ಛಂದ ಪುಸ್ತಕ ಬಿಡುಗಡೆ

ಬೆಂಗಳೂರು, ಜನವರಿ ೨೯, ೨೦೦೬: ವಸುಧೇಂದ್ರ ಅವರು ನಡೆಸಿಕೊಂಡು ಬರುತ್ತಿರುವ ಛಂದ ಪುಸ್ತಕ ಮಾಲಿಕೆಯ ಮೂರು ಪುಸ್ತಕಗಳನ್ನು ಜಯಂತ ಕಾಯ್ಕಿಣಿಯವರು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪುಸ್ತಕ ಬಿಡುಗಡೆ ಎನ್ನವ ಪ್ರಯೋಗವೇ ಸರಿಯಿಲ್ಲ. ಪುಸ್ತಕಗಳನ್ನು ಓದುಗರಿಗೆ ಅರ್ಪಿಸುವ ಕಾರ್ಯಕ್ರಮ ಎನ್ನುವ ಪ್ರಯೋಗವೇ ಸೂಕ್ತ ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದರು. ಬಿಡುಗಡೆಯಾದ ಪುಸ್ತಕಗಳು -ಅಲಕ ತೀರ್ಥಹಳ್ಳಿಯವರ “ಈ ಕತೆಗಳ ಸಹವಾಸವೇ ಸಾಕು”, ಎಂ ಆರ್ ದತ್ತಾತ್ರಿಯವರ “ಪೂರ್ವ ಪಶ್ಚಿಮ”, ಜಾನಕಿಯವರ “ಜಾನಕಿ ಕಾಲಂ”. ಪುಸ್ತಗಳ ಬಗ್ಗೆ ವಿಕ್ರಮ ವಿಸಾಜಿ, ಅಶೋಕ ಹೆಗಡೆ ಮತ್ತು ಜಿ ಬಿ ಹರೀಶ ಮಾತನಾಡಿದರು. ವಸುಧೇಂದ್ರ ವಂದನಾರ್ಪಣೆ ಸಲ್ಲಿಸಿದರು. ಸುಮಂಗಲ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.

Leave a Reply