ಏರ್‌ಟೆಲ್‌ನವರಿಂದ ನೆಟ್ ಎಕ್ಸ್‌ಪರ್ಟ್

ಬೆಂಗಳೂರು, ಮಾರ್ಚ್ ೩೧, ೨೦೦೬: ಏರ್‌ಟೆಲ್ ಕಂಪೆನಿ ಸಪ್ಪೋರ್ಟ್‌ಸಾಫ್ಟ್ ಕಂಪೆನಿಯೊಂದಿಗೆ ಸಹಯೋಗದಲ್ಲಿ ನೆಟ್ ಎಕ್ಸ್‌ಪರ್ಟ್ ಎಂಬ ತಂತ್ರಾಂಶವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತು. ಈ ತಂತ್ರಾಂಶವು ಏರ್‍ಟೆಲ್‌ನವರ ಬ್ರಾಡ್‌ಬಾಂಡ್ ಅಂತರಜಾಲ ಸಂಪರ್ಕ ಹೊಂದಿದವರಿಗೆ ಉಪಯುಕ್ತವಾಗಿದೆ. ಏರ್‍ಟೆಲ್ ಗ್ರಾಹಕರಿಗೆ ಈ ತಂತ್ರಾಂಶವನ್ನು ಉಚಿತವಾಗಿ ನೀಡಲಾಗುವುದು ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. ಏರ್‍ಟೆಲ್‌ನ ಬ್ರಾಡ್‌ಬಾಂಡ್ ಸಂಪರ್ಕದಲ್ಲಿ ಏನಾದರೂ ಅಡಚಣೆಯಾದರೆ ಈ ತಂತ್ರಾಂಶದ ಮೂಲಕ ಅದನ್ನು ಪತ್ತೆಹಚ್ಚಿ ದುರಸ್ತಿ ಮಾಡಬಹುದು. ಗ್ರಾಹಕ ಸೇವಾ ಅಧಿಕಾರಿ ಜೊತೆ ಆನ್‌ಲೈನ್‌ನಲ್ಲಿ ಚಾಟ್ ಮಾಡುವ ಮೂಲಕವೂ ದೋಷ ಪರಿಹಾರ ಮಾಡಿಕೊಳ್ಳಬಹುದು.

ಇದೇ ಸಮಯದಲ್ಲಿ “ವಿಶ್ವಕನ್ನಡ”ದ ಪ್ರತಿನಿಧಿಯವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಏರ್‍ಟೆಲ್‌ ಕಂಪೆನಿಯ ವಕ್ತಾರರು “ಇನ್ನು ಒಂದು ತಿಗಳಿನಲ್ಲಿ ಏರ್‌ಟೆಲ್‌ನಿಂದ ಕನ್ನಡದಲ್ಲಿ ಎಸ್.ಎಂ.ಎಸ್. ಸೇವೆ ಲಭ್ಯವಾಗಲಿದೆ” ಎಂದು ತಿಳಿಸಿದರು.

Leave a Reply