Press "Enter" to skip to content

Posts published in “ವಿಮರ್ಶೆ”

ಪುಸ್ತಕ, ಧ್ವನಿಸುರುಳಿ, ಸಿಡಿ, ಇತ್ಯಾದಿಗಳ ವಿಮರ್ಶೆ

ಕಡಿಮೆ ವೆಚ್ಚದಲ್ಲಿ ವಿದೇಶ ಪ್ರಯಾಣಕ್ಕೊಂದು ಕೈಪಿಡಿ

ಶ್ರೀನಿಧಿ ಹಂದೆಯವರ “ವಿಶ್ವ ದರ್ಶನ, ಬಜೆಟ್‌ನಲ್ಲಿ” ಪುಸ್ತಕ   ಕನ್ನಡದಲ್ಲಿ ಪ್ರವಾಸ ಸಾಹಿತ್ಯ ವಿಪುಲವಾಗಿದೆ. ೧೯ನೆಯ ಶತಮಾನದಲ್ಲೇ ಪ್ರವಾಸಗಳ ಬಗ್ಗೆ ಪುಸ್ತಕಗಳು ಕನ್ನಡದಲ್ಲಿ ಬಂದಿವೆ. ಪುಸ್ತಕಗಳಿಗೆ ಪ್ರಶಸ್ತಿ ನೀಡುವಾಗಲೂ ಪ್ರವಾಸ ಸಾಹಿತ್ಯ ಎಂಬ ಪ್ರತ್ಯೇಕ…

ಮುಂಬೈ ಅಣುಶಕ್ತಿ ಕೇಂದ್ರದಿಂದ ಕನ್ನಡದ "ಬೆಳಗು"

- ಆರ್. ಜಿ. ಹಳ್ಳಿ ನಾಗರಾಜ್

ಮಾಹಿತಿ ತಂತ್ರಜ್ಞಾನದ ಮೂಲಕ ವಿಶ್ವದ ವ್ಯವಹಾರವೆಲ್ಲ ನಡೆಯುತ್ತಿದೆಯೇನೋ ಅನ್ನುವ ಅನುಭವ, ತಿಳಿವಳಿಕೆ ಎಲ್ಲೆಲ್ಲೂ ಮನೆಮಾಡಿದೆ. ತಂತ್ರಜ್ಞಾನದ ಮೂಲಕ ಭಾರತದ ಒಂದೆರಡು ನಗರಗಳು ವಿಶ್ವಭೂಪಟದಲ್ಲಿ ಸ್ಥಾನ ಪಡೆದಿವೆ. ತಂತ್ರಜ್ಞಾನದ ಪ್ರಗತಿ ವಿಜ್ಞಾನದ ದಾಪುಗಾಲಿಗೆ ಮತ್ತೊಂದು ಹೆಸರು. ಮಾಹಿತಿ ತಂತ್ರಜ್ಞಾನದ ಇವೊತ್ತಿನ ಬಹುತೇಕ ಚರ್ಚೆಯನ್ನು ಬದಿಗಿರಿಸಿ, ವಿಜ್ಞಾನದಲ್ಲಿ ಹೊಸ ಪ್ರಯೋಗ, ಸಾಧನೆ ಮಾಡಿರುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಬಾಹ್ಯಾಕಾಶ, ಅಣುಶಕ್ತಿ ಉತ್ಪಾದನೆ, ಅದರ ಸೂಕ್ತ ಬಳಕೆ ಭಾರತದ ಸಾಧನೆ ವಿಶ್ವಗಮನ ಸೆಳೆದದ್ದು ಇತಿಹಾಸ.

ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ

- ಸ್ವರೂಪ ಭೂಷಣ

ನಮ್ಮ ನಾಡಿನ ಸಾಂಪ್ರದಾಯಕ ಹೆಸರಾದ "ಕರ್ನಾಟಕ" ಎಲ್ಲಿಂದ ಬಂತು? ಕಪ್ಪು ವರ್ಣದ ಮಣ್ಣಿನ ಸಂಕೇತವಾಗಿ ಬಂದ ಬಿರುದೇ ಇದು? ಅಥವ ಅತಿ ಎತ್ತರವಿರುವ ನಮ್ಮ ಭೂಮಾತೆ, ಕರುನಾಡು ಎಂದು ಕರೆಯಲ್ಪಟ್ಟಿತೆ? ಕರ್ನಾಟಕ ಹಾಗು ಕನ್ನಡಿಗರ ನಿಜ ಸ್ವರೂಪವು ಅವರ ಹಿನ್ನೆಲೆಯಲ್ಲಿಯೇ ಅಡಗಿದೆ. ಈ ಹಿನ್ನೆಲೆಯನ್ನು ಸಚಿತ್ರವಾಗಿ "ಕರ್ನಾಟಕದ ಐತಿಹಾಸಿಕ ಭೂಪಟ ಗ್ರಂಥ" ಯಲ್ಲಿ ಪ್ರಸ್ತುತಿಸಲ್ಪಟ್ಟಿದೆ. ಆಂಗ್ಲ ಭಾಷೆಯಲ್ಲಿರುವ ಈ ಪುಸ್ತಕದ ಹೆಸರು "ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ" ಎಂದು.

'ಮಾಯಾಲೋಕ'ದ ಮೊದಲನೋಟ

- ಬೇಳೂರು ಸುದರ್ಶನ

ಹಿರಿಯ ತಲೆಮಾರಿನ ಲೇಖಕರೆಲ್ಲ ಇನ್ನೂ A4 ಹಾಳೆಗಳ ನಡುವೆಯೇ ಬರವಣಿಗೆಯನ್ನು ನಡೆಸುತ್ತಾ ಇರೋ ಕಾಲದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್‌ಗೂ ಕೈ ಹಾಕಿದ ಸಾಹಿತಿ ನಮ್ಮ ಪ್ರೀತಿಯ ಪೂರ್ಣಚಂದ್ರ ತೇಜಸ್ವಿಯವರು. ಎಲ್ಲರೂ ಕಥೆ ಕಾದಂಬರಿ ಬರೀತಾ ಇದ್ದರೆ ಅವರು ಅದೆಲ್ಲವನ್ನೂ ಬರೆದು ಮಾಹಿತಿ ಸಾಹಿತ್ಯಕ್ಕೂ ಬಂದರು; ಕಿರಗೂರಿನ ಗಯ್ಯಾಳಿಗಳೂ ಬೆದರುವಂಥ ಮಿಲೆನಿಯಮ್ ಬಿರುಗಾಳಿ ಬೀಸಿದರು. ಕಂಪ್ಯೂಟರಿನಲ್ಲಿ ಕನ್ನಡವು ಅರಳಬೇಕೆಂದು ಬೆಂಗಳೂರಿಗೆ ಬಂದು ಪ್ರೆಸ್‌ಮೀಟ್ ಮಾಡಿದರು. ಪಂಪ ಪ್ರಶಸ್ತಿ ಬಂದರೂ ಬನವಾಸಿಯನ್ನು ನೆನೆಯಲಿಲ್ಲ. ಅಪ್ಪನಿಗಿಂತ ಶಿವರಾಮ ಕಾರಂತರೇ ನನ್ನ ಎದುರಿನ ಮಾದರಿ ಎಂದಿದ್ದೂ ಇದೆ.

ಪದ್ಯಕ್ಕೂ ಸೈ. ಗದ್ಯಕ್ಕೂ ಸೈ

- ಡಾ. ಯು. ಬಿ. ಪವನಜ

ಕವಿತೆ ನೀನೇಕೆ ಪದಗಳಲ್ಲಿ ಅವಿತೆ ಎಂದು ವೈಎನ್‌ಕೆ ತಮ್ಮ ಚುಟುಕವೊಂದರಲ್ಲಿ ಬರೆದಿದ್ದರು. ಕನ್ನಡದಲ್ಲಿ ಚುಟುಕಗಳಿಗೆ ತಮ್ಮದೇ ಆದ ಇತಿಹಾಸ ಪರಂಪರೆ ಇದೆ. ಈ ಸಾಲಿನಲ್ಲಿ ಈಗಿನ ದೊಡ್ಡ ಹೆಸರು ಡುಂಡಿರಾಜ್. ಚಿಕ್ಕ ಕವನಗಳಿಗೆ ದೊಡ್ಡ ಹೆಸರು ಅವರದು. ಡುಂಡಿರಾಜರ ಬೀಸಣಿಗೆಗಳಲ್ಲಿ ನಾನೂ ಒಬ್ಬ. ಡುಂಡಿರಾಜರ ಚುಟುಕಗಳನ್ನು ಪ್ರಕಟಿಸದ ಕನ್ನಡ ಪತ್ರಿಕೆ, ಓದದ ಕನ್ನಡ ಓದುಗ ಇರಲಾರರು. ವಾರಪತ್ರಿಕೆ, ಮಾಸಪತ್ರಿಕೆ, ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ ಚುಟುಕಗಳನ್ನು ಫಿಲ್ಲರ್ ರೀತಿಯಲ್ಲಿ ಬಳಸುವ ಪದ್ಧತಿ ಇದೆಯಾದರೂ ಬಹಳಷ್ಟು ಮಂದಿ ಓದುಗರು ಈ ಚುಟುಕಗಳನ್ನು ಮತ್ತು ನಗೆಹನಿಗಳನ್ನು ಮೊದಲು ಓದಿ ನಂತರ ಇತರೆ ಲೇಖನಗಳನ್ನು ಓದುತ್ತಾರೆ ಎಂಬುದೂ ಸತ್ಯ. ಇಷ್ಟೆಲ್ಲ ಡುಂಡಿರಾಜ್ ಮತ್ತು ಅವರ ಚುಟುಕಗಳ ಬಗ್ಗೆ ಹೇಳಿರುವುದು ನೋಡಿದರೆ ನಾನಿಲ್ಲಿ ಬರೆಯಹೊರಟಿರುವುದು ಅವರ ಇನ್ನೊಂದು ಚುಟುಕಗಳ ಸಂಗ್ರಹದ ಬಗ್ಗೆ ಎಂದುಕೊಳ್ಳುತ್ತೀರೇನೋ. ಆದರೆ ವಸ್ತು ಸ್ಥಿತಿ ಅದಲ್ಲ. ಡುಂಡಿರಾಜ್ ಅವರು ದಿನಪತ್ರಿಕೆಯೊಂದರಲ್ಲಿ “ಮಾತು ಕ(ವಿ)ತೆ” ಎಂಬ ಹೆಸರಿನಲ್ಲಿ ಅಂಕಣ ಬರೆಯುತ್ತಾರೆ. ಇದರಲ್ಲಿ ಗದ್ಯ ಮತ್ತು ಪದ್ಯಗಳ ಸಮ್ಮಿಶ್ರಣವಿದೆ. ಈ ಅಂಕಣದ ೪೫ ಲೇಖನಗಳನ್ನು ಅಂಕಿತ ಪುಸ್ತಕ ಪ್ರಕಾಶನದವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದ ಹೆಸರೂ “ಮಾತು ಕ(ವಿ)ತೆ”.