ಕೃಷಿ-ಗ್ರಾಮೀಣ ಪತ್ರಿಕೋದ್ಯಮ: ಏನು – ಹೇಗೆ?
ಕನ್ನಡ ಪತ್ರಿಕೋದ್ಯಮದಲ್ಲಿ ಹೊಸತೆನಿಸುವ ‘ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಮಾಹಿತಿ ಕಿಟ್’ ಅನ್ನು ಧಾರವಾಡದ ಪರ್ಯಾಯ ಕೃಷಿಮಾಧ್ಯಮ ಕೇಂದ್ರ ಹೊರತಂದಿದೆ. ಪುತ್ತೂರಿನ ಅಡಿಕೆ ಪತ್ರಿಕೆ ಕಚೇರಿಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟಿನ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ಖಂಡಿಗೆ ಶ್ರೀಕೃಷ್ಣ ಭಟ್ ಇದನ್ನು ಬಿಡುಗಡೆಮಾಡಿದರು.
‘ಬರೆಯಬೇಕೆಂಬ ಮನಸ್ಸಿದೆ; ಆದರೆ ಹೇಗೆ ಬರೆಯಬೇಕೆಂಬುದು ತಿಳಿಯುತ್ತಿಲ್ಲ’ ಎನ್ನುವವರಿಗೆ ಇದು ಸೂಕ್ತ ಮಾಹಿತಿ ಕೋಶ. ಇದರಲ್ಲಿ ಎರಡು ಸಂಪುಟಗಳಿದ್ದು, ಇವುಗಳಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಮೂಲಭೂತ ಅಂಶಗಳನ್ನು ಸರಳ ಮತ್ತು ಸವಿವರವಾಗಿ, ಉದಾಹರಣೆ ಸಮೇತ ವಿವರಿಸಲಾಗಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಇದೊಂದು ವಿಶೇಷ ಪ್ರಯತ್ನ.
ಬೆಲೆ: ರೂ. ೧೦೦೦. ಇದರೊಂದಿಗೆ ಎರಡು ಪ್ರಮುಖ ಕೃಷಿ ಪತ್ರಿಕೆಗಳ ಒಂದು ವರ್ಷದ ಚಂದಾ ಉಚಿತ. “ಫ್ರೀಲಾನ್ಸಿಗಳ ಖಾಸಗಿ ಕಾಲಂ’, ‘ಕಾನ್ ಚಿಟ್ಟೆ’ ‘ನಂದಿಹಳ್ಳಿಯ ಉದ್ಯಮಶೀಲ ದಂಪತಿ’ ಹೀಗೆ ಮೂರು ಸಂಬಂಧಿತ ಪುಸ್ತಕಗಳು ಮತ್ತು ಇತರ ಎಂಟು ಕೃಷಿ ಪತ್ರಿಕೆಗಳ ತಲಾ ಒಂದು ಪ್ರತಿಯನ್ನು ಈ ಕಿಟ್ ಒಳಗೊಂಡಿರುತ್ತದೆ.
ಆಸಕ್ತರು ಕೇಂದ್ರವನ್ನು ಸಂಪರ್ಕಿಸಿ. ವಿಳಾಸ: ಅನಿತಾ ಪೈಲೂರು, ಪರ್ಯಾಯ ಕೃಷಿಮಾಧ್ಯಮ ಕೇಂದ್ರ, ಕೃಷ್ಣಾಲಯ, ೧ನೇ ಮುಖ್ಯರಸ್ತೆ, ೪ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ – ೫೮೦ ೦೦೮. ವಿ-ಅಂಚೆ: caam @ sancharnet . in.