Archive for December, 2006

೨೦೦೬ರ ಅತ್ಯತ್ತಮ ಸುಳ್ಳು ಪ್ರಶಸ್ತಿ

Friday, December 29th, 2006

ಬೆಂಗಳೂರು, ಡಿ. ೨೯, ೨೦೦೬: ವಿಶ್ವಕನ್ನಡದ ಸಂಪಾದಕರ ಒಪ್ಪಿಗೆಯಿಲ್ಲದೆ ಉಪ ಸಹಾಯಕ ಕಿರಿಯ ಸಂಪಾದಕರು ಹಾಗೂ ಹಾಸ್ಯ ವಿಭಾಗದ ಜವಾಬ್ದಾರಿಯನ್ನು ತನ್ನ ಅತಿ ಚಿಕ್ಕ ಹೆಗಲ ಮೇಲೆ ಹೊತ್ತಂತವರು ಸುಳ್ಳು ಪ್ರಶಸ್ತಿ ಘೋಷಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ವರ್ಷದ ಕೊನೆಯಲ್ಲಿ ಹಲವು ರೀತಿಯ ವರ್ಷದ ವ್ಯಕ್ತಿ, ವರ್ಷದ ಘಟನೆ, ವರ್ಷದ ಸಾಧನೆ, ಇತ್ಯಾದಿ ಪ್ರಶಸ್ತಿಗಳನ್ನು ಘೋಷಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ವರ್ಷ ನೀಡುವ ವರ್ಷದ ಶ್ರೇಷ್ಠ ಸುಳ್ಳು ಪ್ರಶಸ್ತಿಯನ್ನು ಕೇಂದ್ರ ಗೃಹಕಾರ್ಯದರ್ಶಿ ವಿ.ಕೆ.ದುಗ್ಗಲ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಅವರು ಹೇಳಿರುವ “ರಾಷ್ಟ್ರದಲ್ಲಿ ಅಲ್‌ಖಾಯ್ದಾ ಸುಳಿವಿಲ್ಲ” ಎಂಬ ಹೇಳಿಕೆಗೆ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ. ಎಂದಿನಂತೆ ಮುಂದಿನ ವರ್ಷದ ಎಪ್ರಿಲ್ ೧ರಂದು ಈ ಪ್ರಶಸ್ತಿಯನ್ನು ನೀಡಲಾಗುವುದು. ಯಾರಿಗಾದರು ಯಾವುದೇ ಯಾವುದೇ ರೀತಿಯ ಅಭ್ಯಂತರವಿದ್ದಲ್ಲಿ ಕೂಡಲೆ ತಿಳಿಸಬೇಕಾಗಿಯೂ ಕೋರಲಾಗಿದೆ.

ಸುವರ್ಣ ಗಣಕನ್ನಡ

Wednesday, December 27th, 2006

– ಡಾ| ಯು. ಬಿ. ಪವನಜ

ಗಣಕಗಳಲ್ಲಿ ಕನ್ನಡದ ಬಳಕೆ ಸುಮಾರು ಮೂರು ದಶಕಗಳ ಹಿಂದೆ ಆರಂಭವಾಯಿತು. ಪದಸಂಸ್ಕರಣವು (word-processing) ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. (desktop publishing). ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ.

ಹಾಸ್ಯ – ಹವ್ಯಕ ಪಾಕೋತ್ಸವ

Monday, December 18th, 2006

ಆಹಾರ, ನೀರು, ವಸತಿ, ಬಟ್ಟೆಗಳು ಮನುಷ್ಯನ ಅತ್ಯಾವಶ್ಯಕಗಳು. ಇವೆಲ್ಲವುಗಳನ್ನು ಸರಿಯಾದ ಕ್ರಮದಲ್ಲಿ ಪಡೆದು ವಿನಿಯೋಗಿಸುವುದು ಮನುಜನ ಲಕ್ಷಣ. ಈ ವಿಚಾರದಲ್ಲಿ ಹವ್ಯಕರು ಮೊದಲಿನಿಂದಲೂ ತಮ್ಮದೇ ಆದ ಸಂಸ್ಕೃತಿಯಿಂದ ವಿಶಿಷ್ಟವಾಗಿ ಗೋಚರಿಸುತ್ತಾರೆ. ಆಹಾರಾರ್ಥಂ ಕರ್ಮ ಕುರ್ಯಾತ್ ಎಂಬ ಶ್ರುತಿವಾಕ್ಯದಂತೆ ಆಹಾರಕ್ಕಾಗಿ ಜೀವನದಲ್ಲಿ ನಿಂದ್ಯವಲ್ಲದ ಕೆಲಸವನ್ನು ಮಾಡಬೇಕು, ಪ್ರಾಣರಕ್ಷಣೆಗಾಗಿ ಆಹಾರವನ್ನು ಸೇವಿಸಬೇಕು, ತತ್ವಗಳ ತಿಳುವಳಿಕೆಗಾಗಿ ಪ್ರಾಣವನ್ನು ರಕ್ಷಿಸಬೇಕು, ಪುನಃ ದುಃಖಿಯಾಗದಿರಲು ತತ್ತ್ವಜಿಜ್ಞಾಸೆ ಬೇಕು. ಎಂಬ ತಾತ್ವಿಕ ಹಿನ್ನೆಲೆಯಲ್ಲಿ ಅಗಣಿತ ತಲೆಮಾರುಗಳಿಂದ “ಊಟಬಲ್ಲವನಿಗೆ ರೋಗವಿಲ್ಲ” ಎಂಬುದನ್ನರಿತು, ಶಾಸ್ತ್ರೀಯವಾದ ಸಾತ್ವಿಕ ಬೋಜನವನ್ನು ಹೊಂದಿ ಶ್ರೇಯಸ್ಕರ ಜೀವನವನ್ನು ನಡೆಸುತ್ತಿದ್ದಾರೆ. ಹವ್ಯಕರ ಆಹಾರದಲ್ಲಿ ಮತ್ತು ಕ್ರಮದಲ್ಲಿ ಆಯುರ್ವೇದೀಯ ಪದ್ಧತಿಯಿದೆ. ಇದು ಯಾವ ಶಾಸ್ತ್ರಾಧ್ಯಯನವಿಲ್ಲದೆ ಮನೆಯ ಪಾಕಾಧ್ಯಕ್ಷರಾದ ಹಿರಿಯರಿಂದ ಕಿರಿಯರಿಗೆ ತಲೆತಲಾಂತರಗಳಿಂದ ಹರಿದುಬರುತ್ತಿದೆ. ಜೀವನೋಪಾಯಕ್ಕಾಗಿ ನಗರವನ್ನು ಸೇರಿದರೂ ಇಲ್ಲಿಯೂ ತಮ್ಮ ಆಹಾರ ಸೇವನೆಯ ಕ್ರಮ ಸಮಯ ಪರಿಮಾಣಗಳನ್ನು ಉಳಿಸಿಕೊಂಡು ಬಂದಿರುತ್ತಾರೆ. ಇಂತಹ ಒಂದು ವಿಶಿಷ್ಟವಾದ ಭಕ್ಷ್ಯ ಭೋಜ್ಯಗಳನ್ನು ಬೆಂಗಳೂರಿನ ಸಸ್ಯಾಹಾರೀ ಜನತೆಗೆ ನೀಡುವ ಉದ್ದೇಶದಿಂದ ದಿನಾಂಕ ಡಿಸೆಂಬರ್ ೨೯, ೩೦ ಮತ್ತು ೩೧, ೨೦೦೬, ಗಿರಿನಗರದಲ್ಲಿ ಹಾಸ್ಯ – ಹವ್ಯಕ ಪಾಕೋತ್ಸವವು ಆಯೋಜಿತವಾಗಿದೆ. ಇದೊಂದು ಸಂಪೂರ್ಣ ಸಸ್ಯಾಹಾರದ, ಮಲೆನಾಡು, ಕರಾವಳಿಯ ಹವ್ಯಕರ ಆಹಾರ ಮತ್ತು ಸದಭಿರುಚಿಯ ಹಾಸ್ಯಗಳ ಹಬ್ಬವಾಗಿದೆ. ಆಹಾರ ಪ್ರದರ್ಶನ, ಸ್ಪರ್ಧೆ, ಊಟ, ಅಂಗಡಿಮುಂಗಟ್ಟು, ಮನರಂಜನೆಗಳನ್ನು ಒಳಗೊಂಡಿರುತ್ತದೆ.

ರಘುನಾಥ ಚ.ಹ. ಅವರ ಪುಸ್ತಕ ಬಿಡುಗಡೆ

Sunday, December 17th, 2006

ಬೆಂಗಳೂರು, ೧೭, ೨೦೦೬: ಕವಿ, ಕಥೆಗಾರ ಹಾಗೂ ಪತ್ರಕರ್ತರೂ ಆಗಿರುವ ರಘುನಾಥ ಚ.ಹ. ಅವರ ಹೊಸ ಪುಸ್ತಕ “ಹೊರಗೂ ಮಳೆ ಒಳಗೂ ಮಳೆ” ಬಿಡುಗಡೆ ಕಾರ್ಯಕ್ರಮ ಇಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನೆರವೇರಿತು. ತಮ್ಮ “ತೇರು” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ರಾಘವೇಂದ್ರ ಪಾಟೀಲರು ಪುಸ್ತಕದ ಬಿಡಗಡೆ ಮಾಡಿದರು. ಅವರು ಮಾತನಾಡುತ್ತ “ರಘುನಾಥರ ಕಥೆಗಳಲ್ಲಿ ಆದರ್ಶದ ಹುಡಕಾಟ ಇರುವಂತೆ ಕಾಣುತ್ತದೆ. ಕೆಲವೊಮ್ಮ ಈ ಆದರ್ಶದ ಹುಡುಕಾಟದಲ್ಲಿ ಕಥೆಗಾರ ಸೋಲುತ್ತಾನೆ. ಹೆಚ್ಚಿನ ಕಥೆಗಳು ಭಾವಗೀತೆಗಳಂತಿವೆ” ಎಂದರು. ಮಂಜುನಾಥರು ಕಥೆಗಳ ಬಗ್ಗೆ ಮಾತನಾಡಿದರು. ಕಥಾಸಂಕಲನವನ್ನು ಪ್ರಕಟಿಸಿರುವ “ಸಂಚಯ”ದ ಡಿ.ವಿ. ಪ್ರಹ್ಲಾದ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಜಯಪ್ರಕಾಶ ನಾರಾಯಣ ಸ್ವಾಗತ ಭಾಷಣ ಮಾಡಿದರು. ಕೊನೆಯಲ್ಲಿ ಎಸ್. ದಿವಾಕರ ನಡೆಸಿಕೊಟ್ಟ “ಕಥೆಗಳ ಕಥೆಗಳು” ಸಂವಾದ ಕಾರ್ಯಕ್ರಮದಲ್ಲಿ ಅಶೋಕ ಹೆಗಡೆ, ಆನಂದ ಋಗ್ವೇದಿ, ಹಾಗೂ ಇತರರು ಪಾಲ್ಗೊಂಡರು.

ಮೊಬೈಲ್ ಸಂಖ್ಯೆ ಕದಿಯುವ ಬ್ಯಾಂಕುಗಳಿಂದ ಬೇಷರತ್ ಕ್ಷಮಾ

Tuesday, December 12th, 2006

ಬೇಳೂರು ಸುದರ್ಶನ

ನೀವು ಹೊಸದಾಗಿ ಒಂದು ಮೊಬೈಲ್ ಕೊಳ್ಳುತ್ತೀರಿ. ಯಾವುದೋ ಮೊಬೈಲ್ ಕಂಪನಿಯ ಯಾವುದೋ ಸಂಖ್ಯೆ ನಿಮ್ಮದಾಗುತ್ತದೆ. ನಿಮ್ಮ ಗೆಳೆಯರು, ಬಂಧುಗಳಿಗೆ ಆ ಸಂಖ್ಯೆಯನ್ನು ಹೇಳಿ ಅವರಿಂದ ಕರೆ ಬರಲಿ ಎಂದು ನಿರೀಕ್ಷಿಸುತ್ತೀರಿ. ನಿಮ್ಮ ವ್ಯವಹಾರ ವೃದ್ಧಿಯಾಗಲಿ ಎಂದು ಬಯಸುತ್ತೀರಿ. ನೀವು ಈ ಮೊಬೈಲ್ ಖರೀದಿಗೆ ನಿಮ್ಮದೇ ಕ್ರೆಡಿಟ್ / ಡೆಬಿಟ್ ಕಾರ್ಡನ್ನು ಬಳಸಿರಲೂಬಹುದು.

Oriya in Windows

Wednesday, December 6th, 2006

Q. How can I get Oriya in Windows?

A. Windows XP does not have support for Oriya. That has been included in Windows Vista. The opentype font used for Oriya is called Kalinga. Vista has the Oriya locale also. One can have date, time, currency in Oriya. One can also have the files with names typed in Oriya. Windows explorer will properly sort the files as per Oriya sorting order. Shown below are two screenshots -one from Notepad and another from Word 2007.

ತೆಲುಗು ತಲೆಗಳ ನಡುವೆ

Monday, December 4th, 2006

– ನಾರಾಯಣ ಶಾಸ್ತ್ರಿ

(೧) ರೈಲು ಪಯಣ…ಗೊರಕೆಯೋ ಗೊರಕೆ…!

ನಾನು ಬೆಂಗಳೂರಿನ ಜಯನಗರದ ಸಣ್ಣ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾಗ (Technical Writer ಹಾಗೂ System Maintenance Executive ಆಗಿ) ಜುಲೈ ೨೦೦೪ಲ್ಲಿ ನನಗೆ ನನ್ನ ದಾಯಾದಿಯ ಮೂಲಕ ಹೈದರಾಬಾದಿನ ಇನ್ನೊವಾ ಸಲ್ಯೂಷನ್ಸ್ ಲ್ಲಿ ನೌಕರಿ ಸಿಕ್ಕಿತು. ಆ ಕಂಪನಿಯ ಅಧ್ಯಕ್ಷರು ನನ್ನನ್ನು ಮೊಬೈಲ್ ಮೂಲಕ ಸಂಪರಿಕಿಸಿ ಸ್ವಲ್ಪ ಹೊತ್ತು ಮಾತನಾಡಿಸಿ, ಮೂರು ದಿನಗಳ ನಂತರ ನನಗೆ offer letter ಕೊರಿಯರ್ ಮೂಲಕ ಸಿಕ್ಕಿತು. ನಾನು ನನ್ನ ಸಹಿಯನ್ನು ಹಾಕಿ ಮಂಜೂರು ಮಾಡಿದ.