Archive for January, 2008

ಕಗ್ಗಲಿಪುರದಲ್ಲಿ ಸಮರ್ಪಣ – ೨೦೦೮

Sunday, January 27th, 2008

ಬೆಂಗಳೂರು, ಜನವರಿ ೨೭, ೨೦೦೮: ಬೆಂಗಳೂರಿನ ದಕ್ಷಿಣಕ್ಕೆ ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಕಗ್ಗಲಿಪುರದಲ್ಲಿರುವ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಫೆಬ್ರವರಿ ೧೭ರಂದು ಸಮರ್ಪಣ – ೨೦೦೮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನವಾಗಿ ರೈತರ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಪೂರ್ವಾಹ್ನ ೧೧ ಘಂಟೆಗೆ ರೈತರ ಸಮಾವೇಶವಿರುತ್ತದೆ. ಕನಕಪುರ ತಾಲೂಕಿನ ರೈತರ ಸಮಾವೇಶದಲ್ಲಿ “ಗೋಸಂರಕ್ಷಣೆಯ ಅಗತ್ಯ”, “ಗೋವು ಮತ್ತು ಆರ್ಥಿಕತೆ” ಈ ವಿಷಯಗಳ ಬಗ್ಗೆ ಉಪನ್ಯಾಸ ಮತ್ತು ಚರ್ಚೆಗಳಿರುತ್ತವೆ. ಅಪರಾಹ್ನದ ಕಾರ್ಯಕ್ರಮಗಳಲ್ಲಿ ಗೋವಿಗಾಗಿ ಸದ್ದಿಲ್ಲದೆ ದುಡಿಯುತ್ತಿರುವ ಎಲೆಮರೆಯ ಕಾಯಿಗಳಿಗೆ ಸೇವಾಪುರಸ್ಕಾರ ನೀಡಲಾಗುತ್ತದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಅಶೀರ್ವಚನದ ನಂತರ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತವೆ. ಕದ್ರಿ ಗೋಪಾಲನಾಥರ ಶಿಷ್ಯ ಶ್ರೀಧರ ಸಾಗರ ಅವರಿಂದ ಸ್ಯಾಕ್ಸಾಫೋನ್ ವಾದನ, ರವಿಚಂದ್ರ ಮತ್ತು ತಂಡದವರಿಂದ ಕೊಳಲು ಪ್ರಧಾನವಾಗಿರುವ ವಾದ್ಯವೃಂದ ರೂಪಕ ಹಾಗೂ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ತಂಡದವರಿಂದ ನೃತ್ಯ ರೂಪಕವಿರುತ್ತದೆ. ಕೊನೆಯಲ್ಲಿ ಗೋವುಗಳಿಗೆ ನೀರಾಜನ ಮತ್ತು ದೀಪೋತ್ಸವ ಕಾರ್ಯಕ್ರಮಗಳಿರುತ್ತವೆ. ಸಮಸ್ತರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋರಲಾಗಿದೆ. ಇಡೀ ದಿನ ಗವ್ಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಗವ್ಯ ಚಿಕಿತ್ಸೆಯ ವ್ಯವಸ್ಥೆ ಇರುತ್ತದೆ.

ಬೆಂಗಳೂರಿನಲ್ಲಿ ಮೈಕೇಲ್ ಕಪ್ಲಾನ್

Friday, January 25th, 2008

ಮೈಕೇಲ್ ಕಪ್ಲಾನ್ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ತಂತ್ರಾಂಶಗಳ ಜಾಗತೀಕರಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ತಂತ್ರಜ್ಞರು. ತಂತ್ರಾಂಶ ಜಾಗತೀಕರಣ ವಿಷಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಇವರ ಹೆಸರು ಪರಿಚಯವಿದೆ. ಇವರು ಭಾರತಕ್ಕೆ ಬರುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿರುವ ಮೈಕ್ರೋಸಾಫ್ಟ್ ಸಂಶೋದನಾ ಕೇಂದ್ರದ ಮೂಲಕ ತಿಳಿದು ಬಂತು. ಕೂಡಲೇ ನಾನು ಕಪ್ಲಾನರನ್ನು ಸಂಪರ್ಕಿಸಿ ನಮ್ಮ ಬೆಂಗಳೂರಿನ ಡಾಟ್‌ನೆಟ್ ಬಳಕೆದಾರರ ಸಂಘದಲ್ಲಿ ಒಂದು ಭಾಷಣ ನೀಡಲು ಸಾಧ್ಯವೇ ಎಂದು ಕೇಳಿಕೊಂಡೆ. ಕೂಡಲೇ ಅವರಿಂದ ಉತ್ತರ ಬಂತು “ಇದು ನನಗೆ ನೀಡುತ್ತಿರುವ ಗೌರವ ಎಂದು ಭಾವಿಸಿಕೊಂಡು ಒಪ್ಪಿಗೆ ನೀಡುತ್ತಿದ್ದೇನೆ”.

Transliterating from Kannada into Hindi

Thursday, January 17th, 2008

Q: Is it possible to transliterate from Kannada into Hindi? I have the data in Microsoft Word 2003 doc file.

A: Surprisingly the answer is YES. Many people are not aware of this little feature built into Microsoft Word 2003. The steps are like this –

ಜಂಗಮವಾಣಿಯಲ್ಲಿ ಕನ್ನಡ

Sunday, January 13th, 2008

ಮೊಬೈಲ್ ಫೋನುಗಳಲ್ಲಿ ಎಸ್‌ಎಂಎಸ್ ಮಾಡುವಾಗ ಎಲ್ಲರೂ ಕಂಗ್ಲಿಶ್ ಬಳಸುವುದು ಸಹಜವಾಗಿಬಿಟ್ಟಿದೆ. ಇದರಿಂದಾಗಿ ಎಫ್‌ಎಂ ರೇಡಿಯೋ ಚಾನೆಲುಗಳಿಗೆ ಕಳುಹಿಸಿದ ಸಂದೇಶಗಳನ್ನು ಓದುವಾಗ ಅಲ್ಲಲ್ಲಿ ತಡವರಿಸುತ್ತಾರೆ. ಕೆಲವೊಮ್ಮೆ ಸಂದೇಶ ಮತ್ತು ಹೆಸರುಗಳನ್ನು ಓದುವಾಗ ತಪ್ಪುಗಳೂ ಸಂಭವಿಸುತ್ತವೆ. ಉದಾಹರಣೆಗೆ ಸಂದೇಶ ಕಳುಹಿಸಿದವರು ತಮ್ಮ ಹೆಸರನ್ನು rama ಎಂದು ಬೆರಳಚ್ಚು ಮಾಡಿದ್ದಾರೆಂದಿಟ್ಟುಕೊಳ್ಳಿ. ಇದು ರಾಮ ಅಥವಾ ರಮಾ ಇರಬಹುದು. ಕನ್ನಡದಲ್ಲೇ ಸಂದೇಶ ಕಳುಹಿಸಿದರೆ ಈ ಗಲಿಬಿಲಿ ಇರುವುದಿಲ್ಲ. ಆದರೆ ಸದ್ಯಕ್ಕೆ ಯಾವ ಮೊಬೈಲ್ ಫೋನುಗಳಲ್ಲೂ ಈ ಸೌಲಭ್ಯವಿಲ್ಲ. ಮೊಬೈಲ್ ತಂತ್ರಾಂಶಗಳಿಗೂ ಈ ಮಾತು ಅನ್ವಯಿಸುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ಇದೆ. ಬೆಂಗಳೂರಿನ ಹಸ್ತ ಸೊಲುಶನ್ಸ್ ಕಂಪೆನಿ ಮೊಬೈಲ್ ಫೋನುಗಳಿಗೆ ಭಾರತೀಯ ಭಾಷೆಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡವೂ ಈ ಪಟ್ಟಿಯಲ್ಲಿದೆ. ಕನ್ನಡ ಭಾಷೆಯನ್ನು ಅಳವಡಿಸುವುದೆಂದರೆ ಕೇವಲ ಕನ್ನಡದಲ್ಲಿ ಬೆರಳಚ್ಚು ಮಾಡುವುದಲ್ಲ. ಕನ್ನಡದ ತಂತ್ರಾಂಶಗಳು ತಯಾರಾಗಿವೆ. ಭೂಮಿ ತಂತ್ರಾಂಶಕ್ಕೆ ಬೆಳೆಗಳ ವಿವರ ಸೇರಿಸುವುದು, ಅಂಗನವಾಡಿ ಕಾರ್ಯಕರ್ತರು ತಾವು ಸಂಗ್ರಹಿಸಿದ ಮಾಹಿತಿಗಳನ್ನು ಊಡಿಸುವುದು, ಮತ್ತು ಇನ್ನೂ ಒಂದೆರಡು ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು ಈ ಕಂಪೆನಿ ಅಭಿವೃದ್ಧಿಪಡಿಸಿದೆ. ಜಗತ್ತಿನ ತಂತ್ರಾಂಶ ದೈತ್ಯ ಮೈಕ್ರೋಸಾಫ್ಟ್ ಕಂಪೆನಿ ಭಾರತೀಯ ಭಾಷೆಗಳನ್ನು ಮೊಬೈಲ್ ಫೋನುಗಳಲ್ಲಿ ಅಳವಡಿಸುವತ್ತ ಏನೂ ಕೆಲಸ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮವರದೇ ಕಂಪೆನಿ ಹಸ್ತ ಸೊಲುಶನ್ಸ್ ಕನ್ನಡವನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿದೆ. ಸರಕಾರವು ಇವರಿಗೆ ಪ್ರೋತ್ಸಾಹ ನೀಡಬೇಕಾಗಿದೆ.

ಜಂಗಮವಾಣಿಯ ವಿಹಂಗಮ ನೋಟ

Sunday, January 13th, 2008

– ಡಾ. ಯು. ಬಿ. ಪವನಜ

ಮೋನಪ್ಪ ಬಂಗೇರ ಕರಾವಳಿಯಲ್ಲಿರುವಾತ. ಮೀನು ಹಿಡಿದು ಮಾರಿ ಜೀವನ ನಡೆಸುವವ. ಹಲವು ವರ್ಷಗಳ ಹಿಂದಿನ ಕತೆ. ಮೋನಪ್ಪನಿಗೆ ಕೆಲವೊಮ್ಮೆ ತುಂಬ ಮೀನುಗಳು ಸಿಗುವವು. ತುಂಬ ಸಂತಸದಿಂದ ಆತ ಮೀನುಗಳನ್ನು ಮಾರುಕಟ್ಟೆಗೆ ಒಯ್ದರೆ ಆ ದಿನ ಎಲ್ಲ ಬೆಸ್ತರೂ ತುಂಬ ಮೀನು ತಂದಿರುವುದರಿಂದ ಮೀನುಗಳಿಗೆ ಬೇಡಿಕೆ ಇಲ್ಲ. ಹಿಡಿದ ಮೀನುಗಳನ್ನು ದಾಸ್ತಾನು ಮಾಡಲು ಆತನಲ್ಲಿ ಶ್ಶೆತ್ಯಾಗಾರವಿಲ್ಲ. ಕೊನೆಗೆ ಸಿಕ್ಕಿದ ಬೆಲೆಗೆ ಮೀನುಗಳನ್ನು ಮಾರಬೇಕಾದ ಪರಿಸ್ಥಿತಿ. ಆತನಿರುವ ಊರಿನಿಂದ ಸುಮಾರು ಹತ್ತು ಕಿಲೋಮೀಟರು ದೂರದ ಇನ್ನೊಂದು ಊರಿನಲ್ಲಿ ಮೀನಿಗೆ ಬೇಡಿಕೆ ಇತ್ತು. ಆದರೆ ಅದು ಮೋನಪ್ಪನಿಗೆ ತಿಳಿದಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಯಿಸಿದೆ. ಮೋನಪ್ಪನ ಕೈಗೆ ಮೊಬೈಲ್ ಫೋನು ಬಂದಿದೆ. ಸಮುದ್ರದಲ್ಲಿ ಇರುವಾಗಲೆ ಆತ ಹತ್ತಿರದ ಎರಡು ಮೂರು ಊರುಗಳಿಗೆ ಫೋನಾಯಿಸುತ್ತಾನೆ. ಯಾವ ಮಾರುಕಟ್ಟೆಯಲ್ಲಿ ಮೀನಿಗೆ ಬೇಡಿಕೆ ಇದೆ ಎಂದು ತಿಳಿದುಕೊಳ್ಳುತ್ತಾನೆ. ಎಷ್ಟು ಮೀನಿಗೆ ಬೇಡಿಕೆ ಇದೆ ಎಂಬುದನ್ನೂ ತಿಳಿದುಕೊಳ್ಳುತ್ತಾನೆ. ಮೊಬೈಲ್ ಫೋನಿನಿಂದ ಆತನಿಗೆ ತುಂಬ ಪ್ರಯೋಜನವಾಗಿದೆ. ಎಷ್ಟು ಬೇಕೋ ಅಷ್ಟೇ ಮೀನು ಹಿಡಿದು ಎಲ್ಲಿಗೆ ಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗಿ ಮಾರುತ್ತಾನೆ. ಹೆಚ್ಚಿಗೆಯಾದ ಮೀನುಗಳನ್ನು ಎಸೆಯುವ ಅಥವಾ ಅತಿ ಕಡಿಮೆ ಬೆಲೆಗೆ ಮಾರುವ ಅಗತ್ಯವಿಲ್ಲ. ಸಮಯವೂ ಉಳಿತಾಯವಾಗುತ್ತದೆ.

How do I enable Indic on Windows XP?

Sunday, January 13th, 2008

Q: I downloaded and installed the Kannada IME from Bhasha India web-site. Still I don’t get Kannada properly in Windows XP. I see blank squares when I type using the Kannada IME. Why?

A: The Bhasha India IME will add additional keyboard layouts also known as Input Method Editor (IME) only.