Archive for December, 2009

ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?

Wednesday, December 2nd, 2009

– [http://mitramaadhyama.co.in|ಬೇಳೂರು ಸುದರ್ಶನ] ಕಾವೇರಿ ವಿಷಯ ತಣ್ಣಗಾದ ಮೇಲೆ `ಆವರಣ’ ದ ಶಾಖ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ. ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ? ಐದು ವರ್ಷಗಳ ಹಿಂದಿನ ಮಾತು. ನಾನು ಆಗ ದಿನಪತ್ರಿಕೆಯೊಂದರ ಮ್ಯಾಗಜಿನ್‌ಗಾಗಿ ಎಸ್.ಎಲ್. ಭೈರಪ್ಪನವರ ಸಂದರ್ಶನ ಮಾಡಲು ಇಬ್ಬರು ಸಹೋದ್ಯೋಗಿಗಳೊಂದಿಗೆ ಮೈಸೂರಿಗೆ ಹೋಗಿದ್ದೆ. ಭೈರಪ್ಪನವರ ಮನೆಯಲ್ಲೇ ಇಡೀ ದಿನ ವಾಸ. ಬೆಳಗ್ಗೆಯಿಂದ ಸಂಜೆವರೆಗೆ ಅವರ ಆತಿಥ್ಯದ ನಡುವೆಯೇ ಸಂದರ್ಶನ. ಇನ್ನಷ್ಟೇ ಬಿಡುಗಡೆಯಾಗಲಿರುವ `ಮಂದ್ರ’ದ ನೆರಳಿನಲ್ಲಿ ಈ ಸಂದರ್ಶನಕ್ಕೆ ವಿಶೇಷ ಮಹತ್ವ ಬಂದಿತ್ತು. ಸಂದರ್ಶನದ ಪ್ರಶ್ನೆಗಳನ್ನು […]

ವೈ ಫೈ ಯುಗಕ್ಕೆ ಕಾಲಿಟ್ಟ ಟಿಬೆಟ್ – ಚೀನಾ ಸಂಘರ್ಷ

Wednesday, December 2nd, 2009

– ಬೇಳೂರು ಸುದರ್ಶನ ಅಲ್ಲಿ ಯಾವಾಗಲೂ ವಿದ್ಯುತ್ ಕಡಿತ. ದೂರವಾಣಿ ಸಂಪರ್ಕಕ್ಕೂ ತತ್ವಾರ. ಮೊಬೈಲ್ ಇದ್ದರೂ ನೆಟ್ವರ್ಕ್ ಇರೋದೇ ಇಲ್ಲ. ಆದರೂ ಇಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತಿದೆ! ಟಿಬೆಟ್ನ ದಶಭ್ರಷ್ಟ ಸರ್ಕಾರದ ಜೊತೆಗೆ ನೂರಾರು ಟಿಬೆಟನ್ ಕುಟುಂಬಗಳೂ ಇರುವ ಧರ್ಮಶಾಲೆಯಲ್ಲಿ ಈ ಮಾಹಿತಿ ತಂತ್ರeನದ ಪವಾಡ ನಡೆದಿದೆ. ಟಿಬೆಟ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಭೂಗತ ಸುರಕ್ಷತಾ ಪಡೆಯ ಕಾರ್ಯಕರ್ತರು ಈ ವಿಶಿಷ್ಟ ವೈ ಫೈ (ವೈರ್ಲೆಸ್ ಫಿಡೆಲಿಟಿ) ಇಂಟರ್ನೆಟ್ ಜಾಲವನ್ನು ಸ್ಥಳೀಯ ಪರಿಕರಗಳನ್ನೇ ಬಳಸಿ ರೂಪಿಸಿದ್ದಾರೆ. ಎಸೆದ ಎಲೆಕ್ಟ್ರಾನಿಕ್ […]

ಮರೆಯೋದಂದ್ರ ಹ್ಯಾಂಗ… ಮಾವೋ ತ್ಸೆ ತುಂಗ !… ಹೀಂಗ….

Wednesday, December 2nd, 2009

– ಬೇಳೂರು ಸುದರ್ಶನ ಚಂದ್ರಶೇಖರ ಕಂಬಾರರು ಬರೆದುಹಾಡಿದ ಸಾಲುಗಳನ್ನು ಹೀಗೆಲ್ಲ ತಿರುಚಬಹುದೆ ಎಂದು ಕೇಳಬಹುದೇನೋ. ಆದರೆ ಚೀನಾದಲ್ಲೇ ಈ ಹಾಡನ್ನು ಹೇಳುತ್ತಿದ್ದಾರಂತೆ…. ಹಾಗಂತ ಜೋಸೆಫ್ ಕಾಹ್ನ್ ಬರೆದಿದ್ದಾನೆ, `ನೂಯಾರ್ಕ್ ಟೈಮ್ಸ್’ ದಿನಪತ್ರಿಕೆಯಲ್ಲಿ. ಈ ವರ್ಷ ಪ್ರೌಢಶಾಲೆಗೆ ಹೋಗುವ ಮಕ್ಕಳಿಗೆ ಇಂಥದ್ದೊಂದು ಅಚ್ಚರಿ ಕಾದಿರುತ್ತೆ ಎಂದು ಜೋಸೆಫ್ ಉದ್ದುದ್ದ ಬರೆದಿದ್ದಾನೆ. ಈ ಹೊಸ ಪಠ್ಯಗಳಲ್ಲಿ ಯುದ್ಧಗಳ ಕಥೆಯಿಲ್ಲ, ಮನೆತನಗಳ ಪ್ರವರವಿಲ್ಲ; ಕಮ್ಯುನಿಸ್ಟ್ ಹೋರಾಟಗಳ ರಗಳೆಯೂಇಲ್ಲವಂತೆ. ಅರ್ಥಶಾಸ್ತ್ರ, ತಂತ್ರeನ, ಸಾಮಾಜಿಕ ಕಟ್ಟುಪಾಡುಗಳು, ಜಾಗತೀಕರಣ – ಹೀಗೆ ಹೊಸ ವಿಷಯಗಳನ್ನು ಸೇರಿಸಲಾಗಿದೆಯಂತೆ. […]

ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’ ಸ್ಕಾಲರ್ ‌ಶಿಪ್

Wednesday, December 2nd, 2009

– [http://mitramaadhyama.co.in|ಬೇಳೂರು ಸುದರ್ಶನ] ಅವನಿಗೆ ಬ್ರಿಟಿಶರೆಂದರೆ ಪಂಚಪ್ರಾಣ. ಆಂಗ್ಲೋ ಸ್ಯಾಕ್ಸನ್ ಜನಾಂಗವೇ ವಿಶ್ವದಲ್ಲೆಲ್ಲ ಶ್ರೇಷ್ಠ ಎಂದು ಆತ ಭಾವಿಸಿದ್ದ. ಹಿಟ್ಲರನಿಗಿಂತ ಮೊದಲೇ ಆತ ಜರ್ಮನರನ್ನೂ ಶ್ರೇಷ್ಠ ಜನಾಂಗವೆಂದು ಹೊಗಳಿದ್ದ. ಇಡೀ ವಿಶ್ವವೇ ಬ್ರಿಟಿಶರ ಅಡಿಯಾಳಾಗಬೇಕೆಂದು ಬಯಸಿ ಒಂದು ರಹಸ್ಯ ಸಮಾಜವನ್ನೇ ಸೃಷ್ಟಿಸಬೇಕು ಎಂದು ನಿರ್ಧರಿಸಿ ಅದಕ್ಕೆಂದೇ ತನ್ನ ಉಯಿಲಿನಲ್ಲಿ ಭಾರೀ ಪ್ರಮಾಣದ ಹಣವನ್ನು ತೆಗೆದಿರಿಸಿದ್ದ. ಆದರೆ ಆತ ಸತ್ತಮೇಲೆ ಅವನ ಆಸೆಗಳನ್ನು ಪೂರೈಸಲೆಂದೇ, ಅದೇ ಹಣದಿಂದ ಒಂದು ಸ್ಕಾಲರ್‌ಶಿಪ್ ಸ್ಥಾಪಿಸಲಾಯಿತು. ಅದೇ ರೋಡ್ಸ್ ಸ್ಕಾಲರ್‌ಶಿಪ್. ನಮ್ಮ ಜ್ಞಾನಪೀಠ […]