ಬೆಸೆದ ತಂತಿ ಬೆಸೆದ ಹಕ್ಕಿ

Thursday, August 27th, 2020
ಬೆಸೆದ ತಂತಿ ಬೆಸೆದ ಹಕ್ಕಿ

ಬೀಳಾಕಾಶ ಬೋರು ಎನಿಸಿ ತಂತಿಗಳನು ಎಳೆದರು ತಂತಿ ಸಾಲದೆಂದುಕೊಂಡು ಹಕ್ಕಿಯೆರಡು ಬಂದವು ಬೆಸೆದ ತಂತಿ ಬೆಸೆದ ಹಕ್ಕಿ ಹಿಂದೆ ಅಗಾಧ ಆಗಸ ಚಿತ್ರ ರಚಿತ ರೀತಿ ನೋಡಿ ಬಯಲಿಗಾಯ್ತು ಸಂತಸ ಪಕ್ಕಿಗಾನಕಿಲ್ಲಿ ತಂತಿ ಪಕ್ಕವಾದ್ಯವಾಗಿ ಮಿಡಿದ ರೀತಿ ಕಂಡು ಸುತ್ತಲಿರುವ ಮರಗಿಡಗಳು ತೂಗಿವೆ ಖಾಲಿಗೊಂದು ಅರ್ಥ ಬಂದ ಮೌನವಳಿದು ಗಾನ ಹರಿದ ರಂಗಮಂಚಕೀಗ ಮಳೆಯು ಇಳಿದು ತಾನು ಬರಲಿದೆ ಕೊಡೆಯ ಹಿಡಿದ ನೀವೆಲ್ಲರು ಗಗನಮುಖಿಗಳಾಗಿ ಬಂದು ಉಚಿತವಾಗಿ ಖಚಿತಖುಷಿಯ ಪಡೆದುಕೊಂಡು ಹೋಗಿರಿ – ಸುಶ್ರುತ ದೊಡ್ಡೇರಿ

ಅವಳ ನೆನಪು

Monday, July 23rd, 2007

– ಗುರುಮೂರ್ತಿ ಬಬ್ಬಿಗದ್ದೆ, ಹಾಂಗ್ ಕಾಂಗ್

ಬಿಟ್ಟು ಬಂದೆ ಬಿಟ್ಟು ಬಂದೆ ನಮ್ಮ ನೆಲವನು

ಬದುಕು-ಬವಣೆ

Monday, May 21st, 2007

– ಗಿರೀಶ ಶೆಟ್ಟಿ

ಒಣ ಮರದ ಕೊನೆ ಕೊನೆಯಲಿ ಚಿಗುರೊಡೆದ ಎಳೆ ರೆಂಬೆ
ಸುಡು ಬಿಸಿಲ ಕಡು ಕೋಪಕೆ ಕರಟಿಹೊಯ್ತ ಮುರುಟಿ ಮುರುಟಿ

ನಯನ

Tuesday, May 8th, 2007

– ರಮಾ ಶಾಸ್ತ್ರಿ

ದಿನವೂ ನಡೆದಿತ್ತು
ಅವರೀರ್ವರ
ನಯನಗಳ
ಮಿಲನ ||

ನಯನ
ನನ್ನವಳಾಗುವ
ದಿನ

ಮಾವು ನಾವು, ಬೇವು ನಾವು

Thursday, March 30th, 2006

– ಕೆ.ಎಸ್. ನರಸಿಂಹಸ್ವಾಮಿ

ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,

ಯುಗಾದಿ

Thursday, March 30th, 2006

– ದ. ರಾ. ಬೇಂದ್ರೆ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು

Monday, December 26th, 2005

– ಹುಯಿಲಗೋಳ ನಾರಾಯಣರಾವ್

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.

ಹಚ್ಚೇವು ಕನ್ನಡದ ದೀಪ

Monday, December 26th, 2005

– ಡಿ. ಎಸ್. ಕರ್ಕಿ

ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು |

ಹನಿಗವನಗಳು

Thursday, November 10th, 2005

ಕನಸು

ಮುಗ್ಧ ನಯನಗಳಲಿ ಕಲ್ಪನೆಯಾ ಸರಮಾಲೆ
ಹೃದಯ ಚಿತ್ತಾರದಲಿ ಬಣ್ಣದಾ ರಂಗೋಲೆ
ನಿದಿರೆಯ ಮಂಪರಲಿ ಹಂಬಲದಾ ಅಲೆ