   ಇದು ಮಾಡಬಲ್ಲುದು. ಉದಾಹರಣೆಗೆ ಇಮೈಲ್, ಅಂತರಜಾಲ ವೀಕ್ಷಣೆ, ಕಡತ ತಯಾರಿ, ವಿ-ಪುಸ್ತಕ ಓದುವುದು -ಇತ್ಯಾದಿ. ಇವುಗಳನ್ನು ಬಳಸಿ ಪ್ರೋಗ್ರಾಮ್ಮಿಂಗ್, ಉತ್ತಮ ಗ್ರಾಫಿಕ್ಸ್, ಚಿತ್ರಸಂಚಲನೆ (ಅನಿಮೇಶನ್) ಎಲ್ಲ ತಯಾರಿಸಲು ಅಸಾಧ್ಯ. ಆದರೆ ಇವುಗಳನ್ನು ಬಳಸಿ ಚಲನಚಿತ್ರ, ಚಿತ್ರಸಂಚಲನೆ ಎಲ್ಲ ನೋಡಬಹುದು.

೨೦೧೦ ಜನವರಿಯಲ್ಲಿ ಆಪಲ್ ಕಂಪೆನಿ ಐಪ್ಯಾಡ್ ಎಂಬ ಹೆಸರಿನ ಟ್ಯಾಬ್ಲೆಟ್ ಗಣಕವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದು ಗಣಕ ಕ್ಷೇತ್ರದಲ್ಲಿ ಬಿರುಗಾಳಿಯನ್ನೇ ಬೀಸಿತು. ಅಮೆರಿಕದಲ್ಲಿ ಆಪಲ್ ಕಂಪೆನಿ ಮತ್ತು ಅದರ ಮುಖ್ಯಸ್ಥರಾಗಿದ್ದ ಸ್ಟೀವ್ ಜಾಬ್ಸ್ ಅವರಿಗೆ ಅವರ ಕುರುಡು ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಆಪಲ್ ಕಂಪೆನಿ ಏನೇ ನೀಡಿದರೂ ಅದು ಅದ್ಭುತವಾಗಿರುತ್ತದೆ ಎಂಬ ನಂಬಿಕೆಯಿಂದ ಅವರೆಲ್ಲರೂ ಐಪ್ಯಾಡ್ ಕೊಂಡುಕೊಂಡುದರಿಂದ ಐಪ್ಯಾಡ್ ಮಾರಾಟದಲ್ಲಿ ಹೊಸ ದಾಖಲೆಯನ್ನೇ ಬರೆಯಿತು. ಹಾಗೆಂದು ಹೇಳಿ ಐಪ್ಯಾಡ್‌ನಲ್ಲಿ ಜನರಿಗೆ ಅಗತ್ಯವಿಲ್ಲದ ಅಥವಾ ಉಪಯೋಗಿಸಲು ಕ್ಲಿಷ್ಟಕರವಾದ ತಂತ್ರಾಂಶಗಳಿದ್ದವು ಎಂದಲ್ಲ. ಐಪ್ಯಾಡ್ ಅನ್ನು ಟ್ಯಾಬ್ಲೆಟ್‌ನ ಬಳಕೆದಾರನನ್ನು ಸರಿಯಾಗಿ ಅರ್ಥಮಾಡಿಕೊಡು ವಿನ್ಯಾಸಗೊಳಿಸಲಾಗಿತ್ತು. ಅದು ಪರಿಣತರಿಗಾಗಿ ತಯಾರಾಗಿದ್ದುದಲ್ಲ. ಜನಸಾಮಾನ್ಯರಿಗಾಗಿತ್ತು. ಆದುದರಿಂದ ಪರಿಣತರು ಬಳಸುವ ಸವಲತ್ತುಗಳು ಯಾವುವೂ ಅದರಲ್ಲಿರಲಿಲ್ಲ. ಮೊದಲನೆಯ ಆವೃತ್ತಿ ಅಂತಹ ಅದ್ಭುತವಾಗೇನೂ ಇರಲಿಲ್ಲ. ಈಗಿನ ಆವೃತ್ತಿ ಹಲವು ಹೆಚ್ಚಿನ ಸವಲತ್ತುಗಳನ್ನು ಒಳಗೊಂಡು ಹೆಚ್ಚು ಉಪಯುಕ್ತವಾಗಿದೆ.

ಮೈಕ್ರೋಸಾಫ್ಟ್ ಮತ್ತು ಆಪಲ್ ನಡುವೆ ಟ್ಯಾಬ್ಲೆಟ್ ಯುದ್ಧ ನಿಜವಾಗಿ ನಡೆಯಲಿಲ್ಲ ಅಥವಾ ನಡೆಯುತ್ತಿಲ್ಲ. ನಿಜವಾದ ಸಮರ ನಡೆಯುತ್ತಿರುವುದು ಆಪಲ್ ಐಪ್ಯಾಡ್ ಮತ್ತು ಗೂಗಲ್ ಆಂಡ್ರೋಯಿಡ್ ನಡುವೆ. ಆಂಡ್ರೋಯಿಡ್ ಮೂಲತಃ ಸ್ಮಾರ್ಟ್‌ಫೋನ್‌ಗಳಿಗಾಗಿರುವ ಕಾರ್ಯಾಚರಣೆಯ ವ್ಯವಸ್ಥೆ. ಕೆಲವು ಟ್ಯಾಬ್ಲೆಟ್ ಗಣಕ ತಯಾರಕರು ಈ ಆಂಡ್ರೋಯಿಡ್ ಕಾರ್ಯಾಚರಣೆಯ ವ್ಯವಸ್ಥೆಯನ್ನು ಬಳಸತೊಡಗಿದರು. ಆಂಡ್ರೋಯಿಡ್ ಮುಕ್ತ ತಂತ್ರಾಂಶವಾಗಿರುವುದರಿಂದ ಇಂತಹ ಟ್ಯಾಬ್ಲೆಟ್ ಗಣಕಗಳ ಬೆಲೆ ಐಪ್ಯಾಡ್‌ಗಿಂತ ತುಂಬ ಕಡಿಮೆ ಇದೆ. ಐಪ್ಯಾಡ್‌ನಲ್ಲಿ ಏನೇನು ಮಾಡಬಹುದೋ ಅದೆಲ್ಲವನ್ನೂ ಆಂಡ್ರೋಯಿಡ್ ಟ್ಯಾಬ್ಲೆಟ್ ಬಳಸಿ ಮಾಡಬಹುದು. ಲಕ್ಷಗಟ್ಟಳೆ ಉಚಿತ ತಂತ್ರಾಂಶಗಳು ಆಂಡ್ರೋಯಿಡ್ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಎಲ್ಲ ಕಾರಣಗಳಿಂದಾಗಿ ಆಂಡ್ರೋಯಿಡ್ ಟ್ಯಾಬ್ಲೆಟ್‌ಗಳು ಅತಿ ವೇಗದಲ್ಲಿ ಮಾರಾಟವಾಗುತ್ತಿವೆ. ಈ ನಮೂನೆಯಲ್ಲಿ ಸದ್ಯಕ್ಕೆ ಮುಂಚೂಣೀಯಲ್ಲಿರುವುದು ಸ್ಯಾಮ್‌ಸಂಗ್‌ನವರ ಟ್ಯಾಬ್ ಹೆಸರಿನ ಟ್ಯಾಬ್ಲೆಟ್ ಗಣಕ.

ಆಂಡ್ರೋಯಿಡ್ ಎಂದರೇನು?

ಆಂಡ್ರೋಯಿಡ್ (Android) ಎಂದರೆ ಮೊಬೈಲ್ ಫೋನ್‌ಗಳಲ್ಲಿ ಬಳಕೆಯಾಗುವ ಒಂದು ವಿಧದ ಕಾಯಾಚರಣೆಯ   ವ್ಯವಸ್ಥೆ (operating system). ಇದು ಮೂಲತಃ ಮುಕ್ತ ತಂತ್ರಾಂಶವಾದ ಲಿನಕ್ಸ್‌ನಿಂದ ವಿಕಾಸವಾದುದು. ೨೦೦೫ರಲ್ಲಿ ಇದೇ ಹೆಸರಿನ ಕಂಪೆನಿ ಇದನ್ನು ಪ್ರಥಮವಾಗಿ ತಯಾರು   ಮಾಡಿತು. ನಂತರ ಗೂಗಲ್ ಈ ಕಂಪೆನಿಯನ್ನು ಕೊಂಡುಕೊಂಡು ಮುಕ್ತವಾಗಿ ಬಿಡುಗಡೆ   ಮಾಡಿದೆ. ಈಗ ಪ್ರಪಂಚದ ಸುಮಾರು ಶೇಕಡ ೬೦ ಸ್ಮಾರ್ಟ್‌ಫೋನ್‌ಗಳು ಈ ಕಾರ್ಯಾಚರಣೆಯ   ವ್ಯವಸ್ಥೆಯನ್ನು ಬಳಸುತ್ತವೆ. ಈ ನಮೂನೆಯ ಫೋನುಗಳಲ್ಲಿ ಅಂತರಜಾಲ ಸಂಪರ್ಕ, ಇಮೈಲ್, ಜಿಪಿಎಸ್, ಇತ್ಯಾದಿ ಎಲ್ಲ ಸೌಲಭ್ಯಗಳಿರುತ್ತವೆ.

ಅಷ್ಟು ಸುಲಭದಲ್ಲಿ ಬಿಟ್ಟುಕೊಟ್ಟು ಗೊತ್ತಿಲ್ಲದ ಆಪಲ್ ಕಂಪೆನಿ ಐಪ್ಯಾಡ್‌ನ ಮೂರನೆಯ ಆವೃತ್ತಿಯನ್ನು ಸಿದ್ಧಮಾಡುತ್ತಿದೆ. ಫೆಬ್ರವರಿ ೨೦೧೨ರಲ್ಲಿ ಮಾರುಕಟ್ಟೆಗೆ ಇದು ಬರಲಿದೆ. ಇದರ ಎಲ್ಲ ಗುಣವೈಶಿಷ್ಟ್ಯಗಳೂ ಇನ್ನೂ ಸರಿಯಾಗಿ ಗೊತ್ತಾಗಿಲ್ಲ. ಮೈಕ್ರೋಸಾಫ್ಟ್‌ನವರು ನಮಗೂ ಈ ಯುದ್ಧಕ್ಕೂ ಸಂಬಂಧವಿಲ್ಲ ಎಂದು ಸುಮ್ಮನೆ ಕೂತಿಲ್ಲ. ಅವರು ವಿಂಡೋಸ್ ೮ ಎಂಬ ಹೊಚ್ಚ ಹೊಸ ಕಾರ್ಯಾಚರಣೆಯ ವ್ಯವಸ್ಥೆಯನ್ನು ವಿಶೇಷವಾಗಿ ಟ್ಯಾಬ್ಲೆಟ್‌ಗಾಗಿಯೇ ಸಿದ್ಧಮಾಡಿದ್ದಾರೆ. ಇದನ್ನು ಒಳಗೊಂಡ ಟ್ಯಾಬ್ಲೆಟ್ ಗಣಕಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

ಈ ಸಮರದಲ್ಲಿ ನಾವೂ ಇದ್ದೇವೆ ಎಂದು ಅಮೆಝಾನ್‌ನವರು ತಮ್ಮ ಕಿಂಡಲ್ ಫಯರ್ ಮತ್ತು ಬಾರ್ನ್ಸ್ & ನೋಬಲ್ ಅವರು ತಮ್ಮ ವಿ-ಪುಸ್ತಕ ರೀಡರ್ ಮೂಲಕ ಸಣ್ಣಮಟ್ಟದಲ್ಲಿ ಈ ಯುದ್ಧದಲ್ಲಿ ಭಾಗಿಯಾಗಲು ಪ್ರಯತ್ನಿಸುತ್ತಿದ್ದಾರೆ. ಈ ವಿ-ಪುಸ್ತಕ ರೀಡರ್‌ಗಳು ಟ್ಯಾಬ್ಲೆಟ್ ಗಣಕಗಳೇನೂ ಅಲ್ಲದಿದ್ದರೂ ಅವು ಟ್ಯಾಬ್ಲೆಟ್ ಗಣಕಗಳು ಮಾಡುವ ಕೆಲವು ಕೆಲಸಗಳನ್ನು ಮಾಡಬಲ್ಲವು. ಆದುದರಿಂದ ಟ್ಯಾಬ್ಲೆಟ್ ಮಾರುಕಟ್ಟೆಯ ಸ್ವಲ್ಪ ಭಾಗವನ್ನು ಅವು ಸ್ವಾಹಾ ಮಾಡುತ್ತಿವೆ.

ಒಟ್ಟಿನಲ್ಲಿ ೨೦೧೨ನೆಯ ಇಸವಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಟ್ಯಾಬ್ಲೆಟ್ ಯುದ್ಧ ನಡೆಯಲಿದೆ. ಕೊನೆಗೆ ಯಾರು ಗೆಲ್ಲುತ್ತಾರೆ ಎಂದು ಈಗಲೇ ಭವಿಷ್ಯ ಹೇಳುವಂತಿಲ್ಲ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಂತಿಮವಾಗಿ ಗೆಲ್ಲುವವನು ಗ್ರಾಹಕ. ಆತನಿಗೆ ಹಲವು ಆಯ್ಕೆಗಳು ಲಭ್ಯವಾಗಲಿವೆ. ನಿಜವಾದ ಯುದ್ಧದಲ್ಲಿ ಗಾಯಗೊಂಡವರಿಗೆ ಟ್ಯಾಬ್ಲೆಟ್ ನೀಡುವುದು ವಾಡಿಕೆ. ಈ ಟ್ಯಾಬ್ಲೆಟ್ ಯುದ್ಧದಲ್ಲಿ ಯಾರೂ ಗಾಯಗೊಳ್ಳುವುದಿಲ್ಲ. ಬದಲಿಗೆ ಗ್ರಾಹಕನಿಗೆ ಲಾಭವೇ ಆಗಲಿದೆ.

ಆಂಡ್ರೋಯಿಡ್ ಎಂದರೇನು?

ಆಂಡ್ರೋಯಿಡ್ (Android) ಎಂದರೆ ಮೊಬೈಲ್ ಫೋನ್‌ಗಳಲ್ಲಿ ಬಳಕೆಯಾಗುವ ಒಂದು ವಿಧದ ಕಾಯಾಚರಣೆಯ   ವ್ಯವಸ್ಥೆ (operating system). ಇದು ಮೂಲತಃ ಮುಕ್ತ ತಂತ್ರಾಂಶವಾದ ಲಿನಕ್ಸ್‌ನಿಂದ ವಿಕಾಸವಾದುದು. ೨೦೦೫ರಲ್ಲಿ ಇದೇ ಹೆಸರಿನ ಕಂಪೆನಿ ಇದನ್ನು ಪ್ರಥಮವಾಗಿ ತಯಾರು   ಮಾಡಿತು. ನಂತರ ಗೂಗಲ್ ಈ ಕಂಪೆನಿಯನ್ನು ಕೊಂಡುಕೊಂಡು ಮುಕ್ತವಾಗಿ ಬಿಡುಗಡೆ   ಮಾಡಿದೆ. ಈಗ ಪ್ರಪಂಚದ ಸುಮಾರು ಶೇಕಡ ೬೦ ಸ್ಮಾರ್ಟ್‌ಫೋನ್‌ಗಳು ಈ ಕಾರ್ಯಾಚರಣೆಯ   ವ್ಯವಸ್ಥೆಯನ್ನು ಬಳಸುತ್ತವೆ. ಈ ನಮೂನೆಯ ಫೋನುಗಳಲ್ಲಿ ಅಂತರಜಾಲ ಸಂಪರ್ಕ, ಇಮೈಲ್, ಜಿಪಿಎಸ್, ಇತ್ಯಾದಿ ಎಲ್ಲ ಸೌಲಭ್ಯಗಳಿರುತ್ತವೆ.

ರಘು ದೀಕ್ಷಿತ್ ಸಂದರ್ಶನ
ಸಂದರ್ಶಕರು: ಡಾ| ಯು. ಬಿ. ಪವನಜ

ಪ್ರ: ನಿಮ್ಮ ಸಂಗೀತ ಯಾವ ವಿಭಾಗಕ್ಕೆ ಸೇರುತ್ತದೆ? ರಾಕ್, ಪಾಪ್, ಇಂಡಿಪಾಪ್, .. ಏನದು?

ಉ: ಈ ರಾಕ್, ಪಾಪ್, ಎಂದೆಲ್ಲ ಹೇಳುವುದಕ್ಕಿಂತಲೂ ಸಮಕಾಲೀನ ಎನ್ನುವುದು ಹೆಚ್ಚು ಸೂಕ್ತ. ಇಂದಿನ ಪೀಳಿಗೆಗೆ ಅಂದರೆ ನನ್ನ ನಂತರದ ಯುವ ಜನತೆಗೆ ನನ್ನ ಹಿಂದಿನ ತಲೆಮಾರಿನ ಸಾಹಿತ್ಯವನ್ನು, ಉದಾಹರಣೆಗೆ ಶಿಶುನಾಳ ಶರೀಫ, ವಚನಗಳು, ಬೇಂದ್ರೆಯವರ ಪ್ರೇಮ ಕವಿತೆಗಳು, ನಮ್ಮ ನಾಡಿನ ಬಗ್ಗೆ ಇರುವ ಗೀತೆಗಳು, ಇವೆಲ್ಲವನ್ನು ತಲುಪಿಸುವುದು ನನ್ನ ಉದ್ದೇಶ. ಇವುಗಳು ತುಂಬ ಶ್ರೇಷ್ಠ. ಇವುಗಳನ್ನು ಜನ ಹಾಡುತ್ತಲೇ ಬಂದಿದ್ದಾರೆ. ಆದರೆ ಹಾಡುವ ವಿಧಾನ ವಿಕಾಸವಾಗಿಲ್ಲ. ನನ್ನದೇ ಉದಾಹರಣೆ ತೆಗೆದುಕೊಳ್ಳುವುದಾದರೆ ನನಗೆ ೨೬ ವರ್ಷ ಪ್ರಾಯ ಆಗುವ ತನಕ ನನಗೆ ನಮ್ಮ ಭಾಷಾ ಸಾಹಿತ್ಯದ ಬಗ್ಗೆ ಏನೇನೂ ತಿಳಿವಳಿಕೆ ಇರಲಿಲ್ಲ. ಆಗ ಯಾರೋ ಒಬ್ಬರು ನಾನು ಇಂಗ್ಲಿಶ್‌ನಲ್ಲಿ ಹಾಡಲು ಪ್ರಯತ್ನಿಸುವುದನ್ನು ಪ್ರಶ್ನೆ ಮಾಡಿದರು.

ರಘು ದೀಕ್ಷಿತ್ ಜೊತೆ ಸಂದರ್ಶಕ ಪವನಜ

ಪ್ರ: ಅಂದರೆ ನೀವು ಹಾಡಲು ಪ್ರಾರಂಭಿಸಿದ್ದು ಇಂಗ್ಲಿಶಿನಿಂದಲೇ?

ಉ: ಹೌದು. ಎಲ್ಲ ಯುವಕರಂತೆ ನಾನೂ ಗಿಟಾರ್ ಹಿಡಿದುಕೊಂಡು ಹಾಡು ಹಾಡಿದರೆ ಹುಡುಗಿಯರು ಬಲೆಗೆ ಬೀಳುತ್ತಾರೆ ಅಂದುಕೊಂಡು ಹಾಡಲು ಪ್ರಯತ್ನಿಸುತ್ತಿದ್ದೆ.

ಪ್ರ: ಯಾರಾದರೂ ಬಿದ್ದರಾ?

ಉ: ಇಲ್ಲ. ಆದರೆ ಗಿಟಾರ್ ಕಲಿತುಕೊಂಡೆ, ಅಷ್ಟೆ. ಹ್ಹ ಹ್ಹ ಹ್ಹಾ. ಹಾಡುವುದು ಕಲಿತುಕೊಂಡೆ. ಗಿಟಾರ್ ನುಡಿಸುವುದು ಕಲಿತುಕೊಂಡೆ. ಅದೊಂದು ರೀತಿಯಲ್ಲಿ ಉತ್ತೇಜನಕಾರಕ ಆದರೂ ಕೂಡ ಒಳ್ಳೆ ರೀತಿಯಲ್ಲೇ ಮೋಟಿವೇಶನ್ ಆಗಿದೆ ಅದು. ನಾನು ಕೂಡ ಇಂಗ್ಲಿಶಿನಲ್ಲಿ ಹಾಡಿದರೇ ಏನೋ ಒಂದು ಲೆವೆಲ್ ಎಂಬ ಒಂದು ಆಭಿಪ್ರಾಯದಲ್ಲಿದ್ದೆ. ಅದರಲ್ಲೂ ನಮ್ಮದೇ ಹಾಡಿದ್ರೆ ಬೆಲೆ ಇರ್ಲಿಲ್ಲ. ಅದ್ಯಾವುದೋ ಬ್ರೈನ್ ಆಡಮ್ಸ್‌ದೋ ಇನ್ಯಾರದ್ದೋ ಅದು ಹೆಂಗಿದೆಯೋ ಹಂಗೇ ನುಡಿಸಿಬಿಟ್ರೆ ನೀನು ದಾದ ಅಂತ. ಅದು ಒಂದು ತಪ್ಪು ನಂಬಿಕೆ. ಆ ಒಂದು ಗುಂಗಿನಲ್ಲೇ ಹಲವು ವರ್ಷ ಇಂಗ್ಲಿಶ್‌ನಲ್ಲೇ ಹಾಡೊದು ಆಗೋಯ್ತು. ಹಾಗಾಗಿ ನಮ್ಮಲ್ಲೇ ಎಷ್ಟೊಂದು ಸಾಹಿತ್ಯ ಇದೆ. ನಮ್ಮ ಹಿತ್ತಲಲ್ಲೇ ಎಷ್ಟೊಂದು ಮದ್ದುಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸ್ವಲ್ಪ ಸಮಯ ಹೋಯಿತು.

ಹೀಗಿರುವಾಗ ನಾನು ಕಷ್ಟಪಟ್ಟುಕೊಂಡು  ತಪ್ಪು ತಪ್ಪು ವಿಚಿತ್ರ ಉಚ್ಛಾರದಲ್ಲಿ ಇಂಗ್ಲಿಶ್ ಹಾಡುವುದನ್ನು ಕೇಳಿ ಒಬ್ಬರು ನೀನು ಯಾಕೆ ಈ ರೀತಿ ಫೇಕ್ ಮಾಡ್ತಿದ್ದೀಯಾ ನಿನ್ನ ಭಾಷೆಯಲ್ಲೇ ಯಾಕೆ ಹಾಡಬಾರದು ಎಂದು ಕೇಳಿದರು.

ಪ್ರ: ಯಾರು ಹಾಗೆ ಕೇಳಿದ್ದು?

ಉ: ಸ್ವಲ್ಪ ವಿಡಂಬನೀಯ ಅಂದ್ರೆ ಹಾಗೆ ಕೇಳಿದ್ದು ಇಬ್ಬರು ಹೆವಿ ಮೆಟಲ್ ಸಂಗೀತಗಾರರು.

ಪ್ರ: ನೀವು ಶಾಸ್ತ್ರೀಯವಾಗಿ ಸಂಗೀತ ಕಲಿತ್ತಿದ್ದೀರಾ?

ಉ: ಇಲ್ಲ. ಕಲಿತಿಲ್ಲ. ನೃತ್ಯ ಕಲಿತಿದ್ದೇನೆ. ಶಾಸ್ತ್ರೀಯ ಭರತನಾಟ್ಯವನ್ನು ಸುಮಾರು ಹದಿನೆಂಟು ವರ್ಷ ಕಲಿತಿದ್ದೇನೆ. ಅದರಲ್ಲಿ ವಿದ್ವತ್ ಕೂಡ ಮಾಡಿದ್ದೇನೆ. ನಂದಿನೀಶ್ವರ್ ನನ್ನ ಗುರು.

ಪ್ರ: ನಿಮ್ಮ ಹೆಂಡತಿ ಕೂಡ ನೃತ್ಯಗಾತಿ ಇರಬೇಕಲ್ವಾ?

ಉ: ನನ್ನ ಹೆಂಡತಿ ಕಂಟೆಂಪೊರರಿ ಡ್ಯಾನ್ಸರ್. ಆಕೆ ಒಡಿಸ್ಸಿ, ಕಥಕ್, ಭರತನಾಟ್ಯ ಎಲ್ಲ ಕಲಿತು ಕೊರಿಯೋಗ್ರಫಿ ಮಾಡ್ತಾಳೆ.

ಪ್ರ: ಹಾಗಾದ್ರೆ ನೀವು ಹಾಡುವಾಗ, ಸಂಗೀತ ಶ್ರುತಿ, ರಾಗ, ತಾಳ ಎಲ್ಲ ಕಲಿಯದೇ ತಿಳಿಯದೇ ಹಾಡುವುದೋ? ಅದು ಹೇಗೆ ಸಾಧ್ಯ? ಸಂಗೀತ ಜ್ಞಾನ ಬೇಕೇ ಬೇಕಲ್ಲವಾ?

ಉ: ಈ ಸಂಗೀತ ಅನ್ನುವುದು ಕೆಲವರಿಗೆ ಅಂತರ್ಗತವಾಗಿಯೇ ಇರುತ್ತದೆ.

ಪ್ರ: ಅಂದರೆ ಅದು ಒಂದು ಪ್ರತಿಭೆ.

ಉ: ಪ್ರತಿಭೆ ಅನ್ನುವುದಕ್ಕಿಂತಲೂ ಅದು ಒಂದು ನಡವಳಿಕೆಯ ಸ್ವಭಾವ ಎನ್ನಹುದು. ಅದನ್ನು ನಾವು ಎಷ್ಟರ ಮಟ್ಟಿಗೆ ನಮ್ಮ ಪ್ರತಿಭೆಯನ್ನು ಬಳಸಿಕೊಂಡು ಎಷ್ಟು ಸುಧಾರಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಾವು ಎಷ್ಟು ಉತ್ತಮ ಸಂಗೀತಗಾರರಾಗುತ್ತೇವೆ ಎನ್ನುವುದು ಅವಲಂಬಿಸಿರುತ್ತದೆ. ಕೆಲವರಿಗೆ ಈ ಸಂಗೀತ ನೃತ್ಯ ಎನ್ನುವುದು ಅಂತರ್ಗತ ಸ್ವಧರ್ಮ ಆಗಿರುತ್ತದೆ.

ಪ್ರ: ಅಂದರೆ ನಿಮಗೆ ಈ ಸಂಗೀತ ಎನ್ನುವುದು ನಿಮ್ಮ ಸ್ವಧರ್ಮ ಎನ್ನುವುದು ಗೊತ್ತಾದದ್ದು ಯಾವಾಗ?

ಉ: ಒಬ್ಬ ರೈತ ಹೊಲದಲ್ಲಿ ಕೆಲಸ ಮಾಡುವಾಗ ಹಾಡುತ್ತಿರುತ್ತಾನೆ. ಆತನಿಗೆ ಯಾವುದೇ ತರಬೇತಿ ಇರುವುದಿಲ್ಲ. ಹಾಗೆ ನೋಡಿದರೆ ನನಗೂ ಆ ರೈತನಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಒಬ್ಬ ವ್ಯಕ್ತಿ ತನ್ನ ಒಳಗಿನ ಯಾವುದೋ ಒಂದು ತೊಳಲಾಟ, ಸುಖ, ಇನ್ನೇನೋ ಒಂದು ಭಾವನೆಯನ್ನು ಹಾಡಿನ ರೂಪದಲ್ಲಿ ಹೊರಹಾಕಲು ಪ್ರಯತ್ನಿಸುತ್ತಾನಲ್ವಾ ಅದೇ ಜನಪದ ಸಂಗೀತ.

ಪ್ರ: ಅದಕ್ಕೆ ಶಾಸ್ತ್ರೀಯವಾದ ಚೌಕಟ್ಟು ಇಲ್ಲ.

ಉ: ಇಲ್ಲ. ಏನೂ ಚೌಕಟ್ಟಿಲ್ಲ. ಅದು ಅಂತರಾಳದಿಂದ ಬರುವಂತದ್ದು.

ಪ್ರ: ಈಗ ನೀವು ಹಾಡುತ್ತೀರಲ್ಲ, ಅದಕ್ಕೆ ಒಂದು ರಾಗ, ತಾಳ ಎಲ್ಲ ಇದ್ದೇ ಇರುತ್ತಲ್ವಾ?

ಉ: ಈ ಭಾವಕ್ಕೆ ಇದೇ ರಾಗ ಇರಬೇಕು, ನೀನು ಈ ರಾಗದಿಂದ ಆ ರಾಗಕ್ಕೆ ನೆಗೆದೆ, ಅದು ಸರಿಯಿಲ್ಲ, ಎನ್ನುವ ಒಂದು ಚೌಕಟ್ಟು ಇಲ್ಲ ನನಗೆ.

ಪ್ರ: ಶಾಸ್ತ್ರೀಯ ಎಂದೆನಿಸಿಕೊಳ್ಳದ ಸುಗಮ ಸಂಗೀತದಲ್ಲಿ ಕೂಡ ಒಂದೊಂದು ಭಾವನೆಗೆ ಒಂದೊಂದು ರಾಗವನ್ನು ಸಂಯೋಜಿಸುತ್ತಾರೆ. ನಿಮಗೆ ಹಾಗೆ ಇಲ್ಲವಾ?

ಉ: ಜನಪದ ಸಂಗೀತಕ್ಕೆ ಹಾಗೆ ಇಲ್ಲ ಅಂದುಕೊಂಡಿದ್ದೇನೆ.

ಪ್ರ: ಈಗ ನೀವು ಹಾಡುತ್ತೀರಲ್ವಾ? ಅದರಲ್ಲಿ ಕೂಡ ಒಂದಿಷ್ಟು ರಾಗ, ತಾಳ, ಎಲ್ಲ ಇರ‍್ಲೇ ಬೇಕಲ್ವಾ?

ಉ: ಅದಿಕ್ಕೇನೀಗ? ಇಷ್ಟನೇ ಮನೇನೇ ಇರ್ಬೇಕು, ಈ ರಾಗದಲ್ಲೇ ಇರ್ಬೇಕು, ಈ ರಾಗದಿಂದ ಆ ರಾಗಕ್ಕೆ ಹೋದ್ರೆ ಕೆಟ್ಟದಾಗಿರ್ತದೆ, ಒಳ್ಳೆದಲ್ಲ ಅದು, ಆ ರಾಗ ಬಿಟ್ಟುಬಿಟ್ಟು ನೀನು ರಾಗ ಭೇದ ಮಾಡಿ ಬೇರೆ ರಾಗಕ್ಕೆ ಹೊರಟು ಹೋದೆ, ಶುದ್ಧವಾಗಿರ್ಲಿಲ್ಲ ನೀನು ಹಾಡಿದ್ದು, ಅನ್ನೋ ಒಂದು ಚೌಕಟ್ಟು ಏನೂ ಇಲ್ಲ ನನಗೆ.

ಪ್ರ: ಹಾಗಿದ್ದರೆ ನಿಮ್ಮದು ಜನಪದ ಸಂಗೀತವೇ?

ಉ: ಜನಪದದ ತಳಹದಿಯನ್ನಿಟ್ಟುಕೊಂಡು, ಸಮಕಾಲೀನ ಉಪಕರಣಗಳನ್ನು ಬಳಸಿ ಹಾಡುವುದು. ಸಮಕಾಲೀನ ಜನಪದ ಎಂದು ಹೇಳಬಹುದೇನೋ?

ಪ್ರ: ಈಗ ನೀವು ಶಿಶುನಾಳ ಶರೀಫರ ಹಾಡನ್ನೆಲ್ಲಾ ನಿಮ್ಮದೇ ರೀತಿಯಲ್ಲಿ ಹಾಡ್ತೀರಲ್ವಾ? ಇದನ್ನು ಇವನು ಕೆಡಿಸ್ತಾ ಇದ್ದಾನೆ ಎಂದು ಯಾರಾದ್ರೂ ಅಪಸ್ವರ ಎತ್ತಿದ್ದಾರಾ?

ಉ: ಆ ತರಹ ಇದುವರೆಗೂ ಯಾರೂ ಬಂದಿಲ್ಲ. ಯಾಕೆಂದರೆ ಅದರಿಂದ ಇದುವರೆಗೆ ಕೆಟ್ಟದೇನೋ ಆಗಿಲ್ಲ. ಈಗಿನ ತಲೆಮಾರಿನ ಹುಡುಗರಿಗೆ ನಾನು ಶಿಶುನಾಳ ಶರೀಫರ ಹಾಡನ್ನು ತಲುಪಿಸುತ್ತೇನೆ ಎಂದರೆ ಯಾರೂ ಅದಕ್ಕೆ ಅಡ್ಡಿ ವ್ಯಕ್ತಪಡಿಸಲಿಕ್ಕಿಲ್ಲ ಅಂದುಕೊಂಡಿದ್ದೇನೆ. ಈಗ ಜೆ.ಸಿ. ಕಾಲೇಜಿನಲ್ಲಿ ನಾನು ಶಿಶುನಾಳ ಶರೀಫರ ಹಾಡನ್ನು ಹಾಡುತ್ತೇನೆ, ಹುಡುಗರೆಲ್ಲ ಅದನ್ನು ಕೇಳಿ ಸಂತೋಷಪಡುತ್ತಾರೆ ಎಂದರೆ ಅದರಿಂದ ಒಳ್ಳೆಯದೇ ಅಲ್ಲವಾ? ಯಾವನೋ ಒಬ್ಬ ಸ್ಟೇಜ್ ಮೇಲೆ ಬಂದು ರಾಕ್ ಹಾಡಿದ್ರೆ ಪ್ರಿನ್ಸಿಪಾಲ್ ಅದನ್ನು ನಿಲ್ಲಿಸಲು ಹೇಳಬಹುದು. ಅದರೆ ಇದು ಹಾಗಲ್ಲ.

ಪ್ರ: ನಾನು ಕೂಡ ಇದುತನಕ ನಿಮ್ಮ ಹಾಡಿನ ಬಗ್ಗೆ ಯಾರೂ ಅಪಸ್ವರ ಎತ್ತಿದ್ದು ಕೇಳಿಲ್ಲ.

ಉ: ಅಪಸ್ವರ ಅಲ್ಲದಿದ್ರೂ, ನನ್ನ ಹಾಡಿನ ಧಾಟಿಯ ಬಗ್ಗೆ ಕೆಲವರು ಹೇಳಿದ್ದಾರೆ. ತುಂಬ ಎತ್ತರದ ಸ್ಥಾಯಿಯಲ್ಲಿ ಹಾಡುತ್ತಾನೆ, ಕೆಳಗಿನ ಶ್ರುತಿಯಲ್ಲಿ ಹಾಡುವುದಿಲ್ಲ ಅವನು ಎಂದೆಲ್ಲ ಹೇಳುತ್ತಾರೆ. ಅದಕ್ಕೆ ನಾನೇನೂ ಮಾಡುವಂತಿಲ್ಲ. ನಾನು ಹಾಡುವುದೇ ಹಾಗೆ. ಬೇರೆ ರೀತಿ ಹಾಡಲು ಬರುವುದೇ ಇಲ್ಲ.

ಪ್ರ: ಈಗ ಸ್ವಲ್ಪ ಹಿಂದೆ ಹೋಗೋಣ. ಈ ಕ್ಷೇತ್ರಕ್ಕೆ ನೀವು ಹೇಗೆ ಬಂದಿರಿ ಎಂಬುದರ ಬಗ್ಗೆ ಸ್ವಲ್ಪ ತಿಳಿಸಿ.

ಉ: ಅದು ತುಂಬ ತಮಾಷೆ ಆಗಿದೆ. ನಾನು ಯುವರಾಜ ಕಾಲೇಜಿನಲ್ಲಿ ಎರಡನೆ ವರ್ಷ ಬಿಎಸ್‌ಸಿ ಓದುತ್ತಿರುವಾಗ ಒಮದು ಭರತನಾಟ್ಯ ಕಾರ್ಯಕ್ರಮ ನೀಡಿ, ವೇಷ ಕಳಚುತ್ತಿರುವಾಗ ಆಧುನಿಕ ಶೈಲಿಯ ಅಂದರೆ ಉದ್ದ ಕೂದಲು ಬಿಟ್ಟುಕೊಂಡು ಕೈಯಲ್ಲ ಗಿಟಾರ್ ಹಿಡಿದುಕೊಂಡ ಒಬ್ಬ ಹುಡುಗ ಬಂದು ನನಗೆ ಗೇಲಿ ಮಾಡಿದ. ನೀನು ಹೀಗೆ ಹುಡುಗಿಯರ ಹಾಗೆ ವೇಷ ಹಾಕಿಕೊಂಡು ಡ್ಯಾನ್ಸ್ ಮಾಡಿದ್ರೆ ನಿನ್ನ ಹಿಂದೆ ಹುಡುಗಿಯರು ಬೀಳೊಲ್ಲ. ನನ್ನ ಹಾಗೆ ಗಿಟಾರ್ ಹಿಡಿದುಕೊ ಆಗ ಹುಡುಗಿಯರು ಹಿಂದೆ ಬೀಳುತ್ತಾರೆ ಎಂದ. ನನಗೆ ಅವನ ಅಜ್ಞಾನ ಏನಿದೆಯೋ ಕೋಪ ಬರುವಂತೆ ಮಾಡಿತು. ನನಗೆ ಈಗಲೂ ನಮ್ಮ ಶಾಸ್ತ್ರೀಯ ನಾಟ್ಯ ಬಗ್ಗೆ ಅಪಾರ ಅಭಿಮಾನ ಇದೆ. ನನಗೆ ಎರಡು ತಿಂಗಳು ಸಮಯ ಕೊಡು. ನಾನು ಗಿಟಾರ್ ಕಲಿತು ತೋರಿಸುತ್ತೇನೆ. ನೀನು ಎರಡು ತಿಂಗಳಲ್ಲಿ ಎರಡು ಹೆಜ್ಜೆ ಭರತನಾಟ್ಯ ಕಲಿತು ತೋರಿಸು ನೋಡೋಣ ಎಂದೆ. ಅದು ತುಂಬ ಸಿಲ್ಲಿ ಜಗಳ ಎನ್ನಬಹುದು. ಆದರೆ ನಾನು ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಗಿಟಾರ್ ಕಲಿತೆ. ಗಿಟಾರ್ ನುಡಿಸುತ್ತ ನನಗೆ ಅದರಲ್ಲಿರುವ ಸ್ವಾತಂತ್ರ್ಯ ಶಾಸ್ತ್ರೀಯದಲ್ಲಿ ಇಲ್ಲ ಅನ್ನಿಸಿತು. ಇಲ್ಲಿ ನಾನು ಹೇಗೆ ಬೇಕಾದರೂ ಹಾಡಬಹುದು. ಏನು ಬೇಕಾದರೂ ಹಾಡಬಹುದು. ನನಗೆ ಇಷ್ಟ ಬಂದ ಸಾಹಿತ್ಯ ನಾನೇ ಬರೆದುಕೊಂಡು ನನಗಿಷ್ಟ ಬಂದಂತೆ ಹಾಡಬಹುದು.

ಪ್ರ: ಅಂದರೆ ನಿಮ್ಮ ಹಾಡುಗಳ ಸಾಹಿತ್ಯ ನೀವೇ ರಚಿಸುವುದಾ?

ಉ: ಸುಮಾರು ವರ್ಷಗಳ ಕಾಲ ನಾನೇ ಬರೀತಾ ಇದ್ದೆ ಇಂಗ್ಲಿಶಿನಲ್ಲಿ.

ಪ್ರ: ಮೈಸೂರ್‌ಸೆ ಆಯೀ ಎಲ್ಲ ನೀವೇ ಬರೆದಿದ್ದಾ?

ಉ: ಹೌದು, ಶಿಶುನಾಳ ಶರೀಫ, ಬೇಂದ್ರೆ, ಕುವೆಂಪು ಇವರನ್ನೆಲ್ಲ ನಾನು ಸಂಶೋಧಿಸುವ ತನಕ. ಸಂಶೋಧಿಸಿದೆ ಎಂದರೆ ನಾನು ಅವರನ್ನೆಲ್ಲ ಶಾಲೆಯಲ್ಲಿ ಕಲಿತಿದ್ದಿರಬಹುದು. ಆದರೆ ಅವುಗಳ ಮಹತ್ವ ಆಗ ನನಗೆ ಅರಿವಾಗಿರಲಿಲ್ಲ.

ಪ್ರ: ಶಿಶುನಾಳ ಶರೀಫರ ಹಾಡುಗಳಿಗೆ ಎರಡೆರಡು ಅರ್ಥಗಳಿರುತ್ತವೆ. ಒಂದು ಮೇಲ್ನೋಟದ ಅರ್ಥ. ಇನ್ನೊಂದು ಒಳಗಿನ ಅಧ್ಯಾತ್ಮದ ಅರ್ಥ. ಅದನ್ನು ಅರ್ಥ ಮಾಡಿಕೊಂಡೇ ನೀವು ಹಾಡ್ತೀರಾ?

ಉ: ಹೌದು. ನಾನು ಸುಮಾರು ಜನ ಕನ್ನಡ ಅಧ್ಯಾಪಕರನ್ನು ಭೇಟಿ ಮಾಡಿ ಅವರಿಂದ ಈ ಹಾಡುಗಳ ಅರ್ಥ ತಿಳಿದುಕೊಂಡಿದ್ದೇನೆ.

ಪ್ರ; ನೀವು ಸಿ. ಅಶ್ವಥ್ ಅವರನ್ನು ಭೇಟಿ ಆಗಿದ್ರಾ?

ಉ: ಆಗಿದ್ದೆ. ಅವರು ಸಂಯೋಜನೆ ಮಾಡಿದ ಹಾಡುಗಳನ್ನೇ ಇಟ್ಟುಕೊಂಡು, ಅವರದೇ ರಾಗ ಸಂಯೋಜನೆಗೆ, ನನ್ನ ಈ ಸಮಕಾಲೀನ ಅಲಂಕಾರ ಮಾಡಿ, ಅವರಿಗೆ ಕೇಳಿಸಿ, ಅವರಿಂದ ಈ ರೀತಿಯಲ್ಲಿ ಹಾಡಲು ಅಪ್ಪಣೆ ಕೇಳಿದ್ದೆ.

ಪ್ರ: ಏನು ಹೇಳಿದರು?

ಉ: ಅವರಿಗೂ ನನ್ನ ಅಪ್ಪನಿಗೂ ಯಾವುದೇ ವ್ಯತ್ಯಾಸ ಇರಲಿಲ್ಲ. ಅವರಲ್ಲಿ ಒಂದು ಎಲ್‌ಎಂಎಲ್ ವೆಸ್ಪ ಇತ್ತು. ಒಂದು ದಿನ ಕೂಡ ನನಗೆ ಅದನ್ನು ಓಡಿಸಲು ಬಿಡುತ್ತಿರಲಿಲ್ಲ. ಎಲ್ಲಾದ್ರೂ ಗುದ್ದಿಸಿಬಿಡುತ್ತೀಯಾ ಎಂದು ಹೇಳುತ್ತಿದ್ದರು. ಅದೇ ಭಯ ಬಹುಶಃ ಸಿ. ಅಶ್ವಥ್ ಅವರಿಗೂ ಇತ್ತೇನೋ ಅವರು ಸಂಯೋಜಿಸಿದ ಹಾಡುಗಳ ಬಗ್ಗೆ?

ಪ್ರ: ಮುಖತಃ ಭೇಟಿ ಮಾಡಲೇ ಇಲ್ಲವೇ?

ಉ: ಮುಖತಃ ಭೇಟಿ ಮಾಡಿದ್ದೆ. ಅವರ ಮನೆಗೇ ಹೋಗಿದ್ದೆ. ಹೋಗಿ ಹಾಡಲು ಅನುಮತಿ ಕೇಳಿದ್ದೆ. ಇಲ್ಲಪ್ಪ, ನಾನು ಇಷ್ಟು ವರ್ಷ ಕಷ್ಟಪಟ್ಟು ಸಂಯೋಜಿಸದ ಹಾಡುಗಳನ್ನು ನಿವು ಯುವಕರು ಕೆಡಿಸಿಬಿಟ್ರೆ ಎಂಬ ಆತಂಕ ಅವರಿಗಿತ್ತು. ನನಗೆ ಅನುಮತಿ ಸಿಗಲಿಲ್ಲ. ಒಂದು ರೀತಿಯಲ್ಲಿ ಅವರು ನನಗೆ ಆಶೀರ್ವಾದ ಮಾಡಿದಂತೆ ಅಂದುಕೊಳ್ಳುತ್ತೇನೆ ಇವತ್ತಿನ ದಿವಸ ತಿರುಗಿ ನೋಡಿದರೆ. It was a blessing in disguise ಅಂತ.

ಪ್ರ: ಅಂದರೆ ನೀವು ಅನುಮತಿ ಕೇಳಿದ್ದು ಅವರ ಟ್ಯೂನ್‌ನಲ್ಲಿ ಹಾಡಲು? ಅವರು ಬೇಡ ಅಂತ ಹೇಳಿದ್ದಕ್ಕೆ ನೀವು ನಿಮ್ಮದೇ ಟ್ಯೂನ್ ಮಾಡಿಕೊಂಡ್ರಿ?

ಉ: ಹೌದು. ಒಂದು ರೀತಿಯಲ್ಲಿ ಸಿ. ಅಶ್ವಥ್ ನನಗೆ ಒಂದು ಬೇರೆಯೇ ದಾರಿಯಲ್ಲಿ ಹೋಗಲು ಆಶೀರ್ವದಿಸಿ ಕಳುಹಿಸಿದಂತೆ ಆಯಿತು. ಶಿಶುನಾಳ ಶರೀಫ ಮಾತ್ರವಲ್ಲ, ಕನ್ನಡದ ಎಲ್ಲ ಕವಿಗಳ ಸಾಹಿತ್ಯದ ಬಗ್ಗೆ ಬೇರೆಯೇ ರೀತಿಯಲ್ಲಿ ನಾನು ನೋಡುವಂತೆ ಅದು ಪ್ರೇರೇಪಿಸಿತು. ಕನ್ನಡ ಸಾಹಿತ್ಯಕ್ಕೆ ಬೇರೆಯೇ ಒಂದು ಆಯಾಮವನ್ನು ಅದು ನನಗೆ ನೀಡಿತು.

ಪ್ರ: ಕನ್ನಡ ಕವಿಗಳ ಸಾಹಿತ್ಯದಲ್ಲಿ ನೀವು ಶಿಶುನಾಳ ಶರೀಫ ಹೊರತಾಗಿ ಬೇರೆ ಯಾವ ಕವಿಗಳ ಹಾಡನ್ನೂ ತೆಗೆದುಕೊಂಡೇ ಇಲ್ಲವಲ್ಲ? ಉದಾಹರಣೆಗೆ ಭಾವಗೀತೆಗಳನ್ನು ಯಾವುದನ್ನೂ ತೆಗೆದುಕೊಂಡೇ ಇಲ್ಲವಲ್ಲ?

ಉ: ಈಗ ಬೇಂದ್ರೆ ತೆಗೆದುಕೊಳ್ಳುತ್ತಾ ಇದ್ದೇನೆ. ನಾನು ಮೂರು ಹಾಡುಗಳನ್ನು ಸಂಯೋಜಿಸಿದ್ದೇನೆ.

ಪ್ರ: ನಾನು ಇದೇ ಪ್ರಶ್ನೆಯನ್ನು ಟ್ವಿಟ್ಟರ್‌ನಲ್ಲೆ ಕೇಳಿದ್ದೆ, ನೆನಪಿದೆಯಾ?

ಉ: ಹ್ಞೂಂ, ಇದೆ. ನಾನು ಬೇಂದ್ರೆಯವರ “ಬಾರೊ ಸಾಧನಕೇರಿಗೆ” ಎಂಬ ಹಾಡನ್ನು …

ಪ್ರ: ಎಂ. ಡಿ. ಪಲ್ಲವಿ ಅದನ್ನು ತುಂಬ ಚೆನ್ನಾಗಿ ಹಾಡುತ್ತಾರೆ.

ಉ: ನಾನು ಅದನ್ನು ಇಂಗ್ಲೆಂಡಿನಲ್ಲಿ ಮತ್ತು ಅಮೆರಿಕದಲ್ಲಿ ಪ್ರಸ್ತುತಪಡಿಸಿದೆ. ಎಷ್ಟೋ ಜನ ಆ ಹಾಡನ್ನು ಮೆಚ್ಚಿಕೊಂಡು, ಈ ಅಮೆರಿಕ, ಎಲ್ಲ ಬಿಟ್ಟು ವಾಪಾಸು ಬಂದುಬಿಡೋಣ ಕನ್ನಡ ನಾಡಿಗೆ ಎಂಬ ಭಾವನೆ ಬಂತು ಎಂದು ಹೇಳಿದರು.

ಪ್ರ: ಇವತ್ತು ಅದನ್ನು ಹಾಡುತ್ತೀರಾ?

ಉ: ಇಲ್ಲ. ಇನ್ನೂ ಅದರ ರಾಗ ಸಂಯೋಜನೆ ಪರಿಪೂರ್ಣವಾಗಿಲ್ಲ.

ಪ್ರ: ನಾವು ಸಾಫ್ಟ್‌ವೇರ್‌ನವರು ಹೇಳುತ್ತೇವಲ್ಲಾ “ಬೀಟಾ ಆವೃತ್ತಿ” ಅಂತ, ಹಾಗೆನಾ?

ಉ: ಹೌದು.

ರಘು ದೀಕ್ಷಿತ್ ಇಲ್ಲಿ ಅವರು ಸಂಯೋಜಿಸುತ್ತಿರುವ ಬೇಂದ್ರೆಯವರ ಬಾರೋ ಸಾಧನಕೇರಿಗೆ ಹಾಡನ್ನು ಹಾಡಿ ತೋರಿಸಿದರು. ಅದನ್ನು ಆಲಿಸಲು  ಇಲ್ಲಿ ಕ್ಲಿಕ್ ಮಾಡಿ.

ಪ್ರ: ಬಹುಶಃ ನೀವು ಜನಪದ ಶೈಲಿಗೆ ಸಮೀಪವಾದ ಹಾಡುಗಳನ್ನು ಅಂದರೆ, ಬೇಂದ್ರೆ, ಮಧುರಚೆನ್ನ, ಕಣವಿ, ಇಂತಹವರ ಹಾಡುಗಳನ್ನು ತೆಗೆದುಕೊಂಡು ಸಂಯೋಜಿಸಬಹುದೇನೋ.

ಉ: ಹೌದು. ತೆಗದುಕೊಳ್ಳುತ್ತಾ ಇದ್ದೇನೆ.

ಪ್ರ: ನಿಮ್ಮ ಹಾಡುಗಳಲ್ಲಿ ಇನ್ನೊಂದು ಆಯಾಮ ಇದೆ. ಅದು ರಾಕ್ ಶೈಲಿ.

ಉ: ರಾಕ್ ಶೈಲಿ ಅಲ್ಲ ಅದು (ಇಲ್ಲಿ ಅವರು ಅದನ್ನು ಒತ್ತಿ ಹೇಳಿದರು). ನನ್ನ ಉಪಕರಣಗಳನ್ನು ಬಿಟ್ಟು ಹಾರ್ಮೋನಿಯಂ ತಬಲ ಹಾಕಿ, ನನಗೂ ಆ ಜನಪದ ಗಾಯಕನಿಗೂ ಏನೂ ವ್ಯತ್ಯಾಸ ಇರುವುದಿಲ್ಲ. ಟ್ಯೂನ್ ವಿಷಯದಲ್ಲಿ ನಾನು ಯಾವತ್ತೂ ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಲು ಹೋಗಿಯೇ ಇಲ್ಲ. ಇನ್ಸ್ಟ್ರುಮೆಂಟೇಶನ್ ಏನಿದೆಯೇ ಅದನ್ನು ನಾನು ಸ್ವಲ್ಪ ಆಧುನಿಕಗೊಳಿಸಿದ್ದೇನೆ, ಅಷ್ಟೆ. ನಾನು ಅದನ್ನು ಬಾರೋ ಸಾಧನ ಕೇರಿಗೆ ಅಂತ ಹಾಡಲು ಹೋಗಿಲ್ಲ (ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಿ ತೋರಿಸುತ್ತಾರೆ). ನಾನು ಹಾಡುವಾಗ ಕನ್ನಡನಾಡಿನ ಒಬ್ಬ ಹಾಡುಗಾರ ಹೇಗೆ ಹಾಡುತ್ತಾನೋ ಹಾಗೆಯೇ ಹಾಡುತ್ತೇನೆ. ಕೇವಲ ಸಂಗೀತದ ಉಪಕರಣಗಳು ಮಾತ್ರ ಪಾಶ್ಚಿಮಾತ್ಯ, ಅಷ್ಟೆ.

ಪ್ರ: ಯುವರಾಜ ಕಾಲೇಜಿನಲ್ಲಿದ್ದಾಗ ನಾನು ಗಿಟಾರ್ ಕಲಿತೆ ಅಂತ ಹೇಳಿದ್ರಿ. ಅಲ್ಲಿಂದ ಮುಂದೇನಾಯಿತು?

ಉ: ಅದು ಆದ ನಂತರ ನಾನು ನನ್ನಷ್ಟಕ್ಕೆ ಗಿಟಾರ್ ನುಡಿಸುತ್ತ ಇದ್ದೆ. ಮೈಸೂರಿನಲ್ಲಿ ಎಚ್ ಎನ್ ನರಸಿಂಹಮೂರ್ತಿ ಎಂಬ ದೊಡ್ಡ ಪಿಟೀಲು ವಿದ್ವಾಂಸರಿದ್ದಾರೆ. ಅವರ ಮಗ ಎಚ್ ಎನ್ ಭಾಸ್ಕರ್ ಅಂತ ಆತನೂ ಪಿಟೀಲು ವಿದ್ವಾಂಸ. ಆತನನ್ನು ಕಷ್ಟಪಟ್ಟು ನನ್ನ ಜೊತೆ ಫ್ಯೂಶನ್ ಸಂಗೀತ ತಯಾರಿಸಲು ಒಪ್ಪಿಸಿದೆ. ನಾನೂ ಅವನೂ ಸೇರಿಕೊಂಡು ಅಂತರಾಗ್ನಿ ಅಂತ ಒಂದು ಬ್ಯಾಂಡ್ ಸುರುಮಾಡಿಕೊಂಡೆವು.

ಪ್ರ: ಆ ಅಂತರಾಗ್ನಿ ಈಗಲೂ ಇದೆಯಾ?

ಉ: ಇಲ್ಲ ೨೦೦೫ರ ತನಕ ಮಾತ್ರ ಇತ್ತು. ನಂತರ ಭಾಸ್ಕರ್ ದೊಡ್ಡ ದೊಡ್ಡ ಗಾಯಕರ ಜೊತೆ ನುಡಿಸತೊಡಗಿದ. ಹಾಗಾಗಿ ನಮಗೆ ಒಟ್ಟಿಗೆ ಸಮಯ ಸಿಗುವುದು ಕಡಿಮೆಯಾಯಿತು.

ಪ್ರ: ನೀವು ಎಂಎಸ್‌ಸಿ ಮಾಡಿ ಯಾವುದೋ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇದ್ರಲ್ವ? ಆವಾಗ ಹಾಡ್ತಾ ಇದ್ರಾ?

ಉ: ನಾನು ಬೆಲ್ಜಿಯಂನಲ್ಲಿ ಕೆಲಸ ಮಾಡುತ್ತಾ ಇದ್ದಾಗ ಒಂದು ಕಡೆ ಪೇಯಿಂಗ್ ಗೆಸ್ಟ್ ಆಗಿದ್ದೆ. ಆ ಮನೆಯ ಯಜಮಾನ ನಾನು ಹಾಡುವುದನ್ನು ಮೆಚ್ಚಿಕೊಂಡು ಅಲ್ಲಿಯ ಒಂದು ರೇಡಿಯೋ ಕೇಂದ್ರದಲ್ಲಿ ಹಾಡಲು ಅವಕಾಶ ಮಾಡಿಸಿಕೊಟ್ಟರು. ಅಲ್ಲಿ ಹಾಡಿದಾಗ ಜನ ಅದನ್ನು ತುಂಬ ಮೆಚ್ಚಿಕೊಂಡರು. ಆಗ ನನಗೆ ಅನ್ನಿಸಿತು. ಯಾವುದೋ ಒಂದು ದೇಶದಲ್ಲಿ, ನಮ್ಮ ಭಾಷೆಯೇ ಅರ್ಥವಾಗದಿದ್ದರೂ ಜನ ನನ್ನ ಹಾಡನ್ನು ಮೆಚ್ಚಿಕೊಳ್ಳಬೇಕಾದರೆ ನಮ್ಮ ದೇಶದಲ್ಲಿ ನಮ್ಮ ಭಾಷೆ ಅರ್ಥವಾಗುವವರು ಇನ್ನೆಷ್ಟು ಮೆಚ್ಚಿಕೊಳ್ಳಬಹುದು ಅಂದುಕೊಂಡು ನಮ್ಮ ದೇಶಕ್ಕೆ ವಾಪಾಸು ಬಂದೆ. ನಾನು ಅತಿ ಬೇಗದಲ್ಲೆ ಖ್ಯಾತ ಗಾಯಕನಾಗುತ್ತೇನೆ ಅಂದುಕೊಂಡೆ. ಆದರೆ ನಾನು ೯ ವರ್ಷಗಳ ಕಾಲ ಕಷ್ಟಪಡಬೇಕಾಯಿತು.

ಪ್ರ: ೯ ವರ್ಷ ನೀವು ಆ ಫಾರ್ಮಸ್ಯೂಟಿಕಲ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡೆ ಗಾಯಕನಾಗಲು ಪ್ರಯತ್ನಿಸಿದಿರಾ?

ಉ: ಇಲ್ಲ. ಆ ರೇಡಿಯೋ ಕಾರ್ಯಕ್ರಮದ ಒಂದು ವಾರದಲ್ಲೇ ಕೆಲಸ ಬಿಟ್ಟುಬಿಟ್ಟು ನಮ್ಮ ದೇಶಕ್ಕೆ ಬಂದೆ. ಆ ವಯಸ್ಸು ಹಾಗಿತ್ತು. ಅದು ಒಂದು ಹುಚ್ಚು ಕುದುರೆ ಹತ್ತಿದಂತೆ.

ಪ್ರ: ತುಂಬ ಜನ ಸಾಧಕರು ಇದೇ ಕತೆ ಹೇಳುತ್ತಾರೆ. ಒಂದು ಹತ್ತು ವರ್ಷ ಒದ್ದಾಡಿದೆ ಅಂತ.

ಉ: ಹೌದು. ನನ್ನ ಸಂಗೀತ ಬಾಲಿವುಡ್‌ನಲ್ಲಿ ಆಗಾಗಲೇ ಇದ್ದುದಕ್ಕಿಂತ ಸಂಪೂರ್ಣ ವಿಭಿನ್ನವಾಗಿತ್ತು. ನಾನು ಕಾರ್ಯಕ್ರಮ ನೀಡಿದಾಗ ಜನ ಇಷ್ಟಪಡುತ್ತಿದ್ದರು. ಆದರೆ ಯಾವುದೇ ರೆಕಾರ್ಡಿಂಗ್ ಕಂಪೆನಿಯವರು ಅದನ್ನು ನಂಬುತ್ತಾ ಇರಲಿಲ್ಲ. ಅಲ್ಲಿ ಇಲ್ಲಿ ಚಿಕ್ಕಪುಟ್ಟ ಕಾರ್ಯಕ್ರಮ ನೀಡುವ ಮಟ್ಟದಲ್ಲೇ ಇತ್ತು.

ಪ್ರ: ನಿಮಗೆ ಮೊದಲ ಬ್ರೇಕ್ ಸಿಕ್ಕಿದ್ದು ಆಲ್ಬಂ ಬಂದ ಮೇಲೆಯಾ?

ಉ: ಹೌದು. ೨೦೦೭ರಲ್ಲಿ ಮೊದಲ ಆಲ್ಬಂ ಬಂದರೂ ಜನಕ್ಕೆಲ್ಲ ಗೊತ್ತಾಗಿದ್ದು ಎರಡು ವರ್ಷ ಆದ ಮೇಲೆಯೇ. ಆದರೂ ನಾನು ಸಿನಿಮಾದಲ್ಲಿ ಹಾಡಿದ ಮೇಲೆಯೇ ಜನರನ್ನು ತಲುಪಲು ಸಾಧ್ಯವಾಗಿದ್ದು. ಜನರು ಇಂದಿಗೂ ಸಿನಿಮಾದಲ್ಲಿ ಬಂದವನೇ ಪ್ರತಿಭಾವಂತ ಅನ್ನುವ ತಪ್ಪುಕಲ್ಪನೆಯಲ್ಲೇ ಇದ್ದಾರೆ. ನನಗೆ ಸಾಂಗ್‌ಲೈನ್ಸ್ ಪ್ರಶಸ್ತಿ ಬಂತು. ಆದರೂ ಸಿನಿಮಾದ ಮೂಲಕವೇ ನಾನು ಹೆಚ್ಚು ಬೆಳಕಿಗೆ ಬಂದಿದ್ದು. ನನ್ನನ್ನು ಕನ್ನಡಿಗರು ಯಾರೂ ಗಮನಿಸಲೂ ಇಲ್ಲ. ನೀವು ಜಗತ್ತೆಲ್ಲ ಪ್ರಖ್ಯಾತರಾಗಿರಬಹುದು. ಅದರೆ ಮನೆಯಲ್ಲೇ ನಿಮ್ಮನ್ನು ಗುರುತಿಸಿಲ್ಲ ಅಂದರೆ ಏನೋ ಒಂದು ಕೊರತೆ ಎಂಬ ಭಾವನೆ ಇರುತ್ತದೆ.

ಪ್ರ: ಹಿತ್ತಿಲ ಗಿಡ ಮದ್ದಲ್ಲ ಅನ್ನುತ್ತಾರಲ್ಲ ಹಾಗೆ.

ಉ: ಆದರೆ ಜನರು ಗುರುತಿಸಿದ್ದಾರೆ. ಅವರ ಪ್ರೀತಿ ಸಿಕ್ಕಿದೆ. ಆದರೂ ಇಂಡಸ್ಟ್ರಿ ಅದರಲ್ಲೂ ಮುಖ್ಯವಾಗಿ ಸಿನಿಮಾ ಇಂಡಸ್ಟ್ರಿ ಇನ್ನೂ ಪೂರ್ತಿಯಾಗಿ ಗುರುತಿಸಿಲ್ಲ.

ಪ್ರ: ಸಿನಿಮಾಕ್ಕೆ ಸಂಗೀತ ನೀಡಿದ್ದೀರಲ್ಲಾ?

ಉ: ಮೂರು ಸಿನಿಮಾ ಮಾಡಿದೆ. ಆದರೆ, (ಮೆತ್ತಗೆ) ಬಿಟ್ಟಿ ಮಾಡಬೇಕಾಗಿ ಬಂತು. ಹ್ಹ ಹ್ಹ

ಪ್ರ: ನಿಜಾನಾ?

ಉ: ಇನ್ನೇನು ಮಾಡುವುದು?

ಪ್ರ: ಮೊನ್ನೆ ಯಾವನೋ ಒಬ್ಬ ಯಾವುದೋ ಒಂದು ವೆಬ್‌ಸೈಟ್‌ನಲ್ಲಿ ಹಾಕಿದ್ದ, ರಘು ದೀಕ್ಷಿತ್ ಒಂದು ಸಿನಿಮಾಕ್ಕೆ ಒಂದು ಕೋಟಿ ಸಂಭಾವನೆ ಎಂದು..

ಉ: ಅದರಿಂದಲೇ ನನಗೆ ತೊಂದರೆ ಆಗಿದ್ದು. ಅದರಿಂದ ಜನ ನನ್ನ ಹತ್ತಿರ ಬರುವುದೇ ನಿಲ್ಲಿಸಿಬಿಟ್ರು.

ಪ್ರ: ಹಾಗಾದರೆ ಆ ವೆಬ್‌ಸೈಟಿನಲ್ಲಿ ಹಾಕಿದ್ದು ಸುಳ್ಳಾ?

ಉ: ಹೌದು. ಈವಾಗ ಅದರ ಬಗ್ಗೆ ಏನೂ ಚರ್ಚಿಸಿ ಪ್ರಯೋಜನವಿಲ್ಲ. ಈಗ ನನಗೆ ಕನ್ನಡ ಸಿನಿಮಾಕ್ಕೆ ಸಂಗೀತ ಮಾಡಬೇಕು ಎನ್ನುವ ಹಂಬಲವೂ ಹೋಗುತ್ತಾ ಇದೆ.

ಪ್ರ: ನೀವು ನಾಟಕಕ್ಕೂ, ಹಯವದನಕ್ಕೆ, ಸಂಗೀತ ನೀಡಿದ್ದಿರಲ್ವಾ? ಅದು ಯಾವ ಶೈಲಿಯಲ್ಲಿ ಸಂಗೀತ ನೀಡಿದ್ದಿರಿ?

ಉ: ಭಾರತೀಯ ಜನಪದ ಸಂಗೀತ, ಆದರೆ ಹಾಡಿದ್ದು ಇಂಗ್ಲಿಶಿನಲ್ಲಿ. ಅದು ಇಂಗ್ಲಿಶ್ ನಾಟಕ, ಗಿರೀಶ್ ಕಾರ್ನಾಡರೇ ಬರೆದಿದ್ದು.

ಪ್ರ: ಜಸ್ಟ್ ಮಾತ್ ಮಾತಲ್ಲಿ ಸಿನಿಮಾದಲ್ಲಿಯ ನಿಮ್ಮ ಸಂಗೀತ ಚೆನ್ನಾಗಿದೆ.

ಉ: ಸಂಗೀತ ಚೆನ್ನಾಗಿದ್ದರೂ ಸಿನಿಮಾ ಹಿಟ್ ಆಗಿಲ್ವಲ್ಲ? ಅವರಿಗೆ ನಾನು unlucky ಸಂಗೀತ ನಿರ್ದೇಶಕ ಆಗಿಬಿಟ್ಟೆ. ಸೈಕೋ ಕೂಡ ಹಾಗೆಯೇ. ಜನ ಇಂದಿಗೂ ನನ್ನನ್ನು ನೆನಪಿಟ್ಟುಕೊಳ್ಳುವುದು ಸೈಕೋದ ಹಾಡಿಗೇ.

ಪ್ರ: ಜಸ್ಟ್ ಮಾತ್ ಮಾತಲ್ಲಿ ನಿಮ್ಮ ಸಂಗೀತ ನಿಜಕ್ಕೂ ಚೆನ್ನಾಗಿದೆ. ಶ್ರೇಯಾ ಘೋಶಾಲ್ ಹಾಡಿದ ಎಲ್ಲೊ ಜಿನಿಗಿರುವ ನೀರು ಎಂಬ ಹಾಡಿನ ಸಂಗೀತ ತುಂಬ ಚೆನ್ನಾಗಿದೆ. ಅಂದ ಹಾಗೆ, ನೀವು ಸಿಟ್ಟು ಮಾಡಿಕೊಳ್ಳಬಾರದು, ಮೊನ್ನೆ ಯಾರೋ ಹೇಳುವುದನ್ನು ಕೇಳಿದೆ -”ರಘು ದೀಕ್ಷಿತ್ ಹಾಡಬಾರದು, ಸಂಗೀತ ನೀಡಬೇಕು” ಎನ್ನುತ್ತಿದ್ದರು.

ಉ: ನನಗೂ ಗೊತ್ತಿದೆ. ಎಲ್ಲ ಹಾಡುಗಳನ್ನು ನಾನೇ ಹಾಡಬೇಕೆಂದುಕೊಂಡಿರುವುದಿಲ್ಲ. ಆದರೆ ನಿರ್ದೇಶಕರಿಗೆ ಕೇಳಿಸುವುದಕ್ಕೋಸ್ಕರ ಟ್ಯೂನ್ ಮಾಡುವಾಗ ನಾನೇ ಹಾಡಿರುತ್ತೇನೆ. ಅವರು ಅದೇ ಇರಲಿ, ನೀವು ಹಾಡಿದ್ದೇ ಚೆನ್ನಾಗಿದೆ ಎಂದು ಒತ್ತಾಯ ಮಾಡಿ ಅದನ್ನೇ ಇಟ್ಟುಕೊಂಡರು. ಹಾಗೆ ಆಗಿರುವುದು ಅದು.

ಪ್ರ: ನೀವು ಈಗ ಬೇಂದ್ರೆಯವರ ಒಂದು ಹಾಡನ್ನು ಸಂಯೋಜನೆ ಮಾಡುತ್ತಾ ಇದ್ದೀರಿ. ಅದೇ ರೀತಿ ಇನ್ನೂ ಹಲವಾರು ಕವಿಗಳ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುವ ಆಲೋಚನೆ ಮಾಡುತ್ತಾ ಇದ್ದೀರಾ? ಉದಾಹರಣೆಗೆ ಅಡಿಗರ ಕಟ್ಟುವೆವು ನಾನು, ನಿಸಾರ್ ಅಹಮದ್ ಅವರ ಕುರಿಗಳು ಸಾರ್, ಇತ್ಯಾದಿ?

ಉ: ಹಾಗೆ ಎಲ್ಲ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಬೇಕಾದರೆ ನನ್ನ ಒಂದು ಆಯುಸ್ಸು ಸಾಕಾಗಲಾರದು. ಆಸೆಯೇನೋ ಇದೆ. ಎಷ್ಟರ ಮಟ್ಟಿಗೆ ನೆರವೇರುತ್ತೋ ಗೊತ್ತಿಲ್ಲ.

ಪ್ರ: ಯಕ್ಷಗಾನ ನೋಡಿದ್ದೀರಾ?

ಉ: ಹೌದು. ನನಗೆ ತುಂಬ ಇಷ್ಟ.

ಪ್ರ: ಅದಕ್ಕೇನಾ ಒಂದು ಹಾಡಿನಲ್ಲಿ “ಎಲವೆಲವೋ ಧೂರ್ತ” ಎಂದು ಸೇರಿಸಿದ್ದು?

ಉ: ಹೌದು. ಯಕ್ಷಗಾನದಲ್ಲಿರುವ ತೂಕ, ಶ್ರೀಮಂತಿಕೆ ಮತ್ತು ಕಚ್ಚಾ ಇವುಗಳ ಸಮ್ಮಿಶ್ರಣ ಇನ್ನೆಲ್ಲೂ ಇಲ್ಲ. ನನಗೆ ಅದು ತುಂಬ ಇಷ್ಟ. ಅದಕ್ಕೆ ಅದನ್ನು ಕೋಟೆ ಸಿನಿಮಾದಲ್ಲಿ ಬಳಸಿಕೊಂಡೆ.

ಪ್ರ: ಈ ಲುಂಗಿ ಟೀಶರ್ಟ್ ವೇಷದ ಆಲೋಚನೆ ಎಲ್ಲಿಂದ ಬಂತು?

ಉ: ವೇದಿಕೆಯಲ್ಲಿ ಕಾರ್ಯಕ್ರಮ ನಿಡುವಾಗ ಅದಕ್ಕೆ ಒಂದು ಬೇರೆ ಆಯಾಮ ನೀಡಬೇಕೆಂದು ತುಂಬ ಆಲೋಚಿಸಿ ಈ ವೇಷ ತೀರ್ಮಾನಿಸಿದ್ದು. ಇದು ತುಂಬ ಆಲೋಚಿಸಿಯೇ ತೆಗೆದುಕೊಂಡ ತೀರ್ಮಾನ. ಕಾರ್ಯಕ್ರಮಕ್ಕೆ ಬರುವವರಿಗೆ ಒಂದು ಅನುಭವ ನೀಡಬೇಕು. ಅದಿಲ್ಲವಾದಲ್ಲಿ ಜನ ಸಿ.ಡಿ. ಹಾಕಿಕೊಂಡು ಮನೆಯಲ್ಲೇ ಕೇಳುವವರು. ವೇದಿಕೆಯ ಏರ್ಪಾಡು, ಬೆಳಕಿನ ವ್ಯವಸ್ಥೆ, ಧ್ವನಿ ತಂತ್ರಜ್ಞಾನ, ಎಲ್ಲಾ ಮುಖ್ಯವಾಗುತ್ತವೆ. ಹಾಗೆಯೇ ಅವನು ವೇದಿಕೆಯಲ್ಲಿ ಹೇಗೆ ಮಾತನಾಡುತ್ತಾನೆ, ಯಾವ ರೀತಿ ಡ್ರೆಸ್ ಮಾಡಿಕೊಂಡಿದ್ದಾನೆ ಎಲ್ಲವೂ ಮುಖ್ಯವಾಗುತ್ತವೆ.

ಪ್ರ: ಅಂದರೆ ನೀವು ಜನಪದ ಮತ್ತು ಆದುನಿಕ ವೇಷಗಳ ಫ್ಯೂಶನ್ ಮಾಡುತ್ತಿದ್ದೀರಾ?

ಉ: ಇಲ್ಲ. ನಾವು ಮನೆಯಲ್ಲಿ ಯಾವ ಬಟ್ಟೆ ಹಾಕಿಕೊಳ್ಳುತೇವೆಯೋ ಅದೇ ಬಟ್ಟೆ. ಕುರ್ತ ಒಂದು ಪಂಚೆ. ಮನೆಯಲ್ಲಿ ಬಿಳಿ ಪಂಚೆ ಉಟ್ಟುಕೊಂಡೇ ಬೆಳೆದವನು ನಾನು. ನನ್ನ ಸಂಗೀತ ಅಂದರೆ ಮೂಲತಃ ಜನಪದ ಸಂಗೀತ ತುಬ ವರ್ಣಮಯ. ಅದನ್ನು ಬಿಂಬಿಸಲು ಬಣ್ಣದ ಬಟ್ಟೆ. ನನ್ನ ಉಡುಪು ನೋಡಿದ ತಕ್ಷಣ ಜನರಿಗೆ ಗೊತ್ತಾಗಬೇಕು ಈತ ದಕ್ಷಿಣ ಭಾರತದವನು ಎಂದು.

ಪ್ರ: ಮತ್ತೆ ಗೆಜ್ಜೆ?

ಉ: ಗೆಜ್ಜೆ ಒಂದು ಜಾನಪದ ಸಂಪ್ರದಾಯ ಅದು. ನಮ್ಮ ಹರಿದಾಸರು ಕೂಡ ಅದನ್ನು ಬಳಸಿದ್ದಾರೆ. ನಾನು ಭರತನಾಟ್ಯ ಕಲಿತಿರುವುದರಿಂದ ನನಗೆ ಅದು ಸಹಜ ಅನ್ನಿಸಿದೆ. ನಾನು ಅದನ್ನು ಲಯಕ್ಕೆ ಬಳಸುತ್ತೇನೆ. ಕೆಲವೊಮ್ಮೆ ಮಾನಿಟರ್ ಸ್ಪೀಕರ್ ಕೆಲಸ ಮಾಡದಿದ್ದಾಗ ಬ್ಯಾಂಡಿನ ಎಲ್ಲ ಕಲಾವಿದರು ಲಯಬದ್ಧವಾಗಿ ನುಡಿಸಲು ನಾನು ಕಾಲುಕುಟ್ಟುವುದು ಸಹಾಯ ಮಾಡುತ್ತದೆ.

ಪ್ರ: ನಿಮ್ಮ ಯಶಸ್ಸಿಗೆ ಕಾರಣ ಏನು?

ಉ: ಯಶಸ್ಸಿಗೆ ಕಾರಣ ಎಂದರೆ ಹಣೆಬರಹ. ಹ್ಹ ಹ್ಹ ಹ್ಹ. ಇಲ್ಲ. ಅದಕ್ಕೆ ತುಂಬ ಕಷ್ಟಪಡಬೇಕಾಗಿತ್ತು. ಇನ್ನೂ ಕಷ್ಟಪಡುತ್ತಲೇ ಇದ್ದೇನೆ. ನಾನು ಯಶಸ್ವಿಯಾಗಿದ್ದೇನೆ ಎಂದು ಹೇಳುವ ಹಾಗಿಲ್ಲ ಈಗಲೇ. ನಾನು ಏನು ಸಾಧಿಸಬೇಕೆಂದುಕೊಂಡಿದ್ದೇನೋ ಅದರಿಂದ ಇನ್ನೂ ಎರಡು ಮೂರು ವರ್ಷ ದೂರ ಇದ್ದೇನೆ.

ಪ್ರ: ಏನು ಅದು ನೀವು ಸಾಧಿಸಬೇಕೆಂದುಕೊಂಡಿರುವುದು?

ಉ: ಒಬ್ಬ ಅಂತಾರಾಷ್ಟ್ರೀಯ ಕಲಾವಿದನಾಗಿ ಗುರುತಿಸಿಕೊಳ್ಳುವುದು. ಸದ್ಯಕ್ಕೆ ನಾನು ಈಗಲೂ ನನ್ನ ಕೈಯಿಂದ ಹಣ ಖರ್ಚು ಮಾಡಿ ವಿದೇಶಗಳಿಗೆ ಹೋಗಿ ಕಾರ್ಯಕ್ರಮ ನೀಡುತ್ತಿದ್ದೇನೆ.

ಪ್ರ: ಅಂದರೆ ಈಗ ನಿವು ವಿದೇಶಗಳಿಗೆ ಕಾರ್ಯಕ್ರಮ ನೀಡಲು ನಿಮ್ಮ ಕೈಯಿಂದ ಖರ್ಚು ಮಾಡಿಕೊಂಡು ಹೋಗುತ್ತಿದ್ದೀರಾ?

ಉ: ಹೌದು. ಅಂದರೆ ಅವರು ನೀಡುತ್ತಿರುವ ಹಣ ಪ್ರಯಾಣ ಸಹಿತ ನನ್ನ ಎಲ್ಲ ಖರ್ಚುಗಳನ್ನು ಸರಿದೂಗಿಸುತ್ತಿಲ್ಲ. ಅಲ್ಲಿ ನಾನು ಸ್ಥಾಪಿತಗೊಳ್ಳುತ್ತಿದ್ದಂತೆ ನನ್ನ ಫೀಸು ಜಾಸ್ತಿ ಆಗಿ ನನ್ನ ಖರ್ಚನ್ನು ಸರಿದೂಗಿಸುತ್ತದೆ.

ಪ್ರ: ಆಗ ನಾವು ನಿಮ್ಮನ್ನು ಆಹ್ವಾನಿಸಲು ಆಗಲಿಕ್ಕಿಲ್ಲ

ಉ: ಹ್ಹ ಹ್ಹ. ಅಲ್ಲಿಯ ಫೀಸಿಗೂ ಇಲ್ಲಿಯ ಫೀಸಿಗೂ ಹೋಲಿಸುವಂತಿಲ್ಲ.

ಪ್ರ: ಗ್ರಾಮ್ಮಿ ಅವಾರ್ಡ್ ತರಹ ಪ್ರಶಸ್ತಿಗಳು …

ಉ: ಪ್ರಶಸ್ತಿಗಳು ಒಂದು ರೀತಿಯ ಗುರುತಿಸುವಿಕೆಯೇ. ನನಗೆ ಸಾಂಗ್‌ಲೈನ್ಸ್ ಅವಾರ್ಡ್ ಬಂದಿದ್ದು ಹಾಗೆನೇ. ಸಂಗೀತಗಾರನಾಗಿ ಕೆಲಸ ಪ್ರಾರಂಭಿಸಿ ಹದಿಮೂರು ವರ್ಷಗಳ ನಂತರ ಬಂದ ಪ್ರಶಸ್ತಿ ಇದು. ನನ್ನ ಲೈಫಿನಲ್ಲಿ ಇದು ಪ್ರಥಮ ಪ್ರಶಸ್ತಿ.

ಪ್ರ: ನನಗೆ ಒಂದು ವಿಷಯ ಅರ್ಥವಾಗಲಿಲ್ಲ. ಹದಿಮೂರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿದ್ದೀರಾ. ಹಾಗಿದ್ದಾಗ best newcomer ಎಂಬ ಪ್ರಶಸ್ತಿ ಹೇಗೆ ಸಾಧ್ಯ?

ಉ: ಜಾಗತಿಕ ಕ್ಷೇತ್ರದಲ್ಲಿ ಹೊಸಬ ಎಂದು. ಜಾಗತಿಕ ಮಟ್ಟದಲ್ಲಿ ೨೫೩ ಹೊಸ ಕಲಾವಿದರಲ್ಲಿ ನಾನು ಮೇಲೆ ಹೋಗಿ ನಿಂತಿರುವುದು.

ಪ್ರ: ನನಗೆ ನಿಮ್ಮ ಬಗ್ಗೆ ಒಂದು ತುಂಬ ಇಷ್ಟದ ವಿಷಯವೆಂದರೆ ನೀವು ಕರ್ನಾಟಕದ ಗಡಿಯಾಚೆ ಕನ್ನಡ ಮತ್ತು ಕನ್ನಡದ ಸಾಹಿತ್ಯ ಸಂಗೀತಗಳನ್ನು ತೆಗೆದುಕೊಂಡು ಹೋಗಿದ್ದೀರಿ, ಅದಕ್ಕೆ.

ಉ: ಧನ್ಯವಾದಗಳು.

ಪ್ರ: ನೀವು ಇಂಗ್ಲೆಂಡ್, ಡೆನ್ಮಾರ್ಕ್ ಇತ್ಯಾದಿ ದೇಶಗಳಲ್ಲಿ ಹೋಗಿ ಅಲ್ಲಿಯವರಿಗೆ ಕನ್ನಡದ ಪರಿಚಯ ಮಾಡಿಕೊಟ್ಟಿದ್ದೀರಿ. ಇಂತಹವರು ತುಂಬ ಕಡಿಮೆ ಎಂದು ನನ್ನ ಅಭಿಪ್ರಾಯ. ಈ ವಿಷಯದಲ್ಲಿ ನಿಮ್ಮ ಸಾಧನೆ ಅತಿಮುಖ್ಯವಾಗುತ್ತದೆ.

ಉ: ನನ್ನಂತಹವರು ಒಟ್ಟು ಹದಿನೈದು ಜನ ಬೇಕಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ. ಉದಾಹರಣೆಗೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಇನ್ಫೋಸಿಸ್‌ನ ನಾರಾಯಣ ಮೂರ್ತಿ. ಆಗ ಜಗತ್ತಿಗೆಲ್ಲ ಕನ್ನಡ ಕರ್ನಾಟಕದ ಪರಿಚಯ ಆಗುತ್ತಿತ್ತು.

ಪ್ರ: ಸಾಧನೆ ಮಾಡಬೇಕು ಎಂದುಕೊಳ್ಳುವವರಿಗೆ ನಿಮ್ಮ ಉಪದೇಶ ಏನು?

ಉ: ಉಪದೇಶ ಮಾಡುವಷ್ಟು ನಾನು ಇನ್ನೂ ಸಾಧನೆ ಮಾಡಿಲ್ಲ. ಆದರೂ ಹೇಳುವುದಾದರೆ ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಳ್ಳಲು ತಯಾರಿರಬೇಕು. ಅದು ಕೇವಲ ಹಣ ಆಗಬೇಕಾಗಿಲ್ಲ. ಅಪ್ಪ, ಅಮ್ಮ, ಹೆಂಡತಿ, ಸಂಬಂಧಿಕರು, ಸ್ನೇಹಿತರು, ಎಲ್ಲ ಕಳಕೊಳ್ಳಲು ಸಿದ್ಧರಿರಬೇಕು.

ಪ್ರ: ನೀವೇನೂ ಅಂತಹ ಸ್ಥಿತಿಗೆ ಬಂದಿಲ್ಲವಲ್ಲ?

ಉ: ಇಲ್ಲ. ಈಗ ನೋಡಿ ನಾನಿಲ್ಲಿ ಮೈಸೂರಿಗೆ ಕಾರ್ಯಕ್ರಮ ನೀಡಲು ಬಂದಿದ್ದೇನೆ. ಅಮ್ಮನಿಗೆ ಫೋನೂ ಕೂಡ ಮಾಡಿಲ್ಲ. ಅಮ್ಮನಿಗೆ ಗೊತ್ತಿದೆಯೋ ಇಲ್ಲವೋ ಇವತ್ತು ನನ್ನ ಕಾರ್ಯಕ್ರಮ ಇದೆ ಎಂದು. ನಿಮ್ಮ ಸುತ್ತಮುತ್ತ ಇರುವವರು ನಿಮ್ಮನ್ನು ತುಂಬ ಅರ್ಥಮಾಡಿಕೊಳ್ಳುವವರಾಗಿರಬೇಕು. ನನ್ನಮ್ಮ ಇದುವರೆಗೆ ನನ್ನ ಹತ್ತಿರ ಬೇಸರ ಮಾಡಿಕೊಂಡಿಲ್ಲ. ಯಾಕೋ ಒಮ್ಮೆ ಫೋನಾದ್ರೂ ಮಾಡಬಾರದಾ ಎಂದಾಗಲೀ, ನನ್ನ ಹೆಂಡತಿ ಕೂಡ ನಿನ್ನನ್ನು ಬಿಟ್ಟುಹೋಗುತ್ತೇನೆ ಎಂದಾಗಲಿ, ಈ ರೀತಿ ನನಗೆ ಯಾವತ್ತೂ ಆಗಿಲ್ಲ. ಈ ವಿಷಯದಲ್ಲಿ ನಾನು ತುಂಬ ಅದೃಷ್ಟವಂತ.

ಪ್ರ: ಈ ಕ್ಷೇತ್ರದಲ್ಲಿ ಮೇಲೆ ಬರಲು ನಿಮಗೆ ಯಾರಾದರೂ ಗಾಡ್‌ಫಾದರ್ ಅಂತ ಸಿಕ್ಕಿದ್ರಾ?

ಉ: ತುಂಬ ಜನ ನನ್ನ ಕಷ್ಟ ಕಾಲದಲ್ಲಿ ಸಹಾಯ ಮಡಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಇನ್ನು ನನ್ನ ಕಥೆ ಮುಗಿಯಿತು ಅನ್ನೋ ಸಂದರ್ಭಕ್ಕೆ ಸರಿಯಾಗಿ ಒಬ್ಬರು ಸಹಾಯ ಮಾಡುವವರು ಸಿಕ್ಕಿದ್ದಾರೆ. ಒಮ್ಮೆ ಬೆಂಗಳೂರಿನಲ್ಲಿ ಒಂದು ಚಿಕ್ಕ ಕಾರ್ಯಕ್ರಮ ನೀಡಿದ್ದೆವು. ನಾನು ಭಾಸ್ಕರ ಮತ್ತು ಒಬ್ಬ ಲಯವಾದ್ಯಗಾರ. ಅದು ಬೆಂಗಳೂರಿನಲ್ಲಿ ನನ್ನ ಪ್ರಥಮ ಕಾರ್ಯಕ್ರಮ. ವೇದಿಕೆಯ ಕೆಳಗೆ ಒಬ್ಬ ಗಂಡ ಹೆಂಡತಿ ಮತ್ತು ಚಿಕ್ಕ ಮಗು ನಿಂತಿದ್ದರು. ಅವರು “ನಿಮ್ಮ ಕಾರ್ಯಕ್ರಮ ತುಂಬ ಚೆನ್ನಾಗಿದೆ. ನೀವು ಇದರ ಸಿ.ಡಿ. ಮಾಡಲೇಬೇಕು” ಎಂದರು. “ನನ್ನ ಹತ್ತಿರ ಅಷ್ಟೆಲ್ಲ ಹಣ ಇಲ್ಲ” ಅಂದೆ. ಆಗ ನನಗೆ ದೊಡ್ಡ ಸಂಬಳದ ಕೆಲಸವೂ ಇರಲಿಲ್ಲ. ನನ್ನ ಫೋನ್ ನಂಬರ್ ತೆಗೆದುಕೊಂಡರು. ಒಂದು ವಾರದ ನಂತರ ಪುನಃ ಫೋನ್ ಮಾಡಿದರು. ಭಾನುವಾರ ನಮ್ಮ ಮನೆಗೆ ಊಟಕ್ಕೆ ಬನ್ನಿ. ಬರುವಾಗ ನಿಮ್ಮ ಗಿಟಾರ್ ಕೂಡ ತೆಗೆದುಕೊಂಡು ಬನ್ನಿ ಎಂದರು. ಹಾಗೆಯೇ ಮಾಡಿದೆ. ಸುಮಾರು ಹದಿನೈದು ಜನ ಸ್ನೇಹಿತರನ್ನೂ ಆಹ್ವಾನಿಸಿದ್ದರು. ಎಲ್ಲರ ಮುಂದೆ ಹಾಡು ಹೇಳಿಸಿದರು. ಊಟ ಮಾಡಿ ಹೊರಡುವ ಸಮಯದಲ್ಲಿ ಆ ಮಗು ಒಂದು ಗ್ರೀಟಿಂಗ್ ಕಾರ್ಡ್ ಕೊಟ್ಟಿತು. ಆ ಗ್ರೀಟಿಂಗ್ ಕಾರ್ಡ್ ತೆರೆದು ನೊಡಿದರೆ ಅದರಲ್ಲಿ ಮೂವತ್ತು ಸಾವಿರ ರೂಪಾಯಿಯ ಒಂದು ಚೆಕ್.

ಪ್ರ: ಮೂವತ್ತು ಸಾವಿರ? ೧೯೯೭ರಲ್ಲಿ ಅದು ದೊಡ್ಡ ಮೊತ್ತವೇ. ಈಗಲೂ ಕೂಡ.

ಉ: ಹೌದು. ಹರಿಹರನ್ ಅಂತ ಅವರ ಹೆಸರು. ನಾನು ಕೇಳಿದೆ. ಏನಿದು ಎಂದು. ಅವರು ಹೇಳಿದರು -”ನಿಮಗೆ ಡೆಮೊ ರೆಕಾರ್ಡ್ ಮಾಡಲೂ ಹಣ ಇಲ್ಲ ಅಂದಿದ್ದಿರಿ ಆವತ್ತು. ಈ ಹಣ ಬಳಸಿ ನಿಮ್ಮ ಡೆಮೊ ರೆಕಾರ್ಡ್ ಮಾಡಿಸಿ. ನಿಮ್ಮ ಸಂಗೀತ ಇದಕ್ಕೆ ಅರ್ಹ”.

ಪ್ರ: ತುಂಬ ಶ್ರೀಮಂತರಿರಬೇಕು ಅವರು.

ಉ: ಶ್ರೀಮಂತರಲ್ಲ. ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಅಷ್ಟೆ.

ಪ್ರ: ನೀವು ಆ ಮೇಲೆ ಎಂದಾದರೂ ಅವರನ್ನು ಭೇಟಿ ಆಗಿದ್ದೀರಾ?

ಉ: ಹರಿಹರನ್ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ. ನನ್ನ ಜೀವನದ ಎಲ್ಲ ಪ್ರಮುಖ ಘಟ್ಟಗಳಲ್ಲಿ ಅವರು ನನ್ನ ಜೊತೆ ಇದ್ದೇ ಇದ್ದಾರೆ. ನಾನು ಅವರನ್ನು ಭೇಟಿ ಆಗಿ ಎಲ್ಲ ಚರ್ಚಿಸುತ್ತೇನೆ.

ಪ್ರ: ಆ ರೀತಿ ಮತ್ತೆ ಎಂದಾದರೂ ಆಗಿದೆಯಾ?

ಉ: ಆಗಿದೆ. ೨೦೦೫ರಲ್ಲಿ ಮುಂಬಯಿನಲ್ಲಿ ಒಬ್ಬ ಖ್ಯಾತ ರೆಕಾರ್ಡಿಂಗ್ ಕಂಪೆನಿಗೆ ನನ್ನ ಡೆಮೊ ತೆಗೆದುಕೊಂಡು ಹೋಗಿದ್ದೆ. ಸುಮಾರು ಎರಡು ಗಂಟೆ ಕಾಯಿಸಿದರು. ಕೊನೆಗೆ ಆಕೆ ಹೊರಗೆ ಬಂದು “ಹೇಳು ಏನಾಗಬೇಕು? ನಿನಗೆ ೫ ನಿಮಿಷ ಸಮಯ ಇದೆ” ಅಂದಳು. ನಾನು ನನ್ನ ಬಗ್ಗೆ ಹೇಳಿದೆ. “ನಿನ್ನ ಹತ್ತಿರ ಎಷ್ಟು ಹಣ ಇದೆ? ನೀನು ಸುಂದರ ಇಲ್ಲ. ನಿನ್ನನ್ನು ಪ್ರೊಮೋಟ್ ಮಾಡಬೇಕಾದರೆ ೩೦ ಲಕ್ಷ ರೂ. ಬೇಕು. ಅಷ್ಟು ಇದೆಯಾ?” ಎಂದು ಕೇಳಿದಳು. ನನಗೆ ತಲೆ ಎಲ್ಲ ಸುತ್ತಿ ಬಂದಂತಾಯಿತು. ನನಗೆ ಅಳುವೇ ಬಂದಿತ್ತು. ನಾನು ಹೊರಗೆ ಬಂದು ರಸ್ತೆ ದಾಟುವಾಗ ಶಶಾಂಕ್ ಘೋಶ್ ಎಂಬ ನನ್ನ ಸ್ನೇಹಿತ ಸಿನಿಮಾ ನಿರ್ದೇಶಕ ಫೋನ್ ಮಾಡಿ ಬಾಂದ್ರದಲ್ಲಿ ಒಂದು ಬಾರ್‌ನಲ್ಲಿ ಕಾರ್ಯಕ್ರಮ ನೀಡುತ್ತೀಯಾ ಎಂದು ಕೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ವಿಶಾಲ್ ಮತ್ತು ಶೇಖರ್ ಆ ಕಾರ್ಯಕ್ರಮ ನೋಡಿದವರಲ್ಲಿದ್ದವರು ಬಂದು ನನ್ನನ್ನು ಮಾತನಾಡಿಸಿದರು. “ನಿನ್ನ ಸಂಗೀತ ಇಷ್ಟು ಚೆನ್ನಾಗಿದೆಯಲ್ಲ, ನಿನ್ನ ಆಲ್ಬಂ ಯಾಕೆ ಮಾಡಿಲ್ಲ?” ಎಂದು ಕೇಳಿದರು. ನಾನು ೯ ವರ್ಷದಿಂದ ಒದ್ದಾಡುತ್ತಿರುವ ಬಗ್ಗೆ ಹೇಳಿದೆ. ಚಿಂತೆ ಮಾಡಬೇಡ. ನಾವೇ ಒಂದು ರೆಕಾರ್ಡಿಂಗ್ ಕಂಪೆನಿ ಸುರು ಮಾಡುತ್ತೇವೆ. ನಿನ್ನದೇ ಪ್ರಥಮ ಆಲ್ಬಂ ಮಾಡುತ್ತೇವೆ ಎಂದು ಹೇಳಿ ಐದು ತಿಂಗಳಲ್ಲಿ ನನ್ನ ಪ್ರಥಮ ಆಲ್ಬಂ ಹೊರಬಂತು. ಆ ಆಲ್ಬಂನಿಂದಾಗಿ ನಾನು ಇಡಿಯ ದೇಶದಲ್ಲೇ ಎಲ್ಲರಿಗು ಪರಿಚಿತನಾದೆ.

ಪ್ರ: ಈ ರೀತಿ ನಿಮ್ಮ ಜೀವನದಲ್ಲಿ “ಎಲ್ಲ ಮುಗಿಯಿತು, ಇನ್ನೇನೂ ಇಲ್ಲ” ಅಂದುಕೊಂಡಿದ್ದಾಗ ಯವುದೋ ಜಾದು ನಡೆದದ್ದು ಎಷ್ಟು ಸಲ ಆಗಿದೆ?

ಉ: ಹದಿನೈದು ಸಲವಾದರೂ ಆಗಿದೆ. ಅದೂ ಸರಿಯಾದ ಸಮಯದಲ್ಲೇ. ನನ್ನ ಕಾಲ ಚೆನ್ನಾಗಿ ನಡೆಯುತ್ತಿದ್ದಾಗ ಅಂತಹ ಯಾವ ಜಾದೂ ನಡೆಯಲಿಲ್ಲ. ಕಷ್ಟದಲ್ಲಿದ್ದಾಗಲೇ ಜಾದೂ ನಡೆದ್ದು. ನಾನು ಕೂಡ ಇಂತಹ ಪವಾಡಗಳನ್ನು ಗುರುತಿಸುವುದನ್ನು ಕರಗತ ಮಾಡಿಕೊಂಡಿದ್ದೇನೆ. ಎಲ್ಲರ ಜೀವನದಲ್ಲೂ ಈ ರೀತಿ ಚಮತ್ಕಾರಗಳು ನಡೆಯುತ್ತಲೇ ಇರುತ್ತವೆ. ಆದರೆ ನಾವು ಅವುಗಳನ್ನು ಗುರುತಿಸುವುದಿಲ್ಲ. ಯಾವುದೋ ಒಂದು ಚಿಕ್ಕ ಘಟನೆ ಎಂದುಕೊಳ್ಳುತ್ತೇವೆ. ಅದರ ಮಹತ್ವ ನಮಗೆ ಹತ್ತು ವರ್ಷದ ನಂತರ ಅರಿವಾಗುತ್ತದೆ.

ಪ್ರ: ಅಂದರೆ ನಿಮಗೆ ಒಂದು ಸಿಕ್ಸ್ತ್ ಸೆನ್ಸ್ ಇದೆ  ಅಂದುಕೊಳ್ಳಬಹುದೇ?

ಉ: ಸಿಕ್ಸ್ತ್ ಸೆನ್ಸ್ ಅಲ್ಲ. ನಿಮ್ಮನ್ನು ಒಬ್ಬ ಭೇಟಿ ಆದಾಗ ಪ್ರತಿಯೊಬ್ಬನಲ್ಲೂ ಈತನನ್ನು ಯಾವುದೋ ಉದ್ದೇಶದಿಂದ ನನ್ನ ಬಳಿಗೆ ಕಳುಹಿಸಲಾಗಿದೆ ಎಂದು ನಂಬಬೇಕು. ಒಬ್ಬ ವ್ಯಕ್ತಿಯನ್ನು ಒಳ್ಳೆಯತನದಿಂದ ಭೇಟಿ ಆದಾಗ ನಿಮಗೆ ಒಳ್ಳೆಯದೇ ಸಿಗುತ್ತದೆ. ಇವನು ನನಗೆ ಗ್ಯಾರಂಟಿ ಟೋಪಿ ಹಾಕುತ್ತಾನೆ ಎಂದು ಅಂದುಕೊಂಡರೆ ಆತ ಖಂಡಿತವಾಗಿಯೂ ನಿಮಗೆ ಟೋಪಿ ಹಾಕುತ್ತಾನೆ.

ಪ್ರ: ಅಂದರೆ ನಿಮಗೆ ಗೊತ್ತಾಗುತ್ತದೆಯಾ ಯಾರು ಮೋಸ ಮಾಡುತ್ತಾರೆ ಯಾರು ಮೋಸ ಮಾಡುವುದಿಲ್ಲ ಎಂದು?

ಉ: ಅದು ಹಾಗಲ್ಲ. ಇದು ನೀವು ಈ ವಿಶ್ವಕ್ಕೆ ನೀಡುವ ಸಂದೇಶ. ಈ ವಿಶ್ವವು ನನ್ನನ್ನು ಕಾಪಾಡುತ್ತದೆ ಎಂಬ ಸಂದೇಶವನ್ನು ನೀವು ನೀಡಿದರೆ ಅದು ನಿಮ್ಮನ್ನು ನಿಜವಾಗಿಯೂ ಕಾಪಾಡುತ್ತದೆ. ಈ ಪ್ರಪಂಚ ಒಂದು ನರಕ ಎಂದುಕೊಂಡರೆ ಅದು ನಿಜವಾಗಿಯೂ ನರಕವೇ ಆಗುತ್ತದೆ. ಆಗ ಪ್ರತಿಯೊಬ್ಬರೂ ನಿಮಗೆ ನರಕವನ್ನೇ ಸೃಷ್ಟಿಸುತ್ತಾರೆ.

ಪ್ರ: ಅಂದರೆ ಯಾವಾಗಲೂ ಧನಾತ್ಮಕವಾಗಿಯೇ ಆಲೋಚಿಸಬೇಕು. Always think positive.

ಉ: ಹೌದು. ನೀವು ಈಗ ಮಾಡುವ ಸಕಾರಾತ್ಮಕ ಆಲೋಚನೆ ಸುಮಾರು ನಾಲ್ಕು ಐದು ವರ್ಷಗಳ ನಂತರ ಕಾರ್ಯಗತವಾಗುತ್ತದೆ.

ಪ್ರ: ಇನ್ನೇನಾದರೂ ಹೇಳಲಿಕ್ಕೆ ಇದೆಯಾ? ನಮ್ಮ ಕನ್ನಡದ ಪ್ರಥಮ ಅಂತರಜಾಲ ಪತ್ರಿಕೆ “ವಿಶ್ವಕನ್ನಡ”ದ ಓದುಗರಿಗೆ ಏನಾದರೂ ಸಂದೇಶ ಇದೆಯಾ?

ಉ: ಲುಂಗಿ ಹಾಕಿಕೊಳ್ಳಿ, ಮಜಾ ಮಾಡಿ, ಒಳ್ಳೆ ಏರ್ ಕಂಡಿಶನಿಂಗ್.

ಪ್ರ: ಕನ್ನಡಿಗರನ್ನು ಅದನ್ನು ಮಾಡುತ್ತಲೇ ಇದ್ದಾರೆ. ನಮ್ಮ ಮನೆಗೆ ಬಂದು ನೋಡಿ. ನಾನು ಮನೆಯಲ್ಲಿ ಲುಂಗಿಯನ್ನೇ ಉಟ್ಟುಕೊಂಡಿರುತ್ತೇನೆ. ನನ್ನ ಮಗಳು ಈ ದಿನ ಹೇಳುತ್ತಿದ್ದಳು “ರಘು ದೀಕ್ಷಿತ್ ಸಂದರ್ಶನ ಮಾಡಲು ಹೋಗುತ್ತಿದ್ದೀಯಾ, ಲುಂಗಿ ಉಟ್ಟುಕೊಂಡು ಹೋಗು” ಅಂತ.

ಉ: ಹ್ಹ ಹ್ಹ ಹ್ಹಾ. ಸಮಯ ಆಯಿತು. ಬನ್ನಿ. ಕಾರ್ಯಕ್ರಮಕ್ಕೆ ಹೋಗೋಣ.

ರಘು ದೀಕ್ಷಿತ್
ಅಂತಾರಾಷ್ಟ್ರೀಯ ಕನ್ನಡ ಸಂಗೀತಗಾರ

- ಡಾ| ಯು. ಬಿ. ಪವನಜ

ಹೊಸ ತಲೆಮಾರಿನ ಸಂಗೀತ ಸಂಯೋಜಕ ಗಾಯಕರಲ್ಲಿ ರಘು ದೀಕ್ಷಿತ್ ಅವರದು ಒಂದು ವಿಶಿಷ್ಟ ಸ್ಥಾನ. ಇತರೆ ಯಾವುದೇ ಸಂಗೀತಗಾರರ ಪಂಗಡಕ್ಕೆ ಅವರನ್ನು ಸೇರಿಸಲಾಗುವುದಿಲ್ಲ. ಸ್ವಲ್ಪ ಮಟ್ಟಿಗೆ ಇಂಡಿಪಾಪ್ ಅಂದುಕೊಂಡರೂ ಗಮನಕೊಟ್ಟು ಆಲಿಸಿದರೆ ಅವರದು ತಮ್ಮದೇ ಪ್ರತ್ಯೇಕ ವಿಭಾಗ ಅನ್ನಿಸುವುದು. ತಮ್ಮದೇ ಆದ ಒಂದು ಸಂಸ್ಥೆ “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ಎಂಬ ಹೆಸರಿನಲ್ಲಿ ಸ್ಥಾಪಿಸಿ ತಮ್ಮ ಸಂಗೀತವನ್ನು ಪ್ರಪಂಚಾದ್ಯಂತ ಹಂಚಿದ್ದಾರೆ. ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಇವರ ಸ್ನಾತಕೋತ್ತರ ಪದವಿ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಜೈವರಸಾಯನಿಕಶಾಸ್ತ್ರದಲ್ಲಿ. ಜೊತೆಗೆ ಭರತನಾಟ್ಯದಲ್ಲಿ ವಿದ್ವತ್. ಕೆಲವು ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ. ಕೊನೆಗೊಮ್ಮೆ ಅದೆಲ್ಲವನ್ನು ಬಿಟ್ಟು ಸಂಗೀತವೇ ನನ್ನ ಕಾರ್ಯಕ್ಷೇತ್ರ ಎಂಬುದನ್ನು ಕಂಡುಕೊಂಡು ಕೆಲಸ ತ್ಯಜಿಸಿ ಪೂರ್ಣಪ್ರಮಾಣದಲ್ಲಿ ಸಂಗೀತದಲ್ಲಿ ತೊಡಗಿಸಿಕೊಂಡು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.  ತುಂಬ ಭರವಸೆಯ ಹೊಸ ಸಂಗೀತಗಾರ ಎಂಬ ಜಾಗತಿಕ ಮಟ್ಟದ ಪ್ರಶಸ್ತಿಯನ್ನು ಸಾಂಗ್‌ಲೈನ್ಸ್‌ನಿಂದ ಪಡೆದಿದ್ದಾರೆ.

ಇವರ ಸಂಗೀತದ ಕಥೆಯೂ ಒಂದು ರೀತಿಯಲ್ಲಿ ಕುವೆಂಪು ಅವರಂತೆ. ಅವರಿಗೆ ವಿದೇಶಿಯರೊಬ್ಬರು ಇಂಗ್ಲಿಶಿನಲ್ಲಿ ಯಾಕೆ ಬರೆಯುತ್ತೀಯಾ, ನಿನ್ನ ಮಾತೃಭಾಷೆಯಲ್ಲೇ ಬರೆ ಎಂದು ಹೇಳಿದುದರಿಮದ ಅವರು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ರಘು ದೀಕ್ಷಿತ್ ಅವರೂ ಪ್ರಾರಂಭದಲ್ಲಿ ಇಂಗ್ಲಿಶ್ ಹಾಡುಗಳನ್ನು ನುಡಿಸುತ್ತಿದ್ದರು. ವಿದೇಶೀಯರೊಬ್ಬರು ನೀನು ನಿನ್ನ ಭಾಷೆಯಲ್ಲೇ ಹಾಡು ಎಂದು ಹೇಳಿದುದರಿಂದ ಕನ್ನಡದಲ್ಲಿ ಹಾಡಲು ಪ್ರಾರಂಭಿಸಿದರು. ನಂತರ ಹಿಂದಿಯನ್ನೂ ಸೇರಿಸಿಕೊಂಡರು. ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋದ ಖ್ಯಾತಿ ರಘು ದೀಕ್ಷಿತ್ ಅವರದು. ಯಾವ ದೇಶದಲ್ಲೇ ಹೋಗಿ ಹಾಡಲಿ ಅವರು ಕನ್ನಡ ಹಾಡನ್ನು ಹಾಡಲು ಮರೆಯುವುದಿಲ್ಲ. ಈಗಿನ ಯುವ ಪೀಳಿಗೆಯವರಿಗೆ ತುಂಬ ಅಚ್ಚುಮೆಚ್ಚಿನ ಗಾಯಕ ರಘು ದೀಕ್ಷಿತ್. ಸೈಕೋ ಚಿತ್ರದಲ್ಲಿ ಅವರು ಸಂಗೀತ ನೀಡಿ ಹಾಡಿದ “ನಿನ್ನ ಪೂಜೆಗೆ ಬಂದೆ” ಹಾಡು ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ಅವರು ಕನ್ನಡ ಹಾಡಿನ ಜೊತೆ ಕನ್ನಡಿಗರು ತೊಡುವ ಲುಂಗಿಯನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ರಘು ದೀಕ್ಷಿತ್ ಟ್ವಿಟ್ಟರಿನಲ್ಲಿ ತುಂಬ ಚಟುವಟಿಕೆಯಿಂದಿರುತ್ತಾರೆ. ಬಹುಮಂದಿ ಖ್ಯಾತನಾಮರು ಟ್ವಿಟ್ಟರ್ ಅನ್ನು ತಮ್ಮ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುತ್ತಾರೆ. ಅವರು ಇತರೆ ಮಂದಿ ಜೊತೆ ವ್ಯವಹರಿಸುವುದು ತುಂಬ ಕಡಿಮೆ. ಅಂದರೆ ಅವರು ಇತರರ ಟ್ವೀಟ್‌ಗಳಿಗೆ ಉತ್ತರಿಸುವುದು ಕಡಿಮೆ. ಆದರೆ ರಘು ದೀಕ್ಷಿತ್ ಹಾಗಲ್ಲ. ನನಗೆ ಅವರ ಸಂಪರ್ಕ ಆದುದೇ ಟ್ವಿಟ್ಟರ್ ಮೂಲಕ. ನಾವು ಟ್ವಿಟ್ಟ್‌ನಲ್ಲಿ ಒಬ್ಬರನ್ನೊಬ್ಬರು ಹಲವು ಸಲ ಕಾಲೆಳೆದಿದ್ದೇವೆ.  ನಮ್ಮ ಇನ್ನೊಬ್ಬ ಸ್ನೇಹಿತ ರಘು ಅವರಿಗೆ “ನಾನು ನಿಮ್ಮ ಫ್ಯಾನ್, ನಿಮ್ಮ ರೀತಿಯೇ ಗಡ್ಡ ಬಿಟ್ಟಿದ್ದೇನೆ” ಎಂದು ಟ್ವೀಟ್ ಮಾಡಿದಾಗ “ಹಾಗಿದ್ದರೆ ಇಂದಿನ ನನ್ನ ಕಾರ್ಯಕ್ರಮಕ್ಕೆ ಲುಂಗಿ ಉಟ್ಟುಕೊಂಡು ಬಾ” ಎಂದು ರಘು ಉತ್ತರಿಸಿದ್ದರು. ತಮ್ಮ ಲುಂಗಿಯನ್ನು ದಾರದಿಂದ ಕಟ್ಟಲಾಗಿದೆ, ವೆಲ್‌ಕ್ರೋ ಬಳಸಲಾಗಿದೆ ಎಂದೂ ಗುಟ್ಟು ಬಿಟ್ಟುಕೊಟ್ಟಿದ್ದರು.

ರಘು ದೀಕ್ಷಿತ್ ಜೊತೆ ಲೇಖಕರು

ನಿಮ್ಮ ಸಂದರ್ಶನವನ್ನು ವಿಶ್ವಕನ್ನಡಕ್ಕಾಗಿ ನಡೆಸಬೇಕು ಎಂದು ಟ್ವೀಟ್ ಮಾಡಿದಾಗ, ಖಂಡಿತ, ಇಮೈಲ್ ಮೂಲಕ ಮಾಡೋಣ ಎಂದಿದ್ದರು. ಆದರೆ ನನಗೆ ಯಾಕೋ ಇಮೈಲ್ ಮೂಲಕ ಸಂದರ್ಶನ ಮಾಡಲು ಇಷ್ಟವಾಗಲಿಲ್ಲ. ಹಾಗೆ ಮಾಡಿದರೆ ಕೆಲವು  ಪೂರ್ವನಿರ್ಧಾರಿತ ಪ್ರಶ್ನೆಗಳು ಮತ್ತು ಅವಕ್ಕೆ ಉತ್ತರಗಳು ಅಷ್ಟೇ ಸಿಗುತ್ತಿದ್ದವು. ಆದರೆ ಉತ್ತರವನ್ನು ಹೊಂದಿಕೊಂಡು ಮುಂದಿನ ಪ್ರಶ್ನೆ ಕೇಳಲಾಗುವುದಿಲ್ಲ. ಸೂಕ್ತ ಸಮಯಕ್ಕೆ ಕಾಯುತ್ತಿದ್ದೆ. ಮೈಸೂರಿನ ಜೆ.ಸಿ. ಕಾಲೇಜಿನಲ್ಲಿ ಅವರ ಕಾರ್ಯಕ್ರಮ ಇದೆ ಎಂದು ತಿಳಿದೊಡನೆ ಅವರಿಗೆ ಸಂದರ್ಶನಕ್ಕೆ ಸಮಯ ಕೊಡಬೇಕು ಎಂದು ಟ್ವೀಟ್ ಮಾಡಿದೆ. ಆಗಲಿ ಎಂದು ಉತ್ತರ ಬಂತು. “ಕಾರ್ಯಕ್ರಮಕ್ಕೆ ಮೊದಲು ವೇದಿಕೆ ಮತ್ತು ಧ್ವನಿ ವ್ಯವಸ್ಥೆಯನ್ನು ಪರೀಕ್ಷಿಸಲಿದೆ. ಆಗ ಅಲ್ಲಿಗೆ ಬನ್ನಿ” ಎಂದರು. ಅಂತೇಯೇ ಅಲ್ಲಿ ಹೋಗಿ ಅವರಿಗೆ ಕಾಯುತ್ತಿದ್ದೆ. ಅವರು ಬಂದೊಡನೆ ನನ್ನ ಪರಿಚಯ ಹೇಳಿದೆ. “ಹೇಗಿತ್ತೂರಿ ಮಧ್ಯಾಹ್ನದ ನಳಪಾಕ ಹೋಟೆಲಿನ ಊಟ” ಎಂದು ಬಾಂಬ್ ಹಾಕಿದರು. ಮೈಕ್‌ನವನು ಇಂಗ್ಲಿಶಿನಲ್ಲಿ ಮಾತನಾಡಿದಾಗ “ಕನ್ನಡದಲ್ಲಿ ಮಾತನಾಡಯ್ಯ” ಎಂದು ರೇಗಿದರು. ಕಾರ್ಯಕ್ರಮದ ಆಯೋಜಕರಿಗೆ “ಇಲ್ಲಿ ಹಾಕಿರುವ ಕುರ್ಚಿಗಳನ್ನೆಲ್ಲ ತೆಗೆದುಬಿಡಿ, ನನ್ನ ಕಾರ್ಯಕ್ರಮದಲ್ಲಿ ಯಾರೂ ಕುಳಿತುಕೊಳ್ಳಬಾರದು, ಎಲ್ಲರೂ ಡ್ಯಾನ್ಸ್ ಮಾಡುತ್ತಿರಬೇಕು” ಎಂದು ತಾಕೀತು ಮಾಡಿದರು.

ನಂತರ ಅವರ ಜೊತೆ ಒಂದು ಗಂಟೆ ಕಾಲ ಕಳೆದು  ನಡೆಸಿದ ಸಂದರ್ಶನ ಇಲ್ಲಿದೆ.

ಹಾಗೆಯೇ ಇವನ್ನೂ ನೋಡಿ:

ಮೈಸೂರಿನ  ಜೆ.ಸಿ. ಕಾಲೇಜಿನಲ್ಲಿ ರಘು ದೀಕ್ಷಿತ್ ಕಾರ್ಯಕ್ರಮದ ಛಾಯಾಚಿತ್ರಗಳು (ಪವನಜರಿಂದ).

ರಘು ದೀಕ್ಷಿತ್ ಅವರ ಅಧಿಕೃತ ಜಾಲತಾಣ.

ವಿಕಿಪೀಡಿಯದಲ್ಲಿ ರಘು ದೀಕ್ಷಿತ್ ಬಗ್ಗೆ.