Vishva Kannada Magazine

ರೈತರ ಆತ್ಮಹತ್ಯೆ ತಡೆಗೆ ಉಪಾಯ: ಗೋ ಆಧಾರಿತ ಕೃಷಿ

ಕಗ್ಗಲಿಪುರ ಗೋಲೋಕದಲ್ಲಿ ರೈತ ಸಮಾವೇಶ

ಬೆಂಗಳೂರು, ಫೆ, ೧೭, ೨೦೦೮: ಗೋ ಆಧಾರಿತ ಸ್ವಾವಲಂಬಿ ಕೃಷಿಯಿಂದ ಮಾತ್ರ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಬಹುದು. ಆದುದರಿಂದ ಸರ್ಕಾರಗಳು ಗೋ ಆಧಾರಿತ ಕೃಷಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ಗೋ ಆಧಾರಿತ ಕೃಷಿಕ ರಮೇಶರಾಜು ಅವರು ಇಲ್ಲಿ ಆಗ್ರಹಿಸಿದರು.

ಕಗ್ಗಲಿಪುರದಲ್ಲಿ ಸಮರ್ಪಣ - ೨೦೦೮

ಬೆಂಗಳೂರು, ಜನವರಿ ೨೭, ೨೦೦೮: ಬೆಂಗಳೂರಿನ ದಕ್ಷಿಣಕ್ಕೆ ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಕಗ್ಗಲಿಪುರದಲ್ಲಿರುವ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಫೆಬ್ರವರಿ ೧೭ರಂದು ಸಮರ್ಪಣ - ೨೦೦೮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನವಾಗಿ ರೈತರ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಪೂರ್ವಾಹ್ನ ೧೧ ಘಂಟೆಗೆ ರೈತರ ಸಮಾವೇಶವಿರುತ್ತದೆ. ಕನಕಪುರ ತಾಲೂಕಿನ ರೈತರ ಸಮಾವೇಶದಲ್ಲಿ “ಗೋಸಂರಕ್ಷಣೆಯ ಅಗತ್ಯ”, “ಗೋವು ಮತ್ತು ಆರ್ಥಿಕತೆ” ಈ ವಿಷಯಗಳ ಬಗ್ಗೆ ಉಪನ್ಯಾಸ ಮತ್ತು ಚರ್ಚೆಗಳಿರುತ್ತವೆ. ಅಪರಾಹ್ನದ ಕಾರ್ಯಕ್ರಮಗಳಲ್ಲಿ ಗೋವಿಗಾಗಿ ಸದ್ದಿಲ್ಲದೆ ದುಡಿಯುತ್ತಿರುವ ಎಲೆಮರೆಯ ಕಾಯಿಗಳಿಗೆ ಸೇವಾಪುರಸ್ಕಾರ ನೀಡಲಾಗುತ್ತದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಅಶೀರ್ವಚನದ ನಂತರ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತವೆ. ಕದ್ರಿ ಗೋಪಾಲನಾಥರ ಶಿಷ್ಯ ಶ್ರೀಧರ ಸಾಗರ ಅವರಿಂದ ಸ್ಯಾಕ್ಸಾಫೋನ್ ವಾದನ, ರವಿಚಂದ್ರ ಮತ್ತು ತಂಡದವರಿಂದ ಕೊಳಲು ಪ್ರಧಾನವಾಗಿರುವ ವಾದ್ಯವೃಂದ ರೂಪಕ ಹಾಗೂ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ತಂಡದವರಿಂದ ನೃತ್ಯ ರೂಪಕವಿರುತ್ತದೆ. ಕೊನೆಯಲ್ಲಿ ಗೋವುಗಳಿಗೆ ನೀರಾಜನ ಮತ್ತು ದೀಪೋತ್ಸವ ಕಾರ್ಯಕ್ರಮಗಳಿರುತ್ತವೆ. ಸಮಸ್ತರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋರಲಾಗಿದೆ. ಇಡೀ ದಿನ ಗವ್ಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಗವ್ಯ ಚಿಕಿತ್ಸೆಯ ವ್ಯವಸ್ಥೆ ಇರುತ್ತದೆ.

ಮಾತೆಯರ ಮಹಾ ಸಂಗಮ ಕೋಟಿ ನೀರಾಜನ

ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಗೋ ಸಂರಕ್ಷಣೆಯ ಇನ್ನೊಂದು ಹೆಜ್ಜೆ.
ಅರಮನೆ ಮೈದಾನದಲ್ಲಿ ನ. ೧೮ಕ್ಕೆ ಲಕ್ಷ ಮಹಿಳೆಯರಿಂದ ಗೋ ಮಾತೆಗೆ ಕೋಟಿ ಆರತಿ

ಜೆ.ಎಸ್.ಡಬ್ಲ್ಯು ಸ್ಟೀಲ್‌ಗೆ ಪ್ರಶಸ್ತಿ

ಬೆಂಗಳೂರು, ನವೆಂಬರ್‍ ೯, ೨೦೦೭: ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ವಿಜಯನಗರ ಸ್ಥಾವರವು ಸತತ ಮೂರನೇ ವರ್ಷವೂ ಸಿ ಐ ಐ - ಎಕ್ಸಿಮ್ ಬ್ಯಾಂಕಿನ ಬ್ಯುಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ೨೦೦೭ರಲ್ಲಿ ಗಮನಾರ್ಹ ಸಾಧನೆಯ ಕಮೆಂಡೇಶನ್ ಸರ್ಟಿಫಿಕೇಟ್ ಪಡೆದು ಹ್ಯಾಟ್ರಿಕ್ ಸಾಧಿಸಿದೆ. ಕಳೆದ ಎರಡು ವರ್ಷಗಳಲ್ಲೂ ಸಂಸ್ಥೆಯು ಈ ಕಮೆಂಡೇಶನ್ ಸರ್ಟಿಫಿಕೇಟನ್ನು ಪಡೆದಿತ್ತು. ಇದೇ ನವೆಂಬರ್ ೧ರಂದು ಬೆಂಗಳೂರಿನಲ್ಲಿ ನಡೆದ ಸಿ ಐ ಐ ಇನ್ಸ್ಟಿಟ್ಯೂಟ್ ಆಫ್ ಕ್ವಾಲಿಟಿಯ ೧೫ನೇ ಗುಣಮಟ್ಟ ಶೃಂಗಸಭೆಯಲ್ಲಿ ಈ ಪ್ರಕಟಣೆ ಮಾಡಲಾಗಿದೆ. ಇದು ಭಾರತದಲ್ಲಿ ವ್ಯವಹಾರ ದಕ್ಷತೆಗಾಗಿ ಇರುವ ಕೆಲವೇ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ.

೧೯೯೪ರಲ್ಲಿ ಸಿ ಐ ಐ (ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ಮತ್ತು ಎಕ್ಸ್ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಸ್ಥಾಪಿಸಿದ ಈ ಪ್ರಶಸ್ತಿಯು ``ಸಂಘಟನಾ ಸ್ಪರ್ಧಾತ್ಮಕತೆಯಲ್ಲಿ ಗಮನಾರ್ಹ ಅಂಶವಾಗಿ ವ್ಯವಹಾರ ಕಾರ್ಯದಕ್ಷತೆಯನ್ನು ಸಾಧಿಸಿದ್ದನ್ನು'' ಗುರುತಿಸುತ್ತದೆ. ಎಲ್ಲಾ ಸ್ವರೂಪಗಳಲ್ಲಿ ಇರುವ ಸಂಘಟನಾ ಕಾರ್ಯದಕ್ಷತೆಯನ್ನು ಗುರುತಿಸಿ, ಉತ್ತೇಜಿಸುವುದೇ ಸಿ ಐ ಐ - ಎಕ್ಸಿಮ್ ಬ್ಯಾಂಕ್ ಪ್ರಶಸ್ತಿಯ ಉದ್ದೇಶವಾಗಿದೆ. ೨೦೦೮ರ ಹೊತ್ತಿಗೆ ವಾರ್ಷಿಕ ಏಳು ದಶಲಕ್ಷ ಟನ್ ಉಕ್ಕು ಉತ್ಪಾದನೆಯ ಗುರಿಯನ್ನು ಸಾಧಿಸುವತ್ತ ದಾಪುಗಾಲಿಟ್ಟಿರುವ ಜೆ ಎಸ್ ಡಬ್ಲ್ಯು ಸ್ಟೀಲ್ ವಿಜಯನಗರ ಸ್ಥಾವರವು ೨೦೧೦ರಲ್ಲಿ ಹತ್ತು ವಾರ್ಷಿಕ ದಶಲಕ್ಷ ಟನ್ ಉಕ್ಕು ಉತ್ಪಾದನೆಯನ್ನು ಸಾಧಿಸಲಿದೆ. ಆಗ ಇದು ದೇಶದಲ್ಲೇ ಒಂದೇ ಸ್ಥಾವರದಲ್ಲಿ ಅತಿಹೆಚ್ಚು ಉಕ್ಕು ಉತ್ಪಾದಿಸುವ ಸ್ಥಾವರವಾಗಲಿದೆ.