Archive for December, 2007

ಕಂಪ್ಯೂಟರ್ ಮಾಯಾಲೋಕ; ಕಣ್ಮುಚ್ಚಿರುವ ಲೇಖಕ

Wednesday, December 26th, 2007

– ರಘುನಾಥ ಚ. ಹ.

‘ನನಗೆ ಕಂಪ್ಯೂಟರ್ ಕಲಿಸಲು ನನ್ನ ಮೊಮ್ಮಗಳು ತುಂಬಾ ಪ್ರಯತ್ನಿಸಿದಳು. ಆದರೆ ಅವಳ ಪ್ರಯತ್ನ ಯಶಸ್ವಿಯಾಗಲಿಲ್ಲ’. ಪದಗಳ ವ್ಯುತ್ಪತ್ತಿಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಅಳಲಿದು. ಹಾಗೆಂದು ವೆಂಕಟಸುಬ್ಬಯ್ಯನವರಿಗೆ ಕಂಪ್ಯೂಟರ್ ಕುರಿತು ಅಥವಾ ಅಂತರ್ಜಾಲವೆಂಬ ವಿಸ್ಮಯದ ಕುರಿತು ಅಲರ್ಜಿಯಿದೆ ಎಂದರ್ಥವಲ್ಲ. ಅವರು ಸಂಪಾದಿಸಿದ ನಿಘಂಟೊಂದು ಅಂತರ್ಜಾಲದಲ್ಲಿದೆ. ಬಹುಶಃ, ಮುದ್ರಣ ರೂಪದ ನಿಘಂಟಿನ ಬಳಕೆಗಿಂತಲೂ ಇಂಟರ್ನೆಟ್‌ನಲ್ಲಿನ ನಿಘಂಟುವಿನ ಬಳಕೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಈ ಕುರಿತು ವೆಂಕಟಸುಬ್ಬಯ್ಯನವರಿಗೆ ಖುಷಿಯಿದೆ. ಆದರೆ ಆ ಖುಷಿ ಕಂಪ್ಯೂಟರ್ ಕಲಿಕೆಯಾಗಿ ಮಾರ್ಪಡುತ್ತಿಲ್ಲ.

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಾಗಾರ

Friday, December 14th, 2007

ದಯವಿಟ್ಟು ಈ ಪುಟ ಓದಿ –http://vishvakannada.com/node/338. ಅದರ ಕೊನೆಯಲ್ಲಿ ಬರುವ ಒಂದು ಸಂಭಾಷಣೆಯ ಕಡೆಗೆ ಸ್ವಲ್ಪ ಜಾಸ್ತಿ ಗಮನ ಕೊಡಿ.