ಮದ್ಯಪಾನ ಮಾಡಿ ವಾಹನ ಚಲಿಸಬೇಡಿ -ಒಂದು ವಾರ ಮಾತ್ರ

Monday, January 9th, 2006

ಬೆಂಗಳೂರಿನಲ್ಲಿ ಸಂಚಾರಿ ಪೋಲೀಸರು ರಸ್ತೆ ಸುರಕ್ಷ ಸಪ್ತಾಹ ಆಚರಿಸಿದ್ದರು. ಅದರ ಅಂಗವಾಗಿ ಅವರು ವಿಜಯನಗರದಲ್ಲಿ ಹಾಕಿದ್ದ ಬ್ಯಾನರ್ ನೋಡಿ.

Language Impediments to E-Governance – Problems and Solutions – I

Sunday, January 8th, 2006

Part-I: Problem definition

– Dr U B Pavanaja

Introduction

So much has been written about the digital divide in India. People have talked tirelessly about the need of taking the benefits of Information Technology (IT) for common man. No one is going to question the validity of the statement “IT for common man has to be in his language”. Many state governments and the central government of India are spending lot of money towards E-Governance. Let us consider the problems and their solutions in implementing the E-Governance projects in India.

ಗೂಗ್ಲ್ ಪರ್ವತ ಪ್ರಸವ

Sunday, January 8th, 2006

ಗೂಗ್ಲ್ ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಕೆಲವು ವ್ಯಕ್ತಿ, ಸಂಸ್ಥೆ, ಕಂಪೆನಿಗಳು ಯಾವಾಗಲೂ ಹಾಗೆಯೇ.

ದೆಹಲಿ ವಿಮಾನ ನಿಲ್ದಾಣದಲ್ಲಿ ಸೈಬರ್ ಕೆಫೆ ಇಲ್ಲ

Wednesday, January 4th, 2006

ಈ ವಿಷಯದ ಬಗ್ಗೆ ಬರೆಯಬೇಕು ಎಂದು ಹಲವು ತಿಂಗಳುಗಳಿಂದ ಮನಸ್ಸಿನಲ್ಲೇ ಅಂದುಕೊಂಡಿದ್ದೆ. ಈಗಷ್ಟೆ ನಾಗೇಶ ಹಗಡೆಯವರೊಡನೆ ಮಾತನಾಡುತ್ತ ಈ ವಿಷಯ ಪ್ರಸ್ತಾಪಿಸಿದೆ.

ಪಿ. ಶೇಷಾದ್ರಿಯವರ "ಬೇರು"

Monday, January 2nd, 2006

ನಿನ್ನೆ (ಜನವರಿ ೧, ೨೦೦೬) ಪಿ. ಶೇಷಾದ್ರಿಯವರ “ಬೇರು” ಚಲನಚಿತ್ರ ನೋಡಿದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ “ಚಿತ್ರ ತುಂಬ ಚೆನ್ನಾಗಿದೆ”. ಸರಕಾರಿ ಯಂತ್ರದಲ್ಲಿ ಸಿಕ್ಕಿಹಾಕಿಕೊಂಡ ಪ್ರಾಮಾಣಿಕ ಅಧಿಕಾರಿ ಹೇಗೆ ತಾನೂ ಎಲ್ಲರಂತಾಗುತ್ತಾನೆ ಎಂಬುದನ್ನು ಚಿತ್ರ ತುಂಬ ಚೆನ್ನಾಗಿ ಮೂಡಿಸಿದೆ. ಇಂತಹ ಚಿತ್ರ ಎಲ್ಲರಿಗೆ ನೋಡಲು ಚಿತ್ರ ಮಂದಿರಗಳಲ್ಲಿ ಸಿಗುವುದಿಲ್ಲ ಎಂಬುದು ನಿಜಕ್ಕೂ ದುಃಖದ ಸಂಗತಿ. ಇಂತಹ ಪರಿಸ್ಥಿತಿಗೆ ನಾವೆಲ್ಲರೂ ಕಾರಣ ಎಂಬುದನ್ನು ಚಿತ್ರದ ಕೊನೆಯಲ್ಲಿ ಸಂವಾದದಲ್ಲಿ ಭಾಗವಹಿಸಿದ ಶೇಷಾದ್ರಿಯವರು ಬಹಳ ಚೆನ್ನಾಗಿ ವಿವರಿಸಿದರು. “ತಬರನ ಕಥೆ” ಚಲನಚಿತ್ರ ಮತ್ತು “ನಮ್ಮೊಳಗೊಬ್ಬ ನಾಜೂಕಯ್ಯ” ನಾಟಕಗಳ ಪ್ರಭಾವ ಚಿತ್ರದಲ್ಲಿ ಗಾಢವಾಗಿದೆ. ಆದರೂ ಚಿತ್ರಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. “ಬೇರು” ಎಂಬ ಶೀರ್ಷಿಕೆ ತುಂಬ ಸೂಕ್ತವಾಗಿದೆ. ನಮ್ಮ ಜನಜೀವನದಲ್ಲಿ ಬ್ರಷ್ಟಾಚಾರದ ಬೇರು ಎಷ್ಟು ಆಳವಾಗಿ ಇಳಿದಿದೆ, ಅದನ್ನು ಕಿತ್ತೆಸೆಯಲು ಯಾರಿಂದಲೂ ಅಸಾಧ್ಯ ಎಂಬುದನ್ನು ಇದು ಸಂಕೇತವಾಗಿ ಸೂಚಿಸುತ್ತದೆ. ಎಲ್ಲರೂ ನೋಡಲೇ ಬೇಕಾದ ಚಿತ್ರ. ಇದರ ಪ್ರದರ್ಶನವನ್ನು ಆಯೋಜಿಸಿದ “ಈಕವಿ” ಮತ್ತು ವಿಪ್ರೋ ಕನ್ನಡ ಬಳಗಕ್ಕೆ ಧನ್ಯವಾದಗಳು.

ನಾನು ಪ್ರತಿಭಾನ್ವಿತನಲ್ಲ !

Sunday, December 25th, 2005

ಕನ್ನಡಪ್ರಭ ಪತ್ರಿಕೆಯಲ್ಲಿ ಖ್ಯಾತ ವಿಜ್ಞಾನ ಲೇಖಕರು ಹಾಗೂ ಅತ್ಮೀಯರೂ ಆದ ಹಾಲ್ದೊಡ್ಡೇರಿ ಸುಧೀಂದ್ರ ಅವರ ಅಂಕಣ ಪ್ರತಿ ಭಾನುವಾರ ಇದೆ. ಇಂದಿನ ಅಂಕಣದಲ್ಲಿ ಆವರು ಬರೆಯುತ್ತಾರೆ -“ಭಾರತದ ಎಲ್ಲ ಪ್ರತಿಭಾನ್ವಿತರಂತೆ ಉನ್ನತ ವ್ಯಾಸಂಗಕ್ಕೆಂದು ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ಉಳಿದು ಮತ್ತಷ್ಟು ಕೀರ್ತಿ ಸಂಪಾದಿಸಿದವ”. ಇಲ್ಲಿ ಅವರು ಹೇಳುತ್ತಿರುವುದು ಅಮೇರಿಕಾದಲ್ಲಿರುವ ಒಬ್ಬ ಭಾರತೀಯ ಸಂಜಾತ ವಿಜ್ಞಾನಿಯ ಬಗ್ಗೆ. ಸುಧೀಂದ್ರರ ಪ್ರಕಾರ ಅಮೇರಿಕಾಕ್ಕೆ ತೆರಳದೆ ಇಲ್ಲೇ ಉಳಿದಿರುವ ನಾವು ಯಾರೂ ಪ್ರತಿಭಾನ್ವಿತರಲ್ಲ.

ಕುಣಿತ ಗೊತ್ತಿಲ್ಲದವರು ರಂಗಸ್ಥಳ ಓರೆ ಎಂದರಂತೆ

Saturday, December 24th, 2005

ಪ್ರಜಾವಾಣಿ ಪತ್ರಿಕೆಯಲ್ಲಿ ಕೆ. ಆರ್ ಚಂದ್ರಶೇಖರ ಎಂಬವರು ಎಲ್ಲ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶವೊಂದನ್ನು ತಯಾರಿಸಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟರು. ಅದಕ್ಕೆ ಪ್ರತಿಕ್ರಿಯೆಯಾಗಿ ಚ. ಹ. ರಘುನಾಥ ಅವರು ಸದ್ಯಕ್ಕೆ ಅನುವಾದದ ತಂತ್ರಾಂಶ ತುಂಬ ದೂರದ ಕನಸು. ಅತೀ ಅಗತ್ಯವಾಗಿ ಆಗಬೇಕಾದ ಇತರೆ ಕೆಲಸಗಳೇ ಬಾಕಿ ಇವೆ ಎಂದು ಬರೆದರು. ಈ ವಿಷಯವನ್ನು ನಾನೂ ಒಪ್ಪುತ್ತೇನೆ. ರಘುನಾಥ ಅವರು ತಮ್ಮ ಮಾತಿಗೆ ಉದಾಹರಣೆಯಾಗಿ ಕನ್ನಡದಲ್ಲಿ ಇನ್ನೂ ಹಲವಾರು ರೀತಿಯ ಕೀಲಿಮಣೆಗಳು ಚಾಲ್ತಿಯಲ್ಲಿರುವುದನ್ನು ಪ್ರಸ್ತಾಪಿಸಿದರು. ಹಾಗೆಯೇ ಹಲವರು ಇಂಗ್ಲಿಶ್ ಲಿಪಿಯಲ್ಲಿ ಕನ್ನಡವನ್ನು ಬರೆದು (ಟೈಪಿಸಿ) ಇಮೈಲ್ ಮಾಡುವುದನ್ನು ಪ್ರಸ್ತಾಪಿಸಿದರು. ಅವರ ಪ್ರಕಾರ ಕನ್ನಡದಲ್ಲಿ ಬೆರಳಚ್ಚು ಮಾಡುವುದನ್ನು ಕಲಿಯುವುದು ಒಂದು ಹೆಚ್ಚಿನ ಕೆಲಸ. ನಾನು ಕೇಳುತ್ತೇನೆ -“ನೀವು ಹುಟ್ಟುವಾಗ ಇಂಗ್ಲಿಶ್ ಕೀಲಿಮಣೆಯನ್ನು ಕಲಿತುಕೊಂಡೇ ಹುಟ್ಟಿ ಬಂದಿರೇ? ಇಂಗ್ಲಿಶ್ ಕೀಲಿಮಣೆ ಕಲಿಯುವುದು ನಿಮಗೆ ಕಷ್ಟವಾಗಲಿಲ್ಲ. ಅದು ಒಂದು ಹೆಚ್ಚಿನ ಕೆಲಸವಾಗಲಿಲ್ಲ. ಕನ್ನಡದ ಕೀಲಿಮಣೆ ಕಲಿಯುವುದು ಮಾತ್ರ ಯಾಕೆ ಹೆಚ್ಚಿನ ತೊಂದರೆಯ ಕೆಲಸ ಎಂದೆನಿಸುತ್ತದೆ?”. ರಘುನಾಥ ಅವರ ಮಾತುಗಳಿಗೆ ನನ್ನ ವಿಶೇಷವಾದ ಅಡ್ಡಿಯೇನಿಲ್ಲ.

ಕಾಮತರ ಹೋಟೆಲಿನಲ್ಲಿ ಕನ್ನಡವಿಲ್ಲ!

Friday, December 23rd, 2005

ಮುಂಬಯಿಯ ದೇಶೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಹೋಟೆಲ್ ಆರ್ಕಿಡ್ ಇದೆ. ಇದು ಪಂಚತಾರಾ ಹೋಟೆಲ್. ತುಂಬ ಚೆನ್ನಾಗಿದೆ. ನಾನು ನಿನ್ನೆಯಷ್ಟೆ ಅಲ್ಲಿದ್ದೆ. ಈ ಸಲದ ಪ್ರವಾಸದಲ್ಲಿ ನಾನಲ್ಲಿ ಮೂರು ದಿನ ಉಳಕೊಂಡಿದ್ದೆ (ಕಂಪೆನಿ ದುಡ್ಡಲ್ಲಿ ಸ್ವಾಮಿ). ಕಾಮತ ಯಾತ್ರಿನಿವಾಸ ಹೋಟೆಲ್ ನಿಮಗೆ ಗೊತ್ತಿರಬಹುದು. ಇವರ ಹೋಟೆಲುಗಳು ಬೆಂಗಳೂರು-ತುಮಕೂರು ಮಧ್ಯೆ, ಹಾಸನಕ್ಕೆ ಸಮೀಪ, ರಾಮನಗರದಲ್ಲಿ, ಹೀಗೆ ಹಲವಾರು ಕಡೆ ಇವೆ. ಅವರ ಎಲ್ಲ ಹೋಟೆಲುಗಳು ತುಂಬ ಚೆನ್ನಾಗಿವೆ. ಅದೇ ರೀತಿ ಆರ್ಕಿಡ್ ಕೂಡ ತುಂಬ ಚೆನ್ನಾಗಿದೆ. ಏಷ್ಯದ ಪ್ರಥಮ ಪರಿಸರ ಸ್ನೇಹಿ ಹೋಟೆಲ್ ಎಂಬ ಬಿರುದು ಬೇರೆ.

ವೆಂಕಟಸುಬ್ಬಯ್ಯನವರಿಗೆ ಅಭಿನಂದನೆಗಳು

Saturday, December 17th, 2005

“ಇಗೋ ಕನ್ನಡ” ಖ್ಯಾತಿಯ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ಹಂಪೆ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ಘೋಷಿಸಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರಜಾವಾಣಿ ಪತ್ರಿಕೆಯಲ್ಲಿ ಜಿ.ವಿ. ಅವರು ಬರೆಯುತ್ತಿರುವ ಇಗೋ ಕನ್ನಡ ಅಂಕಣ ನನಗೆ ತುಂಬ ಅಚ್ಚುಮೆಚ್ಚು. ಈ ಅಂಕಣದ ಲೇಖನಗಳು ಪುಸ್ತಕರೂಪದಲ್ಲಿ ಈಗಾಗಲೇ ಎರಡು ಆವೃತ್ತಿಗಳಲ್ಲಿ ಬಂದಿವೆ. ಅವೆರಡೂ ನನ್ನಲ್ಲಿ ಇವೆ. ಲೇಖನ ಬರೆಯುವಾಗ ಯಾವುದಾದರೊಂದು ಪದದದ ಬಗೆಗೆ ಅನುಮಾನ ಬಂದಾಗ ನಾನು ಈ ಪುಸ್ತಕಗಳ ಮೊರೆಹೋಗುತ್ತೇನೆ. ಕನ್ನಡಕ್ಕೆ ಜಿ.ವಿ.ಯವರ ಕೊಡುಗೆ ಅಪಾರ. ನಿಘಂಟು ರಚನೆಯಲ್ಲಿ ಅವರ ಕೆಲಸ ಮಾಡಿದ್ದಾರೆ.

ಇಲಿ ಹಿಡಿಯುವುದು ಮತ್ತು ಕೊಲ್ಲುವುದು

Sunday, December 11th, 2005

ಮೊನ್ನೆ ನಮ್ಮ ಮನೆಯ ಒಳಗೊಂದು ಇಲಿ ಬಂದಿತ್ತು. ಬಂದ ಮೇಲೆ ಅದನ್ನು ಸುಮ್ಮನೆ ಬಿಡಲಿಕ್ಕಾಗುತ್ತದೆಯೇ? ಸರಿ.