Press "Enter" to skip to content

ಕಗ್ಗಲಿಪುರದಲ್ಲಿ ಸಮರ್ಪಣ – ೨೦೦೮

ಬೆಂಗಳೂರು, ಜನವರಿ ೨೭, ೨೦೦೮: ಬೆಂಗಳೂರಿನ ದಕ್ಷಿಣಕ್ಕೆ ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಕಗ್ಗಲಿಪುರದಲ್ಲಿರುವ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಫೆಬ್ರವರಿ ೧೭ರಂದು ಸಮರ್ಪಣ – ೨೦೦೮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನವಾಗಿ ರೈತರ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಪೂರ್ವಾಹ್ನ ೧೧ ಘಂಟೆಗೆ ರೈತರ ಸಮಾವೇಶವಿರುತ್ತದೆ. ಕನಕಪುರ ತಾಲೂಕಿನ ರೈತರ ಸಮಾವೇಶದಲ್ಲಿ “ಗೋಸಂರಕ್ಷಣೆಯ ಅಗತ್ಯ”, “ಗೋವು ಮತ್ತು ಆರ್ಥಿಕತೆ” ಈ ವಿಷಯಗಳ ಬಗ್ಗೆ ಉಪನ್ಯಾಸ ಮತ್ತು ಚರ್ಚೆಗಳಿರುತ್ತವೆ. ಅಪರಾಹ್ನದ ಕಾರ್ಯಕ್ರಮಗಳಲ್ಲಿ ಗೋವಿಗಾಗಿ ಸದ್ದಿಲ್ಲದೆ ದುಡಿಯುತ್ತಿರುವ ಎಲೆಮರೆಯ ಕಾಯಿಗಳಿಗೆ ಸೇವಾಪುರಸ್ಕಾರ ನೀಡಲಾಗುತ್ತದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಅಶೀರ್ವಚನದ ನಂತರ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತವೆ. ಕದ್ರಿ ಗೋಪಾಲನಾಥರ ಶಿಷ್ಯ ಶ್ರೀಧರ ಸಾಗರ ಅವರಿಂದ ಸ್ಯಾಕ್ಸಾಫೋನ್ ವಾದನ, ರವಿಚಂದ್ರ ಮತ್ತು ತಂಡದವರಿಂದ ಕೊಳಲು ಪ್ರಧಾನವಾಗಿರುವ ವಾದ್ಯವೃಂದ ರೂಪಕ ಹಾಗೂ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ತಂಡದವರಿಂದ ನೃತ್ಯ ರೂಪಕವಿರುತ್ತದೆ. ಕೊನೆಯಲ್ಲಿ ಗೋವುಗಳಿಗೆ ನೀರಾಜನ ಮತ್ತು ದೀಪೋತ್ಸವ ಕಾರ್ಯಕ್ರಮಗಳಿರುತ್ತವೆ. ಸಮಸ್ತರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋರಲಾಗಿದೆ. ಇಡೀ ದಿನ ಗವ್ಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಗವ್ಯ ಚಿಕಿತ್ಸೆಯ ವ್ಯವಸ್ಥೆ ಇರುತ್ತದೆ.

Be First to Comment

Leave a Reply

Your email address will not be published. Required fields are marked *