Press "Enter" to skip to content

Posts published in August 2006

ಬದುಕಿನ ಸೌಂದರ್ಯವರ್ಧಕ : ಬಿಳಿಜಾಜಿ ವೆಂಕಟೇಶ್

- ಬೇಳೂರು ಸುದರ್ಶನ

ಕೆಲಸಕ್ಕೆ ಸೇರುವಾಗ ಬರೀ ಸೆಕೆಂಡ್ ಪಿ ಯು ಸಿ. ; ಆಮೇಲೆ ಏಕಕಾಲಿಕವಾಗಿ ಬಿ ಎಸ್ಸಿ ಮತ್ತು ಮೆಕ್ಯಾನಿಕಲ್ ಡಿಪ್ಲೋಮಾ ಸಂಜೆ ತರಗತಿಗಳಿಗೆ ಹಾಜರು. ಜೊತೆಗೆ ಮದುವೆ ಮಕ್ಕಳು.

ಯುನಿಕೋಡ್ -ಮಿಥ್ಯೆ ಮತ್ತು ವಾಸ್ತವ

- ಡಾ. ಯು. ಬಿ. ಪವನಜ

“ಕನ್ನಡ ಯುನಿಕೋಡ್ ಸರಿಯಿಲ್ಲ. ಆದುದರಿಂದ ಸದ್ಯಕ್ಕೆ ಅದನ್ನು ಕನ್ನಡ ಭಾಷೆಗೆ ಬಳಸಲು ಸಾಧ್ಯವಿಲ್ಲ” ಎಂಬುದಾಗಿ ಕೆಲವು ಮಂದಿ ಹೇಳುತ್ತ ತಿರುಗಾಡುತ್ತಿದ್ದಾರೆ. ಇಂತಹ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸುವುದು ಈ ಲೇಖನದ ಉದ್ದೇಶ.

ಅಕ್ಷರದಿಂದ ಮಾಹಿತಿಯೆಡೆಗೆ ಲೇಖನಕ್ಕೆ ಪ್ರತಿಕ್ರಿಯೆ

ಮಾನ್ಯರೆ ನಮಸ್ಕಾರ ,

 

ನಿನ್ನೆ ಮತ್ತು ಇಂದಿನ ‘ ಉಷಾಕಿರಣ’ ದಿನಪತ್ರಿಕೆಯಲ್ಲಿ ಪ್ರಕಟವಾದ ಡಾ. ಯು.ಬಿ. ಪವನಜ ರವರ ಲೇಖನ ‘ಅಕ್ಷರದಿಂದ ಮಾಹಿತಿಯೆಡೆಗೆ’ ತುಂಬಾ ಚೆನ್ನಾಗಿದೆ. ಜನಸಾಮಾನ್ಯರಿಗೂ ಅರ್ಥವಾಗುವ ಶೈಲಿ ಮತ್ತು ಭಾಷೆಯಲ್ಲಿ ಕನ್ನಡದ ಕಂಪ್ಯೂಟರ್‌ ತಂತ್ರಜ್ಞಾನದ ಇತ್ತೀಚಿನ ಆವಿಷ್ಕಾರಗಳನ್ನು ಅವರು ವಿವರಿಸಿದ್ದಾರೆ. ಹಳೆಯ ತಂತ್ರಜ್ಞಾನ (ನುಡಿ ಮತ್ತು ಬರಹ) ಮತ್ತು ಹೊಸ ತಂತ್ರಜ್ಞಾನದ (ಕನ್ನಡದ ಯುನಿಕೋಡ್‌) ನಡುವಣ ಕಂದಕವನ್ನು ತಿಳಿದುಕೊಳ್ಳಲು ಈ ಲೇಖನವು ಅತ್ಯಂತ ಉಪಯುಕ್ತವಾಗಿದೆ. ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಬಳಸಲು ಏನೆಲ್ಲಾ ಸೌಲಭ್ಯಗಳು ಇವೆ. ಅವುಗಳನ್ನು ಹೇಗೆಲ್ಲಾ ಬಳಸಬಹುದು ಮತ್ತು ಪ್ರಸ್ತುತ ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಬಳಸಲು ಯಾವ ಯಾವ ಹೆಚ್ಚಿನ ಸೌಲಭ್ಯಗಳು ಅಗತ್ಯವಿದೆ ಎಂಬುದನ್ನು ವಿಷದವಾಗಿ ಅವರು ತಮ್ಮ ಮುಂದಿನ ಲೇಖನಗಳಲ್ಲಿ ವಿವರಿಸಬೇಕೆಂದು ಅವರಲ್ಲಿ ವಿನಂತಿಸುತ್ತೇನೆ.

 

ಅಕ್ಷರಗಳಿಂದ ಮಾಹಿತಿಯೆಡೆಗೆ

- ಡಾ. ಯು.ಬಿ. ಪವನಜ

“ಗಣಕದಲ್ಲಿ ಕನ್ನಡ ಸಾಧ್ಯವಿದೆ ಎಂದು ನಿಮಗೆ ಗೊತ್ತಿದೆಯೆ?”
“ಯಾಕೆ ಗೊತ್ತಿಲ್ಲ? ನಾನು ಕಂಪ್ಯೂಟರ್‌ನಲ್ಲಿ ಈಗಾಗಲೇ ಕನ್ನಡ ಬಳಸುತ್ತಿದ್ದೇನೆ. ನನ್ನನ್ನು ಏನೂ ಅರಿಯದವನು ಅಂದುಕೊಂಡಿದ್ದೀರಾ”