Press "Enter" to skip to content

ಮಾಹಿತಿ ಹಕ್ಕು ಬ್ಯಾಂಕ್ ಸ್ಥಾಪನೆ

ಬೆಂಗಳೂರಿನ ಮಾಹಿತಿ ಹಕ್ಕು ಹೋರಾಟ ಒಕ್ಕೂಟದವರು ಮಾಹಿತಿ ಹಕ್ಕು ಬ್ಯಾಂಕ್ ಸ್ಥಾಪಿಸಿದ್ದಾರೆ. ಅಂದರೆ ಮಾಹಿತಿ ಹಕ್ಕು ಕಾಯಿದೆಯ ಅನ್ವಯ ಹಲವರು ಸರಕಾರದಿಂದ ಹಲವಾರು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಎಲ್ಲ ದಾಖಲೆಗಳನ್ನು ಒಂದೆಡೆ ಸಂಗ್ರಹಿಸಿಡುವ ಪ್ರಯತ್ನ. ಇದರಿಂದಾಗಿ ಒಮ್ಮೆ ಯಾರದರೂ ಪಡೆದುಕೊಂಡ ದಾಖಲೆಯನ್ನು ಇನ್ನೊಮ್ಮೆ ಪಡೆದುಕೊಳ್ಳುವ ಅಗತ್ಯ ಬೀಳುವುದಿಲ್ಲ. “ಕ್ರಿಯ ಕಟ್ಟೆ” ಇದನ್ನು ಸ್ಥಾಪಿಸಿದೆ. ಕ್ರಿಯ ಎಂದರೆ Karnataka Right for Information Act (KRIA) ಎಂಬುದರ ಸಂಕ್ಷಿಪ್ತ ರೂಪ. ಇದರಲ್ಲಿ ಸಕ್ರಿಯವಾಗಿರುವವರು ಚರ್ಚಿಸಲು ಅಂತರಜಾಲದಲ್ಲಿ ಯಾಹೂ ಗ್ರೂಪ್‌ನಲ್ಲಿ ಒಂದು ಪಂಗಡವನ್ನು ಹುಟ್ಟುಹಾಕಿದ್ದಾರೆ. ಇದರ ವಿಳಾಸ – http://groups.yahoo.com/group/kria. ಆಸಕ್ತರು ಇದಕ್ಕೆ ಸದಸ್ಯರಾಗಬಹುದು. ಈ ಬ್ಯಾಕ್‌ನ ಬಗ್ಗೆ ಹೆಚ್ಚಿನ ಮಾಹಿತಿಗೆ ವೀರೇಶ್ ಬೆಳ್ಳೂರು (veeresh_bellur AT yahoo DOT com) ಅವರನ್ನು ಸಂಪರ್ಕಿಸಬಹುದು.

Be First to Comment

Leave a Reply

Your email address will not be published. Required fields are marked *