ಬೆಂಗಳೂರು ಜೂನ್ ೨೫ ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯು ಸರ್ಕಾರದ ಅಧಿನಿಯಮಗಳು, ಅಧಿಸೂಚನೆಗಳು, ನಿಯಮಗಳು, ಉಪನಿಯಮಗಳು ಹಾಗೂ ಆದೇಶಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸಲು, ಸಲಹೆ ಸೂಚನೆಗಳನ್ನು ಸ್ವೀಕರಿಸಲು ಸಮಿತಿಯಿಂದ ಪ್ರತ್ಯೇಕವಾದ ವೆಬ್‌ಸೈಟ್ ತೆರೆದಿದೆ.
ಅರ್ಜಿಯ ನಮೂನೆಯನ್ನು ವೆಬ್‌ಸೈಟಿನಿಂದ ಪಡೆದು ಸಲಹೆ ಸೂಚನೆಯೊಂದಿಗೆ ಅಧ್ಯಕ್ಷರು, ಅಧೀನ ಶಾಸನಾ ಸಮಿತಿ, ಅಂಚೆ ಪೆಟ್ಟಿಗೆ ಸಂಖ್ಯೆ ೫೦೭೪, ವಿಧಾನ ಸೌಧ, ಬೆಂಗಳೂರು ಇವರಿಗೆ ಕಳುಹಿಸಬಹುದಾಗಿದೆ. ಸಮಿತಿಯ ದೂರವಾಣಿ ೦೮೦-೨೨೩೫೪೪೯೫ ಫ್ಯಾಕ್ಸ್ ೨೨೩೭೦೪೦೭. ಇ-ಮೇಲ್: Chairman.slc@rediffmail.com.
Be First to Comment