Press "Enter" to skip to content

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಬೆಂಗಳೂರು, ಜುಲೈ ೨೦- ‘ಮುಂಗಾರುಮಳೆ’ ೨೦೦೬-೦೭ನೇ ಸಾಲಿನ ರಾಜ್ಯ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹಿರಿಯ ನಟಿ ಶ್ರೀಮತಿ ಎಂ.ಎನ್. ಲಕ್ಷ್ಮೀದೇವಿ ಅವರು ೨೦೦೬-೦೭ನೇ ಸಾಲಿನ ಡಾ. ರಾಜ್‌ಕುಮಾರ್ ಪ್ರಶಸ್ತಿಗೆ ಭಾಜನರಾಗಿ’ದ್ದಾರೆ.

ವಾರ್ತಾ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀ ಐ.ಎಂ. ವಿಠಲಮೂರ್ತಿ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದರು. ಪ್ರಶಸ್ತಿಗೆ ಭಾಜನರಾದವರ ವಿವರ ಹೀಗಿದೆ:

ಡಾ. ರಾಜ್‌ಕುಮಾರ್ ಪ್ರಶಸ್ತಿ- ಶ್ರೀಮತಿ ಎಂ.ಎನ್. ಲಕ್ಷ್ಮೀದೇವಿ, ದಿ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ- ಸಿಂಗೀತಂ ಶ್ರೀನಿವಾಸ ರಾವ್, ಚಲನಚಿತ್ರ ರಂಗಕ್ಕೆ ಜೀವನಾದ್ಯಂತ ವಿಶಿಷ್ಟ ಕೊಡುಗೆ ಪ್ರಶಸ್ತಿ- ಶ್ರೀ ದ್ವಾರಕೀಶ್ ಬಿ.ಎಸ್., ಮೊದಲನೇ ಅತ್ಯುತ್ತಮ ಚಿತ್ರ- ಮುಂಗಾರು ಮಳೆ (ನಿರ್ಮಾಪಕ- ಶ್ರೀ ಈ ಕೃಷ್ಣಪ್ಪ, ಶ್ರೀ ಜಿ. ಗಂಗಾಧರ್, ನಿರ್ದೇಶಕ- ಶ್ರೀ ಯೋಗರಾಜ ಭಟ್(ಎಚ್.ಎಲ್.ಎನ್.ಸಿಂಹ ಪ್ರಶಸ್ತಿ), ಎರಡನೇ ಅತ್ಯುತ್ತಮ ಚಿತ್ರ- ದುನಿಯಾ (ನಿರ್ಮಾಪಕ- ಟಿ.ಪಿ. ಸಿದ್ಧರಾಜು, ನಿರ್ದೇಶಕ- ಶ್ರೀ ಸೂರಿ), ಮೂರನೇ ಅತ್ಯುತ್ತಮ ಚಿತ್ರ- ಸೈನೈಡ್ (ನಿರ್ಮಾಪಕ- ಅಕ್ಷಯ ಕ್ರಿಯೇಷನ್ಸ್, ನಿರ್ದೇಶಕ- ಶ್ರೀ ರಮೇಶ್ ಎ.ಎಂ.ಆರ್.), ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ- ಕಾಡಬೆಳದಿಂಗಳು (ನಿರ್ಮಾಪಕ- ಶ್ರೀ ಕೆ.ಎಂ. ವೀರೇಶ್, ಶ್ರೀ ಕೆ.ಎನ್. ಸಿದ್ಧಲಿಂಗಯ್ಯ, ಶ್ರೀ ಬಿ.ಎಸ್. ಲಿಂಗದೇವರು).
ಅತ್ಯುತ್ತಮ ನಟ- ಶ್ರೀ ವಿಜಯ್ (ಚಿತ್ರ- ದುನಿಯಾ), ಅತ್ಯುತ್ತಮ ನಟಿ- ಶ್ರೀಮತಿ ತಾರಾ (ಚಿತ್ರ- ಸೈನೈಡ್), ಅತ್ಯುತ್ತಮ ಪೋಷಕ ನಟ- ಶ್ರೀ ರಂಗಾಯಣ ರಘು (ಚಿತ್ರ- ದುನಿಯಾ), ಅತ್ಯುತ್ತಮ ಪೋಷಕ ನಟಿ- ಕುಮಾರಿ ನೀತು (ಚಿತ್ರ- ಕೋಟಿ ಚೆನ್ನಯ್ಯ), ಅತ್ಯುತ್ತಮ ಕಂಠದಾನ ಕಲಾವಿದ- ಶ್ರೀ ಮುರಳಿ (ಚಿತ್ರ- ಸೌಂದರ್ಯ), ಅತ್ಯುತ್ತಮ ಕಂಠದಾನ ಕಲಾವಿದೆ- ಕುಮಾರಿ ದೀಪಾ (ಚಿತ್ರ- ಅರಸು), ಅತ್ಯುತ್ತಮ ಕಥಾ ಲೇಖಕ- ‘ಜಾನಕಿ’ (ಚಿತ್ರ- ಕಾಡಬೆಳದಿಂಗಳು), ಅತ್ಯುತ್ತಮ ಚಿತ್ರಕಥೆ- ಶ್ರೀ ಸೂರಿ (ಚಿತ್ರ- ದುನಿಯಾ), ಅತ್ಯುತ್ತಮ ಸಂಭಾಷಣಾ ಕರ್ತೃ- ಶ್ರೀ ಯೋಗರಾಜ ಭಟ್ (ಚಿತ್ರ- ಮುಂಗಾರು ಮಳೆ), ಅತ್ಯುತ್ತಮ ಛಾಯಾಗ್ರಾಹಕ- ಶ್ರೀ ಕೃಷ್ಣ ಎಸ್. (ಚಿತ್ರ- ಮುಂಗಾರುಮಳೆ), ಅತ್ಯುತ್ತಮ ಸಂಗೀತ ನಿರ್ದೇಶಕ ಶ್ರೀ ಮನೋಮೂರ್ತಿ(ಚಿತ- ಮುಂಗಾರು ಮಳೆ), ಅತ್ಯುತ್ತಮ ಧ್ವನಿಗ್ರಾಹಕ ಶ್ರೀ ತುಕರಾಂ (ಚಿತ್ರ- ಮುಂಗಾರು ಮಳೆ), ಅತ್ಯುತ್ತಮ ಕಲಾ ನಿರ್ದೇಶಕ ಶ್ರೀ ವಿಠ್ಠಲ್ (ಚಿತ್ರ – ಕಲ್ಲರಳಿ ಹೂವಾಗಿ), ಅತ್ಯುತ್ತಮ ಸಂಕಲನಕಾರ- ಶ್ರೀ ಬಸವರಾಜ ಅರಸ್ (ಚಿತ್ರ- ಕಲ್ಲರಳಿ ಹೂವಾಗಿ), ಅತ್ಯುತ್ತಮ ಬಾಲ ನಟ -ಮಾ. ರೇವಂತ್ (ಚಿತ್ರ -ದಾಟು), ಅತ್ಯುತ್ತಮ ಗೀತ ರಚನೆಕಾರ- ಶ್ರೀ ಜಯಂತ್ ಕಾಯ್ಕಿಣಿ (ಚಿತ- ಮುಂಗಾರು ಮಳೆ), ಅತ್ಯುತ್ತಮ ಹಿನ್ನೆಲೆಗಾಯಕ- ಶ್ರೀ ಹೇಮಂತ್ (ಜನಪದ), ಅತ್ಯುತ್ತಮ ಹಿನ್ನೆಲೆಗಾಯಕಿ- ಶ್ರೀ ಎಂ.ಡಿ. ಪಲ್ಲವಿ (ಚಿತ್ರ- ದುನಿಯಾ), ವಿಶೇಷ ಪ್ರಶಸ್ತಿ (ವಿಶೇಷ ತಾಂತ್ರಿಕ ವಿಷಯಗಳು, ವೇಷ ಭೂಷಣ ಮತ್ತು ಇತರ ಪ್ರಶಸ್ತಿಗಳು)- ಶ್ರೀಮತಿ ನಾಗಿಣಿ ಭರಣ ಮತ್ತು ಶ್ರೀಮತಿ ರೋಷನಿ(ಚಿತ್ರ -ಕಲ್ಲರಳಿ ಹೂವಾಗಿ), ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ (ವಿಶೇಷ ಪ್ರಶಸ್ತಿ) – ಬದಿ ತುಳು ಚಿತ್ರ, ತೀರ್ಪುಗಾರರ ವಿಶೇಷ ಪ್ರಶಸ್ತಿಗಳು- ೧) ‘ದಾಟು’ ಚಿತ್ರ ೨) ಧೃವ (ಸ್ನೇಹಾಂಜಲಿ ಚಿತ್ರದ ಅಭಿನಯಕ್ಕಾಗಿ)

೩೭ ಚಿತ್ರಗಳ ನಿರ್ಮಾಪಕರು ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗಾಗಿ ಅರ್ಜಿ ಸಲ್ಲಿಸಿದ್ದರು. ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಅರ್ಜಿ ಸಲ್ಲಿಸಿದ ಎಲ್ಲಾ ೩೭ ಚಿತ್ರಗಳನ್ನು ವೀಕ್ಷಿಸಿ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಿದೆ ಎಂದು ಇಲಾಖೆಯ ಕಾರ್ಯದರ್ಶಿ ಶ್ರೀ ಐ,ಎಂ.ವಿಠ್ಠಲಮೂರ್ತಿ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

Be First to Comment

Leave a Reply

Your email address will not be published. Required fields are marked *