ಕೋಡ್ ಕೋಡ್ ಎಲ್ನೋಡಿ ಕೋಡ್

ಕಾರ್ ಕಾರ್ ಹಾಡಿನ ಧಾಟಿಯಲ್ಲಿ…

ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್
ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್

ಎಡಿಟರ್ ಓಪನ್ ಮಾಡಿಕೊಂಡ್
ಟೆಸ್ಟಿಂಗ್ ಅಂತ ಹೇಳಿಕೊಂಡ್
ಪ್ರೋಡಕ್ಟ್ ಅಂತ ರೆಡಿ ಮಾಡ್ತಾರೆ

ನಮ್ಮೂರಲ್ಲಿ ಹಂಗೇನಿಲ್ಲ
ಸರ್ವಿಸ್ ಕಂಪೆನಿ ಓಪನ್ ಮಾಡಿ
ಫ್ರೆಶರ್ಸ್ ಎಲ್ಲ ರಿಕ್ರೂಟ್ ಮಾಡ್ತಾರೆ

ಇರೋ ಕೆಲಸ ಔಟ್‌ಸೋರ್ಸ್ ಮಾಡಿ
ಮೈಲ್ ಚಾಟ್ ಮಾಡಿಕೊಂಡು
ಆನ್‌ಲೈನ್ ಅಲ್ಲೆ ಪ್ರೀತಿ ಮಾಡ್ತಾರೆ

ನಮ್ಮೂರಲ್ಲಿ ಹಂಗೇನಿಲ್ಲ
ನೆಟ್‌ಗೆ ಅಕ್ಸೆಸ್ ಇರೋದಿಲ್ಲ
ಐಪಿನಲ್ಲೆ ಟೈಮ್‌ಪಾಸ್ ಮಾಡ್ತಾರೆ

ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್
ಕೋಡ್‌ದೆ ಕಾರ್ಬಾರು ಕೋಡ್‌ದೆ ದರ್ಬಾರು
ಕಂಪ್ಯೂಟರ್ ತುಂಬ ಬರಿಯ ಕೋಡ್‌ಗಳೋ

ನಮ್ಮೂರಲ್ಲಿ ಏನಂತಾರೆ ಗೊತ್ತಾ

ಕೂತುಕೊಂಡು ಬರೆದರೆ ಮುಗಿಯೋದಿಲ್ಲ
ಅಷ್ಟು ಟೈಮ್ ನಮ್ಮಲ್ಲಿಲ್ಲ
ಫ್ರೀ ಕೋಡ್‌ನ ಡೌನ್‌ಲೋಡ್ ಮಾಡ್ತಾರೆ

ಎಡಿಟರ್ ಓಪನ್ ಮಾಡಿಕೊಂಡ್
ಟೆಸ್ಟಿಂಗ್ ಅಂತ ಹೇಳಿಕೊಂಡ್
ಪ್ರೋಡಕ್ಟ್ ಅಂತ ರೆಡಿ ಮಾಡ್ತಾರೆ

ನಮ್ಮೂರಲ್ಲಿ ಹಂಗೇನಿಲ್ಲ
ಸರ್ವಿಸ್ ಕಂಪೆನಿ ಓಪನ್ ಮಾಡಿ
ಫ್ರೆಶರ್ಸ್ ಎಲ್ಲ ರಿಕ್ರೂಟ್ ಮಾಡ್ತಾರೆ

ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್

ಕೋಡಿಗೆ ಹೊಡೆದಾಟ ಕೋಡಿಗೆ ಬಡಿದಾಟ ಇಲ್ಲಿ ಜಗಳ ಕಾಣಿರೋ
ನಮ್ಮ ದೇಶದಲ್ಲಿ ಏನು ಅಂತಾರೆ ಗೊತ್ತಾ

ಬಸ್ಸಲ್ಲಿ ಹೋದ್ರೆ ಲೇಟಾಗುತ್ತೆ
ಬೈಕಲ್ಲಿ ಹೋದ್ರೆ ದೂರಾಗುತ್ತೆ
ರಜಾ ಹಾಕಿ ಮನೆಯಲ್ಲೆ ಕೂರ್ತಾರೆ
ಸಿನಿಮಾ ಗಿನಿಮಾ ನೋಡಿಕೊಂಡು
ಎಂಜಿ ರೋಡಲ್ಲಿ ಸುತ್ತಿಕೊಂಡು
ಹಾಯಾಗಿ ಹೋಗಿ ಕುಡಿದು ಮಲಗ್ತಾರೆ

ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್
ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್
ಕೋಡ್ ಇಲ್ಲಿ ಲೈಫ್ ಕಾಣಿರೋ

ಕೋಡಿಗಿಂತ ಕಂಪೆನಿ ಮುಖ್ಯ
ಕಂಪೆನಿಗಿಂತ ಸಂಬಳ ಮುಖ್ಯ
ಅನ್ನೋ ರೀತಿ ನಮ್ಮ ಊರಲ್ಲಿ

ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್

-ಅನಾಮಿಕ

Leave a Reply