<?xml version="1.0" encoding="utf-8"?>
<!DOCTYPE rss [<!ENTITY % HTMLlat1 PUBLIC "-//W3C//ENTITIES Latin 1 for XHTML//EN" "http://www.w3.org/TR/xhtml1/DTD/xhtml-lat1.ent">]>
<rss version="2.0" xml:base="http://vishvakannada.com">
<channel>
 <title>Vishva Kannada Softech - </title>
 <link>http://vishvakannada.com</link>
 <description>Vishva Kannada is world’s first online magazine in Kannada. It also happens to be the first Kannada web-site. The first issue was put online in Dec 1996. &lt;a href=&quot;Magazine&quot; style=&quot;color:orange;&quot;&gt;Click here&lt;/a&gt; to read the magazine.</description>
 <language>en</language>
<item>
 <title>ಪ್ರವೇಶವಿಲ್ಲದ ಗರ್ಭಗುಡಿಯಲ್ಲಿ ಪೂಜಾರಿಯಾದವರು</title>
 <link>http://vishvakannada.com/node/481</link>
 <description>&lt;h3&gt;- ಪ್ರಕಾಶ ಹೆಬ್ಬಾರ&lt;/h3&gt;
&lt;p&gt;&lt;b&gt;ನಾಗೇಶ ಹೆಗಡೆ&lt;/b&gt; ಎಂದೊಡನೆ ಯಾವುದರಿಂದ ಅವರನ್ನು ಗುರುತಿಸಬೇಕು? ಅವರನ್ನು ನಿಕಟವಾಗಿ ಬಲ್ಲ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ತಬ್ಬಿಬ್ಬು ಆಗುತ್ತದೆ. ಮನುಷ್ಯನ ಎಲ್ಲ ಅಂಗಾಂಗಗಳೂ ಪ್ರಮಾಣಬದ್ಧವಾಗಿದ್ದು ಒಂದಕ್ಕೊಂದು ಪೂರಕವಾಗಿ ಕ್ರಿಯಾಶೀಲವಾಗಿರುವಂತೆ ಹೆಗಡೆಯವರ ಸಾಧನೆಯ ನೆಲೆ ಕೂಡ. ಅವರನ್ನು ಅವರವರ ಅಳವಿಗೆ ತಕ್ಕಂತೆ ಭೂವಿಜ್ಞಾನಿ, ಪತ್ರಕರ್ತ, ನುಡಿಚಿತ್ರಕಾರ, ಪರಿಸರವಾದಿ, ಪತ್ರಕರ್ತರ ವೃತ್ತಿಬದುಕನ್ನು ರೂಪಿಸುವಾತ, ಸಂಪಾದಕ, ವಿಜ್ಞಾನ ಸಂವಹನಕಾರ- ಏನೆಲ್ಲಾ ಅನ್ನಬಹುದು. ರೈತರನ್ನು ಪ್ರಗತಿಪರರನ್ನಾಗಿ ಮಾಡಲು ಹೊರಟ, ಸದ್ದಿಲ್ಲದ ಕೃಷಿಕ ಎಂದರೂ ಒಪ್ಪೀತು. ವಾಮನ ತ್ರಿವಿಕ್ರಮನಾಗಿ ಬೆಳೆದು, ಎಷ್ಟು ತಿಣುಕಿದರೂ ಸಮಕಾಲೀನರ ವಿಮರ್ಶೆಗೆ ಸಿಕ್ಕದ ಗಟ್ಟಿ ವ್ಯಕ್ತಿತ್ವ. ನೀವು ಅವರನ್ನು ವೃತ್ತಿಪರ ಛಾಯಾಗ್ರಾಹಕ ಎಂದು ಕರೆದರೆ ಅದಕ್ಕೂ ನ್ಯಾಯ ಒದಗೀತು. ಅವರು ತೆಗೆದ ಕಪ್ಪುಬಿಳುಪಿನ ಚಿತ್ರಗಳನ್ನು ದಿನವಿಡೀ ನೋಡುತ್ತಾ ಹೋದರೂ ಅದೊಂದು ಹೊಸ ಅನುಭವವೇ.&lt;/p&gt;
</description>
 <category domain="http://vishvakannada.com/taxonomy/term/20">ಪರಿಚಯ</category>
 <enclosure url="http://vishvakannada.com/files/Nagesh Hegde Rekha Honoured.jpg" length="41565" type="image/pjpeg" />
 <pubDate>Sun, 30 Mar 2008 09:47:34 -0700</pubDate>
</item>
<item>
 <title>ಬ್ಲಾಗಿಂಗ್ - ಪರ್ಯಾಯ ಪತ್ರಿಕೋದ್ಯಮ</title>
 <link>http://vishvakannada.com/node/480</link>
 <description>&lt;h3&gt;- ಡಾ. ಯು. ಬಿ. ಪವನಜ&lt;/h3&gt;
&lt;p&gt;ಇತ್ತೀಚೆಗಿನ ದಿನಗಳಲ್ಲಿ ತುಂಬ ಕೇಳಿಬರುತ್ತಿರುವ ಪದ “ಬ್ಲಾಗ್”. ಅದರ ಹಲವು ಪ್ರತ್ಯಯಗಳೇ ಬ್ಲಾಗಿಂಗ್, ಬ್ಲಾಗರ್, ಇತ್ಯಾದಿ. ಈ ಬ್ಲಾಗ್ ಎಂದರೆ ಏನು? ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿ ಎಂದೂ ಕರೆಯಬಹುದು. ಬ್ಲಾಗ್‌ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗರ್ ಎಂದರೆ ಬ್ಲಾಗ್ ಬರೆಯುವ ವ್ಯಕ್ತಿ. &lt;/p&gt;
</description>
 <category domain="http://vishvakannada.com/taxonomy/term/19">ಲೇಖನ</category>
 <pubDate>Fri, 14 Mar 2008 20:54:37 -0700</pubDate>
</item>
<item>
 <title>ರೈತರ ಆತ್ಮಹತ್ಯೆ ತಡೆಗೆ ಉಪಾಯ: ಗೋ ಆಧಾರಿತ ಕೃಷಿ</title>
 <link>http://vishvakannada.com/node/475</link>
 <description>&lt;p&gt;&lt;b&gt;ಕಗ್ಗಲಿಪುರ ಗೋಲೋಕದಲ್ಲಿ ರೈತ ಸಮಾವೇಶ&lt;/b&gt;&lt;/p&gt;
&lt;p&gt;ಬೆಂಗಳೂರು, ಫೆ, ೧೭, ೨೦೦೮: ಗೋ ಆಧಾರಿತ ಸ್ವಾವಲಂಬಿ ಕೃಷಿಯಿಂದ ಮಾತ್ರ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಬಹುದು. ಆದುದರಿಂದ ಸರ್ಕಾರಗಳು ಗೋ ಆಧಾರಿತ ಕೃಷಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ಗೋ ಆಧಾರಿತ ಕೃಷಿಕ ರಮೇಶರಾಜು ಅವರು ಇಲ್ಲಿ ಆಗ್ರಹಿಸಿದರು. &lt;/p&gt;
</description>
 <category domain="http://vishvakannada.com/taxonomy/term/30">ಸುದ್ದಿ ಸಮಾಚಾರ</category>
 <enclosure url="http://vishvakannada.com/files/RameshaRaju.jpg" length="33780" type="image/pjpeg" />
 <pubDate>Sun, 17 Feb 2008 09:49:33 -0800</pubDate>
</item>
<item>
 <title>ಕಗ್ಗಲಿಪುರದಲ್ಲಿ ಸಮರ್ಪಣ - ೨೦೦೮</title>
 <link>http://vishvakannada.com/node/474</link>
 <description>&lt;p&gt;&lt;img src=&quot;files/Final_Kannada-Web.jpg&quot; align=&quot;right&quot;&gt;ಬೆಂಗಳೂರು, ಜನವರಿ ೨೭, ೨೦೦೮: ಬೆಂಗಳೂರಿನ ದಕ್ಷಿಣಕ್ಕೆ ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಕಗ್ಗಲಿಪುರದಲ್ಲಿರುವ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಫೆಬ್ರವರಿ ೧೭ರಂದು ಸಮರ್ಪಣ - ೨೦೦೮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನವಾಗಿ ರೈತರ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಪೂರ್ವಾಹ್ನ ೧೧ ಘಂಟೆಗೆ ರೈತರ ಸಮಾವೇಶವಿರುತ್ತದೆ. ಕನಕಪುರ ತಾಲೂಕಿನ ರೈತರ ಸಮಾವೇಶದಲ್ಲಿ “ಗೋಸಂರಕ್ಷಣೆಯ ಅಗತ್ಯ”, “ಗೋವು ಮತ್ತು ಆರ್ಥಿಕತೆ” ಈ ವಿಷಯಗಳ ಬಗ್ಗೆ ಉಪನ್ಯಾಸ ಮತ್ತು ಚರ್ಚೆಗಳಿರುತ್ತವೆ.  ಅಪರಾಹ್ನದ ಕಾರ್ಯಕ್ರಮಗಳಲ್ಲಿ ಗೋವಿಗಾಗಿ ಸದ್ದಿಲ್ಲದೆ ದುಡಿಯುತ್ತಿರುವ ಎಲೆಮರೆಯ ಕಾಯಿಗಳಿಗೆ ಸೇವಾಪುರಸ್ಕಾರ ನೀಡಲಾಗುತ್ತದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಅಶೀರ್ವಚನದ ನಂತರ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತವೆ. ಕದ್ರಿ ಗೋಪಾಲನಾಥರ ಶಿಷ್ಯ ಶ್ರೀಧರ ಸಾಗರ ಅವರಿಂದ ಸ್ಯಾಕ್ಸಾಫೋನ್ ವಾದನ, ರವಿಚಂದ್ರ ಮತ್ತು ತಂಡದವರಿಂದ ಕೊಳಲು ಪ್ರಧಾನವಾಗಿರುವ ವಾದ್ಯವೃಂದ ರೂಪಕ ಹಾಗೂ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ತಂಡದವರಿಂದ ನೃತ್ಯ ರೂಪಕವಿರುತ್ತದೆ. ಕೊನೆಯಲ್ಲಿ ಗೋವುಗಳಿಗೆ ನೀರಾಜನ ಮತ್ತು ದೀಪೋತ್ಸವ ಕಾರ್ಯಕ್ರಮಗಳಿರುತ್ತವೆ. ಸಮಸ್ತರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋರಲಾಗಿದೆ. ಇಡೀ ದಿನ ಗವ್ಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಗವ್ಯ ಚಿಕಿತ್ಸೆಯ ವ್ಯವಸ್ಥೆ ಇರುತ್ತದೆ. &lt;/p&gt;
</description>
 <category domain="http://vishvakannada.com/taxonomy/term/30">ಸುದ್ದಿ ಸಮಾಚಾರ</category>
 <enclosure url="http://vishvakannada.com/files/Final_Kannada-Web.jpg" length="11963" type="image/pjpeg" />
 <pubDate>Sun, 27 Jan 2008 07:46:17 -0800</pubDate>
</item>
<item>
 <title>ಜಂಗಮವಾಣಿಯ ವಿಹಂಗಮ ನೋಟ</title>
 <link>http://vishvakannada.com/node/469</link>
 <description>&lt;h3&gt;- ಡಾ. ಯು. ಬಿ. ಪವನಜ&lt;/h3&gt;
&lt;p&gt;ಮೋನಪ್ಪ ಬಂಗೇರ ಕರಾವಳಿಯಲ್ಲಿರುವಾತ. ಮೀನು ಹಿಡಿದು ಮಾರಿ ಜೀವನ ನಡೆಸುವವ. ಹಲವು ವರ್ಷಗಳ ಹಿಂದಿನ ಕತೆ. ಮೋನಪ್ಪನಿಗೆ ಕೆಲವೊಮ್ಮೆ ತುಂಬ ಮೀನುಗಳು ಸಿಗುವವು. ತುಂಬ ಸಂತಸದಿಂದ ಆತ ಮೀನುಗಳನ್ನು ಮಾರುಕಟ್ಟೆಗೆ ಒಯ್ದರೆ ಆ ದಿನ ಎಲ್ಲ ಬೆಸ್ತರೂ ತುಂಬ ಮೀನು ತಂದಿರುವುದರಿಂದ ಮೀನುಗಳಿಗೆ ಬೇಡಿಕೆ ಇಲ್ಲ. ಹಿಡಿದ ಮೀನುಗಳನ್ನು ದಾಸ್ತಾನು ಮಾಡಲು ಆತನಲ್ಲಿ ಶ್ಶೆತ್ಯಾಗಾರವಿಲ್ಲ. ಕೊನೆಗೆ ಸಿಕ್ಕಿದ ಬೆಲೆಗೆ ಮೀನುಗಳನ್ನು ಮಾರಬೇಕಾದ ಪರಿಸ್ಥಿತಿ. ಆತನಿರುವ ಊರಿನಿಂದ ಸುಮಾರು ಹತ್ತು ಕಿಲೋಮೀಟರು ದೂರದ ಇನ್ನೊಂದು ಊರಿನಲ್ಲಿ ಮೀನಿಗೆ ಬೇಡಿಕೆ ಇತ್ತು. ಆದರೆ ಅದು ಮೋನಪ್ಪನಿಗೆ ತಿಳಿದಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಯಿಸಿದೆ. ಮೋನಪ್ಪನ ಕೈಗೆ ಮೊಬೈಲ್ ಫೋನು ಬಂದಿದೆ. ಸಮುದ್ರದಲ್ಲಿ ಇರುವಾಗಲೆ ಆತ ಹತ್ತಿರದ ಎರಡು ಮೂರು ಊರುಗಳಿಗೆ ಫೋನಾಯಿಸುತ್ತಾನೆ. ಯಾವ ಮಾರುಕಟ್ಟೆಯಲ್ಲಿ ಮೀನಿಗೆ ಬೇಡಿಕೆ ಇದೆ ಎಂದು ತಿಳಿದುಕೊಳ್ಳುತ್ತಾನೆ. ಎಷ್ಟು ಮೀನಿಗೆ ಬೇಡಿಕೆ ಇದೆ ಎಂಬುದನ್ನೂ ತಿಳಿದುಕೊಳ್ಳುತ್ತಾನೆ. ಮೊಬೈಲ್ ಫೋನಿನಿಂದ ಆತನಿಗೆ ತುಂಬ ಪ್ರಯೋಜನವಾಗಿದೆ. ಎಷ್ಟು ಬೇಕೋ ಅಷ್ಟೇ ಮೀನು ಹಿಡಿದು ಎಲ್ಲಿಗೆ ಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗಿ ಮಾರುತ್ತಾನೆ. ಹೆಚ್ಚಿಗೆಯಾದ ಮೀನುಗಳನ್ನು ಎಸೆಯುವ ಅಥವಾ ಅತಿ ಕಡಿಮೆ ಬೆಲೆಗೆ ಮಾರುವ ಅಗತ್ಯವಿಲ್ಲ. ಸಮಯವೂ ಉಳಿತಾಯವಾಗುತ್ತದೆ.&lt;/p&gt;
</description>
 <category domain="http://vishvakannada.com/taxonomy/term/19">ಲೇಖನ</category>
 <pubDate>Sat, 12 Jan 2008 23:21:59 -0800</pubDate>
</item>
<item>
 <title>ಕಂಪ್ಯೂಟರ್ ಮಾಯಾಲೋಕ; ಕಣ್ಮುಚ್ಚಿರುವ ಲೇಖಕ</title>
 <link>http://vishvakannada.com/node/467</link>
 <description>&lt;h3&gt;- ರಘುನಾಥ ಚ. ಹ.&lt;/h3&gt;
&lt;p&gt;‘ನನಗೆ ಕಂಪ್ಯೂಟರ್ ಕಲಿಸಲು ನನ್ನ ಮೊಮ್ಮಗಳು ತುಂಬಾ ಪ್ರಯತ್ನಿಸಿದಳು. ಆದರೆ ಅವಳ ಪ್ರಯತ್ನ ಯಶಸ್ವಿಯಾಗಲಿಲ್ಲ&#039;. ಪದಗಳ ವ್ಯುತ್ಪತ್ತಿಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಅಳಲಿದು. ಹಾಗೆಂದು ವೆಂಕಟಸುಬ್ಬಯ್ಯನವರಿಗೆ ಕಂಪ್ಯೂಟರ್ ಕುರಿತು ಅಥವಾ ಅಂತರ್ಜಾಲವೆಂಬ ವಿಸ್ಮಯದ ಕುರಿತು ಅಲರ್ಜಿಯಿದೆ ಎಂದರ್ಥವಲ್ಲ. ಅವರು ಸಂಪಾದಿಸಿದ ನಿಘಂಟೊಂದು ಅಂತರ್ಜಾಲದಲ್ಲಿದೆ. ಬಹುಶಃ, ಮುದ್ರಣ ರೂಪದ ನಿಘಂಟಿನ ಬಳಕೆಗಿಂತಲೂ ಇಂಟರ್ನೆಟ್‌ನಲ್ಲಿನ ನಿಘಂಟುವಿನ ಬಳಕೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಈ ಕುರಿತು ವೆಂಕಟಸುಬ್ಬಯ್ಯನವರಿಗೆ ಖುಷಿಯಿದೆ. ಆದರೆ ಆ ಖುಷಿ ಕಂಪ್ಯೂಟರ್ ಕಲಿಕೆಯಾಗಿ ಮಾರ್ಪಡುತ್ತಿಲ್ಲ. &lt;/p&gt;
</description>
 <category domain="http://vishvakannada.com/taxonomy/term/19">ಲೇಖನ</category>
 <pubDate>Wed, 26 Dec 2007 07:17:52 -0800</pubDate>
</item>
<item>
 <title>ಮಾತೆಯರ ಮಹಾ ಸಂಗಮ ಕೋಟಿ ನೀರಾಜನ</title>
 <link>http://vishvakannada.com/node/465</link>
 <description>&lt;h3&gt;ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಗೋ ಸಂರಕ್ಷಣೆಯ ಇನ್ನೊಂದು ಹೆಜ್ಜೆ.&lt;br /&gt;
ಅರಮನೆ ಮೈದಾನದಲ್ಲಿ ನ. ೧೮ಕ್ಕೆ ಲಕ್ಷ ಮಹಿಳೆಯರಿಂದ ಗೋ ಮಾತೆಗೆ ಕೋಟಿ ಆರತಿ&lt;/h3&gt;
</description>
 <category domain="http://vishvakannada.com/taxonomy/term/30">ಸುದ್ದಿ ಸಮಾಚಾರ</category>
 <enclosure url="http://vishvakannada.com/files/Swamiji-with-Aarathi-small.jpg" length="15794" type="image/pjpeg" />
 <pubDate>Wed, 14 Nov 2007 23:25:53 -0800</pubDate>
</item>
<item>
 <title>ಜೆ.ಎಸ್.ಡಬ್ಲ್ಯು ಸ್ಟೀಲ್‌ಗೆ ಪ್ರಶಸ್ತಿ</title>
 <link>http://vishvakannada.com/node/464</link>
 <description>&lt;p&gt;ಬೆಂಗಳೂರು, ನವೆಂಬರ್‍ ೯, ೨೦೦೭: ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ವಿಜಯನಗರ ಸ್ಥಾವರವು ಸತತ ಮೂರನೇ ವರ್ಷವೂ  ಸಿ ಐ ಐ - ಎಕ್ಸಿಮ್ ಬ್ಯಾಂಕಿನ ಬ್ಯುಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ೨೦೦೭ರಲ್ಲಿ ಗಮನಾರ್ಹ ಸಾಧನೆಯ ಕಮೆಂಡೇಶನ್ ಸರ್ಟಿಫಿಕೇಟ್ ಪಡೆದು ಹ್ಯಾಟ್ರಿಕ್ ಸಾಧಿಸಿದೆ. ಕಳೆದ ಎರಡು ವರ್ಷಗಳಲ್ಲೂ ಸಂಸ್ಥೆಯು ಈ ಕಮೆಂಡೇಶನ್ ಸರ್ಟಿಫಿಕೇಟನ್ನು ಪಡೆದಿತ್ತು.  ಇದೇ ನವೆಂಬರ್ ೧ರಂದು ಬೆಂಗಳೂರಿನಲ್ಲಿ ನಡೆದ ಸಿ ಐ ಐ ಇನ್ಸ್ಟಿಟ್ಯೂಟ್ ಆಫ್ ಕ್ವಾಲಿಟಿಯ ೧೫ನೇ ಗುಣಮಟ್ಟ ಶೃಂಗಸಭೆಯಲ್ಲಿ ಈ ಪ್ರಕಟಣೆ ಮಾಡಲಾಗಿದೆ. ಇದು ಭಾರತದಲ್ಲಿ ವ್ಯವಹಾರ ದಕ್ಷತೆಗಾಗಿ ಇರುವ ಕೆಲವೇ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. &lt;/p&gt;
&lt;p&gt;೧೯೯೪ರಲ್ಲಿ ಸಿ ಐ ಐ (ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ಮತ್ತು ಎಕ್ಸ್ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಸ್ಥಾಪಿಸಿದ ಈ ಪ್ರಶಸ್ತಿಯು ``ಸಂಘಟನಾ ಸ್ಪರ್ಧಾತ್ಮಕತೆಯಲ್ಲಿ ಗಮನಾರ್ಹ ಅಂಶವಾಗಿ ವ್ಯವಹಾರ ಕಾರ್ಯದಕ್ಷತೆಯನ್ನು ಸಾಧಿಸಿದ್ದನ್ನು&#039;&#039; ಗುರುತಿಸುತ್ತದೆ. ಎಲ್ಲಾ ಸ್ವರೂಪಗಳಲ್ಲಿ ಇರುವ ಸಂಘಟನಾ ಕಾರ್ಯದಕ್ಷತೆಯನ್ನು ಗುರುತಿಸಿ, ಉತ್ತೇಜಿಸುವುದೇ ಸಿ ಐ ಐ - ಎಕ್ಸಿಮ್ ಬ್ಯಾಂಕ್ ಪ್ರಶಸ್ತಿಯ ಉದ್ದೇಶವಾಗಿದೆ. ೨೦೦೮ರ ಹೊತ್ತಿಗೆ ವಾರ್ಷಿಕ ಏಳು ದಶಲಕ್ಷ ಟನ್  ಉಕ್ಕು  ಉತ್ಪಾದನೆಯ ಗುರಿಯನ್ನು ಸಾಧಿಸುವತ್ತ ದಾಪುಗಾಲಿಟ್ಟಿರುವ ಜೆ ಎಸ್ ಡಬ್ಲ್ಯು ಸ್ಟೀಲ್ ವಿಜಯನಗರ ಸ್ಥಾವರವು ೨೦೧೦ರಲ್ಲಿ ಹತ್ತು ವಾರ್ಷಿಕ ದಶಲಕ್ಷ ಟನ್ ಉಕ್ಕು ಉತ್ಪಾದನೆಯನ್ನು ಸಾಧಿಸಲಿದೆ. ಆಗ ಇದು ದೇಶದಲ್ಲೇ ಒಂದೇ ಸ್ಥಾವರದಲ್ಲಿ ಅತಿಹೆಚ್ಚು ಉಕ್ಕು ಉತ್ಪಾದಿಸುವ ಸ್ಥಾವರವಾಗಲಿದೆ.&lt;/p&gt;
&lt;table border=&quot;3&quot;&gt;
&lt;tr&gt;&lt;td align=&quot;center&quot;&gt;&lt;img src=&quot;http://vishvakannada.com/files/jsw1.jpg&quot;&gt;&lt;/p&gt;
</description>
 <category domain="http://vishvakannada.com/taxonomy/term/30">ಸುದ್ದಿ ಸಮಾಚಾರ</category>
 <enclosure url="http://vishvakannada.com/files/jsw1.jpg" length="20454" type="image/pjpeg" />
 <pubDate>Sat, 10 Nov 2007 05:46:18 -0800</pubDate>
</item>
<item>
 <title>ಇ-ಕನ್ನಡವೇ ಸತ್ಯ, ಇ-ಕನ್ನಡವೇ ನಿತ್ಯ</title>
 <link>http://vishvakannada.com/node/463</link>
 <description>&lt;p&gt;ಆಡಳಿತದ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ, ಅಧಿಕಾರಿಗಳಲ್ಲಿ ಉತ್ತರದಾಯಿತ್ವವನ್ನು ಖಾತರಿ ಪಡಿಸುವುದಕ್ಕೆ, ಕೆಂಪು ಪಟ್ಟಿಯನ್ನು ತಪ್ಪಿಸುವುದಕ್ಕೆ...ಹೀಗೆ ಆಡಳಿತದಲ್ಲಿ ಕಾಣಿಸಿಕೊಳ್ಳಬಹುದಾದ ಎಲ್ಲಾ ಸಮಸ್ಯೆಗಳಿಗೂ ಸದ್ಯಕ್ಕೆ ಕಂಡುಕೊಂಡಿರುವ ಪರಿಹಾರ ಇ-ಆಡಳಿತ. ಅಥವಾ ವಿದ್ಯುನ್ಮಾನ ಆಡಳಿತ. ವಿದ್ಯುನ್ಮಾನ ಆಡಳಿತಕ್ಕೆ ಒತ್ತುಕೊಟ್ಟು ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತಿರುವ ಭಾರತದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ. ರೈತನ ಭೂಮಿ ದಾಖಲೆಗಳನ್ನೆಲ್ಲಾ ಕಂಪ್ಯೂಟರೀಕರಿಸಲಾಗಿದೆ. ನಕ್ಷೆಗಳನ್ನು ಕಂಪ್ಯೂಟರೀಕರಿಸುವ ಕ್ರಿಯೆ ನಡೆಯುತ್ತಿದೆ. ಬ್ಯಾಂಕುಗಳಂತೂ ಹೆಚ್ಚು ಕಡಿಮೆ ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಂಡಿವೆ. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಅದರ ಸಹೋದರ ಸಂಸ್ಥೆಗಳೆಲ್ಲವೂ ಕಂಪ್ಯೂಟರೀಕರಣಗೊಂಡಿವೆ. ನಿರ್ವಾಹಕರು ಅಂಗೈಯಲ್ಲೇ ಇರುವ ಯಂತ್ರವನ್ನು ಬಳಸಿ ಟಿಕೇಟು ಕೊಡುತ್ತಾರೆ. ಮನೆ ಮನೆಗೆ ಬಂದು ವಿದ್ಯುತ್‌ ಬಳಕೆಯ ಮೀಟರ್‌ ಓದುವವರೂ ಈಗ ತಮ್ಮಲ್ಲಿರುವ ಅಂಗೈಯಗಲದ ಯಂತ್ರದಿಂದಲೇ ಬಿಲ್‌ ಮುದ್ರಿಸಿ ಕೊಡುತ್ತಾರೆ. ಹಾದಿ-ಬೀದಿಗೆ ಒಂದರಂತೆ ವಿವಿಧ ಬ್ಯಾಂಕ್‌ಗಳ ಎಟಿಎಂಗಳಿವೆ. ಮಧ್ಯಮ ವರ್ಗದ ಮನೆಯ ಪ್ರತೀ ಸದಸ್ಯರ ಬಳಿಯೂ ಒಂದು ಮೊಬೈಲ್‌ ಇದೆ. ಒಂದು ಕಾಲದಲ್ಲಿ ಟಿ.ವಿ. ಖರೀದಿಸಿದಂತೆ ಈಗ ಜನರು ಕಂಪ್ಯೂಟರ್‌ ಖರೀದಿಸುತ್ತಿ್ದಾರೆ. ಇದರ ಪರಿಣಾಮವಾಗಿ ಸಂವಹನ, ಸಂಪರ್ಕ, ಆಡಳಿತದ ಕ್ಷಮತೆ ಎಲ್ಲವೂ ಹೆಚ್ಚಿವೆ. ಆದರೆ ಕಡಿಮೆಯಾಗಿರುವುದು ಕನ್ನಡ ಮಾತ್ರ. ಹಿಂದಿನ ಪೂರ್ವ ಮುದ್ರಿತ ಬಸ್‌ ಟಿಕೇಟುಗಳಲ್ಲಿ ಕನ್ನಡ ಕಾಣಿಸುತ್ತಿತ್ತು. ಈಗಿನ ತಂತ್ರಜ್ಞಾನ ಸ್ಥಳದಲ್ಲೇ ಮುದ್ರಿಸುವ ಟಿಕೇಟಿನಲ್ಲಿ ಕನ್ನಡ ಸುಳಿವೇ ಇಲ್ಲ. ವಿದ್ಯುತ್‌ ಬಿಲ್‌ನಲ್ಲೂ ಅಷ್ಟೇ. ಬರೇ ರೋಮನ್‌ ಅಕ್ಷರಗಳು, ಇಂಗ್ಲಿಷ್‌ ಭಾಷೆ. ಹೆಚ್ಚಿನ ಎಟಿಎಂಗಳಲ್ಲಿ ಇಂಗ್ಲಿಷ್‌ಗಷ್ಟೇ ಮಣೆ. ಎಸ್‌ಎಂಎಸ್‌ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಯಾರಿಗಾದರೂ ತಿಳಿಸಬೇಕೆಂದರೆ ಅದನ್ನೂ ರೋಮನ್‌ ಅಕ್ಷರಗಳಲ್ಲಿ ಟೈಪಿಸಿದರಷ್ಟೇ ಎಲ್ಲರಿಗೂ ಓದಲು ಸಾಧ್ಯ ಎಂಬ ಸ್ಥಿತಿ ನಮ್ಮದು. &lt;/p&gt;
</description>
 <category domain="http://vishvakannada.com/taxonomy/term/19">ಲೇಖನ</category>
 <pubDate>Sat, 03 Nov 2007 23:25:34 -0700</pubDate>
</item>
<item>
 <title>ಕ್ರಿಯೇಟಿವ್ ಮುವೋ ಎಂಪಿ-೩ ಪ್ಲೇಯರ್</title>
 <link>http://vishvakannada.com/node/462</link>
 <description>&lt;h3&gt;- ಡಾ. ಯು. ಬಿ. ಪವನಜ&lt;/h3&gt;
&lt;p&gt;ಸಂಗೀತದಲ್ಲಿ ಆಸಕ್ತಿ ಇಲ್ಲದವರು ಇಲ್ಲವೇ ಇಲ್ಲ ಎನ್ನಬಹುದು. ಸಿನಿಮಾ, ಭಾವಗೀತೆ. ಶಾಸ್ತ್ರೀಯ, ವಿದೇಶೀಯ, ಹೀಗೆ ಯಾವುದಾದರೊಂದು ಬಗೆಯ ಸಂಗೀತವನ್ನು ಆಲಿಸದ ಮಂದಿಯ ಸಂಖ್ಯೆ ಅತಿ ಕಡಿಮೆ. ಹೀಗೆ ಸಂಗೀತ ಪ್ರಿಯರಿಗೆ ಸಂಗೀತ ಆಲಿಸಲು ಹಲವು ಸಲಕರಣೆಗಳು ಲಭ್ಯವಿವೆ. ಡಿಜಿಟಲ್ ಉಪಕರಣಗಳ ಆವಿಷ್ಕಾರವಾದ ಮೇಲಂತೂ ಚಿತ್ರವಿಚಿತ್ರ ಉಪಕರಣಗಳು ಮಾರುಕಟ್ಟೆಗೆ ಲಗ್ಗೆಯಿಡತೊಡಗಿವೆ. ಅವುಗಳಲ್ಲೊಂದು ಪ್ರಮುಖ ವಿಭಾಗ ಎಂಪಿ-೩ ಪ್ಲೇಯರುಗಳದು. ಗಣಕಗಳಲ್ಲಿ ಹಾಡುಗಳ ಕಡತಗಳ ಗಾತ್ರವನ್ನು ಕುಗ್ಗಿಸಿ ಶೇಖರಿಸಿಡುವ ಒಂದು ವಿಧಾನಕ್ಕೆ ಎಂಪಿ-೩ ಎಂದು ಕರೆಯುತ್ತಾರೆ. ಒಂದು ಭಾವಗೀತೆಯ ಎಂಪಿ-೩ ಹಾಡಿನ ಕಡತದ ಗಾತ್ರ ಸುಮಾರು ೫ ಮೆಗಾಬೈಟ್‌ಗಳಷ್ಟಿರುತ್ತದೆ. ೨೫೬ ಮೆಗಾಬೈಟಿನ ಒಂದು ಎಂಪಿ-೩ ಪ್ಲೇಯರಿನಲ್ಲಿ ಸುಮಾರು ೫೦ ಹಾಡುಗಳನ್ನು ಸಂಗ್ರಹಿಸಿಬಹುದು. ಅಂದರೆ ಸುಮಾರು ೬ ಗಂಟೆ ಕಾಲ ತಡೆಯಿಲ್ಲದೆ ಹಾಡು ಕೇಳಬಹುದು. ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಹಲವಾರು ನಮೂನೆಯ ಎಂಪಿ-೩ ಪ್ಲೇಯರುಗಳು ಲಭ್ಯವಿವೆ. ಅವುಗಳಲ್ಲಿ ನಾವೀಗ ಕ್ರಿಯೇಟಿವ್ ಕಂಪೆನಿಯ ಮುವೋ ಟಿಎಕ್ಸ್ ಎಫ್‌ಎಂ ಮಾದರಿಯನ್ನು ಸ್ವಲ್ಪ ಪರಿಶೀಲಿಸೋಣ.&lt;/p&gt;
</description>
 <category domain="http://vishvakannada.com/gadgetloka">ಗ್ಯಾಜೆಟ್ ಲೋಕ</category>
 <enclosure url="http://vishvakannada.com/files/Creative_muvo_TX_FM.jpg" length="18457" type="image/pjpeg" />
 <pubDate>Sat, 03 Nov 2007 23:18:09 -0700</pubDate>
</item>
<item>
 <title>ಮೋಟೊರೋಲ ಎಸ್೭೦೫ ಬ್ಲೂಟೂತ್ ಇಯರ್‌ಫೋನ್</title>
 <link>http://vishvakannada.com/node/461</link>
 <description>&lt;h3&gt;- ಡಾ. ಯು. ಬಿ. ಪವನಜ&lt;/h3&gt;
&lt;p&gt;ಮೊಬೈಲ್ ಫೋನು ಬಳಸುವಾಗ ತುಂಬ ಹೊತ್ತು ಮಾತನಾಡಿದರೆ ಕಿವಿ ಬಿಸಿಯಾಗುವುದು ಗೊತ್ತಿದೆ ತಾನೆ? ಇದಕ್ಕೆ ಪರಿಹಾರವಾಗಿ ಹೆಚ್ಚಿನ ಮಂದಿ ಇಯರ್‌ಫೋನ್ ಬಳಸುವುದೂ ಗೊತ್ತಿರಬಹುದು. ಈ ಇಯರ್‌ಫೋನುಗಳಲ್ಲಿ ಎರಡು ವಿಧ -ತಂತಿ ಮೂಲಕ ಸಂಪರ್ಕಿಸುವಂತಹುದು  ಮತ್ತು ನಿಸ್ತಂತು. ನಿಸ್ತಂತು ಇಯರ್‌ಫೋನುಗಳು ಸಾಮಾನ್ಯವಾಗಿ ಬ್ಲೂಟೂತ್ ವಿಧಾನ ಮೂಲಕ ಫೋನಿಗೆ ಸಂಪರ್ಕ ಸಾಧಿಸುತ್ತವೆ. ಬ್ಲೂಟೂತ್ ಇಯರ್‌ಫೋನುಗಳಲ್ಲಿ ಕೂಡ ಮುಖ್ಯವಾಗಿ ಎರಡು ವಿಧ -ಮೋನೋ ಮತ್ತು ಸ್ಟೀರಿಯೋ. ಮೋನೋ ಇಯರ್‌ಫೋನುಗಳನ್ನು ತುಂಬ ಮಂದಿ ಬಳಸುತ್ತಾರೆ. ಇವುಗಳನ್ನು ಸಾಮನ್ಯವಾಗಿ ಕಿವಿಗೆ ಜೋಡಿಸಿರುತ್ತಾರೆ. ಇವುಗಳನ್ನು ಮಾತನಾಡಲು ಮಾತ್ರ ಬಳಸಬಹುದು. ಸಂಗೀತ ಆಲಿಸಲು ಇವು ಉಪಯುಕ್ತವಲ್ಲ. ಸಂಗೀತ ಆಲಿಸಲು ಸ್ಟೀರಿಯೋ ಇಯರ್‌ಫೋನೇ ಉತ್ತಮ. ಸ್ಟೀರಿಯೋ ಬ್ಲೂಟೂತ್ ಇಯರ್‌ಫೋನಿಗೆ ಒಂದು ಉದಾಹರಣೆ ಮೋಟೊರೋಲ ಕಂಪೆನಿಯ ಎಸ್-೭೦೫.&lt;/p&gt;
</description>
 <category domain="http://vishvakannada.com/gadgetloka">ಗ್ಯಾಜೆಟ್ ಲೋಕ</category>
 <enclosure url="http://vishvakannada.com/files/Motorola_S705_SoundPilot_s.jpg" length="12742" type="image/pjpeg" />
 <pubDate>Sat, 03 Nov 2007 23:08:53 -0700</pubDate>
</item>
<item>
 <title>ಮೈಕ್ರೋಸಾಫ್ಟ್ ಲೇಸರ್ ಮೌಸ್ - ಲಾಪ್‌ಟಾಪ್‌ಗೋಸ್ಕರ</title>
 <link>http://vishvakannada.com/node/457</link>
 <description>&lt;h3&gt;- ಡಾ. ಯು. ಬಿ. ಪವನಜ&lt;/h3&gt;
&lt;p&gt;ಮೈಕ್ರೋಸಾಫ್ಟ್ ಕಂಪೆನಿ ತಂತ್ರಾಂಶ (ಸಾಫ್ಟ್ವೇರ್) ತಯಾರಿಕೆಗೆ ಜಗತ್ಪ್ರಸಿದ್ಧ. ಅವರು ಕೆಲವು ಯಂತ್ರಾಂಶಗಳನ್ನೂ (ಹಾರ್ಡ್ವೇರ್) ತಯಾರಿಸುತ್ತಾರೆ. ಅವುಗಳಲ್ಲಿ ಮೌಸ್ಗಳು ಹೆಚ್ಚು ಜನಪ್ರಿಯ. ಮೈಕ್ರೋಸಾಫ್ಟ್ ಮೌಸ್ಗಳ ಪಟ್ಟಿಗೆ ಇತ್ತೀಚೆಗೆ ಆದ ಸೇರ್ಪಡೆ ವೈರ್ಲೆಸ್ ನೋಟ್ಬುಕ್ ಲೇಸರ್ ಮೌಸ್8000. ಇದು ಕೇವಲ ಮೌಸ್ ಅಲ್ಲ. ಇದನ್ನು ಬಳಸಿ ಪವರ್ಪಾಯಿಂಟ್ ಪ್ರೆಸೆಂಟೇಶನ್ಗಳ ದೂರನಿಯಂತ್ರಣ ಮಾಡಬಹುದು. ಅಷ್ಟು ಮಾತ್ರವಲ್ಲ ವಿಂಡೋಸ್ ಮೀಡಿಯಾ ಪ್ಲೇಯರನ್ನು ಕೂಡ ನಿಯಂತ್ರಿಸಬಹುದು. &lt;/p&gt;
</description>
 <category domain="http://vishvakannada.com/gadgetloka">ಗ್ಯಾಜೆಟ್ ಲೋಕ</category>
 <enclosure url="http://vishvakannada.com/files/lasermouse2.jpg" length="14244" type="image/pjpeg" />
 <pubDate>Wed, 26 Sep 2007 08:45:17 -0700</pubDate>
</item>
<item>
 <title>ಎಚ್‌ಟಿಸಿ ಟಚ್ - ಸ್ಪರ್ಷದಲ್ಲೇ ಎಲ್ಲ</title>
 <link>http://vishvakannada.com/node/456</link>
 <description>&lt;h3&gt;- ಡಾ. ಯು. ಬಿ. ಪವನಜ&lt;/h3&gt;
&lt;p&gt;ಮೊಬೈಲ್ ಫೋನುಗಳಲ್ಲಿ ಮೇಲ್ದರ್ಜೆಯವುಗಳಲ್ಲಿ ಅಂತರಜಾಲ ಸಂಪರ್ಕ, ವಿ-ಅಂಚೆ ಇತ್ಯಾದಿ ಸೌಕರ್ಯಗಳಿರುತ್ತವೆ. ಇಂತಹ ಫೋನುಗಳಲ್ಲಿ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು ಹೊಂದಿರುವ ಫೋನುಗಳು ಇತ್ತೀಚೆಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿವೆ. ಅಂತರಜಾಲದಲ್ಲಿ ಇಂತಹ ಫೋನುಗಳಿಗೆ ಹಲವಾರು ಉಚಿತ ತಂತ್ರಾಂಶಗಳು ಲಭ್ಯವಾಗಿರುವುದು ಮತ್ತು ತಂತ್ರಾಂಶ ಪರಿಣತರಾಗಿದ್ದಲ್ಲಿ ತಾವೇ ಈ ಫೋನುಗಳಿಗೆ ತಂತ್ರಾಂಶ ತಯಾರಿಸುವ ಸವಲತ್ತುಗಳಿರುವುದೂ ಈ ಫೋನುಗಳು ಜನಪ್ರಿಯವಾಗುತ್ತಿರುವುದಕ್ಕೆ ಕಾರಣಗಳು. ಇಂತಹ ಫೋನುಗಳು ಹಲವು ಕಂಪೆನಿಗಳ ಹೆಸರಿನಲ್ಲಿ ಲಭ್ಯವಿವೆ. ಅವುಗಳೆಂದರೆ O2, iMate, HTC ಇತ್ಯಾದಿ. ಈ ಎಲ್ಲ ಹೆಸರುಗಳಲ್ಲಿ ಅವು ಲಭ್ಯವಿದ್ದರೂ ಈ ಎಲ್ಲ ಫೋನುಗಳನ್ನು ತಯಾರಿಸುವ ಕಂಪೆನಿ ಒಂದೇ -ಅದುವೇ ಎಚ್‌ಟಿಸಿ. ಮೊದಲು ಎಚ್‌ಟಿಸಿ ಕಂಪೆನಿ ಇತರರಿಗೆ ಮಾತ್ರ ಈ ಫೋನುಗಳನ್ನು ತಯಾರಿಸುತ್ತಿತ್ತು. ಇತ್ತೀಚೆಗಷ್ಟೆ ಅದು ತನ್ನ ಹೆಸರಿನಲ್ಲೆ ಇವುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಅವುಗಳಲ್ಲಿ ನಮ್ಮ ದೇಶದಲ್ಲಿ ಲಭ್ಯವಿರುವ ಮತ್ತು ತುಂಬ ಸುದ್ದಿ ಮಾಡುತ್ತಿರುವ ಫೋನು ಎಚ್‌ಟಿಸಿ ಟಚ್. ಏನಿದೆ ಇದರಲ್ಲಿ?&lt;/p&gt;
</description>
 <category domain="http://vishvakannada.com/gadgetloka">ಗ್ಯಾಜೆಟ್ ಲೋಕ</category>
 <pubDate>Wed, 26 Sep 2007 07:56:20 -0700</pubDate>
</item>
<item>
 <title>ಆಪಲ್ ಐಫೋನ್ - ಪರ್ವತ ಪ್ರಸವ?</title>
 <link>http://vishvakannada.com/node/455</link>
 <description>&lt;h3&gt;-ಡಾ. ಯು. ಬಿ. ಪವನಜ&lt;/h3&gt;
&lt;p&gt;ಕೆಲವು ಕಂಪೆನಿಗಳಿವೆ ಏನು ಮಾಡಿದರೂ ಸುದ್ದಿಯಾಗುತ್ತದೆ. ಈ ಪಟ್ಟಿಯಲ್ಲಿ ಆಪಲ್ ಕಂಪೆನಿಯ ಹೆಸರೂ ಸೇರಿದೆ. ಆಪಲ್ ಕಂಪೆನಿ ಒಂದು ಕಾಲದಲ್ಲಿ ವೈಯಕ್ತಿಕ ಗಣಕಗಳು (ಪರ್ಸನಲ್ ಕಂಪ್ಯೂಟರ್) ಮನೆಮಾತಾಗುವಂತೆ ಮಾಡಿದ ಕಂಪೆನಿ. ಐಬಿಎಂ ಮತ್ತು ಮೈಕ್ರೋಸಾಫ್ಟ್ನವರ ಹೊಡೆತದಿಂದಾಗಿ ತತ್ತರಿಸಿ, ಇನ್ನೇನು ಬಾಗಿಲು ಹಾಕಬೇಕೆಂದುಕೊಂಡಿದ್ದಾಗ ಐಪ್ಯಾಡ್ ಮೂಲಕ ಮತ್ತೆ ಚೇತರಿಸಿಕೊಂಡಿತು. ಎಂಪಿ-3 ಪ್ಲೇಯರ್ಗಳ ಲೋಕದಲ್ಲಿ ಐಪ್ಯಾಡ್ ತುಂಬ ಖ್ಯಾತಿಯನ್ನು ಹೊಂದಿದೆ. ಈ ಖ್ಯಾತಿಯನ್ನೇ ಬಂಡವಾಳವನ್ನಾಗಿಸಿಕೊಂಡು ಆಪಲ್ ಕಂಪೆನಿ ಇತ್ತೀಚೆಗೆ ಐಫೋನ್ ಎಂಬ ಹೆಸರಿನ ಮೊಬೈಲ್ ಫೋನ್ ತಯಾರಿಸಿ ಅಮೆರಿಕಾದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. &lt;/p&gt;
</description>
 <category domain="http://vishvakannada.com/gadgetloka">ಗ್ಯಾಜೆಟ್ ಲೋಕ</category>
 <enclosure url="http://vishvakannada.com/files/iPhone5.jpg" length="32272" type="image/pjpeg" />
 <pubDate>Thu, 06 Sep 2007 10:09:46 -0700</pubDate>
</item>
<item>
 <title>ಮೈಕ್ರೋಸಾಫ್ಟ್ ಝೂನ್</title>
 <link>http://vishvakannada.com/node/454</link>
 <description>&lt;h3&gt;- ಡಾ. ಯು. ಬಿ. ಪವನಜ&lt;/h3&gt;
&lt;p&gt;ಮೈಕ್ರೋಸಾಫ್ಟ್ ಕಂಪೆನಿ ತಂತ್ರಾಂಶ (ಸಾಫ್ಟ್‌ವೇರ್) ತಯಾರಿಕೆಗೆ ಜಗತ್ಪ್ರಸಿದ್ಧ. ಅವರು ಕೆಲವು ಯಂತ್ರಾಂಶಗಳನ್ನೂ (ಹಾರ್ಡ್‌ವೇರ್) ತಯಾರಿಸುತ್ತಾರೆ ಎನ್ನುವ ವಿಷಯ ಅಷ್ಟು ಪ್ರಚಾರ ಪಡೆದಿಲ್ಲ.  ಮೈಕ್ರೋಸಾಫ್ಟ್ ಕಂಪೆನಿ ಮೌಸ್ ಮತ್ತು ಕೀಬೋರ್ಡ್‌ಗಳನ್ನು ಹಲವು ವರ್ಷಗಳಿಂದ ತಯಾರಿಸುತ್ತಿದೆ. ಅವುಗಳ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವುದು ಝೂನ್ (Zune). ಇದನ್ನು ಆಪಲ್ ಕಂಪೆನಿಯ ತುಂಬ ಖ್ಯಾತವಾಗಿರುವ ಐಪಾಡ್‌ಗೆ ಪ್ರತಿಸ್ಪರ್ಧಿಯಾಗಿ ತಯಾರಿಸಲಾಗಿದೆ. ಆಪಲ್ ಐಪಾಡ್ ಮತ್ತು ಮೈಕ್ರೋಸಾಫ್ಟ್ ಝೂನ್ ಎರಡೂ ಸಂಗೀತ ಮತ್ತು ಚಲನಚಿತ್ರಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ಪ್ಲೇ ಮಾಡುವ ಕಿಸೆಯಲ್ಲಿ ಹಿಡಿಸಬಹುದಾದ ಪುಟ್ಟ ಸಲಕರಣೆಗಳಾಗಿವೆ. &lt;/p&gt;
</description>
 <category domain="http://vishvakannada.com/gadgetloka">ಗ್ಯಾಜೆಟ್ ಲೋಕ</category>
 <enclosure url="http://vishvakannada.com/files/Zune-collection.jpg" length="11821" type="image/pjpeg" />
 <pubDate>Thu, 06 Sep 2007 09:57:59 -0700</pubDate>
</item>
</channel>
</rss>
