ಐಸಾನ್ ಧೂಮಕೇತು ಕಾರ್ಯಾಗಾರಕ್ಕೆ ಹಾಜರಾಗಲು ವಿಜ್ಞಾನ ಶಿಕ್ಷಕರು ಹಾಗೂ ವಿಜ್ಞಾನಾಸಕ್ತರಿಗೆ ಆಹ್ವಾನ
ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ಐಸಾನ್ ಧೂಮಕೇತು ಕಾರ್ಯಾಗಾರಕ್ಕೆ ಹಾಜರಾಗಲು ವಿಜ್ಞಾನ ಶಿಕ್ಷಕರು ಹಾಗೂ ವಿಜ್ಞಾನಾಸಕ್ತರಿಗೆ ಆಹ್ವಾನ
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿಗಳು ಶೈಕ್ಷಣಿಕ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸುವ ಧ್ಯೇಯೋದ್ದೇಶಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಾಗಿವೆ. ಇದೀಗ ಆಕಾಶದಲ್ಲಿ ಕಾಣಿಸಿಕೊಂಡಿರುವ ಆಕಾಶಕಾಯ ಐಸಾನ್ ಧೂಮಕೇತುವಿನ ವೀಕ್ಷಣೆಗೆ ಆ ಮೂಲಕ ಖಗೋಳದ ಬಗೆಗಿನ ಮೂಢನಂಬಿಕೆಗಳನ್ನು ತೊಡೆದು ಹಾಕಲು ಬೃಹತ್ ವೈಜ್ಞಾನಿಕ ಆಂದೋಲನವನ್ನು ಕರ್ನಾಟಕದಲ್ಲಿ ಹಮ್ಮಿಕೊಂಡಿದೆ.
ಐಸಾನ್ ಧೂಮಕೇತು ಈಗಾಗಲೇ ನಭೋಮಂಡಲದಲ್ಲಿ ಕಾಣಿಸಿಕೊಂಡಿದ್ದು, ವಿಶೇಷವೆಂದರೆ ನಮ್ಮ ಭೂಮಿಯ ಬಳಿಗೆ ಆಗಮಿಸಿರುವ ಈ ಅಪರೂಪದ ಅತಿಥಿಯನ್ನು ನಾವೆಲ್ಲರೂ ಬರಿಗಣ್ಣಿನಲ್ಲೇ ವೀಕ್ಷಿಸಬಹುದಾದ ಸದಾವಕಾಶ ಒದಗಿಬಂದಿದೆ. ಇಂತಹ ಅವಕಾಶವನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಐಸಾನ್ ಧೂಮಕೇತುವಿನ ವೀಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಗ್ರಹ ನಕ್ಷತ್ರಗಳು ಮತ್ತು ಇತರೆ ಆಕಾಶಕಾಯಗಳ ಕುರಿತಾದ ಮೂಢನಂಬಿಕೆಗಳನ್ನು ತೊಡೆದು ಹಾಕಲು ಆಕಾಶ ವೀಕ್ಷಣೆ, ಧೂಮಕೇತುಗಳ ಕುರಿತಾದ ಮಾಹಿತಿ ಕಾರ್ಯಾಗಾರಗಳನ್ನು ರಾಜ್ಯದಾದ್ಯಂತ ಸಂಘಟಿಸಲಾಗುತ್ತಿದೆ.
ಆಂದೋಲನದ ರೂಪುರೇಷೆ :
೧) ರಾಜ್ಯಮಟ್ಟದ ಕಾರ್ಯಾಗಾರ – ಪ್ರತಿ ಜಿಲ್ಲೆಯಿಂದ ಇಬ್ಬರು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ, ಒಟ್ಟು ೩೪ ಶೈಕ್ಷಣಿಕ ಜಿಲ್ಲೆಗಳಿಂದ ಆಗಮಿಸುವ ೬೮ ಶಿಬಿರಾರ್ಥಿಗಳಿಗೆ ಎರಡು ದಿನಗಳ ಸನಿವಾಸ ಕಾರ್ಯಾಗಾರ.
೨) ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಕಾರ್ಯಾಗಾರ ( ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ತರಬೇತಿಪಡೆದ ಸಂಪನ್ಮೂಲ
ವ್ಯಕ್ತಿಗಳಿಂದ ) : ಆಯಾ ಜಿಲ್ಲೆಯ ೫೦ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ.
೩) ಶಾಲಾಮಟ್ಟದಲ್ಲಿ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ : ಜಿಲ್ಲಾಮಟ್ಟದಲ್ಲಿ ತರಬೇತಿ ಪಡೆದ ಶಿಕ್ಷಕರಿಂದ ಅವರವರ ಶಾಲೆಯ /ಸ್ಥಳೀಯ ಪ್ರದೇಶಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಐಸಾನ್ ಧೂಮಕೇತು ವೀಕ್ಷಣೆಗೆ ಮಾರ್ಗದರ್ಶನ ಮತ್ತು ಖಗೋಳ ವಿಜ್ಞಾನ ವಿಸ್ಮಯಗಳ ಕುರಿತು ಮಾಹಿತಿ ಕಾರ್ಯಕ್ರಮ.
ಆಂದೋಲನದ ತರಬೇತಿ ಮತ್ತು ಕಾರ್ಯಕ್ರಮಗಳಲ್ಲಿ ಐಸಾನ್ ದೂಮಕೇತು ಕುರಿತ ಕಿರು ಪುಸ್ತಕ, ಧೂಮಕೇತು ವೀಕ್ಷಣೆಗೆ ಮಾರ್ಗದರ್ಶಿ ನಕ್ಷೆ, ಧೂಮಕೇತು ಮಾಯಿತಿಯ ವರ್ಣಮಯ ಪೋಸ್ಟರ್, ಡೇ ಟೈಮ್ ಆಸ್ಟ್ರೋನಾಮಿ ಅಕ್ಟಿವಿಟಿ ಕಿಟ್ ಮುಂತಾದ ಸಂಪನ್ಮೂಲ ಪರಿಕರಗಳನ್ನು ಬಳಸಿಕೊಳ್ಳಲಾಗುವುದು. ಜಿಲ್ಲಾ ಮಟ್ಟದ ಕಾರ್ಯಾಗಾರಗಳಿಗೆ ಭಾಗವಹಿಸಲು ಇಚ್ಛಿಸುವ ವಿಜ್ಞಾನ ಶಿಕ್ಷಕರು ಹಾಗೂ ವಿಜ್ಞಾನಾಸಕ್ತರು ತಮ್ಮ ಹೆಸರನ್ನು ಕೆಳಗಿನ ವಿಳಾಸಕ್ಕೆ ಇ-ಮೇಲ್ ವಿವರಗಳನ್ನು ನೀಡಿ ನೊಂದಾಯಿಸಲು ಕೋರಿದೆ: bgvskarnataka@gmail.com, krvp.info@gmail.com.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಜೈಕುಮಾರ್.ಹೆಚ್.ಎಸ್, ಸಂಚಾಲಕರು, ಐಸಾನ್ ಪ್ರಚಾರಾಂದೋಲನ, ಬಿಜಿವಿಎಸ್ ಮೊ: ೯೬೨೦೪೬೪೨೧೫, ಸಿ. ಯರ್ರಿಸ್ವಾಮಿ, ಸಂಚಾಲಕರು, ಐಸಾನ್ ಪ್ರಚಾರಾಂದೋಲನ, ಕೆಆರ್‌ವಿಪಿ, ಮೊ: ೯೪೪೮೧೩೩೪೩೩