ಗ್ಯಾಜೆಟ್‌ ವಿಮರ್ಶೆ | Vishva Kannada

ಏಸುಸ್ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್
360 ಡಿಗ್ರಿ ಲ್ಯಾಪ್‌ಟಾಪ್

ಇತ್ತೀಚೆಗೆ ಬಹುತೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಏರಿದೆ. ಲ್ಯಾಪ್‌ಟಾಪ್‌ಗಳಲ್ಲಿ ಹಲವು ನಮೂನೆಗಳಿವೆ. ಒಂದು ನಮೂನೆಯ ಲ್ಯಾಪ್‌ಟಾಪ್‌ಗಳಲ್ಲಿ ಸ್ಪರ್ಶಸಂವೇದಿ ಪರದೆ ಇರುತ್ತದೆ. ಇಂತಹವುಗಳಲ್ಲೂ ಕೆಲವು ನಮೂನೆಗಳಲ್ಲಿ ಈ ಪರದೆಯನ್ನು ಪೂರ್ತಿ ಹಿಂದಕ್ಕೆ ತಿರುಗಿಸಿ ಲ್ಯಾಪ್‌ಟಾಪ್ ಅನ್ನು ಟ್ಯಾಬ್ಲೆಟ್ ಆಗಿ ಬದಲಾಯಿಸಬಹುದು. ಅಂತಹ ಒಂದು ಲ್ಯಾಪ್‌ಟಾಪ್ ಏಸುಸ್‌ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್ (Asus ExpertBook B5 Flip). ಈ ಸಂಚಿಕೆಯಲ್ಲಿ ಅದರ ವಿಮರ್ಶೆ ನೋಡೋಣ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

ಇಂಟೆಲ್ i3/i5/i7 (2.4 – 3.0 GHz)

ಪ್ರಾಥಮಿಕ ಮೆಮೊರಿ

4/8/16 ಗಿಗಾಬೈಟ್

ಸಂಗ್ರಹ

256/512/1024 ಗಿಗಾಬೈಟ್ ಎಸ್‌ಎಸ್‌ಡಿ

ಪರದೆ

1920 x 1080 ಪಿಕ್ಸೆಲ್ ರೆಸೊಲೂಶನ್‌, 13.3 ಇಂಚು ಗಾತ್ರ, 360 ಡಿಗ್ರಿ ತಿರುಗಿಸಬಹುದು

ಸ್ಪರ್ಶಪರದೆ

ಇದೆ

ಪೆನ್

‌ಇದೆ

ಗ್ರಾಫಿಕ್ಸ್ ಪ್ರೋಸೆಸರ್

Intel Iris Xᵉ Graphics

ಗಾತ್ರ

30.90 x 21.06 x 1.69 ಸೆ.ಮೀ.

ತೂಕ

1.57 ಕಿ.ಗ್ರಾಂ. (ಅಡಾಪ್ಟರ್ ಸಹಿತ), 1.3 ಕಿ. ಗ್ರಾಂ

ಬ್ಯಾಟರಿ

66WHrs, 4-cell Li-ion

ಕ್ಯಾಮೆರ

720p

ಕಾರ್ಯಾಚರಣ ವ್ಯವಸ್ಥೆ

ವಿಂಡೋಸ್

ಡಿವಿಡಿ ಡ್ರೈವ್

‌ಇಲ್ಲ

ಇತರೆ

ಯುಎಸ್‌ಬಿ-ಸಿ ಮತ್ತು ಎ, ಮಿನಿ ಎಚ್‌ಡಿಎಂಐ, ಎಚ್‌ಡಿಎಂಐ, 3.5 ಮಿ.ಮೀ. ಹೆಡ್‌ಸೆಟ್ ಕಿಂಡಿಗಳು, ವೈಫೈ, ಬ್ಲೂಟೂತ್, ಟಚ್‌ಪ್ಯಾಡ್

ಬೆಲೆ

ಸುಮಾರು ₹139,000

ರಚನೆ ಮತ್ತು ವಿನ್ಯಾಸ

ಚಿಕ್ಕದಾಗಿದ್ದು, ತೆಳ್ಳಗಾಗಿದ್ದು, ಇದು ನೋಡಲು ಒಂದು ಮೇಲ್ದರ್ಜೆಯ ಲ್ಯಾಪ್‌ಟಾಪ್‌ನಂತೆ ಕಾಣಿಸುತ್ತದೆ. ಪರದೆಯ ಗಾತ್ರ 13.3.6 ಇಂಚು. ಇದರ ಪರದೆಯು ಸ್ಪರ್ಶಸಂವೇದಿ (touchscreen) ಆಗಿದೆ. ಇದನ್ನು ಸಂಪೂರ್ಣವಾಗಿ ಹಿಂದಕ್ಕೆ ತಿರುಗಿಸಿ ಮಡಚಬಹುದು (360 ಡಿಗ್ರಿ). ಆಗ ಇದು ಟ್ಯಾಬ್ಲೆಟ್‌ನಂತೆ ಕೆಲಸ ಮಾಡುತ್ತದೆ. ಅಂತಹ ಸಂದರ್ಭಕ್ಕೆಂದು ಪರದೆಯಲ್ಲೇ ಮೂಡಿಬರುವ ಕೀಬೋರ್ಡ್ ಇದೆ. ಟಚ್‌ಪ್ಯಾಡ್ ಕೂಡ ಇದೆ. ಈ ಟಚ್‌ಪ್ಯಾಡ್‌ನ ಗುಣಮಟ್ಟ ಉತ್ತಮವಾಗಿದೆ. ಈ ಟಚ್‌ಪ್ಯಾಡ್‌ನಲ್ಲಿ ಒಂದು ವೈಶಿಷ್ಟ್ಯವಿದೆ. ಅದರಲ್ಲಿ ಅಂಕಿಗಳ ಕೀಬೋರ್ಡ್ ಬೇಕಾದಾಗ ಮೂಡಿಬರಿಸುವ ಸೌಲಭ್ಯವಿದೆ. ಇದು ಕೇವಲ ಕ್ಯಾಲ್ಕುಲೇಟರ್ ಆಗಿ ಬಳಸುವ ಸಂದರ್ಭದಲ್ಲಿ ಉಪಯುಕ್ತ. ಇದರ ಜೊತೆ ಒಂದು ಪೆನ್ ನೀಡಿದ್ದಾರೆ. ಇದು ಟ್ಯಾಬ್ಲೆಟ್ ಆಗಿ ಬಳಸುವಾಗ ಉಪಯೋಗಕ್ಕೆ ಬರುತ್ತದೆ. ಎರಡು ಯುಎಸ್‌ಬಿ-ಸಿ ಕಿಂಡಿಗಳಿವೆ. ಇವುಗಳಲ್ಲಿ ಯಾವುದನ್ನು ಬೇಕಾದರೂ ವಿದ್ಯುತ್ ಸಂಪರ್ಕಕ್ಕಾಗಿ ಬಳಸಬಹುದು. ಇನ್ನೂ ಒಂದು ಮಾಮೂಲಿ ಯುಎಸ್‌ಬಿ 3.2 ಕಿಂಡಿಯಿದೆ. ನಿಮಗೆ ಹೊರಗಡೆಯಿಂದ ಮೌಸ್ ಜೋಡಿಸಬೇಕಾದರೆ ಈ ಕಿಂಡಿಯನ್ನು ಬಳಸಬೇಕು. ಇನ್ನೂ ಒಂದು ಯುಎಸ್‌ಬಿ ಕಿಂಡಿ ಕೊಟ್ಟಿದ್ದರೆ ಉತ್ತಮವಿತ್ತು. ಪ್ರಸೆಂಟೇಶನ್ ಮಾಡಬೇಕಾದರೆ ಇದರಲ್ಲಿ ಎಚ್‌ಡಿಎಂಐ ಕಿಂಡಿ ಇದೆ. ಮೈಕ್ರೊಎಸ್‌ಡಿ ಕಾರ್ಡ್ ರೀಡರ್ ನೀಡಿಲ್ಲ. ಸ್ಪೀಕರುಗಳ ಗುಣಮಟ್ಟ ಅಷ್ಟಕ್ಕಷ್ಟೆ. ಇಷ್ಟು ತೆಳ್ಳಗಿನ ಲ್ಯಾಪ್‌ಟಾಪ್‌ನಲ್ಲಿ ಮೇಲ್ದರ್ಜೆಯ ಸ್ಪೀಕರ್ ಅಳವಡಿಸಲು ಸಾಧ್ಯವಿಲ್ಲ. ವಿಮಾನದಲ್ಲಿ ಪ್ರಯಾಣಿಸುವಾಗ ಬಳಸಲು ಇದು ಹೇಳಿ ಮಾಡಿಸಿದ ಲ್ಯಾಪ್‌ಟಾಪ್ ಎನ್ನಬಹುದು.

https://www.instagram.com/p/CeSum9NB9iD/

ಕೆಲಸದ ವೇಗ

ಇದರದು ಮಧ್ಯಮ ವೇಗ ಎನ್ನಬಹುದು. ನೀವು i3/i5/i7 ಇವುಗಳಲ್ಲಿ ಯಾವ ಪ್ರೋಸೆಸರ್‌ನ ಮಾದರಿಯನ್ನು ಕೊಂಡುಕೊಂಡಿದ್ದೀರಿ ಎಂಬುದನ್ನು ಹೊಂದಿಕೊಂಡು ಈ ವೇಗ ಹೆಚ್ಚು ಕಡಿಮೆ ಆಗುತ್ತದೆ. ಅತಿ ಹೆಚ್ಚಿನ ಶಕ್ತಿಯನ್ನು ಹಾಗೂ ಅತ್ಯುತ್ತಮ ಗ್ರಾಫಿಕ್ಸ್ ಅನ್ನು ಬೇಡುವ ಆಟಗಳನ್ನು ಆಡಲು ಇದು ಅಷ್ಟೇನೂ ಸೂಕ್ತವಲ್ಲ. ಒಂದು ಮಟ್ಟಿಗಿನ ಶಕ್ತಿಯನ್ನು ಬೇಡುವ ವಿಡಿಯೋ ಎಡಿಟಿಂಗ್ ಮಾಡಬಹುದು. ಆದರೆ ದೊಡ್ಡ ಮಟ್ಟದ ವಿಡಿಯೋ ಎಡಿಟಿಂಗ್‌ಗೆ ಇದು ಸೂಕ್ತವಲ್ಲ. ಇದನ್ನು ಗೇಮಿಂಗ್ ಲ್ಯಾಪ್‌ಟಾಪ್ ಎನ್ನುವಂತಿಲ್ಲ. ಬದಲಿಗೆ ಬ್ಯುಸಿನೆಸ್ ಲ್ಯಾಪ್‌ಟಾಪ್ ಎನ್ನಬಹುದು.

ಕ್ಯಾಮೆರ

ಇದರ ಕ್ಯಾಮೆರ ಒಂದು ಮಟ್ಟಿಗೆ ಚೆನ್ನಾಗಿದೆ. 720p ಬದಲಿಗೆ 1080p ಕ್ಯಾಮೆರಾ ನೀಡಬಹುದಿತ್ತು. ಇದರ ಕ್ಯಾಮೆರಾಕ್ಕೆ ‌ಒಂದು ಚಿಕ್ಕ ಸ್ಲೈಡ್ ಮಾಡಬಹುದಾದ ಮುಚ್ಚಳವಿದೆ. ಇದು ಉತ್ತಮ ಸೌಲಭ್ಯ.

ಆಡಿಯೋ ವಿಡಿಯೋ

ಇದರ ಆಡಿಯೋ ವಿಡಿಯೋ ಹೇಳಿಕೊಳ್ಳುವಂತಹ ಗುಣಮಟ್ಟದ್ದಲ್ಲ. ಇದಕ್ಕೆ ಪ್ರಮುಖ ಕಾರಣ ಲ್ಯಾಪ್‌ಟಾಪ್‌ನ ಗಾತ್ರ. ತುಂಬ ತೆಳುವಿನ ಲ್ಯಾಪ್‌ಟಾಪ್ ಆದ ಕಾರಣ ದೊಡ್ಡ ಗಾತ್ರದ ಉತ್ತಮ ಗುಣಮಟ್ಟದ ಸ್ಪೀಕರ್ ಅಳವಡಿಸಲು ಸ್ಥಳವಿಲ್ಲ. ವಿಡಿಯೋ ವೀಕ್ಷಣೆಯ ಅನುಭವ ಚೆನ್ನಾಗಿದೆ. ಮೊದಲೇ ತಿಳಿಸಿದಂತೆ ಇದು ಬ್ಯುಸಿನೆಸ್ ಲ್ಯಾಪ್‌ಟಾಪ್. ಮನರಂಜನೆಗಾಗಿ ತಯಾರಿಸಿದ ಲ್ಯಾಪ್‌ಟಾಪ್ ಅಲ್ಲ.

ಇತರೆ

ಇದರ ಬ್ಯಾಟರಿಯ ಬಾಳಿಕೆ ಪರವಾಗಿಲ್ಲ. ಸುಮಾರು 3 ರಿಂದ 8 ಗಂಟೆ ಬಾಳಿಕೆ ಬರುತ್ತದೆ. ಇದು 256, 512 ಗಿಗಾಬೈಟ್ ಮತ್ತು 1 ಟೆರ್ರಾಬೈಟ್ ಸಂಗ್ರಹ ಶಕ್ತಿಯ ಮಾದರಿಗಳಲ್ಲಿ ಲಭ್ಯ. ಇದರಲ್ಲಿ ಸಿಮ್ ಕಾರ್ಡ್ ಹಾಕುವ ಸೌಲಭ್ಯವಿಲ್ಲ. ಈ ಸೌಲಭ್ಯ ಇದ್ದರೆ ಉತ್ತಮವಿತ್ತು.

ತೀರ್ಪು

ನೀಡುವ ಬೆಲೆಗೆ ಒಂದು ಮಟ್ಟಿಗೆ ತೃಪ್ತಿದಾಯಕವಾದ ಉತ್ಪನ್ನ ಎನ್ನಬಹುದು.

-ಡಾ| ಯು.ಬಿ. ಪವನಜ

gadgetloka @ gmail.com

The post ಏಸುಸ್ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್ first appeared on Vishva Kannada.

ಏಸುಸ್ ಸಿ223ಎನ್
ಆನ್‌ಲೈನ್ ತರಗತಿಗಳಿಗಾಗಿ ಒಂದು ಕ್ರೋಮ್‌ಬುಕ್

ಕೋವಿಡ್-19 ರಿಂದಾಗಿ ಹಲವು ಕ್ಷೇತ್ರಗಳಲ್ಲಿ ಗಣನೀಯವಾಗಿ ಬದಲಾವಣೆಯಾಗಿದೆ. ಅವುಗಳಲ್ಲಿ ಒಂದು ಪ್ರಮುಖವಾದ ಬದಲಾವಣೆ ಎಂದರೆ ಬಹುತೇಕ ಸಭೆ, ಗೋಷ್ಠಿ, ತರಗತಿಗಳು ಎಲ್ಲ ಆನ್‌ಲೈನ್ ಆಗಿರುವುದು. ಶಿಕ್ಷಣ ಕ್ಷೇತ್ರದಲ್ಲಂತೂ ಇದು ತುಂಬ ದೊಡ್ಡ ಬದಲಾವಣೆಯನ್ನೇ ತಂದಿದೆ. ಆನ್‌ಲೈನ್ ತರಗತಿಗಳಿಂದಾಗಿ ಕಡಿಮೆ ಬೆಲೆಗೆ ದೊರಕಬಹುದಾದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿಲ್ಲ. ಯಾಕೆಂದರೆ ಇದರ ಕೆಲಸವೆಲ್ಲ ಅಂತರಜಾಲದ ಮೂಲಕವೇ ಆಗುತ್ತದೆ, ಒಂದು ಬ್ರೌಸರ್ ಇದ್ದರೆ ಸಾಕು. ಈ ನಮೂನೆಯ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ಗಳಲ್ಲಿ ಪ್ರಮುಖವಾಗಿ ಎರಡು ನಮೂನೆ. ಮೊದಲನೆಯದು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ನೆಟ್‌ಬುಕ್‌ಗಳು. ಎರಡನೆಯದು ಗೂಗ್ಲ್‌ನವರ ಕ್ರೋಮ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಕ್ರೋಮ್‌ಬುಕ್‌ಗಳು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಂತಹ  ಕ್ರೋಮ್‌ಬುಕ್ ಒಂದನ್ನು. ಅದು ಏಸುಸ್‌ ಸಿ223ಎನ್ (Asus C223N Chromebook).

ಗುಣವೈಶಿಷ್ಟ್ಯಗಳು

ಪ್ರೋಸೆಸರ್

ಇಂಟೆಲ್ ಎನ್3350 (Intel Celeron N3350 Processor 1.1 GHz, 2 cores)

ಪ್ರಾಥಮಿಕ ಮೆಮೊರಿ

4 ಗಿಗಾಬೈಟ್

ಸಂಗ್ರಹ

32 ಗಿಗಾಬೈಟ್ ಎಸ್‌ಎಸ್‌ಡಿ

ಪರದೆ

1366 x 768 ಪಿಕ್ಸೆಲ್ ರೆಸೊಲೂಶನ್‌, 11.6 ಇಂಚು ಗಾತ್ರ, ಎಲ್‌ಇಡಿ

ಸ್ಪರ್ಶಪರದೆ

ಇಲ್ಲ

ಗ್ರಾಫಿಕ್ಸ್ ಪ್ರೋಸೆಸರ್

Intel HD Graphics 500

ಗಾತ್ರ

28.60 x 19.90 x 1.73 ಸೆ.ಮೀ.

ತೂಕ

1.0 ಕಿ.ಗ್ರಾಂ.

ಬ್ಯಾಟರಿ

38WHrs, 2-cell Li-ion

ಕ್ಯಾಮೆರ

720p

ಕಾರ್ಯಾಚರಣ ವ್ಯವಸ್ಥೆ

ಕ್ರೋಮ್ ಓಎಸ್

ಡಿವಿಡಿ ಡ್ರೈವ್

‌ಇಲ್ಲ

ಇತರೆ

ಮೈಕ್ರೊಎಸ್‌ಡಿ ಕಾರ್ಡ್ ರೀಡರ್, ಯುಎಸ್‌ಬಿ ಕಿಂಡಿಗಳು, ವೈಫೈ, ಬ್ಲೂಟೂತ್, ಟಚ್‌ಪ್ಯಾಡ್

ಬೆಲೆ

ಸುಮಾರು ₹19,000

ರಚನೆ ಮತ್ತು ವಿನ್ಯಾಸ

ಇದು ನೋಡಲು ಮಾಮೂಲಿ ಲ್ಯಾಪ್‌ಟಾಪ್‌ನಂತೆಯೇ ಕಾಣಿಸುತ್ತದೆ. ಆದರೆ ಚಿಕ್ಕದಾಗಿ ಮತ್ತು ಹಗುರವಾಗಿದೆ. ಇದನ್ನು ತಯಾರಿಸಲು ಬಳಸಿದ ಪ್ಲಾಸ್ಟಿಕ್ ಮೇಲ್ದರ್ಜೆಯದ್ದಲ್ಲ. ಹಾಗೆಂದು ನೋಡಲು ಅತಿ ಕಡಿಮೆ ಬೆಲೆಯ ಉತ್ಪನ್ನದಂತೆ ಕಾಣಿಸುವುದಿಲ್ಲ. ಪರದೆಯ ಗಾತ್ರ 11.6 ಇಂಚು. ಅಂದರೆ ಇದು ಚಿಕ್ಕದಾದ ಲ್ಯಾಪ್‌ಟಾಪ್. ತೆಳುವಾಗಿ ಹಾಗೂ ಹಗುರವಾಗಿಯೂ ಇದೆ. ಟಚ್‌ಪ್ಯಾಡ್ ಕೂಡ ಇದೆ. ಈ ಟಚ್‌ಪ್ಯಾಡ್‌ನ ಗುಣಮಟ್ಟ ಉತ್ತಮವಾಗಿದೆ. ಎರಡು ಯುಎಸ್‌ಬಿ-ಸಿ ಕಿಂಡಿಗಳಿವೆ. ಇವುಗಳಲ್ಲಿ ಒಂದನ್ನು ವಿದ್ಯುತ್ ಸಂಪರ್ಕಕ್ಕಾಗಿ ಬಳಸಲಾಗುತ್ತದೆ. ಇನ್ನೂ ಒಂದು ಮಾಮೂಲಿ ಯುಎಸ್‌ಬಿ 3.1 ಕಿಂಡಿಯಿದೆ. ನಿಮಗೆ ಹೊರಗಡೆಯಿಂದ ಮೌಸ್ ಜೋಡಿಸಬೇಕಾದರೆ ಈ ಕಿಂಡಿಯನ್ನು ಬಳಸಬೇಕು. ಇನ್ನೂ ಒಂದು ಯುಎಸ್‌ಬಿ ಕಿಂಡಿ ಕೊಟ್ಟಿದ್ದರೆ ಉತ್ತಮವಿತ್ತು. ಪ್ರಸೆಂಟೇಶನ್ ಮಾಡಬೇಕಾದರೆ ಇದರಲ್ಲಿ ವಿಜಿಎ ಆಗಲೀ ಎಚ್‌ಡಿಎಂಐ ಆಗಲೀ ಕಿಂಡಿಗಳಿಲ್ಲ. ಯುಎಸ್‌ಬಿ-ಸಿ ಕಿಂಡಿಯ ಮೂಲಕವೇ ಮಾಡಬೇಕು. ಅಂದರೆ ನೀವು ಅದಕ್ಕೆ ಸೂಕ್ತ ಅಡಾಪ್ಟರ್ ಕೊಳ್ಳಬೇಕು. ಬಹುಶಃ ಇದನ್ನು ತರಗತಿಗಳನ್ನು ವೀಕ್ಷಿಸಲು ಮಾತ್ರ ಎಂದು ತಯಾರಿಸಿದಂತಿದೆ.

https://www.instagram.com/p/CSwcJO-HaQu/

ಕೆಲಸದ ವೇಗ

ಇದು ಕಡಿಮೆ ಶಕ್ತಿಯ ಪ್ರೋಸೆಸರ್ ಬಳಸುತ್ತದೆ. ಇದರ ಕೆಲಸದ ವೇಗ ಕಡಿಮೆ ಇದೆ. ಕ್ರೋಮ್ ಬ್ರೌಸರ್‌ನಲ್ಲಿ ಹಲವು ಟ್ಯಾಬ್‌ಗಳನ್ನು ತೆರೆದರೆ ಇದು ಕೆಲಸ ಮಾಡಲು ಒದ್ದಾಡುತ್ತದೆ. ಇದರಲ್ಲಿ ಗೂಗ್ಲ್ ಪ್ಲೇ ಸ್ಟೋರ್ ಸೌಲಭ್ಯವಿದೆ. ಆಂಡ್ರೋಯಿಡ್‌ನಲ್ಲಿ ಕೆಲಸ ಮಾಡುವ ಕಿರುತಂತ್ರಾಂಶಗಳನ್ನು (ಆಪ್‌ಗಳನ್ನು) ಇದರಲ್ಲಿ ಇನ್‌ಸ್ಟಾಲ್ ಮಾಡಬಹುದು. ಆದರೆ ಹೆಚ್ಚಿನ ಶಕ್ತಿಯನ್ನು ಹಾಗೂ ಉತ್ತಮ ಗ್ರಾಫಿಕ್ಸ್ ಅನ್ನು ಬೇಡುವ ಆಟಗಳನ್ನು ಆಡಲು ಇದು ಸೂಕ್ತವಲ್ಲ. ಹೆಸರಿಗೆ ಆಂಡ್ರೋಯಿಡ್ ಆಪ್‌ಗಳನ್ನು ಹಾಕಿಕೊಳ್ಳಬಹುದಷ್ಟೆ. ಅವುಗಳ ಬಳಕೆಯ ಅನುಭವ ಚೆನ್ನಾಗಿಲ್ಲ. ಬ್ರೌಸರ್‌ನಲ್ಲಿ ಹಲವು ಟ್ಯಾಬ್‌ಗಳನ್ನು ತೆರೆದು ಜೊತೆಗೆ ಹಲವು ಆಪ್‌ಗಳನ್ನೂ ತೆರೆದರೆ ಇದು ಸುಸ್ತಾಗಿ ಕೆಲಸ ಮಾಡದೆ ಸ್ಥಬ್ದವಾಗುತ್ತದೆ. ನಂತರ ಇದನ್ನು ಸಹಜ ಸ್ಥಿತಿಗೆ ತರಲು ಬಹಳ ಒದ್ದಾಡಬೇಕಾಗುತ್ತದೆ. ಮೊದಲೇ ತಿಳಿಸಿದಂತೆ ಇದು ಬ್ರೌಸರ್ ಮೂಲಕ ಆನ್‌ಲೈನ್ ತರಗತಿಗಳನ್ನು ವೀಕ್ಷಸಲು ಮಾತ್ರ ಹೇಳಿ ಮಾಡಿಸಿದಂತಿದೆ.

ಕ್ಯಾಮೆರ

ಇದರ ಕ್ಯಾಮೆರ ಹೇಳಿಕೊಳ್ಳುವಂತಹದ್ದೇನೂ ಅಲ್ಲ. ತರಗತಿಗಳನ್ನು ನಡೆಸಲು ಇದರ ಕ್ಯಾಮೆರ ಅಷ್ಟು ಉತ್ತಮವಾದುದಲ್ಲ. ನೀವು ಈ ಕ್ರೋಮ್‌ಬುಕ್ ಬಳಸಿ ಆನ್‌ಲೈನ್ ನಾಟ್ಯ ಅಥವಾ ಯೋಗ ತರಬೇತಿಯ ತರಗತಿ ನಡೆಸುತ್ತೇನೆ ಎಂದುಕೊಂಡರೆ ಇದು ನಿಮಗೆ ಹೇಳಿದ್ದಲ್ಲ.

ಆಡಿಯೋ ವಿಡಿಯೋ

ಇದರ ಆಡಿಯೋ ವಿಡಿಯೋ ಕೂಡ ಹೇಳಿಕೊಳ್ಳುವಂತಹ ಗುಣಮಟ್ಟದ್ದಲ್ಲ. ಇದರ ಸ್ಪೀಕರಿನ ವಾಲ್ಯೂಮ್ ಹತ್ತಿರದಿಂದ ಕೇಳಲು ಸಾಕು. ವಿಡಿಯೋ ವೀಕ್ಷಣೆಯ ಅನುಭವವೂ ಅಷ್ಟಕ್ಕಷ್ಟೆ. ಸಿನಿಮಾ ನೋಡಲು ಇದು ಹೇಳಿ ಮಾಡಿದ್ದಲ್ಲ. ಆನ್‌ಲೈನ್ ತರಗತಿಯನ್ನು ವೀಕ್ಷಿಸುವಾಗ ಇಯರ್‌ಫೋನ್ ಬಳಸಿದರೆ ಉತ್ತಮ.

ಇತರೆ

ಈ ಕ್ರೋಮ್‌ಬುಕ್‌ಬ್ಯಾಟರಿಯ ಬಾಳಿಕೆ ಚೆನ್ನಾಗಿದೆ. ಸುಮಾರು 8 ಗಂಟೆ ಬಾಳಿಕೆ ಬರುತ್ತದೆ. ಇದು 16 ಮತ್ತು 32 ಗಿಗಾಬೈಟ್ ಸಂಗ್ರಹ ಶಕ್ತಿಯ ಎರಡು ಮಾದರಿಗಳಲ್ಲಿ ಲಭ್ಯ. ಹೆಚ್ಚಿನ ಸಂಗ್ರಹ ಬೇಕಿದ್ದಲ್ಲಿ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳಬಹುದು. ಇದರಲ್ಲಿ ಸಿಮ್ ಕಾರ್ಡ್ ಹಾಕುವ ಸೌಲಭ್ಯವಿಲ್ಲ. ಹಳ್ಳಿಗಳಲ್ಲಿ ವೈಫೈ ಸಂಪರ್ಕವಿಲ್ಲದಿದ್ದಲ್ಲಿ ಈ ಸೌಲಭ್ಯ ಇದ್ದರೆ ಉತ್ತಮವಿತ್ತು.

ತೀರ್ಪು

ಏಸುಸ್ ಒಂದು ಖ್ಯಾತ ಕಂಪೆನಿ. ನೀಡುವ ಬೆಲೆಗೆ ಹಲವು ಉತ್ತಮ ಉತ್ಪನ್ನಗಳನ್ನು ನೀಡಿದ ಖ್ಯಾತಿ ಇದಕ್ಕಿದೆ. ಆದರೆ ಈ ಕ್ರೋಮ್‌ಬುಕ್‌ನ ಬಗ್ಗೆ ಹಾಗೆ ಹೇಳುವಂತಿಲ್ಲ. ಇದರ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಬಹುದಿತ್ತು ಅಥವಾ ಗುಣಮಟ್ಟವನ್ನು ಉತ್ತಮಪಡಿಸಬಹುದಿತ್ತು. ಆನ್‌ಲೈನ್ ತರಗತಿಗಳನ್ನು, ವೆಬಿನಾರ್‌ಗಳನ್ನು ವೀಕ್ಷಿಸುವುದು ಮಾತ್ರವೇ ನಿಮ್ಮ ಅಗತ್ಯವಾಗಿದ್ದಲ್ಲಿ ಇದನ್ನು ಕೊಳ್ಳಬಹುದು.

-ಡಾ. ಯು.ಬಿ. ಪವನಜ

gadgetloka @ gmail . com

The post ಏಸುಸ್ ಸಿ223ಎನ್ first appeared on Vishva Kannada.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 22 5G
5ಜಿ ಬೇಕೆನ್ನುವವರಿಗಾಗಿ

ಗ್ಯಾಜೆಟ್‌ಲೋಕದಲ್ಲಿ ಸ್ಯಾಮ್‌ಸಂಗ್‌ನವರ ಹಲವಾರು ಫೋನ್‌ಗಳ ವಿಮರ್ಶೆಯನ್ನು ಮಾಡಿದ್ದೇವೆ. ಇತ್ತೀಚೆಗೆ ಅವರು ಸ್ವಲ್ಪ ಕಡಿಮೆ ಬೆಲೆಯ ಶ್ರೇಣಿಯಲ್ಲಿ 5ಜಿ ಸಂಪರ್ಕ ಇರುವ ಫೋನನ್ನು ಬಿಡುಗಡೆ ಮಾಡಿದ್ದಾರೆ. ಅದುವೆ ನಾವು ಈ ಸಲ ವಿಮರ್ಶೆ ಮಾಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ (Samsung Galaxy A22 5G) ಫೋನ್.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 2.2 ಗಿಗಾಹರ್ಟ್ಸ್ ಪ್ರೋಸೆಸರ್ (Dimensity 700 5G)

ಗ್ರಾಫಿಕ್ಸ್ ಪ್ರೋಸೆಸರ್

Mali-G57

ಮೆಮೊರಿ

6 + 128 ಗಿಗಾಬೈಟ್

8 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (ಪ್ರತ್ಯೇಕ)

ಪರದೆ

6.6 ಇಂಚು ಗಾತ್ರ, 1080 x 2408 ಪಿಕ್ಸೆಲ್ ರೆಸೊಲೂಶನ್, ಸೂಪರ್ ಅಮೋಲೆಡ್

ಕ್ಯಾಮೆರ

64+5+2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

8 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

5000 mAh

ಗಾತ್ರ

167.2 x 76.4 x 9.0ಮಿ.ಮೀ.

ತೂಕ

203 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 11

ಬೆಲೆ

₹18,499 (6+128), ₹ 21,999 (8+128)

ರಚನೆ ಮತ್ತು ವಿನ್ಯಾಸ

ಸ್ಯಾಮ್‌ಸಂಗ್‌ನವರ ಎ ಶ್ರೇಣಿಯ ಫೋನ್‌ಗಳು ಸುಂದರ ವಿನ್ಯಾಸಕ್ಕೆ ಹೆಸರುವಾಸಿಯಾಗಿವೆ. ಇದೂ ಇತರೆ ಎ ಶ್ರೇಣಿಯ ಫೋನ್‌ಗಳಂತೆ ಸುಂದರವಾಗಿದೆ. ದೇಹ ಪ್ಲಾಸ್ಟಿಕ್ಕಿನದು. ಕೈಯಿಂದ ಕುಟ್ಟಿದಾಗ ಸ್ವಲ್ಪ ಕಡಿಮೆ ಬೆಲೆಯ ಫೋನಿನಂತೆ ಭಾಸವಾಗುತ್ತದೆ.  ಹಸಿರು, ನೇರಳೆ, ಕಂದು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಅಷ್ಟೇನೂ ನಯವಾಗಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಆನ್/ಆಫ್ ಸ್ವಿಚ್ ಬೆರಳಚ್ಚು ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ. ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು  ಒಂದು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ  ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಅವುಗಳ ಪಕ್ಕದಲ್ಲಿ ಫ್ಲಾಶ್ ಇದೆ. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಸರಿಯಾಗಿ ಕೆಲಸ ಮಾಡುತ್ತದೆ. 5000 mAh ಬ್ಯಾಟರಿ ಇದೆ. ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ ಎನ್ನಬಹುದು.

[ngg src=”galleries” ids=”33″ display=”basic_slideshow”]

ಕೆಲಸದ ವೇಗ

ಇದರಲ್ಲಿರುವುದು ಡೈಮೆನ್ಸಿಟಿ ಪ್ರೋಸೆಸರ್. ಈ ಪ್ರೋಸೆಸರ್ ಅನ್ನು ಸಾಮಾನ್ಯವಾಗಿ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಲಸಲಾಗುತ್ತದೆ. ಅದು ಯಾಕೋ ಸ್ಯಾಮ್‌ಸಂಗ್‌ನವರು ತಮ್ಮದೇ ಆದ ಎಕ್ಸಿನೋಸ್ ಪ್ರೋಸೆಸರ್ ಬಳಸಿಲ್ಲ.  ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ ಕೇವಲ 1,475 ಇದೆ. ಅಂದರೆ ಇದು ತುಂಬ ವೇಗದ ಫೋನ್ ಅಲ್ಲ ಎನ್ನಬಹುದು. ದಿನನಿತ್ಯದ ಕೆಲಸಗಳನ್ನು ಮಾಡುವಾಗ ಇದು ಕಡಿಮೆ ವೇಗದ ಫೋನ್ ಅನ್ನಿಸುವುದಿಲ್ಲ. ಹಲವು ಆಟಗಳನ್ನೂ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಆಡಬಹುದು. ಕೆಲವು ಮೂರು ಆಯಾಮದ ಆಟಗಳನ್ನೂ ಆಡಬಹುದು. ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.

ಕ್ಯಾಮೆರ

ಇದರಲ್ಲಿ ಮೂರು ಪ್ರಾಥಮಿಕ ಕ್ಯಾಮೆರಗಳಿವೆ. 48 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 5 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ನೀಡುವ ಹಣಕ್ಕೆ ಹೋಲಿಸಿದರೆ ಪರವಾಗಿಲ್ಲ ಎನ್ನಬಹುದು. ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಿದರೆ ವಿಡಿಯೋವೂ ಅಲುಗಾಡುತ್ತದೆ. ಸ್ವಂತೀ ಕ್ಯಾಮೆರ ಹೇಳಿಕೊಳ್ಳುವಂತೇನೂ ಇಲ್ಲ. ಹಾಗೆಂದು ಕೆಟ್ಟದಾಗಿಯೂ ಇಲ್ಲ. ಇತರೆ ಸ್ಯಾಮ್‌ಸಂಗ್‌ನವರ ಫೋನ್ ಕ್ಯಾಮೆರಗಳ ಬಗ್ಗೆ ಬರೆದುದೂ ಇಲ್ಲಿಯೂ ಸಲ್ಲುತ್ತದೆ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಏನೋ ಇದೆ. ಆದರೆ ಅದರಲ್ಲಿ ಎಲ್ಲ ಆಯ್ಕೆಗಳಿಲ್ಲ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಆದರೆ ಅವರ ಕ್ಯಾಮೆರ ಯಂತ್ರಾಂಶ ಚೆನ್ನಾಗಿದೆ. Open Camera ಕಿರುತಂತ್ರಾಂಶ  ಹಾಕಿಕೊಂಡು ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಉತ್ತಮ ಫೋಟೋ ತೆಗೆಯಬಹುದು. ಅತಿ ಹತ್ತಿರದ ವಸ್ತುಗಳ ಫೋಟೋ ಈ ರೀತಿ ತೆಗೆಯಬಹುದು.

[ngg src=”galleries” ids=”34″ display=”basic_slideshow”]

ಆಡಿಯೋ ವಿಡಿಯೋ

ಈ ಫೋನಿನ ಆಡಿಯೋ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ತೃಪ್ತಿ ನೀಡಬಹುದಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಆಡಿಯೋ ವಿಭಾಗಕ್ಕೆ ಪಾಸ್ ಮಾರ್ಕು ನೀಡಬಹುದು. ಪರದೆಯ ಗುಣಮಟ್ಟ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೋ ಚೆನ್ನಾಗಿ ಪ್ಲೇ ಆಗುತ್ತದೆ. 4k ವಿಡಿಯೋ ಕೂಡ ಪ್ಲೇ ಆಗುತ್ತದೆ. ಎಫ್‌ಎಂ ರೇಡಿಯೋ ನೀಡಿದ್ದಾರೆ. ಆಡಿಯೋ ವಿಡಿಯೋ ವಿಭಾಗದಲ್ಲಿ ಇದಕ್ಕೆ ಪಾಸ್ ಮಾರ್ಕು ನೀಡಬಹುದು.

ಇತರೆ

ಈ ಫೋನಿನ ಹೆಚ್ಚುಗಾರಿಕೆ ಇರುವುದು 5ಜಿ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ ಎಂಬುದರಲ್ಲಿ. ಸ್ಯಾಮ್‌ಸಂಗ್‌ನವರು ಕಡಿಮೆ ಬೆಲೆಯ ಫೋನ್‌ಗಳಲ್ಲಿ ಮೊದಲ ಬಾರಿಗೆ 5ಜಿ ಸಂಪರ್ಕ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ಆದರೆ ಈ ತಂತ್ರಜ್ಞಾನ ಇನ್ನೂ ಭಾರತದಲ್ಲಿ ಬಳಕೆಗೆ ಬಂದಿಲ್ಲ.

ಇದರ ಬೆರಳಚ್ಚು ಸ್ಕ್ಯಾನರ್ ಪಕ್ಕದಲ್ಲಿರುವ ಆನ್/ಆಪ್ ಸ್ವಿಚ್‌ನಲ್ಲೇ ಇದೆ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಎರಡೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತವೆ. ಶಕ್ತಿಶಾಲಿಯಾದ ಬ್ಯಾಟರಿ ಇದೆ. ಅದರ ಬಾಳಿಕೆ ಚೆನ್ನಾಗಿದೆ.

ತೀರ್ಪು

ಮುಂದಕ್ಕೆ ಬರಲಿರುವ 5ಜಿ ತಂತ್ರಜ್ಞಾನದ ಬಳಕೆಗೆ ಈಗಲೇ ಸಿದ್ಧರಾಗಲು ನೀವು ಸ್ವಲ್ಪ ಜಾಸ್ತಿ ಹಣ ನೀಡಲು ಸಿದ್ಧರಿದ್ದೀರಾದರೆ ಇದನ್ನು ಕೊಳ್ಳಬಹುದು.

–ಡಾ| ಯು. ಬಿ. ಪವನಜ

gadgetloka @ gmail . com

The post ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 22 5G first appeared on Vishva Kannada.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32
ಕಡಿಮೆ ಬೆಲೆಯ ಇನ್ನೊಂದು ಫೋನ್

ಸ್ಯಾಮ್‌ಸಂಗ್‌ ಮೊಬೈಲ್ ಫೋನ್‌ಗಳನ್ನು ಹಲವು ಶ್ರೇಣಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮೇಲ್ದರ್ಜೆಯ ಎಸ್ ಶ್ರೇಣಿ, ಸುಂದರ ವಿನ್ಯಾಸಕ್ಕೆ ಹೆಸರಾದ ಎ ಶ್ರೇಣಿ, ಅಂತರಜಾಲ ಮಳಿಗೆಗಳ ಮೂಲಕ ಮಾತ್ರವೇ ದೊರೆಯುವ ಎಂ ಶ್ರೇಣಿ, ಹೀಗೆ ಇವೆ. ಭಾರತದಲ್ಲಿ ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 (Samsung Galaxy M32) ಫೋನ್.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 2 ಗಿಗಾಹರ್ಟ್ಸ್ ಪ್ರೋಸೆಸರ್ (Mediatek Helio G80)

ಗ್ರಾಫಿಕ್ಸ್ ಪ್ರೋಸೆಸರ್

Mali-G52

ಮೆಮೊರಿ

4 + 64 ಗಿಗಾಬೈಟ್

6 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (ಪ್ರತ್ಯೇಕ)

ಪರದೆ

6.4 ಇಂಚು ಗಾತ್ರ, 1080 x 2400 ಪಿಕ್ಸೆಲ್ ರೆಸೊಲೂಶನ್, ಸೂಪರ್ ಅಮೋಲೆಡ್

ಕ್ಯಾಮೆರ

64+8+2+2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

20 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

6000 mAh

ಗಾತ್ರ

159.3 x 74.0 x 9.3 ಮಿ.ಮೀ.

ತೂಕ

196 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 11

ಬೆಲೆ

₹14,999 (4+64), ₹ 16,999 (6+128)

ರಚನೆ ಮತ್ತು ವಿನ್ಯಾಸ

ಎಂ 32 ಫೋನಿನ ರಚನೆ ಮತ್ತು ವಿನ್ಯಾಸ ಇತ್ತೀಚೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆ ತೃಪ್ತಿದಾಯಕವಾಗಿದೆ. ನೀಲಿ, ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ನಯವಾಗಿದೆ. ಆದರೆ ಗೀರುಗೀರುಗಳ ವಿನ್ಯಾಸದಿಂದ ಕೂಡಿದೆ. ಈ ವಿನಯಾಸವು ಬೆಳಕಿಗೆ ಸ್ವಲ್ಪ ಓರೆಯಾಗಿ ಹಿಡಿದಾಗ ಥಳಥಳ ಹೊಳೆದು ಒಂದು ರಿತಿಯಲ್ಲಿ ನೋಡಲು ಆಪ್ಯಾಯಮಾನವಾಗಿದೆ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು  ಒಂದು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ  ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಅವುಗಳ ಕೆಳಗಡೆ ಫ್ಲಾಶ್ ಇದೆ. ಆನ್ ಆಫ್ ಬಟನ್ ಬೆರಳಚ್ಚು ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ. ಎಂ12 ರಲ್ಲೂ ಇದೇ ರೀತಿ ಇತ್ತು. ಆದರೆ ಅದರಲ್ಲಿ ಬೆರಳನ್ನು ದಾಖಲಿಸಲು ಮಾತ್ರ ಸ್ವಲ್ಪ ಕಷ್ಟಪಡಬೇಕಿತ್ತು. ಈ ಎಂ32 ರಲ್ಲಿ ಆ ತೊಂದರೆಯನ್ನು ಪರಿಹರಿಸಿದ್ದಾರೆ. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಸರಿಯಾಗಿ ಕೆಲಸ ಮಾಡುತ್ತದೆ. 6000 mAh ಬ್ಯಾಟರಿ ಇದೆ. ಆದರೆ ಎಂ12ಕ್ಕೆ ಹೋಲಿಸಿದರೆ ತೂಕ ಕಡಿಮೆ ಇದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ ಎನ್ನಬಹುದು.

[ngg src=”galleries” ids=”31″ display=”basic_imagebrowser”]ಕೆಲಸದ ವೇಗ

ಇದರಲ್ಲಿರುವುದು ಮೀಡಿಯಾಟೆಕ್ ಪ್ರೋಸೆಸರ್. ಈ ಪ್ರೋಸೆಸರ್ ಅನ್ನು ಸಾಮಾನ್ಯವಾಗಿ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಲಸಲಾಗುತ್ತದೆ. ಸ್ಯಾಮ್‌ಸಂಗ್‌ನವರು ಸ್ನಾಪ್‌ಡ್ರಾಗನ್ ಅಥವಾ ಅವರದೇ ಆದ ಎಕ್ಸಿನೋಸ್ ಪ್ರೋಸೆಸರ್ ಬಳಸಬಹುದಿತ್ತು. ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ ಕೇವಲ 1,335 ಇದೆ. ಅಂದರೆ ಇದು ತುಂಬ ವೇಗದ ಫೋನ್ ಅಲ್ಲ ಎನ್ನಬಹುದು. ದಿನನಿತ್ಯದ ಕೆಲಸಗಳನ್ನು ಮಾಡುವಾಗ ಇದು ಕಡಿಮೆ ವೇಗದ ಫೋನ್ ಅನ್ನಿಸುವುದಿಲ್ಲ. ಹಲವು ಆಟಗಳನ್ನೂ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಆಡಬಹುದು. ಕೆಲವು ಮೂರು ಆಯಾಮದ ಆಟಗಳನ್ನೂ ಆಡಬಹುದು. ಆಸ್ಫಾಲ್ಟ್ 9 ಆಟವನ್ನು ಆಡಿ ನೋಡಿದೆ. ವೇಗ ಪರವಾಗಿಲ್ಲ ಎಂದು ಅನ್ನಿಸಿತು. ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.

ಕ್ಯಾಮೆರ

ಕ್ಯಾಮರೆದ ವಿಷಯಕ್ಕೆ ಬಂದರೆ ಇದು ಎಂ12 ಕ್ಕಿಂತ ಸ್ವಲ್ಪ ಸುಧಾರಿಸಿದೆ ಎನ್ನಬಹುದು.  ಇದರಲ್ಲೂ ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. ಆದರೆ ಅವುಗಳ ರೆಸೊಲೂಶನ್ ಸ್ವಲ್ಪ ಜಾಸ್ತಿ ಇದೆ. 64 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 8 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವ ಮತ್ತು ಅತಿ ಹತ್ತಿರದ ವಸ್ತುಗಳನ್ನು ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ಗಳ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ನೀಡುವ ಹಣಕ್ಕೆ ಹೋಲಿಸಿದರೆ ಚೆನ್ನಾಗಿದೆ ಎನ್ನಬಹುದು. ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಿದರೆ ವಿಡಿಯೋವೂ ಅಲುಗಾಡುತ್ತದೆ. ಸ್ವಂತೀ ಫಲಿತಾಂಶ ಪರವಾಗಿಲ್ಲ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಏನೋ ಇದೆ. ಆದರೆ ಅದರಲ್ಲಿ ಎಲ್ಲ ಆಯ್ಕೆಗಳಿಲ್ಲ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಉತ್ತಮ ಫೋಟೋಗ್ರಾಫರುಗಳು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ವಿಧಾನದಲ್ಲಿ ಫೋಟೋ ತೆಗೆಯಲು ಸಾಧ್ಯವಿದೆಯೇ ಎಂದು. ಫೋನ್ ತಯಾರಕರು ನೀಡಿದ ಕಿರುತಂತ್ರಾಂಶದಲ್ಲಿ ಆ ಸೌಲಭ್ಯವಿಲ್ಲದಿದ್ದರೂ Camera2API ಮುಕ್ತವಾಗಿದ್ದರೆ ಇತರೆ ಕೆಲವು ಕಿರುತಂತ್ರಾಂಶಗಳನ್ನು ಹಾಕಿಕೊಂಡು ಸಂಪೂರ್ಣ ಮ್ಯಾನ್ಯುವಲ್ ಮೋಡ್‌ನಲ್ಲಿ ಉತ್ತಮ ಫೋಟೋ ತೆಗೆಯಬಹುದು. ಈ ಫೋನಿನಲ್ಲಿ ಅದು ಮುಕ್ತವಾಗಿದೆ. ಅಂದರೆ ಬೇರೆ ಕ್ಯಾಮೆರ ಕಿರುತಂತ್ರಾಂಶಗಳನ್ನು (ಉದಾ – Open Camera)  ಹಾಕಿಕೊಂಡು ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಇನ್ನಷ್ಟು ಉತ್ತಮ ಫೋಟೋ ತೆಗೆಯಲು ಸಾಧ್ಯವಿದೆ. ಜೇಡರ ಬಲೆಯ ಫೋಟೋವನ್ನು ಮ್ಯಾನ್ಯುವಲ್ ಮೋಡ್‌ನಲ್ಲಿ ಫೋಕಸ್ ಮಾಡಿ ತೆಗೆಯಲು ಈ ಫೋನಿನಲ್ಲಿ ಸಾಧ್ಯವಿದೆ.

[ngg src=”galleries” ids=”32″ display=”basic_imagebrowser”]

ಆಡಿಯೋ ವಿಡಿಯೋ

ಎಂ12 ರ ಆಡಿಯೋಕ್ಕೆ ಹೋಲಿಸಿದರೆ ಇದರ ಆಡಿಯೋ ತಕ್ಕ ಮಟ್ಟಿಗೆ ಸುಧಾರಿಸಿದೆ. ಆಡಿಯೋ ಇಂಜಿನ್ ತಕ್ಕ ಮಟ್ಟಿಗೆ ಇದೆ ಎನ್ನಬಹುದು. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ತೃಪ್ತಿ ನೀಡಬಹುದಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಆಡಿಯೋ ವಿಭಾಗಕ್ಕೆ ಪಾಸ್ ಮಾರ್ಕು ನೀಡಬಹುದು. ಅಮೋಲೆಡ್ ಪರದೆಯ ಗುಣಮಟ್ಟ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೋ ಚೆನ್ನಾಗಿ ಪ್ಲೇ ಆಗುತ್ತದೆ. 4k ವಿಡಿಯೋ ಕೂಡ ಪ್ಲೇ ಆಗುತ್ತದೆ. ಎಫ್‌ಎಂ ರೇಡಿಯೋ ನೀಡಿದ್ದಾರೆ. ಶಕ್ತಿಶಾಲಿಯಾದ ಸ್ಟೇಶನ್‌ಗಳು ಚೆನ್ನಾಗಿ ಕೇಳುತ್ತವೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು. ಆಡಿಯೋ ವಿಡಿಯೋ ವಿಭಾಗದಲ್ಲಿ ಇದಕ್ಕೆ ಪಾಸ್ ಮಾರ್ಕು ನೀಡಬಹುದು.

ಇತರೆ

ಇದರ ಬೆರಳಚ್ಚು ಸ್ಕ್ಯಾನರ್ ಪಕ್ಕದಲ್ಲಿರುವ ಆನ್/ಆಪ್ ಸ್ವಿಚ್‌ನಲ್ಲೇ ಇದೆ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಎರಡೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತವೆ. ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.

ಶಕ್ತಿಶಾಲಿಯಾದ ಬ್ಯಾಟರಿ ಇದೆ. ಅದರ ಬಾಳಿಕೆ ಚೆನ್ನಾಗಿದೆ.

ತೀರ್ಪು

ಈ ಬೆಲೆಗೆ ಇದು ಉತ್ತಮ ಫೋನ್ ಎನ್ನಬಹುದು.

–ಡಾ| ಯು.ಬಿ. ಪವನಜ

gadgetloka @ gmail . com

The post ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32 first appeared on Vishva Kannada.

ಕ್ರಾಸ್‌ಬೀಟ್ಸ್ ಇಗ್ನೈಟ್ ಎಸ್2
ಕೈಗೆಟುಕುವ ಬೆಲೆಗೆ ಭಾರತೀಯ ಸ್ಮಾರ್ಟ್‌ವಾಚ್

ಸ್ಮಾರ್ಟ್‌ವಾಚ್ ಅಂದರೆ ಬುದ್ಧಿವಂತ ಕೈಗಡಿಯಾರಗಳು. ಇವು ಮಾಮೂಲಿ ಡಿಜಿಟಲ್ ವಾಚ್‌ಗಳಿಗಿಂತ ಭಿನ್ನ. ಇವು ಸಮಯ, ದಿನ, ವಾರ, ಇತ್ಯಾದಿ ತೋರಿಸುವ ಜೊತೆ ಇನ್ನೂ ಹಲವಾರು ಕೆಲಸಗಳನ್ನು ಮಾಡುತ್ತವೆ. ಮುಖ್ಯವಾಗಿ ಇವು ಕೈಗಡಿಯಾರ ಮತ್ತು ಆರೋಗ್ಯಪಟ್ಟಿ ಇವೆರಡರ ಕೆಲಸಗಳನ್ನೂ ಮಾಡುತ್ತವೆ. ಇಂತಹ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಹಲವಾರಿವೆ. ಅಂತಹ ಒಂದು ಸ್ಮಾರ್ಟ್‌ವಾಚ್ ಕ್ರಾಸ್‌ಬೀಟ್ಸ್ ಇಗ್ನೈಟ್ ಎಸ್2 (Crossbeats Ignite S2). ಇದರ ಒಂದು ಪ್ರಮುಖ ವೈಶಿಷ್ಟ್ಯ ಎಂದರೆ ಇದು ಭಾರತೀಯ ಉತ್ಪನ್ನ. ಈ ಸಂಚಿಕೆಯಲ್ಲಿ ಈ ಸ್ಮಾರ್ಟ್‌ವಾಚ್‌ ಅನ್ನು ವಿಮರ್ಶೆ ಮಾಡೋಣ.

ಗುಣವೈಶಿಷ್ಟ್ಯಗಳು

1.55 ಇಂಚು ಗಾತ್ರದ ಐಪಿಎಸ್ ಪರದೆ

ಲೋಹದ ದೇಹ

ಚೌಕಾಕಾರ

ಸ್ಪೀಕರ್ ಮತ್ತು ಮೈಕ್ರೋಫೋನ್ ಇವೆ

ಬ್ಲೂಟೂತ್ ಸಂಪರ್ಕ

300 mAh ಬ್ಯಾಟರಿ

ವೈಫೈ ಮತ್ತು ಸಿಮ್ ಕಾರ್ಡ್ ಸೌಲಭ್ಯ ಇಲ್ಲ

ಆರೋಗ್ಯಪಟ್ಟಿ – ನಡೆದ ಹೆಜ್ಜೆಗಳ ಸಂಖ್ಯೆ, ಹೃದಯಬಡಿತ, ರಕ್ತದೊತ್ತಡ, ಆಮ್ಲಜನಕದ ಪ್ರಮಾಣ ಇತ್ಯಾದಿಗಳನ್ನು ತೋರಿಸುತ್ತದೆ

ಬೆಲೆ ರೂ.4,999.

ಈ ಸ್ಮಾರ್ಟ್‌ವಾಚಿನ ರಚನೆ ಮತ್ತು ವಿನ್ಯಾಸ ಉತ್ತಮವಾಗಿದೆ. ಲೋಹದ ದೇಹವಾಗಿದ್ದು ಇದು ಗಡುಸಾಗಿದೆ. ಸಣ್ಣ ಮಟ್ಟಿನ ಹೊಡೆತನ್ನು ತಡೆದುಕೊಳ್ಳಬಹುದು. ಚೌಕಾಕಾರದಲ್ಲಿದ್ದು ಬಲದ ಬದಿಯಲ್ಲಿ ಸ್ವಲ್ಪ ಮೇಲ್ಗಡೆ ಮಾಮೂಲಿ ವಾಚುಗಳಲ್ಲಿರುವಂತಹ ಒಂದು ತಿರುಗುವ ಹಾಗೂ ಒತ್ತಬಲ್ಲ ಕೀ ಇದೆ. ಈ ಕೀಯನ್ನು ಒತ್ತಿ ಹಲವು ಕೆಲಸಗಳನ್ನು ಮಾಡಬಹುದು. ಇದನ್ನು ತಿರುಗಿಸಿದಾಗ ವಾಚಿನ ಡಯಲ್ ಬದಲಾಗುತ್ತದೆ. ಸಾಮಾನ್ಯವಾಗಿ ಸ್ಮಾರ್ಟ್‌ವಾಚ್‌ಗಳಲ್ಲಿ ಈ ಡಯಲ್‌ ಅನ್ನು ಬದಲಿಸಬಹುದು. ಆದರೆ ಅದನ್ನು ಸ್ಮಾರ್ಟ್‌ಫೋನಿನಲ್ಲಿರುವ ಕಿರುತಂತ್ರಾಂಶ (ಆಪ್) ಮೂಲಕ ಮಾಡಬೇಕಾಗುತ್ತದೆ. ಇದರಲ್ಲೂ ಆ ಸೌಲಭ್ಯವಿದೆ. ಜೊತೆಗೆ ಕೆಲವು ಡಯಲ್‌ಗಳನ್ನು ಕೀ ತಿರುಗಿಸುವ ಮೂಲಕವೂ ಮಾಡಬಹುದು. ಎಡಭಾಗದಲ್ಲಿ ಸ್ಪೀಕರ್ ಮತ್ತು ಬಲಭಾಗದಲ್ಲಿ ಕೀಯ ಕೆಳಗಡೆ ಮೈಕ್ರೋಫೋನ್ ಇವೆ. 1.55 ಇಂಚು ಗಾತ್ರದ ಸ್ಪರ್ಶಪರದೆ ಇದೆ. ಇದು ಬಣ್ಣದ ಪರದೆಯಾಗಿದ್ದು ಉತ್ತಮ ಗುಣಮಟ್ಟದ್ದಾಗಿದೆ. ಈ ವಾಚ್ ಬೆಲ್ಟ್ ಜೊತೆ ಬರುತ್ತದೆ. ಹಲವು ನಮೂನೆಯ ಬೆಲ್ಟ್‌ಗಳು ಹಾಗೂ ಲೋಹದ ಬೆಲ್ಟ್‌ಗಳು ಸದ್ಯ ಲಭ್ಯವಿಲ್ಲ. ಈ ವಾಚ್ ವಾಟರ್‌ಪ್ರೂಫ್. ಅಂದರೆ ನೀರಿನಲ್ಲಿ ಬಿದ್ದರೆ ಅಥವಾ ಇದನ್ನು ಕೈಗೆ ಕಟ್ಟಿಕೊಂಡು ಈಜಿದರೆ ಇದಕ್ಕೆ ಏನೂ ತೊಂದರೆ ಆಗುವುದಿಲ್ಲ.

ಪರದೆಯಲ್ಲಿ ಸಾಮಾನ್ಯವಾಗಿ ಗಡಿಯಾರ ಇರುತ್ತದೆ. ಅದನ್ನು ಒತ್ತಿ, ಸರಿಸಿ ಹಲವು ಕೆಲಸಗಳನ್ನು ಮಾಡಬಹುದು. ಅಥವಾ ಬಲಬದಿಯಲ್ಲಿರುವ ಕೀಯನ್ನು ಒತ್ತಿಯೂ ಮಾಡಬಹುದು. ಹೀಗೆ ಪರದೆಯನ್ನು ಸರಿಸಿದಾಗ ಹೃದಯಬಡಿತ, ರಕ್ತದೊತ್ತಡ, ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ, ಮಹಿಳೆಯರಾದರೆ ಮುಟ್ಟು ಸಂಬಂಧಿ ಮಾಹಿತಿ ದಾಖಲೆ, ಇತ್ಯಾದಿ ಎಲ್ಲ ಆಯ್ಕೆಗಳಿವೆ. ಹೃದಯಬಡಿತ ಎಂದು ಆಯ್ಕೆ ಮಾಡಿದರೆ ಸುಮಾರು ಒಂದು ನಿಮಿಷದ ನಂತರ ಹೃದಯಬಡಿತ ಎಷ್ಟಿದೆ ಎಂದು ತೋರಿಸುತ್ತದೆ. ಇದೇ ಮಾದರಿಯಲ್ಲಿ ರಕ್ತದೊತ್ತಡ, ಆಮ್ಲಜನಕದ ಪ್ರಮಾಣಗಳನ್ನೂ ತೋರಿಸುತ್ತದೆ. ಗಡಿಯಾರದ ಡಯಲ್ ಅಥವಾ ಪರದೆಯಲ್ಲೇ ಹವಾಮಾನ ಮಾಹಿತಿ, ಎಷ್ಟು ಹೆಜ್ಜೆ ನಡೆದಿದ್ದೀರಿ ಎಂಬ ಮಾಹಿತಿಗಳನ್ನೂ ಗಂಟೆ, ದಿನ, ವಾರ ಮತ್ತು ತಿಂಗಳ ಮಾಹಿತಿ ಜೊತೆ ತೋರಿಸುವಂತೆ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಪರದೆಯನ್ನು ಸರಳವಾದ ಅನಲಾಗ್ ಗಡಿಯಾರದಂತೆಯೂ ಆಯ್ಕೆ ಮಾಡಿಕೊಳ್ಳಬಹುದು.

ಈ ಸ್ಮಾರ್ಟ್‌ವಾಚ್ ಬಳಸಲು ಅವರ ಕಂಪೆನಿಯವರದ್ದೇ ಆದ ಕಿರುತಂತ್ರಾಂಶವನ್ನು (ಆಪ್) ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಹಾಕಿಕೊಳ್ಳಬೇಕು. ಮೊದಲ ಬಾರಿಗೆ ಬಳಸುವಾಗ ಹಲವು ಆಯ್ಕೆಗಳನ್ನು ಮಾಡಿಕೊಳ್ಳಬೇಕು. ಇವರ ಕಿರುತಂತ್ರಾಂಶ ತುಂಬ ಸುಧಾರಿಸಬೇಕಾಗಿದೆ. ಇದು ಹಲವು ದಿನಗಳ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ಕೋಷ್ಟಕ ಅಥವಾ ಗ್ರಾಫ್ ಮಾದರಿಯಲ್ಲಿ ತೋರಿಸುವುದಿಲ್ಲ. ನಿಮಗೆ ಎಲ್ಲ ದಿನಗಳ ಮಾಹಿತಿ ಬೇಕಿದ್ದರೆ ನೀವು ಗೂಗ್ಲ್ ಫಿಟ್ ಜೊತೆ ಈ ಮಾಹಿತಿಯನ್ನು ಹಂಚುವ ಆಯ್ಕೆ ಮಾಡಿಕೊಳ್ಳಬಹುದು.

ವಾಚಿನ ಕಿರುತಂತ್ರಾಂಶದಲ್ಲಿ ಹಲವು ಡಯಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಸವಲತ್ತು ಇದೆ. ಆದರೆ ಸದ್ಯ ಲಭ್ಯವಿರುವ ವಿನ್ಯಾಸಗಳು ತುಂಬ ಇಲ್ಲ. ಮುಂದಕ್ಕೆ ಇನ್ನಷ್ಟು ವಿನ್ಯಾಸಗಳು ಬರಹುದೇನೋ? ನಿಮಗೆ ಬೇಕಾದ ರೀತಿಯಲ್ಲಿ ಡಯಲ್ ಅನ್ನು ನೀವೇ ವಿನ್ಯಾಸ ಮಾಡುವ ಸವಲತ್ತೂ ಇದೆ. ಆದರೆ ಅದರಲ್ಲೂ ತುಂಬ ಆಯ್ಕೆಗಳಿಲ್ಲ. ನಿಮ್ಮ ಫೋಟೋವನ್ನೇ ನಿಮ್ಮ ವಾಚಿನ ಡಯಲ್‌ನಲ್ಲಿ ಹಾಕಿಕೊಳ್ಳಬಹುದು!

ಈ ಸ್ಮಾರ್ಟ್‌ವಾಚ್‌ನಲ್ಲಿ ಸ್ಪೀಕರ್ ಮತ್ತು ಮೈಕ್ರೋಫೋನ್ ಇವೆ. ಫೋನಿನಲ್ಲಿ ಕರೆ ಬಂದಾಗ ವಾಚಿನಿಂದಲೇ ಕರೆ ಸ್ವೀಕರಿಸಿ ಮಾತನಾಡಬಹುದು. ವಾಚಿನಿಂದ ಫೋನ್ ಮಾಡಲು ಡಯಲ್ ಮಾಡಬಹುದು. ವಾಚಿನಲ್ಲಿ ನಿಮ್ಮ ಫೋನಿನ ಕ್ಯಾಮರವನ್ನು ಕ್ಲಿಕ್ ಮಾಡಬಹುದು. ಫೋನಿನಲ್ಲಿ ಸಂಗೀತವನ್ನು ಪ್ಲೇ ಮಾಡುವುದನ್ನು ವಾಚಿನಿಂದ ನಿಯಂತ್ರಿಸಬಹುದು. ಆದರೆ ಇವೆಲ್ಲವನ್ನೂ ಮಾಡಿದರೆ ನಿಮ್ಮ ವಾಚಿನ ಬ್ಯಾಟರಿ ಎರಡೇ ದಿವಸಗಳಲ್ಲಿ ಖಾಲಿಯಾಗುತ್ತದೆ. ಉಳಿದಂತೆ ಮಾಮೂಲಿ ಕೆಲಸಗಳಾದರೆ 7 ರಿಂದ 10 ದಿವಸ ಬಾಳಿಕೆ ಬರುತ್ತದೆ. ಬ್ಯಾಟರಿ ಸುಮಾರು ಒಂದು ಗಂಟೆಯಲ್ಲಿ ಚಾರ್ಜ್ ಆಗುತ್ತದೆ.

ನಿಮ್ಮ ಫೋನಿನಲ್ಲಿ ಸಂದೇಶ ಬಂದಾಗ ಅದು ವಾಚಿನಲ್ಲಿ ಮೂಡಿಬರುವಂತೆ ಆಯ್ಕೆ ಮಾಡಿಕೊಳ್ಳಬಹುದು. ಈ ವಾಚಿನಲ್ಲಿ ಕನ್ನಡ ಭಾಷೆಯ ಅಂದರೆ ಕನ್ನಡ ಯುನಿಕೋಡ್‌ನ ಬೆಂಬಲವಿಲ್ಲ. ಅಂದರೆ ನಿಮಗೆ ಫೋನಿನಲ್ಲಿ ಬಂದ ಸಂದೇಶ ಕನ್ನಡದಲ್ಲಿದ್ದರೆ ಅದು ವಾಚಿನಲ್ಲಿ ಸರಿಯಾಗಿ ಮೂಡಿಬರುವುದಿಲ್ಲ.

[ngg src=”galleries” ids=”30″ display=”basic_imagebrowser”]

ತೀರ್ಪು

ನೀಡುವ ಹಣಕ್ಕೆ ತೃಪ್ತಿ ನೀಡುವ ಸ್ಮಾರ್ಟ್‌ವಾಚ್ ಎನ್ನಬಹುದು. ಇದನ್ನು ತಯಾರಿಸಿದ್ದು ಭಾರತೀಯ ಕಂಪೆನಿ ಎನ್ನುವುದನ್ನೂ ಗಮನದಲ್ಲಿರಿಸಿಕೊಳ್ಳಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

The post ಕ್ರಾಸ್‌ಬೀಟ್ಸ್ ಇಗ್ನೈಟ್ ಎಸ್2 first appeared on Vishva Kannada.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 52
ಒಂದು ಸುಂದರ ಫೋನ್

ಸ್ಯಾಮ್‌ಸಂಗ್‌ನವರು ಹಲವು ಶ್ರೇಣಿಗಳಲ್ಲಿ ಫೋನ್‌ಗಳನ್ನು ನಿರಂತರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಕೆಲವೊಮ್ಮೆ ಒಂದು ಫೋನಿಗೂ ಇನ್ನೊಂದಕ್ಕೂ ಅದರ ಗುಣವೈಶಿಷ್ಟ್ಯದಲ್ಲಿ ಸ್ವಲ್ಪವೇ ವ್ಯತ್ಯಾಸ ಇರುತ್ತದೆ. ಕೊಳ್ಳುವವರಿಗೂ ಈ ರೀತಿ ಫೋನ್‌ಗಳ ಸಾಗರದಲ್ಲಿ ಬೇಕಾದುದನ್ನು ಆಯ್ಕೆ ಮಾಡುವುದು ಕೆಲವರಿಗೆ ಕಷ್ಟವಾಗುತ್ತದೆ. ಸ್ಯಾಮ್‌ಸಂಗ್‌ನವ ಎ ಶ್ರೇಣಿಯ ಫೋನ್‌ಗಳು ಸುಂದರ ವಿನ್ಯಾಸಕ್ಕೆ ಹೆಸರಾಗಿವೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಂತಹ ಒಂದು ಪೋನ್. ಅದುವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ52 (Samsung Galaxy A52).

ಗುಣವೈಶಿಷ್ಟ್ಯಗಳು

ಪ್ರೋಸೆಸರ್

2 x 2.32 + 6 x 1.8 ಗಿಗಾಹರ್ಟ್ಸ್ ಪ್ರೋಸೆಸರ್ (Qualcomm Snapdragon 732G)

ಗ್ರಾಫಿಕ್ಸ್ ಪ್ರೋಸೆಸರ್

Adreno-618

ಮೆಮೊರಿ

6 + 128 ಗಿಗಾಬೈಟ್

8 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (1 ಸಿಮ್ + ಮೈಕ್ರೊಎಸ್‌ಡಿ)

ಪರದೆ

6.47 ಇಂಚು ಗಾತ್ರ, 1080 x 2400 ಪಿಕ್ಸೆಲ್ ರೆಸೊಲೂಶನ್, ಸೂಪರ್ ಅಮೋಲೆಡ್

ಕ್ಯಾಮೆರ

64+12+5+5 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

32 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ (ಹೈಬ್ರಿಡ್)

ಬ್ಯಾಟರಿ

4500 mAh

ಗಾತ್ರ

159.9 x 75.1 x 8.4 ಮಿ.ಮೀ.

ತೂಕ

189 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ (ಪರದೆಯಲ್ಲಿ)

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇದೆ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 11

ಬೆಲೆ

₹26,499 (6+128), ₹ 27,999 (8+128)

ರಚನೆ ಮತ್ತು ವಿನ್ಯಾಸ

ಸ್ಯಾಮ್‌ಸಂಗ್‌ನವರ ಎ ಶ್ರೇಣಿಯ ಫೋನ್‌ಗಳು ಸುಂದರ ವಿನ್ಯಾಸಕ್ಕೆ ಹೆಸರಾಗಿವೆ. ಈ ಫೋನ್ ಕೂಡ ಅಷ್ಟೆ. ನೋಡಲು ಸುಂದರವಾಗಿದೆ. ಕೈಯಲ್ಲಿ ಹಿಡಿಯುವ ಅನುಭವ ಉತ್ತಮವಾಗಿದೆ. ದೇಹ ಪ್ಲಾಸ್ಟಿಕ್ಕಿನದ್ದಾಗಿದೆ. ಆದರೂ ಗಟ್ಟಿಯಾಗಿದೆ. ನೀಲಿ, ಕಪ್ಪು, ಬಿಳಿ ಮತ್ತು ನೇರಳೆ  ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ದೊರಗಾಗಿದೆ (matt finish). ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಅಥವಾ ಒಂದು ನ್ಯಾನೋ ಸಿಮ್ ಮತ್ತು  ಒಂದು ಮೆಮೊರಿ ಕಾರ್ಡ್ ಹಾಕಬಹುದು. ಈ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇಗೆ ಒಂದು ಹೆಚ್ಚಿಗೆ ವಾಶರ್ ನೀಡಿದ್ದಾರೆ. ಇದು ಈ ಟ್ರೇಯ ಸಂಧಿಯ ಮೂಲಕ ಫೋನಿನೊಳಗಡೆ ನೀರು ಹೋಗದಂತೆ ತಡೆಯುತ್ತದೆ. ಈ ಫೋನ್ ಒಂದು ಮಟ್ಟಿಗೆ ನೀರನ್ನು ತಡೆಯುತ್ತದೆ (IP67). ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ  ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಎಡಗಡೆಯ ಮೊದಲ ಸಾಲಿನಲ್ಲಿ ಮೂರು ಕ್ಯಾಮರಗಳು ಮತ್ತು ಬಲಗಡೆಯ ಸಾಲಿನಲ್ಲಿ ಒಂದು ಕ್ಯಾಮರ ಮತ್ತು ಫ್ಲಾಶ್ ಇವೆ. ಈ ಕ್ಯಾಮರಗಳು ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಎತ್ತರದಲ್ಲಿದೆ. ಹಿಂದುಗಡೆಗೆ ಒಂದು ಕವಚ ಹಾಕಿಕೊಂಡರೆ ಉತ್ತಮ. ಸ್ಯಾಮ್‌ಸಂಗ್‌ನವರು ಯಾವುದೇ ಕವಚ ನೀಡಿಲ್ಲ. ನೀವು ಮಾರುಕಟ್ಟೆಯಿಂದ ಕೊಂಡುಕೊಳ್ಳಬೇಕು. ಬೆರಳಚ್ಚು ಸ್ಕ್ಯಾನರ್ ಪರದೆಯಲ್ಲೇ ಕೆಳಭಾಗದಲ್ಲಿದೆ. ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಎಲ್ಲ ಸಲ ಸರಿಯಾಗಿ ಕೆಲಸ ಮಾಡುವುದಿಲ್ಲ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸದ ಬಗ್ಗೆ ಹೇಳುವುದಾದರೆ ಒಂದು ಸುಂದರ ಫೋನ್ ಎನ್ನಬಹುದು.

https://imgur.com/gallery/0qZZFNI

ಕೆಲಸದ ವೇಗ

ಇದರಲ್ಲಿರುವುದು ಸ್ನ್ಯಾಪ್‌ಡ್ರಾಗನ್ ಪ್ರೋಸೆಸರ್. ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ 1,378 ಇದೆ. ಅಂದರೆ ಇದು ಅತಿ  ವೇಗದ್ದು ಎನ್ನುವಂತಿಲ್ಲ. ಕಡಿಮೆ ಮತ್ತು ಮಧ್ಯಮ ಶಕ್ತಿಯನ್ನು ಬೇಡುವ ಹಲವು ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದು. ಮೂರು ಆಯಾಮದ ಆಟಗಳನ್ನೂ ಒಂದು ಮಟ್ಟಿಗೆ ಆಡಬಹುದು. ಆದರೆ ಈ ಫೋನ್ ಅತಿ ವೇಗದ್ದಲ್ಲ. ಹಾಗೆಂದು ಹೇಳಿ ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.

ಕ್ಯಾಮೆರ

ಈ ಫೋನಿನಲ್ಲಿ ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. 64 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 5 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 12 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವ ಮತ್ತು ಅತಿ ಹತ್ತಿರದ ವಸ್ತುಗಳನ್ನು ಚಿತ್ರೀಕರಿಸಲು (ಮ್ಯಾಕ್ರೊ) 5 ಮೆಗಾಪಿಕ್ಸೆಲ್‌ಗಳ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ಚೆನ್ನಾಗಿದೆ. ಕಡಿಮೆ ಬೆಳಕಿನಲ್ಲಿ ಚಿತ್ರೀಕರಣಕ್ಕೆಂದೇ ಇರುವ ನೈಟ್ ಮೋಡ್‌ ಇದೆ. ಆದರೆ ಈ ಮೋಡ್ ಅಷ್ಟೇನೂ ತೃಪ್ತಿ ನೀಡಲಿಲ್ಲ. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇದೆ. ಅಂದರೆ ಫೋಟೋ ತೆಗೆಯುವಾಗ ಮತ್ತು ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲ್ಪಸ್ವಲ್ಪ ಅಲುಗಾಡಿದರೂ ಫಲಿತಾಂಶ ಸರಿಯಾಗಿ ಬರುತ್ತದೆ. ಸ್ವಂತೀಗೆ 32 ಮೆಗಾಪಿಕ್ಸೆಲ್ ಕ್ಯಾಮೆರ ಇರುವುದರಿಂದ ಫಲಿತಾಂಶ ಚೆನ್ನಾಗಿದೆ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಇದೆ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಕೂಡ ಇದೆ. ಉತ್ತಮ ಫೋಟೋಗ್ರಾಫರುಗಳು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ವಿಧಾನದಲ್ಲಿ ಫೋಟೋ ತೆಗೆಯಲು ಸಾಧ್ಯವಿದೆಯೇ ಎಂದು. ಇದರಲ್ಲಿ ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಇನ್ನಷ್ಟು ಉತ್ತಮ ಫೋಟೋ ತೆಗೆಯಲು ಸಾಧ್ಯವಿದೆ. ಅತಿ ನಿಧಾನವಾಗಿ ವಿಡಿಯೋ ಮಾಡುವ ಸೌಲಭ್ಯವಿದೆ. ಇದನ್ನು ಬಳಸಿ ಕೆಲವು ಸೃಜನಶೀಲ ವಿಡಿಯೋ ಮಾಡಬಹುದು. ಉದಾಹರಣೆಗೆ ಕಾರಂಜಿಯಿಂದ ಚಿಮ್ಮುವ ನೀರು.

Samsung Galaxy A52 camera samples

https://www.instagram.com/p/CNufJOigkWZ/

ಸೂಪರ್ ಸ್ಲೋ ಮೋಶನ್ ವಿಡಿಯೋ ಉದಾಹರಣೆ

ಆಡಿಯೋ ವಿಡಿಯೋ

ಇದರ ಆಡಿಯೋ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಸುಮಾರಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಸ್ಟೀರಿಯೋ ಸ್ಪೀಕರುಗಳನ್ನು ನೀಡಿದ್ದಾರೆ. ಆದರೂ ಉತ್ತಮ ಸಂಗೀತ ಆಲಿಸಬೇಕಿದ್ದರೆ ಉತ್ತಮ ಹೆಡ್‌ಫೋನ್ ಬಳಸುವುದೇ ದಾರಿ. ಆಡಿಯೋ ವಿಭಾಗ ನನಗೆ ಪೂರ್ತಿ ತೃಪ್ತಿ ನೀಡಿಲ್ಲ. ಸೂಪರ್ ಅಮೋಲೆಡ್ ಪರದೆಯ ಗುಣಮಟ್ಟ ಮೇಲ್ದರ್ಜೆಯದ್ದಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೋ ಕೂಡ ಪ್ಲೇ ಆಗುತ್ತವೆ. ವಿಡಿಯೋ ವೀಕ್ಷಣೆಯ ಅನುಭವ ನಿಜಕ್ಕೂ ಚೆನ್ನಾಗಿದೆ. ಉತ್ತಮ ಗ್ರಾಫಿಕ್ಸ್ ಇರುವ  ಆಟಗಳನ್ನು ಆಡುವಾಗ ಇದರ ಪರದೆಯ ಗುಣಮಟ್ಟ ವೇದ್ಯವಾಗುತ್ತದೆ. ಎಫ್‌ಎಂ ರೇಡಿಯೋ ನೀಡಿದ್ದಾರೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು.

ಬ್ಯಾಟರಿ

ಇದರಲ್ಲಿರುವುದು 4500mAh ಶಕ್ತಿಯ ಬ್ಯಾಟರಿ. ಒಂದು 4k ವಿಡಿಯೋವನ್ನು ನಿರಂತರ ಪ್ಲೇ ಮಾಡಿದಾಗ ಸುಮಾರು 12 ಗಂಟೆ ಕೆಲಸ ಮಾಡಿತು. ಈ ಫೋನಿನಲ್ಲಿ ವೇಗವಾಗಿ ಚಾರ್ಜ್ ಮಾಡುವ ಸವಲತ್ತು ಇದೆ. ಇದು ಸುಮಾರು 90 ನಿಮಿಷದಲ್ಲಿ 0 ಯಿಂದ 100% ಚಾರ್ಜ್ ಆಗುತ್ತದೆ. ಈ ವೇಗವಾಗಿ ಚರ್ಜ್ ಮಾಡುವ ಸವಲತ್ತು ಫೋನಿನಲ್ಲಿರುವುದರಿಂದ ಚಾರ್ಜ್ ಆಗುವಾಗ ಫೋನ್ ಸ್ವಲ್ಪ ಬಿಸಿಯಾಗುತ್ತದೆ. ಆದುದರಿಂದ ಕೆಲವರಿಗೆ ಇರುವ ಅಭ್ಯಾಸದಂತೆ ಚಾರ್ಜ್ ಮಾಡುತ್ತಿರುವಾಗ ಹೆಚ್ಚು ಶಕ್ತಿಯನ್ನು ಬೇಡುವ ಯಾವುದೇ ಕೆಲಸ (ಆಟ ಆಡುವುದು) ಮಾಡದಿದ್ದರೆ ಉತ್ತಮ. ಫೋನ್ ಜೊತೆ ಕೊಟ್ಟಿರುವುದು 15 ವಾಟ್ ಚಾರ್ಜರ್. 25 ವಾಟ್ ಚಾರ್ಜರ್ ಕೊಟ್ಟಿದ್ದರೆ ಉತ್ತಮವಿತ್ತು.

ಇತರೆ

ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.

ತೀರ್ಪು

ಈ ಬೆಲೆಗೆ ಇದು ಒಂದು ಮಟ್ಟಿಗೆ ಉತ್ತಮ ಫೋನ್ ಎನ್ನಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

The post ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 52 first appeared on Vishva Kannada.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12
ನೀಡುವ ಬೆಲೆಗೆ ಉತ್ತಮ ಫೋನ್

ಮೊಬೈಲ್ ಫೋನ್‌ಗಳ ಕ್ಷೇತ್ರದಲ್ಲಿ ಸ್ಯಾಮ್‌ಸಂಗ್‌ಗೆ ತನ್ನದೇ ಸ್ಥಾನವಿದೆ. ಭಾರತದಲ್ಲಿ ಅದು ಯಾವಾಗಲು ಮೊದಲ 5 ಸ್ಥಾನಗಳಲ್ಲಿ ಒಂದಾಗಿರುತ್ತದೆ. ಸುಮಾರು ಸಮಯ ಮೊದಲನೆಯ ಸ್ಥಾನದಲ್ಲಿತ್ತು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಸ್ಮಾಸಂಗ್‌ನವರು ಹಲವು ಬೆಲೆಗಳಲ್ಲಿ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ12 (Samsung Galaxy M12) ಫೋನ್.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 2 ಗಿಗಾಹರ್ಟ್ಸ್ ಪ್ರೋಸೆಸರ್ (Exynos 850)

ಗ್ರಾಫಿಕ್ಸ್ ಪ್ರೋಸೆಸರ್

Mali-G72

ಮೆಮೊರಿ

4 + 64 ಗಿಗಾಬೈಟ್

6 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (ಪ್ರತ್ಯೇಕ)

ಪರದೆ

6.5 ಇಂಚು ಗಾತ್ರ, 720 x 1600 ಪಿಕ್ಸೆಲ್ ರೆಸೊಲೂಶನ್

ಕ್ಯಾಮೆರ

48+5+2+2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

8 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

6000 mAh

ಗಾತ್ರ

164.0 x 75.9 x 9.7 ಮಿ.ಮೀ.

ತೂಕ

221 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 11

ಬೆಲೆ

₹10,999 (4+64), ₹ 13,499 (6+128)

ರಚನೆ ಮತ್ತು ವಿನ್ಯಾಸ

ಇದರ ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ. ನೀಲಿ, ಕಪ್ಪು ಬಿಳಿ  ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಗೀರುಗೀರುಗಳಿಂದ ಕೂಡಿದ್ದು ದೊರಗಾಗಿದೆ. ಇದು ಸ್ವಲ್ಪ ವಿಶೇಷ ಎನ್ನಬಹುದಾದ ವಿನ್ಯಾಸ. ಬಹುತೇಕ ಫೋನ್‌ಗಳಲ್ಲಿ ಹಿಂಭಾಗ ಅತಿ ನಯವಾಗಿರುತ್ತದೆ ಅಥವಾ ಸ್ವಲ್ಪ ದೊರಗಾಗಿರುತ್ತದೆ. ಆದರೆ ಇದು ಗೀರುಗಳಿಂದ ಕೂಡಿದೆ. ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು  ಒಂದು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ  ಬಲಮೂಲೆಯಲ್ಲಿ ಮೇಲ್ಗಡೆ ಕ್ಯಾಮರಗಳು ಇವೆ. ಅವುಗಳ ಕೆಳಗಡೆ ಫ್ಲಾಶ್ ಇದೆ. ಆನ್ ಆಫ್ ಬಟನ್ ಬೆರಳಚ್ಚು ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ. ಇದರಲ್ಲಿ ಬೆರಳನ್ನು ದಾಖಲಿಸಲು ಮಾತ್ರ ಸ್ವಲ್ಪ ಕಷ್ಟಪಡಬೇಕು. ಮುಖವನ್ನು ಗುರುತುಹಿಡಿಯುವ ಸವಲತ್ತೂ ಇದೆ. ಅದು ಸರಿಯಾಗಿ ಕೆಲಸ ಮಾಡುತ್ತದೆ. 6000 mAh ಬ್ಯಾಟರಿ ಇರುವುದರಿಂದ ಸ್ವಲ್ಪ ತೂಕ ಇದೆ. ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ ಎನ್ನಬಹುದು.

[ngg src=”galleries” ids=”28″ display=”basic_slideshow”]

ಕೆಲಸದ ವೇಗ

ಇದರಲ್ಲಿರುವುದು ಸ್ಯಾಮ್‌ಸಂಗ್‌ನವರದೇ ಆದ ಎಕ್ಸಿನೋಸ್ ಪ್ರೋಸೆಸರ್. ಇದರ ಗೀಕ್‌ಬೆಂಚ್5 ಬೆಂಚ್‌ಮಾರ್ಕ್ ಕೇವಲ 1,013 ಇದೆ. ಅಂದರೆ ಇದು ಕಡಿಮೆ ವೇಗದ್ದು ಎನ್ನಬಹುದು. ಕಡಿಮೆ ಮತ್ತು ಮಧ್ಯಮ ಶಕ್ತಿಯನ್ನು ಬೇಡುವ ಹಲವು ಆಟಗಳನ್ನು ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಆಡಬಹುದು. ಕೆಲವು ಮೂರು ಆಯಾಮದ ಆಟಗಳನ್ನೂ ಆಡಬಹುದು. ನಿಜಕ್ಕೂ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಆಡಲು ಈ ಫೋನ್ ಅಂತಹ ಉತ್ತಮವಾದುದಲ್ಲ. ದೈನಂದಿನ ಕೆಲಸಗಳಲ್ಲಿ ಇದು ನಿಧಾನ ಎಂದು ಅನಿಸುವುದಿಲ್ಲ. ಫೋನಿನ ಬೆಲೆಗೆ ಹೋಲಿಸಿದರೆ ಕೆಲಸದ ವೇಗ ತೃಪ್ತಿದಾಯಕವಾಗಿದೆ.

ಕ್ಯಾಮೆರ

ಈ ಫೋನಿನಲ್ಲಿ ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. 48 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರ, ದೂರವನ್ನು ತಿಳಿಯಲು 5 ಮೆಗಾಪಿಕ್ಸೆಲ್‌ನ ಕ್ಯಾಮೆರ ಮತ್ತು ಅತಿ ಅಗಲದ ದೃಶ್ಯವನ್ನು (ultra-wide) ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ನ ಕ್ಯಾಮೆರಗಳಿವ ಮತ್ತು ಅತಿ ಹತ್ತಿರದ ವಸ್ತುಗಳನ್ನು ಚಿತ್ರೀಕರಿಸಲು 2 ಮೆಗಾಪಿಕ್ಸೆಲ್‌ಗಳ ಕ್ಯಾಮೆರಗಳಿವೆ. ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಗಳ ಫಲಿತಾಂಶ ಚೆನ್ನಾಗಿದೆ. ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಕಡಿಮೆ ಬೆಲೆಯ ಬಹುತೇಕ ಫೋನ್ ಕ್ಯಾಮೆರಗಳಂತೆ ಇದರ ಕ್ಯಾಮೆರವೂ ಕೆಲವು ಸಂದರ್ಭಗಳಲ್ಲಿ ಫೋಕಸ್ ಮಾಡಲು ಸ್ವಲ್ಪ ಕಷ್ಟಪಡುತ್ತದೆ. ಕಡಿಮೆ ಬೆಳಕಿನಲ್ಲಿ ಚಿತ್ರೀಕರಣಕ್ಕೆಂದೇ ಇರುವ ನೈಟ್ ಮೋಡ್‌ನಲ್ಲಿ ಒಂದು ಮಟ್ಟಿಗೆ ಉತ್ತಮ ಫೋಟೋಗಳು ಬಂದವು. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೋ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಬಾರದು. ಸ್ವಂತೀ ಫಲಿತಾಂಶ ಅಂತಹ ಅದ್ಭುತ ಎನ್ನುವಂತಿಲ್ಲ. ಇವರ ಫೋನ್ ಕಿರುತಂತ್ರಾಂಶದಲ್ಲಿ (ಆಪ್‌ನಲ್ಲಿ) ಮ್ಯಾನ್ಯುವಲ್ ಮೋಡ್ (ಪ್ರೋ ಮೋಡ್) ಏನೋ ಇದೆ. ಆದರೆ ಅದರಲ್ಲಿ ಎಲ್ಲ ಆಯ್ಕೆಗಳಿಲ್ಲ. ಮುಖ್ಯವಾಗಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಉತ್ತಮ ಫೋಟೋಗ್ರಾಫರುಗಳು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ವಿಧಾನದಲ್ಲಿ ಫೋಟೋ ತೆಗೆಯಲು ಸಾಧ್ಯವಿದೆಯೇ ಎಂದು. ಫೋನ್ ತಯಾರಕರು ನೀಡಿದ ಕಿರುತಂತ್ರಾಂಶದಲ್ಲಿ ಆ ಸೌಲಭ್ಯವಿಲ್ಲದಿದ್ದರೂ Camera2API ಮುಕ್ತವಾಗಿದ್ದರೆ ಇತರೆ ಕೆಲವು ಕಿರುತಂತ್ರಾಂಶಗಳನ್ನು ಹಾಕಿಕೊಂಡು ಸಂಪೂರ್ಣ ಮ್ಯಾನ್ಯುವಲ್ ಮೋಡ್‌ನಲ್ಲಿ ಉತ್ತಮ ಫೋಟೋ ತೆಗೆಯಬಹುದು. ಈ ಫೋನಿನಲ್ಲಿ ಅದು ಮುಕ್ತವಾಗಿಲ್ಲ. ಅಂದರೆ ಬೇರೆ ಕ್ಯಾಮೆರ ಕಿರುತಂತ್ರಾಂಶಗಳನ್ನು (ಉದಾ – Open Camera)  ಹಾಕಿಕೊಂಡು ಕ್ಯಾಮೆರದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಇನ್ನಷ್ಟು ಉತ್ತಮ ಫೋಟೋ ತೆಗೆಯಲು ಸಾಧ್ಯವಿಲ್ಲ.

[ngg src=”galleries” ids=”29″ display=”basic_slideshow”]

ಆಡಿಯೋ ವಿಡಿಯೋ

ಮಧ್ಯಮ ಅಥವಾ ಕಡಿಮೆ ಬೆಲೆಯ ಸ್ಯಾಮ್‌ಸಂಗ್ ಫೋನ್‌ಗಳಂತೆ ಇದರ ಆಡಿಯೋ ಇಂಜಿನ್ ಕೂಡ ತಕ್ಕ ಮಟ್ಟಿಗೆ ಇದೆ ಎನ್ನಬಹುದು. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಸುಮಾರಾದ ಸಂಗೀತವನ್ನು ಆಲಿಸುವ ಅನುಭವ ಆಗುತ್ತದೆ. ಆಡಿಯೋ ವಿಭಾಗಕ್ಕೆ ಉತ್ತಮ ಮಾರ್ಕು ನೀಡಲು ಮನಸ್ಸು ಬರುತ್ತಿಲ್ಲ. ಪರದೆಯ ಗುಣಮಟ್ಟ ಮೇಲ್ದರ್ಜೆಯದು ಎನ್ನುವಂತಿಲ್ಲ. ಹೈಡೆಫಿನಿಶನ್ ವಿಡಿಯೋ ಪ್ಲೇ ಏನೋ ಆಗುತ್ತದೆ. ಆದರೆ ತುಂಬ ತೃಪ್ತಿ ನಿಡುವುದಿಲ್ಲ. 4k ವಿಡಿಯೋ ಪ್ಲೇ ಕೂಡ ಅಷ್ಟೆ. ಅತ್ಯುತ್ತಮ ವಿಡಿಯೋ ವೀಕ್ಷಣೆ ನಮಗೆ ಅತೀ ಮುಖ್ಯವಾಗಿದ್ದರೆ ಇದು ನಿಮಗೆ ಪೂರ್ತಿ ತೃಪ್ತಿ ನೋಡಲಾರದು. ಎಫ್‌ಎಂ ರೇಡಿಯೋ ನೀಡಿದ್ದಾರೆ. ಆದರೆ ಅದರ ಗ್ರಾಹಕ ಶಕ್ತಿ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಾಗಿತ್ತು.

ಇತರೆ

ಇದರ ಬೆರಳಚ್ಚು ಸ್ಕ್ಯಾನರ್ ಪಕ್ಕದಲ್ಲಿರುವ ಆನ್/ಆಪ್ ಸ್ವಿಚ್‌ನಲ್ಲೇ ಇದೆ. ಆದರೆ ಅದರ ಕೆಲಸ ತುಂಬ ತೃಪ್ತಿದಾಯಕವಾಗಿಲ್ಲ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಮುಖಚಹರೆ ಪತ್ತೆಹಚ್ಚುವಿಕೆ ತೃಪ್ತಿದಾಯಕವಾಗಿ ಕೆಲಸ ಮಾಡುತ್ತದೆ. ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.

ಶಕ್ತಿಶಾಲಿಯಾದ ಬ್ಯಾಟರಿ ಇದೆ. ಅದರ ಬಾಳಿಕೆ ಚೆನ್ನಾಗಿದೆ.

ತೀರ್ಪು

ಈ ಬೆಲೆಗೆ ಇದು ಒಂದು ಮಟ್ಟಿಗೆ ಉತ್ತಮ ಫೋನ್ ಎನ್ನಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

The post ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 first appeared on Vishva Kannada.

ವಿವೊ ವಿ 20
ಸ್ವಂತೀ ಪ್ರಿಯರಿಗೆ ಮತ್ತೊಂದು ಫೋನ್

ಚೀನಾ ದೇಶದ ವಿವೊ ಕಂಪೆನಿಯ ಫೋನ್‌ಗಳು ಉತ್ತಮ ರಚನೆ, ವಿನ್ಯಾಸ ಮತ್ತು ಉತ್ತಮ ಕ್ಯಾಮೆರಗಳಿಗೆ ಹೆಸರುವಾಸಿಯಾಗಿವೆ. ಇವರು ಮಧ್ಯಮ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವಿವೋದವರ ಫೋನ್ ಕ್ಯಾಮೆರಗಳು ಚೆನ್ನಾಗಿವೆ. ನಿಮಗೆ ಉತ್ತಮ ಕ್ಯಾಮೆರ ಮಾತ್ರವೇ ಮುಖ್ಯವಾಗಿದ್ದಲ್ಲಿ ನೀವು ವಿವೊ ಫೋನ್ ಕೊಳ್ಳಬಹುದು. ಅದರಲ್ಲೂ ನೀವು ಸ್ವಂತೀ ಪ್ರಿಯರಾದರೆ ವಿವೋ ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಈ ಸ್ವಂತೀ ಕೇಂದ್ರಿತ ವಿವೋ ಫೋನ್‌ಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ ವಿವೊ ವಿ 20. ಈ ಸಲ ಅದರ ವಿಮರ್ಶೆ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 ಹೃದಯಗಳ ಪ್ರೋಸೆಸರ್ (Qualcomm Snapdragon 720 G)

ಮೆಮೊರಿ

8 + 128 ಗಿಗಾಬೈಟ್

8 + 256 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (ಪ್ರತ್ಯೇಕ, ಹೈಬ್ರಿಡ್ ಅಲ್ಲ)

ಪರದೆ

6.44 ಇಂಚು ಗಾತ್ರ, 2400 × 1080 ಪಿಕ್ಸೆಲ್ ರೆಸೊಲೂಶನ್, ಅಮೋಲೆಡ್

ಕ್ಯಾಮೆರ

64 + 8 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

44  ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

4000 mAh

ಗಾತ್ರ

161.3 x 74.2 x 7.38 ಮಿ.ಮೀ.

ತೂಕ

172 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ (ಪರದೆಯಲ್ಲೇ)

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇದೆ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 11 + ಫನ್‌ಟಚ್ ಓಎಸ್ 11

ಬೆಲೆ

₹ 24,990 (8+128), 27,990 (8+256)

ರಚನೆ ಮತ್ತು ವಿನ್ಯಾಸ

ಇತರೆ ವೊವೋ ಫೋನ್‌ಗಳಂತೆ ಇದರ ರಚನೆ ಮತ್ತು ವಿನ್ಯಾಸವೂ ಉತ್ತಮವಾಗಿದೆ. ಮೂರು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಹೊಳೆಯುವ ಅಥವಾ ತುಂಬ ನಯವಾದ ಮಾದರಿಯಲ್ಲ. ಹಿಂಭಾಗ ಸಪಾಟಾಗಿದೆ. ಈ ವಿಷಯದಲ್ಲಿ ಇದು ವಿವೊ 17, 19 ಗಳಿಗಿಂತ ಭಿನ್ನ. ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಆನ್/ಆಫ್ ಬಟನ್ ಸ್ವಲ್ಪ ವಿಶಿಷ್ಟವಾಗಿದೆ. ಅದರ ಮೇಲ್ಮೈ ದೊರಗಾಗಿದೆ. ಇದು ಕತ್ತಲಲ್ಲಿ ಫೋನ್ ಅಥವ ಪರದೆ ಆನ್ ಮಾಡಬೇಕಾದಾಗ ಯಾವ ಬಟನ್ ಎಂದು ತಿಳಿಯಲು ಉಪಕಾರಿಯಾಗುತ್ತದೆ. ಆದರೆ ಪ್ಲಾಸ್ಟಿಕ್ ಕವಚ ಹಾಕಿದಾಗ ಇದು ಅನುಭವಕ್ಕೆ ಬರುವುದಿಲ್ಲ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಇದೆ. ಮೇಲ್ಭಾಗದಲ್ಲಿ ಮಧ್ಯದಲ್ಲಿ ಸ್ವಂತೀ (selfie) ಕ್ಯಾಮೆರ ಇದೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಕಾರ್ಡ್ ಮತ್ತು ಒಂದು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಬಳಸಬಹುದು. ಇದು ಅಂಚುರಹಿತ (bezelless) ಫೋನ್. ಹಿಂಭಾಗದಲ್ಲಿ, ಸ್ವಲ್ಪ ಎಡ ಮೇಲ್ಬಾಗದಲ್ಲಿ ಮೂರು ಕ್ಯಾಮೆರ ಮತ್ತು ಫ್ಲಾಶ್ ಇವೆ. ಈ ಕ್ಯಾಮೆರ ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಉಬ್ಬಿದೆ (camera bump). ಪ್ಲಾಸ್ಟಿಕ್ ಕವಚ ಹಾಕಿಕೊಳ್ಳದಿದ್ದರೆ ಕ್ಯಾಮೆರಕ್ಕೆ ಏಟಾಗುವ ಸಾಧ್ಯತೆ ಇದೆ. ಎಂದಿನಂತೆ ಎಲ್ಲ ವಿವೊ ಫೋನ್‌ಗಳಂತೆ ರಚನೆ ಮತ್ತು ವಿನ್ಯಾಸ ಉತ್ತಮವಾಗಿವೆ.

[ngg src=”galleries” ids=”23″ display=”basic_thumbnail” thumbnail_crop=”0″]

ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ಇದರ ಸಂವೇದನೆ ಚೆನ್ನಾಗಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿದೆ. ಅದೂ ಚೆನ್ನಾಗಿಯೇ ಕೆಲಸ ಮಾಡುತ್ತಿದೆ.

ಕೆಲಸದ ವೇಗ

ಕೆಲಸದ ವೇಗ ನೀಡುವ ಬೆಲೆಗೆ ಹೋಲಿಸಿದರೆ ತೃಪ್ತಿದಾಯಕವಾಗಿದೆ. ಇದೇನೂ ಅತಿ ವೇಗದ ಫೋನ್ ಅಲ್ಲ. ಆದರೆ ನೀಡುವ ಬೆಲೆಗೆ ಹೋಲಿಸಿದರೆ ಪರವಾಗಿಲ್ಲ ಎನ್ನಬಹುದು. ಮಧ್ಯಮ ವೇಗವನ್ನು ಬಯಸುವ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಅತಿ ವೇಗವನ್ನು ಬಯಸುವ ಆಟಗಳಿಗೆ ಇದು ಅಷ್ಟು ಸೂಕ್ತವಲ್ಲ. ನಿಮಗೆ ಅತಿ ವೇಗದ ಆಟಗಳನ್ನು ಆಡಬೇಕಾಗಿದ್ದಲ್ಲಿ ಈ ಫೋನ್ ನಿಮಗಲ್ಲ.

ಆಡಿಯೋ ವಿಡಿಯೋ

ಆಡಿಯೋ ಇಂಜಿನ್ ಚೆನ್ನಾಗಿದೆ. ಇದರಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇದೆ. ಪೆಟ್ಟಿಗೆಯಲ್ಲಿ ಒಂದು ಇಯರ್‌ಫೋನ್ ನೀಡಿದ್ದಾರೆ. ಆದರೆ ಈ ಇಯರ್‌ಫೋನ್‌ನ ಧ್ವನಿಯ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ಈ ಒಂದು ವಿಷಯದಲ್ಲಿ ವಿವೋದವರು ಸ್ವಲ್ಪ ಹಿಂದೆ ಇದ್ದಾರೆ. ಇದು ಇಯರ್‌ಫೋನ್, ಇಯರ್‌ಬಡ್ ಅಲ್ಲ. ಅಂದರೆ ಬೇರೆ ಬೇರೆ ಗಾತ್ರದ ಕುಶನ್‌ಗಳನ್ನು ಜೋಡಿಸುವ ಸವಲತ್ತು ಇಲ್ಲ.ಕಿವಿಯಲ್ಲಿ ಸರಿಯಾಗಿ ಕುಳಿತುಕೊಳ್ಳದಿದ್ದರೆ ಉತ್ತಮ ಧ್ವನಿಯ ಅನುಭವ ಆಗುವುದಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ ವಿಡಿಯೋ ವೀಕ್ಷಣೆ ಅನುಭವ ಉತ್ತಮವಾಗಿದೆ. ಸಿನಿಮಾ ಅಥವಾ ಟಿವಿ ವೀಕ್ಷಿಸಲು ಇದು ಉತ್ತಮ ಫೋನ್. ಈ ವಾಕ್ಯಗಳನ್ನು ಬೇರೆ ವಿವೊ ಫೋನ್‌ಗಳ ಬಗ್ಗೆಯೂ ಬರೆದಿದ್ದೆ. ಅವು ಇಲ್ಲೂ ಮುಂದುವರೆದಿವೆ.

ಕ್ಯಾಮೆರ

ಇತರೆ ವಿವೋ ವಿ ಶ್ರೇಣಿಯ ಫೋನ್‌ಗಳಂತೆ ಈ ಫೋನಿನ ಹೆಗ್ಗಳಿಕೆ ಕೂಡ ಇರುವುದು ಇದರ ಕ್ಯಾಮೆರದಲ್ಲಿ. ಇದರಲ್ಲಿ 3 ಪ್ರಾಥಮಿಕ ಕ್ಯಾಮೆರಗಳಿವೆ. ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಈ ಕೃತಕ ಬುದ್ಧಿಮತ್ತೆ ಹಲವು ಸಂದರ್ಭಗಳಲ್ಲಿ ಸ್ವಲ್ಪ ಅಧಿಕಪ್ರಸಂಗ ಕುಡ ಮಾಡುತ್ತದೆ. ನಾನು ಸಾಮಾನ್ಯವಾಗಿ ಅದನ್ನು ಆಫ್ ಮಾಡಿಟ್ಟುರುತ್ತೇನೆ! ಸ್ವಂತೀಗೆ  44 ಮೆಗಾಪಿಕ್ಸೆಲ್‌ಗಳ ಕ್ಯಾಮೆರ ಇದೆ. ವಿವೋದವರ ಇತರೆ ಫೋನ್‌ಗಳಲ್ಲಿರುವಂತೆ ಇದರಲ್ಲೂ ಕ್ಯಾಮೆರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳು ಇವೆ. ಅತಿ ಹತ್ತಿರದ ವಸ್ತುಗಳ ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಈ ಆಯ್ಕೆಯನ್ನು ಬಳಸಿ ಹೂವಿನ ಪರಾಗರೇಣುವಿನ ಫೋಟೋ, ಚಿಕ್ಕ ಜೇಡ, ಇರುವೆ, ಇತ್ಯಾದಿಗಳ ಫೋಟೋ ತೆಗೆಯಬಹುದು. ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ತೆಗೆಯುತ್ತದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ನಾನು ಪ್ರಯತ್ನಿಸಿದಾಗ ಒಂದು ಮಟ್ಟಿಗೆ ತೃಪ್ತಿದಾಯಕವಾದ ಫೋಟೋಗಳು ಮೂಡಿಬಂದವು. ಇದು 4k ವಿಡಿಯೋಗಳನ್ನು ಮಾಡಬಲ್ಲುದು. ಪ್ರಾಥಮಿಕ ಕ್ಯಾಮೆರದಲ್ಲಿ image stabilisation ಇದೆ. ಅಂದರೆ ವಿಡಿಯೋ ಶೂಟಿಂಗ್ ಮಾಡುವಾಗ ಫೋನ್ ಸ್ವಲ್ಪ ಅಲುಗಾಡಿದರೆ ವಿಡಿಯೋದಲ್ಲಿ ಅದು ಮೂಡಿಬರುವುದಿಲ್ಲ. ಆದರೆ ಈ ಸವಲತ್ತು 4k ವಿಡಿಯೋ ಶೂಟಿಂಗ್‌ನಲ್ಲಿ ಇಲ್ಲ. ಈ ಫೋನಿನ ಸ್ವಂತೀ ಕ್ಯಾಮೆರದಲ್ಲೂ 4k ವಿಡಿಯೋ ಮಾಡಬಹುದು. ಸ್ವಂತೀಗೆ ಈ ಸವಲತ್ತು ನೀಡಿರುವುದು ಈ ಫೋನಿನ ಪ್ರಮುಖ ಹೆಗ್ಗಳಿಕೆ. ಎಲ್ಲ ವಿವೊ ಫೋನ್ ಕ್ಯಾಮೆರಗಳಂತೆ ಇದರಲ್ಲೂ ನಿಮ್ ಮುಖವನ್ನು ಸುಂದರ, ಅತಿ ಸುಂದರ ಮಾಡುವ ಆಯ್ಕೆಗಳಿವೆ. ನಾನಂತೂ ಅದನ್ನು ಆಫ್ ಮಾಡಿಯೇ ಫೋಟೋ ತೆಗೆಯುವುದು. ಯಾಕೆಂದರೆ ಅದು ಅಷ್ಟು ಸುಂದರ ಮಾಡುತ್ತದೆ! ಒಟ್ಟಿನಲ್ಲಿ ಸ್ವಂತೀ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಕೊಳ್ಳವ ಆಲೋಚನೆ ಮಾಡಬಹುದು.

[ngg src=”galleries” ids=”24″ display=”basic_thumbnail” thumbnail_crop=”0″]

ಬ್ಯಾಟರಿ

ಇದರಲ್ಲಿರುವುದು 4000mAh ಶಕ್ತಿಯ ಬ್ಯಾಟರಿ. ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ನಾನು ಪ್ರಯತ್ನಿಸಿ ನೋಡಿದಾಗ 0% ಯಿಂದ 100% ಚಾರ್ಜ್ ಆಗಲು ಸುಮಾರು ಎರಡೂಮುಕ್ಕಾಲು ಗಂಟೆ ಹಿಡಿಯಿತು. ಒಂದು 4k ವಿಡಿಯೋವನ್ನು ನಿರಂತರ ಪುನರಾವರ್ತನೆಯಲ್ಲಿ ಪ್ಲೇ (play in loop) ಮಾಡಿದಾಗ ಸುಮಾರು 10 ಗಂಟೆಯಷ್ಟು ಕಾಲ ಬ್ಯಾಟರಿ ಬಾಳಿಕೆ ಬಂತು.

ತೀರ್ಪು

ಉತ್ತಮ ಸ್ವಂತೀ ಫೋಟೋ ಮತ್ತು ವಿಡಿಯೋ ನಿಮ್ಮ ಪ್ರಥಮ ಆದ್ಯತೆಯಾದರೆ ನೀವು ಇದನ್ನು ಕೊಳ್ಳುವ ಆಲೋಚನೆ ಮಾಡಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

The post ವಿವೊ ವಿ 20 first appeared on Vishva Kannada.

ವಿವೊ ಎಕ್ಸ್ 50
ಉತ್ತಮ ಕ್ಯಾಮೆರ ಫೋನ್

ಚೀನಾ ದೇಶದ ವಿವೊ ಕಂಪೆನಿ ಭಾರತದಲ್ಲಿ ಹಲವು ಉತ್ತಮ ಕ್ಯಾಮೆರ ಫೋನ್‌ಗಳನ್ನು ಒಂದಾದ ಮೇಲೆ ಒಂದರಂತೆ ಸತತವಾಗಿ ಬಿಡುಗಡೆ ಮಾಡುತ್ತಾ ಬಂದಿದೆ. ವಿವೊ ಕಂಪೆನಿಯ ಫೋನ್‌ಗಳು ಉತ್ತಮ ರಚನೆ, ವಿನ್ಯಾಸ ಮತ್ತು ಉತ್ತಮ ಕ್ಯಾಮೆರಗಳಿಗೆ ಹೆಸರುವಾಸಿಯಾಗಿವೆ. ಆದರೆ ಬಹುತೇಕ ಫೋನ್‌ಗಳು ಸ್ವಲ್ಪ ಮಟ್ಟಿಗೆ ಜಾಸ್ತಿ ಬೆಲೆಯವು ಎನ್ನಬಹುದು. ಅಂದರೆ ಅವರು ಉತ್ತಮ ಕ್ಯಾಮೆರವನ್ನು ನೀಡಲು ತುಂಬ ಪ್ರಯತ್ನ ಮಾಡುತ್ತಿದ್ದಾರೆ. ಆ ಸಮಯದಲ್ಲಿ ಇತರೆ ಕೇತ್ರಗಳ ಕಡೆ, ಮುಖ್ಯವಾಗಿ ಕೆಲಸದ ವೇಗದ ಕಡೆ ಲಕ್ಷ್ಯ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು. ಅಂದರೆ ನಿಮಗೆ ಉತ್ತಮ ಕ್ಯಾಮೆರ ಮಾತ್ರವೇ ಮುಖ್ಯವಾಗಿದ್ದಲ್ಲಿ ನೀವು ವಿವೊ ಫೋನ್ ಕೊಳ್ಳಬಹುದು.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 ಹೃದಯಗಳ ಪ್ರೋಸೆಸರ್ (Qualcomm Snapdragon 730)

ಮೆಮೊರಿ

8 + 128 ಗಿಗಾಬೈಟ್

8 + 256 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇಲ್ಲ

ಪರದೆ

6.56 ಇಂಚು ಗಾತ್ರ, 2376 × 1080 ಪಿಕ್ಸೆಲ್ ರೆಸೊಲೂಶನ್, ಅಮೋಲೆಡ್

ಕ್ಯಾಮರ

48 + 13 + 8 + 5 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

32  ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

4200 mAh

ಗಾತ್ರ

159.5 x 75.39 x 7.55 ಮಿ.ಮೀ.

ತೂಕ

173 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ (ಪರದೆಯಲ್ಲೇ)

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇಲ್ಲ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇದೆ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 10 + ಫನ್‌ಟಚ್ ಓಎಸ್ 10.5

ಬೆಲೆ

₹ 34,990 (8+128), 37,990 (8+256)

ರಚನೆ ಮತ್ತು ವಿನ್ಯಾಸ

ಈ ಫೋನಿನ ರಚನೆ ಮತ್ತು ವಿನ್ಯಾಸ ಇತರೆ ವಿವೊ ಫೋನ್‌ಗಳಿಗಿಂತ ಸ್ವಲ್ಪವೇ ಭಿನ್ನ ಎನ್ನಬಹುದು. ಅವುಗಳ ಬಗ್ಗೆ ಬರೆದ ಬಹುತೇಕ ಅಂಶಗಳು ಇದಕ್ಕೂ ಹೊಂದಿಕೆಯಾಗುತ್ತವೆ. ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಥಳ ಥಳ ಹೊಳೆಯುತ್ತವೆ. ಹಿಂಭಾಗ ಸಪಾಟಾಗಿದೆ. ಈ ವಿಷಯದಲ್ಲಿ ಇದು ವಿವೊ 17, 19 ಗಳಿಗಿಂತ ಭಿನ್ನ. ತುಂಬ ನಯವಾಗಿರುವ ಕಾರಣ ಕೈಯಿಂದ ಜಾರಿ ಬೀಳುವ ಭಯವಿದೆ. ಆದನ್ನು ತಪ್ಪಿಸಲು ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಇದೆ. ಮೇಲ್ಭಾಗದಲ್ಲಿ ಎಡಮೂಲೆಯಲ್ಲಿ ಸ್ವಂತೀ (selfie) ಕ್ಯಾಮೆರ ಇದೆ. ಕೆಳಭಾಗದಲ್ಲಿ, ಯುಎಸ್‌ಬಿ-ಸಿ ಕಿಂಡಿಯ ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಕಾರ್ಡ್ ಬಳಸಬಹುದು. ಇದು ಅಂಚುರಹಿತ (bezelless) ಫೋನ್. ಹಿಂಭಾಗದಲ್ಲಿ, ಸ್ವಲ್ಪ ಎಡ ಮೇಲ್ಬಾಗದಲ್ಲಿ ನಾಲ್ಕು ಕ್ಯಾಮರ ಮತ್ತು ಫ್ಲಾಶ್ ಇವೆ. ಈ ಕ್ಯಾಮೆರ ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಉಬ್ಬಿದೆ (camera bump). ಪ್ಲಾಸ್ಟಿಕ್ ಕವಚ ಹಾಕಿಕೊಳ್ಳದಿದ್ದರೆ ಕ್ಯಾಮೆರಕ್ಕೆ ಏಟಾಗುವ ಸಾಧ್ಯತೆ ಇದೆ. ಎಂದಿನಂತೆ ಎಲ್ಲ ವಿವೊ ಫೋನ್‌ಗಳಂತೆ ರಚನೆ ಮತ್ತು ವಿನ್ಯಾಸ ಉತ್ತಮವಾಗಿವೆ..

[ngg src=”galleries” ids=”17″ display=”basic_thumbnail” thumbnail_crop=”0″]ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ಇದರ ಸಂವೇದನೆ ಚೆನ್ನಾಗಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿದೆ. ಅದೂ ಚೆನ್ನಾಗಿಯೇ ಕೆಲಸ ಮಾಡುತ್ತಿದೆ.

ಕೆಲಸದ ವೇಗ

ಕೆಲಸದ ವೇಗ ನೀಡುವ ಬೆಲೆಗೆ ಹೋಲಿಸಿದರೆ ತೃಪ್ತಿದಾಯಕವಾಗಿಲ್ಲ. ಅಂದರೆ ಇದು ವೇಗದ ಫೋನ್ ಅಲ್ಲ. ಕೆಲವು ನಮೂನೆಯ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಆದರೆ ಮೂರು ಆಯಾಮಗಳ ಆಟ ಆಡುವ ಅನುಭವ ಮಾತ್ರ ತೃಪ್ತಿದಾಯಕವಾಗಿಲ್ಲ. ನಿಮಗೆ ಅತಿ ವೇಗದ ಆಟಗಳನ್ನು ಆಡಬೇಕಾಗಿದ್ದಲ್ಲಿ ಈ ಫೋನ್ ನಿಮಗಲ್ಲ. ಇದರ ಬೆಲೆಗೆ ಹೋಲಿಸಿದರೆ ಇದರೆ ಕೆಲಸದ ವೇಗ ಕಂಡಿತವಾಗಿಯೂ ತೃಪ್ತಿದಾಯಕವಾಗಿಲ್ಲ.

ಆಡಿಯೋ ವಿಡಿಯೋ

ಆಡಿಯೋ ಇಂಜಿನ್ ಚೆನ್ನಾಗಿದೆ. ಇದರಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇಲ್ಲ. ಯುಎಸ್‌ಬಿ-ಸಿ ಯಿಂದ 3.5 ಮಿ.ಮೀ. ಇಯರ್‌ಫೋನ್ ಕಿಂಡಿಗೆ ಅಡಾಪ್ಟರ್ ಇದೆ. ಅದನ್ನು ಬಳಸಿ ಮಾಮೂಲಿ 3.5 ಮಿ.ಮೀ ಪ್ಲಗ್ ಇರುವ ಇಯರ್‌ಫೋನ್ ಬಳಸಬಹುದು. ಅವರೂ ಪೆಟ್ಟಿಗೆಯಲ್ಲಿ ಅಂತಹುದೇ ಒಂದು ಇಯರ್‌ಫೋನ್ ನೀಡಿದ್ದಾರೆ. ಆದರೆ ಈ ಇಯರ್‌ಫೋನ್‌ನ ಧ್ವನಿಯ ಗುಣಮಟ್ಟ ತೃಪ್ತಿದಾಯಕವಾಗಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ ವಿಡಿಯೋ ವೀಕ್ಷಣೆ ಅನುಭವ ಉತ್ತಮವಾಗಿದೆ. ಸಿನಿಮಾ ಅಥವಾ ಟಿವಿ ವೀಕ್ಷಿಸಲು ಇದು ಉತ್ತಮ ಫೋನ್.

ಕ್ಯಾಮೆರ

ಆರಂಭದಲ್ಲೇ ಹೇಳಿದಂತೆ ಈ ಫೋನಿನ ಹೆಗ್ಗಳಿಕೆ ಇರುವುದು ಇದರ ಕ್ಯಾಮೆರದಲ್ಲಿ. ಇದರಲ್ಲಿ 4 ಪ್ರಾಥಮಿಕ ಕ್ಯಾಮೆರಗಳಿವೆ. ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ  32 ಮೆಗಾಪಿಕ್ಸೆಲ್‌ಗಳ ಕ್ಯಾಮೆರ ಇದೆ. ಈ ಫೋನಿನ ಕ್ಯಾಮೆರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳೇನೋ ಇವೆ. ಆದರೆ ಬೇರೆ ಕೆಲವು ಕಿರುತಂತ್ರಾಂಶಗಳನ್ನು (ಆಪ್) ಹಾಕಿಕೊಂಡರೆ ಇನ್ನೂ ಉತ್ತಮ ಫೋಟೋ ತೆಗೆಯಬಹುದು. 48 ಮೆಗಾಪಿಕ್ಸೆಲ್‌ನ ಕ್ಯಾಮೆರ ಬಹುತೇಕ ಫೋಟೋಗಳಿಗೆ. ತುಂಬ ಅಲದ ದೃಶ್ಯಗಳಿಗೆ, ವ್ಯಕ್ತಿ ಚಿತ್ರಗಳಿಗೆ, ಅತಿ ಹತ್ತಿರದ ವಸ್ತುಗಳಿಗೆ -ಹೀಗೆ ಬೇರೆ ಬೇರೆ ಸಂದರ್ಭಗಳಿಗ ಬೇರೆ ಬೆರೆ ಕ್ಯಾಮೆರಗಳಿವೆ. ಗುಣವೈಶಿಷ್ಟ್ಯಗಳ ಕೋಷ್ಟಕದಲ್ಲಿ ಅವುಗಳನ್ನು ಪಟ್ಟಿ ಮಾಡಲಾಗಿದೆ. ಅತಿ ಹತ್ತಿರದ ವಸ್ತುಗಳ ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಈ ಆಯ್ಕೆಯನ್ನು ಬಳಸಿ ಹೂವಿನ ಪರಾಗರೇಣುವಿನ ಫೋಟೋ, ಚಿಕ್ಕ ಜೇಡ, ಇರುವೆ, ಇತ್ಯಾದಿಗಳ ಫೋಟೋ ತೆಗೆಯಬಹುದು. ಹೀಗೆ ತೆಗೆದ ಫೋಟೋ ಫೋನಿನ ಪರದೆಯಲ್ಲೇನೋ ಚೆನ್ನಾಗಿ ಕಾಣುತ್ತದೆ. ಆದರೆ ಅದರ ರೆಸೊಲೂಶನ್ ಸಾಲದು. ಅಂದರೆ ಮುದ್ರಣಕ್ಕೆ ಅದರ ಗುಣಮಟ್ಟಸ ಲದು. ಅಲ್ಟ್ರಾ ವೈಡ್ ಆಂಗಲ್ ಎಂಬ ಆಯ್ಕೆಯೂ ಇದೆ. ಜೊತೆಗೆ ಮ್ಯಾನ್ಯುವಲ್ ಮೋಡ್ ಕೂಡ ಇದೆ. ಈ ಫೋನ್‌ನ ಕ್ಯಾಮೆರ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ತೆಗೆಯುತ್ತದೆ. ವಿವೊದವರು ಈ ಫೋನನ್ನು ಕೂಡ ಅತಿ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ತೆಗೆಯುವ ಫೋನ್ ಎಂದೇ ಮಾರಾಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕ್ಯಾಮೆರ ಮತ್ತು ಫೋಟೋಗ್ರಫಿ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಕೊಳ್ಳವ ಆಲೋಚನೆ ಮಾಡಬಹುದು.

[ngg src=”galleries” ids=”18″ display=”basic_thumbnail” thumbnail_crop=”0″]

ಬ್ಯಾಟರಿ

ಇದರಲ್ಲಿರುವುದು 4200mAh ಶಕ್ತಿಯ ಬ್ಯಾಟರಿ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100  ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.

ತೀರ್ಪು

ಉತ್ತಮ ಛಾಯಾಗ್ರಹಣ ನಿಮ್ಮ ಪ್ರಥಮ ಆದ್ಯತೆಯಾದರೆ ನೀವು ಇದನ್ನು ಕೊಳ್ಳುವ ಆಲೋಚನೆ ಮಾಡಬಹುದು. ಆದರೂ ಬೆಲೆ ಸ್ವಲ್ಪ ಜಾಸ್ತಿ ಆಯಿತು ಎಂದೇ ಹೇಳಬಹುದು.

ಈ ಫೋನನ್ನು ಅಮೆಝಾನ್‌ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

-ಡಾ. ಯು.ಬಿ. ಪವನಜ

gadgetloka @ gmail . com

The post ವಿವೊ ಎಕ್ಸ್ 50 first appeared on Vishva Kannada.

ಥೋಮ್ಸನ್ ಸ್ಮಾರ್ಟ್‌ ಟಿವಿ 55 ಓಎಟಿಎಚ್‌ಪಿಆರ್00101
ಉತ್ತಮ ಆಂಡ್ರೋಯಿಡ್ ಟಿವಿ

ಮೂಲತಃ ಫ್ರಾನ್ಸ್ ದೇಶದ ಥೋಮ್ಸನ್ ಟಿವಿ ಇತ್ತೀಚೆಗೆ ಭಾರತದಲ್ಲಿ ತಳವೂರುತ್ತಿದೆ. ಅದು ಜನವರಿ 2018ರಲ್ಲಿ ಭಾರತದಲ್ಲಿ ಟಿ.ವಿ. ಮಾರಾಟ ಪ್ರಾರಂಭಿಸಿತ್ತು. ವಿದೇಶೀ ಕಂಪೆನಿಯಾದರೂ ಭಾರತದಲ್ಲೇ ತನ್ನ ಟಿ.ವಿ.ಗಳನ್ನು ತಯಾರಿಸುತ್ತಿದೆ. ಹಲವು ಸ್ಮಾರ್ಟ್ ಟಿ.ವಿ. ಮತ್ತು ಮಾಮೂಲಿ ಫ್ಲಾಟ್ ಟಿ.ವಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಥೋಮ್ಸನ್ ಕಂಪೆನಿ ಅಂತರಜಾಲದ ಮೂಲಕ ಮಾರಾಟವಾಗುತ್ತಿರುವ ಬ್ರ್ಯಾಂಡ್‌ಗಳಲ್ಲಿ ಗಣನೀಯವಾದ ಸ್ಥಾನವನ್ನು ಪಡೆದಿದೆ. ಥೋಮ್ಸನ್ ಸ್ಮಾರ್ಟ್‌ಟಿವಿ 55 ಓಎಟಿಎಚ್‌ಪಿಆರ್00101 (Thomson 55 OATHPR 00101) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು

ಮಾದರಿ

ಎಲ್‌ಇಡಿ ಸ್ಮಾರ್ಟ್‌ಟಿವಿ

ಪರದೆ ಗಾತ್ರ

55 ಇಂಚು

ಪರದೆ

3840 x 2160 ಪಿಕ್ಸೆಲ್ ರೆಸೊಲೂಶನ್‌ನ ಎಲ್‌ಇಡಿ

ಪ್ರೋಸೆಸರ್

ನಾಲ್ಕು ಹೃದಯಗಳ (CA53), Mali-450

ಮೆಮೊರಿ

1.75 + 8 ಗಿಗಾಬೈಟ್

ಸ್ಪೀಕರ್

15W x 2

ಕಿಂಡಿಗಳು (ports)

ಯುಎಸ್‌ಬಿ(2), ಎಚ್‌ಡಿಎಂಐ(3), AV(1), ಎತರ್‌ನೆಟ್(1), ಡಿಜಿಟಲ್ ಆಡಿಯೋ(1)

ಸಂಪರ್ಕ

ವೈಫೈ, ಎತರ್‌ನೆಟ್, ಬ್ಲೂಟೂತ್

ವಿಡಿಯೋ ಫೈಲ್ ಬೆಂಬಲ

AVI, MKV, MOV, MPEG-1, VOB, DAT

ಗಾತ್ರ

1226.7 x 716.4 x 91.3 ಮಿ.ಮೀ.

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 9.0

ಬೆಲೆ

₹ 32,999

ಥೋಮ್ಸನ್‌ನವರು ಒಂದು ವರ್ಷದ ಹಿಂದೆ 49 ಇಂಚಿನ ಟಿವಿಯನ್ನು 35 ಸಾವಿರ ರೂ.ಗಳಿಗೆ ಮಾರುತ್ತಿದ್ದರು. ಈ ಟಿವಿ ಅದಕ್ಕಿಂತ ಎರಡು ಸಾವಿರ ರೂ. ಕಡಿಮೆ ಬೆಲೆಗೆ ದೊರೆಯುತ್ತಿದೆ. ಇದು 55 ಇಂಚಿನ ಟಿವಿ. ಅಂದರೆ ನಿಮಗೆ ಕಡಿಮೆ ಬೆಲೆಗೆ ದೊಡ್ಡ ಟಿವಿ ದೊರೆಯುತ್ತಿದೆ. ಹಾಗಾದರೆ ಇದು ನೀಡುವ ಬೆಲೆಗೆ ಉತ್ತಮ ಉತ್ಪನ್ನವೇ ಎಂದು ವಿಮರ್ಶಿಸೋಣ.

ರಚನೆ ಮತ್ತು ವಿನ್ಯಾಸ

ಗ್ಯಾಜೆಟ್‌ಲೋಕ ಅಂಕಣದಲ್ಲಿ ಹಿಂದೆ ಥೋಮ್ಸನ್ ಟಿ.ವಿ.ಗಳ ವಿಮರ್ಶೆ ಬರೆದಿದ್ದೆ. ಅಲ್ಲಿ ಬರೆದ ಹಲವು ವಾಕ್ಯಗಳು ಇಲ್ಲಿಯೂ ಪ್ರಸ್ತುತ. ಆದುದರಿಂದ ಅವುಗಳನ್ನು ಹಾಗೆಯೇ ಬಳಸುತ್ತಿದ್ದೇನೆ. ಈ ಟಿವಿಯ ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ಇದರಲ್ಲಿ ಅದ್ಭುತ ಎಂದು ಹೇಳುವಂತಹದ್ದೇನೂ ಇಲ್ಲ. ಪರದೆಗಿಂತ ತುಂಬ ಹೆಚ್ಚಿನ ದೇಹ ಇದಕ್ಕಿಲ್ಲ. ದಪ್ಪವೂ ಕಡಿಮೆ ಇದೆ. ಹಿಂದುಗಡೆ ಸ್ವಲ್ಪ ಕೆಳಗಡೆ ಪ್ರಮುಖ ಇಲೆಕ್ಟ್ರಾನಿಕ್ ಭಾಗಗಳು ಇರುವ ಅಂಗ ಇದೆ. ಅದು ಸ್ವಲ್ಪ ದಪ್ಪ ಇದೆ. ಇದರೊಳಗಡೆ ಸ್ಪೀಕರುಗಳಿವೆ ಹಾಗೂ ಇದರ ಒಂದು ಪಕ್ಕದಲ್ಲಿ ಕಿಂಡಿಗಳಿವೆ. ಈ ಟಿವಿಯನ್ನು ಗೋಡೆಗೆ ನೇತುಹಾಕಬಹುದು ಅಥವಾ ಇದರ ಸ್ಟ್ಯಾಂಡ್ ಮೇಲೆ ಇಡಬಹುದು. ಮೇಜಿನ ಅಥವಾ ಟಿ.ವಿ. ಸ್ಟ್ಯಾಂಡಿನ ಮೇಲೆ ಇಡಲು ಬೇಕಾದ ಕಾಲುಗಳನ್ನು ಜೋಡಿಸಿ ಇಟ್ಟರೆ ಸುಂದರವಾಗಿ ಕಾಣುತ್ತದೆ. ಸ್ಟ್ಯಾಂಡ್ ನೀಡಿದ್ದಾರೆ. ಆದರೆ ಅದು ಸ್ವಲ್ಪ ನಾಜೂಕಾಗಿದೆ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಇದನ್ನು ಗೋಡೆಗೆ ನೇತುಹಾಕುವುದೇ ಉತ್ತಮ. ಮನೆಯಲ್ಲಿ ಇದು ನೋಡಲು ಸುಂದರವಾಗಿ ಕಾಣಿಸುತ್ತದೆ.

ಹಿಂದುಗಡೆ ಕೆಳಭಾಗದಲ್ಲಿರುವ ದಪ್ಪದ ಭಾಗದಲ್ಲಿ ಪವರ್ ಕೇಬಲ್, ಯುಎಸ್‌ಬಿ, ಎಚ್‌ಡಿಎಂಐ, ಆಡಿಯೋ/ವಿಡಿಯೋ ಇನ್‌ಪುಟ್, ಡಿಜಿಟಲ್ ಆಡಿಯೋ, ಇಥರ್‌ನೆಟ್ ಪೋರ್ಟ್, ಇತ್ಯಾದಿ ಕಿಂಡಿಗಳು ಇವೆ. ಒಂದು ಪ್ರಮುಖ ಕೊರತೆ ಎಂದರೆ 3.5 ಮಿ.ಮೀ. ಹೆಡ್‌ಫೋನ್ ಕಿಂಡಿ ನೀಡಿಲ್ಲ ಎಂಬುದು. ಹೆಡ್‌ಪೋನ್ ಅನ್ನು ಬ್ಲೂಟೂತ್ ಮೂಲಕ ಮಾತ್ರವೇ ಬಳಸಬಹುದು.

[ngg src=”galleries” ids=”13″ display=”basic_thumbnail” thumbnail_crop=”0″]

ಆಂಡ್ರೋಯಿಡ್

ಇದರ ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 9.0. ಆಂಡ್ರೋಯಿಡ್‌ನ ಹಲವು ಆಪ್‌ಗಳು ಇದರಲ್ಲಿವೆ. ಆದರೂ ಕೆಲವು ಅತೀ ಅಗತ್ಯದ ಆಪ್‌ಗಳು ಇಲ್ಲ. ಗೂಗ್ಲ್ ಪ್ಲೇ ಸ್ಟೋರಿನಿಂದ ಕೆಲವು ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಹಾಕಿಕೊಳ್ಳಬಹುದು. ಇದು ಶುದ್ಧ ಆಂಡ್ರೋಯಿಡ್. ಕಿರುತಂತ್ರಾಂಶಗಳ (ಆಪ್) apk ಫೈಲ್‌ಗಳನ್ನು ಎಲ್ಲಿಂದಾದರೂ (ಉದಾ – apkpure.com) ತಂದು ಇದಕ್ಕೆ ಹಾಕಿಯೂ ಕೆಲಸ ಮಾಡಬಹುದು. ಈ ಟಿ.ವಿ.ಯ ದೂರನಿಯಂತ್ರಕದಲ್ಲಿ ಗೂಗ್ಲ್‌ಗೆ ಧ್ವನಿಯ ಮೂಲಕ ಆದೇಶ ನೀಡುವ ಸವಲತ್ತು ಇದೆ. ಇದು ನಿಜಕ್ಕೂ ಚೆನ್ನಾಗಿದೆ. ಇದರ ಮೆಮೊರಿ ಕಡಿಮೆಯಿರುವುದರಿಂದ ಇದು ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ. ಕೆಲವು ಸಲ ನಿಧಾನವಾಗಿ ಸ್ಪಂದಿಸುವುದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ.

ಪರದೆ

ಪರದೆಯ ರೆಸೊಲೂಶನ್ ಮತ್ತು ಗುಣಮಟ್ಟ ಉತ್ತಮವಾಗಿದೆ. ಬಣ್ಣಗಳ ಪುರುತ್ಪತ್ತಿ ಉತ್ತಮವಾಗಿದೆ ಮತ್ತು ನೈಜವಾಗಿದೆ. ಹೈಡೆಫಿನಿಶನ್ ವಿಡಿಯೋಗಳನ್ನು ವೀಕ್ಷಿಸುವ ಅನುಭವವೂ ಚೆನ್ನಾಗಿದೆ. ಇದು ಕಂಪೆನಿಯವರು ಹೇಳಿಕೊಂಡ ಪ್ರಕಾರ 4k ರೆಸೊಲೂಶನ್‌ನ ಪರದೆಯುಳ್ಳ ಟಿವಿ. 4k ರೆಸೊಲೂಶನ್‌ನ ವಿಡಿಯೋಗಳನ್ನು ಯಾವುದೇ ಅಡೆತಡೆಯಿಲ್ಲದೆ ಪ್ಲೇ ಮಾಡಬಹುದು. ಯುಟ್ಯೂಬ್‌ನಲ್ಲಿರುವ 4k ವಿಡಿಯೋಗಳನ್ನು ಪ್ಲೇ ಮಾಡಿ ನೋಡಿದೆ. ಅವೆಲ್ಲ ಚೆನ್ನಾಗಿ ಪ್ಲೇ ಆದವು. ವೀಕ್ಷಣೆಯ ಅನುಭವ ಅತ್ಯುತ್ತಮವಾಗಿದೆ ಎನ್ನಬಹುದು. ಕಡಿಮೆ ರೆಸೊಲೂಶನ್‌ಗಳ ವಿಡಿಯೋಗಳನ್ನು ಹೆಚ್ಚಿನ ರೆಸೊಲೂಶನ್‌ನ ಪರದೆಯಲ್ಲಿ ವೀಕ್ಷಿಸಿದಾಗ ಕೆಲವು ಟಿವಿಗಳಲ್ಲಿ ಆ ಅನುಭವ ಅಷ್ಟೇನೂ ಚೆನ್ನಾಗಿರುವುದಿಲ್ಲ. ಇದನ್ನು upscaling ಎನ್ನುತ್ತಾರೆ ಹಾಗೂ ಈ ಟಿವಿಯಲ್ಲಿ ಅದು ಚೆನ್ನಾಗಿದೆ.

ಆಡಿಯೋ

ಇದರ ಸ್ಪೀಕರುಗಳು ಕೆಳಮುಖವಾಗಿವೆ. ಟಿ.ವಿ.ಯನ್ನು ಅದರ ಕಾಲುಗಳನ್ನು ಜೋಡಿಸಿ ಮರದ ಮೇಜಿನ ಮೇಲೆ ಇಟ್ಟರೆ ಸ್ಪೀಕರಿನ ಧ್ವನಿ ಮರದ ಮೇಲ್ಮೈಯಿಂದ ಪ್ರತಿಫಲಿಸಿ ಉತ್ತಮ ಅನುಭವ ನೀಡುತ್ತದೆ. ಟಿವಿಯನ್ನು ಗೋಡೆಗೆ ನೇತುಹಾಕಿದರೆ ಇದರಿಂದ ವಂಚಿತರಾಗುತ್ತೀರಿ. ಆಡಿಯೋ ಒಂದು ಮಟ್ಟಿಗೆ ತೃಪ್ತಿಯನ್ನು ನೀಡುತ್ತದೆ. ಟಿ.ವಿ.ಯ ಧ್ವನಿಯನ್ನು ನಿಮ್ಮಲ್ಲಿ ಉತ್ತಮ ಆಂಪ್ಲಿಫೈಯರ್ ಇದ್ದರೆ ಅದಕ್ಕೆ ಜೋಡಿಸಿ ಇನ್ನೂ ಉತ್ತಮ ಸಂಗೀತದ ಅನುಭವ ಪಡೆಯಬಹುದು. ಆದರೆ ಒಂದು ಪ್ರಮುಖ ಕೊರತೆ ಎಂದರೆ ಆಡಿಯೋ ಔಟ್‌ಪುಟ್ ಡಿಜಿಟಲ್ ಮಾತ್ರ ಅಗಿರುವುದು. ನಿಮ್ಮ ಮನೆಯ ಆಂಪ್ಲಿಫೈಯರ್‌ನಲ್ಲಿ ಡಿಜಿಟಲ್ ಆಡಿಯೋ ಇನ್‌ಪುಟ್ ಇದ್ದರೆ ಮಾತ್ರ ಅದಕ್ಕೆ ಜೋಡಿಸಬಹುದು. ಅಥವಾ ಬ್ಲೂಟೂತ್ ಇರಬೇಕು. ಹೆಡ್‌ಫೋನೂ ಅಷ್ಟೆ. ಬ್ಲೂಟೂತ್ ಮೂಲಕ ಮಾತ್ರವೇ ಸಂಪರ್ಕಿಸಬಹುದು.

ಇದರಲ್ಲಿ 15 ವ್ಯಾಟ್‌ನ ಎರಡು ಸ್ಪೀಕರುಗಳಿವೆ. ಆಡಿಯೋ ಇಂಜಿನ್ ಸುಮಾರಾಗಿದೆ. ಆದರೆ ಸ್ಪೀಕರುಗಳ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ಉತ್ತಮ ಧ್ವನಿ ಬೇಕಿದ್ದಲ್ಲಿ ಪ್ರತ್ಯೇಕ ಆಂಪ್ಲಿಫೈಯರ್ ಮತ್ತು ಸ್ಪೀಕರುಗಳು ಇದ್ದಲ್ಲಿ ಅದಕ್ಕೆ ಜೋಡಿಸುವುದೇ ಉತ್ತಮ.

ಸಂಪರ್ಕ ಹಾಗೂ ಸವಲತ್ತುಗಳು

ಇದರಲ್ಲಿ ಡಿಎಲ್‌ಎನ್‌ಎ ಇದೆ. ಇದರಲ್ಲೇ ಕ್ರೋಮ್‌ಕಾಸ್ಟ್ ಅಡಕವಾಗಿದೆ. ಅಂದರೆ ಈ ಟಿವಿಯನ್ನು ನಿಮ್ಮ ಸ್ಮಾರ್ಟ್‌ಫೋನಿಗೆ ಇನ್ನೊಂದು ಪರದೆಯಾಗಿ ಕೂಡ ಬಳಸಬಹುದು. ಅದಕ್ಕೆ ಕಾಸ್ಟಿಂಗ್ ಎನ್ನುತ್ತಾರೆ. ಹಾಗೆ ಬಳಸಬೇಕಾದರೆ ಟಿವಿ ಮತ್ತು ಫೋನ್ ಎರಡೂ ಒಂದೇ ವೈಫೈ ಜಾಲದಲ್ಲಿ ಇರತಕ್ಕದ್ದು. ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಅಥವಾ ಟ್ಯಾಬ್ಲೆಟ್‌ಗಳಲ್ಲಿರುವ ಫೋಟೋಗಳನ್ನು ಚಿಕ್ಕ ಪರದೆಯಲ್ಲಿ ವೀಕ್ಷಿಸುವ ಬದಲಿಗೆ ಈ ಟಿವಿಯನ್ನು ಫೋನಿಗೆ ಇನ್ನೊಂದು ಪರದೆಯನ್ನಾಗಿಸಿ ದೊಡ್ಡ ಗಾತ್ರದಲ್ಲಿ ವೀಕ್ಷಿಸಬಹುದು. ಫೋನಿನಿಂದ ವಿಡಿಯೋಗಳನ್ನೂ ಪ್ಲೇ ಮಾಡಬಹುದು. ಗಣಕಕ್ಕೆ ಮೋನಿಟರ್ ಆಗಿಯೂ ಬಳಸಬಹುದು. ಇದರ ವೈಫೈ ಒಂದು ಬ್ಯಾಂಡಿನದು. ಬಹುತೇಕ ಫೋನ್‌ಗಳಲ್ಲಿ ಅಥವಾ ಲ್ಯಾಪ್‌ಟಾಪ್‌ಗಳಲ್ಲಿರುವಂತೆ ಇನ್ನೊಂದು 5GHz ಬ್ಯಾಂಡ್ ಇದರಲ್ಲಿಲ್ಲ. ಇದೂ ಒಂದು ಪ್ರಮುಖ ಕೊರತೆಯೇ. ವೈಫೈ ಮೋಡೆಮ್/ರೂಟರ್ ಪಕ್ಕದಲ್ಲಿದ್ದರೆ ಮಾತ್ರ ಸಂಪರ್ಕ ಚೆನ್ನಾಗಿರುತ್ತದೆ. ಇನ್ನೊಂದು ಕೋಣೆಯಲ್ಲಿದ್ದರೆ ಆಗ ವೈಫೈ ಮೂಲಕ ಸಂಪರ್ಕಕ್ಕಿಂತ ಎತರ್‌ನೆಟ್ ಸಂಪರ್ಕವೇ ಹೆಚ್ಚು ತೃಪ್ತಿದಾಯಕ ಎಂದು ನನ್ನ ಅನುಭವ.

ತೀರ್ಪು

ಕಡಿಮೆ ಬೆಲೆಗ ಶುದ್ಧ ಆಂಡ್ರೋಯಿಡ್ ಟಿವಿ. ನೀಡುವ ಬೆಲೆಗೆ ನಿಜಕ್ಕೂ ಉತ್ತಮ ಉತ್ಪನ್ನ ಎನ್ನಬಹುದು.

-ಡಾ. ಯು. ಬಿ. ಪವನಜ

gadgetloka @ gmail . com

The post ಥೋಮ್ಸನ್ ಸ್ಮಾರ್ಟ್‌ ಟಿವಿ 55 ಓಎಟಿಎಚ್‌ಪಿಆರ್00101 first appeared on Vishva Kannada.