ಕನ್ನಡಪ್ರಭ ಪತ್ರಿಕೆಯಲ್ಲಿ ಖ್ಯಾತ ವಿಜ್ಞಾನ ಲೇಖಕರು ಹಾಗೂ ಅತ್ಮೀಯರೂ ಆದ ಹಾಲ್ದೊಡ್ಡೇರಿ ಸುಧೀಂದ್ರ ಅವರ ಅಂಕಣ ಪ್ರತಿ ಭಾನುವಾರ ಇದೆ. ಇಂದಿನ ಅಂಕಣದಲ್ಲಿ ಆವರು ಬರೆಯುತ್ತಾರೆ -“ಭಾರತದ ಎಲ್ಲ ಪ್ರತಿಭಾನ್ವಿತರಂತೆ ಉನ್ನತ ವ್ಯಾಸಂಗಕ್ಕೆಂದು ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ಉಳಿದು ಮತ್ತಷ್ಟು ಕೀರ್ತಿ ಸಂಪಾದಿಸಿದವ”. ಇಲ್ಲಿ ಅವರು ಹೇಳುತ್ತಿರುವುದು ಅಮೇರಿಕಾದಲ್ಲಿರುವ ಒಬ್ಬ ಭಾರತೀಯ ಸಂಜಾತ ವಿಜ್ಞಾನಿಯ ಬಗ್ಗೆ. ಸುಧೀಂದ್ರರ ಪ್ರಕಾರ ಅಮೇರಿಕಾಕ್ಕೆ ತೆರಳದೆ ಇಲ್ಲೇ ಉಳಿದಿರುವ ನಾವು ಯಾರೂ ಪ್ರತಿಭಾನ್ವಿತರಲ್ಲ.
ನನಗೆ ತುಂಬ ಜಂಬ ಬಂದಿತ್ತು. ನಾನೊಬ್ಬ ಪ್ರತಿಭಾನ್ವಿತ ಅಂದುಕೊಂಡಿದ್ದೆ. ನನ್ನ ಜಂಬ ಇಳಿಸಿದ ಸುಧೀಂದ್ರರಿಗೆ ಧನ್ಯವಾದಗಳು. ಅಂದ ಹಾಗೆ ಈ ಪ್ರತಿಭಾನ್ವಿತರಲ್ಲದ ಜನರ ಪಟ್ಟಿಯಲ್ಲಿ ನನ್ನ ಜೊತೆ ಹಾಲ್ದೊಡ್ಡೇರಿ ಸುಧೀಂದ್ರ ಕೂಡ ಇದ್ದಾರೆ ;-).
Be First to Comment