ಬೆಂಗಳೂರಿನಲ್ಲಿ ಖಜಾನ ಜುವೆಲರಿಯಿಂದ ಹೊಸ ಮಳಿಗೆಗಳು
ಬೆಂಗಳೂರು, ಜೂನ್ ೨೩, ೨೦೦೬: ಚೆನ್ನೈನ ಖಜಾನ ಜುವೆಲ್ಲರಿ ಸಂಸ್ಥೆ ಬೆಂಗಳೂರಿನ ಕಮರ್ಶಿಯಲ್ ರಸ್ತೆ ಮತ್ತು ಜಯನಗರಗಳಲ್ಲಿ ಎರಡು ಹೊಸ ಮಳಿಗೆಗಳನ್ನು ಆರಂಭಿಸಲಿದೆ. ಜೂನ್ ೨೮ರಂದು ಇವುಗಳನ್ನು ಉದ್ಘಾಟಿಸಲಾಗುವುದು. ಹೊಸ ಮಳಿಗೆಗಳ ಅರಂಭ ಪ್ರಕಟಿಸಿದ ಖಜಾನ ಜುವೆಲರಿಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಜೈನ್ ಈ ವಿಷಯವನ್ನು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಶೇಕಡ ೧೦೦ ಬಿಎಸ್ಐ ಹಾಲ್‌ಮಾರ್ಕ್ ಹೊಂದಿರುವ ಚಿನ್ನ ಮತ್ತು ವಜ್ರಾಭರಣಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಖಜಾನ ಜುವೆಲರಿಯಲ್ಲಿ ಚೆನ್ನೈನ ಬೆಲೆ, ಅಂದರೆ ಬೆಂಗಳೂರಿನ ಬೆಲೆಗಿಂತ ಪ್ರತಿ ಗ್ರಾಂಗೆ ೪೦ ರೂ ಕಡಿಮೆ ಬೆಲೆ ಇರುತ್ತದೆ ಎಂದು ಅವರು ತಿಳಿಸಿದರು. ಪತ್ರಿಕಾ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಕೆಡಿಎಂ ಎಂದು ಚಿನ್ನಾಭರಣಗಳನ್ನು ಕರೆಯುವುದರ ಬಗ್ಗೆ ಸ್ಪಷ್ಟೀಕರಣ ನೀಡಿದರು. ಕ್ಯಾಡ್ಮಿಯಂ ಲೋಹವನ್ನು ಆಭರಣ ತಯಾರಿಕೆಯಲ್ಲಿ ಸೋಲ್ಡರಿಂಗಿಗೆ ಬಳಸುತ್ತಿದ್ದರು. ಈ ಕ್ಯಾಡ್ಮಿಯಂ ಅನಕ್ಷರಸ್ಥ ಅಂಗಡಿಯವರ ಬಾಯಿಯಲ್ಲಿ ಕೆಡಿಯಂ ಆಯಿತು. ಆದರೆ ಈಗ ಯಾರೂ ಕ್ಯಾಡ್ಮಿಯಂ ಬಳಸುತ್ತಿಲ್ಲ. ಬದಲಿಗೆ ಝಿಂಕ್ (ಸತು) ಅನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿ ನೀಡಿದರು.