Archive for September, 2006

ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಕನ್ನಡ

Friday, September 8th, 2006

– ಡಾ. ಯು. ಬಿ. ಪವನಜ

ಗಣಕ ಮತ್ತು ಮಾಹಿತಿ ತಂತ್ರಜ್ಞಾನ ನಮ್ಮ ದೈನಂದಿನ ಬದುಕಿನ ಎಲ್ಲ ಮಜಲುಗಳನ್ನು ಪ್ರವೇಶಿಸುತ್ತಿದೆ. ಗಣಕೀಕರಣದಿಂದಾಗಿ ನಮ್ಮ ಭಾಷೆ ಅಳಿಯುತಿದೆ ಎಂಬ ಕೂಗು ದೊಡ್ಡದಾಗಿಯೇ ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಗಣಕಗಳನ್ನು ದೂರುವ ಬದಲು ಅವುಗಳನ್ನು ಹೇಗೆ ನಮ್ಮ ಭಾಷೆಗೆ ಅಳವಡಿಸಿಕೊಳ್ಳಬೇಕು ಎಂದು ಚಿಂತನೆ ನಡೆಸಿ ಅದನ್ನು ಕಾರ್ಯರೂಪಕ್ಕೆ ತರುವುದೇ ಬುದ್ಧಿವಂತರ ಲಕ್ಷಣ. ನಮ್ಮ ಕನ್ನಡ ಭಾಷೆಯನ್ನು ಮಾಹಿತಿ ತಂತ್ರಜ್ಞಾನದಲ್ಲಿ ಅಳವಡಿಸಲು ಹಲವು ಕೆಲಸಗಳು ನಡೆದಿವೆ. ಅವುಗಳ ಫಲವಾಗಿ ಈಗ ಗಣಕಗಳಲ್ಲಿ ಕನ್ನಡವನ್ನು ಸುಲಭವಾಗಿ ಯಾವುದೇ ತೊಂದರೆಯಿಲ್ಲದೆ ಬಳಸಬಹುದಾಗಿದೆ. ಈ ಬಗ್ಗೆ ಪ್ರತ್ಯೇಕ ಲೇಖನ ಬರೆಯಬೇಕಾಗಿರುವುದರಿಂದ ಅದನ್ನು ಇಲ್ಲಿ ವಿವರಿಸುತ್ತಿಲ್ಲ. ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಘೋಷಣೆ ತುಂಬ ಹಳೆಯದು ಮತ್ತು ಕ್ಲೀಷೆಯಾಗಿದೆ. ಆದರೂ ಶಿಕ್ಷಣದಲ್ಲಿ ಗಣಕದ ಬಳಕೆ ಬಗ್ಗೆ ನಾವು ಗಮನ ಹರಿಸಲೇಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಕನ್ನಡ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಬಂದಾಗ ಹೇಗೆ ಮಾಹಿತಿ ತಂತ್ರಜ್ಞಾನದ ಬಳಕೆ ಮಾಡಬಹುದು ಎಂಬುದನ್ನು ನೋಡೋಣ. ಇವುಗಳನ್ನು ಒಂದೊಂದಾಗಿ ಗಮನಿಸೋಣ.

ಮರೆಯೋದಂದ್ರ ಹ್ಯಾಂಗ… ಮಾವೋ ತ್ಸೆ ತುಂಗ !… ಹೀಂಗ….

Friday, September 8th, 2006

– ಬೇಳೂರು ಸುದರ್ಶನ

ಚಂದ್ರಶೇಖರ ಕಂಬಾರರು ಬರೆದುಹಾಡಿದ ಸಾಲುಗಳನ್ನು ಹೀಗೆಲ್ಲ ತಿರುಚಬಹುದೆ ಎಂದು ಕೇಳಬಹುದೇನೋ. ಆದರೆ ಚೀನಾದಲ್ಲೇ ಈ ಹಾಡನ್ನು ಹೇಳುತ್ತಿದ್ದಾರಂತೆ….

ಉಷಾಕಿರಣದ ದಿವ್ಯಮರಣ

Thursday, September 7th, 2006

ವಿಆರ್‌ಎಲ್ ಗ್ರೂಪ್‌ನ ಪತ್ರಿಕೆಗಳನ್ನು ಟೈಂಸ್ ಆಫ್ ಇಂಡಿಯಾದವರು ಕೊಂಡುಕೊಂಡ ಸುದ್ದಿ ನಿಮಗೆಲ್ಲ ಗೊತ್ತೇ ಇರಬೇಕು. ಈ ಗುಂಪಿನ ಪತ್ರಿಕೆಗಳೆಂದರೆ ವಿಜಯ ಕರ್ನಾಟಕ, ವಿಜಯ ಟೈಂಸ್ ಮತ್ತು ಉಷಾಕಿರಣ. ಈ ಪತ್ರಿಕೆಗಳನ್ನು ಟೈಂಸ್‌‌ನವರು ಕೊಂಡುಕೊಂಡ ಸುದ್ದಿ ಹೊರಬರುತ್ತಿದ್ದಂತೆ ಜನರಾಡಿಕೊಂಡುದೇನೆಂದರೆ ವಿಜಯ ಟೈಂಸ್ ಮತ್ತು ಉಷಾಕಿರಣಗಳ ಗತಿ ಮುಗಿಯಿತು ಎಂದು. ಟೈಂಸ್‌ನವರಿಗೆ ಒಂದಕ್ಕಿಂತ ಹೆಚ್ಚು ಕನ್ನಡ ಪತ್ರಿಕೆ ಬೇಡ. ಆದುದರಿಂದ ಉಷಾಕಿರಣ ಬೇಡ. ಇಂಗ್ಲೀಶ್ ಪತ್ರಿಕೆಯಂತೂ ತಮ್ಮದೇ ಇದೆಯಲ್ಲ. ಹಾಗಾಗಿ ವಿಜಯ ಟೈಂಸೂ ಬೇಡ. ಉಳಿಯುವುದು ವಿಜಯ ಕರ್ನಾಟಕ ಮಾತ್ರ ಎಂದು ಎಲ್ಲರೂ ಆಡಿಕೊಂಡರು. ಆದರೆ ಕೂಡಲೇ ಹಾಗೇನೂ ಆಗಲಿಲ್ಲ.

ತಂಪಾಸನ !

Friday, September 1st, 2006

ಚಿತ್ರವಿಚಿತ್ರ ಯುಎಸ್‌ಬಿ ಸಾಧನಗಳ ಬಗ್ಗೆ ಹಿಂದೊಮ್ಮೆ ಸುದೀರ್ಘವಾದ ಲೇಖನವನ್ನೇ ಬರೆದಿದ್ದೆ. ಈಗ ಅವುಗಳ ಸಾಲಿಗೆ ಒಂದೆರಡು ಹೊಸದು ಸೇರ್ಪಡೆಯಾಗಿವೆ. ಮೊದಲನೆಯದಾಗಿ ಹವಾನಿಯಂತ್ರಿತ ಅಂಗಿ ಅಥವಾ ಜಾಕೆಟ್. ನಿಮ್ಮ ಕಚೇರಿಯಲ್ಲಿ ಹವಾನಿಯಂತ್ರಣ ಇಲ್ಲವೇ? ಚಿಂತೆ ಮಾಡಬೇಡಿ. ಗಣಕ (ಕಂಪ್ಯೂಟರ್) ಅಂತೂ ಇದ್ದೇ ಇದೆ ತಾನೆ? ನಾಲ್ಕೈದು ವರ್ಷಗಳ ಈಚೆಗೆ ತಯಾರಾದ ಎಲ್ಲ ಗಣಕಗಳಲ್ಲಿ ಯುಎಸ್‌ಬಿ ಕಿಂಡಿ (ಪೋರ್ಟ್‌) ಇದ್ದೇ ಇದೆ. ಇನ್ನೇನಾಗಬೇಕು. ಈ ಜಾಕೆಟ್ ಕೊಂಡು ಯುಎಸ್‌ಬಿ ಕಿಂಡಿಗೆ ಲಗತ್ತಿಸಿ ತಂಪಾಗಿರಿ.

ತರಲೆ ಗಣಿತ

Friday, September 1st, 2006

೧. ೬ ಅಡಿ ಉದ್ದ, ೩ ಅಡಿ ಅಗಲ, ೩ ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಅಡಿ ಮಣ್ಣು ಇದೆ?
(ಕ) ೫೪
(ಚ) ಸೊನ್ನೆ. ಹೊಂಡದಲ್ಲಿ ಮಣ್ಣು ಎಲ್ಲಿರುತ್ತೆ?

ಕೋಲಾ ಕುಡಿಯುತ್ತಿದ್ದೀರಾ ಎಚ್ಚರ!

Friday, September 1st, 2006

– ಡಾ| ಡಿ. ಕೆ. ಮಹಾಬಲರಾಜು

ಕೋಲಾ ಪುರಾತನ ಕಾಲದಿಂದ ಬಂದ ಪೇಯವಲ್ಲ. ಇದು ಈಗ ಬಯಸದವರಿಗೂ ಬಲವಂತವಾಗಿ ದೊರೆಯುತ್ತಿರುವ ಪಾನೀಯ. ಬೇಡ ಬೇಡ ಎನ್ನುವವರನ್ನೂ ಮರುಳುಗೊಳಿಸಿ, ಅವರ ಮನೆಯಲ್ಲಿಯೇ ಬೇರೂರುತ್ತಿರುವ ಲಘುಪೇಯ ಇದು. ಇಂದಿನ ಯುವಜನತೆಗಂತೂ ಕೋಲಾವೇ ಸರ್ವಸ್ವ. ಇದೇ ಸಂಸ್ಕೃತಿ.