ಒಂದು ಸೊನ್ನೆ | Vishva Kannada

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೫
ಒಂದು ಸೊನ್ನೆ – ೯ (೧೦-೧೦-೨೦೦೩)

ನುಡಿದಂತೆ ನಡೆಯದವರು

ಒಂದು ಒಳ್ಳೆಯ ಉದ್ದೇಶ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಉತ್ತಮ ಕೆಲಸ ಮಾಡಲು ಆರಂಭಿಸಿ ಅದನ್ನು ಎಲ್ಲರೂ ಹೊಗಳಲು ಪ್ರಾರಂಭಿಸಿ ಈ ಹೊಗಳಿಕೆಯ ಮತ್ತು ತಲೆಗೇರಿ, ತಾನೆ ಸರ್ವಸ್ವ, ತಾನು ಮಾಡಿದ್ದೆಲ್ಲ ಸರಿ ಎಂಬ ಭಾವನೆಯಿಂದ, ಆರಂಭದ ಉದ್ದೇಶವನ್ನು ಮರೆತು ಇನ್ನೇನೋ ಮಾಡುವವವರನ್ನು ನಾವು ಸಮಾಜದಲ್ಲಿ ಆಗಾಗ ಅಲ್ಲಲ್ಲಿ ಕಾಣುತ್ತೇವೆ. ಈ ಸಾಲಿಗೆ ಹೊಸತಾಗಿ ಸೇರ್ಪಡೆಯಾಗಿರುವುದು ಕನ್ನಡ ಗಣಕ ಪರಿಷತ್ತು (ಕಗಪ).

೧೯೯೬ನೆ ಇಸವಿಯ ಡಿಸೆಂಬರ್ ತಿಂಗಳಲ್ಲಿ ಕಗಪದ ಬೀಜ ಬಿತ್ತಲಾಯಿತು. ಕನ್ನಡ ತಂತ್ರಾಂಶಗಳಲ್ಲಿ ಇಲ್ಲದಿದ್ದ ಏಕರೂಪತೆ ಕಗಪದ ಉಗಮಕ್ಕೆ ನಾಂದಿ. ಹಲವಾರು ತಂತ್ರಾಂಶಗಳು ಆಗ ಪ್ರಚಲಿತವಿದ್ದವು. ಒಂದು ತಂತ್ರಾಂಶದಲ್ಲಿ ತಯಾರಿಸಿದ ಫೈಲನ್ನು ಇನ್ನೊಂದು ತಂತ್ರಾಂಶ ಬಳಸಿ ತೆರೆಯುವುದು ಆಗುತ್ತಿರಲಿಲ್ಲ. ಇದಕ್ಕೆ ಕಾರಣ ಒಬ್ಬೊಬ್ಬರೂ ಒಂದೊಂದು ಸಂಕೇತ ರೂಪಿಸಿಕೊಂಡಿದ್ದು. ಒಂದು ಏಕರೂಪತೆ ಇರದಿದ್ದುದು ಗಣಕಗಳಲ್ಲಿ ಕನ್ನಡದ ಬೆಳವಣಿಗೆಗೆ ತೊಡಕಾಗಿ ಪರಿಣಮಿಸಿತ್ತು. ಈ ತೊಂದರೆಯನ್ನು ಮನಗಂಡ ಕೆಲವು ಕನ್ನಡ ಭಾಷಾಭಿಮಾನಿಗಳು ಮತ್ತು ಗಣಕ ತಜ್ಞರು ಒಂದಾಗಿ ಏಕರೂಪತೆ ಬಗ್ಗೆ ಕೆಲಸ ಮಾಡತೊಡಗಿದರು.

ಸರಕಾರವೂ ಈ ಸಮಸ್ಯೆಗಳಿಗೆ ಸ್ಪಂದಿಸಿ ಏಕರೂಪತೆ  ಅರ್ಥಾತ್ ಶಿಷ್ಟತೆ ಬಗ್ಗೆ ಶಿಫಾರಸು ಮಾಡಲು ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯಲ್ಲಿ ಕಗಪದ ಕೆಲವು ಸದಸ್ಯರು ವೈಯಕ್ತಿಕ ನೆಲೆಯಲ್ಲಿ ಇದ್ದರಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಸೇರಿದಂತೆ ಒಟ್ಟು ಸುಮಾರು ಎಂಟು ಜನರಿದ್ದರು. ಕನ್ನಡ ಮತ್ತು ಸಂಸ್ಕೃತಿ ವಿಭಾಗದ ಕಾರ್ಯದರ್ಶಿಯವರು ಈ ಸಮಿತಿಯ ಅಧ್ಯಕ್ಷರಾಗಿದ್ದರು.  ಈ ಸಮಿತಿಯು ತಯಾರಿಸಿದ ಏಕರೂಪ ಕೀಲಿಮಣೆ ವಿನ್ಯಾಸ ಮತ್ತು ಏಕಭಾಷೆಯ ಫಾಂಟ್ (ಅಕ್ಷರಶೈಲಿ) ಗಳನ್ನು ಮಾನಕ ಎಂದು ಸರಕಾರವು ಆಜ್ಞೆ ಹೊರಡಿಸಿತು. ಎಲ್ಲ ಪತ್ರಿಕೆಗಳೂ ಈ ಸಾಧನೆಯನ್ನು ಕಗಪದ ಸಾಧನೆ ಎಂದೇ ಬರೆಯುತ್ತಿದ್ದಾರೆ.

ಈ ಸಮಿತಿಯ ವರದಿಯನ್ನು ತಂತ್ರಾಂಶ ತಯಾರಕರು ಅಳವಡಿಸಿದ್ದಾರೆಯೇ ಎಂದು ಪರೀಕ್ಷಿಸಲು ಕಗಪವು ಒಂದು ಪರೀಕ್ಷಕ ತಂತ್ರಾಂಶವನ್ನು ತಯಾರಿಸಿತು. ಸರಕಾರವು ಈ ತಂತ್ರಾಂಶದ ಉಪಯೋಗವನ್ನು ಗಮನಿಸಿ ಇದನ್ನು ಒಂದು ಪೂರ್ಣಪ್ರಮಾಣದ ತಂತ್ರಾಂಶವನ್ನಾಗಿ ಪರಿವರ್ತಿಸಿಕೊಡಲು ಕಗಪವನ್ನೇ ಕೇಳಿಕೊಂಡಿತು. ಇಂತಹ ಒಂದು ತಂತ್ರಾಂಶವನ್ನು ಉಚಿತವಾಗಿ ಹಂಚಿದರೆ ಈಗ ಪ್ರಚಲಿತವಿರುವ ಎಲ್ಲ ತಂತ್ರಾಂಶ ಕಂಪೆನಿಗಳು ಬಾಗಿಲು ಮುಚ್ಚಬೇಕಾಗಿ ಬರುವುದು. ಆಗ ಉಂಟಾಗುವ ನಿರ್ವಾತವನ್ನು ಕಗಪ ತುಂಬಿಕೊಡಬೇಕಾಗಿ ಬರುವುದು ಎಂದು ಸರಕಾರಕ್ಕೆ ಆಗಲೇ ಮನವರಿಕೆಯಾಗಿತ್ತು. ಭವಿಷ್ಯದ ಈ ತೊಂದರೆಯನ್ನು ನಿವಾರಿಸಲು ಉತ್ತಮ ಗುಣಮಟ್ಟದ, ವೃತ್ತಿನಿರತ ಕಂಪೆನಿಗಳು ಈಗಾಗಲೆ ಮಾರುತ್ತಿರುವ ಉತ್ತಮ ಗುಣಮಟ್ಟದ ಫಾಂಟ್‌ಗಳಿಗೆ ಯಾವುದೆ ರೀತಿಯಲ್ಲಿ ಕಡಿಮೆಯಲ್ಲದ, ಫಾಂಟ್‌ಗಳನ್ನು ತಯಾರಿಸಿ ಕೊಡುವ ಹೊಣೆಯನ್ನೂ ಸರಕಾರವು ಕಗಪಕ್ಕೆ ವಹಿಸಿತು.

ಸರಾಕರದ ಇಚ್ಛೆಯಂತೆ “ನುಡಿ” ಎಂಬ ಪೂರ್ಣಪ್ರಮಾಣದ ತಂತ್ರಾಂಶ ಬಿಡುಗಡೆಯಾಯಿತು. ಆದರೆ ಕಗಪವು ಸರಕಾರ ಹೇಳಿದ ಕೆಲವು ಅಂಶಗಳನ್ನು ಮರೆತೇ ಬಿಟ್ಟಿತ್ತು. ಉತ್ತಮ ಗುಣಮಟ್ಟದ ಫಾಂಟ್‌ಗಳನ್ನು ಕೊಡಲು ಅದಕ್ಕೆ ಸಾಧ್ಯವಾಗಲಿಲ್ಲ. ಕಗಪದಲ್ಲಿ ಹಲವು ವರ್ಷಗಳಿಂದ ಫಾಂಟ್ ತಯಾರಿಸಿ ಅನುಭವವಿರುವ ಪರಿಣತರಿಲ್ಲ. ಸರಕಾರದಿಂದ ಶಹಬಾಸ್ ಗಿಟ್ಟಿಸುವ ಆತುರದಲ್ಲಿ ಕಗಪವು ಒಂದೊಂದು ಫಾಂಟಿಗೂ ಅತಿ ಕಡಿಮೆ ಹಣ ಕೇಳಿತ್ತು. ಕಗಪವು ಏನೇನೂ ಅನುಭವವಿಲ್ಲದ ಕೆಲವು ವಿದ್ಯಾರ್ಥಿಗಳಿಗೆ ಫಾಂಟ್ ಮಾಡಲು ನೇಮಿಸಿತು. ಇದರಿಂದ ಕನ್ನಡ ಭಾಷೆಯಲ್ಲಿ ಅತಿ ಕೆಟ್ಟ ಫಾಂಟ್‌ಗಳು ತುಂಬುವಂತಾಯಿತು. ವೃತ್ತಿನಿರತ ಕಂಪೆನಿಗಳವರು ಈಗಾಗಲೆ ಫಾಂಟ್ ತಯಾರಿಸಿ ಮಾರುವುದನ್ನು ನಿಲ್ಲಿಸಿದ್ದಾರೆ. ಕನ್ನಡಕ್ಕೆ ಉತ್ತಮ ಫಾಂಟ್‌ಗಳ ಕಾಲ ಮುಗಿದು ಹೋಯಿತು.

ಸರಕಾರವು ನೇಮಿಸಿದ ಸಮಿತಿಯು ಏಕಭಾಷೆಯ ಫಾಂಟಿಗೆ ಮಾತ್ರ ಸಂಕೇತಗಳನ್ನು ರೂಪಿಸಿತ್ತು. ದ್ವಿಭಾಷೆಯ ಸಂಕೇತಗಳ ಬಗ್ಗೆ ಮಾತು ಬಂದಾಗ ದ್ವಿಭಾಷೆಯ ಬದಲು ಯುನಿಕೋಡಿನ ಆವೃತ್ತಿ ತರುವುದೇ ಸೂಕ್ತ ಎಂಬ ನಿರ್ಣಯಕ್ಕೂ ಬರಲಾಗಿತ್ತು. ಆದರೆ ಕಗಪ ಮತ್ತು ಸರಕಾರ ಒಟ್ಟು ಸೇರಿ ಹೊರತಂದಿರುವ “ನುಡಿ”ಯ ಮೂರನೇ ಆವೃತ್ತಿಯಲ್ಲಿ ಸರಕಾರದಿಂದ ಆಜ್ಞೆ ಆಗದೆ ಇದ್ದ (ಶಿಷ್ಟತೆಗೆ ಬದ್ಧವಾಗದಿರುವ) ದ್ವಿಭಾಷೆಯ ಫಾಂಟನ್ನು ಅಳವಡಿಸಲಾಗಿದೆ. ಈ ಫಾಂಟ್‌ನಲ್ಲಿ ತಯಾರಿಸಿ ಶೇಖರಿಸಿದ ಮಾಹಿತಿಗಳು ಏನಾಗಬೇಕು? ಕನ್ನಡದಲ್ಲಿ ಹಲವು ತಂತ್ರಾಂಶ ಮತ್ತು ಫಾಂಟ್‌ಗಳಿವೆ. ಇವುಗಳಲ್ಲಿ ತಯಾರಿಸಿ ಶೇಖರಿಸಿದ ಮಾಹಿತಿಗಳಿಗೆ ಮುಂದೆ ಭವಿಷ್ಯವಿಲ್ಲ ಎಂದು ಸಾರಿ ತನ್ನದೇ ಶಿಷ್ಟ ತಂತ್ರಾಂಶ ತಯಾರಿಸಿದ ಕಗಪ ಇದರ ಬಗ್ಗೆ ಏನು ಹೇಳುತ್ತದೆ? ಯಾಕೆ ಯುನಿಕೋಡ್ ಆವೃತ್ತಿಯ “ನುಡಿ” ಬಗ್ಗೆ ಮೌನವಾಗಿದೆ?

ಕಗಪವು ತಯಾರಿಸಿದ “ನುಡಿ” ತಂತ್ರಾಂಶದ ಮೂರನೆ ಆವೃತ್ತಿಯಲ್ಲಿ ಹಲವು ಬಗ್‌ಗಳಿವೆ (ದೋಷ). ಒಂದು ಉದಾಹರಣೆ ನೀಡುವುದಾದರೆ, ನುಡಿಯನ್ನು ಪ್ರಾರಂಭಿಸುವಾಗ ISCIIಯಲ್ಲಿ ಮಾಹಿತಿ ಸಂಗ್ರಹಿಸುವ ಆಯ್ಕೆ ಮಾಡಿ ಒಮ್ಮೆ ಬೆರಳಚ್ಚು ಮಾಡಿದುದನ್ನು ಉಳಿಸಿದ (save ಮಾಡಿ) ನಂತರ ಇನ್ನೊಮ್ಮೆ ಯಾವುದೇ ಕೀಲಿಗಳು ಕೆಲಸ ಮಾಡುವುದಿಲ್ಲ. “ನುಡಿ” ತಂತ್ರಾಂಶದ ತೊಂದರೆಗಳ ಬಗ್ಗೆ ಹಿಮ್ಮಾಹಿತಿ (feedback), ತಾಂತ್ರಿಕ ಸಹಾಯ (technical support), ಆಗಿಂದಾಗ್ಗೆ ಹೊಸ ಆವೃತ್ತಿಗಳ ಬಿಡುಗಡೆಯ ವಿವರ, ಇತ್ಯಾದಿಗಳನ್ನು ನೀಡಲು ಒಂದು ಅಂತರಜಾಲ ತಾಣ ಮತ್ತು ವಿ-ಅಂಚೆಯ ಸೌಕರ್ಯ (mailing list) ಇಲ್ಲ. ಒಬ್ಬ ಏಕ ವ್ಯಕ್ತಿಯಿಂದ ತಯಾರಾದ “ಬರಹ” ತಂತ್ರಾಂಶಕ್ಕೆ ಈ ಎಲ್ಲ ಸೌಕರ್ಯಗಳಿರಬೇಕಾದರೆ ಒಂದು ಪರಿಷತ್ತಿಗೇಕೆ ಇವು ಸಾಧ್ಯವಾಗಿಲ್ಲ?

ಪ್ರಪಂಚಾದ್ಯಂತ ಹಲವು ಜನರು ಮುಕ್ತ ತಂತ್ರಾಂಶಗಳನ್ನು (opensource software) ತಯಾರಿಸಿ ಜನರಿಗೆ ನೀಡುತ್ತಿದ್ದಾರೆ. ಲಿನಕ್ಸ್ ಇದಕ್ಕೆ ಉತ್ತಮ ಉದಾಹರಣೆ. ಮುಕ್ತ ತಂತ್ರಾಂಶ ಎಂದರೆ ತಂತ್ರಾಂಶ ತಯಾರಿಸಲು ಬಳಸಿದ ಮೂಲ ಆಕರ ಕ್ರಮವಿಧಿ (source code) ಎಲ್ಲರಿಗೆ ಲಭ್ಯ. ಆಕರ ಕ್ರಮವಿಧಿಯನ್ನು ಬಳಸಿ ನೀವು ತಂತ್ರಾಂಶವನ್ನು ಸುಧಾರಿಸಬಹುದು, ಹಾಗೆ ಸುಧಾರಿಸಿದುದನ್ನು ಜನತೆಗೆ ಹಂಚಬಹುದು. ನುಡಿ ಈ ಮಾದರಿಯಲ್ಲಿಲ್ಲ. ಲಿನಕ್ಸ್ ಪರಿಣತ ಉತ್ಸಾಹಿ ಕನ್ನಡ ಪ್ರೇಮಿಗಳು ಎರಡು ವರ್ಷಗಳಿಂದ ನುಡಿ ತಂತ್ರಾಂಶದ ಆಕರ ಕ್ರಮವಿಧಿಯನ್ನು ಕೇಳುತ್ತಿದ್ದಾರೆ. ಗಣಕ ಪರಿಷತ್ ಇನ್ನೂ ಆಕರ ಕ್ರಮವಿಧಿಯನ್ನು ಮುಕ್ತವಾಗಿಸಿಲ್ಲ. ನುಡಿ ತಂತ್ರಾಂಶ ಸರಕಾರದಿಂದ ಅನುದಾನ ಪಡೆದು ತಯಾರಾದುದು. ಅಂದರೆ ಅದರ ಆಕರ ಕ್ರಮವಿಧಿ ಮೇಲೆ ಜನತೆಗೆ ಹಕ್ಕು ಇದೆ. ಹೀಗಿದ್ದೂ ಕಗಪದವರು ಅದನ್ನು ಮುಕ್ತವಾಗಿಸಿಲ್ಲ.

ಸರಕಾರವೇ ಕನ್ನಡದ ಫಾಂಟ್ ಮತ್ತು ಕೀಲಿಮಣೆ ತಂತ್ರಾಂಶ ಮಾಡಿ ಉಚಿತವಾಗಿ ಹಂಚಿದರೆ ನಾವೇನು ಮಾಡಬೇಕು ಎಂದು ಕನ್ನಡ ತಂತ್ರಾಂಶ ತಯಾರಕರು ಸರಕಾರವನ್ನು ಪ್ರಶ್ನಿಸಲು ತೊಡಗಿದರು. ಅದಕ್ಕೆ ಸರಕಾರ ಮತ್ತು ಕಗಪದವರು “ನೀವು ಇನ್ನು ಮುಂದೆ ನುಡಿಯನ್ನು ಬಳಸಿ ಆನ್ವಯಿಕ ತಂತ್ರಾಂಶ (ಅಪ್ಲಿಕೇಶನ್ ಸಾಫ್ಟ್‌ವೇರ್) ತಯಾರಿಸಿರಿ” ಎಂದುತ್ತರಿಸಿದರು. ಆನ್ವಯಿಕ ತಂತ್ರಾಂಶ ಎಂದರೆ ಅಂತರಜಾಲ ತಾಣಗಳ ನಿರ್ಮಾಣ, ವೇತನ ಪಟ್ಟಿ ತಯಾರಿಕೆ, ಗ್ರಂಥಾಲಯ, ಸಾರಿಗೆ, ಸಿ.ಡಿ.ಗಳ ತಯಾರಿಕೆ, ಇತ್ಯಾದಿ. ಆದರೆ ತಂತ್ರಾಂಶ ತಯಾರಕರಿಗೆ ಬೇಗನೆ ಭ್ರಮನಿರಸನ ಕಾದಿತ್ತು. ಸರಕಾರವು ತನ್ನ ಕನ್ನಡದ ಎಲ್ಲ ತಂತ್ರಾಂಶ ಅಗತ್ಯಗಳಿಗೆ ಕಗಪವನ್ನೇ ಅವಲಂಬಿಸತೊಡಗಿತು. ಕಗಪವೂ ತನ್ನ ಮೂಲ ಉದ್ದೇಶವನ್ನು ಹಿನ್ನೆಲೆಗೆ ಸರಿಸಿ ಪಂಪಭಾರತದ ಸಿ.ಡಿ., ವೇತನ ತಂತ್ರಾಂಶ, ಕಚೇರಿ ತಂತ್ರಾಂಶ, ಇತ್ಯಾದಿಗಳ ತಯಾರಿಕೆಗೆ ತೊಡಗಿತು.

ಭಾರತೀಯ ಭಾಷೆಗಳ ತಂತ್ರಾಂಶಳಿಗೆ ದೊಡ್ಡ ಗಿರಾಕಿ ಸರಕಾರ ಮತ್ತು ಅರೆ-ಸರಕಾರಿ ಸಂಸ್ಥೆಗಳು. ಉಳಿದಂತೆ ಜನಸಾಮಾನ್ಯರಿಗೆ ಕನ್ನಡದ ಆನ್ವಯಿಕ ತಂತ್ರಾಂಶಗಳು ಬೇಡ. ಸರಕಾರ ಮತ್ತು ಸರೆ-ಸರಕಾರಿ ಸಂಸ್ಥೆಗಳು ತಮ್ಮೆಲ್ಲ ಆವಶ್ಯಕತೆಗಳಿಗೆ ಒಂದೇ ಸಂಸ್ಥೆಯನ್ನು ನಂಬಿದರೆ ಕನ್ನಡದಲ್ಲಿ ತಂತ್ರಾಂಶ ಉದ್ಯಮ ಬೆಳೆಯಲಾರದು. ೫ ಕೋಟಿ ಕನ್ನಡಿಗರಿಗೆ ಬೇಕಾದ ಎಲ್ಲ ತಂತ್ರಾಂಶ ತಯಾರಿಸಿ ಕೊಡುವುದು ಮತ್ತು ಅದಕ್ಕೆ ತಯಾರಿಕೆಯ ನಂತರದ ಅಗತ್ಯ ಸಹಾಯ ಒದಗಿಸುವುದು ಕಗಪಕ್ಕೆ ಮೀರಿದ ಸಂಗತಿ. ಕಗಪವು ಆನ್ವಯಿಕ ತಂತ್ರಾಂಶ ತಯಾರಿಸುವುದು ತನ್ನ ಹೊಣೆಯಲ್ಲ ಎಂದು ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ಶಿಷ್ಟತೆಗಳ ಬಗ್ಗೆ ಶ್ವೇತಪತ್ರಗಳ ತಯಾರಿ, ಶಿಷ್ಟತೆಗೆ ಸಂಬಂಧಿಸಿದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕನ್ನಡದ ಪ್ರಾತಿನಿಧ್ಯ, ಗಣಕಗಳಲ್ಲಿ ಕನ್ನಡದ ಅಳವಡಿಕೆಗೆ ಬೇಕಾದ ಮೂಲಭೂತ  ಸವಲತ್ತುಗಳ ತಯಾರಿ (ಉದಾ: ಯುನಿಕೋಡ್ ನುಡಿ), ಇತ್ಯಾದಿಗಳನ್ನು ಮಾತ್ರ ತನ್ನ ಹೊಣೆಯಾಗಿಸಿಕೊಳ್ಳಬೇಕಿತ್ತು. ಆದರೆ ಕಗಪ ಇದನ್ನೆಲ್ಲ ಗಾಳಿಗೆ ತೂರಿದೆ. ಸರಕಾರವೇ ಕಗಪಕಕ್ಕೆ ವಹಿಸಿದ ೧೪ ಕಾರ್ಯಯೋಜನೆಗಳಲ್ಲಿ ಇತರ ಕನ್ನಡ ತಂತ್ರಾಂಶಗಳಿಂದ ನುಡಿಗೆ ಪರಿವರ್ತಕ ತಂತ್ರಾಂಶ, ಕನ್ನಡ ಲೋಗೋ, ಲಿನಕ್ಸ್‌ನಲ್ಲಿ ಕನ್ನಡ, ಸ್ಟಾರ್ ಆಫೀಸಿನ ಕನ್ನಡ ಆವೃತ್ತಿ, ಇತ್ಯಾದಿ ಯಾವುವೂ ಬಿಡುಗಡೆಯಾಗಿಲ್ಲ.

– ಡಾ. ಯು. ಬಿ. ಪವನಜ

( ೧೦-೧೦-೨೦೦೩ ದಿನಾಂಕದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಲೇಖನ “ಒಂದು ಸೊನ್ನೆ” ಅಂಕಣದದಲ್ಲಿ ಪ್ರಕಟವಾಗಬೇಕಿತ್ತು. ಆದರೆ ಸಂಪಾದಕರು ಇದನ್ನು ಪ್ರಕಟಿಸಲು ಅನರ್ಹ ಎಂದು ತೀರ್ಮಾನಿಸಿದ ಕಾರಣ ಇದು ಪ್ರಕಟವಾಗಲಿಲ್ಲ.)

ನೋಡಿ:

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೨

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೩

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೪

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೫

The post ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೫ first appeared on Vishva Kannada.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೪
ಒಂದು ಸೊನ್ನೆ – ೮ (೨೬-೦೯-೨೦೦೩)

ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿ

ಅಂತರಜಾಲಕ್ಕೆ ಮಾಹಿತಿ ಹೆದ್ದಾರಿ (information super highway) ಎಂಬ ಹೆಸರೂ ಇದೆ. ಈ ಹೆದ್ದಾರಿಯಲ್ಲಿ ಕನ್ನಡ ಭಾಷೆಯ ಗಾಡಿಗಳ ಚಲನೆಯ ಆರಂಭದ ಸಿಂಹಾವಲೋಕನ ಮತ್ತು ಸದ್ಯದ ಸ್ಥಿತಿಗತಿಗಳ ಸ್ಥೂಲ ಚಿತ್ರಣ.

ಆರಂಭದಲ್ಲಿ ಇಂಗ್ಲೀಷ್ ಮೂಲಕ ಕನ್ನಡ

೧೯೯೫ರಲ್ಲಿ ನಾನು ತೈವಾನಿಗೆ ಉನ್ನತ ಸಂಶೋಧನೆ ಮಾಡಲು ಹೋದೆ. ಭಾರತದಲ್ಲಿ ಆಗಿನ್ನೂ ಅಂತರಜಾಲ ಎಲ್ಲರಿಗೂ ಲಭ್ಯವಿರಲಿಲ್ಲ. ತೈವಾನಿನಲ್ಲಿ ನನಗೆ ಪ್ರಥಮ ಬಾರಿಗೆ ಅಂತರಜಾಲವನ್ನು ಬಳಸುವ ಸೌಲಭ್ಯ ದೊರೆಯಿತು. ಅಂತರಜಾಲದಲ್ಲಿ ನಾನು ಮೊದಲು ಹುಡುಕಾಡಿದ್ದು ಕನ್ನಡದ ಬಗೆಗೆ ಏನಾದರೂ ಇದೆಯೇ ಎಂದು. ಆಗ ಕಣ್ಣಿಗೆ ಬಿದ್ದದ್ದು ಕೆನಡಾದಲ್ಲಿ ವಿದ್ಯಾರ್ಥಿಯಾಗಿದ್ದ ದತ್ತಾತ್ರೇಯ ಕುಲಕರ್ಣಿಯವರು ನಿರ್ಮಿಸಿದ “ಕನ್ನಡ ಸಾಹಿತ್ಯ ಪುಟ”. ಆಗಿನ್ನೂ ಅಂತರಜಾಲದಲ್ಲಿ ಕನ್ನಡ ಅಕ್ಷರಶೈಲಿಗಳ (ಫಾಂಟ್) ಬಳಕೆ ಪ್ರಾರಂಭವಾಗಿರಲಿಲ್ಲ. ಕನ್ನಡ ಸಾಹಿತ್ಯ ಪುಟದಲ್ಲಿ ಕನ್ನಡ ಭಾಷೆಗೆ ಇಂಗ್ಲೀಷ್ ಲಿಪಿಯನ್ನು ಅಳವಡಿಸಲಾಗಿತ್ತು. ಉದಾಹರಣೆಗೆ “ಧರಣಿ ಮಂಡಲ ಮಧ್ಯದೊಳಗೆ” ಎಂಬುದು “dharaNi maMDala madhyadhoLage” ಎಂದಾಗಿತ್ತು.

ಅಂತರಜಾಲದಲ್ಲಿ ವಿಚಾರಜಾಲದ ಸೌಲಭ್ಯವಿದೆ. ಇದಕ್ಕೆ ಇಂಗ್ಲೀಷಿನಲ್ಲಿ newsgroup ಎನ್ನುತ್ತಾರೆ. ಇದೊಂದು ಮುಕ್ತ ಗೋಡೆಬರಹದ ರೀತಿ ಕೆಲಸ ಮಾಡುತ್ತದೆ. ಯಾರು ಬೇಕಾದರು ತಮಗೆ ಇಷ್ಟ ಬಂದ ವಿಷಯದ ಬಗ್ಗೆ ಇಲ್ಲಿ ಮುಕ್ತ ಬರೆಹ, ಸೂಚನೆ, ಕೋರಿಕೆ ದಾಖಲಿಸಬಹುದು. ವಿಷಯಗಳಿಗನುಸಾರವಾಗಿ ಬೇರೆ ಬೇರೆ ವಿಚಾರಜಾಲಗಳಿವೆ. ಕರ್ನಾಟಕದ ಬಗೆಗೆ ಚಿಂತನೆ ನಡೆಸುವ ವಿಚಾರಜಾಲದ ಹೆಸರು soc.culture.indian.karnataka ಎಂದು. ಈ ಜಾಲವೂ ಇಂಗ್ಲೀಷಿನಲ್ಲೇ ಕೆಲಸ ಮಾಡುತ್ತದೆ. ೧೯೯೫-೯೬ ರ ಸಮಯದಲ್ಲಿ ಕುಲಕರ್ಣಿ, ಸಿ.ಪಿ. ರವಿಕುಮಾರ್, ಮಹೇಶ ರಾವ್, ಪದ್ಮನಾಭ ಹೊಳ್ಳ, ನಾನು, ದಿನೇಶ ನೆಟ್ಟಾರು, ಹೀಗೆ ಹಲವರು ಈ ಜಾಲದಲ್ಲಿ ಸಕ್ರಿಯವಾಗಿದ್ದೆವು. ನಾವೆಲ್ಲ ಒಟ್ಟು ಸೇರಿ ಒಂದು ಹರಟೆಕಟ್ಟೆಯನ್ನು ಅಂತರಜಾಲದಲ್ಲಿ ಪ್ರಾರಂಭಿಸಿದರೆ ಹೇಗೆ ಎಂಬ ಆಲೋಚನೆ ಬಂತು. ಇಂಟರ್‌ನೆಟ್ ರಿಲೇ ಚಾಟ್ ಸೌಲಭ್ಯವನ್ನು ಬಳಸಿ ಪ್ರತಿ ಶನಿವಾರ ನಾವೆಲ್ಲ ನೇರ ಹರಟೆಯನ್ನು ನಡೆಸುತ್ತಿದ್ದೆವು. ಹರಟೆ ನಡೆಸಲು ಬಳಸುತ್ತಿದ್ದ ಲಿಪಿ ಇಂಗ್ಲೀಷ್.

“ಯುರೇಕಾ!”

ಹೀಗೆ ಒಂದು ದಿನ ಹರಟೆ ನಡೆಸಲು ನಾನು ಮತ್ತು ಮಹೇಶ ರಾವ್ ಮಾತ್ರ ಇದ್ದೆವು. ನಾನು ಆವಾಗಲೇ ನನ್ನ ಅಂತರಜಾಲ ತಾಣವನ್ನು ನಮ್ಮ ಸಂಶೋಧನಾಲಯದಲ್ಲಿ ನಿರ್ಮಿಸಿದ್ದೆ. ಆ ತಾಣದಲ್ಲಿ “ನಮಸ್ಕಾರ” ಎಂಬ ಪದವನ್ನು ಕನ್ನಡ ಅಕ್ಷರಶೈಲಿಯಲ್ಲಿ ಸೇರಿಸಿದೆ. ಮಹೇಶರಾಯರಿಗೆ ಆ ಪದವನ್ನು ಓದಲು ಬೇಕಾದ ಕನ್ನಡದ ಅಕ್ಷರಶೈಲಿ (ಫಾಂಟ್) ಕಳುಹಿಸಿಕೊಟ್ಟೆ. ಅವರು ಕನ್ನಡದ ಅಕ್ಷರಶೈಲಿಯನ್ನು ತಮ್ಮ ಗಣಕದಲ್ಲಿ ಅನುಸ್ಥಾಪನೆ (ಇನ್‌ಸ್ಟಾಲ್) ಮಾಡಿದೊಡನೆ ಅವರ ಗಣಕ ಪರದೆಯಲ್ಲಿ “ನಮಸ್ಕಾರ” ಎಂದು ಕನ್ನಡ ಲಿಪಿಯಲ್ಲಿ ಮೂಡಿಬಂತು. ಇದನ್ನು ಅವರು ನನಗೆ ಚಾಟ್ ಮೂಲಕ ತಿಳಿಸಿದರು. ನಮಗೆ ಯುರೇಕಾ ಎಂದು ಕೂಗುವಂತಾಗಿತ್ತು.

ವಿಶ್ವ ಕನ್ನಡ

೧೯೯೬ ನವಂಬರ್ ತಿಂಗಳಲ್ಲಿ ನಾನು ಭಾರತಕ್ಕೆ ವಾಪಾಸು ಬಂದೆ. ನಾನು ಬಳಸುತ್ತಿದ್ದದ್ದು ಆಕೃತಿ ಹೆಸರಿನ ಕನ್ನಡ ತಂತ್ರಾಂಶ. ಈ ತಂತ್ರಾಂಶ ತಯಾರಿಕೆಯ ಕಂಪೆನಿಯವರು ಈವಾಗಲೇ ಮರಾಠಿ ಭಾಷೆಯಲ್ಲಿ ಅಂತರಜಾಲ ತಾಣವೊಂದನ್ನು ನಿರ್ಮಿಸಿದ್ದರು. ಅವರಿಗೆ ಕನ್ನಡದ ಒಂದು ಸ್ಯಾಂಪಲ್ ಪುಟ ಬೇಕಿತ್ತು. ನನಗೆ ಅಂತಹ ಒಂದು ತಾಣಪುಟವನ್ನು (web page) ತಯಾರಿಸಿ ಕೊಡಲು ಆಕೃತಿ ತಂತ್ರಾಂಶ ತಯಾರಿಕಾ ಕಂಪೆನಿಯ ಆನಂದ್ ಅವರು ನನ್ನನ್ನು ಕೇಳಿಕೊಂಡರು. ಕನ್ನಡದ ಅಂತರಜಾಲ ತಾಣವೊಂದನ್ನು ನಿರ್ಮಿಸುವ ಆಲೋಚನೆ ತೈವಾನಿನಲ್ಲಿದ್ದಾಗಲೇ ನನ್ನ ಮನದಲ್ಲಿ ಮೂಡಿತ್ತು. ಕನ್ನಡದ ಒಂದು ಅಂತರಜಾಲ ತಾಣ ನಿರ್ಮಾಣ ಮಾಡಲು ನನಗಿದ್ದ ಆಲೋಚನೆಯನ್ನು ಹಾಗೂ ತೈವಾನಿನಲ್ಲಿ ನಾನು ನಡೆಸಿದ ಪ್ರಯತ್ನವನ್ನೂ ಅವರಿಗೆ ತಿಳಿಸಿದೆ. ಅವರ ಅಗತ್ಯಕ್ಕೂ ನನ್ನ ಆಲೋಚನೆಗೂ ಸರಿಹೊಂದಿ ಆಕೃತಿ ತಂತ್ರಾಂಶ ತಯಾರಕರ ಔದಾರ್ಯದಿಂದ ಕನ್ನಡದ ಪ್ರಥಮ ಅಂತರಜಾಲ ತಾಣ ಹಾಗೂ ಪ್ರಥಮ ಅಂತರಜಾಲ ಪತ್ರಿಕೆ “ವಿಶ್ವ ಕನ್ನಡ” ಮೂಡಿಬಂತು. ಇದು ನಡೆದುದು ೧೯೯೬ರ ಡಿಸೆಂಬರ್ ತಿಂಗಳಲ್ಲಿ.

ಸುಮಾರು ಅದೇ ಸಮಯದಲ್ಲಿ ಬೆಂಗಳೂರಿನಿಂದ ಮುರಳೀಧರ ಪದಕಿಯವರು “ಮೈಬೆಂಗಳೂರು” ಎಂಬ ಹೆಸರಿನ ಕನ್ನಡದ ತಾಣವೊಂದನ್ನು ಪ್ರಾರಂಭಿಸಿ ಅದರಲ್ಲಿ ದೈನಂದಿನ ಸುದ್ದಿಗಳನ್ನು ಕೊಡುತ್ತಿದ್ದರು. ಸಂಜೆವಾಣಿ ದಿನಪತ್ರಿಕೆಯೂ ಅದೇ ಸುಮಾರಿಗೆ ಚಿತ್ರ ರೂಪದಲ್ಲಿ (ಗ್ರಾಫಿಕ್ಸ್ ವಿಧಾನದಲ್ಲಿ) ಅಂತರಜಾಲಕ್ಕೆ ಸೇರ್ಪಡೆಯಾಯಿತು. ಇದು ಈಗಲೂ ಅದೇ ರೂಪದಲ್ಲಿದೆ.

ಡೈನಾಮಿಕ್ ಫಾಂಟ್

ಕನ್ನಡ ಭಾಷೆಯಲ್ಲಿ ಅಂತರಜಾಲ ತಾಣ ನಿರ್ಮಾಣಕ್ಕೆ ಆಗ ಇದ್ದ ಸಮಸ್ಯೆ ಅಕ್ಷರಶೈಲಿಗಳದ್ದು. ತಾಣವನ್ನು ನಿರ್ಮಿಸಿದ ಅಕ್ಷರಶೈಲಿ ತಾಣವನ್ನು ವೀಕ್ಷಿಸುವವನ ಗಣಕದಲ್ಲೂ ಇರಬೇಕು. ಇದಕ್ಕೆ ಪರಿಹಾರವಾಗಿ ಅಕ್ಷರಶೈಲಿಯನ್ನು ಬೇಕಿದ್ದವರು ತಮ್ಮ ಗಣಕಕ್ಕೆ  ಇಳಿಸಿಕೊಳ್ಳುವ (ಡೌನ್‌ಲೋಡ್) ಸೌಕರ್ಯ ನೀಡಲಾಗಿತ್ತು. ಈಗಲೂ ಬಹುಪಾಲು ಕನ್ನಡ ತಾಣಗಳು ಈ ವಿಧಾನವನ್ನು ಬಳಸುತ್ತಿವೆ. ಈ ವಿಧಾನದ ಒಂದು ತೊಡಕೆಂದರೆ ಕನ್ನಡದ ಬಹುತೇಕ ಅಕ್ಷರಶೈಲಿಗಳು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ (operating system) ಮಾತ್ರ ಕಾರ್ಯನಿರ್ವಹಿಸುತ್ತವೆ. ಈ  ಸಮಸ್ಯೆಗೆ ಪರಿಹಾರ ಸ್ವಯಂನಿರ್ಮಿತ ಅಕ್ಷರಶೈಲಿಯ (dynamic font) ಬಳಕೆ. ಈ ತಂತ್ರಜ್ಞಾನದಲ್ಲಿ ಅಕ್ಷರಶೈಲಿಗಳು ಅಂತರಜಾಲ ತಾಣದಲ್ಲೇ ಇರುತ್ತವೆ. ಅಂತರಜಾಲ ತಾಣ ವೀಕ್ಷಕ ತಂತ್ರಾಂಶವು (browser software) ತಾಣದಿಂದ ಅಕ್ಷರಶೈಲಿಯ ಚೌಕಟ್ಟನ್ನು ಸೆಳೆದುಕೊಂಡು ಅಕ್ಷರಭಾಗಗಳನ್ನು ತಾನೆ ನಿರ್ಮಿಸಿಕೊಳ್ಳುತ್ತದೆ. ಈ ಡೈನಾಮಿಕ್ ಫಾಂಟ್ ತಂತ್ರಜ್ಞಾನವು ಪ್ರಪಂಚದ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಕೆಲಸ ಮಾಡುತ್ತದೆ. “ವಿಶ್ವ ಕನ್ನಡ”ವು ಭಾರತೀಯ ಭಾಷೆಗಳಲ್ಲೇ ಪ್ರಪ್ರಥಮ ಬಾರಿಗೆ ಡೈನಾಮಿಕ್ ಫಾಂಟ್ ಬಳಸಿದ ಅಗ್ಗಳಿಕೆಗೆ ಪಾತ್ರವಾಗಿದೆ.

ಕನ್ನಡದ ಸುಗ್ಗಿ

೧೯೯೯-೨೦೦೧ ಡಾಟ್ ಕಾಮ್‌ಗಳ ಯುಗ. ಕನ್ನಡ ಭಾಷೆಗೂ ಇದರ ಪ್ರಭಾವ ತಟ್ಟದೆ ಇರಲಿಲ್ಲ. ಈ ಸಮಯದಲ್ಲಿ ಹಲವು ಕನ್ನಡ ತಾಣಗಳು ಹುಟ್ಟಿಕೊಂಡವು. ಕೆಲವು ಕನ್ನಡ ದಿನಪತ್ರಿಕೆಗಳೂ ಅಂತರಜಾಲಕ್ಕೆ ಸೇರ್ಪಡೆಯಾದವು. ಡಾಟ್ ಕಾಮ್‌ಗಳು ಕಾಮ್ (calm) ಆಗುತ್ತಿದ್ದಂತೆ ಕನ್ನಡದ ಕೆಲವು ತಾಣಗಳೂ ನಾಪತ್ತೆಯಾದವು. ಇನ್ನು ಕೆಲವು ಅಲ್ಲೇ ನಿದ್ದೆ ಹೊಡೆಯತೊಡಗಿದವು. ಈಗ ಹೆಚ್ಚು ಸಕ್ರಿಯವಾಗಿರುವ ಕೆಲವು ಕನ್ನಡ ತಾಣಗಳು -thatskannada.com, kannadaratna.com, ourkarnataka.com. ಈ ತಾಣಗಳು ಪ್ರತಿದಿನ ಹೊಸ ವಿಷಯಗಳನ್ನು ನೀಡುತ್ತಿವೆ. ತಿಂಗಳಿಗೊಮ್ಮೆ ಅಥವಾ ಅನುಕೂಲವಾದಾಗ ಹೊಸ ವಿಷಯಗಳನ್ನು ಸೇರಿಸುವ ತಾಣಗಳು ಹಲವಿವೆ. kannadasaahithya.com ಈ ಪಟ್ಟಿಯಲ್ಲಿ ಗಮನಾರ್ಹವಾಗಿದೆ. ಕನ್ನಡದ ಚಲಚಿತ್ರಗಳಿಗೆಂದೇ ಮೀಸಲಾದ ತಾಣ chitraloka.com. ಕನ್ನಡ ಅಕ್ಷರಶೈಲಿಯನ್ನೂ ಬಳಸುತ್ತಿದ್ದ ಈ ತಾಣ ಇತ್ತೀಚೆಗೆ ಏಕೋ ಕನ್ನಡವನ್ನು ಮರೆತು ಕೇವಲ ಇಂಗ್ಲೀಷ್ ಭಾಷೆಯಲ್ಲಿದೆ. ಕನ್ನಡದ ಖ್ಯಾತ ಕಲೆ ಯಕ್ಷಗಾನಕ್ಕೆಂದೇ ಮೀಸಲಾದ yakshagana.com ತಾಣವಿದೆ. ಕನ್ನಡದ ಎಲ್ಲ ತಾಣಗಳ ಸೂಚಿಯನ್ನು ಇಲ್ಲಿ ನೀಡಲು ಸ್ಥಳಾವಾಕಾಶವಿಲ್ಲ. ಇಲ್ಲಿ ಹೆಸರಿಸದ ತಾಣಗಳು ಚೆನ್ನಾಗಿಲ್ಲವೆಂದು ಭಾವಿಸಬೇಕಾಗಿಲ್ಲ.

ವಿ-ಅಂಚೆ (email)

ಕನ್ನಡದ ಯಾವುದೇ ಲಿಪಿ-ತಂತ್ರಾಂಶವನ್ನು ಬಳಸಿ ಕನ್ನಡದಲ್ಲಿ ವಿ-ಅಂಚೆ ಕಳುಹಿಸಬಹುದು. ನೀವು ಬಳಸಿದ ಅಕ್ಷರಶೈಲಿ ವಿ-ಅಂಚೆಯನ್ನು ಓದುವವನ ಗಣಕದಲ್ಲೂ ಇರತಕ್ಕದ್ದು ಅವಶ್ಯ. ಅಂತರಜಾಲದಿಂದಲೇ ಕನ್ನಡದಲ್ಲಿ ವಿ-ಅಂಚೆ ಕಳುಹಿಸುವ ಸೌಲಭ್ಯ ನೀಡುವ ತಾಣಗಳೂ ಕೆಲವಿವೆ. ಉದಾಹರಣೆಗೆ -epatra.com, etapaal.com, kannadaemail.com.

ಮಾತುಕತೆ (chat)

ಅಂತರಜಾಲದಲ್ಲಿ ಕನ್ನಡ ಲಿಪಿಯಲ್ಲೇ ಮಾತುಕತೆ ಸಾಧ್ಯ. ಯಾಹೂ ಮೆಸೆಂಜರ್. ಎಂಎಸ್‌ಎನ್ ಮೆಸೆಂಜರ್, ಇತ್ಯಾದಿಗಳು ಅಕ್ಷರಶೈಲಿಯನ್ನು ಬದಲಿಸುವ ಸವಲತ್ತನ್ನು ನೀಡಿವೆ. ಕನ್ನಡದ ಅಕ್ಷರಶೈಲಿಯನ್ನು ಆರಿಸಿಕೊಂಡು ಅದಕ್ಕೆ ಸರಿಹೊಂದುವ ಕನ್ನಡದ ಕೀಲಿಮಣೆ ತಂತ್ರಾಂಶ (ನುಡಿ, ಬರಹ, ಇತ್ಯಾದಿ) ಬಳಸಿ ಕನ್ನಡದಲ್ಲೇ ಚಾಟ್ ಮಾಡಬಹುದು. epatra.com ಮತ್ತು ಇನ್ನಿತರ ಕೆಲವು ತಾಣಗಳು ತಮ್ಮ ತಾಣದಲ್ಲೇ ಕನ್ನಡದಲ್ಲಿ ಚಾಟ್ ಮಾಡುವ ಸವಲತ್ತನ್ನು ನೀಡಿವೆ.

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂಬ ಕವಿವಾಣಿಯನ್ನು ಅಂತರಜಾಲವು ನಿಜವಾಗಿಸುತ್ತಿದೆ.

– ಡಾ. ಯು. ಬಿ. ಪವನಜ

(ಕೃಪೆ: ವಿಜಯ ಕರ್ನಾಟಕ)

ನೋಡಿ:

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೨

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೩

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೪

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೫

The post ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೪ first appeared on Vishva Kannada.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೩
ಒಂದು ಸೊನ್ನೆ – ೭ (೧೨-೦೯-೨೦೦೩)

ಯುನಿಕೋಡ್ ಎಂಬ ವಿಶ್ವಸಂಕೇತ

ಕನ್ನಡದಲ್ಲಿ ಕಡತವೊಂದನ್ನು ತಯಾರಿಸಿ ಜಪಾನಿಗೆ ಕಳುಹಿಸಿದರೆ ಅವರಿಗೆ ಇದು ಕನ್ನಡ ಭಾಷೆಯಲ್ಲಿದೆ ಎಂದು ತಿಳಿಯುವುದು ಹೇಗೆ? ವಿಶ್ವಕ್ಕೆಲ್ಲ ಒಂದೇ ಸಂಕೇತ ವಿಧಾನ ಇದ್ದರೆ ಒಳ್ಳೆಯದಲ್ಲವೇ? ಇದುವೇ ಯುನಿಕೋಡ್.

ನಾವು ಇಂಗ್ಲೀಷಿನಲ್ಲಿ ಮಾತನಾಡುವಾಗ ಕನ್ನಡದಲ್ಲಿ ಆಲೋಚಿಸಿ ಇಂಗ್ಲಿಷಿಗೆ ಅನುವಾದಿಸಿ ಮಾತನಾಡುತ್ತೇವಲ್ಲವೇ? ಗಣಕಗಳು ಕನ್ನಡದಲ್ಲಿ ವ್ಯವಹರಿಸುವುದು ಸುಮಾರಾಗಿ ಹೀಗೆಯೇ. ಮಾಹಿತಿಯ ಸಂಗ್ರಹಣೆಗೆ ಒಂದು ಸಂಕೇತ, ತೋರಿಸಲು ಇನ್ನೊಂದು ಸಂಕೇತ. ಇದನ್ನು ಹಿಂದಿನ ಸಂಚಿಕೆಯಲ್ಲಿ ವಿವರಿಸಲಾಗಿತ್ತು. ಮಾಹಿತಿಯ ಸಂಗ್ರಹಣೆಗೆ ಭಾರತೀಯ ಭಾಷೆಗಳಿಗೆ ಬಳಸುತ್ತಿರುವುದು ಇಸ್ಕಿಯನ್ನು (ISCII = Indian Script Code for Information Interchange). ಇಸ್ಕಿಯು ಆಸ್ಕಿಯನ್ನು (ASCII = American Standards Code for Information Interchange) ಆಧರಿಸಿದೆ. ಇವುಗಳನ್ನು ಸ್ವಲ್ಪ ವಿಮರ್ಶಿಸೋಣ.

ಆಸ್ಕಿ ಮತ್ತು ಇಸ್ಕಿ

ಆಸ್ಕಿ 8 ಬಿಟ್‌ಗಳನ್ನು ಹೊಂದಿದೆ. ಗಣಕದಲ್ಲಿ ಮಾಹಿತಿಯ ಒಂದು ತುಣಕೇ ಬಿಟ್ (bit = binary digit). ವಿದ್ಯುತ್ತಿಗೆ ಎರಡೇ ಸಾಧ್ಯತೆಗಳಿರುವುದು -ಇದೆ ಅಥವಾ ಇಲ್ಲ. ವಿದ್ಯುತ್ ಇದೆ ಎಂದರೆ “ಒಂದು”, ಇಲ್ಲ ಎಂದರೆ “ಸೊನ್ನೆ” ಎಂದು ತೆಗೆದುಕೊಂಡರೆ ಒಂದು ಬಿಟ್‌ನಲ್ಲಿ 0 ಅಥವಾ 1 ಅನ್ನು ಸೂಚಿಸಬಹದು. ಒಂದು ಅಕ್ಷರವನ್ನು ಶೇಖರಿಸಲು ಎರಡು ಬಿಟ್‌ಗಳನ್ನು ತೆಗೆದುಕೊಂಡರೆ ಒಟ್ಟು ನಾಲ್ಕು ಸಾಧ್ಯತೆಗಳಿವೆ -00, 01, 10 ಮತ್ತು 11 (ದ್ವಿಮಾನ). ಇವು ದಶಮಾನ ಪದ್ಧತಿಯಲ್ಲಿ 0, 1, 2, 3 ಆಗುತ್ತವೆ. ಆಸ್ಕಿ ಮತ್ತು ಇಸ್ಕಿಗಳು 8 ಬಿಟ್‌ಗಳನ್ನು ಬಳಸುತ್ತವೆ. 8 ಬಿಟ್‌ಗಳನ್ನು ಬಳಸುವ ಯಾವುದೇ ಸಂಕೇತೀಕರಣ ವಿಧಾನವು 256 (28 = 256) ಅಕ್ಷರಗಳನ್ನು ಮಾತ್ರವೇ ಹೊಂದಿರಬಲ್ಲುದು. ಕನ್ನಡ ಭಾಷೆಯಲ್ಲಿ 49 ಅಕ್ಷರಗಳಿವೆ. ಜೊತೆಗೆ ಸ್ವರ ಚಿಹ್ನೆಗಳಿವೆ. ಇಂಗ್ಲೀಷ್ ಭಾಷೆಯಲ್ಲಿ 26 (ಮತ್ತು 26) ಅಕ್ಷರಗಳಿವೆ. ಬರೆವಣಿಗೆಯ ಚಿಹ್ನೆ, ಅಂಕೆ, ಇತ್ಯಾದಿಗಳೆಲ್ಲ ಒಟ್ಟು ಸೇರಿದರೂ 256ಕ್ಕಿಂತ ಕಡಿಮೆಯೇ. ಹಾಗಿದ್ದಲ್ಲಿ 256 ಸಂಕೇತಗಳು ಸಾಕಲ್ಲವೇ? ಇಸ್ಕಿಯಲ್ಲಿ ಮಾಹಿತಿಯನ್ನು ಸಂಗ್ರಹಿಸುವಾಗ ಇಂಗ್ಲೀಷ್ ಮತ್ತು ಒಂದು ಭಾರತೀಯ ಭಾಷೆಯನ್ನು ಬಳಸಬಹುದು. ಅಂದರೆ ಕನ್ನಡ, ಹಿಂದಿ, ತಮಿಳು, ತೆಲುಗು, ಹೀಗೆ ಹಲವು ಭಾಷೆಗಳನ್ನು ಒಂದೇ ಕಡತದಲ್ಲಿ ಸಂಗ್ರಹಿಸುವುದು ಅಸಾಧ್ಯ.

ಇಸ್ಕಿಯಲ್ಲಿ ಭಾರತದ ಎಲ್ಲ ಭಾಷೆಗಳಿಗೆ ಒಂದೇ ಸಂಕೇತ ನೀಡಲಾಗಿದೆ. ಅಂದರೆ ಕನ್ನಡದ “ಕ” ಮತ್ತು ಹಿಂದಿಯ “ಕ” ಎರಡಕ್ಕೂ ಒಂದೇ ಸಂಕೇತ ಇದೆ. ಇದರಿಂದ ಕೆಲವೊಮ್ಮೆ ಲಾಭವೂ ಇದೆ. ಒಂದು ಟೆಲಿಫೋನ್ ಡೈರೆಕ್ಟರಿಯನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಿಸಬೇಕಾದರೆ, ಕನ್ನಡದಲ್ಲಿ ಬೆರಳಚ್ಚು ಮಾಡಿ, ಇಸ್ಕಿಯಲ್ಲಿ ಶೇಖರಿಸಿ, ಅದನ್ನು ಹಿಂದಿಯ ಫಾಂಟ್‌ನ ಸಂಕೇತಗಳಿಗೆ ಪರಿವರ್ತಿಸಿದರೆ ಸಾಕು. ಆದರೆ ಸಮಸ್ಯೆ ಇರುವುದು ಅಕಾರಾದಿ ವಿಂಗಡಣೆಯಲ್ಲಿ. ಕನ್ನಡ, ತೆಲುಗು, ಮರಾಠಿ, ಹಿಂದಿ, ಹೀಗೆ ಎಲ್ಲ ಭಾಷೆಗಳಿಗೂ ಒಂದೆ ಅಕಾರಾದಿ ವಿಂಗಡಣೆಯ ಸೂತ್ರ ಕಲ್ಪಿಸಲಾಗಿದೆ. ಕನ್ನಡ ಮತ್ತು ಹಿಂದಿಯ ಸೂತ್ರ ಒಂದೇ ಆಗಿರಬೇಕಾಗಿಲ್ಲ. ಉದಾಹರಣೆಗೆ ಇಸ್ಕಿಯಲ್ಲಿರುವ ಅಕಾರಾದಿ ವಿಂಗಡಣೆ -“ಯ, ರ ಲ, ಳ, ವ, ಶ, ಷ, ಸ, ಹ”. ಕನ್ನಡದಲ್ಲಿ ಇದು “ಯ, ರ, ಲ, ವ, ಶ, ಷ, ಸ, ಹ, ಳ” ಆಗಬೇಕು.

ಯುನಿಕೋಡ್

ಪ್ರಪಂಚದ ಮಟ್ಟಿಗೆ ಹೇಳುವುದಾದರೆ ಭಾರತೀಯ ಭಾಷೆಗಳ ಜೊತೆ, ಚೀನಾ, ಜಪಾನ್, ಅರೇಬಿ, ಯುರೋಪಿನ ಭಾಷೆಗಳು, ಹೀಗೆ ನೂರಾರು ಭಾಷೆಗಳಿಗೆ ಸ್ಥಾನ ಕಲ್ಪಿಸಿ ಕೊಡಬೇಕಾಗುತ್ತದೆ. ಇದಕ್ಕೆಲ್ಲ ಮದ್ದೆಂದರೆ 8 ಬಿಟ್‌ಗಳ ಸಂಕೇತೀಕರಣದ ಬದಲಿಗೆ 16 ಬಿಟ್‌ಗಳನ್ನು ಬಳಸುವುದು. 16 ಬಿಟ್‌ಗಳನ್ನು ಬಳಸುವುದರಿಂದ ಸುಮಾರು 65,000 ಮೂಲಾಕ್ಷರಗಳಿಗೆ ಜಾಗ ಮಾಡಿಕೊಟ್ಟಂತಾಗುತ್ತದೆ. ಇದು ಪ್ರಪಂಚದ ಬಹುತೇಕ ಭಾಷೆಗಳಿಗೆ ಸಾಕು. ಇದುವೇ ಯುನಿಕೋಡ್ (unicode). ಯುನಿಕೋಡ್ ಎಂಬುದು universal, uniform, uinique ಮತ್ತು code (ಸಂಕೇತ) ಎಂಬ ಪದಗಳನ್ನು ಸೂಚಿಸುತ್ತದೆ. ಪ್ರಪಂಚಕ್ಕೆಲ್ಲಾ ಒಂದೇ ಸಂಕೇತ ವಿಧಾನ ಇರತಕ್ಕದ್ದು. ಪ್ರಪಂಚದ ಪ್ರತಿ ಭಾಷೆಯ ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಪ್ರತ್ಯೇಕ ಸಂಕೇತ ಇರಬೇಕು. ಈ ಎಲ್ಲ ಬೇಕುಗಳಿಗೆ ಉತ್ತರವೇ ಯುನಿಕೋಡ್. ಯುನಿಕೋಡ್‌ನಲ್ಲಿ ಪ್ರತಿ ಭಾಷೆಗೂ ತನ್ನದೇ ಆದ ಸಂಕೇತಶ್ರೇಣಿ ಇದೆ. ಇದು ಭಾರತೀಯ ಭಾಷೆಗಳಿಗೂ ಅನ್ವಯಿಸುತ್ತದೆ. ಯುನಿಕೋಡ್ ವಿಧಾನದಲ್ಲಿ ಮಾಹಿತಿ ಸಂಗ್ರಹಣೆ ಮಾಡಿದರೆ ಒಂದೇ ಕಡತದಲ್ಲಿ ಪ್ರಪಂಚದ ಎಲ್ಲ ಭಾಷೆಗಳಲ್ಲಿ ಮಾಹಿತಿಯನ್ನು ಶೇಖರಣೆ ಮಾಡಲು ಸಾಧ್ಯ. ಗ್ರಂಥಾಲಯವೊಂದರಲ್ಲಿ ಭಾರತದ ಎಲ್ಲ ಭಾಷೆಯ ಪುಸ್ತಕಗಳಿದ್ದಲ್ಲಿ ಅವುಗಳ ವಿವರಗಳ ದತ್ತಸಂಚಯ (database) ತಯಾರಿಸಬೇಕಾದರೆ ಯುನಿಕೋಡ್ ವಿಧಾನದಿಂದ ಮಾತ್ರ ಸಾಧ್ಯ.

ಯುನಿಕೋಡ್ ಆಧಾರಿತ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಮಾಹಿತಿ ಶೇಖರಣೆಯ ಸಂಕೇತವಾದ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ. ಅಂದರೆ ನುಡಿ, ಬರಹ, ಆಕೃತಿ, ಶ್ರೀಲಿಪಿ, ಸಿಡಾಕ್, ಇತ್ಯಾದಿ ತಂತ್ರಾಂಶಗಳಂತೆ ಅಕ್ಷರಶೈಲಿ (ಫಾಂಟ್) ಗಳ ಸಂಕೇತಗಳಲ್ಲಿ ಮಾಹಿತಿ ಸಂಗ್ರಹಣೆ ಅಲ್ಲ. ನಿಮ್ಮಲ್ಲಿ ಯುನಿಕೋಡ್ ಆಧಾರಿತ ಕನ್ನಡದ ಓಪನ್‌ಟೈಪ್ ಫಾಂಟ್ ಇರತಕ್ಕದ್ದು. ಯುನಿಕೋಡ್‌ನಲ್ಲಿ ತಯಾರಿಸಿದ ಕಡತವನ್ನು ಬೇರೊಬ್ಬರಿಗೆ ಕಳುಹಿಸುವಾಗ ಕಡತದ ಜೊತೆ ನಿಮ್ಮ ಅಕ್ಷರಶೈಲಿಯನ್ನೂ ಕಳುಹಿಸುವ ಅಗತ್ಯವಿಲ್ಲ. ನಿಮ್ಮಲ್ಲಿರುವ ಓಪನ್‌ಟೈಪ್ ಫಾಂಟ್ ಮತ್ತು ನಿಮ್ಮ ಸ್ನೇಹಿತರಲ್ಲಿರುವ ಓಪನ್‌ಟೈಪ್ ಫಾಂಟ್ ಬೇರೆ ಬೇರೆ ಇರಬಹುದು. ಮಾಹಿತಿಯನ್ನು ಅಕ್ಷರಶೈಲಿಯ ಸಂಕೇತಗಳ ಬದಲಿಗೆ ಮೂಲ ಮಾಹಿತಿಯಾಗಿಯೇ ಕಳುಹಿಸುವುದರಿಂದ ಮಾಹಿತಿ ಸಂವಹನೆಯಲ್ಲಿ ಯಾವ ತೊಡಕೂ ಇಲ್ಲ.

ಯುನಿಕೋಡ್‌ನಲ್ಲಿ ಪ್ರತಿ ಭಾಷೆಗೂ ತನ್ನದೇ ಆದ ಸಂಕೇತಗಳಿರುವುದು ಮಾತ್ರವಲ್ಲ, ಪ್ರತಿ ಭಾಷೆಗೂ ತನ್ನದೇ ಆದ ಅಕಾರಾದಿ ವಿಂಗಡಣೆಯ ಸೂತ್ರವೂ ಯುನಿಕೋಡ್‌ನಲ್ಲಿದೆ. ಇಸ್ಕಿಯಲ್ಲಿರುವ ಅಕಾರಾದಿ ವಿಂಗಡಣೆಗೆ ಯುನಿಕೋಡ್‌ನಲ್ಲಿ ಪರಿಹಾರವಿದೆ. ಯುನಿಕೋಡ್‌ನ ಹಳೆಯ ಆವೃತ್ತಿಯಲ್ಲಿ ಕನ್ನಡದ ಅಕಾರಾದಿ ವಿಂಗಡಣೆಗೆ ಇಸ್ಕಿಯಲ್ಲಿನ ಸೂತ್ರವನ್ನೇ ಬಳಸಲಾಗಿತ್ತು. ಆದರೆ ಇತ್ತೀಚಿನ ಆವೃತ್ತಿಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. ಈ ಸೂತ್ರದಲ್ಲಿ ಇನ್ನೂ ಒಂದು ಚಿಕ್ಕ ತೊಂದರೆ ಉಳಿದುಕೊಂಡಿದೆ. ಅದು ರಾಜ್, ರಾಜ, ರಾಜಕುಮಾರ, ರಾಜ್‌ಕುಮಾರ್, ಇತ್ಯಾದಿ ಪದಗಳ ವಿಂಗಡಣೆಯಲ್ಲಿದೆ. ಅದೇನು ಅಷ್ಟು ಮಹತ್ವದ ತೊಂದರೆ ಎಂದು ನನಗೆ ಅನ್ನಿಸುವುದಿಲ್ಲ. ಮುಂದೆ ಈ ಸಮಸ್ಯೆಯೂ ಪರಿಹಾರವಾಗಬಹುದು. ಹಾಗೆಂದು ಹೇಳಿ ಈ ಎಲ್ಲ ಸಮಸ್ಯೆಗಳು ಪರಿಹಾರವಾದ ಮೇಲೆಯೇ ಯುನಿಕೋಡ್‌ನ್ನು ಬಳಸುತ್ತೇವೆ ಎನ್ನಬೇಕಾಗಿಲ್ಲ. ಮಾಹಿತಿಯ ಸಂಗ್ರಹಣೆಯಲ್ಲಿ ಯಾವ ಸಮಸ್ಯೆಯೂ ಇಲ್ಲ.

ಪ್ರಪಂಚದ ಖ್ಯಾತ ಗಣಕ ಕಂಪೆನಿಗಳು, ತಂತ್ರಾಂಶ ತಯಾರಕರು, ದೇಶಗಳು ಸೇರಿ ಆಗಿರುವ ಒಂದು ಸಂಸ್ಥೆ ಯುನಿಕೋಡ್ ಕನ್‌ಸೋರ್ಟಿಯಂ. ಭಾರತ ದೇಶವೂ ಇದರ ಸದಸ್ಯತ್ವ ಹೊಂದಿದೆ. ಯುನಿಕೋಡ್ ಒಂದು ಕಂಪೆನಿಯ ಸ್ವತ್ತಲ್ಲ. ಈಗ ನಾವು ಬಳಸುತ್ತಿರುವ ಯುನಿಕೋಡ್ ಅಲ್ಲದ ವಿಧಾನಕ್ಕೆ ಹೆಚ್ಚೆಂದರೆ ಒಂದು ವರ್ಷದ ಆಯುಷ್ಯವಿರಬಹುದು. ನಂತರ ಎಲ್ಲ ತಂತ್ರಾಂಶಗಳು ಯುನಿಕೋಡ್‌ನ್ನೇ ಬಳಸುತ್ತಿರುತ್ತವೆ.

ಮೈಕ್ರೋಸಾಫ್ಟ್‌ನವರ ವಿಂಡೋಸ್ ಎಕ್ಸ್‌ಪಿ ಮತ್ತು ಸರ್ವರ್ 2003 ಕಾರ್ಯಾಚರಣ ವ್ಯವಸ್ಥೆಗಳಲ್ಲಿ (operating system) ಕನ್ನಡದ ಯುನಿಕೋಡ್ ಸವಲತ್ತನ್ನು ನೀಡಲಾಗಿದೆ. ವಿಂಡೋಸ್ ME, 98, 95, ಇತ್ಯಾದಿಗಳಲ್ಲಿ ಯುನಿಕೋಡ್‌ನ ಸೌಲಭ್ಯ (ಸರಿಯಾಗಿ) ಇಲ್ಲವೆಂದೇ ಹೇಳಬಹುದು. ಕನ್ನಡ ಲಿನಕ್ಸ್ ಉತ್ಸಾಹಿಗಳು ನೇರವಾಗಿ ಯುನಿಕೋಡ್‌ನ್ನೇ ಬಳಸುತ್ತಿದ್ದಾರೆ. ಅವರ ಮುಂದಾಲೋಚನೆಗೆ ಶ್ಲಾಘಿಸಲೇ ಬೇಕು. ದುರದೃಷ್ಟವೆಂದರೆ ಕನ್ನಡ ಗಣಕೀಕರಣದ ಪಟ್ಟಭದ್ರ ಹಿತಾಸಕ್ತಿಗಳು ಅವರ ಜೊತೆ ಸಹಕರಿಸುತ್ತಿಲ್ಲ.

– ಡಾ. ಯು. ಬಿ. ಪವನಜ

(ಕೃಪೆ: ವಿಜಯ ಕರ್ನಾಟಕ)

ನೋಡಿ:

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೨

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೩

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೪

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೫

The post ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೩ first appeared on Vishva Kannada.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ – ೨
ಒಂದು ಸೊನ್ನೆ – ೬ (೨೯-೦೮-೨೦೦೩)

ಶಿಷ್ಟತೆಯ ಚೌಕಟ್ಟಿನಲ್ಲಿ ನುಡಿ

ಒಂದು ಗಣಕದಿಂದ ಇನ್ನೊಂದು ಗಣಕಕ್ಕೆ ಮಾಹಿತಿಯ ಸರಿಯಾದ ಸಂವಹನೆ ಆಗಬೇಕಾದರೆ ಈ ಗಣಕಗಳು ಮಾಹಿತಿ ಸಂವಹನೆಯಲ್ಲಿ ಶಿಷ್ಟತೆಯನ್ನು ಅಳವಡಿಸಿಕೊಳ್ಳಬೇಕು. ಇದು ಕನ್ನಡ ಭಾಷೆಯ ಮಾಹಿತಿ ಸಂವಹನೆಗೂ ಅನ್ವಯಿಸುತ್ತದೆ. ಗಣಕಗಳಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ಬಗ್ಗೆ ವಿವರವಾದ ಲೇಖನಮಾಲೆಯ ಎರಡನೆಯ ಕಂತು.

ಅಂಗಡಿಗೆ ಹೋಗಿ ಒಂದು ಬಲ್ಬ್ ಬೇಕೆಂದು ಕೇಳಿ ನೋಡಿ. ಅಂಗಡಿಯಾತ ನಿಮ್ಮ ಮನೆಯಲ್ಲಿ ಯಾವ ಕಂಪೆನಿಯ ಹೋಲ್ಡರ್ ಇದೆ ಎಂದು ಕೇಳುವುದಿಲ್ಲ. ಯಾಕೆಂದರೆ ಯಾವ ಕಂಪೆನಿಯ ಹೋಲ್ಡರ್ ಆದರೇನು, ಎಲ್ಲ ಬಲ್ಬ್‌ಗಳು ಎಲ್ಲ ಹೋಲ್ಡರ್‌ಗಳಲ್ಲಿ ಕೆಲಸ ಮಾಡುತ್ತವೆ. ಈಗ ಕನ್ನಡ ಮತ್ತು ಗಣಕ ಕ್ಷೇತ್ರಕ್ಕೆ ಬನ್ನಿ. ನಿಮ್ಮ ಮನೆಯ ಗಣಕದಲ್ಲಿ ಕಡತವೊಂದನ್ನು ತಯಾರಿಸಿ ಫ್ಲಾಪಿಯಲ್ಲಿ ತುಂಬಿಸಿ ಅದರ ಲೇಸರ್ ಮುದ್ರಣಕ್ಕೆ ಯಾವುದಾದರು ಡಿ.ಟಿ.ಪಿ. ಕೇಂದ್ರಕ್ಕೆ ತೆಗೆದುಕೊಂದು ಹೋಗಿ. ಆತ ನಿಮ್ಮನ್ನು ಖಂಡಿತವಾಗಿ ಕೇಳುವ ಪ್ರಶ್ನೆಯೆಂದರೆ “ನೀವು ಯಾವ ತಂತ್ರಾಂಶ ತಯಾರಿಸಿ ಕಡತವನ್ನು ತಯಾರು ಮಾಡಿದ್ದೀರಾ?”. ನೀವು ಬಳಸಿದ ತಂತ್ರಾಂಶ ಆತನ ಗಣಕದಲ್ಲಿ ಇಲ್ಲದಿರುವ ಸಂಭವವೇ ಹೆಚ್ಚು. ಕನ್ನಡದ ಯಾವುದೇ ತಂತ್ರಾಂಶವನ್ನು ಬಳಸಿ ತಯಾರಿಸಿದ ಕಡತವನ್ನು ಕನ್ನಡದ ಯಾವುದೇ ತಂತ್ರಾಂಶದಲ್ಲಿ ಓದಲು ಸಾಧ್ಯವಿರಬೇಕಲ್ಲವೇ, ಇಂಗ್ಲೀಷ್ ಭಾಷೆಯಲ್ಲಿದ್ದಂತೆ, ಎಂದು ನಿಮಗೆ ಅನ್ನಿಸಿರಬೇಕಲ್ಲವೇ? ಆದರೆ ನಿಜ ಪರಿಸ್ಥಿತಿ ಹಾಗೇನೂ ಇಲ್ಲ.

ಗಣಕದ ಮೂಲ ಭಾಷೆ ಕನ್ನಡವೂ ಅಲ್ಲ, ಇಂಗ್ಲೀಷ್ ಅಂತು ಅಲ್ಲವೇ ಅಲ್ಲ. ಗಣಕವು ಆಂತರಿಕವಾಗಿ ಬಳಸುವ ಭಾಷೆ ಒಂದು ಮತ್ತು ಸೊನ್ನೆ. ಆದುದರಿಂದಲೇ ಗಣಕಕ್ಕೆ ಡಿಜಿಟಲ್ ಕಂಪ್ಯೂಟರ್ ಎಂಬ ಹೆಸರಿರುವುದು. ಇಂಗ್ಲೀಷ್ ಭಾಷೆಯ “k” ಆಗಲಿ, ಕನ್ನಡದ “ಕ” ಆಗಲಿ, ಕೊನೆಗೆ ಅಂಕೆಗಳಾಗಿ ಮಾರ್ಪಟ್ಟು ಗಣಕದಲ್ಲಿ ಶೇಖರಣೆಗೊಳ್ಳುತ್ತವೆ.  ಇಂಗ್ಲೀಷ್ ಭಾಷೆ ಮತ್ತು ಭಾರತೀಯ ಭಾಷೆಗಳನ್ನು ಗಣಕದಲ್ಲಿ ಬಳಸುವಲ್ಲಿ ಒಂದು ಮುಖ್ಯ ವ್ಯತ್ಯಾಸವಿದೆ. ಇಂಗ್ಲೀಷಿನ ಯಾವುದೇ ಅಕ್ಷರವನ್ನು ತೆಗೆದುಕೊಳ್ಳಿ. ಅದನ್ನು ಗಣಕದಲ್ಲಿ ಸಂಗ್ರಹಿಸಿಡಲು ಮತ್ತು ತೋರಿಸಲು ಒಂದೇ ಸಂಕೇತ ಸಾಕಾಗುತ್ತದೆ. ಭಾರತೀಯ ಭಾಷೆಗಳ ಪರಿಸ್ಥಿತಿ ಬೇರೆ. “ಕ” ಎನ್ನುವ ಅಕ್ಷರವನ್ನು ಸಂಗ್ರಹಿಸಿಡಲು ಒಂದು ಸಂಕೇತ ಸಾಕು. ಆದರೆ “ಕ” ಎಂಬ (ಅಕ್ಷರದ) ಚಿತ್ರ ಮೂಡಿಬರಲು  ಮತ್ತು  ಎಂಬ ಎರಡು ಅಕ್ಷರಭಾಗಗಳ (glyph) ಜೋಡಣೆಯಾಗಬೇಕು. ಈ ಅಕ್ಷರಭಾಗಗಳು ಒಟ್ಟು ಸೇರಿ ಅಕ್ಷರಶೈಲಿ (font) ಆಗುತ್ತದೆ. ಇಂಗ್ಲೀಷ್ ಭಾಷೆಗೆ ಈ ಸಮಸ್ಯೆ ಇಲ್ಲ. “k” ಎನ್ನುವ ಅಕ್ಷರವನ್ನು ಸಂಗ್ರಹಿಸಿಡಲು ಒಂದು ಸಂಕೇತಾಕ್ಷರ ಸಾಕು. ಇದನ್ನು ತೋರಿಸಲು ಒಂದು ಅಕ್ಷರಭಾಗ ಸಾಕು. ಆದುದರಿಂದ ಇಂಗ್ಲೀಷ್ ಭಾಷೆಯಲ್ಲಿ ಸಂಗ್ರಹಣೆಯ ಸಂಕೇತ ಮತ್ತು ಅಕ್ಷರಶೈಲಿಯ ಅಕ್ಷರಭಾಗಗಳ  ಸಂಕೇತ ಒಂದೇ ಆಗಿರುತ್ತದೆ.

ಭಾರತೀಯ ಭಾಷೆಗಳಿಗೆ ಎರಡು ರೀತಿಯ ಸಂಕೇತಗಳು ಬೇಕು. ಸಂಗ್ರಹಣೆಗೆ ಒಂದು, ತೋರಿಕೆಗೆ ಇನ್ನೊಂದು. ಮಾಹಿತಿ ಸಂಗ್ರಹಣೆಗೆ ಭಾರತೀಯ ಭಾಷೆಗಳಿಗೆ ಒಂದು ಶಿಷ್ಟತೆ ಇದೆ. ಇದನ್ನು ಸಿದ್ಧಪಡಿಸಿ ಕಾನೂನುಬದ್ಧಗೊಳಿಸಿದವರು ಕೇಂದ್ರ ಸರಕಾರದವರು. ಇದನ್ನು ಇಸ್ಕಿ (ISCII = Indian Script Code for Information Interchange) ಎಂದು ಕರೆಯುತ್ತಾರೆ.

ಹಲವು ವರ್ಷಗಳಿಂದ ಕನ್ನಡ ಮತ್ತು ಇತರ ಭಾಷೆಯ ಡಿ.ಟಿ.ಪಿ. ತಂತ್ರಾಂಶಗಳನ್ನು ತಯಾರಿಸಿ ಮಾರುತ್ತಿದ್ದ ಎಲ್ಲ ಕಂಪೆನಿಗಳು ಅಕ್ಷರಶೈಲಿಗಳಿಗೆ (ಅವುಗಳಲ್ಲಿ ಬಳಸಿರುವ ಅಕ್ಷರಭಾಗಗಳಿಗೆ) ತಮ್ಮದೇ ಸಂಕೇತವನ್ನು ರೂಪಿಸಿಕೊಂಡಿದ್ದರು. ಇವುಗಳಲ್ಲಿ ಒಮ್ಮತವಿರಲಿಲ್ಲ. ಅದೂ ಅಲ್ಲದೆ ಯಾವ ತಂತ್ರಾಂಶವೂ ಬೆರಳಚ್ಚು ಮಾಡಿದ ಮಾಹಿತಿಯನ್ನು ಸಂಗ್ರಹಣೆಯ ಸಂಕೇತಗಳಿಗೆ (ಇಸ್ಕಿಗೆ) ಮಾರ್ಪಾಡು ಮಾಡಿ ಸಂಗ್ರಹಿಸಿಡುವ ಸವಲತ್ತನ್ನು ನೀಡುತ್ತಿರಲಿಲ್ಲ. ಎಲ್ಲ ತಂತ್ರಾಂಶಗಳು ಬೆರಳಚ್ಚು ಮಾಡಿದ ಮಾಹಿತಿಯನ್ನು ಅಕ್ಷರಶೈಲಿಯ ಸಂಕೇತಗಳಲ್ಲೇ ಸಂಗ್ರಹಿಸಿಡುತ್ತಿದ್ದವು. ಇದರಿಂದಾಗಿ ಒಂದು ತಂತ್ರಾಂಶವನ್ನು ಬಳಸಿ ತಯಾರಿಸಿದ ಮಾಹಿತಿಯನ್ನು ಇನ್ನೊಂದು ತಂತ್ರಾಂಶದಲ್ಲಿ ಓದಲು ಆಗುತ್ತಿರಲಿಲ್ಲ. ಪ್ರತಿಯೊಬ್ಬ ತಂತ್ರಾಂಶ ತಯಾರಕನೂ ಮಾಹಿತಿಯನ್ನು ಅಕ್ಷರಶೈಲಿ ಮತ್ತು ಇಸ್ಕಿಗಳಿಗೆ ಪರಸ್ಪರ ಬದಲಾವಣೆ ಮಾಡುವ ಸವಲತ್ತನ್ನು ನೀಡಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಒಂದು ತಂತ್ರಾಂಶದಲ್ಲಿ ಬೆರಳಚ್ಚು ಮಾಡಿ ಅದನ್ನು ಇಸ್ಕಿಗೆ ಪರಿವರ್ತಿಸಿ ನಂತರ ಅದನ್ನು ಇನ್ನೊಂದು ತಂತ್ರಾಂಶದಲ್ಲಿ ಓದಿ ಆ ತಂತ್ರಾಂಶದ ಅಕ್ಷರಶೈಲಿಗೆ ಪರಿವರ್ತಿಸಿ ನೋಡಬಹುದಿತ್ತು. ಆದರೆ ನಿಜ ಸ್ಥಿತಿ ಹಾಗಿರಲಿಲ್ಲ.

ಈ ಸಮಸ್ಯೆಯನ್ನು ಮನಗಂಡ ಕರ್ನಾಟಕ ಸರಕಾರವು ಗಣಕಗಳಲ್ಲಿ ಕನ್ನಡ ಬಾಷೆಯ ಅಳವಡಿಕೆಗೆ ಒಂದು ಶಿಷ್ಟತೆಯನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಕನ್ನಡದ ಅಕ್ಷರಭಾಗಗಳಿಗೆ (font glyph set) ಒಂದು ಶಿಷ್ಟ ಸಂಕೇತ ಹಾಗು ಸಮಾನ ಕೀಲಿಮಣೆ ವಿನ್ಯಾಸವನ್ನು ಸಿದ್ಧಪಡಿಸಿತು. ಸರಕಾರದ ಈ ಶಿಷ್ಟತೆಗಳಿಗನುಗುಣವಾಗಿ ಸರಕಾರವೇ ಕನ್ನಡ ಆಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಬರಗೂರು ರಾಮಚಂದ್ರಪ್ಪನವರ ವಿಶೇಷ ಆಸಕ್ತಿಯಿಂದ ಕನ್ನಡ ಗಣಕ ಪರಿಷತ್ತಿನ ಸಹಯೋಗದಿಂದ “ನುಡಿ” ಹೆಸರಿನ ಸಮಾನ ತಂತ್ರಾಂಶವೊಂದನ್ನು ತಯಾರಿಸಿ ಬಿಡುಗಡೆ ಮಾಡಿತು. ಈ ತಂತ್ರಾಂಶ ಕನ್ನಡಿಗರಿಗೆ ಉಚಿತವಾಗಿ ದೊರೆಯತ್ತದೆ. ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಂತರಜಾಲ ತಾಣದಲ್ಲಿ (www.bangaloreit.com) ಇದು ಲಭ್ಯ. ಯಾರು ಬೇಕಾದರು ಇದನ್ನು ಪ್ರತಿ ಮಾಡಿಕೊಂಡು ಉಪಯೋಗಿಸಬಹುದು.

“ನುಡಿ”ಯಲ್ಲಿ ಕನ್ನಡದ ಕೀಲಿಮಣೆ ತಂತ್ರಾಂಶ (keyboard driver), ಅಕ್ಷರಶೈಲಿ ಮತ್ತು ಗಣಕ ಕ್ರಮವಿಧಿ ತಯಾರಕರಿಗೆ ತಂತ್ರಾಂಶ ತಯಾರಿಯ ಸವಲತ್ತುಗಳನ್ನು (software development toolkit) ನೀಡಲಾಗಿದೆ. “ನುಡಿ” ಉಪಯೋಗಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಆಧಾರಿತ ಕ್ರಮದಲ್ಲಿ ಮಾಹಿತಿಯನ್ನು ಅಕಾರಾದಿಯಾಗಿ ವಿಂಗಡಣೆ ಮಾಡಬಹುದು. ಭಾರತೀಯ ಭಾಷೆಗಳಲ್ಲೇ ಪ್ರಪ್ರಥಮ ಬಾರಿಗೆ ಈ ರೀತಿಯ ಸೌಕರ್ಯವೊಂದನ್ನು ನೀಡಲಾಗುತ್ತಿದೆ. ಭಾರತದ ಯಾವುದೇ ರಾಜ್ಯ ಸರಕಾರವು ತನ್ನದೇ ಆದ ಮಾದರಿ ತಂತ್ರಾಂಶವನ್ನು ಹೊಂದಿರುವುದೂ ಇದೇ ಪ್ರಥಮ. “ನುಡಿ”ಯನ್ನು ಉಪಯೋಗಿಸಿ ಕನ್ನಡದಲ್ಲಿ ದತ್ತಸಂಚಯಗಳ (databases) ನಿರ್ಮಾಣ, ದತ್ತ ಸಂಸ್ಕರಣೆಯ ಕ್ರಮವಿಧಿಗಳ ರಚನೆ (database programming) ಸಾಧ್ಯ.

ನುಡಿ ತಂತ್ರಾಂಶವನ್ನು ಬಳಸಿ ಮಾಹಿತಿಯನ್ನು ಅಕ್ಷರಶೈಲಿಯಿಂದ ಸಂಗ್ರಹಣೆಯ ಸಂಕೇತ ಅಂದರೆ ಇಸ್ಕಿಗೆ ಬದಲಿಸಬಹುದು. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಇಸ್ಕಿಯನ್ನು ಓದಬಲ್ಲ ಇತರ ತಂತ್ರಾಂಶವನ್ನು ಬಳಸಿ ಓದಬಹುದು. ಸಿಡಾಕ್‌ನವರ ಐ.ಎಸ್.ಎಂ. ತಂತ್ರಾಂಶ ಮತ್ತು ಮೈಕ್ರೋಸಾಫ್ಟ್‌ನವರ ಆಫೀಸ್ ಎಕ್ಸ್‌ಪಿಗಳಲ್ಲಿ ಇಸ್ಕಿ ಮಾಹಿತಿಯನ್ನು ಓದುವ ಸವಲತ್ತನ್ನು ನೀಡಿದ್ದಾರೆ.

ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವ ಬರಹ ತಂತ್ರಾಂಶದ ೫.೦ನೇ ಆವೃತ್ತಿಯಲ್ಲಿ ಶಿಷ್ಟತೆಯನ್ನು ಅಳವಡಿಸಲಾಗಿದೆ. ಅಂದರೆ ಬರಹದಲ್ಲಿ ತಯಾರಿಸಿದ ಕಡತವನ್ನು ನುಡಿಯಲ್ಲೂ, ನುಡಿಯಲ್ಲಿ ತಯಾರಿಸಿದ ಕಡತವನ್ನು ಬರಹದಲ್ಲೂ ಓದಬಹುದು.

ಶಿಷ್ಟತೆಯಲ್ಲಿ ಮುಖ್ಯವಾಗಿ ಮೂರು ವಿಧ -ಕೀಲಿಮಣೆಯ ವಿನ್ಯಾಸ, ಮಾಹಿತಿ ಸಂಗ್ರಹಣೆಯ ಸಂಕೇತಗಳು ಮತ್ತು ಅಕ್ಷರಶೈಲಿಯ ಅಕ್ಷರಭಾಗಗಳ ಸಂಕೇತಗಳು. ಮಾಹಿತಿ ಸಂಗ್ರಹಣೆಗೆ ಇಸ್ಕಿ ಮತ್ತು ಯುನಿಕೋಡ್ ಇವೆ. ಯುನಿಕೋಡ್ ಬಗ್ಗೆ ಪ್ರತ್ಯೇಕ ಲೇಖನವನ್ನು ಮುಂದಿನ ಸಂಚಿಕೆಗಳಲ್ಲಿ ನೀಡಲಾಗುವುದು. ಸರಕಾರವು ಏಕರೂಪ ಕೀಲಿಮಣೆಯ ವಿನ್ಯಾಸವನ್ನು ನಿಗದಿಪಡಿಸಿ ನುಡಿ ತಂತ್ರಾಂಶದಲ್ಲಿ ಅಳವಡಿಸಿದೆ. ಕೀಲಿಮಣೆಯ ವಿನ್ಯಾಸವನ್ನು ಆಯಾ ಬಳಕೆದಾರರಿಗೆ ಬಿಟ್ಟರೆ ತಪ್ಪೇನಿಲ್ಲ. ನಮಗೆ ಮುಖ್ಯವಾಗಿ ಬೇಕಿರುವುದು ಮಾಹಿತಿಯ ಸಂಗ್ರಹಣೆ ಮತ್ತು ಸಂವಹನೆಗೆ ಶಿಷ್ಟತೆ.

–ಡಾ. ಯು. ಬಿ. ಪವನಜ

(ಕೃಪೆ: ವಿಜಯ ಕರ್ನಾಟಕ)

ನೋಡಿ:

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೨

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೩

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೪

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೫

The post ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ – ೨ first appeared on Vishva Kannada.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧
ಒಂದು ಸೊನ್ನೆ – ೫ (೧೫-೮-೨೦೦೩)

ಅಕ್ಷರಗಳಿಂದ ಆರಂಭ

ಅಕ್ಷರಾಭ್ಯಾಸವಿಲ್ಲದವನು ಅವಿದ್ಯಾವಂತ ಎಂದೆನಿಸಿಕೊಳ್ಳುತ್ತಿದ್ದ ಕಾಲ ಹೋಯಿತು. ಗಣಕ ಗೊತ್ತಿಲ್ಲದವನು ಅವಿದ್ಯಾವಂತ ಎನಿಸಿಕೊಳ್ಳುವ ಕಾಲ ಬಂದಿದೆ. ಗಣಕಗಳಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ಬಗ್ಗೆ ವಿವರವಾದ ಲೇಖನಮಾಲೆಯ ಮೊದಲ ಕಂತು.

ಹಾರ್ಮೋನಿಯಂ, ಪಿಟೀಲು, ಕೀಬೋರ್ಡ್, ಸಾಕ್ಸೋಫೋನ್, ಗಿಟಾರ್, ಮಾಂಡೋಲಿನ್ – ಇವುಗಳು ವಿದೇಶೀ ಮೂಲದ ಸಂಗೀತ ಉಪಕರಣಗಳು. ಆದರೆ ಇವು ಭಾರತೀಯ ಸಂಗೀತದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿವೆ. ನಾವು ದಿನನಿತ್ಯ ಬಳಸುವ ಪೆನ್ನು ಕೂಡ ವಿದೇಶದ್ದೇ. ಆದರೆ ಅದರಲ್ಲಿ ನಾವು ಬರೆಯುವ ಭಾಷೆ ನಮ್ಮ ಕಸ್ತೂರಿ ಕನ್ನಡ. ಇದನ್ನೇ ರಾಷ್ಟ್ರಕವಿ ಗೋವಿಂದ ಪೈಯವರು “ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡ ನುಡಿಸು” ಎಂದು ಕರೆದಿದ್ದಾರೆ. ಇದೇ ತತ್ವವನ್ನು ನಾವೀಗ ಅನುಸರಿಸಲು ಹೊರಟಿರುವುದು ಇಪ್ಪತ್ತನೇ ಶತಮಾನದ ಅತ್ಯದ್ಭುತ ಆವಿಷ್ಕಾರವಾಗಿರುವ ಗಣಕದಲ್ಲಿ.

ಪದಸಂಸ್ಕರಣೆ ಮತ್ತು ಪುಟವಿನ್ಯಾಸ (ಡಿ.ಟಿ.ಪಿ.)

ಗಣಕಗಳಲ್ಲಿ ಕನ್ನಡದ ಬಳಕೆ ಸುಮಾರು ಎರಡೂವರೆ ದಶಕಗಳ ಹಿಂದೆ ಆರಂಭವಾಯಿತು. ಪ್ರಾರಂಭದಲ್ಲಿ ಕನ್ನಡದ ಬಳಕೆ ಆಗಿರುವುದು ಮುದ್ರಣ ಕ್ಷೇತ್ರದಲ್ಲಿ. ಕೈಬರೆಹದಿಂದ ಆರಂಭವಾದ ಕನ್ನಡ ಮುದ್ರಣವು ಸೈಕ್ಲೋಸ್ಟೈಲ್, ಲೆಟರ್ ಪ್ರೆಸ್‌ಗಳನ್ನು ದಾಟಿ ಈಗ ಎಲ್ಲರೂ ಬಳಸುತ್ತಿರುವ ಆಫ್‌ಸೆಟ್ ಮುದ್ರಣದ ಹಂತಕ್ಕೆ ಬಂತು. ಆಫ್‌ಸೆಟ್ ಮುದ್ರಣಕ್ಕೆ ಪುಟವಿನ್ಯಾಸ ಮಾಡಲು ಗಣಕ ಬೇಕು.

ಪದಸಂಸ್ಕರಣವು (word-processing) ಇದರಲ್ಲಿಯ ಮೊದಲ ಹಂತ. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಕ್ರಮವಿಧಿಗಳಲ್ಲಿ ಹಲವು ಸೌಕರ್ಯಗಳಿವೆ. ಒಮ್ಮೆ ಬರೆದ ಪತ್ರ ಯಾ ಲೇಖನವನ್ನು ಪುನಃ ಪುನಃ ತಿದ್ದಬಹುದು; ತಿದ್ದಿ ಮುದ್ರಿಸಬಹುದು; ಇಡೀ ವಾಕ್ಯ ಅಥವಾ ಪಾರಾವನ್ನು ಒಂದು ಜಾಗದಿಂದ ಎತ್ತಿ ಇನ್ನೊಂದು ಕಡೆಗೆ ಬದಲಾಯಿಸಬಹುದು; ಒಂದೇ ಪತ್ರವನ್ನು ಹಲವಾರು ವ್ಯಕ್ತಿಗಳಿಗೆ ಅವರವರ ಹೆಸರು ವಿಳಾಸ ಸೇರಿಸಿ ಕಳುಹಿಸಬಹುದು. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. (desktop publishing). ಪಠ್ಯದ ಜೊತೆ ಚಿತ್ರಗಳನ್ನು ಸೇರಿಸುವುದು, ಅಕ್ಷರದ ಗಾತ್ರವನ್ನು ಸಾವಿರದೊಂದು ಇಂಚಿನಷ್ಟು ನಿಯಂತ್ರಣೆ ಮಾಡುವುದು, ತಲೆಬರಹ, ಪಾರಾಗಳ ನುಡುವಿನ ಗಾತ್ರ ಮತ್ತು ಅಂತರ, ಹೀಗೆ ಹಲವು ಸೌಕರ್ಯಗಳು ಇಲ್ಲಿವೆ. ಈಗ ಎಲ್ಲ ಪುಸ್ತಕಗಳು ಇದೇ ವಿಧಾನದಿಂದ ತಯಾರಾಗುತ್ತಿವೆ.

ಕೆ.ಪಿ. ರಾವ್ ಅವರ ಸೇಡಿಯಾಪು

ತಂತ್ರಾಂಶ ಪರಿಣತ ಕೆ.ಪಿ ರಾವ್ ಅವರು ಮಾರುಕಟ್ಟೆಯಲ್ಲಿರುವ ಹಲವು ತಂತ್ರಾಂಶಗಳಲ್ಲಿ ಬಳಸುತ್ತಿದ್ದ ಕನ್ನಡದ ವಿವಿಧ ಕೀಲಿಮಣೆ ವಿನ್ಯಾಸಗಳಿಗೆ ಏಕರೂಪತೆ ತರಲು ಪ್ರಯತ್ನಿಸಿದರು. ಇಂಗ್ಲೀಷ್ ಭಾಷೆಯ ೨೬ ಅಕ್ಷರಗಳನ್ನು ಮಾತ್ರವೇ ಬಳಸಿ ಕನ್ನಡದ ಎಲ್ಲ ಅಕ್ಷರಗಳನ್ನು ಊಡಿಸುವಂತೆ ಅವರು ತಮ್ಮ ವಿನ್ಯಾಸ ರೂಪಿಸಿದರು. ಇದರ ಸುಧಾರಿತ ರೂಪವೇ ಈಗ “ನುಡಿ” ತಂತ್ರಾಂಶದಲ್ಲಿ ಅಳವಡಿಸಲಾಗಿರುವ ಕೀಲಿಮಣೆಯ ವಿನ್ಯಾಸ. ಅವರು “ಸೇಡಿಯಾಪು” ಹೆಸರಿನ ಡಾಸ್‌ನಲ್ಲಿ ಕೆಲಸ ಮಾಡುವ ತಂತ್ರಾಂಶವನ್ನೂ ತಯಾರಿಸಿ ಉಚಿತವಾಗಿ ಹಂಚಿದ್ದರು.

ಕನ್ನಡದ ಅಕ್ಷರಗಳು

ಗಣಕದಲ್ಲಿ ಕನ್ನಡದ ಬಳಕೆಗೆ ಕನ್ನಡದ ಅಕ್ಷರಶೈಲಿಗಳು ಬೇಕು. ಇದನ್ನು ಗಣಕದ ಪರಿಭಾಷೆಯಲ್ಲಿ ಫಾಂಟ್ ಎನ್ನುತ್ತಾರೆ. ಅಕ್ಷರಶೈಲಿಯೊಂದಿದ್ದರೆ ಆಗಲಿಲ್ಲ. ಇದಕ್ಕೊಂದು ಕೀಲಿಮಣೆಯ ತಂತ್ರಾಂಶ ಬೇಕು. ಉದಾಹರಣೆಗೆ ಇಂಗ್ಲೀಷಿನ “p” ಎಂಬ ಕೀಲಿಯನ್ನು ಒತ್ತಿದರೆ ಗಣಕಕ್ಕೆ ಕನ್ನಡದ “ಪ” ಎಂಬ ಅಕ್ಷರದ ಸಂಕೇತವನ್ನು ಈ ತಂತ್ರಾಂಶ ಕಳುಹಿಸುತ್ತದೆ. ಸುಮಾರು ಎರಡೂವರೆ ದಶಕದ ಹಿಂದೆ ಹಲವು ಅಕ್ಷರಶೈಲಿ ಮತ್ತು ಕೀಲಿಮಣೆಯ ತಂತ್ರಾಂಶಗಳು ತಯಾರಾದವು. ಕೇಂದ್ರ ಸರಕಾರದ ಸಿ-ಡಾಕ್‌ನವರು (CDAC = Centre for Development of Advanced Computing) ಮೈಕ್ರೋಸಾಫ್ಟ್ ಡಾಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಅಳವಡಿಸಿದರು. ಇದನ್ನು ಬಳಸಲು ಗಣಕದೊಳಗೆ ಒಂದು ಹಾರ್ಡ್‌ವೇರ್ ಕಾರ್ಡನ್ನು ಸೇರಿಸಬೇಕಾಗಿತ್ತು. ಹಲವು ವರ್ಷಗಳ ನಂತರ ಅವರು ಇದರ ವಿಂಡೋಸ್ ಆವೃತ್ತಿಯನ್ನು ತಯಾರಿಸಿದರು. ಇದನ್ನು ಬಳಸಲು ಹಾರ್ಡ್‌ವೇರ್ ಕಾರ್ಡಿನ ಅಗತ್ಯವಿಲ್ಲ. ಎಂಬತ್ತರ ದಶಕದಲ್ಲಿ ಶ್ರೀಲಿಪಿ, ಆಕೃತಿ, ಶಬ್ದರತ್ನ, ವಿನ್‌ಕೀ, ಇತ್ಯಾದಿ ಹಲವು ಖಾಸಗಿ ಕಂಪೆನಿಗಳು ಕನ್ನಡದ ಅಕ್ಷರಶೈಲಿ ಮತ್ತು ಕೀಲಿಮಣೆಯ ತಂತ್ರಾಂಶಗಳನ್ನು ತಯಾರಿಸಿ ಮಾರಲು ಪ್ರಾರಂಭಿಸಿದರು.

ಸಪ್ತಸಾಗರಗಳಾಚೆ

ಅಮೇರಿಕಾದಲ್ಲಿ ಕನ್ನಡ ಚಟುವಟಿಕೆಗಳನ್ನು ಹುಟ್ಟುಹಾಕಿ ಬೆಳಸಲು ಕಾರಣೀಭೂತರಾದ ಶಿಕಾರಿಪುರ ಹರಿಹರೇಶ್ವರ ಅವರು “ಅಮೆರಿಕನ್ನಡ” ಎಂಬ ಪತ್ರಿಕೆಯನ್ನು ಸೃಷ್ಟಿಸಿ ನಡೆಸಿಕೊಂಡು ಬರುತ್ತಿದ್ದರು. ಅವರು ಈ ಪತ್ರಿಕೆ ಮುದ್ರಿಸಲು ಕಸ್ತೂರಿ ರಂಗಾಚಾರ್ ಅವರು ತಯಾರಿಸಿದ “ಕಸ್ತೂರಿ” ಎಂಬ ತಂತ್ರಾಂಶವನ್ನು ಉಪಯೋಗಿಸಿದರು. ಇದು ನಡೆದುದು ೧೯೮೪-೮೫ರಲ್ಲಿ. ಸುಮಾರು ಅದೇ ಕಾಲದಲ್ಲಿ ಅಮೇರಿಕಾದಲ್ಲೇ ನೆಲೆಸಿದ್ದ ವಿಶ್ವೇಶ್ವರ ದೀಕ್ಷಿತ್ ಅವರೂ ಒಂದು ಕನ್ನಡ ತಂತ್ರಾಂಶವನ್ನು ತಯಾರಿಸಿದ್ದರು. ಲಾಸ್ ಏಂಜಲಿಸ್‌ನಲ್ಲಿರುವ ದೀಕ್ಷಿತರ ಮನೆಗೆ ಹೋದಾಗ (೧೯೯೯) ಈ ತಂತ್ರಾಂಶ ಕೆಲಸ ಮಾಡುವುದನ್ನು ನಾನು ಪ್ರತ್ಯಕ್ಷ ನೋಡಿದ್ದೇನೆ. ಈ ಎರಡೂ ತಂತ್ರಾಂಶಗಳು ಮೈಕ್ರೋಸಾಫ್ಟ್ ಡಾಸ್ ಮತ್ತು ವಿಂಡೋಸ್‌ಗಳಲ್ಲಿ ಕೆಲಸ ಮಾಡುತ್ತಿದ್ದವು. ಹಲವು ವರ್ಷಗಳ ನಂತರ (೧೯೯೬-೯೭) ಜಗದೀಶ್ ಮತ್ತು ವೆಂಕಟೇಶ್ ಎಂಬ ಉತ್ಸಾಹಿಗಳು ಯುನಿಕ್ಸ್ ಮತ್ತು ಇತರ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಕೆಲಸ ಮಾಡಬಲ್ಲ “ಕಲೆ” (KALE = KAnnada Lipi Enthusiasists) ಎಂಬ ತಂತ್ರಾಂಶವನ್ನು ತಯಾರಿಸಿದ್ದರು. ಇದು ವೈeನಿಕ ಲೇಖನ ತಯಾರಿಸಲು ಬಳಸುತ್ತಿದ್ದ ಟೆಕ್‌ನ್ನು (TeX) ಉಪಯೋಗಿಸಿ ಇಂಗ್ಲೀಷ್ ಲಿಪಿಯಲ್ಲಿ ಬರೆದುದನ್ನು ಪೋಸ್ಟ್‌ಸ್ಕ್ರಿಪ್ಟ್ ಕಡತವನ್ನಾಗಿಸಿ ಮುದ್ರಿಸಿ ಕೊಡುತ್ತಿತ್ತು. ಕೆಲವು ವಿಜ್ಞಾನದ ವಿದ್ಯಾರ್ಥಿಗಳನ್ನು ಬಿಟ್ಟರೆ ಇತರರು ಇದನ್ನು ಬಳಸಿದ್ದು ಗೊತ್ತಿಲ್ಲ. ಇತ್ತೀಚಿಗೆ ತುಂಬ ಜನಪ್ರಿಯವಾಗಿರುವ ಕನ್ನಡ ತಂತ್ರಾಂಶ “ಬರಹ“. ಇದನ್ನು ತಯಾರಿಸಿದವರು ಅಮೇರಿಕ ವಾಸಿಯಾಗಿರುವ ಶೇಶಾದ್ರಿವಾಸು ಅವರು. ಬರಹ ಅತಿ ಜನಪ್ರಿಯವಾಗಲು ಹಲವು ಕಾರಣಗಳಿವೆ -ಮುದ್ದಾದ ಅಕ್ಷರಶೈಲಿಗಳಿವೆ, ವಿಂಡೋಸ್‌ನಲ್ಲಿ ಕೆಲಸ ಮಾಡುತ್ತದೆ, ಇದು ಉಚಿತ, ಇಂಗ್ಲೀಷ್ ಮೂಲಕ ಕನ್ನಡವನ್ನು ಊಡಿಸುವುದು (ಅನಿವಾಸಿಗಳಿಗೆ ಇದು ಅನುಕೂಲ), ಶಿಷ್ಟತೆಯನ್ನು ಪಾಲಿಸುತ್ತಿದೆ, ತಂತ್ರಾಂಶ ತಯಾರಕರಿಗೆ ಬೇಕಾದ ಸವಲತ್ತುಗಳೂ ಇವೆ, ಯುನಿಕೋಡ್ ಅವೃತ್ತಿ ಲಭ್ಯವಿದೆ, ಇತ್ಯಾದಿ.

ನುಡಿ

ಕರ್ನಾಟಕ ಸರಕಾರದ ಸ್ವಾಮ್ಯಕ್ಕೊಳಪಟ್ಟ “ನುಡಿ” ತಂತ್ರಾಂಶವು ಸರಕಾರವು ಅಕ್ಷರಶೈಲಿ ಮತ್ತು ಕೀಲಿಮಣೆಗೆ ನಿಗದಿಪಡಿಸಿದ ಶಿಷ್ಟತೆಗೆ ಅನುಗುಣವಾಗಿ ಕನ್ನಡ ಗಣಕ ಪರಿಷತ್ತು ತಯಾರಿಸಿರುವ ತಂತ್ರಾಂಶ. ಇದರ ಜೊತೆ ಹಲವು ಅಕ್ಷರಶೈಲಿಗಳು ಮಾತ್ರವಲ್ಲದೆ ತಂತ್ರಾಂಶ ತಯಾರಕರಿಗೆ ಬೇಕಾದ ಉಪಕರಣಗಳೂ (SDK = Software Development Kit) ಉಚಿತವಾಗಿ ಲಭ್ಯ. ಇದು ವಿಂಡೋಸ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಇದರ ಯುನಿಕೋಡ್ ಆವೃತ್ತಿ ಇನ್ನೂ ತಯಾರಾಗಿಲ್ಲ.

ಲಿನಕ್ಸ್‌ನಲ್ಲಿ ಕನ್ನಡ

ಜಗತ್ತಿನಾದ್ಯಂತ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಮುಕ್ತ ಕಾರ್ಯಾಚರಣ ವ್ಯವಸ್ಥೆ ಲಿನಕ್ಸ್. ಕೆಲವು ಉತ್ಸಾಹಿಗಳು ಇದರಲ್ಲಿ ಕನ್ನಡವನ್ನು ಅಳವಡಿಸುತ್ತಿದ್ದಾರೆ. ಇದು ಇನ್ನೂ ಪೂರ್ಣವಾಗಿ ಜನಸಾಮಾನ್ಯರ ಬಳಕೆಗೆ ದೊರೆಯುವ ಹಂತಕ್ಕೆ ಬಂದಿಲ್ಲ (೨೦೦೩ರಲ್ಲಿ ಬರೆದದ್ದು).

ಗಣಕದಲ್ಲಿ ಕನ್ನಡವನ್ನು ಬಳಸಲು ಇದ್ದ ಮುಖ್ಯ ತೊಂದರೆ ಎಂದರೆ ಅಕ್ಷರಶೈಲಿ ಮತ್ತು ಕೀಲಿಮಣೆಗಳದ್ದು. ಅವು ಸಂಪೂರ್ಣವಾಗಿ ಪರಿಹಾರವಾಗಿವೆ. ಕನ್ನಡ ಬಳಸಲು ಕೆಲವರಿಗೆ ಈಗಲೂ ಇರುವ ಕೊರತೆಯೆಂದರೆ “ಇಚ್ಛಾಶಕ್ತಿ”. ತನ್ನಿಚ್ಛೆಗೂ ಬೋಳುತಲೆಗೂ ಮದ್ದಿಲ್ಲ.

– ಡಾ. ಯು. ಬಿ. ಪವನಜ

(ಕೃಪೆ: ವಿಜಯ ಕರ್ನಾಟಕ)

ನೋಡಿ:

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೨

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೩

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೪

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೫

The post ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧ first appeared on Vishva Kannada.

ಜಾಲಸೇವೆಯೋ ಸೇವೆಯ ಬಲೆಯೋ?
[ವಿಜಯ ಕರ್ನಾಟಕ ಪತ್ರಿಕೆಯ “ಒಂದು ಸೊನ್ನ” ಅಂಕಣದಲ್ಲಿ ಪ್ರಕಟವಾದ ಲೇಖನ]

ಒಂದು ಸೊನ್ನೆ – ೪ (೧೮-೦೭-೨೦೦೩)

ಅಂತರಜಾಲವೊಂದು ಅಗಾಧ ಮಾಹಿತಿಯ ಭಂಡಾರ. ಅಂತರಜಾಲದ ಸಂಪರ್ಕ ಪ್ರತಿಯೊಬ್ಬನಿಗೂ ಅಗತ್ಯವಾಗುತ್ತಿದೆ. ಭಾರತಕ್ಕೆ ಅಂತರಜಾಲ ಸಂಪರ್ಕ ೧೯೯೦ರಲ್ಲಿ ಕಾಲಿಟ್ಟಿತು. ಪ್ರಾರಂಭದಲ್ಲಿ ವೈeನಿಕ ಪ್ರಯೋಗಶಾಲೆಗಳಿಗೆ ಮಾತ್ರ ಈ ಸೌಲಭ್ಯ ದೊರೆಯಿತು. ೧೯೯೫ರಲ್ಲಿ ವಿದೇಶ ಸಂಚಾರ ನಿಗಮ ನಿಯಮಿತದ (ವಿಎಸ್‌ಎನ್‌ಎಲ್, ವಿಸನಿನಿ) ಮೂಲಕ ಜನಸಾಮಾನ್ಯರಿಗೂ ಅಂತರಜಾಲ ಸಂಪರ್ಕ ದೊರೆಯುವಂತಾಯಿತು. ವಿಸನಿನಿ ಭಾರತ ಸರಕಾರದ ನಿಯಂತ್ರಣಕ್ಕೊಳಪಟ್ಟ ಕಂಪೆನಿ. ಸರಿಯಾಗಿ ನೋಡಿದರೆ ಸರಕಾರದ್ದೇ ಒಂದು ವಿಭಾಗ. ಆರಂಭದಲ್ಲಿ ಅದಕ್ಕೆ ೪ ಪ್ರಮುಖ ನಗರಗಳಲ್ಲಿ ಮಾತ್ರ ಅಂತರಜಾಲ ಸಂಪರ್ಕ ನೀಡಲು ಅನುಮತಿ ನೀಡಲಾಗಿತ್ತು. ಇದಕ್ಕೆ ಅನುಮತಿ ನೀಡಿದ್ದು ೧೮೮೫ರ ಭಾರತ ದೂರಸಂಪರ್ಕ ಕಾನೂನಿನಡಿ. ಅಂದರೆ ಬ್ರಿಟಿಷರ ಕಾಲದ ಕಾನೂನಿನ ಪ್ರಕಾರ. ಈ ಕಾನೂನನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿದ ವಿಸನಿನಿ ಬೇರೆ ಯಾರೂ ಅಂತರಜಾಲ ಸಂಪರ್ಕ ಸೇವೆ ನೀಡದಂತೆ ವರ್ಷಗಳ ಕಾಲ ನೋಡಿಕೊಂಡಿತು. ಈ ಏಕಸ್ವಾಮ್ಯದಿಂದಾಗಿ ಭಾರತದಲ್ಲಿ ಅತಿ ಕೆಟ್ಟ ಅಂತರಜಾಲ ಸಂಪರ್ಕ ವ್ಯವಸ್ಥೆ ಇತ್ತು.

ಅಂತರಜಾಲ ಸಂಪರ್ಕ ಸೇವೆ (ISP = Internet Service Provider) ನೀಡಲು ವಿಸನಿನಿಗೆ ಇದ್ದ ಏಕಸ್ವಾಮ್ಯವನ್ನು ಭಾರತ ಸರಕಾರ ೧೯೯೮ ಅಕ್ಟೋಬರ್ ತಿಂಗಳಲ್ಲಿ ಕಿತ್ತುಹಾಕಿತು. ಹಲವು ಖಾಸಗಿ ಕಂಪೆನಿಗಳು ಈ ಹೊಸ ಉದ್ದಿಮೆಗೆ ಧುಮುಕಿದವು. ಹಲವು ಕಂಪೆನಿಗಳು ಅಷ್ಟೇ ರಭಸದಲ್ಲಿ ಮುಳುಗಿಯೂ ಹೋದವು. ಈ ಕಂಪೆನಿಗಳಿಗೆ ವಿಸನಿನಿಗೆ ಇದ್ದ ಸರಕಾರೀ ರಕ್ಷಣೆಯ ವಿರುದ್ಧ ಸ್ಪರ್ಧಿಸಿ ಗೆಲ್ಲಲು ಆಗಲಿಲ್ಲ. ಉತ್ತಮ ಶ್ರೀಮಂತ ಕಂಪೆನಿಗಳ ಸಹಾಯಹಸ್ತ ಇದ್ದ ದೊಡ್ಡ ದೊಡ್ಡ ಕಂಪೆನಿಗಳು ಬದುಕುಳಿದವು. ಖಾಸಗಿ ಕಂಪೆನಿಗಳ ಸ್ಪರ್ಧೆಯಿಂದಾಗಿ ಅಂತರಜಾಲ ಸಂಪರ್ಕ ಸೇವೆ ಭಾರತದಲ್ಲಿ ಹಿಂದಿದ್ದುದಕ್ಕಿಂತ ಸುಧಾರಣೆಗೊಂಡವು. ವಿಸನಿನಿ ಮಾತ್ರವೇ ಇದ್ದಾಗ ಎಷ್ಟು ಸಲ ಫೋನ್ ಡಯಲ್ ಮಾಡಿದರೂ ಸಂಪರ್ಕವೇ ಸಿಗುತ್ತಿರಲಿಲ್ಲ. ಈಗ ಸ್ಥಿತಿ ಹಾಗಿಲ್ಲ. ಹಿಂದಿನದಕ್ಕೆ ಹೋಲಿಸಿದರೆ ಪರಿಸ್ಥಿತಿ ಉತ್ತಮಗೊಂಡಿದೆಯೆಂದೇ ಹೇಳಬಹುದು. ಆಗಿನ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವ ಮಂದಿ ಈಗಿನ ಕಾಲ ಚೆನ್ನಾಗಿದೆ ಎಂದೇ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ.

ಸಮಯ ಕಳೆದಂತೆ ಅಂತರಜಾಲ ಸಂಪರ್ಕಕ್ಕೆ ಕೊಡಬೇಕಾದ ಬೆಲೆಯೂ ಕಡಿಮೆಯಾಗಿದೆ. ಡಯಲ್‌ಅಪ್ ಸಂಪರ್ಕಕ್ಕೆ ೧೯೯೬ರಲ್ಲಿ ಗಂಟೆಗೆ ರೂ.೨೦ ಕೊಡಬೇಕಿತ್ತು. ಈಗ ಅದು ಗಂಟೆಗೆ ೫ ರಿಂದ ೧೦ ರೂ.ಗೆ ಇಳಿದಿದೆ. ಆದರೆ ಆಗಿನ ಕಾಲದಲ್ಲಿ ಲೋಕಲ್ ಕಾಲ್‌ಗೆ ಯಾವುದೇ ಸಮಯದ ಮಿತಿಯಿರುತ್ತಿರಲಿಲ್ಲ. ಅಂದರೆ ಒಬ್ಬ ಒಮ್ಮೆ ಅಂತರಜಾಲಕ್ಕೆ ಸಂಪರ್ಕವನ್ನು ಟೆಲಿಫೋನ್ ಮೂಲಕ ಪಡೆದು ಒಂದು ಘಂಟೆ ಕಾಲ ಬಳಸಿದರೆ ೨೧ ರೂ (೨೦+೧) ಮಾತ್ರ ಖರ್ಚಾಗುತ್ತಿತ್ತು. ಈಗ ಹಾಗಲ್ಲ. ೩ ನಿಮಿಷಕ್ಕೆ ಒಂದು ಕರೆಯಂತೆ ಮೀಟರ್ ಓಡುತ್ತಿರುತ್ತದೆ. ಒಂದು ಘಂಟೆ ಅಂತರಜಾಲ ಬಳಸಿದರೆ ಟೆಲಿಫೋನ್ ಬಿಲ್ಲೇ ೨೪ ರೂ ಆಗಿರುತ್ತದೆ. ಅದರ ಮೇಲೆ ೧೦ ರೂ. ಒಟ್ಟು ೩೪ ರೂ. ಖರ್ಚಾಗಿರುತ್ತದೆ. ಭಾರತದಂತಹ ಬಡ ದೇಶಕ್ಕೆ ಘಂಟೆಗೆ ೩೪ ರೂ. ಕೂಡ ದುಬಾರಿಯೇ.

ಅಂತರಜಾಲ ಸಂಪರ್ಕ ಪಡೆಯಲು ಡಯಲ್‌ಅಪ್ ವಿಧಾನ ಹೆಚ್ಚಾಗಿ ಬಳಕೆಯಲ್ಲಿರುವ ವಿಧಾನ. ಇದು ಬಹು ಸರಳ. ಮನೆಯೆ ಗಣಕವನ್ನು ಮೋಡೆಮ್ ಮೂಲಕ ದೂರವಾಣಿಗೆ ಸಂಪರ್ಕ ಕಲ್ಪಿಸಿದರೆ ಆಯಿತು. ಜನಸಾಮಾನ್ಯರ ಕೈಗೆ ಎಟುಕುವಂತಹುದೂ ಹೌದು. ಅಂತರಜಾಲ ಸಂಪರ್ಕ ಪಡೆಯಲು ಇನ್ನೂ ಹಲವು ವಿಧಾನಗಳಿವೆ. ಲೀಸ್ ಲೈನ್, ಐ.ಎಸ್.ಡಿ.ಎನ್., ಡಿ.ಎಸ್.ಎಲ್. ಇತ್ಯಾದಿ. ಈ ಎಲ್ಲ ವಿಧಾನಗಳನ್ನು “ಇಳೆ” ಅಂಕಣದಲ್ಲಿ ಈಗಾಗಲೇ ವಿವರಿಸಲಾಗಿದೆ.

ಡಿ.ಎಸ್.ಎಲ್. ಒಂದು ಉತ್ತಮ ತಂತ್ರeನ. ಇದು ಇನ್ನೂ ಎಲ್ಲರಿಗೂ ದೊರೆಯುತ್ತಿಲ್ಲ. ಬೆಂಗಳೂರಿನಲ್ಲೂ ಕೆಲವು ಸೀಮಿತ ಜಾಗಗಳಲ್ಲಿ ಈ ಸೌಲಭ್ಯ ಇದೆ. ಇದರ ಮೂಲಕ ವೇಗದ ಸಂಪರ್ಕ (broadband connection) ಮತ್ತು ನಿರಂತರ ಸಂಪರ್ಕ ಸಾಧ್ಯ. ಇಲ್ಲೂ ಒಂದು ಮಿತಿಯನ್ನು ಈ ಸೇವೆ ನೀಡುವವರು ಹಾಕಿದ್ದಾರೆ. ಅದು ತಿಂಗಳಿಗೆ ಇಂತಿಷ್ಟು ಮಾಹಿತಿ ಪ್ರವಾಹ ಮಾತ್ರ ಸಾಧ್ಯ ಎಂದು. ೨೪ ಘಂಟೆ ಸಂಪರ್ಕದಲ್ಲಿದ್ದೂ ಮಾಹಿತಿ ಪ್ರವಾಹಕ್ಕೆ ಮಿತಿ ಹೇರುವುದು ವಿರೋಧಾಭಾಸವಲ್ಲವೇ? ಈ ಮಾಹಿತಿ ಪ್ರವಾಹದ ಲೆಕ್ಕದಲ್ಲಿ ನೀವು ಮಾಡುವ ತಾಣ ವೀಕ್ಷಣೆ, ಡೌನ್‌ಲೋಡ್ ಮಾಡುವ ಮಾಹಿತಿ ಜೊತೆ ಅಂತರಜಾಲದಲ್ಲಿರುವ ಯಾರಾದರೊಬ್ಬ ನಿಮ್ಮ ಗಣಕವನ್ನು ಪಿಂಗ್ ಮಾಡುವುದೂ ಸೇರಿರುತ್ತದೆ. ಪಿಂಗ್ ಮಾಡುವುದೆಂದರೆ ಅಂತರಜಾಲದಲ್ಲಿರುವ ಗಣಕವನ್ನು ಎಚ್ಚರವಾಗಿದ್ದೀಯಾ ಎಂದು ಇನ್ನೊಬ್ಬ ಕೇಳುವುದು. ಇನ್ನೊಬ್ಬ ನಿಮ್ಮ ಗಣಕವನ್ನು ಪಿಂಗ್ ಮಾಡುತ್ತಲೇ ಇದ್ದರೆ ನಿಮ್ಮ ಮೀಟರ್ ಓಡುತ್ತಲೇ ಇರುತ್ತದೆ. ನಿಮ್ಮದಲ್ಲದ ತಪ್ಪಿಗೆ ನೀವು ಬೆಲೆ ತೆರಬೇಕಾಗುತ್ತದೆ. ಇದರ ವಿರುದ್ಧ ಗ್ರಾಹಕರು ಪ್ರತಿಭಟಿಸಬೇಕಾಗಿದೆ.

ಭಾರತ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್., ಭಾಸನಿನಿ) ಒಂದು ಉತ್ತಮ ತಂತ್ರeನ ಹೊಂದಿದೆ. ಅದು ಡಯಾಸ್ (DIAS, Direct Internet Access Serice). ಇದು ಸಾಮಾನ್ಯ ದೂರವಾಣಿ ತಂತಿಯ ಮೂಲಕವೇ ವೇಗದ ಅಂತರಜಾಲ ಸಂಪರ್ಕ ಪಡೆಯುವ ವಿಧಾನ. ಇದರ ಮೂಲಕ ಅಂತರಜಾಲವನ್ನು ಸಂಪರ್ಕಿಸುವಾಗ ಟೆಲಿಫೋನ್ ಮೂಲಕ ಮಾತನಾಡಲೂ ಸಾಧ್ಯ. ಇದೂ ಒಂದು ನಿರಂತರ ಸಂಪರ್ಕ ಸೇವೆ. ೨೪ ಘಟೆಗಳ ಕಾಲ ಅಂತರಜಾಲ ಸಂಪರ್ಕದಲ್ಲಿರಬಹುದು. ಆದರೆ ಇದನ್ನು ಭಾಸನಿನಿ ಇನ್ನೂ ಎಲ್ಲರಿಗೆ ಕೊಡುತ್ತಿಲ್ಲ.

ಡಿ.ಎಸ್.ಎಲ್, ಡಯಾಸ್, ಇತ್ಯಾದಿ ಎಲ್ಲ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಮಾತ್ರ ಲಭ್ಯವಿವೆ. ಅವುಗಳ ಬೆಲೆಪಟ್ಟಿಯೂ ಜನಸಾಮಾನ್ಯರಿಗೆ ಅನುಕೂಲಕರವಾಗಿಲ್ಲ. ಅಂದರೆ ಸಾಮಾನ್ಯ ಮಂದಿ ಡಯಲ್‌ಅಪ್ ಸಂಪರ್ಕಕ್ಕೇ ಶರಣು ಹೋಗಬೇಕು. ಈ ಡಯಲ್‌ಅಪ್ ಸಂಪರ್ಕ ಯಾವ ರೀತಿ ಇದೆ ಎಂಬುದನ್ನು ಗಮನಿಸೋಣ. ಹೆಸರಿಗೆ ಮೋಡೆಮ್ ಸೆಕೆಂಡಿಗೆ ೫೬೦೦೦ ಕಿಲೋಬಿಟ್ಸ್ ವೆರೆಗಿನ ವೇಗದಲ್ಲಿ ಸಂಪರ್ಕಗೊಳ್ಳುತ್ತದೆ. ಆದರೆ ನಿಜವಾದ ಮಾಹಿತಿ ಪ್ರವಾಹದ ವೇಗ ಇದಕ್ಕಿಂತ ಅತಿ ಕಡಿಮೆ ಇರುತ್ತದೆ. ಹಗಲು ಹೊತ್ತಿನಲ್ಲಂತೂ ಮಾಹಿತಿ ಹೆದ್ದಾರಿ ಹೋಗಿ ಕಾಲುದಾರಿಯಾಗಿರುತ್ತದೆ. ಹೆಚ್ಚಿನ ಐಎಸ್‌ಪಿಗಳು ರಾತ್ರಿ ಹೊತ್ತು ಅಂತರಜಾಲ ಸಂಪರ್ಕಕ್ಕೆ ಬಿಲ್ ಮಾಡುವುದಿಲ್ಲ. ಅಂತರಜಾಲ ಸಂಪರ್ಕಕ್ಕೆ ಟೆಲಿಫೋನ್ ಕರೆ ಕೂಡ ರಾತ್ರಿ ೧೦:೩೦ರ ನಂತರ ೬ ನಿಮಿಷಕ್ಕೆ ಒಂದು ಲೋಕಲ್ ಕಾಲ್ ಆಗಿರುತ್ತದೆ. ಇದರಿಂದಾಗಿ ರಾತ್ರಿ ೧೦:೩೦ರ ನಂತರ ಅದರಲ್ಲೂ ೧೧:೦೦ ಘಂಟೆಯಿಂದ ಸುಮಾರು ೧೨:೦೦ ಘಂಟೆಯ ವರೆಗೆ ಅಂತರಜಾಲ ಸಂಪರ್ಕ ಕೆಟ್ಟದಾಗಿರುತ್ತದೆ. ಭಾಸನಿನಿ, ವಿಸನಿನಿ, ಇತ್ಯಾದಿಗಳಲ್ಲಿ ಸಂಪರ್ಕ ಆಗಿರುತ್ತದೆ. ಆದರೆ ಯಾವ ಕೆಲಸ ಆಗುವುದಿಲ್ಲ. ಸುಮ್ಮನೆ ಮೀಟರ್ ಓಡುತ್ತಿರುತ್ತದೆ. ಇದೇ ಪರಿಸ್ಥಿತಿ ಹಗಲು ಹೊತ್ತು ಕೂಡ ಇರುತ್ತದೆ. ಕೆಲವೊಮ್ಮೆ ಮಾಹಿತಿಯ ಪ್ರವಾಹ ಸುಮಾರು ೨೦ ಸೆಕೆಂಡು ಇರುತ್ತದೆ. ನಂತರ ಸುಮಾರು ೯೦ ಸೆಕೆಂಡು ನಿದ್ದೆ ಹೊಡೆಯುತ್ತದೆ. ಹೀಗೆ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ಡಯಲ್ ಮಾಡಿದಾಗ ಮೋಡೆಮ್ ಸಂಪರ್ಕ ಆಗಿರುತ್ತದೆ ಆದರೆ ಅಂತರಜಾಲ ಸಂಪರ್ಕ ಆಗಿರುವುದಿಲ್ಲ. ಇದರಿಂದ ನಿಮ್ಮ ಟೆಲಿಫೋನ್ ಮೀಟರ್ ಓಡಿರುತ್ತದೆ.

ನೌವ್ (NOW) ಎಂಬ ಖಾಸಗಿ ಸಂಪರ್ಕ ಸೇವೆ ಚಿನ್ನಾಗಿದೆ ಎಂದು ಯಾರೋ ಹೇಳಿದರು. ಅವರ ಬಿಲ್ಲಿಂಗ್ ಟೆಲಿಫೋನ್ ಬಿಲ್ಲಿನಂತೆ, ಅಂದರೆ ತಿಂಗಳು ತಿಂಗಳು ಬಿಲ್ ಬರುತ್ತಿರುತ್ತದೆ. ಅಂತರಜಾಲದ ಅವರ ತಾಣದಲ್ಲಿ ಹೆಸರು ನೋದಾಯಿಸಿ ಸಂಪರ್ಕ ಪಡೆದೆ. ಎರಡು ದಿವಸದೊಳಗೆ ರೂ.೩೦೦ ಕೊಡಬೇಕಾಗಿತ್ತು. ಅದಕ್ಕೆ ಕ್ರೆಡಿಟ್ ಕಾರ್ಡ್ ಕೊಟ್ಟೆ. ಆದರೆ ಅವರು ಕ್ರೆಡಿಟ್ ಕಾರ್ಡ್ ಬ್ಯಾಂಕಿನಿಂದ ಹಣ ಪಡೆಯಲು ಇನ್ನೆರಡು ದಿನ ಮಾಡಿದರು. ಆ ಸಮಯದಲ್ಲಿ ನನ್ನ ಸಂಪರ್ಕವನ್ನು ಸ್ಥಗಿತಗೊಳಿಸಿದ್ದರು. ಹಾಗಿದ್ದರೆ ಕ್ರೆಡಿಟ್ ಕಾರ್ಡ್ ಮತ್ತು ಆನ್‌ಲೈನ್ ಹಣ ಪಾವತಿ ಎಂಬ ಮಾತಿನ ಅರ್ಥವೇನಾಯಿತು? ಚೆಕ್ ಮೂಲಕ ಹಣ ಕೊಟ್ಟಂತೆಯೇ ಆಯಿತು. ನೇರವಾಗಿ ಆನ್‌ಲೈನ್ ಮೂಲಕ ಬ್ಯಾಂಕಿನಿಂದ ಹಣ ಪಡೆಯುವ ವ್ಯವಸ್ಥೆ ಅವರಲ್ಲಿಲ್ಲ. ಎರಡು ದಿನಗಳ ಕಾಲ ನನಗೆ ಕಳುಹಿಸಿ ಇಮೈಲ್‌ಗಳೆಲ್ಲ ಕಳುಹಿಸಿದವರಿಗೆ ವಾಪಾಸಾಗಿತ್ತು. ಇದು ತಪ್ಪು.

ಅಂತರಜಾಲ ಸಂಪರ್ಕ ಸರಿಯಿಲ್ಲದಿರುವುದು ದಿನಿನಿತ್ಯದ ಸಂಗತಿಯಾಗಿದೆ. ಹೆಚ್ಚಿನ ಮಂದಿ ಅಂತರಜಾಲ ಬಳಕೆದಾರರರು ತಮ್ಮ ಮೋಡೆಮ್ ಅಥವಾ ಗಣಕದಲ್ಲೇ ಏನೋ ದೋಷವಿದೆ, ಅಂತರಜಾಲ ಸಂಪರ್ಕ ಸೇವೆಯಲ್ಲಿ ಅಲ್ಲ ಎಂದುಕೊಂಡು ಸುಮ್ಮನಿರುತ್ತಾರೆ. ಅಂತರಜಾಲ ಸಂಪರ್ಕ ಸೇವೆ ಬಳಕೆದಾರರು ಸಂಘಟಿತರಾಗಿಯೂ ಇಲ್ಲ. ಇದು ತಪ್ಪಬೇಕು. ಎಲ್ಲ ಬಳಕೆದಾರರು ಸಂಘಟಿತರಾಗಿ ಐಎಸ್‌ಪಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕು. ಇದಕ್ಕೆ ಇದೀಗ ಸಕಾಲ.

೧೮-೧೧-೨೦೦೫

ಇತ್ತೀಚೆಗೆ ಹೆಚ್ಚಿನ ಐಎಸ್‌ಪಿಗಳು ತಮ್ಮ ದರಗಳನ್ನು ಕಡಿಮೆ ಮಾಡಿದ್ದಾರೆ. ಆದರೂ ಭಾರತೀಯ ಜೀವನಮಟ್ಟಕ್ಕೆ ಹೋಲಿಸಿದರೆ ಇಂದಿಗೂ ಅಂತರಜಾಲ ಸಂಪರ್ಕ ನಮ್ಮ ದೇಶದಲ್ಲಿ ದುಬಾರಿಯೇ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಈಗ ಬ್ರಾಡ್‌ಬ್ಯಾಂಡ್ ಸಂಪರ್ಕವೂ ದೊರೆಯುತ್ತಿದೆ. ಅವುಗಳ ಬಗ್ಗೆ ಒಂದು ಪ್ರತ್ಯೇಕ ಲೇಖನ ಬರೆಯಬೇಕಾಗುತ್ತದೆ. ಯಾರಾದರೂ ಅನುಭವಿಸಿದವರು ಬರೆಯುತ್ತೀರಾ?

– ಡಾ. ಯು. ಬಿ. ಪವನಜ

The post ಜಾಲಸೇವೆಯೋ ಸೇವೆಯ ಬಲೆಯೋ? first appeared on Vishva Kannada.

ಕನ್ನಡವೆನೆ ಸುಂಕವ ಹೇರುವುದೀ ನಾಡು
(ವಿಜಯ ಕರ್ನಾಟಕ ಪತ್ರಿಕೆಯ “ಒಂದು ಸೊನ್ನೆ” ಅಂಕಣದಲ್ಲಿ ಪ್ರಕಟವಾದ ಲೇಖನ)

(ಒಂದು ಸೊನ್ನೆ – ೦೩, ೪-೭-೨೦೦೩)

ಕರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೇ ಮುಂಚೂಣಿಯಲ್ಲಿದೆ. ಖ್ಯಾತ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಬೆಂಗಳೂರನ್ನು ತಮ್ಮ ಮನೆಯನ್ನಾಗಿಸಿಕೊಂಡಿವೆ. ಕರ್ನಾಟಕ ಸರಕಾರವೂ ವರ್ಷಕ್ಕೊಮ್ಮೆ ೫ ದಿನಗಳ ಕಾಲ ಐಟಿ.ಕಾಂ ಎಂಬ ಮೇಳ ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತು ನೀಡುತ್ತಲೇ ಬಂದಿದೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣರಂತೂ ಹೈಟೆಕ್ ಮುಖ್ಯಮಂತ್ರಿ ಎಂಬ ಬಿರುದು ಪಡೆದಿದ್ದಾರೆ.

ಮುಖ್ಯಮಂತ್ರಿಯವರ ಈ ಬಿರುದನ್ನೇ ಅವರ ವಿರೋಧಿಗಳು, ವಿರೋಧಿಸುವುದನ್ನೇ ಕಸುಬಾಗಿಸಿಕೊಂಡಿರುವ ವಿರೋಧ ಪಕ್ಷದವರು ಮತ್ತು ಕಾಂಗ್ರೆಸ್ಸಿನ ಒಳಗೇ ಇದ್ದುಕೊಂಡು ವಿರೋಧ ಪಕ್ಷದ ಕೆಲಸ ಮಾಡುವವರು, ಕೃಷ್ಣರ ಮೇಲೆ ಧಾಳಿ ನಡೆಸಲು ಅಸ್ತ್ರವನ್ನಾಗಿಸಿಕೊಂಡರು. ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಅಭಾವ, ಬರಗಾಲ, ಇತ್ಯಾದಿ ಸಮಸ್ಯೆಗಳೇ ಬೇಕಷ್ಟಿರುವಾಗ ಮುಖ್ಯಮಂತ್ರಿಯವರು ಮಾಹಿತಿ ತಂತ್ರಜ್ಷಾನಕ್ಕೆ ಅತೀ ಒತ್ತು ಕೊಡುತ್ತಿದ್ದಾರೆ. ನಮಗೆ ಬೇಕಾಗಿರುವುದು ಈ ಸಮಸ್ಯೆಗಳಿಗೆ ಪರಿಹಾರವೇ ಹೊರತು ಮಾಹಿತಿ ತಂತ್ರಜ್ಞಾನವಲ್ಲ ಎಂದು ಅವರ ಟೀಕೆ.

ಕೃಷ್ಣ ಅವರಿಗೆ ತನ್ನ ಹೆಸರಿಗೆ ಅಂಟಿದ್ದ ಕಳಂಕವನ್ನು ತೊಡೆದು ಹಾಕಬೇಕಿತ್ತು. ಜೊತೆಗೇ ವಿರೋಧಿಗಳ ಬಾಯಿಯನ್ನೂ ಮುಚ್ಚಿಸಬೇಕಿತ್ತು. ಇದಕ್ಕೆ ಪರಿಹಾರವೆಂದರೆ ಮಾಹಿತಿ ತಂತ್ರಜ್ಞಾನಕ್ಕೆ ತಾನು ಅತೀ ಒತ್ತು ಕೊಡುತ್ತಿಲ್ಲ ಎಂದು ತೋರಿಸಿಕೊಳ್ಳುವುದು. ಅದು ಹೇಗೆ? ಸುಲಭದ ದಾರಿ ಎಂದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಂದರೆ ತಂತ್ರಾಂಶಗಳಿಗೆ ತೆರಿಗೆ ಹೇರುವುದು. ಹಾಗೆ ಮಾಡಿದರೆ ಖ್ಯಾತ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳನ್ನು ಎದುರು ಹಾಕಿಕೊಳ್ಳಬೇಕಾಗುವುದಲ್ಲ? ಆ ಕಂಪೆನಿಗಳು ಬೆಂಗಳೂರಿನಿಂದ ಹೈದರಾಬಾದಿಗೆ ವಲಸೆ ಹೋದರೆ? ಇದಕ್ಕೂ ಕೃಷ್ಣರ ಬಳಿ ಚಾಣಕ್ಯ ತಂತ್ರವಿದೆ. ತಂತ್ರಾಂಶ ತಯಾರಿ, ಮಾರಾಟ ಮತ್ತು ಸೇವೆಗಳಿಗೆ ಶೇಕಡ ೪ ರಷ್ಟು ಮಾರಾಟ ತೆರಿಗೆ ವಿಧಿಸಲಾಯಿತು. ಇಲ್ಲಿ ಚಾಣಾಕ್ಯತನವೆಂದರೆ ಈ ತೆರಿಗೆ ಕರ್ನಾಟಕದಲ್ಲಿ ಮಾರಾಟ ಮಾಡುವ ತಂತ್ರಾಂಶ ಉತ್ಪನ್ನ ಮತ್ತು ಸೇವೆಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ಬೆಂಗಳೂರಿನಲ್ಲಿ ಮನೆ ಮಾಡಿರುವ ವಿಶ್ವಾದ್ಯಂತ ಗಮನ ಸೆಳೆದಿರುವ ಮಾಹಿತಿ ತಂತ್ರಜ್ಞಾನದ ಖ್ಯಾತ ಕಂಪೆನಿಗಳಿಗೆ ಈ ಹೊಸ ತೆರಿಗೆಯಿಂದ ಯಾವುದೇ ಹಾನಿ ಇಲ್ಲ. ಯಾಕೆಂದರೆ ಅವರೆಲ್ಲ ಮಾಹಿತಿ ತಂತ್ರಜ್ಞಾನ ಸೇವೆಯ ರಫ್ತು ಮಾತ್ರ ಮಾಡುತ್ತಿರುವವರು. ಸಹಜವಾಗಿಯೇ ಅವರಿಂದ ಈ ತೆರಿಗೆಯ ವಿರುದ್ಧ ಯಾವ ಪ್ರತಿಭಟನೆಯೂ ಬಂದಿಲ್ಲ. ಕನ್ನಡದವರ ಹೆಮ್ಮೆಯ ಇನ್ಫೋಸಿಸ್ ಕೂಡ ಈ ತೆರಿಗೆಯ ವಿರುದ್ಧ ಸೊಲ್ಲೆತ್ತಿಲ್ಲ. ಯಾಕೆಂದರೆ ಅವರಿಗೆ ಈ ತೆರಿಗೆ ಅನ್ವಯಿಸುವುದಿಲ್ಲ.

ತನ್ನ ಹೆಸರಿಗೆ ತಟ್ಟಿದ ಕಳಂಕ ತೊಡೆದ ಹಾಗೂ ಆಯಿತು, ದೊಡ್ಡ ಕಂಪೆನಿಗಳ ವಿರೋಧ ಕಟ್ಟಕೊಳ್ಳದಿದ್ದ ಹಾಗೂ ಆಯಿತು ಎಂಬ `ಒಂದು ಕಲ್ಲಿಗೆ ಎರಡು ಹಣ್ಣು ಉದುರಿಸುವ’ ಲೆಕ್ಕಾಚಾರ ಕೃಷ್ಣ ಅವರದು. ಆದರೆ ಇದು ಅವರ ಲೆಕ್ಕಾಚಾರದಂತೆಯೇ ಇದೆಯೇ ಎಂಬುದನ್ನು ಸ್ವಲ್ಪ ಪರಿಶೀಲಿಸೋಣ.

ಕರ್ನಾಟಕದಲ್ಲಿ ಮಾರಾಟವಾಗುವ ಗಣಕ ತಂತ್ರಾಂಶ ಸೇವೆ ಮತ್ತು ಉತ್ಪನ್ನಗಳ ಒಟ್ಟು ಮೌಲ್ಯ ಸುಮಾರು ೧೫ ಕೋಟಿ ರೂಪಾಯಿಗಳಿಗಿಂತ ಹೆಚ್ಚಿರಲಾರದು. ಇದರಿಂದ ಸಂಗ್ರಹವಾಗುವ ಮಾರಾಟ ತೆರಿಗೆ ೬೦ ಲಕ್ಷ ರೂ. ಮಾತ್ರ. ಕರ್ನಾಟಕ ರಾಜ್ಯದ ಒಟ್ಟು ಅಂದಾಜು ಮಾರಾಟ ತೆರಿಗೆ ಸಂಗ್ರಹ ೧೨೦೦೦ ಕೋಟಿ ರೂ. ಅಂದರೆ ಗಣಕ ತಂತ್ರಾಂಶಗಳಿಗೆ ವಿಧಿಸುವ ಶೇಕಡಾ ೪ರ ಮಾರಾಟ ತೆರಿಗೆಯಿಂದ ಬೊಕ್ಕಸಕ್ಕೆ ಬರುವ ಆದಾಯ ನಗಣ್ಯ.

ರಾಜ್ಯದಲ್ಲಿ ಮಾರಾಟವಾಗುವ ಗಣಕ ತಂತ್ರಾಂಶ ಸೇವೆ ಮತ್ತು ಉತ್ಪನ್ನಗಳನ್ನು ಯಾರು ಖರೀದಿಸುತ್ತಾರೆ ಎಂಬುದನ್ನು ಪರಿಶೀಲಿಸೋಣ. ಭಾರತೀಯ ತಂತ್ರಾಂಶ ತಯಾರಕ ಒಕ್ಕೂಟದ (ನಾಸ್ಕಾಮ್, www.nasscom.org) ವರದಿಯಂತೆ ಸ್ಥಳೀಯ ತಂತ್ರಾಂಶ ಮಾರುಕಟ್ಟೆಯಲ್ಲಿ ಶೇಕಡಾ ೬೫ ಸರಕಾರಿ ಮತ್ತು ಅರೆ ಸರಕಾರಿ ಕ್ಷೇತ್ರಕ್ಕೆ ಸೇರಿವೆ. ಅಂದರೆ ಸರಕಾರಕ್ಕೆ ಬರುವ ತಂತ್ರಾಂಶ ಮಾರಾಟದ ತೆರಿಗೆಯ ರೂಪದ ಆದಾಯದಲ್ಲಿ ಶೇಕಡ ೬೫ ಸರಕಾರದಿಂದಲೇ ಬರುತ್ತದೆ! ಇದು ಎಡದ ಕೈಯಿಂದ ತೆಗೆದುಕೊಂಡು ಬಲದ ಕೈಯಿಂದ ಕೊಟ್ಟಂತಾಯಿತು.

ರಾಜ್ಯದಲ್ಲಿ ಮಾರಾಟವಾಗುವ ತಂತ್ರಾಂಶಸೇವೆ ಮತ್ತು ಉತ್ಪನ್ನಗಳು ಯಾವ ವಿಷಯಗಳಿಗೆ ಸಂಬಂಧಿಸಿವೆ ಎಂಬುದನ್ನು ಪರಿಶೀಲಿಸಿದಾಗ ಒಂದು ಅಂಶ ಗಮನ ಸೆಳೆಯುತ್ತದೆ. ಅದು ಕನ್ನಡ ತಂತ್ರಾಂಶಗಳಿಗೆ ಸಂಬಂಧಿಸಿದ್ದು. ಸರಕಾರ ಕೊಳ್ಳುವ ತಂತ್ರಾಂಶಗಳಲ್ಲಿ ಕನ್ನಡ ತಂತ್ರಾಂಶದ್ದು ಸಿಂಹ ಪಾಲಿದೆ. ಅದು ವಿದ್ಯಾಭ್ಯಾಸ ಕ್ಷೇತ್ರಕ್ಕಿರಬಹುದು, ಬ್ಯಾಂಕಿಂಗ್ ಆಗಿರಬಹುದು, ಸಾರಿಗೆ ಸಂಸ್ಥೆಗೆ ಸಂಬಂಧಿಸಿರಬಹುದು (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾತ್ರ ಗಣಕದಲ್ಲಿ ಕನ್ನಡವನ್ನು ಬಳಸುತ್ತಿಲ್ಲ, ಅದು ಬೇರೆ ವಿಷಯ) -ಎಲ್ಲ ತಂತ್ರಾಂಶಗಳಲ್ಲಿ ಕನ್ನಡ ಅವಿಭಾಜ್ಯ ಅಂಗ. ಕನ್ನಡ ತಂತ್ರಾಂಶ ತಯಾರಕರಿಗೆ ಸರಕಾರ ಮತ್ತು ಅರೆ ಸರಕಾರಿ ಸಂಸ್ಥೆಗಳು ದೊಡ್ಡ ಗಿರಾಕಿ -ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ. ಉದಾಹರಣೆಗೆ ಸಹಕಾರಿ ಬ್ಯಾಂಕ್‌ಗಳಿಗೆ ತಯಾರಾಗುವ ತಂತ್ರಾಂಶಗಳಿಗೆ ಕನ್ನಡ ತಂತ್ರಾಂಶ ತಯಾರಕರು ತಮ್ಮ ಸೇವೆ ಸಲ್ಲಿಸಿರುತ್ತಾರೆ. ಕನ್ನಡ ತಂತ್ರಾಂಶ ತಯಾರಕರು ಬೆರಳೆಣಿಕೆಯಲ್ಲಿದ್ದಾರಷ್ಟೆ. ಈ ಹೊಸ ಮಾರಾಟ ತೆರಿಗೆ ಅವರಿಗೆ ಮರಣಾಂತಿಕ ಪೆಟ್ಟು ನೀಡಬಹುದು.

ಈ ತೆರಿಗೆಯನ್ನು ಪ್ರಥಮ ಬಾರಿಗೆ ೨೦೦೦-೦೧ ರ ರಾಜ್ಯ ಮುಂಗಡ ಪತ್ರದಲ್ಲಿ ಹೇರಲಾಗಿತ್ತು. ಆ ಸಮಯದಲ್ಲಿ ಈ ತೆರಿಗೆಯಿಂದ ಕನ್ನಡಕ್ಕಾಗುವ ತೊಂದರೆಯನ್ನು ವಿವರಿಸಿ ಮುಖ್ಯಮಂತ್ರಿ ಕೃಷ್ಣರಿಗೆ ಒಂದು ಇಮೈಲ್ ಮಾಡಲಾಗಿತ್ತು. ಇದೇ ತರ್ಕವನ್ನು ಮಂಡಿಸಿ ಅಂತರಜಾಲ ತಾಣ ಮತ್ತು ದಿನಪತ್ರಿಕೆಯೊಂದರ ವಾಚಕರವಾಣಿ ಕಾಲಂಗಳಲ್ಲೂ ಬರೆಯಲಾಗಿತ್ತು. ಈ ಎಲ್ಲ ವಿಷಯಗಳನ್ನು ಮನಗಂಡ ಕೃಷ್ಣ ಅವರು ಈ ತೆರಿಗೆಯನ್ನು ಆಗ ರದ್ದು ಪಡಿಸಿದ್ದರು. ಆದರೆ ನಂತರದ ಮುಂಗಡ ಪತ್ರದಲ್ಲಿ ಅದನ್ನು ಪುನ ಹೇರಲಾಗಿದೆ. ಕೃಷ್ಣರಿಗೆ ವಿದೇಶದಿಂದ ಡಾಲರ್‌ನಲ್ಲಿ ಹಣ ತರುವ ಕಂಪೆನಿಗಳು ಬೇಕು. ರೂಪಾಯಿಯಲ್ಲಿ ದುಡಿಯುವ ಬಡ ಕನ್ನಡ ಕಂಪೆನಿಗಳು ಬೇಡ. ಗಣಕದಲ್ಲಿ ಕನ್ನಡ ಭಾಷೆಯ ಬೆಳವಣಿಗೆಯೂ ಬೇಡ. ಮನೆಗೆ ಮಾರಿ ಪರರಿಗೆ ಉಪಕಾರಿ.

ವಿಶ್ವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ಒಂದೆರೆಡು ವರ್ಷಗಳಿಂದ ಹಿನ್ನಡೆ ಕಂಡುಬಂದಿದೆ. ಅಮೇರಿಕಾದ ಸಿಲಿಕಾನ್ ವ್ಯಾಲಿಯಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞರಲ್ಲಿ ಸಹಸ್ರಾರು ಮಂದಿ ಸ್ವದೇಶಕ್ಕೆ ವಾಪಸಾಗಿದ್ದಾರೆ ಮತ್ತು ಇನ್ನೂ ಕೆಲವರು ಹಿಂತಿರುಗಿ ಬರುತ್ತಿದ್ದಾರೆ. ಇವರಲ್ಲಿ ಕರ್ನಾಟಕದವರು ಗಣನೀಯವಾಗಿದ್ದಾರೆ. ಹೀಗೆ ವಾಪಸು ಬಂದವರನ್ನು ನಮ್ಮ ರಾಜ್ಯಕ್ಕೆ ಅತಿ ಅಗತ್ಯವಾಗಿರುವ ತಂತ್ರಾಂಶ ತಯಾರಿಯಲ್ಲಿ ತೊಡಗಿಸುವುದು ಸೂಕ್ತವಾದುದು ಮಾತ್ರವಲ್ಲ ಅತೀ ಅವಶ್ಯವೂ ಹೌದು.

ಪರಿಸ್ಥಿತಿ ಹೀಗಿರುವಾಗ ಕೃಷ್ಣ ಅವರು ತಮ್ಮ ನಿರ್ಧಾರವನ್ನು ಪುನಃ ಪರಿಶೀಲಿಸಿ ತಂತ್ರಾಂಶ ಮಾರಾಟಕ್ಕೆ ಪುನ ವಿಧಿಸಿದ ತೆರಿಗೆಯನ್ನು ಮತ್ತೊಮ್ಮೆ ರದ್ದು ಪಡಿಸುತ್ತಾರೆಂದು ಆಶಿಸೋಣ.

೧೮-೧೧-೨೦೦೫

ಈಗಿನ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ನಾನು ಒಮ್ಮೆ ಆಗಿನ ಹಣಕಾಸು ಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದೆ. ಆಗ ಅವರಿಗೆ ಈ ತೆರಿಗೆಯ ಬಗ್ಗೆ ವಿವರವಾಗಿ ಬರೆದ ಲೇಖನ, ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ನನ್ನ ಪತ್ರ, ಮತ್ತು ಈ ತೆರಿಗೆ ರದ್ದು ಮಾಡಬೇಕೆಂದು ಅವರಿಗೊಂದು ಮನವಿ ನೀಡಿದ್ದೆ. ಆದರ ಪರಿಣಾಮ ಏನು ಗೊತ್ತೆ? ೪% ಇದ್ದ ತೆರಿಗೆ ೧೨% ಆಯಿತು! ಈಗ VAT ಬಂದಿದೆ. ಇದರ ಪ್ರಕಾರ ತಂತ್ರಾಂಶಗಳಿಗೆ ತೆರಿಗೆ ೧೨.೫% ಈಗ ಹೇಳಿ. ಕನ್ನಡ ಮತ್ತು ಕರ್ನಾಟಕಕ್ಕಾಗಿ ತಂತ್ರಾಂಶ ತಯಾರಿ ಮಾಡಬೇಕೆ?

-ಡಾ. ಯು.ಬಿ. ಪವನಜ

The post ಕನ್ನಡವೆನೆ ಸುಂಕವ ಹೇರುವುದೀ ನಾಡು first appeared on Vishva Kannada.

ಸೇವಾ ಜನೋ ಸುಖಿನೋ ಭವಂತು
[ವಿಜಯ ಕರ್ನಾಟಕದ “ಒಂದು ಸೊನ್ನೆ” ಅಂಕಣದಲ್ಲಿ ಪ್ರಕಟವಾದ ಲೇಖನ]

[ಒಂದು    ಸೊನ್ನೆ – ೨ (೨೦-೦೬-೨೦೦೩)]

ಭಾರತೀಯರು ಅತಿಥಿ ಸೇವೆಗೆ ಪ್ರಖ್ಯಾತರು. ಈಗಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕೇವಲ ಸೇವೆಗೆ ಖ್ಯಾತರು. ತಂತ್ರಾಂಶಗಳಲ್ಲಿ ಎರಡು ವಿಧ -ಉತ್ಪನ್ನ ಮತ್ತು ಸೇವೆ. ಭಾರತೀಯ ತಂತ್ರಾಂಶ ಕಂಪೆನಿಗಳು ಸೇವೆಗೆ ಮಾತ್ರ ಹೆಸರು ಮಾಡಿದ್ದಾರೆ. ಅಮೇರಿಕದ ಬಹುಪಾಲು ಕಂಪೆನಿಗಳು ತಮ್ಮ ಕೆಲಸಗಳನ್ನು ಭಾರತಕ್ಕೆ ದಾಟಿಸುತ್ತಿದ್ದಾರೆ. ಆದರೆ ಅವು ಯಾವುವೂ ತಾಂತ್ರಿಕವಾಗಿ ಉನ್ನತ ಮಟ್ಟದ ಕೆಲಸಗಳಲ್ಲ. ಬಹು ಸರಳವಾದ, ಹತ್ತನೇ ತರಗತಿ ಪಾಸಾದ ಯಾರು ಬೇಕಾದರೂ ಮಾಡಬಲ್ಲ ತಂತ್ರಾಂಶ ಸೇವೆಗಳು ಮತ್ತು ತಂತ್ರಾಂಶಾಧಾರಿತ ಸೇವೆಗಳು.

ಭಾರತದ ತಂತ್ರಾಂಶ ರಫ್ತಿನ ಶೇಕಡ ೯೫ರಷ್ಟು ಸೇವೆಯಿಂದಲೇ ಬರುತ್ತಿದೆ. ಕರ್ನಾಟಕದ ಸಾಫ್ಟ್‌ವೇರ್ ಟೆಕ್ನೋಲೋಜಿ ಪಾರ್ಕ್‌ಗಳ ಒಟ್ಟು ತಂತ್ರಾಂಶ ರಫ್ತು ಸುಮಾರು ೧೨೫೦೦ ಕೋಟಿ ರೂಪಾಯಿಗಳಷ್ಟು ಇದೆ. ಇಲ್ಲೂ ೯೫% ಸೇವೆಯಿಂದಲೇ ಬರುತ್ತಿದೆ. ನಮ್ಮ ಹೆಮ್ಮೆಯ ಇನ್ಫೋಸಿಸ್ ಕೂಡ ಸೇವೆಯಿಂದಲೇ ಹಣ ಗಳಿಸುತ್ತಿದೆ. ಅಮೇರಿಕಾದ ಕಂಪೆನಿಗಳಿಗೆ ಅಲ್ಲೇ ಕೆಲಸಕ್ಕೆ ಜನ ನೇಮಿಸಿದರೆ ಎಷ್ಟು ಖರ್ಚು ಬರುತ್ತದೋ ಅದರ ಹತ್ತನೇ ಒಂದರಷ್ಟು ಖರ್ಚಿನಲ್ಲಿ ಭಾರತೀಯರಿಂದ ಭಾರತದಲ್ಲೇ ಕೆಲಸ ಮಾಡಿಸಿಕೊಳ್ಳಬಹುದು. ಅಂತರಜಾಲ ಸಂಪರ್ಕ ಇದ್ದರೆ ಆಯಿತು. ಕೆಲಸಗಾರರು ಅಮೇರಿಕಾದಲ್ಲೇ ಇರಬೇಕೆಂಬ ನಿಯಮವೇನಿಲ್ಲ.

ಮಾಹಿತಿ ತಂತ್ರಜ್ಷಾನ ಕ್ಷೇತ್ರದ ಉತ್ಪನ್ನಗಳೇನಿದ್ದರೂ ಅಮೇರಿಕದ ಕಂಪೆನಿಗಳಿಂದ ಬರುತ್ತಿವೆ. ಅಲ್ಲಿ ಕೆಲಸಗಾರರಾಗಿ ಭಾರತೀಯರಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಭಾರತೀಯ ತಂತ್ರಾಂಶ ಉತ್ಪನ್ನ ಯಾವುದೂ ಇಲ್ಲ. ನಾವು ಮಾಹಿತಿ ತಂತ್ರಜ್ಷಾನ ಕ್ಷೇತ್ರದಲ್ಲಿ ತುಂಬ ಮುಂದೆ ಇದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳುವಾಗ ಈ ಒಂದು ಅಂಶವನ್ನೂ ಗಮನಿಸಬೇಕು.

ತಂತ್ರಾಂಶ ಸೇವೆಯಲ್ಲಿ ನಾವು ಹೆಸರು ಮಾಡುತ್ತಿದ್ದಂತೆಯೇ ಇನ್ನೊಂದು ರೀತಿಯ ಸೇವೆ ಪ್ರಾಮುಖ್ಯವಾಗುತ್ತಿದೆ. ಅದು ತಂತ್ರಾಂಶಾಧಾರಿತ ಸೇವೆ. ಇದನ್ನು ಇಂಗ್ಲೀಷಿನಲ್ಲಿ IT Enabled Services ಎಂದು ಕರೆಯುತ್ತಾರೆ. ಮೆಡಿಕಲ್ ಟ್ರಾನ್‌ಸ್ಕ್ರಿಪ್ಷನ್, ಕಾಲ್ ಸೆಂಟರ್, ತೆರಿಗೆ ಪಾವತಿಯ ಅರ್ಜಿಗಳನ್ನು ತುಂಬುವುದು, ಇನ್ಶೂರೆನ್ಸ್‌ನ ಹಣ ಮರುಪಾವತಿಯ ಅರ್ಜಿ ತುಂಬುವುದು, ತಂತ್ರಾಂಶಗಳನ್ನು ಅಂತರಜಾಲದ ಮೂಲಕ ಪರೀಕ್ಷಿಸುವುದು, ಇತ್ಯಾದಿ ಇದಕ್ಕೆ ಉದಾಹರಣೆಗಳು. ಈಗ ಇಂತಹ ಸೇವೆಗಳಿಗೆ ಇನ್ನೂ ಒಂದು ಹೊಸ ಹೆಸರನ್ನು ನೀಡಿದ್ದಾರೆ. ಅದು Business Process Outsourcing (BPO) ಎಂದು. ತಂತ್ರಾಂಶಾಧಾರಿತ ಸೇವೆಯನ್ನು ಮಾತ್ರ ಇದು ಸೂಚಿಸುತ್ತಿಲ್ಲ. ಇತರೆ ಸೇವೆಗಳಿಗೂ ಇದು ಅನ್ವಯಿಸುತ್ತದೆ.

ಇನ್ಶೂರೆನ್ಸ್‌ನ ಹಣ ಮರುಪಾವತಿಯ ಅರ್ಜಿ ತುಂಬುವ ಉದಾಹರಣೆಯನ್ನು ಗಮನಿಸೋಣ. ಅಮೇರಿಕಾದಲ್ಲಿ ಪ್ರತಿಯೊಬ್ಬನೂ ವಿಮೆ ಮಾಡಿರಲೇಬೆಕು. ಎಷ್ಟರ ಮಟ್ಟಿಗೆ ಎಂದರೆ ದೇಹಕ್ಕೆ, ಕಣ್ಣಿಗೆ, ಹಲ್ಲಿಗೆ, ಹೀಗೆ ಬೇರೆ ಬೇರೆ ವಿಮೆ ಮಾಡಿರತಕ್ಕದ್ದು. ತಿಂಗಳ ಖರ್ಚಿನಲ್ಲಿ ಊಟಕ್ಕಿಂತ ಹೆಚ್ಚು ವಿಮೆಗೆ ಹೋಗುತ್ತದೆ. ಖಾಯಿಲೆ ಬಂದಾಗ ವೈದ್ಯರ ಹತ್ತಿರ ಹೋಗುತ್ತಾರೆ. ವೈದ್ಯರಿಗೆ ಬಿಲ್ಲಿನ ಸುಮಾರು ೧೦-೨೦% ರಷ್ಟು ಮಾತ್ರ ರೋಗಿ ಪಾವತಿ ಮಾಡುತ್ತಾರೆ. ಉಳಿದ ಹಣವನ್ನು ವಿಮಾ ಕಂಪೆನಿ ಕೊಡುತ್ತದೆ. ಅದಕ್ಕಾಗಿ ವೈದ್ಯರು ಅರ್ಜಿ ಸಲ್ಲಿಸಬೇಕು. ವೈದ್ಯರು ರೋಗಿಯನ್ನು ಪರಿಶೀಲಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೋ ಅದಕ್ಕಿಂತ ಹೆಚ್ಚು ಸಮಯ ಈ ಅರ್ಜಿಗಳನ್ನು ತುಂಬಲು ತೆಗೆದುಕೊಳ್ಳುತ್ತಾರೆ. ಅರ್ಜಿಗಳ ಕಾಗದದ ಫಾರಂಗಳನ್ನು ಭರ್ತಿ ಮಾಡಿ ವಿಮಾ ಕಂಪೆನಿಗೆ ಕಳುಹಿಸಬಹುದು. ಇತ್ತೀಚಿಗೆ ಅರ್ಜಿಗಳನ್ನು ವಿದ್ಯುನ್ಮಾನ ರೀತಿಯಲ್ಲಿ ಕಳುಹಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಅಂದರೆ ವೈದ್ಯರು ರೋಗಿಗಳನ್ನು ಪರಿಶೀಲಿಸುವುದು ಮಾತ್ರವಲ್ಲ, ಅಲ್ಪ ಸ್ವಲ್ಪ ಗಣಕ ಬಳಕೆಯನ್ನೂ ಕಲಿತಿರಬೇಕೆಂದಾಯಿತು. ಈ ತಲೆನೋವು ಯಾಕೆ? ಗಣಕದಲ್ಲಿ ಅರ್ಜಿ ಫಾರಂ ತುಂಬುವ ಕೆಲಸವನ್ನು ಇತರರಿಗೆ ವಹಿಸಿದರೆ ಹೇಗೆ? ಈ ಗಣಕೀಕೃತ ಅರ್ಜಿ ತುಂಬುವ ಕೆಲಸವನ್ನು ಅತಿ ಕಡಿಮೆ ಖರ್ಚಿನಲ್ಲಿ ಭಾರತದಲ್ಲಿ ಮಾಡಿಸಿದರೆ ವೈದ್ಯರು ಹೆಚ್ಚು ರೋಗಿಗಳನ್ನು ಪರಿಶೀಲಿಸಿ ಹೆಚ್ಚು ಸಂಪಾದನೆ ಮಾಡಬಹುದು.

ಇತ್ತೀಚಿಗೆ ತುಂಬ ಸುದ್ದಿಯಲ್ಲಿರುವುದು ಕಾಲ್ ಸೆಂಟರ್‌ಗಳು. ಉತ್ಪನ್ನಗಳನ್ನು ಮಾರುವ ಎಲ್ಲ ಕಂಪೆನಿಗಳು ಗ್ರಾಹಕರ ಸಹಾಯವಾಣಿ ಇಟ್ಟಿರುತ್ತಾರೆ. ಈ ಸಹಾಯವಾಣಿ ಭಾರತದಲ್ಲಿದೆ! ಅಮೇರಿಕಾದಲ್ಲಿ ಒಂದು ಕಾರು ಕೊಂಡಾತ ಆ ಕಂಪೆನಿಗೆ ಯಾವುದೋ ಒಂದು ವಿಷಯದ ಬಗ್ಗೆ ಮಾತನಾಡಲು ಫೋನು ಮಾಡಿದರೆ ಭಾರತದಿಂದ ಉತ್ತರಿಸುತ್ತಾರೆ. ಕರೆ ಮಾಡಿದಾತನಿಗೆ ತನ್ನ ಕರೆಯನ್ನು ಬಹುದೂರದ ಭಾತರ ದೇಶದಿಂದ ಉತ್ತರಿಸುತ್ತಿದ್ದಾರೆ ಎಂದು ತಿಳಿಯುವುದೇ ಇಲ್ಲ. ಈ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡುವವರಿಗೆ ಅಮೇರಿಕಾದ ರೀತಿ ನೀತಿ ಮತ್ತು ಇಂಗ್ಲೀಷ್ ಉಚ್ಛಾರಣೆಗಳನ್ನು ಕಲಿಸಿರುತ್ತಾರೆ. ಕಾಲ್ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿದಾಗ ಮೊದಲ ತಿಂಗಳಿನ ತರಬೇತಿಯಲ್ಲಿ ಅಮೇರಿಕಾದ ಇಂಗ್ಲೀಷ್ ಸಿನಿಮಾಗಳನ್ನು ವೀಕ್ಷಿಸುವುದೂ ಸೇರಿದೆ! ಸಿನಿಮಾ ನೋಡುವುದಕ್ಕೆ ಸಂಬಳ ಪಡೆಯುವ ಭಾಗ್ಯ ಎಷ್ಟು ಜನರಿಗಿದೆ?!

ಈ ಬಿಪಿಓ ವಿಭಾಗ ಅತಿ ವೇಗದಲ್ಲಿ ಬೆಳೆಯುತ್ತಿದೆ. ಒಂದು ವರ್ಷದಲ್ಲೇ ೨೫೦% ಬೆಳವಣಿಗೆ ದಾಖಲಾಗಿದೆ. ಕರ್ನಾಟಕ ರಾಜ್ಯಕ್ಕೆ ಕಳೆದ ಹಣಕಾಸಿನ ವರ್ಷದಲ್ಲಿ ಒಟ್ಟು ೯೦೦ ಕೋಟಿ ರೂ ಬಿಪಿಓ ಮೂಲಕ ಬಂದಿದೆ. ಈ ಹಣ ಕಂಪೆನಿಗಳಿಗೆ ಬರುತ್ತಿದೆಯೇ ಹೊರತು ಸರಕಾರಕ್ಕಲ್ಲ.

ಈಗೊಂದು ಹೊಸ ಬೆಳವಣಿಗೆಯನ್ನು ಗಮನಿಸೋಣ. ಅದು ಅಮೇರಿಕಾದ ನ್ಯೂಜರ್ಸಿ ರಾಜ್ಯದಿಂದ ಆರಂಭವಾಗಿದೆ. ಯಾವ ತಾಂತ್ರಿಕ ಪರಿಣತೆಯ ಅಗತ್ಯವೂ ಇಲ್ಲದ ಕಾಲ್ ಸೆಂಟರ್‌ನಂತಹ ಕೆಲಸಗಳನ್ನು ಭಾರತಕ್ಕೆ ರವಾನಿಸಿದರೆ ನಮ್ಮ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತದೆ ಎಂದು ಕೆಲವು ಸಂಸದರು ಗದ್ದಲವೆಬ್ಬಿಸಿದರು. ಅಲ್ಲಿಗೇ ನಿಲ್ಲಿಸಲಿಲ್ಲ. ಕಾಲ್ ಸೆಂಟರ್‌ಗಳನ್ನು ಅಮೇರಿಕಾ ದೇಶದಿಂದ ಹೊರಗಡೆ ಸ್ಥಾಪಿಸಬಾರದು ಎಂದು ಕಾನೂನನ್ನೇ ಮಾಡಿದರು. ಆದರೆ ಇದು ಸರಕಾರದಿಂದ ನಡೆಸಲ್ಪಡುವ ಕಾಲ್ ಸೆಂಟರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಕಾನೂನು ಮಾಡಲು ಅವರಿಗೆ ಒಟ್ಟು ೯೬೦,೦೦೦ ಡಾಲರ್ ಖರ್ಚಾಗಿದೆ (ಸಂಸತ್ತನ್ನು ನಡೆಸುವ ಖರ್ಚು ಸೇರಿ). ಇದರಿಂದಾಗಿ ಅವರಿಗೆ ಉಳಿತಾಯವಾದ ನೌಕರಿ ಎಷ್ಟು ಗೊತ್ತೆ? ಕೇವಲ ೧೨! ನ್ಯೂಜರ್ಸಿಯಿಂದ ಪ್ರಾರಂಭವಾದ ಈ ಬೆಳವಣಿಗೆ ಇನ್ನೂ ಕೆಲವು ರಾಜ್ಯಗಳಿಗೆ ಹಬ್ಬತೊಡಗಿದೆ. ಇದು ಭಾರತದ ಮಾಹಿತಿ ತಂತ್ರeನ ಕ್ಷೇತ್ರದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಇತ್ತೀಚಿಗೆ ನಮ್ಮ ಉಪಪ್ರಧಾನಿ ಅಡ್ವಾಣಿಯವರು ಅಮೇರಿಕಾ ದೇಶಕ್ಕೆ ಭೇಟಿ ನೀಡಿದ್ದರು. ಆಗ ಅವರನ್ನು ಕೆಲವು ಪತ್ರಕರ್ತರು “ಕೆಲವು ರಾಜ್ಯಗಳ ಈ ಬಿಪಿಓ ವಿರೋಧಿ ನೀತಿಯ ಬಗ್ಗೆ ಬುಶ್ ಜೊತೆ ಮಾತನಾಡುತ್ತೀರಾ” ಎಂದು ಪ್ರಶ್ನಿಸಿದರು. “ಇಲ್ಲ” ಎಂಬುದು ಅವರ ಉತ್ತರ. ಅವರ ಪ್ರಕಾರ “ಕೆಲವು ಅಮೇರಿಕನ್ ಕಂಪೆನಿಗಳು ತಮ್ಮ ವೆಚ್ಚ ಕಡಿಮೆ ಮಾಡಲು ಭಾರತೀಯ ಕಂಪೆನಿಗಳ ಸೇವೆ ಬಯಸುತ್ತಿದ್ದಾರೆ. ಅವರ ಉದ್ದೇಶ ಹಣ ಉಳಿಸುವುದೇ ಹೊರತು ಭಾರತಕ್ಕೆ ಸಹಾಯ ಮಾಡುವುದಲ್ಲ. ಬಿಪಿಓ ಅಮೇರಿಕಾದ ಕಂಪೆನಿಗಳ ಸಮಸ್ಯೆಯೇ ಹೊರತು ಭಾರತದ್ದಲ್ಲ”. ಭೇಶ್ ಅಡ್ವಾಣಿ. ಕನಿಷ್ಠ ನೀವಾದರೂ ರಾಷ್ಟ್ರೀಯವಾಗಿ ಯೋಚಿಸಿದ್ದೀರಲ್ಲ.

ಇನ್ನು ಕೆಲವು ಅಮೇರಿಕನ್ ಕಂಪೆನಿಗಳು ಬೇರೆಯೇ ರೀತಿಯಲ್ಲಿ ಯೋಚಿಸಲು ಪ್ರಾರಂಭಿಸಿದ್ದಾರೆ. ಭಾರತಕ್ಕೇ ಯಾಕೆ ಈ ಬಿಪಿಓಗಳನ್ನು ವಹಿಸಬೇಕು? ಇನ್ನೂ ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುವವರು ಯಾರಿದ್ದಾರೆ ಎಂದು ಹುಡುಕಾಡತೊಡಗಿದರು. ಆಗ ಅವರ ದೃಷ್ಟಿ ಬಿದ್ದದ್ದು ಪಿಲಿಪ್ಪೈನ್ಸ್, ವಿಯೆಟ್ನಾಮ್, ರೊಮಾನಿಯಾ, ರಶ್ಯಾ, ಇತ್ಯಾದಿ ದೇಶಗಳ ಮೇಲೆ. ಭಾರತಕ್ಕೆ ಇಂಗ್ಲೀಷ್ ಭಾಷೆಯ ಪ್ರಾವೀಣ್ಯದ ಸಹಾಯ ಇದೆ. ಪಿಲಿಪ್ಪೈನ್ಸ್ ದೇಶದವರೂ ಇಂಗ್ಲೀಷ್ ಭಾಷೆಯಲ್ಲಿ ನುರಿತವರು. ಇಂಗ್ಲೀಷ್ ಭಾಷೆಯಲ್ಲಿ ಹಿಂದಿರುವ ರೊಮಾನಿಯಾ, ರಶ್ಯಾ ದೇಶಗಳಲ್ಲಿ ತಂತ್ರಾಂಶ ಪರೀಕ್ಷೆ ನಡೆಸುತ್ತಿದ್ದಾರೆ.

ಬಿಪಿಓ ಮೇಲೆ ಅತಿಯಾಗಿ ಅವಲಂಬಿಸಲು ಹೊರಟ ಭಾರತೀಯ ಕಂಪೆನಿಗಳು ಹೊಡೆತ ತಿನ್ನುವ ಕಾಲ ದೂರವಿಲ್ಲ. ಡಾಟ್‌ಕಾಮ್ ಗುಳ್ಳೆ ಒಡೆದ ಉದಾಹರಣೆಯಿಂದ ಇವರು ಪಾಠ ಕಲಿಯಬೇಕಾಗಿದೆ. ನಮ್ಮವರು ಆದಷ್ಟು ಬೇಗ ತಾಂತ್ರಿಕ ಪ್ರಾವೀಣ್ಯದ ಅಗತ್ಯವಿರುವಂತಹ ಸೇವಾ ಕ್ಷೇತ್ರಕ್ಕೆ ಕಾಲಿಡುವುದು ಒಳಿತು. ಉತ್ಪನ್ನಗಳ ಕಡೆ ಗಮನ ಹರಿಸಿದರೆ ಇನ್ನೂ ಒಳ್ಳೆಯದು.

– ಡಾ. ಯು. ಬಿ. ಪವನಜ

The post ಸೇವಾ ಜನೋ ಸುಖಿನೋ ಭವಂತು first appeared on Vishva Kannada.

ತಂತ್ರಾಂಶ ಚೌರ್ಯ -ಅಸಲು, ನಷ್ಟ ಯಾರಿಗೆ?
[ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ “ಒಂದು ಸೊನ್ನೆ” ಹೆಸರಿನ ಅಂಕಣದಲ್ಲಿ ಪ್ರಕಟವಾದ ಲೇಖನ]

[ಒಂದು    ಸೊನ್ನೆ – ೧ (೦೬-೦೬-೨೦೦೩)]

ಧ್ವನಿಸುರುಳಿಗಳಲ್ಲಿ ಹೇಗೋ ಹಾಗೆ ತಂತ್ರಾಂಶಗಳಲ್ಲೂ ಪೈರೆಸಿ ಅರ್ಥಾತ್ ಚೌರ್ಯದ (software piracy) ಪಿಡುಗು ಒಂದು ದೊಡ್ಡ ಸುದ್ದಿಯಾಗಿದೆ. ಇತ್ತೀಚಿಗೆ ಅಮೇರಿಕಾದ ಐ.ಡಿ.ಸಿ. (ಮಾರುಕಟ್ಟೆ ಸಂಶೋಧನಾ ಸಂಸ್ಥೆ) ಯವರು ಒಂದು ಸಂಶೋಧನೆ ನಡೆಸಿ ಅದರ ವಿವರಗಳ ಲೇಖನ ಪ್ರಕಟಿಸಿದ್ದಾರೆ. ಮಾಹಿತಿ ತಂತ್ರeನದ ಆಗುಹೋಗುಗಳನ್ನು ತಿಳಿಸುವ ಮತ್ತು ವಿಶ್ಲೇಷಿಸುವ ಹಲವು ಅಂತರಜಾಲ ತಾಣಗಳಲ್ಲಿ ಈ ಲೇಖನ ಪ್ರಕಟವಾಯಿತು. ಕನ್ನಡದ ಒಂದು ಪತ್ರಿಕೆಯೂ ಸೇರಿದಂತೆ ಕೆಲವು ಪತ್ರಿಕೆಗಳಲ್ಲೂ ಇದು ಪ್ರಕಟವಾಯಿತು.

ಈ ವರದಿಯ ಪ್ರಕಾರ ತಂತ್ರಾಂಶ ಚೌರ್ಯದಲ್ಲಿ ಹತ್ತು ಅಂಕಗಳಷ್ಟು ಕಡಿಮೆಯಾದರೂ ಪ್ರಪಂಚಕ್ಕೆ ಎಷ್ಟು ಒಳಿತಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ತಂತ್ರಾಂಶ ಚೌರ್ಯವನ್ನು ಅಳೆಯಲು ಅವರು ಒಂದು ಮಾಪನವನ್ನು ಹುಟ್ಟುಹಾಕಿದ್ದಾರೆ. ಇದು ಕಾನೂನುಬದ್ಧವಾಗಿ ಹಣ ಕೊಟ್ಟು ಕೊಂಡ ತಂತ್ರಾಂಶ ಮತ್ತು ಹಣ ಕೊಡದೆ ಇತರರಿಂದ ಪ್ರತಿಮಾಡಿಕೊಂಡ ತಂತ್ರಾಂಶಗಳಿಗಿರುವ ಅನುಪಾತವನ್ನು ತಿಳಿಸುತ್ತದೆ. ಈ ಮಾಪನದಂತೆ ಹತ್ತು ಅಂಕಗಳಷ್ಟು ತಂತ್ರಾಂಶ ಚೌರ್ಯ ಕಡಿಮೆಯಾದಲ್ಲಿ ಪ್ರಪಂಚದಲ್ಲಿ ವರ್ಷಕ್ಕೆ ೧೫ ಲಕ್ಷಗಳಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಿ ೨೦೦೬ನೆಯ ಇಸವಿಯ ಹೊತ್ತಿಗೆ ಸುಮಾರು ೧.೪ ಕೋಟಿಯಷ್ಟು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವುವು. ಸದ್ಯ ಪ್ರಪಂಚದಲ್ಲಿ ಬಳಕೆಯಾಗುತ್ತಿರುವ ತಂತ್ರಾಂಶಗಳಲ್ಲಿ ಶೇಕಡ ೪೦ ರಷ್ಟು ಕಾನೂನುಬದ್ಧವಲ್ಲ. ಇವುಗಳ ಪ್ರಮಾಣವನ್ನು ಶೇಕಡ ೩೦ಕ್ಕೆ ಇಳಿಸಿದರೂ ತಂತ್ರಾಂಶ ಉದ್ದಿಮೆ ೪೦೦ ಬಿಲಿಯನ್ (ಶತಕೋಟಿ) ಅಮೆರಿಕನ್ ಡಾಲರ್ ಮೊತ್ತದಷ್ಟು ಹೆಚ್ಚಿಗೆ ವ್ಯವಹಾರ ಮಾಡಬಲ್ಲುದು ಮತ್ತು ಸರಕಾರಕ್ಕೆ ೬೪ ಬಿಲಿಯನ್ ಡಾಲರ್ ಹೆಚ್ಚಿಗೆ ಹಣ ತೆರಿಗೆ ರೂಪದಲ್ಲಿ ಸಂಗ್ರಹವಾಗುವುದು. ಈ ಹಣದಿಂದ ಸರಕಾರವು ಎಷ್ಟು ಹೆಚ್ಚು ಶಾಲೆಗಳಿಗೆ ಗಣಕಗಳನ್ನು ಹಂಚಬಹುದು ಎಂಬುದನ್ನೂ ಇದೇ ವರದಿಯಲ್ಲಿ ತಿಳಿಸಲಾಗಿದೆ. ಎಲ್ಲ ವಿಷಯಗಳು ಸರಿಯಾಗಿಯೇ ಇವೆ. ಆದರೆ ಇದು ನೀವು ಯಾವ (ಯಾರ) ದೃಷ್ಟಿಕೋನದಿಂದ ನೋಡುತ್ತಿದ್ದೀರಿ ಎಂಬುದನ್ನು ಅವಲಂಬಿಸಿದೆ.

ತಂತ್ರಾಂಶ ಚೌರ್ಯ ಎಂದರೇನು? ಒಂದು ಕಂಪೆನಿ ತಂತ್ರಾಂಶವೊಂದನ್ನು ತಯಾರಿಸಿ ಮಾರುತ್ತಿದೆ ಎಂದಿಟ್ಟುಕೊಳ್ಳಿ. ಇದನ್ನು ಒಬ್ಬಾತ ಕೊಂಡುಕೊಳ್ಳುತ್ತಾನೆ. ಈ ತಂತ್ರಾಂಶಗಳು ಹೆಚ್ಚಾಗಿ ಸಿ.ಡಿ.ಯಲ್ಲಿರುತ್ತವೆ. ಒಂದು ಖಾಲಿ ಸಿ.ಡಿ. ೧೫ ರೂಪಾಯಿಗಳಿಗೆ ಸಿಗುತ್ತದೆ. ಈ ತಂತ್ರಾಂಶವನ್ನು ಖಾಲಿ ಸಿ.ಡಿ.ಯಲ್ಲಿ ಪ್ರತಿಮಾಡಿ ಅದನ್ನು ಹಂಚಿದರೆ ಅದು ಚೌರ್ಯವಾಗುತ್ತದೆ. ಭಾರತದಲ್ಲಿ ಬಳಕೆಯಲ್ಲಿರುವ ಬಹುಪಾಲು ತಂತ್ರಾಂಶಗಳು ಚೌರ್ಯದವೇ. ತಂತ್ರಾಂಶಗಳಲ್ಲಿ ಎರಡು ವಿಧ -ಉತ್ಪನ್ನ ಮತ್ತು ಸೇವೆ ಅಥವಾ ಗ್ರಾಹಕರ ಅಗತ್ಯಕ್ಕನುಗುಣವಾಗಿ ತಯಾರಿಸಿದ ತಂತ್ರಾಂಶ. ಚೌರ್ಯಕ್ಕೊಳಗಾಗುವುದು ತಂತ್ರಾಂಶ ಉತ್ಪನ್ನಗಳು. ಮೈಕ್ರೋಸಾಫ್ಟ್ ವಿಂಡೋಸ್, ಆಫೀಸ್, ಅಡೋಬ್ ಫೋಟೋಶಾಪ್, ಪೇಜ್‌ಮೇಕರ್, ಕೋರೆಲ್‌ಡ್ರಾ ಇತ್ಯಾದಿಗಳು ಉತ್ಪನ್ನಗಳಿಗೆ ಉದಾಹರಣೆಗಳು. ಬ್ಯಾಂಕಿಂಗ್, ರೈಲ್ವೆ, ಅಂತರಜಾಲ ತಾಣ ನಿರ್ಮಾಣ, ವೇತನ, ಕಚೇರಿ ನಿರ್ವಹಣೆ, ಇತ್ಯಾದಿ ಆಯಾ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ತಂತ್ರಾಂಶ ತಯಾರಿಸಿದರೆ ಅದು ಸೇವೆ ಎಂದೆನಿಸಿಕೊಳ್ಳುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಚೌರ್ಯಕ್ಕೊಳಪಡುತ್ತಿರುವುದು ತಂತ್ರಾಂಶ ಉತ್ಪನ್ನಗಳು. ಗಣಕ ಕೊಂಡಾಗ ನಿಮಗೆ ಗಣಕ ಮಾರಿದ ವ್ಯಾಪಾರಿ ಹಲವಾರು ತಂತ್ರಾಂಶಗಳನ್ನು ತುಂಬಿಸಿ ಕೊಟ್ಟಿರುತ್ತಾನೆ. ಆದರೆ ಇದು ಕಾನೂನು ಬಾಹಿರ. ಈ ಎಲ್ಲ ತಂತ್ರಾಂಶಗಳನ್ನು ನೀವು ಕಾನೂನುಬದ್ಧವಾಗಿ ಹಣ ಕೊಟ್ಟು ಕೊಂಡರೆ ಅವುಗಳ ಒಟ್ಟು ಬೆಲೆ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ತಲುಪಬಹುದು. ಈ ಬೆಲೆ ಬಹುಪಾಲು ಭಾರತೀಯರಿಗೆ ದುಬಾರಿಯೇ. ಅಂತೆಯೇ ಭಾರತದಲ್ಲಿ ತಂತ್ರಾಂಶ ಚೌರ್ಯ ಅತಿ ಹೆಚ್ಚು.

ಒಂದು ಕಂಪೆನಿ ತಂತ್ರಾಂಶದ ಉತ್ಪನ್ನವನ್ನು ತಯಾರಿಸಿ ಮಾರುತ್ತಿದೆ ಎಂದಿಟ್ಟುಕೊಳ್ಳಿ. ಅದು ತಂತ್ರಾಂಶದ ತಯಾರಿಗೆ ಹಲವು ಉದ್ಯೋಗಿಗಳಿಗೆ ವರ್ಷಗಳ ಕಾಲ ಸಂಬಳ ಕೊಟ್ಟಿರುತ್ತದೆ. ಅಮೇರಿಕದಲ್ಲಿರುವ ಮೈಕ್ರೋಸಾಫ್ಟ್ ಕಂಪೆನಿಯ ಪ್ರಧಾನ ಕಚೇರಿಯಲ್ಲಿ ಸುಮಾರು ೫೦,೦೦೦ ಉದ್ಯೋಗಿಗಳಿದ್ದಾರೆ. ಅವರೆಲ್ಲರ ಒಟ್ಟು ಸಂಬಳ ಎಷ್ಟಿರಬಹುದೆಂದು ಊಹಿಸಿ. ಅದು ತಯಾರಿಸಿ ಮಾರುತ್ತಿರುವ ತಂತ್ರಾಂಶವನ್ನು ಹಣ ಕೊಟ್ಟು ಕೊಂಡುಕೊಳ್ಳದೆ ಚೌರ್ಯ ಮಾಡಿದರೆ ಸಹಜವಾಗಿಯೇ ಅದಕ್ಕೆ ನಷ್ಟವಾಗುತ್ತದೆ. ತಂತ್ರಾಂಶ ಚೌರ್ಯದ ಪಿಡುಗಿನಿಂದಾಗಿಯೇ ಹಲವು ಕಂಪೆನಿಗಳು ಬಾಗಿಲು ಮುಚ್ಚಬೇಕಾಗಿ ಬಂದಿವೆ.

ಈ ತಂತ್ರಾಂಶ ಉತ್ಪನ್ನಗಳನ್ನು ಯಾರು ತಯಾರಿಸುತ್ತಾರೆ? ಬಹುತೇಕ ಅಮೇರಿಕನ್ ಕಂಪೆನಿಗಳು. ಕೆಲವೇ ಕೆಲವು ಯುರೋಪಿಯನ್ ಮತ್ತು ಇನ್ನು ಕೆಲವು ಕೆನಡಾ ದೇಶದವುಗಳು. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಭಾರತೀಯ ತಂತ್ರಾಂಶ ಉತ್ಪನ್ನ ಯಾವುದೂ ಇಲ್ಲ. ಭಾರತ ದೇಶವು ತಂತ್ರಾಂಶ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದೆ. ಆದರೆ ಇವೆಲ್ಲ ಕೇವಲ ತಂತ್ರಾಂಶ ಸೇವೆಗೆ ಮೀಸಲಾಗಿವೆ.

ಅಮೇರಿಕದಲ್ಲಿರುವ ಬಹುಪಾಲು ತಂತ್ರಾಂಶ ತಯಾರಿಯ ಕಂಪೆನಿಗಳಲ್ಲಿ ಸುಮಾರು ಶೇಕಡ ೩೦ ರಷ್ಟು ಮಂದಿ ಭಾರತ ಸಂಜಾತರಿದ್ದಾರೆ. ಇವರೆಲ್ಲ ನಮ್ಮ ದುಡ್ಡಿನಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಐ.ಐ.ಟಿ., ಐ.ಐ.ಎಸ್‌ಸಿ., ಇತ್ಯಾದಿ ಖ್ಯಾತ ಸಂಸ್ಥೆಗಳಿಂದ ಉತ್ತಮ ಶಿಕ್ಷಣ ಪಡೆದು ಹೋದವರು. ಇವರನ್ನು ತಯಾರಿಸಲು ಅಮೇರಿಕದ ಯಾವ ಕಂಪೆನಿಯೂ ದುಡ್ಡು ಖರ್ಚು ಮಾಡಿರುವುದಿಲ್ಲ.  ಖರ್ಚಾದುದೇನಿದ್ದರೂ ನಮ್ಮ ನಿಮ್ಮ ತೆರಿಗೆಯ ಹಣ. ಇವರು ದುಡಿದು ತಯಾರಿಸಿದ ತಂತ್ರಾಂಶವನ್ನು ನಾವು ದುಬಾರಿ ಡಾಲರ್ ಬೆಲೆಯಲ್ಲಿ ಕೊಳ್ಳಬೇಕಾಗಿದೆ.

ವಿದೇಶದಲ್ಲಿ ಸಿದ್ಧವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಪುಸ್ತಕಗಳನ್ನು ಭಾರತದಲ್ಲಿ ಮೂಲ ಡಾಲರ್ ಬೆಲೆಯಲ್ಲಿ ಮಾರುತ್ತಿಲ್ಲ. ಪುಸ್ತಕಗಳ ಭಾರತೀಯ ಆವೃತ್ತಿಯನ್ನು ಭಾರತದಲ್ಲೇ ಮುದ್ರಿಸಿ ಕಡಿಮೆ ಬೆಲೆಗೆ ಮಾರಲಾಗುತ್ತಿದೆ. ಉದಾಹರಣೆಗೆ ಒಂದು ಪುಸ್ತಕದ ಅಮೇರಿಕನ್ ಆವೃತ್ತಿಗೆ ೬೦ ಡಾಲರ್ ಬೆಲೆ ಇರುವುದಾದರೆ ಅದರ ಭಾರತೀಯ ಆವೃತ್ತಿ ಸುಮಾರು ೫೦೦ ರೂಪಾಯಿಗಳಿಗೆ ಲಭ್ಯ. ಇದೇ ಸೂತ್ರವನ್ನು ತಂತ್ರಾಂಶಗಳಿಗೆ ಯಾವ ಕಂಪೆನಿಯೂ ಅನ್ವಯಿಸುತ್ತಿಲ್ಲ.

ತಂತ್ರಾಂಶ ತಯಾರಿಯ ಕಂಪೆನಿಗಳು ಭಾರತದಲ್ಲಿ ತಂತ್ರಾಂಶವನ್ನು ಮಾರುವಾಗ ತಂತ್ರಾಂಶದ ಮೂಲ ಬೆಲೆ ಡಾಲರ್‌ನಲ್ಲಿದ್ದರೆ ಅದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿ ಮಾರುತ್ತವೆ. ಕೇವಲ ಡಾಲರ್‌ನಿಂದ ರೂಪಾಯಿಗೆ ಪರಿವರ್ತಿಸುವುದು ಮಾತ್ರವಲ್ಲ, ಅದರ ಮೇಲೆ ಆಮದು ಸುಂಕ, ಮಾರಾಟ ತೆರಿಗೆ, ಇಲ್ಲಿಯ ಡೀಲರ್ ಸೇರಿಸುವ ತನ್ನ ಲಾಭ, ಇತ್ಯಾದಿಗಳು ಸೇರಲ್ಪಟ್ಟು ತಂತ್ರಾಂಶ ಬಡ ಭಾರತೀಯನ ಕೈಗೆಟುಲಾಗದಷ್ಟು ದುಬಾರಿಯಾಗುತ್ತದೆ. ೨೫೦ ಡಾಲರ್ ಮೂಲಬೆಲೆಯ ತಂತ್ರಾಂಶ ಭಾರತದಲ್ಲಿ ಸುಮಾರು ೨೩,೦೦೦ ರೂಪಾಯಿಗಳಿಗೆ ಮಾರಾಟವಾಗುತ್ತಿರುತ್ತದೆ.

ತಂತ್ರಾಂಶ ಚೌರ್ಯದಿಂದಾಗಿ ನಷ್ಟಕ್ಕೊಳಗಾಗುತ್ತಿರುವವರು ತಂತ್ರಾಂಶ ಉತ್ಪನ್ನಗಳನ್ನು ತಯಾರಿಸುವ ಅಮೇರಿಕನ್ ಕಂಪೆನಿಗಳೇ ವಿನಾ ತಂತ್ರಾಂಶ ಸೇವೆಯನ್ನಷ್ಟೇ ನೀಡುತ್ತಿರುವ ಭಾರತೀಯ ಕಂಪೆನಿಗಳಲ್ಲ. ಚೌರ್ಯ ಕಡಿಮೆಯಾದರೆ ಸರಕಾರದ ಬೊಕ್ಕಸಕ್ಕೆ ಆಮದು ಸುಂಕ ಮತ್ತು ತೆರಿಗೆ ರೂಪದಲ್ಲಿ ಸ್ವಲ್ಪ ಹಣ ಸಂಗ್ರಹವಾಗಬಹುದೆಂಬುದೇನೋ ನಿಜವೇ. ಆದರೆ ಈ ಹಣ ಅಂತಹ ದೊಡ್ಡ ಮಟ್ಟದ್ದೇನೂ ಅಲ್ಲ. ಯಾಕೆಂದರೆ ತಂತ್ರಾಂಶ ಉತ್ಪನ್ನಗಳಿಗೆ ಬಹುದೊಡ್ಡ ಗ್ರಾಹಕ ಸರಕಾರವೇ. ಇನ್ನೊಂದು ದೊಡ್ಡ ಗ್ರಾಹಕ ಎಂದರೆ ತಂತ್ರಾಂಶ ಕ್ಷೇತ್ರದ ಕಂಪೆನಿಗಳು. ಇವುಗಳಲ್ಲಿ ಬೆರಳೆಣಿಕೆಯ ಭಾರತೀಯ ಕಂಪೆನಿಗಳನ್ನು ಹೊರತುಪಡಿಸಿದರೆ ಉಳಿದವು ವಿದೇಶಿ ಮೂಲದವೇ. ಅಂದರೆ ಚೌರ್ಯ ಕಡಿಮೆಯಾದರೆ ಲಾಭ ಹೆಚ್ಚಾಗುವುದೆಂದು ಐ.ಡಿ.ಸಿ. ಹೇಳಿರುವುದು ಅಮೇರಿಕಾಕ್ಕೆ ಅನ್ವಯಿಸುವುದೇ ವಿನಾ ಭಾರತಕ್ಕಲ್ಲ.

ಭಾರತದಲ್ಲಿ ತಂತ್ರಾಂಶ ಚೌರ್ಯವನ್ನು ಕಡಿಮೆ ಮಾಡಬೇಕಾದರೆ ಅಮೇರಿಕನ್ ಮೂಲದ ಕಂಪೆನಿಗಳು ಮಾಡ ಬೇಕಾದುದೇನೆಂದರೆ ತಮ್ಮ ತಂತ್ರಾಂಶವನ್ನು ಭಾರತೀಯರ ಕೈಗೆಟುಕುವ ಬೆಲೆಯಲ್ಲಿ ಮಾರುವುದು. ನಮ್ಮ ದೇಶದಿಂದ ಪ್ರತಿಭಾವಂತರನ್ನು ಅನಾಯಾಸವಾಗಿ ಪಡೆದಿರುವ ಈ ಕಂಪೆನಿಗಳು ಭಾರತ ದೇಶದ ಋಣವನ್ನು ಈ ರೀತಿಯಲ್ಲಾದರೂ ತೀರಿಸಬಹುದು.

ಕರ್ನಾಟಕ ಸರಕಾರವು ಶೂನ್ಯ ಚೌರ್ಯದ (Zero Piracy) ರಾಜ್ಯ ಎಂದು ಘೋಷಿಸಿಕೊಂಡಿದೆ. ಸರಕಾರದ ಯಾವ ಕಚೇರಿಯಲ್ಲೂ ಕಾನೂನುಬದ್ಧವಲ್ಲದ ತಂತ್ರಾಂಶ ಇರಕೂಡದು ಎಂದು ಸುತ್ತೋಲೆ ಜಾರಿ ಮಾಡಲಾಗಿದೆ. ಈ ಬಗ್ಗೆ ಒಂದು ಪತ್ರಿಕಾಗೋಷ್ಠಿಯನ್ನೂ ಕರೆಯಲಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯವರಿಗೆ ತಂತ್ರಾಂಶ ಚೌರ್ಯದ ಸುತ್ತ ಇರುವ ಈ ಸೂಕ್ಷ್ಮಗಳನ್ನೆಲ್ಲ ವಿವರಿಸಿಲಾಯಿತು. ವಿದೇಶಿ ಕಂಪೆನಿಗಳು ತಮ್ಮ ತಂತ್ರಾಂಶಗಳಿಗೆ ಭಾರತದಲ್ಲಿ ಮಾರಲು ಪ್ರತ್ಯೇಕ (ಕಡಿಮೆ) ಬೆಲೆ ಇಡುವಂತೆ ಸರಕಾರವು ಕೇಳಿಕೊಳ್ಳಬೇಕು ಎಂದು ಕಾರ್ಯದರ್ಶಿಯವರಿಗೆ ವಿಶೇಷ ಮನವಿ ಮಾಡಲಾಯಿತು. ಆದರೆ ಇದರಿಂದ ಏನೇನೂ ಪ್ರಯೋಜನವಾದಂತೆ ಕಂಡುಬಂದಿಲ್ಲ. ಭಾರತೀಯರ ಕೈಗೆಟುಕುವಂತೆ ತಂತ್ರಾಂಶದ ಬೆಲೆ ನಿಗದಿಪಡಿಸಿ ಎಂದು ಸರಕಾರವು ಯಾವುದೇ ಅಮೇರಿಕನ್ ಕಂಪೆನಿಗೆ ಹೇಳಿರುವುದು ವರದಿಯಾಗಿಲ್ಲ.

(ಇತ್ತೀಚೆಗೆ ಮೈಕ್ರೋಸಾಫ್ಟ್ ಕಂಪೆನಿ ವಿಂಡೋಸ್‌ನ ಪ್ರಾರಂಭಿಕ ಆವೃತ್ತಿಯನ್ನು ಕಡಿಮೆ ಬೆಲೆಗೆ ಭಾರತದಲ್ಲಿ ನೀಡಲು ಪ್ರಾರಂಬಭಿಸಿದೆ (೧೭-೧೧-೨೦೦೫))

– ಡಾ. ಯು. ಬಿ. ಪವನಜ

The post ತಂತ್ರಾಂಶ ಚೌರ್ಯ -ಅಸಲು, ನಷ್ಟ ಯಾರಿಗೆ? first appeared on Vishva Kannada.