ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಾಗಾರ

ದಯವಿಟ್ಟು ಈ ಪುಟ ಓದಿ –http://vishvakannada.com/node/338. ಅದರ ಕೊನೆಯಲ್ಲಿ ಬರುವ ಒಂದು ಸಂಭಾಷಣೆಯ ಕಡೆಗೆ ಸ್ವಲ್ಪ ಜಾಸ್ತಿ ಗಮನ ಕೊಡಿ. ನಮ್ಮಲ್ಲಿ ಬಹಪಾಲು ಜನರ ಅವಸ್ಥೆ ಹೀಗೆಯೇ ಇದೆ. ಕೆಲವರಿಗೆ ಕನ್ನಡವನ್ನು ಗಣಕದಲ್ಲಿ ಬಳಸಲು ಗೊತ್ತಿದೆ. ಪ್ರೋಗ್ರಾಮ್ಮಿಂಗ್ ಮಾಡಲೂ ಗೊತ್ತಿದೆ. ಆದರೆ ಅಂತಹವರ ಸಂಖ್ಯೆ ಬಹು ಕಡಿಮೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಸಮಗ್ರ ಇತಿಹಾಸ, ಸ್ಥಿತಿಗತಿ, ಮುಂದಿನ ದಾರಿ, ಆಲೋಚನೆಗಳು, ಮಾಡಬೇಕಾಗಿರುವ ಕ್ರಿಯಾಯೋಜನೆ, ಇತ್ಯಾದಿಗಳ ಬಗ್ಗೆ ಒಂದು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಡಿಸೆಂಬರ್‍ ೧೬, ೨೦೦೭ರ ಭಾನುವಾರ ಬೆಳಿಗ್ಗೆ ೯:೩೦ರಿಂದ ಮಧ್ಯಾಹ್ನ ೧:೩೦ರ ತನಕ ಈ ಕಾರ್ಯಾಗಾರ ನಡೆಯುತ್ತದೆ. ಮೂರು ದಶಕಗಳ ಹಿಂದೆಯೇ, ಕನ್ನಡದಲ್ಲಿ ಯಾವುದೇ ಲಿಪಿ ತಂತ್ರಾಂಶವೂ ಇಲ್ಲದಿದ್ದ ಕಾಲದಲ್ಲಿ ಇಂಗ್ಲಿಷ್ ಲಿಪಿಯಲ್ಲಿಯೇ ಕಷ್ಟಪಟ್ಟು ಮುದ್ದಣನ ಬಗ್ಗೆ ಸಂಶೋಧನೆ ನಡೆಸಿದ ಡಾ. ಶ್ರೀನಿವಾಸ ಹಾವನೂರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ. ಇಗೋ ಕನ್ನಡ ಖ್ಯಾತಿಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಅಧ್ಯಕ್ಷರಾಗಿರುತ್ತಾರೆ. ಭಾರತೀಯ ಭಾಷೆಗಳಿಗೆ ಪ್ರಥಮವಾಗಿ ಧ್ವನ್ಯಾತ್ಮಕ ಕೀಲಿಮಣೆ ಅಳವಡಿಸಿದ ಕೆ. ಪಿ. ರಾವ್ ಅವರು ಮುಖ್ಯ ಅತಿಥಿಯಾಗಿರುತ್ತಾರೆ. ಕಾರ್ಯಾಗಾರಕ್ಕೆ ಪ್ರವೇಶ ಉಚಿತ. ಆದರೆ pavanaja @ gmail . com ವಿಳಾಸಕ್ಕೆ ಒಂದು ಇಮೈಲ್ ಮಾಡಿ ನೋಂದಾವಣೆ ಮಾಡಿಸಿಕೊಳ್ಳತಕ್ಕದ್ದು. ದಯವಿಟ್ಟು ಬನ್ನಿ. ಆಸಕ್ತರಿಗೂ ತಿಳಿಸಿ.

1 Response to ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಾಗಾರ

  1. Raghu

    Link page annu click madidare…………………sari not found endu baruthide………..idakkenu parihara?ee link annu odalu nanu tumba utsukanagiddene………………………..yaradaru uttarisuvira?

Leave a Reply