Press "Enter" to skip to content

Posts published in November 2005

eಳೆ – ೧೪ (ನವಂಬರ ೩, ೨೦೦೨)

eಳೆ - ೧೪ (ನವಂಬರ ೩, ೨೦೦೨)

ಅಂತರಜಾಲಾಡಿ

ಮತ್ತೊಮ್ಮೆ ಬೆಳಕಿನ ಹಬ್ಬ ದೀಪಾವಳಿ ಬಂದಿದೆ. ನಮ್ಮ ದೇಶದ ಪ್ರಮುಖ ಹಬ್ಬ ಎಂದು ದೀಪಾವಳಿಯನ್ನು ಕರೆದರೆ ತಪ್ಪೇನಿಲ್ಲ. ದೀಪಾವಳಿ ಹಬ್ಬದ ಬಗ್ಗೆ ವಿವರ, ಶುಭಾಶಯ ಪತ್ರ, ಉಡುಗೊರೆ, ಇತ್ಯಾದಿಗಳು ದೊರೆಯುವ ತಾಣದ ವಿಳಾಸ: www.diwalimela.com. ಇಲ್ಲಿಗೆ ಭೇಟಿ ನೀಡಿ ದಿವಾಳಿಯಾದರೆ ನಾನು ಹೊಣೆಯಲ್ಲ!

Inkscape 0.43 released

Opensource scalable vector graphics package [http://www.inkscape.org|Inkscape]'s new version has been released. It is still at version 0.43. It is the opensource alternative to popular CorelDraw and Adobe Illustrator. What I liked in Inkscpae is the support for Indian languages via opentype fonts. This feature is mssing both in CorelDraw and Illustrator. At last we can use Unicode and Indian languages in a vector graphics package.

ನಾಗೇಶ ಹೆಗಡೆಯವರಿಗೆ ಅಭಿನಂದನೆಗಳು

ಈ ದಿನ ಬೆಳಗ್ಗೆ ಪ್ರಜಾವಾಣಿ ಓದುತ್ತಿದ್ದಂತೆ ಒಂದು ಒಳ್ಳೆಯ ಸುದ್ದಿ ಕಣ್ಣಿಗೆ ಬಿತ್ತು. ನಮ್ಮ ನೆಚ್ಚಿನ ಹಾಗೂ ಜನಪ್ರಿಯ ಕನ್ನಡ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರಿಗೆ ಕರ್ನಾಟಕ ಸರಕಾರವು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು.

ಏಡಿಯಾ ಸೊಲ್ಯೂಶನ್ಸ್ ಕಂಪೆನಿಯಲ್ಲಿ ರಾಜ್ಯೋತ್ಸವ

ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಏಡಿಯ ಸೊಲೂಶನ್ಸ್ ಎಂಬ ಹೆಸರಿನ ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ನವಂಬರ್ ೨೨, ೨೦೦೫ ರಂದು ರಾಜ್ಯೋತ್ಸವವನ್ನು ಆಚರಿಸಲಾಯಿತು. ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಂದ ಕನ್ನಡಕ್ಕೆ ಕೊಡುಗೆ ಏನಿಲ್ಲ ಎಂಬ ಕೂಗು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಈ ರೀತಿಯ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಕೆಲಸ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಗ್ಗದ ಭಟ್ಟರೆಂದೇ ಖ್ಯಾತಿ ಪಡೆದ ಡಾ. ಲಕ್ಷ್ಮೀನಾರಾಯಣ ಭಟ್ಟರು, ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕಾರದ ಶ್ರೀ ದು. ಗು. ಲಕ್ಷ್ಮಣ ಮತ್ತು ಕನ್ನಡದ ಪ್ರಪ್ರಥಮ ಅಂತರಜಾಲ ಪತ್ರಿಕೆ ವಿಶ್ವ ಕನ್ನಡದ ಸಂಪಾದಕರಾದ ಡಾ. ಯು. ಬಿ. ಪವನಜರು ಭಾಗವಹಿಸಿದ್ದರು.

ವಿಶ್ವ ಕನ್ನಡ ಸಂಪಾದಕರಿಗೆ ಸನ್ಮಾನ

ಕನ್ನಡದ ಪ್ರಪ್ರಥಮ ಕಾಗದರಹಿತ ಪತ್ರಿಕೆ "ವಿಶ್ವ ಕನ್ನಡ"ದ ಸಂಪಾದಕರಾದ ಡಾ. ಯು. ಬಿ. ಪವನಜ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ನವಂಬರ್ ೨೧, ೨೦೦೫ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಾಜಿನಗರ ಹಬ್ಬದಲ್ಲಿ ಶಾಸಕ ನೆ. ಲ. ನರೇಂದ್ರಬಾಬು ಅವರ ನೇತೃತ್ವದಲ್ಲಿ ಪರಮಪೂಜ್ಯ ಶ್ರೀ ನಿಡುಮಾಮಿಡಿ ಸ್ವಾಮೀಜಿಯವರು ಪವನಜರಿಗೆ ಸನ್ಮಾನಿಸಿದರು.

ರಾಜಾಜಿನಗರ ಹಬ್ಬ – ೨೦೦೫

ರಾಜಾಜಿನಗರದಲ್ಲಿ ಕಳೆದ ಬಾರಿ ಜನಮನ್ನಣೆಗೆ ಪಾತ್ರವಾದ ‘ರಾಜಾಜಿನಗರ ಹಬ್ಬ’ ಬರಿ ಕನ್ನಡ ರಾಜೋತ್ಸವವೆಂಬ ಒಣ ಆಚರಣೆಗೆ ಮಾತ್ರ ಮೀಸಲಾಗಿರದೆ ಸಾಂಸ್ಕೃತಿಕವಾಗಿ, ಗ್ರಾಮೀಣ ಸೊಗಡನ್ನು ಜನಮನಗಳಿಗೆ ತಲುಪಿಸುವ ಸಲುವಾಗಿ ಈ ವಾರದಲ್ಲಿ ಅಂದರೆ ದಿನಾಂಕ ೧೯-೧೧-೨೦೦೫ ರಿಂದ ೨೫-೧೧-೨೦೦೫ರ ವರೆಗೆ ಜಾನಪದ ಲೋಕದ ದಿಗ್ಗಜ ಶ್ರೀ ಎಚ್ .ಎಲ್ . ನಾಗೇಗೌಡ ರ ಸ್ಮರಣಾರ್ಥ ‘ಜಾನಪದ ಜಾತ್ರೆ’ಯನ್ನು ಶಾಸಕರಾದ ಅದಕ್ಕಿಂತ ಹೆಚ್ಚಾಗಿ ರಾಜಾಜಿನಗರದ ಹೆಮ್ಮೆಯ ಮಗನಾದ ನೆ.ಲ. ನರೇಂದ್ರಬಾಬು ರವರ ನೇತೃತ್ವದಲ್ಲಿ ಹಮ್ಮಿಕೋಳ್ಳಲಾಗಿದೆ.

ದೀಪ ಬೆಳಗಿ ಉದ್ಘಾಟಿಸುವುದು

ಸಾಮಾನ್ಯವಾಗಿ ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮದ ಉದ್ಘಾಟನೆ ದೀಪ ಬೆಳಗುವ ಮೂಲಕ ಆಗುತ್ತದೆ. ಪೂಜೆ ಮಾಡಲು ನಿರಾಕರಿಸುವ ವಿಚಾರವಾದಗಳೂ ದೀಪ ಬೆಳಗುವುದನ್ನು ವಿರೋಧಿಸುವುದಿಲ್ಲ. ಅವರ ಪ್ರಕಾರ ದೀಪ ಎಂದರೆ ಬೆಳಕು ಎಂದರೆ ಜ್ಞಾನದ ಸಂಕೇತ. ಖಂಡಿತ ಹೌದು. ಅದನ್ನು ಎಲ್ಲರಿಗಿಂತ ಮೊದಲು ಹೇಳಿದ್ದು ಉಪನಿಷತ್ತಿನಲ್ಲಿ ."ತಮಸೋಮಾ ಜ್ಯೋತಿರ್ಗಮಯ" ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ. ಅರೆಬೆಂದ ವಿಚಾರವಾದಿಗಳ ಮಾತು ಹಾಗಿರಲಿ. ಈಗ ಕಾರ್ಯಕ್ರಮಗಳಲ್ಲಿ ದೀಪ ಬೆಳಗುವ ಬಗ್ಗೆ ಬರೋಣ. ಮೊದಲನೆಯದಾಗಿ ದೀಪ ಬೆಳಗಲು ಅವರು ಬಳಸುವುದು ಕ್ಯಾಂಡಲನ್ನು. ಅದೇಕೋ ನನಗೆ ಸರಿ ಕಾಣುವುದಿಲ್ಲ. ಅದರ ಬದಲು ಒಂದು ಚಿಕ್ಕ ಹಣತೆ ತಂದರೆ ಚೆನ್ನಾಗಿರುತ್ತದಲ್ಲವೇ? ದೀಪ ಬೆಳಗುವುದು ಭಾರತೀಯ ಪದ್ಧತಿಯಾಗಿರುವಾಗ ಅದನ್ನೂ ಭಾರತೀಯವಾಗಿಯೇ ಮಾಡಿದರೆ ಚೆನ್ನಾಗಿರುತ್ತದಲ್ಲವೇ?

ಅನನ್ಯ ದಿನದರ್ಶಿಕೆ ಲೋಕಾರ್ಪಣೆ

ಬೆಂಗಳೂರು, ನವಂಬರ್ ೨೦, ೨೦೦೫: [http://www.ananyaculture.org/|ಅನನ್ಯ ಸಾಂಸ್ಕೃತಿಕ] ಸಂಸ್ಥೆಯವರು ಹೊರತಂದಿರುವ [http://vishvakannada.com/node/59|ಹನ್ನೆರಡನೆಯ ದಿನದರ್ಶಿಕೆ] ಅನನ್ಯ ಕ್ಯಾಲೆಂಡರ್ ೨೦೦೬ನ್ನು ಎಸ್. ರಾಜಾರಾಂ ಅವರು ಲೋಕಾರ್ಪಣೆ ಮಾಡಿದರು. ಅವರು ಮಾತನಾಡುತ್ತಾ 'ಭಗವಾನ್ ಶ್ರೀಕೃಷ್ಣನು ಅಕ್ಷರಾಣಾಂ ಅಕರೋಸ್ಮಿ ಎಂದಿದ್ದಾನೆ. ಅನನ್ಯದಲ್ಲಿ "ಅ" ಅಕ್ಷರವಿದೆ, ಅಥವಾ "ಅ" ಅಕ್ಷರದಿಂದ ಅದು ಪ್ರಾರಂಭವಾಗುತ್ತದೆ. ಆದುದರಿಂದ ಅದು ಭಗವಂತನಿಗೆ ಪ್ರಿಯ. ಹಾಗೆಯೆ ನಮಗೂ ನಿಮಗೂ ಪ್ರಿಯ' ಎಂದರು. ಡಾ. ಟಿ. ಎಸ್. ಸತ್ಯವತಿಯವರ ನಿರ್ದೇಶನದಲ್ಲಿ ಕೊಳಲುವಾದನದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ರಾಘವೇಂದ್ರ ಅವರು ಎಲ್ಲರನ್ನು ಸ್ವಾಗತಿಸಿದರು. 'ವಿಜ್ಞಾನದ ಹಲವು ವಿಭಾಗಗಳು ಒಂದಕ್ಕೊಂದು ಜೊತೆ ಸೇರುತ್ತಿವೆ. ಜೊತೆ ಸೇರಿ ಕೆಲಸ ಮಾಡುತ್ತಿವೆ. ಇದರಿಂದ ವಿಜ್ಞಾನ ಮುಂದುವರಿಯುತ್ತಿದೆ. ಆದರೆ ಕಲೆಯಲ್ಲಿರುವ ಹಲವು ಪ್ರಕಾರಗಳು ಯಾವಾಗ ಜೊತೆ ಸೇರಿ ಮುಂದುವರಿಯುವುದು?' ಎಂಬ ಪ್ರಶ್ನೆಯನ್ನು ಸಭಿಕರ ಮುಂದಿಟ್ಟರು. ಈ ಸಲದ ಕ್ಯಾಲೆಂಡರ್‌ಗೆ ಬಳಸಿದ ಛಾಯಾಚಿತ್ರಗಳನ್ನು ತೆಗೆದ ರಾಘವೇಂದ್ರ ರಾವ್ ಅವರು ತಮ್ಮ ಅನುಭವಗಳನ್ನು ಹೇಳಿದರು. ಬಿ. ಭಾನುಮತಿಯವರ ನಿರ್ದೇಶನದ ಭರತಾಂಜಲಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.