ಈಶ್ವರಪ್ರಸಾದರಿಗೆ ಕೆಂಪೇಗೌಡ ಪ್ರಶಸ್ತಿ

ಬೆಂಗಳೂರು, ಆಗಸ್ಟ್ ೨, ೨೦೦೭: ಸರಕಾರೇತರ ಸಂಸ್ಥೆ ಪರಿಸರದ ಈಶ್ವರಪ್ರಸಾದರಿಗೆ ಕೆಂಪೇಗೌಡ ಪ್ರಶಸ್ತಿ-೨೦೦೭ ನೀಡಲಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಪ್ರಶಸ್ತಿಯನ್ನು ಹಲವು ವರ್ಷಗಳಿಂದ ನೀಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈಶ್ವರಪ್ರಸಾದರಿಗೆ ಈ ವರ್ಷ ಪರಿಸರ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

ಜುಲೈ ೩೧ರಂದು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಸಚಿವ ಆರ್‍. ಅಶೋಕ ಅವರು ಈಶ್ವರಪ್ರಸಾದರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ರಾಮಚಂದ್ರ ಗೌಡ, ಬೃಹತ್ ಬೆಂಗಳೂರು ಮಹಾನಗರ ಸಭೆಯ ಆಯುಕ್ತ ಡಾ. ಸುಬ್ರಹ್ಮಣ್ಯಂ, ಆಢಳಿತಾಧಿಕಾರಿ ದಿಲೀಪ್ ರಾವ್, ಮುಂತಾದವರು ಉಪಸ್ಥಿತರಿದ್ದರು.

(ಚಿತ್ರದಲ್ಲಿ ಕುಳಿತಿರುವವರಲ್ಲಿ ಎಡಗಡೆ ಕೊನೆಯಲ್ಲಿರುವವರು ಈಶ್ವರಪ್ರಸಾದ)

ಈಶ್ವರಪ್ರಸಾದ ಮತ್ತು ಅವರ ಸ್ಫೂರ್ತಿವನ ಬಗ್ಗೆ ಹೆಚ್ಚಿನ ಮಾಹಿತಿಗೆ ನಾಗೇಶ ಹೆಗಡೆಯವರ ಲೇಖನ ಓದಿ.

Leave a Reply