Vishva Kannada Magazine

- ಡಾ. ಯು. ಬಿ. ಪವನಜ

ಸಂಗೀತದಲ್ಲಿ ಆಸಕ್ತಿ ಇಲ್ಲದವರು ಇಲ್ಲವೇ ಇಲ್ಲ ಎನ್ನಬಹುದು. ಸಿನಿಮಾ, ಭಾವಗೀತೆ. ಶಾಸ್ತ್ರೀಯ, ವಿದೇಶೀಯ, ಹೀಗೆ ಯಾವುದಾದರೊಂದು ಬಗೆಯ ಸಂಗೀತವನ್ನು ಆಲಿಸದ ಮಂದಿಯ ಸಂಖ್ಯೆ ಅತಿ ಕಡಿಮೆ. ಹೀಗೆ ಸಂಗೀತ ಪ್ರಿಯರಿಗೆ ಸಂಗೀತ ಆಲಿಸಲು ಹಲವು ಸಲಕರಣೆಗಳು ಲಭ್ಯವಿವೆ. ಡಿಜಿಟಲ್ ಉಪಕರಣಗಳ ಆವಿಷ್ಕಾರವಾದ ಮೇಲಂತೂ ಚಿತ್ರವಿಚಿತ್ರ ಉಪಕರಣಗಳು ಮಾರುಕಟ್ಟೆಗೆ ಲಗ್ಗೆಯಿಡತೊಡಗಿವೆ. ಅವುಗಳಲ್ಲೊಂದು ಪ್ರಮುಖ ವಿಭಾಗ ಎಂಪಿ-೩ ಪ್ಲೇಯರುಗಳದು. ಗಣಕಗಳಲ್ಲಿ ಹಾಡುಗಳ ಕಡತಗಳ ಗಾತ್ರವನ್ನು ಕುಗ್ಗಿಸಿ ಶೇಖರಿಸಿಡುವ ಒಂದು ವಿಧಾನಕ್ಕೆ ಎಂಪಿ-೩ ಎಂದು ಕರೆಯುತ್ತಾರೆ. ಒಂದು ಭಾವಗೀತೆಯ ಎಂಪಿ-೩ ಹಾಡಿನ ಕಡತದ ಗಾತ್ರ ಸುಮಾರು ೫ ಮೆಗಾಬೈಟ್‌ಗಳಷ್ಟಿರುತ್ತದೆ. ೨೫೬ ಮೆಗಾಬೈಟಿನ ಒಂದು ಎಂಪಿ-೩ ಪ್ಲೇಯರಿನಲ್ಲಿ ಸುಮಾರು ೫೦ ಹಾಡುಗಳನ್ನು ಸಂಗ್ರಹಿಸಿಬಹುದು. ಅಂದರೆ ಸುಮಾರು ೬ ಗಂಟೆ ಕಾಲ ತಡೆಯಿಲ್ಲದೆ ಹಾಡು ಕೇಳಬಹುದು. ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಹಲವಾರು ನಮೂನೆಯ ಎಂಪಿ-೩ ಪ್ಲೇಯರುಗಳು ಲಭ್ಯವಿವೆ. ಅವುಗಳಲ್ಲಿ ನಾವೀಗ ಕ್ರಿಯೇಟಿವ್ ಕಂಪೆನಿಯ ಮುವೋ ಟಿಎಕ್ಸ್ ಎಫ್‌ಎಂ ಮಾದರಿಯನ್ನು ಸ್ವಲ್ಪ ಪರಿಶೀಲಿಸೋಣ.

- ಡಾ. ಯು. ಬಿ. ಪವನಜ

ಮೊಬೈಲ್ ಫೋನು ಬಳಸುವಾಗ ತುಂಬ ಹೊತ್ತು ಮಾತನಾಡಿದರೆ ಕಿವಿ ಬಿಸಿಯಾಗುವುದು ಗೊತ್ತಿದೆ ತಾನೆ? ಇದಕ್ಕೆ ಪರಿಹಾರವಾಗಿ ಹೆಚ್ಚಿನ ಮಂದಿ ಇಯರ್‌ಫೋನ್ ಬಳಸುವುದೂ ಗೊತ್ತಿರಬಹುದು. ಈ ಇಯರ್‌ಫೋನುಗಳಲ್ಲಿ ಎರಡು ವಿಧ -ತಂತಿ ಮೂಲಕ ಸಂಪರ್ಕಿಸುವಂತಹುದು ಮತ್ತು ನಿಸ್ತಂತು. ನಿಸ್ತಂತು ಇಯರ್‌ಫೋನುಗಳು ಸಾಮಾನ್ಯವಾಗಿ ಬ್ಲೂಟೂತ್ ವಿಧಾನ ಮೂಲಕ ಫೋನಿಗೆ ಸಂಪರ್ಕ ಸಾಧಿಸುತ್ತವೆ. ಬ್ಲೂಟೂತ್ ಇಯರ್‌ಫೋನುಗಳಲ್ಲಿ ಕೂಡ ಮುಖ್ಯವಾಗಿ ಎರಡು ವಿಧ -ಮೋನೋ ಮತ್ತು ಸ್ಟೀರಿಯೋ. ಮೋನೋ ಇಯರ್‌ಫೋನುಗಳನ್ನು ತುಂಬ ಮಂದಿ ಬಳಸುತ್ತಾರೆ. ಇವುಗಳನ್ನು ಸಾಮನ್ಯವಾಗಿ ಕಿವಿಗೆ ಜೋಡಿಸಿರುತ್ತಾರೆ. ಇವುಗಳನ್ನು ಮಾತನಾಡಲು ಮಾತ್ರ ಬಳಸಬಹುದು. ಸಂಗೀತ ಆಲಿಸಲು ಇವು ಉಪಯುಕ್ತವಲ್ಲ. ಸಂಗೀತ ಆಲಿಸಲು ಸ್ಟೀರಿಯೋ ಇಯರ್‌ಫೋನೇ ಉತ್ತಮ. ಸ್ಟೀರಿಯೋ ಬ್ಲೂಟೂತ್ ಇಯರ್‌ಫೋನಿಗೆ ಒಂದು ಉದಾಹರಣೆ ಮೋಟೊರೋಲ ಕಂಪೆನಿಯ ಎಸ್-೭೦೫.

- ಡಾ. ಯು. ಬಿ. ಪವನಜ

ಮೈಕ್ರೋಸಾಫ್ಟ್ ಕಂಪೆನಿ ತಂತ್ರಾಂಶ (ಸಾಫ್ಟ್ವೇರ್) ತಯಾರಿಕೆಗೆ ಜಗತ್ಪ್ರಸಿದ್ಧ. ಅವರು ಕೆಲವು ಯಂತ್ರಾಂಶಗಳನ್ನೂ (ಹಾರ್ಡ್ವೇರ್) ತಯಾರಿಸುತ್ತಾರೆ. ಅವುಗಳಲ್ಲಿ ಮೌಸ್ಗಳು ಹೆಚ್ಚು ಜನಪ್ರಿಯ. ಮೈಕ್ರೋಸಾಫ್ಟ್ ಮೌಸ್ಗಳ ಪಟ್ಟಿಗೆ ಇತ್ತೀಚೆಗೆ ಆದ ಸೇರ್ಪಡೆ ವೈರ್ಲೆಸ್ ನೋಟ್ಬುಕ್ ಲೇಸರ್ ಮೌಸ್8000. ಇದು ಕೇವಲ ಮೌಸ್ ಅಲ್ಲ. ಇದನ್ನು ಬಳಸಿ ಪವರ್ಪಾಯಿಂಟ್ ಪ್ರೆಸೆಂಟೇಶನ್ಗಳ ದೂರನಿಯಂತ್ರಣ ಮಾಡಬಹುದು. ಅಷ್ಟು ಮಾತ್ರವಲ್ಲ ವಿಂಡೋಸ್ ಮೀಡಿಯಾ ಪ್ಲೇಯರನ್ನು ಕೂಡ ನಿಯಂತ್ರಿಸಬಹುದು.

- ಡಾ. ಯು. ಬಿ. ಪವನಜ

ಮೊಬೈಲ್ ಫೋನುಗಳಲ್ಲಿ ಮೇಲ್ದರ್ಜೆಯವುಗಳಲ್ಲಿ ಅಂತರಜಾಲ ಸಂಪರ್ಕ, ವಿ-ಅಂಚೆ ಇತ್ಯಾದಿ ಸೌಕರ್ಯಗಳಿರುತ್ತವೆ. ಇಂತಹ ಫೋನುಗಳಲ್ಲಿ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು ಹೊಂದಿರುವ ಫೋನುಗಳು ಇತ್ತೀಚೆಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿವೆ. ಅಂತರಜಾಲದಲ್ಲಿ ಇಂತಹ ಫೋನುಗಳಿಗೆ ಹಲವಾರು ಉಚಿತ ತಂತ್ರಾಂಶಗಳು ಲಭ್ಯವಾಗಿರುವುದು ಮತ್ತು ತಂತ್ರಾಂಶ ಪರಿಣತರಾಗಿದ್ದಲ್ಲಿ ತಾವೇ ಈ ಫೋನುಗಳಿಗೆ ತಂತ್ರಾಂಶ ತಯಾರಿಸುವ ಸವಲತ್ತುಗಳಿರುವುದೂ ಈ ಫೋನುಗಳು ಜನಪ್ರಿಯವಾಗುತ್ತಿರುವುದಕ್ಕೆ ಕಾರಣಗಳು. ಇಂತಹ ಫೋನುಗಳು ಹಲವು ಕಂಪೆನಿಗಳ ಹೆಸರಿನಲ್ಲಿ ಲಭ್ಯವಿವೆ. ಅವುಗಳೆಂದರೆ O2, iMate, HTC ಇತ್ಯಾದಿ. ಈ ಎಲ್ಲ ಹೆಸರುಗಳಲ್ಲಿ ಅವು ಲಭ್ಯವಿದ್ದರೂ ಈ ಎಲ್ಲ ಫೋನುಗಳನ್ನು ತಯಾರಿಸುವ ಕಂಪೆನಿ ಒಂದೇ -ಅದುವೇ ಎಚ್‌ಟಿಸಿ. ಮೊದಲು ಎಚ್‌ಟಿಸಿ ಕಂಪೆನಿ ಇತರರಿಗೆ ಮಾತ್ರ ಈ ಫೋನುಗಳನ್ನು ತಯಾರಿಸುತ್ತಿತ್ತು. ಇತ್ತೀಚೆಗಷ್ಟೆ ಅದು ತನ್ನ ಹೆಸರಿನಲ್ಲೆ ಇವುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಅವುಗಳಲ್ಲಿ ನಮ್ಮ ದೇಶದಲ್ಲಿ ಲಭ್ಯವಿರುವ ಮತ್ತು ತುಂಬ ಸುದ್ದಿ ಮಾಡುತ್ತಿರುವ ಫೋನು ಎಚ್‌ಟಿಸಿ ಟಚ್. ಏನಿದೆ ಇದರಲ್ಲಿ?

Showing 1 - 4 of 6.
Next › Last »