Archive for March, 2012

ಗ್ಯಾಜೆಟ್ ಲೋಕ – ೦೧೨ (ಮಾರ್ಚ್ ೨೨, ೨೦೧೨)

Monday, March 26th, 2012

ಮೊಬೈಲ್ ತಂತ್ರಾಂಶ   ಹಿಂದಿನ ಸಂಚಿಕೆಯಲ್ಲಿ ನಾವು ಮೊಬೈಲ್ ಯಂತ್ರಾಂಶವನ್ನು ಮತ್ತು ಅದರ ಅಂಗಾಂಗಳನ್ನು ನೋಡಿದೆವು. ಈ ಸಲ ಮೊಬೈಲ್ ಫೋನುಗಳಲ್ಲಿ ಬಳಕೆಯಾಗುವ ಹಲವು ವಿಧದ ತಂತ್ರಾಂಶಗಳನ್ನು ಮತ್ತು ಅವುಗಳ ಗುಣವೈಶಿಷ್ಟ್ಯಗಳನ್ನು ತಿಳಿಯೋಣ.   ಮೊಬೈಲ್ ಒಂದು ಕಿಸೆಗಣಕವೇ ಸರಿ. ಅಂತೆಯೇ ಅದರಲ್ಲೂ ಕಾರ್ಯಾಚರಣೆಯ ವ್ಯವಸ್ಥೆ ಇರುತ್ತದೆ. ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆಗಳು ಹಲವಿವೆ. ಅವು ಆಪಲ್‌ನ ಐಓಎಸ್, ಆಂಡ್ರೋಯಿಡ್, ಬ್ಲ್ಯಾಕ್‌ಬೆರ್ರಿ ಮತ್ತು ವಿಂಡೋಸ್ ಫೋನ್. ಐಓಎಸ್ ಆಪಲ್ ಫೋನ್‌ಗಳಲ್ಲಿ ಮಾತ್ರ ಬಳಕೆಯಾಗುತ್ತವೆ. ಅಂದರೆ ಐಫೋನ್ ಕೊಳ್ಳುವಾಗ ಯಾವ […]

ಒಪ್ಪಣ್ಣನಿಂದ ವಿಷು ವಿಶೇಷ ಸ್ಪರ್ಧೆ – 2012

Tuesday, March 20th, 2012
ಒಪ್ಪಣ್ಣನಿಂದ ವಿಷು ವಿಶೇಷ ಸ್ಪರ್ಧೆ – 2012

ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ “ಹವ್ಯಕ”ವೆಂದರೆ ದಕ್ಷಿಣಕನ್ನಡ-ಕಾಸರಗೋಡು-ಉತ್ತರಕನ್ನಡ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಶೆ “ಹವ್ಯಕ ಭಾಶೆ”. ಹಳೆಗನ್ನಡಕ್ಕೆ ಹತ್ತಿರವಾದ ಈ ಭಾಶೆ ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ. ಅನೇಕ ಸಾಹಿತಿಗಳು, ಕಲಾವಿದರು, ಚಿಂತಕರು, ರಾಜಕಾರಣಿಗಳು, ಅಧಿಕಾರಿಗಳು – ಹವ್ಯಕ ಪಂಗಡದಿಂದ ಬಂದವರಿದ್ದಾರೆ.   ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ http://oppanna.com ಎಂಬ ಹವ್ಯಕ ವೆಬ್-ಸೈಟ್ ಕಳೆದ ನಾಲ್ಕು ವರುಷಗಳಿಂದ ತನ್ನ ಸಾಹಿತ್ಯ ಕಾರ್ಯವನ್ನು ಮಾಡುತ್ತಿದೆ. http://oppanna.com ಸಾಹಿತಿ-ಚಿಂತಕ-ಬರಹಗಾರರ ಬಳಗವು ಈಗ ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ (ರಿ.) ಆಗಿ ಸರಕಾರೀ ಮಾನ್ಯತೆ ಪಡೆದಿದೆ. […]

ಗ್ಯಾಜೆಟ್ ಲೋಕ – ೦೧೧ (ಮಾರ್ಚ್ ೧೫, ೨೦೧೨)

Thursday, March 15th, 2012

ಮೊಬೈಲ್ ಯಂತ್ರಾಂಶ   ಮೊಬೈಲ್ ಫೋನ್ ಎಲ್ಲರಿಗೂ ಬೇಕಾದ ಸಾಧನವಾಗಿದೆ. ಮಾರುಕಟ್ಟೆಯಲ್ಲಿ ಸಾವಿರಾರು ಮಾದರಿಯ ಮೊಬೈಲ್ ಫೋನ್‌ಗಳಿವೆ. ಯಾವುದನ್ನು ಕೊಳ್ಳುವುದು? ಈ ಬಗ್ಗೆ ಕಂತುಗಳಲ್ಲಿ ವಿವರಿಸಲಾಗುವುದು. ಇದು ಮೊದಲನೆಯದು.   ಮೊಬೈಲ್ ಫೋನ್‌ಗಳನ್ನು ಕೊಳ್ಳಲು ಹೊರಟಾಗ ಎದುರಾಗುವ ಪ್ರಶ್ನೆ ಯಾವುದನ್ನು ಕೊಳ್ಳುವುದು, ಹೇಗೆ ತೀರ್ಮಾನ ಮಾಡುವುದು, ಎಂದು. ಮೊದಲನೆಯದಾಗಿ ಎಲ್ಲ ವಸ್ತುಗಳನ್ನು ಕೊಳ್ಳುವಾಗ ಮಾಡುವಂತೆ ಇಲ್ಲಿಯೂ ನನಗೆ ಏನೇನು ಸವಲತ್ತುಗಳು ಬೇಕು, ಏನೇನು ಮಾಡಬೇಕು, ಎಂಬುದು ಮುಖ್ಯವಾಗಿರುತ್ತದೆ. ಮೊಬೈಲ್ ಫೋನ್ ಒಂದು ಪುಟಾಣಿ ಗಣಕದಂತೆಯೇ. ಅದರಲ್ಲೂ ಯಂತ್ರಾಂಶ […]

ಗ್ಯಾಜೆಟ್ ಲೋಕ – ೦೧೦ (ಮಾರ್ಚ್ ೦೮, ೨೦೧೨)

Saturday, March 10th, 2012
ಗ್ಯಾಜೆಟ್ ಲೋಕ - ೦೧೦ (ಮಾರ್ಚ್ ೦೮, ೨೦೧೨)

ಸ್ಯಾಮ್‌ಸಂಗ್ ಎಸ್‌ಬಿಎಚ್650 ಬ್ಲೂಟೂತ್ ಹೆಡ್‌ಸೆಟ್   ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಹಲವು ನಮೂನೆ. ಕುತ್ತಿಗೆಗೆ ನೇತುಹಾಕುವಂತಹವು ಒಂದು ವಿಧ. ಅಂತಹವುಗಳಲ್ಲಿ ಒಂದು ಸ್ಯಾಮ್‌ಸಂಗ್ ಎಸ್‌ಬಿಎಚ್ 650 ಹೆಡ್‌ಸೆಟ್. ಬ್ಲೂಟೂತ್ ಸ್ಟೀರಿಯೋ ಹೆಡ್‌ಸೆಟ್ ಆಗಿದೆ. ಅದರ ಬಗ್ಗೆ ಸ್ವಲ್ಪ ಗಮನ ಕೊಡೋಣ.   ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಬಸ್ಸು ರೈಲಿನಲ್ಲಿ ಪ್ರಯಾಣಿಸುವಾಗ, ಕಾರು ಚಲಾಯಿಸುವಾಗ, ಕೆಲವರಿಗೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಲೇ ಇರುವ ಅಭ್ಯಾಸವಿದೆ. ಇನ್ನು ಕೆಲವರಿಗೆ ಸಂಗೀತ ಆಲಿಸುವ ಅಭ್ಯಾಸವಿದೆ. ಆದರೆ ಕಿವಿಗೆ ಮೊಬೈಲ್ ಫೋನನ್ನು ದೀರ್ಘಕಾಲ ಅಂಟಿಸಿಕೊಂಡು ಇರುವುದು […]

ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ

Tuesday, March 6th, 2012

ಮೈಸೂರು ಗೀಕ್ಸ್ ಎಂಬುದು ತಂತ್ರಜ್ಞಾನದ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವ ಬಳಗ. ಈ ಬಳಗ ಆಗಾಗ್ಗೆ ತಂತ್ರಜ್ಞಾನದ ಬಗ್ಗೆ ಒಬ್ಬರಿಗೊಬ್ಬರು ವಿಚಾರವಿನಿಮಯ ಮಾಡಿಕೊಳ್ಳಲು ಸಭೆ ಸೇರುತ್ತಾರೆ. ಚರ್ಚೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಹಿಂದೆ ಅಂತಹ ಹಲವರು ಸಭೆಗಳನ್ನು ನಡೆಸಿದ್ದಾರೆ. ಈ ಮಾಲಿಕೆಯಲ್ಲಿ ಮುಂದಿನ ಸಭೆ ಮಾರ್ಚ್ ೧೧ರಂದು ಜರುಗಲಿದೆ. ಈ ಸಲ ಈ ಸಭೆ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ‍್ ಸಯನ್ಸ್ ವಿಭಾಗದ ಸಭಾಗೃಹದಲ್ಲಿ ನಡೆಯಲಿದೆ. ಈ ಸಲ ವೀಮಡೋಸ್ ಫೋನಿಗೆ ತಂತ್ರಾಂಶ ತಯಾರಿ […]

ಪರಿಸರ ಪ್ರಶಸ್ತಿಗಾಗಿ ಅರ್ಜಿ-ನಾಮನಿರ್ದೇಶನ ಆಹ್ವಾನ

Tuesday, March 6th, 2012

ಬೆಂಗಳೂರು, ಮಾರ್ಚ್ ೦೬( ಕರ್ನಾಟಕ ವಾರ್ತೆ) :  ಪರಿಸರ ಸಂರಕ್ಷಣೆಗಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ-ಸಂಸ್ಥೆಗಳನ್ನು ಗುರುತಿಸಲು ೨೦೧೧-೨೦೧೨ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗಾಗಿ ಅರ್ಜಿ/ನಾಮನಿರ್ದೇಶನಗಳನ್ನು ಅರಣ್ಯ ಮತ್ತು ಪರಿಸರ ಇಲಾಖೆವತಿಯಿಂದ ಆಹ್ವಾನಿಸಲಾಗಿದೆ. ಈ ಪ್ರಶಸ್ತಿ ತಲಾ ೧.೦೦ ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.  ಈ ಪ್ರಶಸ್ತಿಯನ್ನು ವ್ಯಕ್ತಿ ಮತ್ತು ಸಂಸ್ಥೆಗಳ (ಸರ್ಕಾರಿ ವಲಯ, ಸರ್ಕಾರೇತರ ಸಂಸ್ಥೆ, ಕಂಪನಿ ಟ್ರಸ್ಟ್‌ಗಳು ಇತರೆ), ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆ ಕ್ಷೇತ್ರಗಳಲ್ಲಿನ ಗಣನೀಯ ಸೇವೆಗಾಗಿ ನೀಡಲಾಗುವುದು. […]

ಗ್ಯಾಜೆಟ್ ಲೋಕ – ೦೦೯ (ಮಾರ್ಚ್ ೦೧, ೨೦೧೨)

Friday, March 2nd, 2012
ಗ್ಯಾಜೆಟ್ ಲೋಕ - ೦೦೯ (ಮಾರ್ಚ್ ೦೧, ೨೦೧೨)

ನೋಕಿಯ ಲುಮಿಯ -ಅನುಭವಿಸಿಯೇ ತಿಳಿಯಬೇಕು   ಕನ್ಯಾಕುಮಾರಿ ಎಷ್ಟು ಅದ್ಭುತವಾಗಿದೆ ಎಂಬುದನ್ನು ಲೇಖನಗಳನ್ನು ಓದಿ, ಚಲನಚಿತ್ರ ನೋಡಿ ಪೂರ್ತಿ ತಿಳಿಯಲು ಅಸಾಧ್ಯ. ಹಾಗೆಯೇ ನೋಕಿಯ ಲುಮಿಯ ಫೋನನ್ನು ಬಳಸಿ ಅನುಭವಿಸಿಯೇ ತಿಳಿಯಬೇಕು. ಪರದೆಯ ಮೇಲೆ ಐಕಾನ್‌ಗಳನ್ನು ಜಾರಿಸುವುದು ಒಂದು ಪ್ರತ್ಯೇಕ ಅನುಭವವೇ ಸರಿ.   ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮೊಬೈಲ್ ಫೋನ್ ತಯಾರಿಸುವ ಕಂಪೆನಿ ನೋಕಿಯ. ಸಾಮಾನ್ಯವಾಗಿ ರಸಪ್ರಶ್ನೆಗಳಲ್ಲಿ ಕೇಳುವ ಒಂದು ಪ್ರಶ್ನೆ ಹೀಗಿದೆ “ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಡಿಜಿಟಲ್ ಕ್ಯಾಮರ ತಯಾರಿಸುವ ಕಂಪೆನಿ […]