Press "Enter" to skip to content

Posts published in September 2006

ಸುಧಾರಿತ ತುಂಗ ಫಾಂಟ್

Corrected opentype font Tunga for Kannada is now available at Microsoft web-site for download.

ಮೈಕ್ರೋಸಾಫ್ಟ್‌ನವರು ನೀಡಿದ ತುಂಗ ಫಾಂಟ್‌ನಲ್ಲಿ ಇದ್ದ ಸಮಸ್ಯೆ ಬಗ್ಗೆ ಗೊತ್ತಿದೆ. ಅದರ ಬಗ್ಗೆ ಇಲ್ಲಿ ಮತ್ತು ಇಲ್ಲಿ ಓದಬಹುದು. ಸುಧಾರಿತ ತುಂಗ ಫಾಂಟ್ ಈಗ ಅಂತರಜಾಲದಲ್ಲಿ ಅಧಿಕೃತವಾಗಿ ಡೌನ್‌ಲೋಡ್‌ಗೆ ಲಭ್ಯವಿದೆ. ಅದನ್ನು ಪಡೆಯಬೇಕಾದರೆ ಈ ಅಪ್‌ಡೇಟನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇಲ್ಲಿ ನೀಡಿರುವ ಅಪ್‌ಡೇಟ್ ನಿಜವಾಗಿ ಇರುವುದು ನೇಪಾಳಿ, ಪಾಶ್ತೋ, ಪಿಲಿಪಿನೋ ಮತ್ತು ಇತರೆ ಕೆಲವು ಭಾಷೆಗಳನ್ನು ವಿಂಡೋಸ್ ಎಕ್ಸ್‌ಪಿಗೆ ಅಳವಡಿಸಲು. ಕನ್ನಡ ಭಾಷೆಯ ಸುಧಾರಿತ ತುಂಗ ಫಾಂಟ್ ಇವುಗಳ ಜೊತೆ ಸೇರಿಕೊಂಡಿದೆ ಎಂದು ತಿಳಿಯಬೇಕಾದರೆ ಈ ಡೌನ್‌ಲೋಡ್ ಬಗ್ಗೆ ಕೊಟ್ಟ ವಿವರವನ್ನು ಓದಬೇಕು. ಈ ವಿವರದಲ್ಲಿ ಕೊಟ್ಟಿರುವ ಫೈಲುಗಳ ಪಟ್ಟಿಯಲ್ಲಿ ತುಂಗ ಫಾಂಟ್ ಕೂಡ ಇದೆ.

kannada rajyotsava

please publish an article on 'KANNADA RAJYOTSAVADA VAISHISTYA HAAGU MAHATVA'

ತುಳುಕ್ಲಾ ಒಂತೆ ಜಾಗೆ ಕೊರ್ಲೆ

- ಡಾ. ಯು. ಬಿ. ಪವನಜ

ದಕ್ಷಿಣ ಕನ್ನಡದ ಬಸ್ಸುಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತು “ಒಂತೆ ಜಾಗೆ ಕೊರ್ಲೆ” (ಸ್ವಲ್ಪ ಜಾಗ ನೀಡಿ). ಈ ಮಾತನ್ನು ತುಳು ಭಾಷಿಗರು ಈಗ ಜಗತ್ತಿನ ಮುಂದೆ ಕೇಳಬೇಕಾಗಿದೆ. ಗಣಕದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಪ್ರತಿ ಅಕ್ಷರಕ್ಕೂ ಸಂಕೇತ ನೀಡುವ ವ್ಯವಸ್ಥೆ ಯುನಿಕೋಡ್. ಈ ಯುನಿಕೋಡ್‌ನಲ್ಲಿ ತುಳು ಭಾಷೆಗೂ ತನ್ನದೇ ಆದ ಸ್ಥಾನ ಬೇಕಾಗಿದೆ.

ಚಿನಕುರಳಿ – ೨೨

- ಮರ್ಕಟ

ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ತೀವ್ರ ನಿಗಾ ವಹಿಸುವ ಸಲುವಾಗಿ ಸಾರ್ವಜನಿಕ ಕುಂದು ಕೊರತೆ ವಿಭಾಗವನ್ನು ಮೈಸೂರು ವಿಶ್ವವಿದ್ಯಾಲಯ ಪ್ರಾರಂಭಿಸಿದೆ. ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅರ್ಜಿಗೆ ೧೦ ದಿನಗಳ ಒಳಗೆ ಉತ್ತರ ದೊರಕದಿದ್ದಲ್ಲಿ ಈ ಕುಂದು ಕೊರತೆಗಳ ವಿಭಾಗಕ್ಕೆ ನೇರವಾಗಿ ದೂರು ಸಲ್ಲಿಸಬಹುದು.

ಚಿನಕುರಳಿ – ೨೧

- ಮರ್ಕಟ

`ಸರ್ಕಾರಿ ನೌಕರರು ಅಮಾನತಿಗೆ ಒಳಗಾಗುವುದನ್ನು ಬಹಳ ಇಷ್ಟಪಡುತ್ತಾರೆ' -ಡಾ| ಸಿದ್ಧಲಿಂಗಯ್ಯ.

ಚಿನಕುರಳಿ – ೨೦

- ಮರ್ಕಟ

`ನಾನು ರಾಜಕಾರಣದಿಂದ ಓಡಿ ಹೋಗುವುದಿಲ್ಲ' -ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ.

ಚಿನಕುರಳಿ – ೧೯

- ಮರ್ಕಟ

`ಮನುಷ್ಯರನ್ನು ಒಗ್ಗೂಡಿಸುವ ಶಕ್ತಿ ರಾಜಕಾರಣಿಗಳು ಅಥವಾ ವಿಜ್ಞಾನಿಗಳಿಗೆ ಇಲ್ಲ. ಸಾಹಿತಿ ಮತ್ತು ಕಲಾವಿದರಿಂದ ಮಾತ್ರ ಮನುಷ್ಯ ಸಂಬಂಧಗಳನ್ನು ಬೆಸೆಯಲು ಸಾಧ್ಯ' -ಮಾಜಿ ಮುಖ್ಯಮಂತ್ರಿ, ಸಾಹಿತಿ, ಎಂ. ವೀರಪ್ಪ ಮೊಯಿಲಿ.

ಚಿನಕುರಳಿ – ೧೮

- ಮರ್ಕಟ

ಅಮೇರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಇಂಗ್ಲೆಂಡಿನ ಪಬ್ ಒಂದರಲ್ಲಿ ಊಟ ಮಾಡಿ ಬಿಲ್ ಪಾವತಿ ಮಾಡುವುದನ್ನು ಮರೆತಿದ್ದಾರೆ.