Archive for May, 2006

sabimana

Tuesday, May 23rd, 2006

regaring language,land,river,religion your felling is most important speckout better later than never……….

ಕನ್ನಡದಲ್ಲೇ ಪ್ರೋಗ್ರಾಮ್ಮಿಂಗ್ ಮಾಡಿ!

Monday, May 15th, 2006

ನಾನು ಹಲವು ವರ್ಷಗಳ ಹಿಂದೆಯೇ ಲೋಗೋ ಎಂಬ ಗಣಕ ಕ್ರಮವಿಧಿ ರಚನೆಯ ತಂತ್ರಾಶವನ್ನು ಕನ್ನಡೀಕರಿಸಿದ್ದೆ. ಲೋಗೋ ಎಂಬುದು ತುಂಬ ಜತ್ಪ್ರಸಿದ್ಧವಾದ ತಂತ್ರಾಂಶ. 8ರಿಂದ 14 ವರ್ಷ ಪ್ರಾಯದ ಮಕ್ಕಳು ಪ್ರೋಗ್ರಾಮ್ಮಿಂಗ್ ಕಲಿಯಲು ಇದನ್ನು ಬಳಸುತ್ತಾರೆ. ಇದರ ಪ್ರಾತ್ಯಕ್ಷಿಕೆಯನ್ನು ನೋಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರು ಈ ತಂತ್ರಾಂಶವನ್ನು ಕರ್ನಾಟಕ ಸರಕಾರದ ಕನ್ನಡೆ ಕಂಪ್ಯೂಟರ್ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡಿದ್ದರು. ಕನ್ನಡ ಗಣಕ ಲೋಕದಲ್ಲಿ ಹಲವು ಬಿರುಗಾಳಿಗಳು ಬೀಸಿ, ಏನೇನೆಲ್ಲಾ ಆಗಿ ಹೋದವು. ಈ ತಂತ್ರಾಶವನ್ನು ಇದುತನಕ ಸರಕಾರ ಸ್ವೀಕರಿಸಿ ಶಾಲೆಗಳಿಗೆ ನೀಡಲಿಲ್ಲ. ಈಗ ನಾನು ಅದನ್ನು ಅಂತರಜಾಲದ ಮೂಲಕ ನೀಡಲು ತೀರ್ಮಾನಿಸಿದ್ದೇನೆ. ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ, ಬಳಸಿ, ನನಗೆ ನಿಮ್ಮ ಸಲಹೆ ನೀಡಿರಿ. ಹಾಗೆಯೇ ದೇಣಿಗೆಯನ್ನೂ ನೀಡಬಹುದು :-). ಹೆಚ್ಚಿನ ಮಾಹಿತಿಗಳು ಇಲ್ಲಿ ಲಭ್ಯವಿವೆ.

ಆರ್‍. ಜಿ. ಹಳ್ಳಿ ನಾಗರಾಜ್ ಅವರಿಗೆ ಗೌತಮ ಪ್ರಶಸ್ತಿ

Saturday, May 13th, 2006

ಬೆಂಗಳೂರು, ಮೇ ೧೩, ೨೦೦೬: ಬೆಂಗಳೂರಿನ ರಾಜಾಜಿನಗರದ ರಂಗೋತ್ರಿ ಮಕ್ಕಳ ರಂಗಶಾಲೆಯವರು ವಿಶ್ವ ಕನ್ನಡದ ಸಹಾಯಕ ಸಂಪಾದಕರಾದ ಆರ್‍. ಜಿ. ಹಳ್ಳಿ ನಾಗರಾಜ್ ಅವರಿಗೆ ೨೦೦೬ನೆ ಇಸವಿಯ ಗೌತಮ ಪ್ರಶಸ್ತಿ ನೀಡಿ ಗೌರವಿಸಿದರು. ಬೆಂಗಳೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಾರಿಗೆ ಸಚಿವರಾದ ಶ್ರೀ ಚೆಲುವರಾಯ ಸ್ವಾಮಿಯವರು ಉಪಸ್ಥಿತರಿದ್ದರು. ರಂಗೋತ್ರಿ ಮಕ್ಕಳ ರಂಗಶಾಲೆಯವರು ಬುದ್ಧ ಪೂರ್ಣಿಮೆಯ ಅಂಗವಾಗಿ ಸಮಾಜದ ಗಣ್ಯರಿಗೆ ಗೌತಮ ಪ್ರಶಸ್ತಿ ಪ್ರದಾನ ಮತ್ತು ಬೆಳದಿಂಗಳ ಕಾವ್ಯ ಸಂಗೀತೋತ್ಸವ ಆಯೋಜಿಸಿದ್ದರು. ೨೦೦೬ನೆ ಸಾಲಿನ ಗೌತಮ ಪ್ರಶಸ್ತಿಗೆ ಪಾತ್ರರಾದವರು – ಡಾ| ಸುಭಾಷ್ ಭರಣಿ, ನಾಗತಿಹಳ್ಳಿ ಚಂದ್ರಶೇಖರ್‍, ಆರ್‍. ಜಿ. ಹಳ್ಳಿ ನಾಗರಾಜ್, ಎಂ. ಎಸ್. ಮೂರ್ತಿ, ಡಾ| ಎಚ್. ಎಂ. ವೆಂಕಟಪ್ಪ, ಬಿ. ಟಿ. ರಾಮಚಂದ್ರ, ಸೂತ್ರಂ ನಾಗರಾಜ ಶಾಸ್ತ್ರಿ, ಶರಣಪ್ಪ ಗೋನಾಳ, ಶಿವಶಂಕರ್‍, ಎಂ. ಆರ್‍. ಮಾಳಿ, ಡಾ| ಕೃಷ್ಣರಾಜ ಭಟ್, ಮಂಜುನಾಥ ಆಚಾರ್ಯ, ಜಿ. ರಾಮಕೃಷ್ಣ ಮತ್ತು ಶ್ರೀದೇವಿ ಮೇಳಗಟ್ಟಿ.

ಬೆಳ್ಳಿ ಪರದೆಯ "ತುತ್ತೂರಿ"

Friday, May 12th, 2006

ಸದಭಿರುಚಿಯ ಚಿತ್ರಗಳು ಮಾಲಿಕೆ – ೭

ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸುವ ಬೆರಳೆಣಿಕೆಯ ನಿರ್ದೇಶಕರಲ್ಲಿ ಪಿ. ಶೇಷಾದ್ರಿ ಒಬ್ಬರು. ಮುನ್ನುಡಿ, ಅತಿಥಿ, ಬೇರು, ಇತ್ಯಾದಿ ಉತ್ತಮ ಸದಭಿರುಚಿಯ ಚಿತ್ರಗಳನ್ನು ನೀಡಿರುವ ಶೇಷಾದ್ರಿಯವರಿಂದ ನಿರ್ದೇಶಿಸಲ್ಪಟ್ಟ ಮತ್ತೊಂದು ಉತ್ತಮ ಚಿತ್ರ “ತುತ್ತೂರಿ”. ಇದು ಮಕ್ಕಳ ಚಿತ್ರ. ಮಕ್ಕಳು ಮಾತ್ರವಲ್ಲ, ಮಕ್ಕಳ ಮನಸ್ಸಿನ ದೊಡ್ಡವರು, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲಾರದ ದೊಡ್ಡವರು – ಹೀಗೆ ಎಲ್ಲರೂ ನೋಡಬಹುದಾದ ಮತ್ತು ನೋಡಲೇ ಬೇಕಾದ ಚಿತ್ರ -“ತುತ್ತೂರಿ”.

ನಗರಗಳಲ್ಲಿ ಮಕ್ಕಳಿಗೆ ಆಟದ ಮೈದಾನಗಳು ಇಲ್ಲವೇ ಇಲ್ಲ ಎನ್ನಬಹುದು. ಇರುವ ಕೆಲವೇ ಮೈದಾನಗಳನ್ನು ಪಾರ್ಕುಗಳಾಗಿ ಬದಲಾಯಿಸುತ್ತಿದ್ದಾರೆ. ಹಿಗಾದರೆ ಮಕ್ಕಳು ಎಲ್ಲಿ ಆಡಬೇಕು? ಮನೆಯೊಳಗೇ ಕುಳಿತುಕೊಂಡು ಟಿವಿ ನೋಡುವುದು ಮತ್ತು ಕಂಪ್ಯೂಟರ್‍ ಗೇಮ್ ಆಡುತ್ತ ಕುಳಿತುಕೊಳ್ಳಬೇಕೇ? ಇಂತಹ ಒಂದು ಸಮಕಾಲೀನ ಸಮಸ್ಯೆಯನ್ನು ಕೈಗೆತ್ತಿಕೊಂಡು ಶೇಷಾದ್ರಿಯವರು ಚಿತ್ರ ನಿರ್ಮಿಸಿದ್ದಾರೆ. ಚಿತ್ರದ ಕಥೆಯ ಸಾರಾಂಶವನ್ನು ಅದರ ಅಂತರಜಾಲ ತಾಣದಲ್ಲಿ ಓದಬಹುದು (ಅದು ಇಂಗ್ಲೀಶಿನಲ್ಲಿದೆ. ಕನ್ನಡ ಚಿತ್ರಕ್ಕೆ ಕನ್ನಡದಲ್ಲಿ ತಾಣ ನಿರ್ಮಿಸಬಹುದಿತ್ತು). ಆದುದರಿಂದ ಕಥೆಯನ್ನು ಇಲ್ಲಿ ನೀಡುತ್ತಿಲ್ಲ.

ಚಿತ್ರದ ನಿರ್ಮಾಪಕಿ ಶ್ರೀಮತಿ ಜಯಮಾಲ. ಛಾಯಾಗ್ರಹಣ ರಾಮಚಂದ್ರ. ಸಂಗೀತ ಹಂಸಲೇಖ. ಕಥೆ ಜೆ ಎಂ ಪ್ರಹ್ಲಾದ. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಚೊಕ್ಕವಾಗಿ ದುಡಿದಿದ್ದಾರೆ. ಚಿತ್ರಕ್ಕೆ ಈಗಾಗಲೇ ಪ್ರಶಸ್ತಿ, ಹೊಗಳಿಕೆಗಳು ಬಂದಿವೆ. ಕಳೆದ ಮೇ ತಿಂಗಳಿನಲ್ಲೇ ಚಿತ್ರ ತಯಾರಾಗಿದ್ದರೂ ಶಾಲೆಗಳಿಗೆ ರಜೆ ಮತ್ತು ಅದೇ ಸಮಯಕ್ಕೆ ಸರಿಯಾಗಿ ಚಿತ್ರ ಮಂದಿರ ಹೊಂದಿಸಿಕೊಳ್ಳುವುದಕ್ಕಾಗಿ ಇದರ ಬಿಡುಗಡೆ ಒಂದು ವರ್ಷ ತಡವಾಗಿ ಆಗಿದೆ.

ಚಿತ್ರದ ಸಂಗೀತ ಮಕ್ಕಳಿಗೆ ಖುಶಿ ಕೊಡುವಂತಿದೆ. ಎರಡು ಹಾಡುಗಳು ಮತ್ತೆ ಕೇಳುವಂತಿವೆ. ರಾಮಚಂದ್ರರ ಛಾಯಾಗ್ರಹಣ ಚೆನ್ನಾಗಿದೆ. ಆದರೆ ತಾಯಿ ಸಾಹೇಬದಲ್ಲಿ ತೋರಿದ ಪ್ರತಿಭೆ ಕಾಣಿಸಲಿಲ್ಲ.

ವಿರಾಮದ ತನಕ ಚಿತ್ರದ ಓಟ ಸೊಗಸಾಗಿದೆ. ನಂತರ ನಿರ್ದೇಶನದಲ್ಲಿ ಸ್ವಲ್ಪ ಹಿಡಿತ ಕಡಿಮೆ ಆದಂತೆ ಕಂಡು ಬರುತ್ತದೆ. ಶೇಷಾದ್ರಿಯವರು ಪ್ರಹ್ಲಾದರ ಕಥೆಯನ್ನು ನೇರವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಯಾವುದೇ ತಂತ್ರದ ಬಳಕೆ ಮಾಡಿಲ್ಲ. ನಿರೂಪಣಾ ವಿಧಾನದ ಬಳಕೆಯಿಂದ ಮಕ್ಕಳಿಗೆ ಚಿತ್ರ ನೋಡಲು ಯಾವುದೇ ತೊಡಕು ಉಂಟಾಗದು. ಮಕ್ಕಳಿಗೆ ಖಂಡಿತವಾಗಿಯೂ ಮುದ ನೀಡುವ ಚಿತ್ರ.

ತುತ್ತೂರಿ ಚಿತ್ರದ ತಂಡ

"ತುತ್ತೂರಿ" ಚಿತ್ರದ ಧ್ವನಿಸುರುಳಿ ಬಿಡುಗಡೆ

Thursday, May 11th, 2006

ಬೆಂಗಳೂರು, ಮೇ ೧೦, ೨೦೦೬: ಸೌಂದರ್ಯ ಆರ್ಟ್ಸ್ ಲಾಂಛನದಲ್ಲಿ ಶ್ರೀಮತಿ ಜಯಮಾಲ ರಾಮಚಂದ್ರ ನಿರ್ಮಿಸಿದ ಪಿ. ಶೇಷಾದ್ರಿಯವರ ನಿರ್ದೇಶನದ ಕನ್ನಡ ಚಲಚಚಿತ್ರ “ತುತ್ತೂರಿ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಿನ್ನೆ ಜರುಗಿತು. ತುತ್ತೂರಿ ಚಿತ್ರದ ವೈಶಿಷ್ಟ್ಯವೆಂದರೆ ಅದು ಮಕ್ಕಳ ಚಿತ್ರ. ಅದರಲ್ಲಿ ಮಕ್ಕಳೇ ಪ್ರಮುಖ ಪಾತ್ರಧಾರಿಗಳು. ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಮತ್ತು ರಾಮಚಂದ್ರ ಅವರ ಛಾಯಾಗ್ರಹಣವಿದೆ. ಧ್ವನಿಸುರುಳಿ ಬಿಡುಗಡೆಯ ಕಾರ್ಯಕ್ರಮದಲ್ಲಿ ನಿರ್ದೇಶಕ ಶೇಷಾದ್ರಿ, ರಾಮಚಂದ್ರ, ಜಯಮಾಲ ಎಲ್ಲ ಭಾಗವಹಿಸಿದ್ದರು. ಧ್ವನಿಸುರುಳಿಯನ್ನು ಆಕಾಶ್ ಆಡಿಯೋದವರು ತಯಾರಿಸಿದ್ದಾರೆ. ಧ್ವನಿಸುರುಳಿಯ ಬಿಡುಗಡೆ ಕಾರ್ಯಕ್ರಮ ವಿನೂತನ ರೀತಿಯಲ್ಲಿ ನೆರವೇರಿತು. ಅನಾಥಾಶ್ರಮದಿಂದ ಬಂದಿದ್ದ ಸುಮಾರು ಮುವತ್ತು ಮಕ್ಕಳು ಧ್ವನಿಸುರುಳಿಯನ್ನು ಬಿಡುಗಡೆ ಮಾಡಿ ವೇದಿಕೆಯಲ್ಲಿದ್ದವರಿಗೆ ಹಂಚಿದರು. ಜಯಮಾಲ, ಶೇಷಾದ್ರಿ, ಆಕಾಶ್ ಆಡಿಯೋ ಪರವಾಗಿ ವೆಂಕಟೇಶ್ ಮತ್ತು ದತ್ತಣ್ಣ ಮಾತನಾಡಿದರು. ಎ. ಎಸ್. ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೫

Saturday, May 6th, 2006

ಒಂದು ಸೊನ್ನೆ – ೯ (೧೦-೧೦-೨೦೦೩)

ನುಡಿದಂತೆ ನಡೆಯದವರು

ಒಂದು ಒಳ್ಳೆಯ ಉದ್ದೇಶ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಉತ್ತಮ ಕೆಲಸ ಮಾಡಲು ಆರಂಭಿಸಿ ಅದನ್ನು ಎಲ್ಲರೂ ಹೊಗಳಲು ಪ್ರಾರಂಭಿಸಿ ಈ ಹೊಗಳಿಕೆಯ ಮತ್ತು ತಲೆಗೇರಿ, ತಾನೆ ಸರ್ವಸ್ವ, ತಾನು ಮಾಡಿದ್ದೆಲ್ಲ ಸರಿ ಎಂಬ ಭಾವನೆಯಿಂದ, ಆರಂಭದ ಉದ್ದೇಶವನ್ನು ಮರೆತು ಇನ್ನೇನೋ ಮಾಡುವವವರನ್ನು ನಾವು ಸಮಾಜದಲ್ಲಿ ಆಗಾಗ ಅಲ್ಲಲ್ಲಿ ಕಾಣುತ್ತೇವೆ. ಈ ಸಾಲಿಗೆ ಹೊಸತಾಗಿ ಸೇರ್ಪಡೆಯಾಗಿರುವುದು ಕನ್ನಡ ಗಣಕ ಪರಿಷತ್ತು (ಕಗಪ).

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೪

Saturday, May 6th, 2006

ಒಂದು ಸೊನ್ನೆ – ೮ (೨೬-೦೯-೨೦೦೩)

ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿ

ಅಂತರಜಾಲಕ್ಕೆ ಮಾಹಿತಿ ಹೆದ್ದಾರಿ (information super highway) ಎಂಬ ಹೆಸರೂ ಇದೆ. ಈ ಹೆದ್ದಾರಿಯಲ್ಲಿ ಕನ್ನಡ ಭಾಷೆಯ ಗಾಡಿಗಳ ಚಲನೆಯ ಆರಂಭದ ಸಿಂಹಾವಲೋಕನ ಮತ್ತು ಸದ್ಯದ ಸ್ಥಿತಿಗತಿಗಳ ಸ್ಥೂಲ ಚಿತ್ರಣ.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೩

Saturday, May 6th, 2006

ಒಂದು ಸೊನ್ನೆ – ೭ (೧೨-೦೯-೨೦೦೩)

ಯುನಿಕೋಡ್ ಎಂಬ ವಿಶ್ವಸಂಕೇತ

ಕನ್ನಡದಲ್ಲಿ ಕಡತವೊಂದನ್ನು ತಯಾರಿಸಿ ಜಪಾನಿಗೆ ಕಳುಹಿಸಿದರೆ ಅವರಿಗೆ ಇದು ಕನ್ನಡ ಭಾಷೆಯಲ್ಲಿದೆ ಎಂದು ತಿಳಿಯುವುದು ಹೇಗೆ? ವಿಶ್ವಕ್ಕೆಲ್ಲ ಒಂದೇ ಸಂಕೇತ ವಿಧಾನ ಇದ್ದರೆ ಒಳ್ಳೆಯದಲ್ಲವೇ? ಇದುವೇ ಯುನಿಕೋಡ್.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ – ೨

Saturday, May 6th, 2006

ಒಂದು ಸೊನ್ನೆ – ೬ (೨೯-೦೮-೨೦೦೩)

ಶಿಷ್ಟತೆಯ ಚೌಕಟ್ಟಿನಲ್ಲಿ ನುಡಿ

ಒಂದು ಗಣಕದಿಂದ ಇನ್ನೊಂದು ಗಣಕಕ್ಕೆ ಮಾಹಿತಿಯ ಸರಿಯಾದ ಸಂವಹನೆ ಆಗಬೇಕಾದರೆ ಈ ಗಣಕಗಳು ಮಾಹಿತಿ ಸಂವಹನೆಯಲ್ಲಿ ಶಿಷ್ಟತೆಯನ್ನು ಅಳವಡಿಸಿಕೊಳ್ಳಬೇಕು. ಇದು ಕನ್ನಡ ಭಾಷೆಯ ಮಾಹಿತಿ ಸಂವಹನೆಗೂ ಅನ್ವಯಿಸುತ್ತದೆ. ಗಣಕಗಳಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ಬಗ್ಗೆ ವಿವರವಾದ ಲೇಖನಮಾಲೆಯ ಎರಡನೆಯ ಕಂತು.